ಅಧ್ಯಾಯ 62
ನಮ್ರತೆಯ ಒಂದು ಪಾಠ
ಪಿಲಿಪ್ಪನ ಕೈಸರೇಯ ಪ್ರಾಂತದ ಸಮೀಪ ದೆವ್ವ ಹಿಡಿದ ಹುಡುಗನನ್ನು ವಾಸಿಮಾಡಿದ ನಂತರ, ಯೇಸುವು ಕಪೆರ್ನೌಮಿನ ಮನೆಗೆ ಹಿಂತೆರಳಲು ಬಯಸಿದನು. ಆದಾಗ್ಯೂ, ಈ ಪ್ರಯಾಣದಲ್ಲಿ ತನ್ನ ಶಿಷ್ಯರೊಂದಿಗೆ ಏಕಾಂತನಾಗಿರಲು ಅವನು ಬಯಸುತ್ತಾನೆ ಯಾಕಂದರೆ ಅವನ ಮರಣದ ಮತ್ತು ತದನಂತರದ ಅವರ ಜವಾಬ್ದಾರಿಗಳ ಕುರಿತು ಅವನು ಅವರನ್ನು ಇನ್ನಷ್ಟು ಸಿದ್ಧಗೊಳಿಸಲು ಸಾಧ್ಯವಾಗುತ್ತಿತ್ತು. “ಮನುಷ್ಯಕುಮಾರನು ಮನುಷ್ಯರ ಕೈಗೆ ಒಪ್ಪಿಸಿಕೊಡಲ್ಪಡುವನು,” ಎಂದು ಅವನು ಅವರಿಗೆ ವಿವರಿಸುತ್ತಾನೆ, “ಮತ್ತು ಅವರು ಆತನನ್ನು ಕೊಲ್ಲುವರು; ಸತ್ತ ಮೂರನೆಯ ದಿನದಲ್ಲಿ ಆತನು ಜೀವಿತನಾಗಿ ಎಬ್ಬಿಸಲ್ಪಡುವನು.”
ಇದರ ಕುರಿತು ಯೇಸುವು ಈ ಮುಂಚೆ ಮಾತಾಡಿದ್ದನಾದರೂ, ಮತ್ತು ಮೂವರು ಅಪೊಸ್ತಲರು ವಾಸ್ತವವಾಗಿ ಅವನ “ಅಗಲುವಿಕೆಯ” ಕುರಿತಾದ ಚರ್ಚೆ ನಡೆಸಿದ್ದ ಅವನ ಪ್ರಕಾಶಮಾನ ರೂಪಾಂತರವನ್ನು ನೋಡಿದ್ದರೂ, ಅವನ ಹಿಂಬಾಲಕರಿಗೆ ಈ ವಿಷಯದ ಕುರಿತು ತಿಳುವಳಿಕೆ ಇನ್ನೂ ಇರಲಿಲ್ಲ. ಅವನು ಕೊಲ್ಲಲ್ಪಡಲಿರುವನು ಎಂಬದನ್ನು, ಪೇತ್ರನು ಈ ಮೊದಲು ಮಾಡಿದಂತೆ, ಅವರಲ್ಲಿ ಯಾರೂ ನಿರಾಕರಿಸಲಿಲ್ಲವಾದರೂ, ಅದರ ಕುರಿತು ಹೆಚ್ಚನ್ನು ಪ್ರಶ್ನಿಸಲು ಅವರು ಭಯಪಡುತ್ತಿದ್ದರು.
ಕಟ್ಟಕಡೆಗೆ ಅವರು ಕಪೆರ್ನೌಮಿಗೆ ಬರುತ್ತಾರೆ, ಇದು ಹೆಚ್ಚುಕಡಿಮೆ ಯೇಸುವಿನ ಶುಶ್ರೂಷೆಯ ಒಂದು ಕೇಂದ್ರಗೃಹದೋಪಾದಿ ಇತ್ತು. ಇದು ಪೇತ್ರನ ಮತ್ತು ಇನ್ನಿತರ ಅನೇಕ ಅಪೊಸ್ತಲರ ಊರುಮನೆಯೂ ಆಗಿತ್ತು. ಅಲ್ಲಿ ದೇವಾಲಯಕ್ಕಾಗಿ ತೆರಿಗೆಯನ್ನು ಎತ್ತುವವರು ಪೇತ್ರನನ್ನು ಸಮೀಪಿಸುತ್ತಾರೆ. ಪ್ರಾಯಶಃ ಅಂಗೀಕೃತವಾದ ಪದ್ಧತಿಯ ಒಂದು ಮುರಿಯುವಿಕೆಯಲ್ಲಿ ಯೇಸುವನ್ನು ಒಳಗೂಡಿಸುವ ಪ್ರಯತ್ನದಲ್ಲಿ, ಅವರು ಕೇಳುವದು: “ನಿಮ್ಮ ಬೋಧಕನು ಎರಡು ದಿದ್ರಾಖ್ಮ [ದೇವಾಲಯದ] ತೆರಿಗೆಯನ್ನು ಸಲ್ಲಿಸುವದಿಲ್ಲವೇ?”
“ಹೌದು, ಸಲ್ಲಿಸುತ್ತಾನೆ” ಎಂದು ಪೇತ್ರನು ಉತ್ತರಿಸುತ್ತಾನೆ.
ಇದಾದ ಸ್ವಲ್ಪ ಸಮಯದ ನಂತರ ಮನೆಯೊಳಗೆ ಬಂದಿರಬಹುದಾದ ಯೇಸುವಿಗೆ ಸಂಭವಿಸಿದ ಸಂಗತಿಯ ಅರಿವು ಆಗಿತ್ತು. ಆದುದರಿಂದ, ಪೇತ್ರನು ಆ ವಿಷಯವನ್ನು ಎತ್ತುವ ಮೊದಲೇ, ಯೇಸುವು ವಿಚಾರಿಸುವದು: “ಸೀಮೋನಾ, ನಿನಗೆ ಹೇಗೆ ತೋರುತ್ತದೆ? ಭೂಲೋಕದ ಅರಸರು ಸುಂಕವನ್ನಾಗಲಿ ಮಂಡೇತೆರಿಗೆಯನ್ನಾಗಲಿ ಯಾರಿಂದ ತೆಗೆದುಕೊಳ್ಳುತ್ತಾರೆ? ತಮ್ಮ ಮಕ್ಕಳಿಂದಲೋ? ಬೇರೆಯವರಿಂದಲೋ?”
“ಬೇರೆಯವರಿಂದ,” ಎಂದು ಪೇತ್ರನು ಉತ್ತರಿಸುತ್ತಾನೆ.
“ವಾಸ್ತವದಲ್ಲಿ ಮಕ್ಕಳು ತೆರಿಗೆಗೆ ಒಳಗಾದವರಲ್ಲ,” ಎಂದು ಯೇಸು ಅವಲೋಕಿಸುತ್ತಾನೆ. ಯೇಸುವಿನ ತಂದೆಯು ದೇವಾಲಯದಲ್ಲಿ ಆರಾಧಿಸಲ್ಪಡುವ ವಿಶ್ವದ ಅರಸನಾಗಿದುದ್ದರಿಂದ, ದೇವಾಲಯದ ತೆರಿಗೆಯನ್ನು ದೇವರ ಮಗನು ಕೊಡುವದು ನ್ಯಾಯೋಚಿತವಾಗಿರಲಿಲ್ಲ. “ಆದರೆ ನಾವು ಅವರಿಗೆ ವಿಘ್ನವಾಗಿರಲು ಕಾರಣವಾಗಬಾರದು,” ಎಂದು ಯೇಸುವು ಹೇಳುತ್ತಾನೆ. “ನೀನು ಸಮುದ್ರಕ್ಕೆ ಹೋಗಿ ಗಾಳ ಹಾಕಿ ಮೊದಲು ಸಿಕ್ಕುವ ಮೀನನ್ನು ಎತ್ತು; ಅದರ ಬಾಯಿ ತೆರೆದು ನೋಡಿದರೆ ಅದರಲ್ಲಿ ಒಂದು ನಾಣ್ಯ [ನಾಲ್ಕು ದಿದ್ರಾಖ್ಮಗಳು] ಸಿಕ್ಕುವದು; ಅದನ್ನು ತೆಗೆದುಕೊಂಡು ನಮ್ಮಿಬ್ಬರದಂತ ಹೇಳಿ ಅವರಿಗೆ ಕೊಡು.”
ಕಪೆರ್ನೌಮಿಗೆ ಹಿಂತೆರಳಿ ಬಂದನಂತರ, ಶಿಷ್ಯರು ಪ್ರಾಯಶಃ ಪೇತ್ರನ ಮನೆಯಲ್ಲಿ ಒಟ್ಟುಗೂಡಿದಾಗ ಅವರು ಕೇಳುವದು: “ಪರಲೋಕ ರಾಜ್ಯದಲ್ಲಿ ಯಾವನು ಹೆಚ್ಚಿನವನು?” ಕೈಸರೇಯದ ಫಿಲಿಪ್ಪಿಯಿಂದ ಅವರು ಅವನ ಹಿಂದೆ ಬರುತ್ತಿರುವಾಗ, ಅವರ ಮನಸ್ಸಿನಲ್ಲಿ ಏನೆಲ್ಲಾ ವಿಚಾರಗಳು ನಡೆಯುತ್ತಿದ್ದವು ಮತ್ತು ಅದರಿಂದ ಈ ಪ್ರಶ್ನೆಯನ್ನು ಎಬ್ಬಿಸಲು ಪ್ರಚೋದನೆ ಏನು ಎಂದು ಯೇಸುವು ತಿಳಿದವನಾಗಿದ್ದನು. ಆದುದರಿಂದ ಅವನು ಕೇಳುವದು: “ನೀವು ದಾರಿಯಲ್ಲಿ ಏನು ಮಾತಾಡಿಕೊಳ್ಳುತ್ತಿದ್ದಿರಿ?” ಪೇಚಾಟಕ್ಕೊಳಗಾಗಿ, ಶಿಷ್ಯರು ಸುಮ್ಮನೆ ಇದ್ದರು, ಯಾಕಂದರೆ ಅವರು ತಮ್ಮೊಳಗೆ ಯಾವನು ಹೆಚ್ಚಿನವನು ಎಂದು ವಾಗ್ವಾದ ಮಾಡಿಕೊಂಡಿದ್ದರು.
ಯೇಸುವಿನ ಕಲಿಸುವಿಕೆಯ ಸುಮಾರು ಮೂರು ವರ್ಷಗಳ ನಂತರವೂ, ಶಿಷ್ಯರೊಳಗೆ ಅಂಥಹ ತರಹದ ಒಂದು ವಾಗ್ವಾದವು ಇತ್ತು ಎಂದು ನಂಬಲು ಕಷ್ಟವೆಂದು ಭಾಸವಾಗುತ್ತದೋ? ಒಳ್ಳೇದು, ಮಾನವ ಅಪರಿಪೂರ್ಣತೆಯ ಹಾಗೂ, ಧಾರ್ಮಿಕ ಹಿನ್ನೆಲೆಯ ಬಲವಾದ ಪ್ರಭಾವವನ್ನು ಅದು ಪ್ರಕಟಿಸುತ್ತದೆ. ಶಿಷ್ಯರು ಬೆಳೆಯಲ್ಪಟ್ಟ ಯೆಹೂದಿ ಧರ್ಮವು ತನ್ನ ಎಲ್ಲಾ ವ್ಯವಹಾರಗಳಲ್ಲಿ ಸ್ಥಾನ ಇಲ್ಲವೇ ಹುದ್ದೆಗೆ ಅತಿ ಒತ್ತರವನ್ನು ಕೊಡುತ್ತಿತ್ತು. ಅದಲ್ಲದೆ, ರಾಜ್ಯದ ಕೆಲವು ನಿರ್ದಿಷ್ಟ “ಬೀಗದ ಕೈಗಳನ್ನು” ಪಡೆಯಲಿದ್ದೇನೆಂಬ ಯೇಸುವಿನ ಆಶ್ವಾಸನೆಯಿಂದ ಪೇತ್ರನು ಪ್ರಾಯಶಃ ಶ್ರೇಷ್ಠನೆಂದು ಭಾವಿಸಿದ್ದಿರಬಹುದು. ಯೇಸುವಿನ ಪ್ರಕಾಶಮಯ ರೂಪಾಂತರದ ಸಾಕ್ಷಿಯಾಗುವಷ್ಟು ಮೆಚ್ಚಿಗೆ ಪಡೆದದ್ದರಿಂದ ಯಾಕೋಬ ಮತ್ತು ಯೋಹಾನರಲ್ಲಿಯೂ ತದ್ರೀತಿಯ ಕಲ್ಪನೆಯಿದ್ದಿರಬಹುದು.
ಸಂಗತಿ ಏನೇ ಇರಲಿ, ಅವರ ಮನೋಭಾವಗಳನ್ನು ಸರಿಪಡಿಸುವ ಪ್ರಯತ್ನದಲ್ಲಿ ಯೇಸುವು ಒಂದು ಮನತಟ್ಟುವ ಪ್ರದರ್ಶನೆಯನ್ನು ಮಾಡುತ್ತಾನೆ. ಅವನು ಒಂದು ಚಿಕ್ಕ ಮಗುವನ್ನು ತೆಗೆದುಕೊಂಡು ಅವರ ಮಧ್ಯದಲ್ಲಿ ನಿಲ್ಲಿಸಿ, ಅದರ ಸುತ್ತಲೂ ತನ್ನ ಕೈಗಳನ್ನಾವರಿಸಿ ಅವರಿಗೆ ಹೀಗನ್ನುತ್ತಾನೆ: “ನೀವು ತಿರುಗಿಕೊಂಡು ಚಿಕ್ಕ ಮಕ್ಕಳಂತೆ ಆಗದೆ ಹೋದರೆ ನೀವು ಪರಲೋಕ ರಾಜ್ಯದಲ್ಲಿ ಸೇರುವದೇ ಇಲ್ಲ. ಹೀಗಿರುವದರಿಂದ ಯಾವನು ಈ ಚಿಕ್ಕ ಮಗುವಿನಂತೆ ತನ್ನನ್ನು ತಗ್ಗಿಸಿಕೊಳ್ಳುತ್ತಾನೋ, ಅವನೇ ಪರಲೋಕ ರಾಜ್ಯದಲ್ಲಿ ಹೆಚ್ಚಿನವನು. ಇದಲ್ಲದೆ ಯಾವನಾದರೂ ನನ್ನ ಹೆಸರಿನಲ್ಲಿ ಇಂಥ ಚಿಕ್ಕ ಮಗುವನ್ನು ಸೇರಿಸಿ ಕೊಂಡರೆ ನನ್ನನ್ನು ಸೇರಿಸಿಕೊಂಡ ಹಾಗಾಯಿತು.”
ಅದು ಅವನ ಶಿಷ್ಯರನ್ನು ಎಂಥಹ ಒಂದು ಅದ್ಭುತಕರ ವಿಧದಲ್ಲಿ ಸರಿಪಡಿಸುವದಾಗಿತ್ತು! ಯೇಸು ಅವರೊಡನೆ ಕೋಪಗೊಳ್ಳುವದಿಲ್ಲ ಮತ್ತು ಅವರನ್ನು ಅಹಂಕಾರಿಗಳೂ, ಸ್ವಾರ್ಥಿಗಳೂ ಇಲ್ಲವೆ ಮಹತ್ವಾಕಾಂಕ್ಷಿಗಳೂ ಎಂದು ಕರೆಯುವದಿಲ್ಲ. ಇಲ್ಲ, ಆದರೆ ನಮ್ರರೂ, ಮಹತ್ವಾಕಾಂಕ್ಷೆ ಇಲ್ಲದವರೂ ಮತ್ತು ಸಾಮಾನ್ಯವಾಗಿ ಅವರ ನಡುವೆ ಸ್ಥಾನಮಾನಗಳ ಯಾವುದೇ ಪರಿವೆ ಇಲ್ಲದಂತಹ ಗುಣಗಳಿರುವ ಎಳೆಯ ಮಕ್ಕಳ ನಿದರ್ಶನೆಯನ್ನು ಬಳಸಿ, ಅವನ ಸರಿಪಡಿಸುವ ಕಲಿಸುವಿಕೆಯಲ್ಲಿ ಉದಾಹರಿಸುತ್ತಾನೆ. ಈ ರೀತಿಯಲ್ಲಿ ನಮ್ರ ಮಕ್ಕಳನ್ನು ಗುರುತಿಸುವ ಈ ಗುಣಗಳನ್ನು ಅವನ ಶಿಷ್ಯರು ಬೆಳೆಸಬೇಕೆಂದು ಯೇಸು ತೋರಿಸುತ್ತಾನೆ. ಯೇಸುವು ಸಮಾಪ್ತಿಗೊಳಿಸಿದ್ದು: “ನಿಮ್ಮೆಲ್ಲರಲ್ಲಿ ಯಾವನು ಸ್ವತಃ ಚಿಕ್ಕವನಾಗಿ ತನ್ನನ್ನು ನಡಿಸಿಕೊಳ್ಳುವನೋ, ಅವನೇ ದೊಡ್ಡವನು.”(NW) ಮತ್ತಾಯ 17:22-27; 18:1-5; ಮಾರ್ಕ 9:30-37; ಲೂಕ 9:43-48.
▪ ಕಪೆರ್ನೌಮಿಗೆ ಹಿಂತೆರಳಿದ ಮೇಲೆ, ಯೇಸುವು ಯಾವ ಕಲಿಸುವಿಕೆಯನ್ನು ಪುನರಾವರ್ತಿಸಿದನು, ಅದು ಹೇಗೆ ಸ್ವೀಕರಿಸಲ್ಪಟ್ಟಿತು?
▪ ದೇವಾಲಯದ ತೆರಿಗೆಯನ್ನು ಕೊಡುವ ಹಂಗಿನಲ್ಲಿ ಯೇಸುವು ಇರಲಿಲ್ಲ ಯಾಕೆ, ಆದರೆ ಅವನದನ್ನು ತೆರುವದು ಯಾಕೆ?
▪ ಶಿಷ್ಯರ ವಾಗ್ವಾದಕ್ಕೆ ಕಾರಣವಾದದ್ದು ಏನಾಗಿರಬಹುದು, ಮತ್ತು ಯೇಸುವು ಅವರನ್ನು ಹೇಗೆ ಸರಿಪಡಿಸುತ್ತಾನೆ?