-
ಸಹೋದರಿಯರಿಗೆ ಬೆಂಬಲ ಕೊಡಿಕಾವಲಿನಬುರುಜು (ಅಧ್ಯಯನ)—2020 | ಸೆಪ್ಟೆಂಬರ್
-
-
6. ಲೂಕ 10:38-42 ರಲ್ಲಿ ತಿಳಿಸಿರೋ ಪ್ರಕಾರ ಯೇಸು ಮಾರ್ಥ ಮತ್ತು ಮರಿಯಳಿಗೆ ಹೇಗೆ ಸಹಾಯ ಮಾಡಿದನು?
6 ದೇವ್ರ ಸೇವೆ ಮಾಡ್ತಿದ್ದ ಸಹೋದರಿಯರ ಜೊತೆ ಯೇಸು ಸಮ್ಯ ಕಳೆದ್ನು, ಆತನು ಅವ್ರಿಗೆ ಆಪ್ತ ಸ್ನೇಹಿತನಾಗಿದ್ದನು. ಮರಿಯ ಮತ್ತು ಮಾರ್ಥಳ ಜೊತೆ ಯೇಸುವಿಗಿದ್ದ ಸ್ನೇಹದ ಬಗ್ಗೆ ಯೋಚಿಸಿ. ಆ ಇಬ್ರು ಸ್ತ್ರೀಯರು ಬಹುಶಃ ಮದುವೆ ಆಗಿರಲಿಲ್ಲ. (ಲೂಕ 10:38-42 ಓದಿ.) ಯೇಸು ಅವ್ರ ಜೊತೆ ಚೆನ್ನಾಗಿ ನಡ್ಕೊಳ್ತಿದ್ದ, ಮಾತಾಡ್ತಿದ್ದ. ಅದಕ್ಕೇ ಅವ್ರಿಗೆ ಯೇಸು ಜೊತೆ ಇರೋಕೆ ಮಾತಾಡೋಕೆ ಮುಜುಗರ ಅನಿಸ್ಲಿಲ್ಲ. ಬೇರೆ ಶಿಷ್ಯರ ತರಾನೇ ಮರಿಯ ಕೂಡ ಯೇಸುವಿನ ಪಾದದ ಹತ್ರ ಕೂತುಕೊಳ್ಳೋಕೆ ಹಿಂಜರಿಲಿಲ್ಲ.c ಮರಿಯ ಸಹಾಯ ಮಾಡ್ದೇ ಇದ್ದಾಗ ಮಾರ್ಥ ತನಗನ್ಸಿದ್ದನ್ನ ಯೇಸು ಹತ್ರ ಹೇಳ್ಕೊಳ್ಳೋಕೆ ಹಿಂಜರಿಲಿಲ್ಲ. ಆ ಸಂದರ್ಭದಲ್ಲಿ ಯೇಸು ಇಬ್ರಿಗೂ ಒಂದು ಮುಖ್ಯ ಪಾಠ ಕಲಿಸಿದ್ನು. ಅವ್ರನ್ನ ಅನೇಕ ಸಲ ಭೇಟಿ ಮಾಡೋ ಮೂಲಕ ಆ ಇಬ್ರು ಸ್ತ್ರೀಯರ ಮೇಲೆ ಮತ್ತು ಅವ್ರ ಸಹೋದರ ಲಾಜರನ ಮೇಲೆ ಕಾಳಜಿ ಇದೆ ಅಂತ ಯೇಸು ತೋರಿಸಿಕೊಟ್ನು. (ಯೋಹಾ. 12:1-3) ಅದಕ್ಕೇ ಮಾರ್ಥ ಮತ್ತು ಮರಿಯ, ಲಾಜರನಿಗೆ ಕಾಯಿಲೆ ಬಂದಾಗ ಯೇಸುವಿನ ಸಹಾಯ ಕೇಳಿದ್ರು.—ಯೋಹಾ. 11:3, 5.
-
-
ಸಹೋದರಿಯರಿಗೆ ಬೆಂಬಲ ಕೊಡಿಕಾವಲಿನಬುರುಜು (ಅಧ್ಯಯನ)—2020 | ಸೆಪ್ಟೆಂಬರ್
-
-
c ಬೈಬಲ್ ಬಗ್ಗೆ ಇರೋ ಒಂದು ಪುಸ್ತಕದಲ್ಲಿ ಹೀಗೆ ಹೇಳಲಾಗಿದೆ: “ಶಿಷ್ಯರು ಬೋಧಕರ ಪಾದದ ಹತ್ರ ಕೂತ್ಕೊಳ್ತಿದ್ರು. ಇದು, ಅವ್ರು ಮುಂದೆ ಬೋಧಕರಾಗ್ತಾರೆ ಅಂತ ಸೂಚಿಸ್ತಿತ್ತು. ಆದ್ರೆ ಸ್ತ್ರೀಯರಿಗೆ ಬೋಧಕರಾಗಲು ಅನುಮತಿ ಇರಲಿಲ್ಲ. ಹಾಗಾಗಿ ಮರಿಯ ಯೇಸುವಿನ ಪಾದದ ಹತ್ರ ಕೂತು ಆಸಕ್ತಿಯಿಂದ ಕೇಳಿಸಿಕೊಳ್ತಿದ್ದಾಗ ಅದನ್ನ ನೋಡಿದ ಹೆಚ್ಚಿನ ಯೆಹೂದಿ ಪುರುಷರಿಗೆ ಆಶ್ಚರ್ಯವಾಗಿರುತ್ತೆ.’’
-