ಅದೃಷವ್ಟು ನಿಮ್ಮ ಬಾಳನ್ನು ಆಳಬೇಕೆ?
ಆ ಪಟ್ಟಿಯಲ್ಲಿ ಅದೃಷ್ಟ ವಾದದಲ್ಲಿ ನಂಬದ ಒಬ್ಬನೇ ವ್ಯಕ್ತಿ ಯೇಸು ಕ್ರಿಸ್ತನು. ಅವನ ದೃಷ್ಟಿಕೋನವೇನಾಗಿತ್ತು?
ಪ್ರಥಮ ಶತಕದ ಯೇಸುವಿನ ಜೀವನ ಚರಿತ್ರೆಯ ವೃತ್ತಾಂತಗಳು (ಬೈಬಲಿನಲ್ಲಿ ಮತ್ತಾಯ, ಮಾರ್ಕ, ಲೂಕ ಮತ್ತು ಯೋಹಾನ ಪುಸ್ತಕಗಳು) ವ್ಯಕ್ತಿಗಳು ತಮ್ಮ ಭವಿಷ್ಯವನ್ನು ಪ್ರಭಾವಿಸಬಲ್ಲರು, ಅಂದರೆ ಇದು ಕೇವಲ ಅವರಿಗೇನಾಗುತ್ತದೆ ಎಂಬ ಅರ್ಥದಲ್ಲಿ, ಎಂದೇ ಅವನ ನಂಬಿಕೆಯಾಗಿತ್ತೆಂದು ತೋರಿಸುತ್ತವೆ.
ಉದಾಹರಣೆಗೆ, ದೇವರು “ತನ್ನನ್ನು ಬೇಡಿಕೊಳ್ಳುವವರಿಗೆ. . .ಒಳ್ಳೆಯ ವರಗಳನ್ನು ಕೊಡುವನು” ಎಂದೂ “ಕಡೇ ವರೆಗೆ ತಾಳುವವನು ರಕ್ಷಣೆ ಹೊಂದುವನು” ಎಂದೂ ಯೇಸು ಹೇಳಿದನು. ಇದೇ ರೀತಿ, ಯೆರೂಸಲೇಮಿನ ನಿವಾಸಿಗಳು ಜೀವರಕ್ಷಿಸಸಾಧ್ಯವಾಗಿದ್ದ ಎಚ್ಚರಿಕೆಗಳನ್ನು ಅಸಡ್ಡೆ ಮಾಡಿದಾಗ ಯೇಸು ಅವರ ಪ್ರತಿಕ್ರಿಯೆಗೆ ಅದೃಷ್ಟದ ಮೇಲೆ ದೂರುಹೊರಿಸದೆ “ಆದರೆ ನಿಮಗೆ ಮನಸ್ಸಿಲ್ಲದೆ ಹೋಯಿತು” ಎಂದು ಹೇಳಿದನು.—ಮತ್ತಾಯ 7:7-11; 23:37,38; 24:13.
ಯೆರೂಸಲೇಮಿನಲ್ಲಿ ನಡೆದ ಒಂದು ಮಾರಕ ಅಪಘಾತದ ಕುರಿತು ಯೇಸು ಗಮನಿಸಿದ ವಿಚಾರದಿಂದಲೂ ಅವನ ಹೊರನೋಟವನ್ನು ನಾವು ಗ್ರಹಿಸಬಲ್ಲೆವು. ಅವನು ಹೇಳಿದ್ದು: “ಸಿಲೋವಾಮಿಯಲ್ಲಿ ಬುರುಜು ಬಿದ್ದು ಸತ್ತ ಆ ಹದಿನೆಂಟು ಮಂದಿಯು ಆ ಯೆರೂಸಲೇಮಿನಲ್ಲಿ ವಾಸವಾಗಿದ್ದ ಎಲ್ಲಾ ಮನುಷ್ಯರಿಗಿಂತಲೂ ಅಪರಾಧಿಗಳೆಂದು ಭಾವಿಸುತ್ತೀರೊ? ಹಾಗಲ್ಲವೆಂದು ನಿಮಗೆ ಹೇಳುತ್ತೇನೆ.” (ಲೂಕ 13:4,5) ಅದೃಷ್ಟದ ಕಾರಣ ಆ 18 ಜನರು ಸತ್ತರೆಂದಾಗಲಿ ಅವರು ಇತರರಿಗಿಂತ ಹೆಚ್ಚು ದುಷ್ಟರಾದ ಕಾರಣ ಸತ್ತರೆಂದಾಗಲಿ ಯೇಸು ಹೇಳಲಿಲ್ಲವೆಂಬುದನ್ನು ಗಮನಿಸಿರಿ. ಬದಲಿಗೆ, ಮನುಷ್ಯನ ಸ್ವತಂತ್ರ ಸಂಕಲ್ಪ ಶಕ್ತಿಯನ್ನು ಅದೃಷ್ಟದೊಂದಿಗೆ ಹೊಂದಿಸಿಕೊಳ್ಳಲು ಪ್ರಯತ್ನಿಸಿದ ಫರಿಸಾಯರಿಗೆ ಅಸದೃಶವಾಗಿ, ಮನುಷ್ಯನು ತನ್ನ ವೈಯಕ್ತಿಕ ಭವಿಷ್ಯತ್ತನ್ನು ಪ್ರಭಾವಿಸಬಲ್ಲನೆಂದು ಯೇಸು ಕಲಿಸಿದನು.
ಯೇಸುವಿನ ಅಪೊಸ್ತಲರೂ ಇದೇ ರೀತಿ, ರಕ್ಷಣೆಯು ಸರ್ವರೂ ಪಡೆಯಬಹುದಾದ ಆಯ್ಕೆಯಾಗಿದೆ ಎಂದು ಕಲಿಸಿದರು. ಅಪೊಸ್ತಲ ಪೌಲನು ಬರೆದುದು: “ಆ ಗ್ರಂಥಗಳು. . .ರಕ್ಷಣೆ ಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕವ್ತಾಗಿವೆ.” ಮತ್ತು ಅಪೊಸ್ತಲ ಪೇತ್ರನಂದದ್ದು: “ಹಸುಮಕ್ಕಳಂತೆ ಪಾರಮಾರ್ಥಿಕವಾದ ಶುದ್ಧ ಹಾಲನ್ನು ಬಯಸಿರಿ. ಅದರಿಂದ ಬೆಳೆಯುತ್ತಾ ರಕ್ಷಣೆಯನ್ನು ಹೊಂದುವಿರಿ. (2 ತಿಮೊಥಿ 3:15; 1 ಪೇತ್ರ 2:2; ಅಪೊಸ್ತಲರ ಕೃತ್ಯ 10:34, 35; 17:26, 27ನ್ನೂ ನೋಡಿ.) ಹೇಸ್ಟಿಂಗ್ಸ್ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ ಎಂಡ್ ಎಥಿಕ್ಸ್ ತೋರಿಸುವುದೇನಂದರೆ ಜಸ್ಟಿನ್, ಆರಿಗೆನ್ ಮತ್ತು ಐರಿನೇಯಸರಂಥ ಎರಡು ಮತ್ತು ಮೂರನೆಯ ಶತಕದ ಲೇಖಕರಿಗೆ, ‘ಯಾವ ಶರ್ತವೂ ಇಲ್ಲದ ಆದಿ ನಿರ್ಧಾರದ ಕುರಿತು ಏನೂ ತಿಳಿದಿರಲಿಲ್ಲ; ಅವರು ಸ್ವತಂತ್ರ ಸಂಕಲ್ಪ ಶಕ್ತಿಯ ಕುರಿತು ಕಲಿಸಿದರು.’
ಆದರೆ ಇಷ್ಟು ಜನ, ಸುತ್ತಲಿದ್ದ ಯೆಹೂದ್ಯರು ಸೇರಿ, ಅದೃಷ್ಟ ವಾದವನ್ನು ನಂಬಿದ್ದರೆ, ಯೇಸು ಮತ್ತು ಆದಿಕ್ರೈಸ್ತರು ಮನುಷ್ಯನು ನಿಶ್ಚಿತ ವಿಧಿಯುಳ್ಳವನೆಂದು ಏಕೆ ನಂಬಲಿಲ್ಲ? ಒಂದು ಕಾರಣವು, ಈ ವಿಚಾರವು ಸಮಸ್ಯೆಗಳಿಂದ ತುಂಬಿರುವುದೇ. ಇವುಗಳಲ್ಲಿ ಎರಡನ್ನು ಹೆಸರಿಸೋಣ: ಅದೃಷ್ಟ ವಾದ ಯೆಹೋವ ದೇವರ ಗುಣಗಳಿಗೆ ವ್ಯತಿರಿಕ್ತವಾಗಿದೆ. ಸ್ಥಾಪಿತ ನಿಜತ್ವಗಳು ಇದನ್ನು ತಪ್ಪೆಂದು ಸ್ಥಿರಪಡಿಸುತ್ತವೆ. ಇದಲ್ಲದೆ, ಇದು ನಿಮ್ಮ ಈಗಿನ ಮತ್ತು ಭಾವೀ ಜೀವನಕ್ಕೆ ಅಪಾಯ ತಂದೊಡ್ಡಬಹುದು. ಹೆಚ್ಚು ನಿಕಟ ಪರೀಕ್ಷೆಯು ಇದು ಹೇಗೆಂದು ನಿಮಗೆ ತಿಳಿಸುವುದು.
ಅದೃಷ್ಟ ವಾದದ ಪರಿಣಾಮ ಮತ್ತು ದೇವರ ಗುಣಗಳು
ಸಾ.ಶಾ.ಪೂ. ಮೂರನೆಯ ಶತಕದಲ್ಲಿ ಸಿಟಿಯಮ್ ನಗರದ ತತ್ವಜ್ಞಾನಿ ಝೀನೊ, ಆಥೆನ್ಸ್ ನಗರದ ತನ್ನ ವಿದ್ಯಾರ್ಥಿಗಳು, “ಅದೃಷ್ಟದ ಕಟ್ಟಳೆಯನ್ನು ಅದು ಹೇಗೋ ರಹಸ್ಯ ರೀತಿಯಲ್ಲಿ ಅತ್ಯುತ್ತಮವೆಂದು ತಿಳಿದು ಅಂಗೀಕರಿಸಬೇಕು” ಎಂದು ಕಲಿಸಿದನು. ಆದರೆ ಒಂದು ದಿನ ತನ್ನ ದಾಸನು ಕಳ್ಳತನದ ಅಪರಾಧಿಯೆಂದು ತಿಳಿದಾಗ, ತನ್ನ ಸ್ವಂತ ತತ್ವಜ್ಞಾನದ ಪರಿಣಾಮಕ್ಕೆ ಮುಖಾಮುಖಿಯಾದನು. ಇದು ಹೇಗೆ? ಅವನು ಕಳ್ಳನನ್ನು ಹೊಡೆದಾಗ ಆ ಆಳು, “ನಾನು ಕಳವು ಮಾಡಬೇಕೆಂದು ವಿಧಿಸಲಾಗಿತ್ತು” ಎಂದು ಉತ್ತರ ಕೊಟ್ಟನು.
ಝೀನೊವಿನ ದಾಸನು ಹೇಳಿದುದರಲ್ಲಿ ಅರ್ಥವಿತ್ತು. ಪ್ರತಿಯೊಬ್ಬನ ಜೀವನ ಮಾದರಿ ಪೂರ್ವ ನಿರ್ಧಾರಿತವಾಗಿದ್ದರೆ, ಒಬ್ಬನು ಕಳ್ಳನಾಗುವುದಕ್ಕೆ ಅವನನ್ನು ದೂರುವುದು, ಕಿತ್ತಳೆಯ ಮರವಾದುದಕ್ಕೆ ಕಿತ್ತಳೆ ಬೀಜವನ್ನು ದೂರಿದಂತೆ. ಏಕೆಂದರೆ, ಮನುಷ್ಯನೂ ಬೀಜವೂ ಒಂದು ಕಾರ್ಯಕ್ರಮಾನುಸಾರ ಬೆಳೆಯುತ್ತವೆ. ಆದರೂ ಇಂಥ ತರ್ಕದ ಅಂತಿಮ ಪರಿಣಾಮವೇನು?
ಪಾತಕಿಗಳು ಕೇವಲ ತಮ್ಮ ಅದೃಷವ್ಟನ್ನು ಅನುಸರಿಸುವುದಾದರೆ ಅವರ ಪಾಡನ್ನು ನಿಶ್ಚಯಿಸಿದವನು ಅವರ ವರ್ತನೆಗಳಿಗೆ ಜವಾಬ್ದಾರನು. ಅದು ಯಾರು? ಅದೃಷ್ಟವಾದಿಗಳಿಗನುಸಾರ ಅದು ದೇವರೇ. ಇದೇ ತರ್ಕದಲ್ಲಿ ಒಂದು ದೈತ್ಯಗಾತ್ರದ ಹೆಜ್ಜೆಯನ್ನು ಮುಂದಿಡುವಲ್ಲಿ, ಮನುಷ್ಯನು ಇದುವರೆಗೆ ಮಾಡಿರುವ ಎಲ್ಲ ದುಷ್ಟತ್ವ, ಹಿಂಸಾಕೃತ್ಯ ಮತ್ತು ದಬ್ಬಾಳಿಕೆಗಳಿಗೆ ದೇವರೇ ಮೂಲಕರ್ತೃ. ನೀವು ಇದನ್ನು ಒಪ್ಪುತ್ತೀರೊ?
ನೆಡರ್ಲೆಂಡ್ಸ್ ಥಿಯಾಲಜಿಶ್ ಟಿಜ್ಶ್ರಿಫ್ಟ್ (ಡಚ್ ಜರ್ನಲ್ ಆಫ್ ಥಿಯಾಲಜಿ) ಗಮನಿಸುವುದೇನಂದರೆ ಇಂಥ ಅದೃಷ್ಟದ ದೃಷ್ಟಿಕೋನವು “ಕಡಮೆ ಪಕ್ಷ, ಕ್ರೈಸ್ತರಿಗಾದರೂ ಅಸಮರ್ಥನೀಯವಾದ ದೇವರ ಪ್ರತಿರೂಪವನ್ನು ಪೂರ್ವಭಾವಿಸುತ್ತದೆ.” ಏಕೆಂದರೆ, ಪ್ರೇರಿತ ಬೈಬಲ್ ಲೇಖಕರು ವರ್ಣಿಸಿರುವ ದೇವರ ಚಿತ್ರಕ್ಕೆ ಇದು ವ್ಯತಿರಿಕ್ತವಾಗಿರುತ್ತದೆ. ಉದಾಹರಣೆಗೆ, ಪ್ರೇರಿತ ಪುಸ್ತಕವಾದ ಕೀರ್ತನೆಯಿಂದ ತೆಗೆದ ಈ ಉಲ್ಲೇಖವನ್ನು ಗಮನಿಸಿರಿ: “ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ.” “ಕರ್ತನು ಬಲಾತ್ಕಾರಿಗಳನ್ನು ದ್ವೇಷಿಸುತ್ತಾನೆ.” “[ದೇವರ ನಿಯಮಿತ ಮೆಸ್ಸೀಯ ರಾಜನು] ಕುಯುಕ್ತಿ ಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು.” (ಕೀರ್ತನೆ 5:4. 11:5; 72:14) ಹೀಗೆ, ಅದೃಷ್ಟವಾದದ ಪರಿಣಾಮ ಮತ್ತು ದೇವರ ಗುಣಗಳು ಒಂದಕ್ಕೊಂದು ನೇರವಾಗಿ ಡಿಕ್ಕಿ ಹೊಡೆಯುತ್ತವೆ.
ಅದೃಷ್ಟ ವಾದ ಮತ್ತು ನಿಜತ್ವಗಳು
ನೈಸರ್ಗಿಕ ವಿಪತ್ತುಗಳ ಕುರಿತೇನು? ಅವು ಸಂಭವಿಸುವಂತೆ ವಿಧಿಸಲ್ಪಟ್ಟಿರುವುದರಿಂದ ಅವುಗಳಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವಲ್ಲವೆ?
ಆದರೆ ನಿಜತ್ವಗಳೇನು ರುಜು ಪಡಿಸುತ್ತವೆ? ಡಚ್ಚ್ ವಾರ್ತಾಪತ್ರಿಕೆ ಎನ್ಆರ್ಸಿ ಹ್ಯಾಂಡಲ್ಸ್ಬ್ಲಾಡ್ ಪ್ರಕಟಿಸಿರುವ ಒಂದು ಅಧ್ಯಯನ ನೈಸರ್ಗಿಕ ಆಪತ್ತುಗಳ ಕುರಿತು ಏನು ಕಂಡುಹಿಡಿಯಿತೆಂದು ಗಮನಿಸಿರಿ: “ಇದುವರೆಗೆ ಭೂಕಂಪ, ನೆರೆ, ಭೂಪಾತ ಮತ್ತು ಚಂಡ ಮಾರುತಗಳನ್ನು ಅವು. . . ನಿಸರ್ಗದ ವಿಚಿತ್ರ ವರ್ತನೆಗಳೆಂದು ಎಣಿಸಲಾಗುತಿತ್ತು. ಆದರೆ ಸನಿಹ ಪರೀಕ್ಷೆಯು, ನಿಸರ್ಗದೊಂದಿಗೆ ಉಗ್ರವಾದ ಮಾನವನ ಅಡ್ಡೈಸುವಿಕೆಯು ಇಂಥ ವಿಪತ್ತುಗಳ ವಿರುದ್ಧ ರಕ್ಷಿಸಿಕೊಳ್ಳಲು ಪರಿಸರಕ್ಕಿರುವ ಸಾಮರ್ಥ್ಯಕ್ಕೆ ಗುರುತರವಾಗಿ ಹಾನಿ ಮಾಡಿಯದೆ ಎಂದು ತೋರಿಸುತ್ತದೆ. ಈ ಕಾರಣ, ನೈಸರ್ಗಿಕ ವಿಪತ್ತುಗಳು ಹಿಂದೆಂದಿಗಿಂತಲೂ ಹೆಚ್ಚು ಜೀವಗಳನ್ನು ಆಹುತಿ ತೆಗೆದುಕೊಳ್ಳುತ್ತವೆ.”—ಒತ್ತು ನಮ್ಮದು.
ಹಿಂದಿನ ಲೇಖನದಲ್ಲಿ ಹೇಳಲಾದ ಬಾಂಗ್ಲಾದೇಶದ ನೆರೆ ಇದಕ್ಕೆ ಒಂದು ಉದಾಹರಣೆ. “ನೇಪಾಲ, ಉತ್ತರ ಭಾರತ ಮತ್ತು ಬಾಂಗ್ಲಾದೇಶದಲ್ಲಿ ವಿಶಾಲವಾದ ಕಾಡು ಪ್ರದೇಶಗಳ ನಾಶನ, ಇತ್ತೀಚಿನ ವರ್ಷಗಳಲ್ಲಿ ಹಾವಳಿಗೈದ ನೆರೆಗಳಿಗೆ ಒಂದು ಪ್ರಧಾನ ಕಾರಣ”ವೆಂದು ವಿಜ್ಞಾನಿಗಳು ಈಗ ಹೇಳುತ್ತಾರೆ.(ವಾಯ್ಸ್ ಪತ್ರಿಕೆ) ಕಾಡುನಾಶವು ಬಾಂಗ್ಲಾದೇಶದಲ್ಲಿ ನೆರೆಗಳನ್ನು 50 ವರುಷಗಳಲ್ಲಿ ಒಂದರ ಬದಲಿಗೆ 4 ವರುಷಗಳಲ್ಲಿ ಒಂದಕ್ಕೆ ಏರಿಸಿದೆ ಎಂದು ಇನ್ನೊಂದು ವರದಿ ತಿಳಿಸುತ್ತದೆ. ಲೋಕದ ಇತರ ಭಾಗಗಳಲ್ಲಿ ಇದೇ ರೀತಿಯ ಮಾನವ ಕೈಹಾಕುವಿಕೆಯು—ಅನಾವೃಷ್ಟಿ, ಕಾಡ್ಗಿಚ್ಚು ಮತ್ತು ಭೂಪಾತಗಳಂಥ ಅಷ್ಟೇ ವಿಪತ್ಕಾರಕ ಪರಿಣಾಮವನ್ನು ತಂದಿವೆ. ಹೌದು, ಅನೇಕ ವೇಳೆ, ಮಾನವ ಕೆಲಸಗಳು—ಮಾರ್ಮಿಕವಾದ ಅದೃಷವ್ಟಲ್ಲ—ನೈಸರ್ಗಿಕ ವಿಪತ್ತುಗಳಿಗೆ ಕಾರಣಭೂತವಾಗಿವೆ ಯಾ ಅವನ್ನು ಉದ್ರೇಕಿಸುತ್ತವೆ.
ವಿಷಯ ಹೀಗಿರುವಾಗ, ಮನುಷ್ಯನ ಕೆಲಸಗಳು ಇದಕ್ಕೆ ವಿರೋಧಾತ್ಮಕವಾಗಿಯೂ ವರ್ತಿಸಬೇಕು: ಅವು ವಿಪತ್ತುಗಳನ್ನು ಕಡಮೆ ಮಾಡಬೇಕು. ಇದು ನಿಜವೆ? ಈ ನಿಜತ್ವಗಳನ್ನು ಪರಿಗಣಿಸಿರಿ: ಯೂನಿಸೆಫ್ (ಯುನೊಯಿಟೆಡ್ ನೇಶನ್ಸ್ ಚಿಲ್ಡ್ರನ್ಸ್ ಫಂಡ್) ವರದಿ ಮಾಡುವುದೇನಂದರೆ, ಅನೇಕ ವರುಷಗಳಿಂದ ಬಾಂಗ್ಲಾದೇಶದ ಒಳಪ್ರದೇಶಗಳಲ್ಲಿ ನೂರಾರು ಮಕ್ಕಳು ಕುರುಡರಾಗುತ್ತಿದ್ದರು. ಇದು ಬದಲಾಯಿಸ ಸಾಧ್ಯವಿಲ್ಲದ ಅದೃಷ್ಟದಿಂದಾಯಿತೊ? ಇಲ್ಲ! ಯೂನಿಸೆಫ್ ಕಾರ್ಮಿಕರು ಅನ್ನ ಮಾತ್ರವಲ್ಲ, ಫಲ ಮತ್ತು ತರಕಾರಿಗಳನ್ನು ಮಕ್ಕಳಿಗೆ ಉಣಿಸಬೇಕೆಂದು ಅಲ್ಲಿಯ ತಾಯಂದಿರಿಗೆ ಮನದಟ್ಟು ಮಾಡಿದಾಗ, ಈ ನೇತ್ರ ಕಾಯಿಲೆ ತನ್ನ ಬಿಗಿಮುಷ್ಟಿಯನ್ನು ಸಡಲಿಸಿತು. ಇಂದಿನ ವರೆಗೆ ಈ ಆಹಾರಕ್ರಮದಲ್ಲಿ ಬದಲಾವಣೆ, ಬಾಂಗ್ಲಾದೇಶದ ನೂರಾರು ಮಕ್ಕಳನ್ನು ಕುರುಡುತನದಿಂದ ರಕ್ಷಿಸಿದೆ.
ಇದೇ ರೀತಿ, ಹೊಗೆಬತ್ತಿ ಸೇದದವರು ಸೇದುವವರಿಗಿಂತ ಸರಾಸರಿ ಮೂರರಿಂದ ನಾಲ್ಕು ವರ್ಷಕಾಲ ಹೆಚ್ಚು ಬದುಕುತ್ತಾರೆ. ಸೀಟ್ ಬೆಲ್ಟ್ ಕಟ್ಟುವ ಕಾರ್ ಪ್ರಯಾಣಿಕರು ಕಟ್ಟದವರಿಗಿಂತ ಕಡಮೆ ಮಾರಕ ಅಪಘಾತಗಳಿಗೊಳಗಾಗುತ್ತಾರೆ. ಹೀಗೆ, ನಿಮ್ಮ ವರ್ತನೆ—ಅದೃಷವ್ಟಲ್ಲ—ನಿಮ್ಮ ಜೀವವನ್ನು ಪ್ರಭಾವಿಸುತ್ತದೆಂಬುದು ಸ್ಪಷ್ಟ.
ಅದೃಷ್ಟ ವಾದದ ಮಾರಕ ಪರಿಣಾಮಗಳು
ಮೊದಲೆ ಹೇಳಿರುವಂತೆ, ಅದೃಷ್ಟ ವಾದ ನಿಮ್ಮ ಆಯುಷ್ಯವನ್ನು ಕಮ್ಮಿ ಮಾಡಬಹುದು. “ಅದೃಷ್ಟ ವಾದದ ಭಯಂಕರ ಉದಾಹರಣೆ”ಗಳನ್ನು ಚರ್ಚಿಸುವಾಗ ದಿ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ ಹೇಳುವುದು: “2ನೇ ಲೋಕ ಯುದ್ಧದಿಂದ ಹಿಡಿದು ಆತ್ಮಹತ್ಯಾತ್ಮಕ ಜಾಪನೀಸ್ ಟಾರ್ಪಿಡೊ ಆಕ್ರಮಣ ಮತ್ತು ಹಿಟ್ಲರನ ಆಳಿಕೆಯಲ್ಲಿ, ಯಾವುದು ವೈಯಕ್ತಿಕ ಮಾನವ ಜೀವದ ಮೌಲ್ಯಕ್ಕೆ ಮೀರಿದೆಯೆಂದು ಭಾವಿಸಲಾಗುತಿತ್ತೊ ಅಂಥ ಆದಿ ನಿರ್ಧಾರ (ಶಿಕ್ಸಲ್)ವೆಂಬ ವಿಚಾರಕ್ಕೆ ಪ್ರತ್ಯುತ್ತರವಾಗಿ ಎಸೆಸ್ (ಶೂಟ್ಸ್ಸ್ಟಾಫೆಲ್) ವಸತಿಗಳಲ್ಲಿ ನಡೆದ ಆತ್ಮಹತ್ಯಗಳ ವಿಷಯ ನಮಗೆ ತಿಳಿದದೆ.” ಮತ್ತು ಅದೇ ಮಾಲವು, ಇತ್ತೀಚಿನ ವರುಷಗಳಲ್ಲಿ “ಇಸ್ಲಾಮಿಗೆ ಹಾನಿಕಾರಕವಾಗಿದೆ ಎಂದೆಣಿಸಲಾಗಿರುವ ಗುರಿಹಲಗೆಗಳ ಮೇಲೆ ಧಾರ್ಮಿಕವಾಗಿ ಪ್ರೇರಿತವಾದ ಆತ್ಮಹತ್ಯಾತ್ಮಕ ಆಕ್ರಮಣಗಳು. . . ಸಮೀಪ ಪೂರ್ವದ ವೃತ್ತಪತ್ರಕೆಗಳ ವರದಿಗಳಲ್ಲಿ ಸುಮಾರಾಗಿ ಕ್ರಮದ ಸಂಗತಿಗಳಾದವು.” ಇಂಥ ವರದಿಗಳು ತಿಳಿಸುವುದೇನಂದರೆ, ಸಾವಿರಾರು ಮಂದಿ ಯುವ ಸೈನಿಕರು, “ಒಬ್ಬನು ಸಾಯಬೇಕೆಂದು ಬರೆಯಲ್ಪಟ್ಟಿರದಿದ್ದರೆ ಅವನಿಗೆ ಯಾವ ಅಪಾಯವೂ ಸಂಭವಿಸುವುದಿಲ್ಲ” ಎಂದು ದೃಢವಾಗಿ ನಂಬಿ ರಣರಂಗಕ್ಕೆ ಹೋದರು.
ಆದರೂ, ಗೌರವಿಸಲ್ಪಡುವ ಮುಸ್ಲಿಮ್ ಉಪದೇಶಕರು ಇಂಥ ಹುಚ್ಚು ಸಾಹಸಕ್ಕೆ ಆಕ್ಷೇಪವೆತ್ತುತ್ತಾರೆ. ಉದಾಹರಣೆಗೆ ಒಬ್ಬ ಕಲೀಫರು ಹೇಳಿದ್ದು: “ಬೆಂಕಿಯಲ್ಲಿರುವವನು ದೇವರ ಚಿತ್ತ ಅನಿವಾರ್ಯವೆಂದೆಣಿಸಬೇಕು. ಆದರೆ ಇನ್ನೂ ಬೆಂಕಿಗೆ ಬೀಳದಿರುವವನು ಅದಕ್ಕೆ ತನ್ನನ್ನು ಹಾಕಿಕೊಳ್ಳುವುದು ಅನಗತ್ಯ.” ದುಃಖಕರವಾಗಿ, ಸೈನಿಕರ ಗುಂಪುಗಳು ಈ ಕಲೀಫರ ಬುದ್ಧಿವಾದಾನುಸಾರ ವರ್ತಿಸಿರುವುದಿಲ್ಲ. ಸುಮಾರು ಎಂಟು ವರ್ಷಗಳ ಯುದ್ಧದಲ್ಲಿ, ಇರಾನಿನಲ್ಲಿ ನಾಲ್ಕು ಲಕ್ಷ ಸೈನಿಕರು ಸತ್ತರು. ಇದು, ಅಮೆರಿಕದವರು 2ನೇ ಲೋಕ ಯುದ್ಧದಲ್ಲಿ ಕಳೆದುಕೊಂಡ ಯುದ್ಧ ಮರಣಗಳಿಗಿಂತ ಹೆಚ್ಚು! ಹೌದು, ಅದೃಷ್ಟ ವಾದ ನಿಮ್ಮ ಆಯುಷ್ಯವನ್ನು ಕಡಮೆ ಮಾಡುತ್ತದೆಂಬುದು ಸ್ಪಷ್ಟ. ಅದು ನಿಮ್ಮ ಭಾವೀ ಜೀವನವನ್ನೂ ಅಪಾಯಕ್ಕೊಡ್ಡಬಹುದು. ಹೇಗೆ?
ಅದೃಷ್ಟವಾದಿಯು ತನ್ನ ಭವಿಷ್ಯ, ಭೂತ ಕಾಲದಷ್ಟೆ ಅನಿವಾರ್ಯವೂ ನಿಶ್ಚಿತವೂ ಆಗಿದೆಯೆಂದು ಎಣಿಸಿ ಅಪಾಯಕರವಾದ ಶೀಲವನ್ನು ಕಲ್ಪಿಸಿಕೊಳ್ಳಬಹುದು. ಯಾವ ಶೀಲ? ಎನ್ಸೈಕ್ಲೊಪೀಡಿಯ ಆಫ್ ಥಿಯಾಲಜಿ ಉತ್ತರಿಸುವುದು: “ವ್ಯಕ್ತಿಯು. . . ತಪ್ಪಿಸಿಕೊಳ್ಳ ಸಾಧ್ಯವಿಲ್ಲೆಂದು ಕಾಣುವ ಸಾಮಾಜಿಕ ಕಾರ್ಯಗತಿಯಲ್ಲಿ ಸಹಾಯಶೂನ್ಯ, ಅಗಮನಾರ್ಹ ಮತ್ತು ವೆಚ್ಚಯೋಗ್ಯವಾದವನೆಂದು ಎಣಿಸುತ್ತಾನೆ. ಇದು, ಯಾವುದು ಸರ್ವವೂ ಗೂಢವಾದ ಅದರೆ ಪರಮಾಧಿಕಾರವುಳ್ಳ ಅದೃಷ್ಟದ ಮೇಲೆ ಹೊಂದಿಕೊಂಡಿದೆ ಎಂಬ ಮೂಢಭಕ್ತಿಯ ವಿವರಣೆಯನ್ನು ಕೃತಜ್ಞತೆಯಿಂದ ಹಿಡಿದುಕೊಂಡಿರುತ್ತದೊ ಆ ನಿಷ್ಪ್ರಯತ್ನ ಗುಣವನ್ನು ಪ್ರೇರಿಸುತ್ತದೆ.”
ಈ ನಿಷ್ಪ್ರಯತ್ನ ಗುಣವನ್ನು ಅಷ್ಟು ಅಪಾಯಕಾರಿಯಾಗಿ ಮಾಡುವುದು ಯಾವುದು? ಇದು ಅನೇಕ ವೇಳೆ ಅನೇಕರ ಮನೋಭಾವವಾದ ಪರಾಜಿತ ಭಾವಕ್ಕೆ ನಡೆಸುತ್ತದೆ. ಇದು ಅದೃಷ್ಟವಾದಿಯನ್ನು ಯಾವ ಆರಂಭದ ಹೆಜ್ಜೆಯನ್ನೂ ತಕ್ಕೊಳ್ಳದಿರುವುದಕ್ಕೆ ಯಾ ದೇವರ ಅದ್ಭುತಕರವಾದ, “ಎಲೈ, ಬಾಯಾರಿದ ಸಕಲ ಜನರೇ, ನೀರಿನ ಬಳಿಗೆ ಬನ್ನಿರಿ. . .ಕಿವಿಯನ್ನು ಇತ್ತ ತಿರುಗಿಸಿರಿ. ನನ್ನ ಬಳಿಗೆ ಬನ್ನಿರಿ. ಆಲಿಸಿದರೆ ಬದುಕಿ ಬಾಳುವಿರಿ” ಎಂಬ ಆಮಂತ್ರಣಕ್ಕೆ ಪ್ರತಿವರ್ತನೆ ತೋರಿಸದಂತೆ ನಡಿಸೀತು. (ಯೆಶಾಯ 55:1-3) ಅದೃಷ್ಟದಲ್ಲಿ ನಂಬಿಕೆಯು, ‘ಬಂದು’ ‘ಕಿವಿಗೊಡಲು’ ನಿಮ್ಮನ್ನು ತಡೆಯುವುದಾದರೆ ಬರಲಿರುವ ಭೂಮಿಯ ಪುನಃಸ್ಥಾಪಿತ ಪ್ರಮೋದವನದಲ್ಲಿ ನಿತ್ಯ ‘ಬಾಳಲು’ ಇರುವ ಸುಯೋಗವು ನಿಮಗೆ ತಪ್ಪಿದಂತಾಗುವುದು. ತೆರಲು ಎಷ್ಟೊಂದು ಬೆಲೆಬಾಳುವ ಮೌಲ್ಯ!
ಆದುದರಿಂದ ನಿಮ್ಮ ಸ್ಥಾನವೇನು? ನೀವು, ಜನರ ಯೋಚನೆಗಳ ಆಧಾರವು ಅದೃಷ್ಟವಾದವಾಗಿರುವ ಸಮಾಜದಲ್ಲಿ ಬೆಳೆದು ಬಂದಿರುವುದಾದರೆ ಸಂದೇಹವಿಲ್ಲದೆ ನೀವು ಆ ನಂಬಿಕೆಯನ್ನು ಅಂಗೀಕರಿಸಿರಬಹುದು. ಆದರೂ ಈ ಲೇಖನದಲ್ಲಿ ಎತ್ತಿರುವ ಆಕ್ಷೇಪಗಳು, ನಿಮ್ಮ ಪ್ರಸ್ತುತದ ಮತ್ತು ಭಾವೀ ಜೀವವು ಅಧಿಕಾಂಶ ನಿಮ್ಮ ಸ್ವಂತ ಕ್ರಿಯೆಗಳಿಂದ ರೂಪಿಸಲ್ಪಡುತ್ತದೆಂದು ಗ್ರಹಿಸಲು ಸಹಾಯ ಮಾಡಿರಬಹುದು.
ನೀವು ನೋಡಿರುವಂತೆ, ವಿವೇಚನೆ, ನಿಜತ್ವ ಮತ್ತು ಎಲ್ಲಕ್ಕಿಂತ ಮಿಗಿಲಾಗಿ, ಪವಿತ್ರ ಶಾಸ್ತ್ರವು ಮಾರಕವಾದ ಪರಾಜಯಭಾವಕ್ಕೆ ನೀವು ಬಲಿ ಬೀಳಬಾರದೆಂದು ತೋರಿಸುತ್ತದೆ. ಬದಲಿಗೆ, ಯೇಸು ಪ್ರೋತ್ಸಾಹಿಸಿದಂತೆ, “ನೆಟ್ಟಗಿನ ದ್ವಾರದಲ್ಲಿ ಪ್ರವೇಶಿಸಲು. . .ಒದ್ದಾಡಿರಿ.” (ಲೂಕ 13:24; ದಿ ಎಂಫ್ಯಾಟಿಕ್ ಡಾಯಗ್ಲಾಟ್, ಇಂಟರ್ಲಿನಿಯರ್ ರೀಡಿಂಗ್) ಇದನ್ನು ಯಾವ ಅರ್ಥದಲ್ಲಿ ಅವನು ಹೇಳಿದನು? ಒಬ್ಬ ಬೈಬಲ್ ವ್ಯಾಖ್ಯಾನಕಾರನು ವಿವರಿಸುವುದು: “[ಒದ್ದಾಡು] ಪದವು ಗ್ರೀಕ್ ಪಂದ್ಯಾಟಗಳಿಂದ ಬಂದಿದೆ. ಅವರ ಓಟಗಳಲ್ಲಿ. . . ಅವರು ಜಯಗಳಿಸಲು ಸರ್ವ ಶಕ್ತಿಯನ್ನೂ ಉಪಯೋಗಿಸಿದರು, ಯಾ ಪ್ರಯತ್ನಿಸಿದರು, ಒದ್ದಾಡಿದರು.” ಜೀವನದಲ್ಲಿ ಪರಾಜಯಕ್ಕೆ ಅಡ್ಡಬೀಳುವ ಬದಲು, ವಿಜಯಕ್ಕಿಂತ ಕಡಮೆ ವಿಷಯಕ್ಕೆ ಪ್ರಯತ್ನಿಸಬಾರದೆಂದು ಯೇಸು ಪ್ರೋತ್ಸಾಹಿಸಿದನು!
ಆದುದರಿಂದ, ನಿಮ್ಮಲ್ಲಿ ಅದೃಷ್ಟ ಪ್ರೇರಿತವಾದ ನಿಷ್ಪ್ರಯತ್ನ ಭಾವವಿರುವಲ್ಲಿ ಅದನ್ನು ಜಾಡಿಸಿ ತೆಗೆಯಿರಿ. ದೇವರ ವಾಕ್ಯ ಪ್ರೋತ್ಸಾಹಿಸುವಂತೆ ಜೀವನದೋಟವನ್ನು ಪ್ರವೇಶಿಸಿರಿ. ಮತ್ತು ಅದೃಷ್ಟ ವಾದವು ನಿಮ್ಮನ್ನು ನಿಧಾನಿಸದಂತೆ ನೋಡಿರಿ. (1 ಕೊರಿಂಥ 9:24-27 ನೋಡಿ.) ಪ್ರೇರಿತ ಆಮಂತ್ರಣಕ್ಕೆ ಒಡನೆ ಪ್ರತಿವರ್ತನೆ ತೋರಿಸಿ ವೇಗವನ್ನು ಹೆಚ್ಚಿಸಿರಿ: “ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ.” ಈ ಆಯ್ಕೆಯನ್ನು ನೀವು ಹೇಗೆ ಮಾಡಬಲ್ಲಿರಿ? “ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನ ಮಾತಿಗೆ ವಿಧೇಯರಾಗಿರ್ರಿ. ಆತನನ್ನು ಹೊಂದಿಕೊಂಡೇ ಇರ್ರಿ.” ಹೀಗೆ ಮಾಡುವುದು ವಿಜಯಕ್ಕೆ ನಿಮ್ಮನ್ನು ನಡೆಸುವುದು. ಏಕೆಂದರೆ ಯೆಹೋವನು “ನೀವು ಬದುಕಿಕೊಳ್ಳುವದಕ್ಕೂ ಬಹುಕಾಲ ಇರುವುದಕ್ಕೂ. . . ಆಧಾರ.”—ಧರ್ಮೋಪದೇಶಕಾಂಡ 30:19,20. (w90 8/15)
[ಪುಟ 7 ರಲ್ಲಿರುವ ಚಿತ್ರ]
ಮೋಶೆ ಅದೃಷ್ಟವಾದವನ್ನು ಸಾರದೆ “ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ” ಎಂದು ಪ್ರೋತ್ಸಾಹಿಸಿದನು.