“ಸುವಾರ್ತೆಯ ವಿಷಯದಲ್ಲಿ ನಾಚಿಕೊಳ್ಳುವವನಲ್ಲ”
“ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೊಳ್ಳುವವನಲ್ಲ. ಆ ಸುವಾರ್ತೆಯು ದೇವರ ಬಲಸ್ವರೂಪವಾಗಿದ್ದು ನಂಬುವವರೆಲರ್ಲಿಗೆ ರಕ್ಷಣೆ ಉಂಟುಮಾಡುವಂಥದ್ದಾಗಿದೆ.”—ರೋಮಾಪುರ 1:15, 16.
1. ಸಾಧಾರಣವಾಗಿ ಸುವಾರ್ತೆಯನ್ನು ಹೇಗೆ ಅಂಗೀಕರಿಸಲಾಗುತ್ತದೆ, ಆದರೆ ಲೋಕದ ನಂಬಿಕೆಯಿಲ್ಲದ ಜನರು ಸುವಾರ್ತೆಯನ್ನು ಹೇಗೆ ವೀಕ್ಷಿಸುತ್ತಾರೆ?
ಒಬ್ಬನಿಗೆ ಸುವಾರ್ತೆಯಾಗಿ ಕಾಣುವ ವಸ್ತು ಇನ್ನೊಬ್ಬನಿಗೆ ಹಾಗೆ ಕಾಣಲಿಕ್ಕಿಲ್ಲ. ಸಾಧಾರಣವಾಗಿ, ಸುವಾರ್ತಾವಾಹಕನಿಗೆ ಹೃತ್ಪೂರ್ವಕವಾದ ಸ್ವಾಗತ ದೊರೆತು ಅವನ ವಾರ್ತೆಗೆ ಆತುರದಿಂದ ಕಿವಿಗೊಡಲಾಗುತ್ತದೆ. ಆದರೂ, ಈ ಲೋಕದ ನಂಬಿಕೆಯಿಲ್ಲದ ಜನರು ದೇವರ ರಾಜ್ಯದ ಸುವಾರ್ತೆ ಮತ್ತು ಅದರ ರಕ್ಷಣಾ ಸಂದೇಶ ಆನಂದದಾಯಕವಾದದ್ದೆಂದು ವೀಕ್ಷಿಸರು ಎಂದು ಬೈಬಲ್ ಮುಂತಿಳಿಸಿದೆ.—2 ಕೊರಿಂಥ 2:15, 16 ಹೋಲಿಸಿ.
2. ತಾನು ಸಾರಿದ ಸುವಾರ್ತೆಯ ವಿಷಯ ಅಪೋಸ್ತಲ ಪೌಲನೇನಂದನು ಮತ್ತು ಅವನು ಸಾರಿದ ಸುವಾರ್ತೆಯು ಇಂದು ಇನ್ನೂ ಸುವಾರ್ತೆಯಾಗಿದೆಯೇಕೆ?
2. ಸುಸಮಾಚಾರವನ್ನು ಸಾರ್ವಜನಿಕರಿಗೆ ತಿಳಿಸಲು ಕಳುಹಿಸಲ್ಪಟ್ಟವರಲ್ಲಿ ಒಬ್ಬನು ಅಪೋಸ್ತಲ ಪೌಲನು. ಅವನಿಗೆ ಸಿಕ್ಕಿದ ಆದೇಶದ ಕುರಿತು ಅವನಿಗೆ ಹೇಗೆನಿಸಿತು? ಅವನಂದದ್ದು: “ಸುವಾರ್ತೆಯನ್ನು ಸಾರುವುದಕ್ಕೆ ನಾನಂತೂ ಸಿದ್ಧನಾಗಿದ್ದೇನೆ. ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೊಳ್ಳುವವನಲ್ಲ.” (ರೋಮಾಪುರ 1:15) ರೋಮಿನ ಕ್ರೈಸ್ತರಿಗೆ ಅಪೋಸ್ತಲ ಪೌಲನು ಬರೆದು ಸುಮಾರು 2000 ವರ್ಷಗಳಾದ ಬಳಿಕ, ಈ ದಿನವೂ ಆ ವಾರ್ತೆ ಸುವಾರ್ತೆಯಾಗಿರಬೇಕಾದರೆ ಅದು ನಿಜವಾಗಿಯೂ ದೀರ್ಘಕಾಲ ಬಾಳುವ ಸುಸಮಾಚಾರವಾಗಿರಬೇಕು. ವಾಸ್ತವದಲ್ಲಿ ಇದು “ನಿತ್ಯವಾದ ಶುಭವರ್ತಮಾನ” ವೇ ಆಗಿದೆ.—ಪ್ರಕಟನೆ 14:6.
3, 4. ತಾನು ಸುವಾರ್ತೆಯ ವಿಷಯ ನಾಚಿಕೊಳ್ಳಲ್ಲಿಲ್ಲವೆಂದು ಅಪೋಸ್ತಲ ಪೌಲನು ಹೇಳಿದ್ದೇಕೆ?
3. ತಾನು ಸುವಾರ್ತೆಯ ವಿಷಯವಾಗಿ ನಾಚಿಕೆ ಪಡುವದಿಲ್ಲವೆಂದು ಅಪೋಸ್ತಲ ಪೌಲನು ಹೇಳಿದ್ದೇಕೆ? ಅದಕ್ಕೆ ಅವನು ಹೇಗೆ ನಾಚಿಕೊಳ್ಳ ಸಾಧ್ಯವಿತ್ತು? ಏಕೆಂದರೆ ಅದು ಜನಪ್ರಿಯ ಸುವಾರ್ತೆಯಾಗಿರಲಿಲ್ಲ. ನೀಚಪಾತಕಿಯಂತೆ ಶೂಲಕ್ಕೆ ಜಡಿಯಲ್ಪಟ್ಟ ಒಬ್ಬನಿಗೆ, ಬಾಹ್ಯ ತೋರಿಕೆಗೆ ಪರಮನೀಚನಂತೆ ಕಂಡುಬಂದ ಒಬ್ಬ ಪುರುಷನಿಗೆ ಸಂಬಂಧಪಟ್ಟ ಸುವಾರ್ತೆಯು ಅದಾಗಿತ್ತು. ಈ ಪುರುಷನಾದರೋ ಮೂರೂವರೆ ವರ್ಪಕಾಲ ಆ ಸುವಾರ್ತೆಯೊಂದಿಗೆ ಪಲೆಸ್ತೀನದಲೆಲ್ಲಾ ತಿರುಗಾಡುತ್ತಾ ಯೆಹೂದ್ಯರಿಂದ, ವಿಶೇಷವಾಗಿ ಧಾರ್ಮಿಕ ಮುಖಂಡರಿಂದ ಕಠಿಣ ವಿರೋಧವನ್ನು ಎದುರಿಸಿದ್ದನು. ಮತ್ತು ಈಗ ಆ ತಿರಸ್ಕಾರ ಪಾತ್ರ ವ್ಯಕ್ತಿಯ ನಾಮಧರಿಸಿದವನಾದ ಪೌಲನೂ ಅದೇ ರೀತಿಯ ವಿರೋಧವನ್ನು ಎದುರಿಸಿದನು.—ಮತ್ತಾಯ 9:35; ಯೋಹಾನ 11:46-48, 53; ಅಪೋಸ್ತಲರ ಕೃತ್ಯ 9:15, 20, 23.
4. ಇಂಥ ವಿರೋಧದ ಕಾರಣ, ಪೌಲನನ್ನೂ ಯೇಸು ಕ್ರಿಸ್ತನ ಇತರ ಶಿಷ್ಯರನ್ನೂ ಜನರು, ಅವರಲ್ಲಿ ನಾಚಿಕೆಗೊಳಗಾಗುವ ಏನೋ ವಿಷಯವಿದೆ ಎಂಬಂತೆ ವೀಕ್ಷಿಸಿದಿರ್ದಬಹುದು. ಹೌದು, ಪೌಲನು ಹಿಂದೆ ತಾನೇ ಲಜ್ಜಾಸ್ಪದವೆಂದು ತಿಳಿದಿದ್ದ ವಿಷಯಕ್ಕೆ ಈಗ ಅಂಟಿಕೊಂಡಿದ್ದನು. ಯೇಸು ಕ್ರಿಸ್ತನ ಹಿಂಬಾಲಕರನ್ನು ನಿಂದಿಸುವುದರಲ್ಲಿ ಅವನೇ ಸ್ವತಾ: ಭಾಗವಹಿಸಿದ್ದನು. (ಅಪೋ 26:9-11) ಆದರೆ ಈಗ ಅವನು ಆ ಮಾರ್ಗವನ್ನು ತ್ಯಜಿಸಿದ್ದನು. ಇದರ ಪರಿಣಾಮವಾಗಿ ಅವನು ಮತ್ತು ಕ್ರೈಸ್ತರಾದ ಇತರರು ಬಿರುಸಾದ ಹಿಂಸೆಯನ್ನು ಅನುಭವಿಸಿದರು.—ಅಪೋಸ್ತಲರ ಕೃತ್ಯ 11:26.
5. ಸುವಾರ್ತೆಯ ವಿಷಯ ನಾಚಿಕೊಳ್ಳದ ತನ್ನ ಹೇಳಿಕೆಯನ್ನು ಪೌಲನು ವಿವರಿಸಿದ್ದು ಹೇಗೆ?
5. ಒಬ್ಬ ವ್ಯಕ್ತಿ ತಾನು ಯೇಸು ಕ್ರಿಸ್ತನ ಅನುಯಾಯಿಯೆಂದು ನಾಚಿಕೆ ಪಟ್ಟುಕೊಳ್ಳುವುದಾದರೆ ಅದು ಮಾನವ ವೀಕ್ಷಣವಾಗಿರುವುದು. ಅಪೋಸ್ತಲ ಪೌಲನು ಹಾಗಿರಲ್ಲಿಲ್ಲ. ತಾನು ಸಾರಿದ ಸುವಾರ್ತೆಯ ವಿಷಯ ತಾನೇಕೆ ನಾಚಿಕೊಳ್ಳುವುದಿಲ್ಲವೆಂದು ವಿವರಿಸುತ್ತಾ ಅವನಂದದ್ದು: “ಆ ಸುವಾರ್ತೆ ದೇವರ ಬಲಸ್ವರೂಪವಾಗಿದ್ದು ನಂಬುವವರೆಲರ್ಲಿಗೆ ರಕ್ಷಣೆ ಉಂಟುಮಾಡುವಂಥದ್ದಾಗಿದೆ.” (ರೋಮಾಪುರ 1:16) ದೇವರ ಬಲ ಯೇಸುವಿನ ಶಿಷ್ಯನೊಬ್ಬನ ಮೂಲಕ, ಯೇಸು ಕ್ರಿಸ್ತನು ತಾನೇ ಯಾರ ಆರಾಧಕನೂ ಸ್ತುತಿಗಾರನೂ ಆಗಿದ್ದನೋ ಆ ಮಹಿಮಾಭರಿತ ದೇವರ ಸ್ತುತ್ಯಾರ್ಹ ಉದ್ದೇಶದ ನೆರವೇರಿಕೆಗಾಗಿ ಕಾರ್ಯನಡಿಸುವಾಗ ಲಜ್ಜಾಸ್ಪದವಲ್ಲ.—1 ಕೊರಿಂಥ 1:18; 9:22, 23.
ಸುವಾರ್ತೆ ಲೋಕದಾದ್ಯಂತ ಘೋಷಿಸಲ್ಪಡುತ್ತದೆ
6, 7. (ಎ)ಸುವಾರ್ತೆಯ ವಿಷಯ ಇರುವ ಯಾವ ಜವಾಬ್ದಾರಿಕೆಗನುಸಾರ ಯೆಹೋವನ ಸಾಕ್ಷಿಗಳು ಬದುಕಲು ಪ್ರಯತ್ನಿಸುತ್ತಾರೆ ಮತ್ತು ಪರಿಣಾಮವೇನು? (ಬಿ) ಸಾಕ್ಷಿಕೊಡುವ ವಿಷಯದಲ್ಲಿ ಭಯದಿಂದ ನಾವು ಹಿಂಜರಿಯುವಂತೆ ಎಂದಿಗೂ ಬಯಸುವದಿಲ್ಲವಾದರೂ ಹಲವು ಸಲ ಯಾವುದರ ಅವಶ್ಯವಿದ್ದೀತು? (ಪಾದಟಿಪ್ಪಣಿ ನೋಡಿ)
6. ಪೌಲನಂತೆಯೇ ಇಂದಿನ ಯೆಹೋವನ ಸಾಕ್ಷಿಗಳೂ ದೇವರ ಮಹಿಮಾಭರಿತ ಪುತ್ರ ಯೇಸು ಕ್ರಿಸ್ತನ ಶಿಷ್ಯರು. ಈ ತನ್ನ ಸಾಕ್ಷಿಗಳಿಗೆ ಯೆಹೋವನು “ಮಹಿಮೆಯನ್ನು ಪ್ರದರ್ಶಿಸುವ ಸುವಾರ್ತೆಯ” ನಿಧಿಯನ್ನು ಒಪ್ಪಿಸಿದ್ದಾನೆ. (1 ತಿಮೋಥಿ 1:11) ಯೆಹೋವನ ಸಾಕ್ಷಿಗಳು ಈ ಭಾರವಾದ ಜವಾಬ್ದಾರಿಕೆಗನುಸಾರವಾಗಿ ಬದುಕುವುದರಲ್ಲಿ ವಿಫಲಗೊಂಡಿರುವುದಿಲ್ಲ. ಅದಕ್ಕೆ ನಾಚಿಕೆಗೊಳ್ಳದಂತೆ ಅವರು ಪ್ರೋತ್ಸಾಹಿಸಲ್ಪಡುತ್ತಾರೆ. (2 ತಿಮೋಥಿ 1:8) ಸಾಕ್ಷಿ ನೀಡುವುದರಲ್ಲಿ ಮತ್ತು ತಮ್ಮನ್ನು ಯೆಹೋವನ ಸಾಕ್ಷಿಗಳೆಂದು ಗುರುತಿಸಿಕೊಳ್ಳುವುದರಲ್ಲಿ ಭಯ ಅಥವಾ ಅಂಜುಬುರುಕುತನದಿಂದ ಹಿಂಜರಿಯದೆ ಇರುವುದು ಪ್ರಾಮುಖ್ಯ.a
7. ಇಂಥ ಧೈರ್ಯದ ಮತ್ತು ಭಯರಹಿತ ಸಾಕ್ಷಿಯ ಕಾರಣ ಸರ್ವೋನ್ನತ ದೇವರ ನಾಮ ಮತ್ತು ಆತನ ರಾಜ್ಯದ ಸುವರ್ತಮಾನ ಲೋಕವ್ಯಾಪಕವಾಗಿ ಘೋಷಿಸಲ್ಪಡುವಂತಾಗಿದೆ. ದೇವಪುತ್ರನು ಹೇಳಿದ್ದು: “ಪರಲೋಕ ರಾಜ್ಯದ ಈ ಸುವಾರ್ತೆ ಸರ್ವ ಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವುದು; ಆಗ ಅಂತ್ಯವು ಬರುವುದು.” (ಮತ್ತಾಯ 24:14) ಈ ಸುವಾರ್ತೆ 210ಕ್ಕೂ ಹೆಚ್ಚು ದೇಶಗಳಲ್ಲಿ ಸಾರಲ್ಪಟ್ಟಿರುವುದಾದರೂ ಈ ಸಾರುವ ಕೆಲಸದ ಅಂತ್ಯವನ್ನು ಇನ್ನೂ ತಲಪಿರುವುದಿಲ್ಲ. ಹೀಗೆ, ಸುವಾರ್ತೆಯ ವಿಷಯ ನಾಚಿಕೊಳ್ಳದೆ ಮತ್ತು ಭವಿಷ್ಯವನ್ನು ಧೈರ್ಯದಿಂದ ಎದುರಿಸುತ್ತಾ ನಾವು ಯೇಸು ಕ್ರಿಸ್ತನ ಆದಿಶಿಷ್ಯರು ಪ್ರಾರ್ಥಿಸಿದಂತೆ, “ಯೆಹೋವನೇ, ನಿನ್ನ ದಾಸರು ನಿನ್ನ ವಾಕ್ಯವನ್ನು ಧೈರ್ಯದಿಂದ ಹೇಳುವ ಹಾಗೆ ಅನುಗ್ರಹಿಸು” ಎಂದು ಪ್ರಾರ್ಥಿಸುತ್ತೇವೆ.—ಅಪೋಸ್ತಲರ ಕೃತ್ಯ 4:29.
8. ಭೂಮಿಯ ಎಲ್ಲಾ ಜನಾಂಗಗಳಿಂದ ಬರುವ ವಿರೋಧದಿಂದಾಗಿ ಯೆಹೋವನ ಸಾಕ್ಷಿಗಳು ಯಾಕೆ ನಿರುತ್ತೇಜಿತರಾಗಬಾರದು?
8. ಯೆಹೋವನ ಸಾಕ್ಷಿಗಳು ಭೂಮಿಯ ಸರ್ವ ಜನಾಂಗಗಳಲ್ಲಿ ದೇಶ್ವಿಸಲ್ಪಟ್ಟು ವಿರೋಧಿಸಲ್ಪಡುತ್ತಿದ್ದಾರೆಂಬದು ನಿಜವಾದರೂ ಇದು, ಜೀವಸ್ವರೂಪನಾದ ಸತ್ಯ ದೇವರ ನಿಜ ಆರಾಧಕರನ್ನು ಮುಂತಿಳಿಸಲ್ಪಟ್ಟ ಚಿಹ್ನೆಯ ನೆರವೇರಿಕೆಯಾಗಿದೆ. (ಯೋಹಾನ 15:20, 21; 2 ತಿಮೋಥಿ 3:12) ಹೀಗೆ ಇದರಿಂದ ನಿರುತ್ಸಾಹಿಗಳೂ ಎದೆಗುಂದಿದವರೂ ಆಗುವ ಬದಲಿಗೆ, ಸುವಾರ್ತಾ ಘೋಷಕರಿಗೆ ಅವರು ದೈವಿಕ ಒಪ್ಪಿಗೆ ಪಡೆದವರೂ ವಿಶ್ವ ಸಾರ್ವಭೌಮ ಯೆಹೋವನ ಮನ್ನಣೆ ಪಡೆದಿರುವ ಸಂಘಟನೆಗೆ ಸೇರಿದವರೂ ಆಗಿದ್ದಾರೆಂಬ ಆಶ್ವಾಸನೆ ಇದೆ.
9. ಇಡೀ ಲೋಕ ನಮ್ಮ ವಿರುದ್ಧ ನಿಂತರೂ ಅದೇನೂ ದೊಡ್ಡದಲ್ಲವೇಕೆ?
9. ಇದನ್ನು ಎಂದಿಗೂ ಮರೆಯದಿರ್ರಿ: ನಮಗೆ ವಿಶ್ವವೆಲ್ಲಾದರ ಸರ್ವೋನ್ನತ ದೇವರ ಬೆಂಬಲವಿದೆ. ಹೀಗಿರುವುದರಿಂದ ಧರ್ಮಪಂಗಡಗಳೂ ರಾಜಕೀಯ ಪಕ್ಷಗಳೂ ಇರುವ ಈ ಲೋಕ ನಮ್ಮನ್ನು ವಿರೋಧಿಸುವುದಾದರೆ ನಮಗೇನು? ದೇವರ ಏಕಜಾತ ಪುತ್ರನನ್ನೂ ಇಡೀ ಲೋಕ ವಿರೋಧಿಸಿತ್ತು ಮತ್ತು ತದ್ರೀತಿಯ ಪರಿಸ್ಥಿತಿಯಲ್ಲಿ ನಾವು ಸಹಾ ಇರಲು ನಾಚಿಕೊಳ್ಳುವುದಿಲ್ಲ. ಅವನು ತನ್ನ ಅಪೋಸ್ತಲರಿಗೆ ಹೇಳಿದ್ದು: “ಲೋಕವು ನಿಮ್ಮ ಮೇಲೆ ದ್ವೇಷ ಮಾಡುವುದಾದರೆ ಅದು ಮೊದಲು ನನ್ನ ಮೇಲೆ ದ್ವೇಷ ಮಾಡಿತೆಂದು ತಿಳುಕೊಳ್ಳಿರಿ. ನೀವು ಲೋಕದ ಕಡೆಯವರಾಗಿದ್ದರೆ ಲೋಕವು ನಿಮ್ಮ ಮೇಲೆ ತನ್ನವರೆಂದು ಮಮತೆ ಇಡುತ್ತಿತ್ತು. ಆದರೆ ನೀವು ಲೋಕದ ಕಡೆಯವರಲ್ಲದೆ ಇರುವುದರಿಂದಲೂ ನಾನು ನಿಮ್ಮನ್ನು ಲೋಕದೊಳಗಿಂದ ಆರಿಸಿ ತೆಗೆದುಕೊಂಡಿರುವುದರಿಂದಲೂ ಲೋಕವು ನಿಮ್ಮ ಮೇಲೆ ದ್ವೇಷಮಾಡುತ್ತದೆ.”—ಯೋಹಾನ 15:18, 19.
10. ಸಾಕ್ಷಿಗಳಿಗೆ ಹಿಂಸೆ ಯಾವ ಮೂಲದಿಂದ ಬಂದಿದೆ ಮತ್ತು ಅವರು ಅದಕ್ಕೆ ಏಕೆ ನಾಚಿಕೊಳ್ಳುವುದಿಲ್ಲ?
10. ಹೀಗೆ, ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾಗಿ ಮತ್ತು ಹೆಚ್ಚು ಪ್ರಾಮುಖ್ಯವಾಗಿ, ಕ್ರೈಸ್ತ ಪ್ರಪಂಚದ ರಾಷ್ಟ್ರಗಳಲ್ಲಿ ಹಿಂಸೆ ಸಹಿಸಿಕೊಂಡಿರುತ್ತಾರೆ. ಕ್ರೈಸ್ತ ಪ್ರಪಂಚದಿಂದ ಬರುವ ಹಿಂಸೆ ಸಾಕ್ಷಿಗಳನ್ನು ಕ್ರೈಸ್ತೇತರರೆಂದು ರುಜುಪಡಿಸುವುದಿಲ್ಲ. ಬದಲಿಗೆ, ನಾವು ನಿಜ ಕ್ರೈಸ್ತರು, ಯೇಸು ಕ್ರಿಸ್ತನ ದೇವರೂ ತಂದೆಯೂ ಆದ ಯೆಹೋವನ ಸಾಕ್ಷಿಗಳೆಂಬ ಅವರ ಹೇಳಿಕೆಗೆ ಅದು ಬೆಂಬಲ ನೀಡುತ್ತದೆ. ಅವರು ಹೀಗೆ ದೇವರ ಸಾಕ್ಷಿಗಳಾಗಿರುವುದರಿಂದಲೇ ಧಾರ್ಮಿಕ ಕಾರಣಗಳಿಂದಾಗಿ ಹಿಂಸೆಯನ್ನು ಅನುಭವಿಸುವಾಗ ನಾಚಿಕೊಳ್ಳುವುದಿಲ್ಲ, ಈ ಕಾರಣದಿಂದ ಅಪೋಸ್ತಲ ಪೌಲನು ಒಂದನೆಯ ಶತಕದ ಕ್ರೈಸ್ತರಿಗೆ ಕೊಟ್ಟ ನಾಚಿಕೊಳ್ಳಬಾರದೆಂಬ ಸಲಹೆ ಈಗ ಯೋಗ್ಯವಾಗಿಯೇ ಯೆಹೋವನ ಸಾಕ್ಷಿಗಳಿಗೆ ಅನ್ವಯಿಸುತ್ತದೆ.—ಫಿಲಿಪ್ಪಿ 1:27-29 ನೋಡಿ.
ಘೋಷಿಸಲ್ಪಡಶಕ್ತವಾದ ಅತ್ಯುತ್ತಮ ವಾರ್ತೆ
11. ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ತೆಗೆದುಕೊಂಡ ಕಾರಣದಿಂದ ನಾವು ಯೇಸುವಿನ ಹಿಂಬಾಲಕರಾಗುವುದು ನಿಂತುಹೋಗುವುದಿಲ್ಲವೇಕೆ?
11. ಯೆಶಾಯ 43:10 ರಲ್ಲಿ ಯೆಹೋವನು ತನ್ನ ಒಡಂಬಡಿಕೆಯ ಜನರಿಗೆ ಕೊಟ್ಟ ವಾಗ್ದಾನದ ನೆರವೇರಿಕೆಯಾಗಿ ಯೆಹೋವನ ಸಾಕ್ಷಿಗಳು ಧೈರ್ಯದಿಂದ ತಮ್ಮ ಹೆಸರನ್ನು ಅಂಗೀಕರಿಸಿದ್ದಾರೆ. ಆದರೆ, ಅವರು ಇನ್ನು ಮುಂದೆ ಯೇಸು ಕ್ರಿಸ್ತನನ್ನು ಹಿಂಬಾಲಿಸುವುದಿಲ್ಲ ಎಂದು ಇದರರ್ಥವಲ್ಲ. ಯೇಸು ಅವರ ನಾಯಕನು, ಅವರು ಅನುಸರಿಸುವ ಮಾದರಿ. ಅವನು ತಾನೇ ಯೆಹೋವನ ಸಾಕ್ಷಿಗಳಲ್ಲೊಬ್ಬನು. ವಾಸ್ತವವಾಗಿ, ಯೆಹೋವನ ಮುಖ್ಯ ಸಾಕ್ಷಿ ಆತನೇ.—1 ತಿಮೋಥಿ 6:13; ಪ್ರಕಟನೆ 1:5.
12. ಯೆಹೋವನ ಸಾಕ್ಷಿಗಳು ಲೋಕದಾದ್ಯಂತ ಯಾವ ವಿಧದ ವಾರ್ತೆ ಸಾರುತ್ತಾರೆ, ಮತ್ತು ಏಕೆ?
12. ಈ ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾಗಿ ಸಾರುವ ಸಂದೇಶ ಸಾರಲ್ಪಡಶಕ್ತವಾದ ಅತ್ಯುತ್ತಮ ಸುವಾರ್ತೆಯು. ಇನ್ನಾವ ಸರಕಾರವೂ ಯೆಹೋವನು ಯಾರನ್ನು ರಕ್ಷಿಸಲು ತನ್ನ ಏಕಜಾತ ಪುತ್ರನನ್ನು ಕಳುಹಿಸಿದನೋ ಆ ಮಾನವ ಲೋಕದಮೇಲೆ ಆಳಲು ಸ್ಥಾಪಿಸಿರುವ ಮೆಸ್ಸೀಯನ ರಾಜ್ಯಕ್ಕಿಂತ ಉತ್ತಮವಾಗಿರದು. (ಯೆಶಾಯ 9:6, 7) ರಾಜ್ಯದ ಸುವಾರ್ತೆ ಸಾರಲ್ಪಡಲಾಗುತ್ತಿರುವ ಭೂನಿವಾಸಿಗಳಿಗೆ ಅದನ್ನು ಸ್ವೀಕರಿಸಿ, ಪ್ರಮೋದವನದಲ್ಲಿ ಮಾನವ ಪರಿಪೂರ್ಣತೆಯಲ್ಲಿ ನಿತ್ಯಜೀವದ ಬಹುಮಾನಕ್ಕೆ ತಾವು ಅರ್ಹರು ಎಂದು ರುಜುಪಡಿಸುವ ಸುಯೋಗ ನೀಡಲಾಗುತ್ತದೆ.
13. ಮೆಸ್ಸೀಯನ ರಾಜ್ಯ ಸರಕಾರ ಅತ್ಯುತ್ತಮ ಸರಕಾರವೆಂದು ನಮಗೆ ಏಕೆ ನಿಶ್ಚಯವಿದೆ, ಲಜ್ಜಾರಹಿತರಾಗಿ ಸಾಕ್ಷಿಗಳು ಯಾವುದನ್ನು ಶಿಫಾರಸು ಮಾಡುತ್ತಾರೆ?
13. ತನ್ನ ಪ್ರಜೆಗಳಾಗುವವರನ್ನು ರಕ್ಷಿಸಲಿಕ್ಕಾಗಿ ಯೇಸು ಕ್ರೂರ ಮರಣವನ್ನು ಅನುಭವಿಸಲು ಇಷ್ಟಪಟ್ಟನಾದರೆ ಅವನು ನಿಶ್ಚಯವಾಗಿಯೂ ಅತಿ ಉತ್ತಮವಾದ ಸರಕಾರವನ್ನೇ ಅವರಿಗೆ ಕೊಡುವನೆಂಬದು ಖಂಡಿತ. ಆದ್ದರಿಂದ ಭೂಮಿಯ ಪ್ರತಿಯೊಬ್ಬ ಮಾನವ ಜೀವಿಗೆ ನಮ್ಮ ಶಿಫಾರಸು ಹೀಗಿದೆ: ಆ ಸರಕಾರದ ನಂಬಿಗಸ್ತ ಮತು ವಿಧೇಯ ಪ್ರಜೆಯಾಗಿರಿ. ನಾವು ಯಾವುದನ್ನು ಸರ್ವ ಮಾನವ ಜಾತಿಗೆ ಯಥಾರ್ಥಭಾವದಿಂದ ಶಿಫಾರಸು ಮಾಡುತ್ತೇವೂ ಆ ಸರಕಾರದ ವಿಷಯ ನಾವು ನಾಚಿಕೊಳ್ಳುವುದಿಲ್ಲ. ನಮ್ಮ ಮೇಲೆ ಹಿಂಸೆ ಬಂದರೂ ನಾವು ಆ ರಾಜ್ಯವನ್ನು ಸಾರುವುದರಿಂದ ಹಿಂಜರಿಯುವುದಿಲ್ಲ. ಅಪೋಸ್ತಲ ಪೌಲನಂತೆ ನಮ್ಮಲ್ಲಿ ಪ್ರತಿಯೊಬ್ಬನೂ, “ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೊಳ್ಳುವವನಲ್ಲ” ಎಂದು ಹೇಳುತ್ತೇವೆ.
14. ಯೇಸುವಿಗನುಸಾರ, ನಮ್ಮ ದಿನದಲ್ಲಿ ರಾಜ್ಯದ ಸಾರುವಿಕೆಯು ಎಷ್ಟು ವ್ಯಾಪಕವಾಗಿರುವುದು?
14. ರಾಜ್ಯ ಸುವಾರ್ತೆಯ ಸಾರೋಣವು ಲೋಕವ್ಯಾಪಕ ಗಾತ್ರದಲ್ಲಿರುವುದು ಎಂದು ಯೇಸು ಮುಂತಿಳಿಸಿದ್ದನು ಮತ್ತು ಈ ವಿಸ್ತಾರವಾದ ವ್ಯಾಪಕ ಪ್ರವಾದನೆ ಇಂತಹ ಸಂದೇಶಕ್ಕೆ ತಕ್ಕದಾಗಿತ್ತು. (ಮಾರ್ಕ13:10) ಯೆಹೋವನ ರಾಜ್ಯದ ಸಾರುವಿಕೆ ಅತ್ಯಂತ ದೂರ ವಿಸ್ತರಿಸುವುದು, ಹೌದು, ಭೂಮಿಯ ಕಟ್ಟಕಡೆಯ ವರೆಗೆ ಹೋಗುವುದೆಂದು ಮುಂತಿಳಿಸಲು ಅವನು ಹಿಂಜರಿಯಲಿಲ್ಲ. (ಅಪೋ. 1:8) ಜನರಿರುವಲ್ಲೆಲ್ಲಾ ತನ್ನ ನಂಬಿಗಸ್ತ ಹಿಂಬಾಲಕರು ಅವರನ್ನು ರಾಜ್ಯ ಸುವಾರ್ತೆಯಿಂದ ತಲಪಲು ಯಥಾರ್ಥ ಪ್ರಯತ್ನ ಮಾಡುವರೆಂದು ಯೇಸು ತಿಳಿದಿದ್ದನು.
15, 16. (ಎ) ಸುವಾರ್ತೆಯ ಮೂಲಕ ಮುಟ್ಟಲು ಯಾರು ಅರ್ಹರು? (ಬಿ) ಪಿಶಾಚನ ಸಂಸ್ಥೆಯಿಂದ ಬರುವ ಹಿಂಸೆಯ ಎದುರಲ್ಲೂ ಸಾರುವ ಕೆಲಸ ನೆರವೇರುವುದೇಕೆ?
15. ಇಂದು ಭೂನಿವಾಸಿಗಳ ಸಂಖ್ಯೆ ನೂರಾರು ಕೋಟಿಗಳಿಗೇರಿದೆ. ಅವರು ಎಲ್ಲಾ ಭೂಖಂಡಗಳಲ್ಲಿ ಮತ್ತು ಸಾಗರದ ದೊಡ್ಡ ದೊಡ್ಡ ದ್ವೀಪಗಳಲ್ಲಿ ವಾಸಿಸುತ್ತಾರೆ. ಆದರೂ ನಿವಾಸಿತ ಭೂಮಿಯ ಯಾವ ಭಾಗವೂ ಯೆಹೋವನ ಸಾಕ್ಷಿಗಳಿಗೆ ಅದನ್ನು ತಲಪಲು ಪ್ರಯತ್ನಿಸಲಾಗದಷ್ಟು ತೀರಾ ದೂರವಾಗಿರುವುದಿಲ್ಲ. ನಿವಾಸಿತ ಭೂಮಿಯೆಲ್ಲಾ ಯೆಹೋವನ ಸಾಂಕೇತಿಕ ಪಾದಪೀಠವಾಗಿದೆ. (ಯೆಶಾಯ 66:1) ಆತನ ಪಾದಪೀಠದ ಯಾವ ಮೂಲೆಯಲ್ಲಿರುವ ಮಾನವ ಜೀವಿಯೂ ರಕ್ಷಣಾ ಸಂದೇಶದಿಂದ ತಲಪಲ್ಪಡಲು ಅರ್ಹನು.
16. ಇಂದಿನ ಸುವಾರ್ತೆ, ಆಗಲೇ ಮೆಸ್ಸೀಯನ ಅಧಿಕಾರದ ಕೆಳಗೆ ಸ್ಥಾಪಿತವಾಗಿರುವ ರಾಜಯೋಗ್ಯ ಸರಕಾರದ ಸಂತೋಷದ ವಾರ್ತೆಯಾಗಿದೆ. ಪಿಶಾಚನ ಸಂಸ್ಥೆಯಿಂದ ಅತ್ಯಂತ ಹಿಂಸೆಯ ಎದುರಲ್ಲೂ ವಾಸ್ತವಿಕವಾದ “ರಾಜ್ಯದ ಈ ಸುವಾರ್ತೆ” ಯನ್ನು “ಸರ್ವಲೋಕದಲ್ಲಿ” ಸಾರುವದರಲ್ಲಿ ಪರಮಾವಧಿಯ ತನಕ ಹೋಗುವುದರಲ್ಲಿ ದೇವರಾತ್ಮವು ಮೆಸ್ಸೀಯನ ಅನುಯಾಯಿಗಳನ್ನು ಪ್ರಚೋದಿಸುವದೆಂದು ಯೇಸು ಮುಂತಿಳಿಸಿದ್ದನು.—ಮತ್ತಾಯ 24:14.
ಯೇಸುಕ್ರಿಸ್ತ ಮತ್ತು ಯೆಹೋವರ ವಿಷಯ ನಾಚದಿರುವುದು
17. (ಎ) ಸತ್ಯಾರಾಧಕರು ಯಾವುದರ ವಿಷಯವಾಗಿ ನಾಚಿಕೊಳ್ಳುವುದಿಲ್ಲ? (ಬಿ) ಮಾರ್ಕ 8:38 ರಲ್ಲಿ ಯಾವ ನಿಯಮವನ್ನು ಯೇಸು ಇಟ್ಟನು, ಮತ್ತು ಅದರ ವಿಶೇಷತೆ ಏನು?
17. ಸರ್ವೋನ್ನತ ದೇವರು ತನಗೊಂದು ನಾಮವನ್ನು ಕೊಟ್ಟುಕೊಳ್ಳಲು ಅನಿಚ್ಛಿತನಾಗಿರಲಿಲ್ಲ. ಆತನ ನಂಬಿಗಸ್ತ ಆರಾಧಕರೂ ಆ ಹೆಸರಿನ ವಿಷಯ ನಾಚಿಕೊಳ್ಳಬಾರದು. ನಿಜ ಆರಾಧಕರು ತಾವು ದೇವರಿಗೆ ಅವಿಭಾಗಿತ ಆರಾಧನೆ ಮತ್ತು ವಿಧೇಯತೆ ತೋರಿಸುವರೆಂದು ಪ್ರಸಿದ್ಧರಾಗಿ ಗುರುತಿಸಲ್ಪಡಲು ಸಂತೋಷಪಡುತ್ತಾರೆ. ತನ್ನ ವಿಷಯದಲ್ಲಿ ಯೇಸು ಮಾರ್ಕ 8:38 ರಲ್ಲಿ ಒಂದು ನಿಯಮ ಅಥವಾ ಸೂತ್ರವನ್ನಿಟ್ಟನು: “ವ್ಯಭಿಚಾರಿಣಿಯಂತಿರುವ ಈ ಪಾಪಿಷ್ಟ ಸಂತತಿಯಲ್ಲಿ ಯಾವನು ನನಗೂ ನನ್ನ ಮಾತುಗಳಿಗೂ ನಾಚಿಕೊಳ್ಳುತ್ತಾನೋ ಅವನಿಗೆ ಮನುಷ್ಯ ಕುಮಾರನು, ತಾನು ತನ್ನ ತಂದೆಯ ಪ್ರಭಾವದೊಡನೆ ಪರಿಶುದ್ಧ ದೇವದೂತರೊಡನೆ ಬರುವಾಗ ನಾಚಿಕೊಳ್ಳುವನು.” ತದ್ರೀತಿ, ಯಾರು ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆದಾತನ ವಿಷಯ ನಾಚಿಕೊಳ್ಳುವನೋ ಅಂಥವನ ವಿಷಯ ಯೆಹೋವನೂ ನಾಚಿಕೊಳ್ಳುವುದು ನ್ಯಾಯಸಮ್ಮತ. ಮತ್ತು ಅಪನಂಬಿಗಸ್ತ ವರ್ತನೆಯಿಂದಾಗಿ ಯೆಹೋವನು ನಾಚಿಕೊಳ್ಳುವಂತೆ ಮಾಡುವ ಯಾವ ಜೀವಿಯೂ ದೇವರ ಇಹಪರ ಕ್ಷೇತ್ರದ ಯಾವ ಭಾಗದಲ್ಲಿಯೂ ಅಸ್ತಿತ್ವವನ್ನು ಅನುಭವಿಸಲು ಯೋಗ್ಯನಲ್ಲ.—ಲೂಕ 9:26.
18. (ಎ) ಮತ್ತಾಯ 10:32, 33 ರ ಯೇಸುವಿನ ಮಾತುಗಳು ನಮ್ಮ ಹೃದಮನಗಳಲ್ಲಿ ಬೇರೂರಬೇಕೇಕೆ? (ಬಿ) ಮನುಷ್ಯ ಭಯದಿಂದಾಗಿ ಯೇಸು ಮತ್ತು ಯೆಹೋವರನ್ನು ನಿರಾಕರಿಸುವವರಿಗೆ ಏನಾಗುವುದು? (ಪಾದಟಿಪ್ಪಣಿಯ ಮೇಲೆ ಆಧರಿಸಿ ಉದಾಹರಣೆ ಕೊಡಿ.)
18. ಯೇಸು ಕ್ರಿಸ್ತನು ಹೇಳಿದ ಈ ಕೆಳಗಿನ ಮಾತುಗಳು ನಮ್ಮ ಹೃದಮನಗಳಲ್ಲಿ ಬೇರೂರಲಿ: “ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನೆಂದು ಒಪ್ಪಿಕೊಳ್ಳುವನೋ ನಾನು ಸಹಾ ಅವನನ್ನು ನನ್ನವನೆಂದು ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ಒಪ್ಪಿಕೊಳ್ಳುವೆನು.” (ಮತ್ತಾಯ 10:32, 33; ಲೂಕ 12:8, 9) ಇದೇ ಆಧಾರದ ಮೇರೆಗೆ ಯಾರು ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆದಾತನನ್ನು ನಿರಾಕರಿಸುತ್ತಾನೋ ಅಂಥವನನ್ನು ದೇವರು ನಿರಾಕರಿಸುವನು. ಯೇಸು ಕ್ರಿಸ್ತನು ಪ್ರಧಾನ ಪುತ್ರನಾಗಿರುವ ಕುಟುಂಬದಲ್ಲಿ ಅಂತವನಿಗೆ ಸದಸ್ಯನಾಗುವ ಅರ್ಹತೆಯಿರದು. ಮತ್ತು ದೇವರ ನೇಮಿತ ಸಮಯದಲ್ಲಿ ಅವನನ್ನು ನಾಶಮಾಡಲಾಗುವುದು.b
19, 20. (ಎ) ಯೆಹೋವನ ನಾಮದ ಪವಿತ್ರೀಕರಣಕ್ಕಾಗಿ ಪ್ರಾರ್ಥಿಸಿದವರಿಗೆ ನಾಚಿಕೊಳ್ಳಲು ಯಾವುದೂ ಇರಲಾರದೇಕೆ? (ಬಿ) ಭಯರಹಿತ ರಾಜ್ಯ ಘೋಷಕರೇನು ಸಾಧಿಸಿದ್ದಾರೆ ಮತ್ತು ಯಾವ ಬೆಂಬಲದಿಂದ?
19. “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂದು ಯೇಸು ತನ್ನ ಶಿಷ್ಯರಿಗೆ ಕಲಿಸಿದ ಪ್ರಾರ್ಥನೆಗೆ ಉತ್ತರ ದೊರೆಯುವದು. (ಮತ್ತಾಯ 6:9. 10) ಅದು ನೆರವೇರುವಾಗ, ಯೇಸುವಿನ ಪ್ರೀತಿಯ ಶಿಷ್ಯರಿಗೆ ನಾಚಿಕೊಳ್ಳುವ ಯಾವ ವಿಷಯವೂ ಇರದು. ಆಗ ಯೆಹೋವನ ನಾಮ, ಇಂದು ಜೀವಿಸುತ್ತಿರುವ ಮತ್ತು ಎಂದಿಗೂ ಸಾಯುವ ಅಗತ್ಯವೇ ಇಲ್ಲದಿರುವ ಲಕ್ಷಾಂತರ ಜನರಿಂದ ಮಾತ್ರವಲ್ಲ, ಯೇಸು ತನ್ನ ಸಹಸ್ರ ವರ್ಷದಾಳಿಕೆಯಲ್ಲಿ ಸಮಾಧಿಗಳಿಂದ ಕರೆಯುವ ಕೋಟ್ಯಾಂತರ ಮಂದಿ ಜನರಿಂದಲೂ ಪೂಜ್ಯವೆಂದೆಣಿಸಲ್ಪಡುವುದು, ಪವಿತ್ರೀಕರಿಸಲ್ಪಡುವುದು. ಅವರಿಗೆ ಭೂಪ್ರಮೋದವನದಲ್ಲಿ ಸದಾ ಜೀವಿಸುವ ಸಂದರ್ಭವಿರುವುದು.
20. ಈ ಭಯರಹಿತ ರಾಜ್ಯ ಸುವಾರ್ತಾ ಘೋಷಕರು ಲೋಕವ್ಯಾಪಕ ವಿರೋಧದ ಮಧ್ಯೆ ನಾಚಿಕೊಳ್ಳದವರಾಗಿ ಭೂವ್ಯಾಪಕ ಸಾಕ್ಷಿಯನ್ನು ಸಾಧಿಸಿದ್ದಾರೆ. ಏಕೆಂದರೆ ಅವರ ಹಿಂದೆ ಅತಿಮಾನುಷ ಶಕ್ತಿ, ಸ್ವರ್ಗೀಯ ದೇವದೂತರ ಬೆಂಬಲವಿದೆ. ಆದುದರಿಂದ ಯೆಹೋವನ ಸಾಕ್ಷಿಗಳು, “ದೇವರಿಗೆ ಭಯಪಟ್ಟು ಆತನನ್ನು ಘನ” ಪಡಿಸುತ್ತಾರೆ.—ಪ್ರಕಟನೆ 14:6, 7.
ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಲು ನಾಚದಿರುವುದು!
21. ಯೆಹೋವನ ಸಾಕ್ಷಿಗಳು ಏನು ಮಾಡಲು ನಾಚಿಕೊಂಡಿರುವುದಿಲ್ಲ, ಮತ್ತು ಪರಿಣಾಮವೇನು?
21. ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿ ಯೆಹೋವನೆಂಬ ಆತನ ವೈಯಕ್ತಿಕ ಹೆಸರನ್ನು ಸಹ ಉಪಯೋಗಿಸುವುದರಲ್ಲಿ ತಮಗೆ ನಾಚಿಕೆಯಿಲ್ಲ ಎಂದು ಯೆಹೋವನ ಸಾಕ್ಷಿಗಳು ರುಜುಮಾಡಿದ್ದಾರೆ. ಇದು ಅವರಿಗೆ ವರ್ಣಿಸಲಸಾಧ್ಯವಾದ ಆಶೀರ್ವಾದಗಳನ್ನು ತಂದಿದೆ. ಸರ್ವೋನ್ನತನಾದ ದೇವರ ವಚನಗಳ ನಂಬಿಗಸ್ತ ನೆರವೇರಿಕೆಯಾಗಿ ಈ ಆಶೀರ್ವಾದಗಳು ಬಂದಿವೆ. ಒಬ್ಬನೇ ಜೀವಸ್ವರೂಪನಾದ ಸತ್ಯದೇವರೂ ವಿಶ್ವ ಪರಮಾಧಿಕಾರಿಯೂ ಆದ ಆತನನ್ನು ಇದು ಎಷ್ಟೊಂದು ನಿರ್ದೋಷೀಕರಿಸಿದೆ!
22. ಯೆಹೋವನ ಸಾಕ್ಷಿಗಳು ಕ್ರೂರ ಹಿಂಸೆಯನ್ನು ಏಕೆ ಎದುರಿಸುವರು, ಆದರೆ ಅವರಿಗೆ ಸಿಗುವ ಸಂತೋಷ ಯಾವುದು?
22. ಮುಂಬರುತ್ತಿರುವ ಭವಿಷ್ಯದಲ್ಲಿ ಲೌಕಿಕ ಸರಕಾರಗಳು ಧಾರ್ಮಿಕ ಪ್ರಭಾವಗಳ ವಿರೋಧವಾಗಿ ಎದ್ದು ಅವೆಲ್ಲವನ್ನು ಕ್ರೈಸ್ತ ಪ್ರಪಂಚ ಸಮೇತ ನಿರ್ಮೂಲಮಾಡುವವು. (ಪ್ರಕಟನೆ 17:16, 17) ಇದರ ಪರಿಣಾಮವಾಗಿ ಲೌಕಿಕ ಶಕಿಗ್ತಳಿಂದ ಬರುವ ಕ್ರೂರವಾದ ಹಿಂಸೆಯ ಸಮಯವನ್ನು ಯೆಹೋವನ ಸಾಕ್ಷಿಗಳು ಎದುರಿಸುವರು. ಅವರೊಂದಿಗೆ ನಿತ್ಯನಾದ ದೇವರು ಇಲ್ಲದೆ ಹೋಗುವಲ್ಲಿ ಅವರು ಇದನ್ನು ತಾಳಿ ಪಾರಾಗ ಶಕ್ತರಲ್ಲ. ಆದರೆ ದೇವರು ಅವರೊಂದಿಗಿದ್ದಾನೆ ಮತ್ತು ಇಂಥ ಕ್ರಿಸ್ತವಿರೋಧಿ, ಯೆಹೋವ ವಿರೋಧಿ ಶತ್ರುಗಳೆಲ್ಲರೂ, ಸಾಕ್ಷಿಗಳು ಓರೆತೊಲಗದೆ ಆರಾಧಿಸುವ ದೇವರಿಂದ ನಿರ್ಮೂಲವಾಗುವದನ್ನು ಕಾಣುವ ಆನಂದವು ಅವರಿಗಿರುವುದು. ಅವರು ನಿಜ ದೇವಪ್ರಭುತ್ವದ ಶತ್ರುಗಳೆಂದು ಲಜ್ಜೆಗೀಡಾಗಿ ತೋರಿಬಂದು ನಾಶವಾಗದೆ, “ಯುಗಯುಗಾಂತರಗಳಲ್ಲಿಯೂ ನೀನೇ ದೇವರು” ಎಂದು ಯೆಹೋವನಿಗೆ ಹಾಡುವ ವರ್ಣಿಸಲಸದಳವಾದ ಸಂತೋಷವನ್ನು ಅನುಭವಿಸುವರು.—ಕೀರ್ತನೆ 90:2.
23. ಯೆಹೋವನ ಸಾಕ್ಷಿಗಳಿಗೆ ನಾಚಿಕೊಳ್ಳುವ ಯಾವ ವಿಷಯವೂ ಇಲ್ಲವೇಕೆ, ಮತ್ತು ಪರಿಣಾಮವೇನಾಗುವುದು?
23. ಯಾರ ಮೂಲಕ ಮಾನವ ಕುಟುಂಬವು ಭೂಪ್ರಮೋದವನದಲ್ಲಿ ಮಾನವ ಪರಿಪೂರ್ಣತೆ ಮತ್ತು ಸಂತೋಷದಲ್ಲಿ ಅನಂತ ಜೀವವನ್ನು ಅನುಭವಿಸಲಿಕ್ಕಾಗಿ ವಿಮೋಚಿಸಲ್ಪಟ್ಟಿರುವುದೋ ಆ ಯೇಸು ಕ್ರಿಸ್ತನ ತಂದೆಯಾದ ದೇವರಲ್ಲಿ ಅವರು ಅತಿಶಯ ಸಂತೋಷವನ್ನು ಪಡೆಯುವರು. ಕ್ರಿಸ್ತ ಯೇಸುವಿನ ಮೂಲಕ ದೇವರಾದ ಯೆಹೋವನು ತನ್ನನ್ನು ಅದೆಷ್ಟು ಬಲಾಡ್ಯನಾಗಿ ತೋರಿಸಿಕೊಂಡಿದ್ದಾನೆ! ತನ್ನ ಸರ್ವಶಕ್ತಿಯನ್ನು ವಿವೇಕ ಮತ್ತು ಪ್ರೀತಿಯಲ್ಲಿ ಉಪಯೋಗಿಸುತ್ತಾ—ದುರುಪಯೋಗಿಸಿ ಅಲ್ಲ— ಯೆಹೋವನು ಎಷ್ಟು ಸುಂದರವಾಗಿ ತನ್ನನ್ನು ಪ್ರದರ್ಶಿಸಿಕೊಂಡಿದ್ದಾನೆ! ಈ ಕಾರಣದಿಂದ ಆತನ ಮತ್ತು ಆತನ ಏಕಜಾತ ಪುತ್ರ ಯೇಸು ಕ್ರಿಸ್ತನ ಸಂಬಂಧದಲ್ಲಿ ನಾಚಿಕೆಪಡತಕ್ಕ ಯಾವ ವಿಷಯವೂ ನಮಗಿಲ್ಲ. ಈ ಮಹಿಮಾಭರಿತ ಸುವಾರ್ತೆಯ ಘೋಷಕರಾಗುವುದರಲ್ಲಿ ನಾವು ನಾಚಿಕೊಳ್ಳುವುದಿಲ್ಲ. “ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ” ಎಂದು ಯಾರು ಹೇಳಿದನೋ ಆ ಯೇಸು ಕ್ರಿಸ್ತನ ಮೂಲಕವಾಗಿ ಯೆಹೋವ ದೇವರ ಸರ್ವವಿಜಯಿ ಶಕ್ತಿಯನ್ನು ಅದು ವಿವರಿಸುತ್ತದೆ. (ಯೋಹಾನ 16:33) ಈ ಪಥವನ್ನು ಅನುಸರಿಸುವಾಗ ನಾವು ಸದಾ ಯಾರು ಸುವಾರ್ತೆಯ ವಿಷಯ ನಾಚಿಕೊಳ್ಳಲ್ಲಿಲ್ಲವೋ ಆ ಅಪೋಸ್ತಲ ಪೌಲನ ಮಾದರಿಯನ್ನು ಅನುಸರಿಸೋಣ. ನಾವು ಹೀಗೆ ಮಾಡಿದರೆ ಸರ್ವಶಕ್ತನಾದ ದೇವರೂ ನಮ್ಮ ವಿಷಯ ನಾಚಿಕೆಪಡನು. (w90 1/1)
[ಅಧ್ಯಯನ ಪ್ರಶ್ನೆಗಳು]
a ನಾವು ಸಾಕ್ಷಿಗಳೆಂದು ಹೇಳಿಕೊಳ್ಳಲು ನಾಚಿಕೊಳ್ಳಬಾರದಾದರೂ, ನಾವು “ಸರ್ಪಗಳಂತೆ ಜಾಣರು” ಆಗಿರಬೇಕಾದ ಸಮಯಗಳಿವೆ. (ಮತ್ತಾಯ 10:16) ನಾಝೀ ಜರ್ಮನಿಯ ಸಾಕ್ಷಿಗಳಿಗೆ, ತಮ್ಮನ್ನು ಗುರುತಿಸಿಕೊಳ್ಳಬೇಕಾದ ಮತ್ತು ಗುರುತು ಹೇಳಬಾರದಾದ ಸಮಯ ತಿಳಿದಿತ್ತು. —ಅಪೋಸ್ತಲರ ಕೃತ್ಯ 9:23-25 ಹೋಲಿಸಿ.
b ಮನುಷ್ಯರ ಭಯದಿಂದಾಗಿ ಯೇಸುವನ್ನೂ ಯೆಹೋವನನ್ನೂ ತ್ಯಜಿಸಿದವರ ಮೇಲೆ ಲೋಕವೂ ಅನುಗ್ರಹ ತೋರಿಸದಿರುವ ವಿಷಯ ಪದೇ ಪದೇ ತೋರಿಬಂದಿದೆ. ಉದಾಹರಣೆಗೆ, 1989 ರ ಮೇ 1, ವಾಚ್ಟವರ್ ಪುಟ 12; 1982 ವರ್ಷಪುಸ್ತಕ, ಪುಟ 168; 1977 ವರ್ಷಪುಸ್ತಕ, ಪುಟ 174-6; 1974 ವರ್ಷಪುಸ್ತಕ, ಪುಟ 149-50, 177-8 ನೋಡಿ. ಇನ್ನೊಂದು ಕಡೆ, ಸುವಾರ್ತೆಯ ದೃಢ ವಿರೋಧಿಗಳು ಸಹ ಸಾಕ್ಷಿಗಳು ಯೇಸು ಮತ್ತು ಯೆಹೋವನನ್ನು ನಿರಾಕರಿಸರು ಎಂದು ನಿರೀಕ್ಷಿಸುತ್ತಾರೆ. (1989 ವರ್ಷಪುಸ್ತಕ, ಪುಟ 116-18) ಮತ್ತಾಯ 10:39 ಮತ್ತು ಲೂಕ 12:4 ಸಹ ನೋಡಿ.
ಸಾರಾಂಶದಲ್ಲಿ ಪ್ರಶ್ನೆಗಳು
◻ ಸುವಾರ್ತೆ ಸಾರುವ ವಿಷಯ ಅಪೋಸ್ತಲ ಪೌಲನಂತೆ ನಮಗೆ ಯಾವ ಮನೋಭಾವವಿರಬೇಕು?
◻ ಯೆಹೋವನ ಸಾಕ್ಷಿಗಳು ಸಾರುವ ಸಂದೇಶ ಸಾರಲ್ಪಟ್ಟಿರುವವುಗಳಲ್ಲಿ ಅತ್ಯುತ್ತಮ ವಾರ್ತೆಯೇಕೆ?
◻ ರಾಜ್ಯವೈಭವದಲ್ಲಿ ಬಂದ ಮೇಲೆ ತನ್ನ ವಿಷಯ ನಾಚಿಕೊಳ್ಳುವ ಯಾವನಿಗೂ ಯೇಸು ಯಾವ ಎಚ್ಚರಿಕೆ ಕೊಟ್ಟನು?
◻ ಯೇಸು ಮತ್ತು ಯೆಹೋವನನ್ನು ನಿರಾಕರಿಸುವವರಿಗೆ ಏನಾಗುತ್ತದೆ?
◻ ಸುವಾರ್ತಾ ಘೋಷಕರು ನಾಚಿಕೊಳ್ಳದೆ ಯಾವುದನ್ನು ಸಾಧಿಸಿದ್ದಾರೆ ಮತ್ತು ಏಕೆ?