-
ಫರಿಸಾಯನೊಬ್ಬನಿಂದ ಉಪಚರಿಸಲ್ಪಟ್ಟನುಅತ್ಯಂತ ಮಹಾನ್ ಪುರುಷ
-
-
“ಒಬ್ಬಾನೊಬ್ಬ ಮನುಷ್ಯನು ದೊಡ್ಡ ಅಡಿಗೆ ಮಾಡಿಸಿ, ಅನೇಕರಿಗೆ ಊಟಕ್ಕೆ ಹೇಳಿಸಿದನು. ಆ ಮೇಲೆ . . . ಅವನು ಊಟಕ್ಕೆ ಹೇಳಿಸಿಕೊಂಡವರ ಬಳಿಗೆ—ಈಗ ಸಿದ್ಧವಾಗಿದೆ, ಬರಬೇಕು ಎಂದು ಕರೆಯುವದಕ್ಕೆ ತನ್ನ ಆಳನ್ನು ಕಳುಹಿಸಿದನು. ಆದರೆ ಅವರೆಲ್ಲರೂ ಕ್ಷಮಿಸಬೇಕೆಂದು ಒಂದೇ ಮನಸ್ಸಿನಿಂದ ಹೇಳುವದಕ್ಕೆ ತೊಡಗಿದರು. ಮೊದಲನೆಯವನು ಆ ಆಳನ್ನು ನೋಡಿ—ಹೊಲವನ್ನು ಕ್ರಯಕ್ಕೆ ತಕ್ಕೊಂಡಿದ್ದೇನೆ, ಅದನ್ನು ಹೋಗಿ ನೋಡುವದಕ್ಕೆ ನನಗೆ ಅಗತ್ಯವಿದೆ, ನನ್ನನ್ನು ಕ್ಷಮಿಸಬೇಕೆಂದು ಕೇಳಿಕೊಂಡೆನೆಂಬದಾಗಿ ಹೇಳು ಅಂದನು. ಮತ್ತೊಬ್ಬನು—ನಾನು ಐದು ಜೋಡಿ ಎತ್ತುಗಳನ್ನು ತಕ್ಕೊಂಡಿದ್ದೇನೆ, ಅವುಗಳನ್ನು ಪರೀಕ್ಷಿಸುವದಕ್ಕೆ ಹೋಗುತ್ತೇನೆ, ನನ್ನನ್ನು ಕ್ಷಮಿಸಬೇಕೆಂದು ಕೇಳಿಕೊಂಡೆನೆಂಬದಾಗಿ ಹೇಳು ಅಂದನು. ಇನ್ನೊಬ್ಬನು—ನಾನು ಮದುವೆ ಮಾಡಿಕೊಂಡಿದ್ದೇನೆ, ಆದ್ದರಿಂದ ನಾನು ಬರುವದಕ್ಕಾಗುವದಿಲ್ಲ ಅಂದನು.”
-
-
ಫರಿಸಾಯನೊಬ್ಬನಿಂದ ಉಪಚರಿಸಲ್ಪಟ್ಟನುಅತ್ಯಂತ ಮಹಾನ್ ಪುರುಷ
-
-
ಸಾಮ್ಯದಿಂದ ಯಾವ ಸನ್ನಿವೇಶವು ವರ್ಣಿಸಲ್ಪಟ್ಟಿದೆ? ಒಳ್ಳೇದು, ಊಟವನ್ನು ಒದಗಿಸುವ “ಯಜಮಾನನು” ಯೆಹೋವ ದೇವರನ್ನು ಪ್ರತಿನಿಧಿಸುತ್ತಾನೆ; ಅಮಂತ್ರಣವನ್ನು ನೀಡುವ “ಆಳು” ಯೇಸು ಕ್ರಿಸ್ತನಾಗಿದ್ದಾನೆ; ಮತ್ತು “ದೊಡ್ಡ ಅಡಿಗೆಯ ಊಟವು” ಪರಲೋಕ ರಾಜ್ಯದ ಸಾಲಿನಲ್ಲಿರಲು ಇರುವ ಅವಕಾಶಗಳು ಆಗಿವೆ.
-
-
ಫರಿಸಾಯನೊಬ್ಬನಿಂದ ಉಪಚರಿಸಲ್ಪಟ್ಟನುಅತ್ಯಂತ ಮಹಾನ್ ಪುರುಷ
-
-
ರಾಜ್ಯದ ಸಾಲಿನಲ್ಲಿ ಬರಲು, ಬೇರೆಲ್ಲರಿಗಿಂತಲೂ ಮೊದಲು, ಪ್ರಥಮವಾಗಿ ಆಮಂತ್ರಣವು ಯೇಸುವಿನ ದಿನಗಳಲ್ಲಿದ್ದ ಯೆಹೂದಿ ಧಾರ್ಮಿಕ ಮುಖಂಡರುಗಳಿಗೆ ನೀಡಲ್ಪಟ್ಟಿತು. ಆದಾಗ್ಯೂ, ಆ ಆಮಂತ್ರಣವನ್ನು ಅವರು ನಿರಾಕರಿಸಿದರು. ಆದಕಾರಣ, ಸಾ.ಶ. 33ರ ಪಂಚಾಶತಮದಿಂದ ವಿಶೇಷವಾಗಿ ಎರಡನೆಯ ಕರೆಯು ಯೆಹೂದಿ ಜನಾಂಗದ ತುಚ್ಛೀಕರಿಸಲ್ಪಟ್ಟ ಮತ್ತು ದೀನರಾದ ಜನರಿಗೆ ಕೊಡಲಾಯಿತು. ದೇವರ ಪರಲೋಕ ರಾಜ್ಯದಲ್ಲಿರುವ 1,44,000 ಸ್ಥಾನಗಳಿಗೆ ಬೇಕಾಗುವಷ್ಟು ಜನರು ಪ್ರತಿವರ್ತನೆ ತೋರಿಸಲಿಲ್ಲ. ಆದುದರಿಂದ, ಸುಮಾರು ಮೂರೂವರೆ ವರ್ಷಗಳ ನಂತರ, ಸಾ.ಶ. 36ರಲ್ಲಿ ಮೂರನೆಯ ಹಾಗೂ ಕೊನೆಯ ಆಮಂತ್ರಣವು ಸುನ್ನತಿಯಿಲ್ಲದ ಯೆಹೂದ್ಯೇತರರಿಗೆ ವಿಸ್ತರಿಸಲಾಯಿತು, ಮತ್ತು ಅಂಥವರ ಒಟ್ಟುಗೂಡಿಸುವಿಕೆಯು ನಮ್ಮ ದಿನಗಳಿಗೂ ಮುಂದುವರಿದದೆ. ಲೂಕ 14:1-24.
-