-
“ದೃಷ್ಟಾಂತವನ್ನು ಉಪಯೋಗಿಸದೆ ಅವನೆಂದೂ ಅವರೊಂದಿಗೆ ಮಾತಾಡುತ್ತಿರಲಿಲ್ಲ”“ನನ್ನನ್ನು ಹಿಂಬಾಲಿಸಿರಿ”
-
-
13 “ಯೆರೂಸಲೇಮಿನಿಂದ ಇಳಿದು ಯೆರಿಕೋವಿಗೆ” ಹೋಗುವ ದಾರಿಯ ಕುರಿತು ಇನ್ನಿತರ ಚಿರಪರಿಚಿತ ವಿವರಗಳನ್ನು ಯೇಸು ತನ್ನ ಸಾಮ್ಯದಲ್ಲಿ ತಿಳಿಸಿದನು. ಆ ಸಾಮ್ಯಕ್ಕನುಸಾರ, ಮೊದಲು ಒಬ್ಬ ಯಾಜಕ, ನಂತರ ಒಬ್ಬ ಲೇವಿಯ ಆ ದಾರಿಯಾಗಿ ಬಂದರು. ಆದರೆ ಅವರಿಬ್ಬರು ಸಹ ಗಾಯಾಳುವನ್ನು ವಿಚಾರಿಸುವ ಗೊಡವೆಗೂ ಹೋಗಲಿಲ್ಲ. (ಲೂಕ 10:31, 32) ಯಾಜಕರು ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದರು ಮತ್ತು ಲೇವಿಯರು ಅವರಿಗೆ ಸಹಾಯಮಾಡುತ್ತಿದ್ದರು. ಅನೇಕ ಯಾಜಕರ ಮತ್ತು ಲೇವಿಯರ ಮನೆ ಯೆರಿಕೋವಿನಲ್ಲಿದ್ದು, ದೇವಾಲಯದ ಸೇವೆ ಮುಗಿದ ನಂತರ ಅವರು ಅಲ್ಲಿಗೆ ಹೋಗುತ್ತಿದ್ದರು. ಯೆರಿಕೋ ಯೆರೂಸಲೇಮಿನಿಂದ ಕೇವಲ 23 ಕಿ.ಮೀ. ದೂರದಲ್ಲಿತ್ತು. ಹಾಗಾಗಿ, ಯಾಜಕರನ್ನು ಮತ್ತು ಲೇವಿಯರನ್ನು ಆ ದಾರಿಯಲ್ಲಿ ಕಾಣಸಾಧ್ಯವಿತ್ತು. ಅವರು “ಯೆರೂಸಲೇಮಿನಿಂದ” ಯೆರಿಕೋವಿನ ಕಡೆಗೆ “ಇಳಿದು” ಬರುತ್ತಿದ್ದರು ಎಂದು ಯೇಸು ಹೇಳಿದ್ದನ್ನೂ ಗಮನಿಸಿ. ಅದನ್ನು ಅವನ ಕೇಳುಗರು ಸುಲಭವಾಗಿ ಅರ್ಥಮಾಡಿಕೊಳ್ಳಸಾಧ್ಯವಿತ್ತು. ಏಕೆಂದರೆ, ಯೆರೂಸಲೇಮ್ ಯೆರಿಕೋವಿಗಿಂತಲೂ ಎತ್ತರ ಪ್ರದೇಶದಲ್ಲಿತ್ತು. ಆದ್ದರಿಂದ, ಪ್ರಯಾಣಿಕರು “ಯೆರೂಸಲೇಮಿನಿಂದ ಇಳಿದು ಯೆರಿಕೋವಿಗೆ” ಹೋಗಬೇಕಿತ್ತು.b ಯೇಸು ತನ್ನ ಕೇಳುಗರನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದನು ಎಂಬುದು ಸುಸ್ಪಷ್ಟ.
-
-
“ದೃಷ್ಟಾಂತವನ್ನು ಉಪಯೋಗಿಸದೆ ಅವನೆಂದೂ ಅವರೊಂದಿಗೆ ಮಾತಾಡುತ್ತಿರಲಿಲ್ಲ”“ನನ್ನನ್ನು ಹಿಂಬಾಲಿಸಿರಿ”
-
-
b ಯಾಜಕ ಮತ್ತು ಲೇವಿಯನು ಸಹ “ಯೆರೂಸಲೇಮಿನಿಂದ” ಇಳಿದುಬರುತ್ತಿದ್ದರೆಂದು ಯೇಸು ಹೇಳಿದನು. ಅಂದರೆ, ಅವರು ದೇವಾಲಯದಿಂದ ಬರುತ್ತಿದ್ದರೇ ವಿನಃ ಅಲ್ಲಿಗೆ ಹೋಗುತ್ತಿರಲಿಲ್ಲ. ಹಾಗಾಗಿ, ಸತ್ತಿರುವಂತೆ ತೋರುತ್ತಿದ್ದ ವ್ಯಕ್ತಿಯಿಂದ ಅಪವಿತ್ರವಾಗಿ ದೇವಾಲಯದಲ್ಲಿ ಸೇವೆಮಾಡುವ ಅರ್ಹತೆಯನ್ನು ತಾತ್ಕಾಲಿಕವಾಗಿ ಕಳೆದುಕೊಳ್ಳುವ ಕಾರಣಕ್ಕಾಗಿ ಅವರು ದಾರಿಯ ಆಚೇ ಬದಿಯಿಂದ ಬಂದಿದ್ದಿರಬಹುದು ಎಂದು ಯಾರೂ ಹೇಳಸಾಧ್ಯವಿರಲಿಲ್ಲ.—ಯಾಜಕಕಾಂಡ 21:1; ಅರಣ್ಯಕಾಂಡ 19:16.
-