ವಾಚಕರಿಂದ ಪ್ರಶ್ನೆಗಳು
ಲೂಕ 1:62 ಸೂಚಿಸುವಂತೆ ತೋರುವ ಪ್ರಕಾರ, ಸ್ನಾನಿಕನಾದ ಯೋಹಾನನ ತಂದೆಯಾದ ಜಕರೀಯನು ಮೂಕನಾಗಿ ಮಾತ್ರವಲ್ಲ ಕಿವುಡನಾಗಿಯೂ ಮಾಡಲ್ಪಟ್ಟಿದ್ದನೋ?
ಜಕರೀಯನು ಕಿವುಡನಾಗಿಯೂ ಮಾಡಲ್ಪಟ್ಟಿದ್ದನು ಎಂದು ಕೆಲವರು ತೀರ್ಮಾನಿಸಿದ್ದಾರೆ. ಬೈಬಲ್ ದಾಖಲೆಯಲ್ಲಿ ನಾವು ಓದುವುದು: “ಅದಕ್ಕೆ [ಮಗುವಿಗೆ] ಜಕರೀಯನೆಂದು ತಂದೆಯ ಹೆಸರನ್ನು ಇಡಬೇಕೆಂದಿದ್ದರು. ಈ ವಿಷಯದಲ್ಲಿ ಅದರ ತಾಯಿಯು—ಅದು ಬೇಡ, ಯೋಹಾನನೆಂದು ಹೆಸರು ಇಡಬೇಕು ಅನ್ನಲು ಅವರು—ನಿನ್ನ ಬಂಧು ಬಾಂಧವರಲ್ಲಿ ಈ ಹೆಸರಿನವರು ಒಬ್ಬರಾದರೂ ಇಲ್ಲವಲ್ಲಾ ಎಂದು ಆಕೆಗೆ ಹೇಳಿ ಇದಕ್ಕೆ ಏನು ಹೆಸರಿಡಬೇಕೆಂದಿರುತ್ತೀ ಎಂಬದಾಗಿ ತಂದೆಗೆ ಸನ್ನೆಮಾಡಿದರು. ಅವನು ಒಂದು ಹಲಿಗೆಯನ್ನು ತರಿಸಿಕೊಂಡು—ಯೋಹಾನನೆಂತಲೇ ಅದರ ಹೆಸರು ಎಂದು ಬರೆದನು.”—ಲೂಕ 1:59-63.
ಈ ದಾಖಲೆಯಲ್ಲಾದರೋ ಜಕರೀಯನಿಗೆ ಒಂದು ಕಾಲಾವಧಿಯ ತನಕ ಕಿವಿ ಕೇಳಿಸತ್ತಿರಲಿಲ್ಲ ಎಂದು ವಿಶಿಷ್ಟವಾಗಿ ಹೇಳುವ ಯಾವುದೇ ವಿಷಯ ಇರುವುದಿಲ್ಲ.
ಹುಟ್ಟಲಿದ್ದ ಆ ಗಂಡು ಮಗುವಿಗೆ ಯೋಹಾನನೆಂತ ಹೆಸರಿಡಬೇಕೆಂದು ಇದಕ್ಕೆ ಮುಂಚೆ ಗಬ್ರಿಯೇಲ ದೂತನು ಜಕರೀಯನಿಗೆ ಪ್ರಕಟಿಸಿದ್ದನು. ವೃದ್ಧನಾಗಿದ್ದ ಜಕರೀಯನಿಗೆ ಅದನ್ನು ನಂಬಲು ಬಲು ಕಷ್ಟವಾಗಿತ್ತು. ದೇವದೂತನು ಪ್ರತಿವರ್ತಿಸಿದ್ದು: “ಈ ನನ್ನ ಮಾತು ತಕ್ಕ ಸಮಯದಲ್ಲಿ ನೆರವೇರುವದು. ಆದರೆ ನೀನು ಅದನ್ನು ನಂಬದೆ ಹೋದದ್ದರಿಂದ ಅದೆಲ್ಲಾ ಸಂಭವಿಸುವ ದಿನದ ವರೆಗೂ ಮಾತನಾಡಲಾರದೆ ಮೂಕನಾಗಿರುವಿ.” (ಲೂಕ 1:13, 18-20) ಜಕರೀಯನ ವಾಕ್ ಶಕ್ತಿಯ ಮೇಲೆ ಪರಿಣಾಮವಾಗುವುದು ಎಂದು ದೇವದೂತನು ಹೇಳಿದನು, ಶ್ರವಣ ಶಕ್ತಿಯ ಮೇಲಲ್ಲ.
ದಾಖಲೆಯು ಮುಂದೆ ತಿಳಿಸುವುದು: “ಅವನು [ದೇವಾಲಯದಿಂದ] ಹೊರಗೆ ಬಂದಾಗ ಅವರ [ಕಾದಿದ್ದ ಜನರ] ಕೂಡ ಏನೂ ಮಾತಾಡಲಾರದೆ ಇರಲು ಅವರು—ಇವನಿಗೆ ದೇವಾಲಯದಲ್ಲಿ ಏನೋ ದಿವ್ಯ ದರ್ಶನವಾಗಿರಬೇಕು ಎಂದು ತಿಳುಕೊಂಡರು.” (ಲೂಕ 1:22) ಇಲ್ಲಿ “ಮಾತಾಡಲಾರದೆ” ಎಂದು ತರ್ಜುಮೆಯಾದ ಗ್ರೀಕ್ ಪದವು ವಾಕ್ ಶಕ್ತಿಯಲ್ಲಿ, ಶ್ರವಣಶಕ್ತಿಯಲ್ಲಿ, ಅಥವಾ ಎರಡರಲ್ಲೂ ಮೊಂಡು ಮಾಡಲ್ಪಡುವ ಅರ್ಥಕೊಡುತ್ತದೆ. (ಲೂಕ 7:22) ಜಕರೀಯನ ವಿಷಯದಲ್ಲೇನು? ಒಳ್ಳೇದು, ಅವನಿಗೆ ವಾಸಿಯಾದಾಗ ಏನು ಸಂಭವಿಸಿತ್ತೆಂಬದ್ದನ್ನು ಪರಿಗಣಿಸಿರಿ. “ಕೂಡಲೆ ಅವನಿಗೆ ಬಾಯಿ ಬಂತು, ನಾಲಿಗೆ ಸಡಲವಾಯಿತು, ಅವನು ಮಾತಾಡುವ ಶಕ್ತಿಯುಳ್ಳವನಾಗಿ ದೇವರನ್ನು ಕೊಂಡಾಡಿದನು.” (ಲೂಕ 1:64) ಇದು ಸಮಂಜಸವಾಗಿ ಜಕರೀಯನ ವಾಕ್ ಶಕ್ತಿ ಮಾತ್ರವೇ ನಷ್ಟವಾಗಿತ್ತು ಎಂಬ ನೋಟಕ್ಕೆ ನಡಿಸುತ್ತದೆ.
ಹೀಗಿರಲಾಗಿ ಅವರು ಜಕರೀಯನಿಗೆ, “ಇದಕ್ಕೆ [ಮಗುವಿಗೆ] ಏನು ಹೆಸರಿಡುತ್ತೀ ಎಂದು ಸನ್ನೆಮಾಡಿ” ಕೇಳಿದೇಕ್ದೆ? ಕೆಲವು ಭಾಷಾಂತರಕಾರರು ಇದನ್ನು “ಸನ್ನೆಗಳ ಭಾಷೆ” ಅಥವಾ “ಸಂಜ್ಞಾ ಭಾಷೆಯನ್ನು ಉಪಯೋಗಿಸಿ” ಎಂದೂ ತರ್ಜುಮೆ ಮಾಡುತ್ತಾರೆ.
ದೇವದೂತನ ಪ್ರಕಟನೆಯಾದಂದಿನಿಂದ ಮೂಕನಾಗಿದ್ದ ಜಕರೀಯನು, ತನ್ನನ್ನು ವ್ಯಕ್ತಪಡಿಸಲು ಸನ್ನೆಗಳನ್ನು, ಒಂದು ರೀತಿಯ ಸಂಜ್ಞಾ ಭಾಷೆಯನ್ನು ಬಳಸಲು ಆಗಿಂದಾಗ್ಯೆ ನಿರ್ಬಂಧಿಸಲ್ಪಟ್ಟನು. ದೃಷ್ಟಾಂತಕ್ಕಾಗಿ, ದೇವಾಲಯದಲ್ಲಿ ಇದ್ದವರಿಗೆ ಅವನು “ಕೈಸನ್ನೆ ಮಾಡುತ್ತಾ ಇದ್ದನು.” (ಲೂಕ 1:21, 22) ತದನಂತರ ಒಂದು ಹಲಿಗೆಗಾಗಿ ಕೇಳಿದಾಗ, ಅವನು ಸನ್ನೆಗಳನ್ನು ಅಥವಾ ಭಾವಾಭಿನಯಗಳನ್ನು ಮಾಡಿದಿರ್ದಬೇಕು. (ಲೂಕ 1:63) ಆದುದರಿಂದ, ಅವನ ಮೂಕತನದ ಅವಧಿಯಲ್ಲಿ ಆತನ ಸುತ್ತಲಿದ್ದವರು ಸಹ ಸನ್ನೆಗಳನ್ನು ಮಾಡುವ ಪ್ರವೃತ್ತಿಯನ್ನು ತೋರಿಸಿದ್ದ ಶಕ್ಯತೆಯಿದೆ.
ಆದರೂ ಲೂಕ 1:62 ರಲ್ಲಿ ತಿಳಿಸಲಾದ ಸನ್ನೆಗಳಿಗೆ ಒಂದು ಹೆಚ್ಚು ಸಂಭವನೀಯವಾದ ಅರ್ಥವಿವರಣೆ ಅಲ್ಲಿದೆ. ಎಲಿಸಬೇತಳು ತನ್ನ ಮಗನ ಹೆಸರಿನ ಕುರಿತು ಆಗಲೇ ತನ್ನನ್ನು ವ್ಯಕ್ತಪಡಿಸಿದ್ದಳು. ಹೀಗೆ, ಅವಳ ಪ್ರತಿವಿರುದ್ಧ ಹೇಳದೆ, ಅವಳ ಗಂಡನ ನಿರ್ಣಯವನ್ನು ಪಡೆಯುವ ಮುಂದಿನ ಮತ್ತು ಯೋಗ್ಯ ಹೆಜ್ಜೆಯನ್ನು ಅವರು ಕೇವಲ ತಕ್ಕೊಂಡಿದ್ದಿರಬಹುದು. ಅವರದನ್ನು ಬರೇ ತಲೆತೂಗಿ ಅಥವಾ ಸನ್ನೆ ಮಾಡಿ ಸೂಚಿಸ ಸಾಧ್ಯವಿತ್ತು. ಜಕರೀಯನಿಗೆ ಓದಲು ಅವರು ತಮ್ಮ ಪ್ರಶ್ನೆಯನ್ನು ಬರೆಯದ ಸಂಗತಿಯು ಅವನಿಗೆ ತನ್ನ ಪತ್ನಿ ಹೇಳಿದ್ದು ಕೇಳಿಸಿತ್ತೆಂಬದಕ್ಕೆ ರುಜುವಾತಾಗಿರಲೂ ಬಹುದು. ಹೀಗೆ ಒಂದು ಬರೇ ತಲೆತೂಗುವಿಕೆ ಅಥವಾ ತುಲನಾತ್ಮಕ ಸನ್ನೆಯು, ‘ಒಳ್ಳೇದು, ನಾವೆಲ್ಲರು (ನೀನು ಕೂಡ, ಜಕರೀಯನೇ,) ಆಕೆಯ ಶಿಫಾರಸನ್ನು ಕೇಳಿದೆವು, ಆದರೆ ಮಗುವಿನ ಹೆಸರಿನ ವಿಷಯದಲ್ಲಿ ನಿನ್ನ ಕೊನೆಯ ನಿರ್ಣಯವೇನು?’ ಎಂಬರ್ಥವನ್ನು ಕೊಡ ಸಾಧ್ಯವಿತ್ತು.
ಮತ್ತು, ಅನಂತರ ಕೂಡಲೇ ಪರಿಸ್ಥಿತಿಯನ್ನು ಬದಲಾಯಿಸಿದ ಇನ್ನೊಂದು ಅದ್ಭುತವು ನಡೆಯಿತು. “ಕೂಡಲೆ ಅವನಿಗೆ ಬಾಯಿಬಂತು, ನಾಲಿಗೆ ಸಡಲವಾಯಿತು, ಅವನು ಮಾತಾಡುವ ಶಕ್ತಿ” ಉಳ್ಳವನಾದನು. (ಲೂಕ 1:64) ಅವನ ಶ್ರವಣ ಶಕ್ತಿಯ ಮೇಲೆ ಪರಿಣಾಮವಾಗಿರಲಿಲ್ಲವಾದರೆ, ಆ ಕುರಿತು ತಿಳಿಸುವ ಅಗತ್ಯವೂ ಇರಲಿಲ್ಲ. (w92 4/1)