ನಿಮ್ಮ ನೆರೆಯವನನ್ನು ಯಾಕೆ ಪ್ರೀತಿಸಬೇಕು?
ನಿತ್ಯಜೀವವು, ನೆರೆಯವನ ಹಾಗೂ ದೇವರ ಕಡೆಗೆ ಇರುವ ನಮ್ಮ ಪ್ರೀತಿಯ ಮೇಲೆ ಅವಲಂಬಿಸುತ್ತದೆ. ಸುಮಾರು 2,000 ವರ್ಷಗಳ ಹಿಂದೆ ನಡೆದ ಒಂದು ಸಂಭಾಷಣೆಯ ಸಮಯದಲ್ಲಿ ಆ ವಿಚಾರವನ್ನು ಹೇಳಲಾಯಿತು.
“ನಾನು ನಿತ್ಯಜೀವಕ್ಕೆ ಬಾಧ್ಯನಾಗುವಂತೆ ಏನು ಮಾಡಬೇಕು?” ಎಂದು ಮೋಶೆಯ ನಿಯಮದಲ್ಲಿ ಪರಿಣಿತನಾದ ಒಬ್ಬ ಯೆಹೂದ್ಯನು ಯೇಸು ಕ್ರಿಸ್ತನನ್ನು ಕೇಳಿದನು. ಯೇಸು ಉತ್ತರಿಸಿದ್ದು: “ಶಾಸ್ತ್ರದಲ್ಲಿ ಏನು ಬರೆದದೆ? ಹೇಗೆ ಓದಿದ್ದೀ?” ನಿಯಮವನ್ನು ಉಲ್ಲೇಖಿಸುತ್ತಾ, ಮನುಷ್ಯನು ಹೇಳಿದ್ದು: “ನಿನ್ನ ದೇವರಾಗಿರುವ ಕರ್ತನನ್ನು (ಯೆಹೋವ, NW) ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು. ಮತ್ತು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.” “ನೀನು ಸರಿಯಾಗಿ ಉತ್ತರಕೊಟ್ಟಿ,” ಅಂದನು ಯೇಸು. “ಇದರಂತೆ ಮಾಡು, ಮಾಡಿದರೆ ಜೀವಿಸುವಿ.”—ಲೂಕ 10:25-28.
ಅದಕ್ಕೆ, ಯೇಸುವನ್ನು ವಿಚಾರಿಸುವವನು, “ನನ್ನ ನೆರೆಯವನು ಯಾರು?” ಎಂದು ಕೇಳಿದನು. ನೇರವಾಗಿ ಉತ್ತರಿಸುವ ಬದಲು, ಕದಿಯಲ್ಪಟ್ಟ, ಹೊಡೆಯಲ್ಪಟ್ಟ, ಮತ್ತು ಬಹುಮಟ್ಟಿಗೆ ಸತ್ತ ಸ್ಥಿತಿಯಲ್ಲಿ ಬಿಡಲ್ಪಟ್ಟ ಒಬ್ಬ ಯೆಹೂದ್ಯ ಮನುಷ್ಯನ ಕುರಿತು ಉದಾಹರಣೆಯಾಗಿರುವ ಒಂದು ಕಥೆಯನ್ನು ಯೇಸು ಹೇಳಿದನು. ಎರಡು ಯೆಹೂದ್ಯರು ಆಗ ಬಂದರು—ಮೊದಲನೆಯವನು ಒಬ್ಬ ಯಾಜಕನು ಮತ್ತು ತದನಂತರ ಒಬ್ಬ ಲೇವಿಯನು. ಅವರಲ್ಲಿ ಪ್ರತಿಯೊಬ್ಬರು ತಮ್ಮ ಜೊತೆ ಯೆಹೂದ್ಯನ ಸ್ಥಿತಿಯನ್ನು ಕಂಡರೂ ಅವನಿಗೆ ನೆರವು ನೀಡಲು ಏನನ್ನೂ ಮಾಡಲಿಲ್ಲ. ಆಮೇಲೆ ಒಬ್ಬ ಸಮಾರ್ಯದವನು ಅಲ್ಲಿಗೆ ಬಂದನು. ಕನಿಕರದಿಂದ ಪ್ರೇರಿಸಲ್ಪಟ್ಟು ಅವನು ಗಾಯಗೊಂಡ ಯೆಹೂದ್ಯನ ಗಾಯಗಳಿಗೆ ಪಟ್ಟಿಯನ್ನು ಕಟ್ಟಿದನು, ಒಂದು ಚತ್ರಕ್ಕೆ ಅವನನ್ನು ಕರೆದುಕೊಂಡು ಹೋದನು, ಮತ್ತು ಇನ್ನೂ ಹೆಚ್ಚಿನ ಪೋಷಣೆಗಾಗಿ ಹಣ ಒದಗಿಸಿದನು.
“ಈ ಮೂವರಲ್ಲಿ ಯಾವನು ಕಳ್ಳರ ಕೈಗೆ ಸಿಕ್ಕಿದವನಿಗೆ ನೆರೆಯವನಾದನೆಂದು ನಿನಗೆ ತೋರುತ್ತದೆ?” ಎಂದು ಯೇಸು ಅವನನ್ನು ವಿಚಾರಿಸುವವನಿಗೆ ಕೇಳಿದನು. ಸ್ಪಷ್ಟವಾಗಿಗಿ, ಕರುಣಾಮಯಿಯಾದ ಸಮಾರ್ಯದವನೇ ನೆರೆಯವನಾಗಿದ್ದನು. ನೆರೆಯವರ ಮೇಲಿರುವ ಯಥಾರ್ಥವಾದ ಪ್ರೀತಿಯು, ಕುಲ ಸಂಬಂಧವಾದ ತಡೆಗಳನ್ನು ಮೀರುತ್ತದೆ ಎಂದು ಯೇಸು ಹೀಗೆ ತೋರಿಸಿದನು.—ಲೂಕ 10:29-37.
ನೆರೆಯವನ ಪ್ರೀತಿಯ ಕೊರತೆ
ಇಂದು ವಿಭಿನ್ನ ಕುಲ ಗುಂಪುಗಳ ಜನರ ನಡುವೆ ಬೆಳೆಯುತ್ತಿರುವ ವೈಷಮ್ಯವಿದೆ. ಉದಾಹರಣೆಗೆ, ಜರ್ಮನಿಯಲ್ಲಿನ ಹೊಸ ನಾಜಿಗಳು ಇತ್ತೀಚೆಗೆ ಒಬ್ಬ ಮನುಷ್ಯನನ್ನು ನೆಲಕ್ಕೆ ಬೀಳಿಸಿ ಅವನ ಎಲ್ಲಾ ಪಕ್ಕೆಲುಬುಗಳನ್ನು ಬಹುಮಟ್ಟಿಗೆ ಮುರಿಯುತ್ತಾ, ತಮ್ಮ ದಪ್ಪನೆಯ ಬೂಟುಗಳಿಂದ ಅವನನ್ನು ತುಳಿದುಹಾಕಿದರು. ಆಮೇಲೆ ಅವರು ಅವನನ್ನು ಅತಿಯಾದ ಮದ್ಯವಿರುವ ಪಾನೀಯದಿಂದ ತೋಯಿಸಿ, ಉರಿ ಹಚ್ಚಿದರು. ಸಾಯಲು ಬಿಡಲ್ಪಟ್ಟ ಮನುಷ್ಯನು ಯೆಹೂದ್ಯನೆಂದು ಯೋಚಿಸಲ್ಪಟ್ಟದರ್ದಿಂದ ಆಕ್ರಮಿಸಲ್ಪಟ್ಟನು. ಸಂಬಂಧವಿಲ್ಲದ ಇನ್ನೊಂದು ಘಟನೆಯಲ್ಲಿ, ಹ್ಯಾಮ್ಬರ್ಗ್ನ ಸಮೀಪ ಒಂದು ಮನೆಯನ್ನು ಬೆಂಕಿಯಿಂದ ಸ್ಫೋಟಗೊಳಿಸಲಾಯಿತು, ಹತ್ತು ವರ್ಷ ಪ್ರಾಯದ ಹುಡುಗಿಯೊಬ್ಬಳೂ ಸೇರಿ—ತುರ್ಕಿಯ ಮೂಲದ ಮೂರು ಜನರು ಸುಟ್ಟು, ಸತ್ತುಹೋದರು.
ಈ ನಡುವೆ, ಬಾಲ್ಕನ್ಸ್ ಮತ್ತು ದೂರದ ಪೂರ್ವದಲ್ಲಿ, ಕುಲ ಸಂಬಂಧವಾದ ಯುದ್ಧಗಳು ಸಾವಿರಾರು ಜೀವಗಳನ್ನು ಪಡೆದುಕೊಳ್ಳುತ್ತಾ ಇದ್ದವು. ಬಾಂಗ್ಲಾದೇಶ, ಭಾರತ, ಮತ್ತು ಪಾಕಿಸ್ತಾನಗಳಲ್ಲಿ ವಿಭಿನ್ನ ಹಿನ್ನೆಲೆಗಳ ಜನರ ನಡುವಿನ ಘರ್ಷಣೆಯಲ್ಲಿ ಇತರರು ಸತ್ತರು. ಮತ್ತು ಆಫ್ರಿಕದಲ್ಲಿ, ಅಂತರ-ಜಾತಿಯ ಮತ್ತು ಅಂತರ-ಕುಲದ ತಿಕ್ಕಾಟಗಳು ಇನ್ನೂ ಇತರರ ಜೀವಗಳ ಆಹುತಿಯನ್ನು ತೆಗೆದುಕೊಂಡವು.
ಅನೇಕ ಜನರು ಇಂಥ ಹಿಂಸೆಯಿಂದ ಗಾಬರಿಗೊಂಡಿದ್ದಾರೆ ಮತ್ತು ತಮ್ಮ ನೆರೆಯವರಿಗೆ ಹಾನಿಯನ್ನುಂಟು ಮಾಡಲು ಯಾವುದನ್ನು ಎಂದೂ ಮಾಡುವುದಿಲ್ಲ. ವಾಸ್ತವದಲ್ಲಿ, ಜರ್ಮನಿಯಲ್ಲಿ ನಡೆದ ದೊಡ್ಡ ಪ್ರದರ್ಶನಗಳು ಅಲ್ಲಿಯ ಕುಲ ಸಂಬಂಧವಾದ ಹಿಂಸೆಯನ್ನು ಖಂಡಿಸಿವೆ. ಆದರೂ, ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದು: “ಬಹುಮಟ್ಟಿಗೆ ಲೋಕದ ಎಲ್ಲಾ ಸಂಸ್ಕೃತಿಯ ಸದಸ್ಯರು, ತಮಗೆ ಸಂಬಂಧಿಸಿದ ಅತಿ ನಿಕಟವಾದ ನೆರೆಯವರ ಜೀವನಕ್ಕಿಂತಲೂ ತಮ್ಮ ಸ್ವಂತ ಜೀವಿತದ ಮಾರ್ಗವನ್ನು ಶ್ರೇಷ್ಠವೆಂದು ನೆನಸುತ್ತಾರೆ.” ಅಂಥ ದೃಷ್ಟಿಕೋನಗಳು ನೆರೆಯವರ ಪ್ರೀತಿಗೆ ಅಡಿಯ್ಡಾಗುತ್ತವೆ. ಜೀವವು ದೇವರ ಹಾಗೂ ನೆರೆಯವರಿಗಾಗಿ ಇರುವ ಪ್ರೀತಿಯ ಮೇಲೆ ಅವಲಂಬಿಸಿದೆ ಎಂಬುದಾಗಿ ಯೇಸು ವಿಶೇಷವಾಗಿ ಹೇಳಿದ್ದರಿಂದ, ಇದರ ಕುರಿತು ಏನನ್ನಾದರೂ ಮಾಡ ಸಾಧ್ಯವಿದೆಯೊ?
[ಪುಟ 2 ರಲ್ಲಿರುವ ಚಿತ್ರ ಕೃಪೆ]
Cover: Jules Pelcog/Die Heilige Schrift
[ಪುಟ 3 ರಲ್ಲಿರುವ ಚಿತ್ರ ಕೃಪೆ]
The Good Samaritan/The Doré Bible Illustrations/Dover Publications, Inc.