-
ಯೆಹೋವನು ‘ತನ್ನನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮವರವನ್ನು ಕೊಡುವನು’ಕಾವಲಿನಬುರುಜು—2007 | ಜನವರಿ 1
-
-
11 ಪಟ್ಟುಹಿಡಿದ ಅತಿಥೇಯನ ಕುರಿತಾದ ಯೇಸುವಿನ ದೃಷ್ಟಾಂತವು, ಪ್ರಾರ್ಥನೆಮಾಡುವವನ ಅಂದರೆ ವಿಶ್ವಾಸಿಯ ಮನೋವೃತ್ತಿಯನ್ನು ಎತ್ತಿತೋರಿಸುತ್ತದೆ. ಆದರೆ ಮುಂದಿನ ದೃಷ್ಟಾಂತವು ಪ್ರಾರ್ಥನೆಗಳನ್ನು ಕೇಳುವವನಾಗಿರುವ ಯೆಹೋವ ದೇವರ ಮನೋವೃತ್ತಿಯನ್ನು ಎತ್ತಿತೋರಿಸುತ್ತದೆ. ಯೇಸು ಕೇಳಿದ್ದು: “ನಿಮ್ಮಲ್ಲಿ ತಂದೆಯಾದವನು ಮೀನನ್ನು ಕೇಳುವ ಮಗನಿಗೆ ಮೀನು ಕೊಡದೆ ಹಾವನ್ನು ಕೊಡುವನೇ? ಅಥವಾ ತತ್ತಿಯನ್ನು ಕೇಳಿದರೆ ಚೇಳನ್ನು ಕೊಡುವನೇ?” ಇದು ಹೇಗೆ ಅನ್ವಯವಾಗುತ್ತದೆಂಬುದನ್ನು ತಿಳಿಸುತ್ತಾ ಯೇಸು ಮುಂದುವರಿಸಿದ್ದು: “ಹಾಗಾದರೆ ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನಲ್ಲವೇ.”—ಲೂಕ 11:11-13.
12 ಒಬ್ಬ ತಂದೆ ತನ್ನ ಮಗನಿಗೆ ತೋರಿಸುವ ಪ್ರತಿಕ್ರಿಯೆಯ ಕುರಿತಾದ ಈ ಉದಾಹರಣೆಯಿಂದ, ಯೆಹೋವನಿಗೆ ತನ್ನ ಬಳಿ ಪ್ರಾರ್ಥಿಸುವವರ ಕುರಿತು ಹೇಗನಿಸುತ್ತದೆಂಬುದನ್ನು ಯೇಸು ಪ್ರಕಟಪಡಿಸಿದನು. (ಲೂಕ 10:22) ಆದರೆ ಮೊದಲಾಗಿ, ಈ ದೃಷ್ಟಾಂತಗಳ ನಡುವಿನ ವ್ಯತ್ಯಾಸವನ್ನು ಗಮನಿಸಿರಿ. ಪ್ರಥಮ ದೃಷ್ಟಾಂತದಲ್ಲಿದ್ದ ಮನುಷ್ಯನು, ತನ್ನ ಸಹಾಯಕೋರಿ ಬಂದ ವ್ಯಕ್ತಿಯ ಕರೆಗೆ ಓಗೊಡಲು ಹಿಂದೆಮುಂದೆ ನೋಡಿದನು. ಆದರೆ ಯೆಹೋವನು ಹಾಗಲ್ಲ. ಆತನು, ತನ್ನ ಮಗುವಿನ ಬೇಡಿಕೆಯನ್ನು ಪೂರೈಸಲು ತುದಿಗಾಲಲ್ಲಿ ನಿಂತಿರುವ, ತುಂಬ ಅಕ್ಕರೆಯುಳ್ಳ ಮಾನವ ತಂದೆಯಂತಿದ್ದಾನೆ. (ಕೀರ್ತನೆ 50:15) ನಮ್ಮ ಪ್ರಾರ್ಥನೆಗಳಿಗೆ ಪ್ರತಿಕ್ರಿಯೆತೋರಿಸಲು ಯೆಹೋವನಿಗಿರುವ ಸಿದ್ಧಮನಸ್ಸಿನ ಬಗ್ಗೆ ಇನ್ನಷ್ಟನ್ನು ಪ್ರಕಟಿಸಲಿಕ್ಕಾಗಿ ಯೇಸು, ಮಾನವ ತಂದೆಯ ಬಗ್ಗೆ ಮತ್ತು ನಂತರ ಸ್ವರ್ಗೀಯ ತಂದೆಯ ಬಗ್ಗೆ ಮಾತಾಡುತ್ತಾನೆ. ಅವನು ಹೇಳುವುದೇನೆಂದರೆ, ಒಬ್ಬ ಮಾನವ ಪಿತನು ‘ಕೆಟ್ಟವನಾಗಿದ್ದರೂ’ ಅಂದರೆ ಬಾಧ್ಯತೆಯಾಗಿ ಬಂದಿರುವ ಪಾಪವನ್ನು ಹೊಂದಿರುವುದಾದರೂ ತನ್ನ ಮಗನಿಗೆ ಒಳ್ಳೆಯ ಉಡುಗೊರೆಯನ್ನು ಕೊಡಶಕ್ತನಾಗಿದ್ದರೆ, ಯಾವಾಗಲೂ ಒಳ್ಳೇದನ್ನೇ ಮಾಡಲು ಬಯಸುವ ನಮ್ಮ ಸ್ವರ್ಗೀಯ ತಂದೆ ತನ್ನ ಆರಾಧಕರ ಕುಟುಂಬಕ್ಕೆ ಪವಿತ್ರಾತ್ಮ ಕೊಡುವನೆಂದು ನಾವು ಇನ್ನೆಷ್ಟು ಹೆಚ್ಚಾಗಿ ನಿರೀಕ್ಷಿಸಬಹುದು!—ಯಾಕೋಬ 1:17.
-
-
ಯೆಹೋವನು ‘ತನ್ನನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮವರವನ್ನು ಕೊಡುವನು’ಕಾವಲಿನಬುರುಜು—2007 | ಜನವರಿ 1
-
-
14 ಆ ಕಾಳಜಿಭರಿತ ತಂದೆಯ ಕುರಿತಾದ ಯೇಸುವಿನ ದೃಷ್ಟಾಂತವು, ಯೆಹೋವನ ಒಳ್ಳೇತನವು ಯಾವುದೇ ಮಾನವ ತಂದೆತಾಯಿಗಿಂತ ಎಷ್ಟೋ ಶ್ರೇಷ್ಠವಾಗಿದೆ ಎಂಬುದನ್ನು ಸಹ ಒತ್ತಿಹೇಳುತ್ತದೆ. ಹೀಗಿರುವುದರಿಂದ, ನಮಗೆ ಕಷ್ಟಗಳು ಬಂದಾಗ, ದೇವರು ನಮ್ಮ ಮೇಲೆ ಕೋಪಗೊಂಡಿದ್ದಾನೆಂದು ನಾವೆಂದಿಗೂ ಎಣಿಸಬಾರದು. ಆದರೆ ನಾವು ಹಾಗೆ ಯೋಚಿಸಬೇಕೆಂದು ಬಯಸುವವನು ನಮ್ಮ ಪ್ರಧಾನ ಶತ್ರುವಾದ ಸೈತಾನನೇ ಆಗಿದ್ದಾನೆ. (ಯೋಬ 4:1, 7, 8; ಯೋಹಾನ 8:44) ಈ ಸ್ವ-ಖಂಡನಾತ್ಮಕ ವಿಚಾರಗಳಿಗೆ ಯಾವುದೇ ಶಾಸ್ತ್ರಾಧಾರವಿಲ್ಲ. ಯೆಹೋವನು “ಕೆಟ್ಟ” ಸಂಗತಿಗಳಿಂದ ನಮ್ಮನ್ನು ಪರೀಕ್ಷೆಗೊಳಪಡಿಸುವುದಿಲ್ಲ. (ಯಾಕೋಬ 1:13) ಆತನು ನಮಗೆ ಹಾವಿನಂಥ ಕಷ್ಟವನ್ನಾಗಲಿ ಚೇಳಿನಂಥ ಪರೀಕ್ಷೆಯನ್ನಾಗಲಿ ಕೊಡುವುದಿಲ್ಲ. ನಮ್ಮ ಸ್ವರ್ಗೀಯ ತಂದೆಯು “ತನ್ನನ್ನು ಬೇಡಿಕೊಳ್ಳುವವರಿಗೆ . . . ಒಳ್ಳೆಯ ವರಗಳನ್ನು ಕೊಡು”ತ್ತಾನೆ. (ಮತ್ತಾಯ 7:10, 11; ಲೂಕ 11:13) ಹೌದು, ಯೆಹೋವನ ಒಳ್ಳೇತನ ಹಾಗೂ ನಮ್ಮನ್ನು ಸಹಾಯಮಾಡುವುದಕ್ಕೆ ಆತನಿಗಿರುವ ಸಿದ್ಧಮನಸ್ಸನ್ನು ನಾವು ಎಷ್ಟು ಹೆಚ್ಚಾಗಿ ಗ್ರಹಿಸುತ್ತೇವೊ, ಅಷ್ಟೇ ಹೆಚ್ಚು ಭರವಸೆಯಿಂದ ನಾವಾತನಿಗೆ ಪ್ರಾರ್ಥಿಸಲು ಪ್ರೇರಿಸಲ್ಪಡುವೆವು. ನಾವು ಹಾಗೆ ಮಾಡುವಾಗ, ಕೀರ್ತನೆಗಾರನಿಗಿದ್ದಂಥ ಭಾವನೆಗಳನ್ನೇ ವ್ಯಕ್ತಪಡಿಸಲು ಶಕ್ತರಾಗುವೆವು. ಅವನು ಬರೆದುದು: “ದೇವರು ನನ್ನ ಮೊರೆಯನ್ನು ಲಕ್ಷಿಸಿ ಕೇಳಿದ್ದಾನಲ್ಲಾ.”—ಕೀರ್ತನೆ 10:17; 66:19.
-