-
“ಹೊರಟುಹೋಗಿ . . . ಶಿಷ್ಯರನ್ನಾಗಿ ಮಾಡಿರಿ”“ನನ್ನನ್ನು ಹಿಂಬಾಲಿಸಿರಿ”
-
-
12 ಅನಾವಶ್ಯಕ ಅಪಕರ್ಷಣೆಗಳಿಗೆ ಒಳಗಾಗದಂತೆಯೂ ಯೇಸು ತನ್ನ ಶಿಷ್ಯರಿಗೆ ಕಲಿಸಿದನು. “ದಾರಿಯಲ್ಲಿ ಯಾರಿಗೂ ವಂದನೆಯಲ್ಲಿ ಅಪ್ಪಿಕೊಳ್ಳಬೇಡಿ” ಎಂದು ಅವನು ತಿಳಿಸಿದನು. (ಲೂಕ 10:4) ಸ್ನೇಹಭಾವ ತೋರಿಸದೆ ಜನರನ್ನು ದೂರವಿಡಿ ಎಂದು ಯೇಸು ಅವರಿಗೆ ಹೇಳುತ್ತಿದ್ದನೋ? ಖಂಡಿತ ಇಲ್ಲ. ಬೈಬಲ್ ಸಮಯಗಳಲ್ಲಿ, ಪರಸ್ಪರ ವಂದಿಸುವುದರಲ್ಲಿ ಕೇವಲ ನಮಸ್ಕಾರ ಹೇಳುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿತ್ತು. ಸಂಪ್ರದಾಯಬದ್ಧ ವಂದನೆಯು ಬಹಳ ವಿಧಿವಿಧಾನಗಳನ್ನೂ ಸುದೀರ್ಘ ಸಂಭಾಷಣೆಯನ್ನೂ ಒಳಗೊಂಡಿತ್ತು. ಈ ಕುರಿತು ಒಬ್ಬ ಬೈಬಲ್ ವಿದ್ವಾಂಸನು ಹೇಳಿದ್ದು: “ಪೂರ್ವದೇಶದವರ ಪರಸ್ಪರ ವಂದನೆಯು ನಮ್ಮಂತೆ ಕೊಂಚ ತಲೆಬಾಗಿಸುವುದಾಗಲಿ ಹಸ್ತಲಾಘವ ಮಾಡುವುದಾಗಲಿ ಆಗಿರಲಿಲ್ಲ. ಬದಲಿಗೆ [ಅವರು] ಅನೇಕ ಸಲ ಆಲಂಗಿಸುತ್ತಿದ್ದರು ಮತ್ತು ತಲೆಬಾಗುತ್ತಿದ್ದರು. ಮಾತ್ರವಲ್ಲ, ಸಂಪೂರ್ಣವಾಗಿ ನೆಲದಲ್ಲಿ ಸಾಷ್ಟಾಂಗವೆರಗುತ್ತಿದ್ದರು. ಹೀಗೆ ಮಾಡಲು ತುಂಬಾ ಸಮಯ ಬೇಕಾಗುತ್ತಿತ್ತು.” ಸಂಪ್ರದಾಯಬದ್ಧ ವಂದನೆ ಮಾಡಬೇಡಿ ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದಾಗ ಅದರರ್ಥ, ‘ನೀವು ಸಾರುವ ಸಂದೇಶವು ತುರ್ತಿನದ್ದಾಗಿದ್ದರಿಂದ ಹೆಚ್ಚು ಸಮಯ ಅದಕ್ಕಾಗಿ ಉಪಯೋಗಿಸಿ’ ಎಂದಾಗಿತ್ತು.a
-
-
“ಹೊರಟುಹೋಗಿ . . . ಶಿಷ್ಯರನ್ನಾಗಿ ಮಾಡಿರಿ”“ನನ್ನನ್ನು ಹಿಂಬಾಲಿಸಿರಿ”
-
-
b ಯೇಸುವಿನ ಹೆಚ್ಚಿನ ಹಿಂಬಾಲಕರು ಗಲಿಲಾಯದಲ್ಲಿ ಇದ್ದುದರಿಂದ, ಮತ್ತಾಯ 28:16-20ರಲ್ಲಿ ವಿವರಿಸಲಾಗಿರುವ ಘಟನೆಯ ಸಮಯದಲ್ಲೇ ಪುನರುತ್ಥಿತ ಯೇಸು “ಐನೂರಕ್ಕಿಂತಲೂ ಹೆಚ್ಚು ಮಂದಿ” ಜನರಿಗೆ ಕಾಣಿಸಿಕೊಂಡಿರಬೇಕು. (1 ಕೊರಿಂಥ 15:6) ಅಂದರೆ, ಶಿಷ್ಯರನ್ನಾಗಿ ಮಾಡುವ ಆಜ್ಞೆಯನ್ನು ಯೇಸು ನೀಡಿದಾಗ ಅಲ್ಲಿ ನೂರಾರು ಜನರು ಉಪಸ್ಥಿತರಿದ್ದಿರಬೇಕು.
-