ರತ್ನಗಳು ಲೂಕನ ಸುವಾರ್ತೆಯಿಂದ
ಯೆಹೋವನ ಮಗ, ಯೇಸು ಕ್ರಿಸ್ತನು, ಸಹಾನುಭೂತಿಗಾಗಿ ಪ್ರಸಿದ್ಧನಾಗಿದ್ದನು. ಹಾಗಾದರೆ ಸುವಾರ್ತೆಯ ಲೇಖಕನಾದ ಲೂಕನು ಸಹಾನುಭೂತಿ, ಕರುಣೆ ಮತ್ತು ಅನುಕಂಪವನ್ನು ಒತ್ತಿಹೇಳುವದು ಎಷ್ಟೊಂದು ತಕ್ಕದ್ದಾಗಿರುತ್ತದೆ! ಯೆಹೂದ್ಯರಿಗೂ, ಅನ್ಯರಿಗೂ ಸರಿ ಸಮಾನವಾಗಿ, ಅವನು ಯೇಸುವಿನ ಐಹಿಕ ಜೀವಿತದ, ನಿಜವಾಗಿ ಹೃದಯಬೆಚ್ಚಗೆಗೊಳಿಸುವ ದಾಖಲೆಯನ್ನು ಬರೆದನು.
ಈ ಸುವಾರ್ತೆಯು ಕೆಲವು ನಿರ್ದಿಷ್ಟ ವಿಚಾರಗಳು ಒಬ್ಬ ವಿದ್ವಾಂಸನು ಇದನ್ನು ಬರೆದನೆಂದು ಸೂಚಿಸುತ್ತದೆ. ಉದಾಹರಣೆಗಾಗಿ ಅದಕ್ಕೆ ಒಂದು ಶೈಲಿಯ ಪೀಠಿಕೆ ಇದೆ ಮತ್ತು ವಿಸ್ತಾರವಾಗಿ ಪದಪ್ರಯೋಗಗಳು ಮಾಡಲ್ಪಟ್ಟಿವೆ. ಇಂತಹ ಅಂಶಗಳು ಲೂಕನು ಒಳ್ಳೆಯ ವಿದ್ಯೆ ಪಡೆದ ವೈದ್ಯನಾಗಿದ್ದನೆಂಬ ವಾಸ್ತವಾಂಶಕ್ಕೆ ಹೊಂದಿಕೊಳ್ಳುತ್ತವೆ. (ಕೊಲೊಸ್ಸೆ 4:14) ಯೇಸುವಿನ ಮರಣಾನಂತರದವರೆಗೆ ಅವನೊಬ್ಬ ವಿಶ್ವಾಸಿಯಾಗಿರಲಿಲ್ಲವಾದರೂ, ಅಪೊಸ್ತಲನ ಮೂರನೆಯ ಮಿಶನೆರಿ ಸಂಚಾರದ ನಂತರ ಪೌಲನೊಂದಿಗೆ ಯೆರೂಸಲೇಮಿಗೆ ಬಂದಿದ್ದನು. ಆದಕಾರಣ ಅಲ್ಲಿ ಪೌಲನು ಸೆರೆಯಾದ ನಂತರ ಮತ್ತು ಕೈಸರೈಯದಲ್ಲಿ ಜೇಲಿನಲ್ಲಿಡಲ್ಪಟ್ಟಾಗ, ಈ ಜಾಗರೂಕ ಸಂಶೋಧಕನು ಕಣ್ಣಾರೆ ಸಾಕ್ಷಿಗಳನ್ನು ಸಂದರ್ಶಿಸುವುದರ ಮೂಲಕ ಮತ್ತು ಸಾರ್ವಜನಿಕ ದಾಖಲೆಗಳನ್ನು ಪರಿಶೋಧಿಸುವುದರ ಮೂಲಕ ಸಮಾಚಾರಗಳನ್ನು ಸಂಗ್ರಹಿಸಶಕ್ತನಾಗಿದ್ದನು. (1:1-4: 3:1,2) ತನ್ನ ಸುವಾರ್ತೆಯನ್ನು ಅವನು ಕೈಸರೈಯದಲ್ಲಿ, ಸಾ.ಶ. 56-58 ರಲ್ಲಿ ಅಪೊಸ್ತಲನು ಅಲ್ಲಿ ಎರಡು-ವರ್ಷಗಳ ತನಕ ಬಂಧನದಲ್ಲಿದ್ದಾಗ ಬರೆದಿದ್ದಿರಬಹುದು.
ಕೆಲವು ಅಸದೃಶ ಲಕ್ಷಣಗಳು
ಲೂಕನ ಸುವಾರ್ತೆಯಲ್ಲಿ ಯೇಸುವಿನ ಅದ್ಭುತಗಳಲ್ಲಿ ಕಡಿಮೆ ಪಕ್ಷ ಆರು ಅಸದೃಶವಾದವುಗಳು. ಅವುಗಳು: ಅದ್ಭುತವಾಗಿ ಮೀನನ್ನು ಹಿಡಿಯುವದು. (5:1-6): ನಾಯಿನದಲ್ಲಿ ವಿಧವೆಯೊಬ್ಬಳ ಮಗನನ್ನು ಎಬ್ಬಿಸುವದು (7:11-15): ನಡುಬೊಗ್ಗಿದ ಸ್ತ್ರೀಯೊಬ್ಬಳನ್ನು ವಾಸಿಮಾಡುವದು (13:11-13): ಜಲೋದರವುಳ್ಳ ಮನುಷ್ಯನನ್ನು ಗುಣಪಡಿಸಿದ್ದು (14:1-4): ಹತ್ತು ಕುಷ್ಠರೋಗಿಗಳನ್ನು ಶುದ್ಧಪಡಿಸಿದ್ದು (17:12-14): ಮಹಾಯಾಜಕನ ಆಳಿನ ಕಿವಿಯನ್ನು ಸರಿಪಡಿಸಿದ್ದು.—22:50,51.
ಯೇಸುವಿನ ಸಾಮ್ಯಗಳಲ್ಲಿ ಕೆಲವು ಲೂಕನ ದಾಖಲೆಯಲ್ಲಿ ಸರಿಸಾಟಿಯಿಲ್ಲದವುಗಳಾಗಿವೆ. ಇದರಲ್ಲಿ ಇವು ಸೇರಿವೆ: ಇಬ್ಬರು ಸಾಲಗಾರರು (7:41-47); ನೆರೆಯವನಾದ ಸಮಾರ್ಯನು (10:30-35); ಫಲಕೊಡದ ಅಂಜೂರದ ಮರ (13:6-9); ಸಾಯಂಕಾಲದ ದೊಡ್ಡ ಔತಣ (14:16-24); ದುಂದುಗಾರ ಮಗನು (15:11-32); ಶ್ರೀಮಂತ ಪುರುಷನು ಮತ್ತು ಲಾಜರಸನು (16:19-31); ವಿಧವೆ ಮತ್ತು ಅನ್ಯಾಯಗಾರ ನ್ಯಾಯಾಧಿಪತಿ—18:1-8.
ಮನತಟ್ಟುವ ಘಟನೆಗಳು
ವೈದ್ಯನಾದ ಲೂಕನು ಸ್ತ್ರೀಯರಿಗೆ, ಮಕ್ಕಳಿಗೆ ಮತ್ತು ಪ್ರಾಯಸಂದವರಿಗೆ ಗಮನಹರಿಸಿದ್ದಾನೆ. ಎಲಿಜಬೇತಳ ಬಂಜೆತನ, ಅವರ ಗರ್ಭಧಾರಣೆ ಮತ್ತು ಯೋಹಾನನ ಜನನ ಅವನೊಬ್ಬನೇ ತಿಳಿಸಿದ್ದಾಗಿದೆ. ಅವನ ಸುವಾರ್ತೆಯು ಮಾತ್ರ ಮರಿಯಳಿಗೆ ಗಾಬ್ರಿಯೇಲ ದೇವದೂತನು ಕಾಣಿಸಿಕೊಂಡದ್ದು ದಾಖಲಿಸಿದೆ. ಮರಿಯಳು ಅವಳೊಂದಿಗೆ ಮಾತಾಡುವಾಗ ಎಲಿಜಬೇತಳ ಮಗುವು, ಅವಳ ಹೊಟ್ಟೆಯಲ್ಲಿ ನಲಿದಾಡಿತು ಎಂದು ಲೂಕನು ಹೇಳಲು ಪ್ರಚೋದಿಸಲ್ಪಟ್ಟಿದ್ದಾನೆ. ಯೇಸುವಿನ ಸುನ್ನತಿ, ದೇವಾಲಯದಲ್ಲಿ ಅವನ ಹಾಜರಿಪಡಿಸುವಿಕೆ, ಅಲ್ಲಿ ಪ್ರಾಯಸಂದ ಸೀಮೋಯೋನ ಮತ್ತು ಅನ್ನಳು ಅವನನ್ನು ಕಾಣುವದು ಅವನೊಬ್ಬನೇ ತಿಳಿಸುತ್ತಾನೆ. ಯೇಸುವಿನ ಮತ್ತು ಸ್ನಾನಿಕನಾದ ಯೋಹಾನನ ಬಾಲ್ಯತನದ ನಮ್ಮ ಜ್ಞಾನಕ್ಕಾಗಿ ಲೂಕನ ಸುವಾರ್ತೆಗೆ ನಾವು ಋಣಿಗಳಾಗಿರುತ್ತೇವೆ.—1:1-2:52.
ನಾಯಿನನ ದುಃಖಾರ್ತಳಾದ ವಿಧವೆಯು, ತನ್ನ ಒಬ್ಬನೇ ಮಗನನ್ನು ಮರಣದಲ್ಲಿ ಕಳಕೊಂಡಾಗ ಅವನು ಬರೆದದ್ದು, ಯೇಸುವು “ಆಕೆಯನ್ನು ಕಂಡು ಕನಿಕರಿಸಿ” ಎಂದು ಬರೆದಿದ್ದಾನೆ ಮತ್ತು ನಂತರ ಆ ಯೌವನಸ್ಥನಿಗೆ ಮರಳಿ ಜೀವವನ್ನು ದಯಪಾಲಿಸುತ್ತನೆ. (7:11-15) ಮುಖ್ಯ ಸುಂಕವಸೂಲಿಗಾರನಾದ ಜಕ್ಕಾಯನ ಕುರಿತಾದ ಘಟನೆಯು ಲೂಕನ ಸುವಾರ್ತೆಯಲ್ಲಿ ಮಾತ್ರ ವರದಿಸಲ್ಪಟ್ಟು ಹೃದಯವನ್ನು ಬೆಚ್ಚಗೆಗೊಳಿಸುತ್ತದೆ. ಎತ್ತರದಲ್ಲಿ ಗಿಡ್ಡವನಾಗಿದ್ದುದರಿಂದ ಯೇಸುವನ್ನು ಕಾಣಲು ಅವನು ಮರವೊಂದನ್ನು ಹತ್ತುತ್ತಾನೆ. ಜಕ್ಕಾಯನ ಮನೆಯಲ್ಲಿಯೇ ತಾನಿಂದು ನಿಲ್ಲುತೇನೆಂದು ಯೇಸುವು ಹೇಳಿದಾಗ ಎಷ್ಟೊಂದು ಆಶ್ಚರ್ಯವಾಗಿರಬಹುದು! ಈ ಭೇಟಿಯು ಆನಂದಿತ ಆತಿಥೇಯನಿಗೆ ಒಂದು ಮಹಾ ಆಶೀರ್ವಾದದ್ದಾಗಿತ್ತು ಎಂದು ಲೂಕನು ತೋರಿಸುತ್ತಾನೆ.—19:1-10.
ವೈದ್ಯನೊಬ್ಬನ ಲೇಖನಿಯಿಂದ
ಈ ಸುವಾರ್ತೆಯು ವೈದ್ಯಕೀಯ ಅರ್ಥಗಳುಳ್ಳ ಯಾ ವೈಶಿಷ್ಟತೆಯುಳ್ಳ ಅನೇಕ ಪದಗಳಿಂದ ಯಾ ವಾಕ್ಸರಣಿಗಳಿಂದ ತುಂಬಿದೆ. ಕ್ರೈಸ್ತ ಗ್ರೀಕ್ ಶಾಸ್ತ್ರ ಗ್ರಂಥಗಳ ಇತರ ಬರಹಗಾರರು ಈ ಶಬ್ದಗಳನ್ನು ಉಪಯೋಗಿಸಲೇ ಇಲ್ಲ ಯಾ ವೈದ್ಯಕೀಯ ಅರ್ಥದಿಂದ ಹೇಳಲಿಲ್ಲ. ಆದರೆ ವೈದ್ಯನೊಬ್ಬನ ಲೇಖನಿಯಿಂದ ಮಾತ್ರ ವೈದ್ಯಕೀಯ ಭಾಷೆಯನ್ನು ನಾವು ನಿರೀಕ್ಷಿಸಬಹುದು.
ಉದಾಹರಣೆಗಾಗಿ ಲೂಕನು ಮಾತ್ರವೇ ಪೇತ್ರನ ಅತ್ತೆಗೆ “ಕಠಿಣ ಜ್ವರವಿತ್ತು”(a high fever) (4:38) ಅವನು ಇದನ್ನು ಬರೆದಿದ್ದಾನೆ. “ಮೈಯೆಲ್ಲಾ ಕುಷ್ಟರೋಗ ತುಂಬಿದ್ದ” (5:12) ಇತರ ಬೈಬಲ್ ಲೇಖಕರು ಕುಷ್ಟರೋಗ ಹೇಳಿದರೆ, ಅವರಿಗೆ ಸಾಕಾಗುತಿತ್ತು. ಆದರೆ ವೈದ್ಯನಾದ ಲೂಕನಿಗೆ ಅಲ್ಲ, ಅವನು ಈ ತೀವ್ರ ಸ್ಥಿತಿಗೆ ಮುಟ್ಟಿತ್ತು ಎಂದು ಸೂಚಿಸುತ್ತಾನೆ.
ಪದ್ಧತಿಗಳಲ್ಲಿ ವಿವೇಚನೆ
ಯೇಸುವಿನ ಜನನದ ನಂತರ ಮರಿಯಳು “ಬಟ್ಟೆಯನ್ನು ಸುತ್ತಿದಳು” ಎಂದು ಲೂಕನು ಹೇಳುತ್ತಾನೆ. (2:7) ಪದ್ಧತಿಗನುಗುಣವಾಗಿ ಹೊಸತಾಗಿ ಜನಿಸಿದ ಕೂಸನ್ನು ತೊಳೆದು, ಪ್ರಾಯಶಃ ಚರ್ಮವನ್ನು ಒಣಗಿಸಲು ಮತ್ತು ದೃಢಮಾಡಲು ಉಪ್ಪಿನಿಂದ ಉಜ್ಜುತ್ತಿದ್ದರು. ಅನಂತರ ಕೂಸನ್ನು ಒಂದು ರಕ್ಷಿತ ಶವದೋಪಾದಿ ಬಟ್ಟೆಯಿಂದ ಕಟ್ಟಿ ಸುತ್ತುತ್ತಿದ್ದರು. ಈ ರೀತಿ ಕಟ್ಟುವದರಿಂದ ಶರೀರವು ನೇರವಾಗಿ ಹಾಗೂ ಬೆಚ್ಚಗೆ ಇಡಲ್ಪಡುತ್ತದೆ. ಗಲ್ಲದ ಕೆಳಗೆ ಮತ್ತು ತಲೆಯ ಮೇಲೆ ಸುತ್ತುವದರಿಂದ ಮೂಗಿನ ಮೂಲಕವೇ ಉಸಿರಾಟ ಮಾಡಲು ತರಬೇತಿ ದೊರಕುತ್ತಿದ್ದಿರಬಹುದು. ಬೆತ್ಲೇಹೇಮಿಗೆ ಭೇಟಿ ನೀಡಿದ ಸಂದರ್ಶಕನೊಬ್ಬನು ತದ್ರೀತಿ ಬಟ್ಟೆಕಟ್ಟಿ ಸುತ್ತುವ ಪದ್ಧತಿಯ ಕುರಿತು 19ನೆಯ ಶತಮಾನದ ವರದಿ ಹೇಳುವದು, “ನಾನು ಈ ಚಿಕ್ಕ ಜೀವಿಯನ್ನು ನನ್ನ ಕೈಯಲ್ಲಿ ಹಿಡಿದೆ. ಅವನ ದೇಹವು ಬಗ್ಗದೆ ನೇರವಾಗಿತ್ತು. ಅದನ್ನು ಬಿಳಿ ಮತ್ತು ಕೆನ್ನೀಲಿ ವಸ್ತ್ರಗಳಿಂದ ಬಹಳ ಗಟ್ಟಿಯಾಗಿ ಕಟ್ಟಲಾಗಿತ್ತು. ಅವನ ಕೈಗಳು ಮತ್ತು ಕಾಲುಗಳು ಬಹಳಷ್ಟು ಬಂಧಿಸಲ್ಪಟ್ಟಿದ್ದವು, ಅವನ ತಲೆಯು ಒಂದು ಚಿಕ್ಕ, ನುಣುಪಾದ ಮೆದು ಕೆಂಪು ಶಾಲಿನಿಂದ ಅವನ ಗಲ್ಲದ ಕೆಳಗಡೆ ಮತ್ತು ಹಣೆಯ ಮಧ್ಯದಲ್ಲಿ ಚಿಕ್ಕ ಸುರುಳಿ ಮಾಡಿದ್ದರಿಂದ ಕಟ್ಟಲಾಗಿತ್ತು.
ಲೂಕನ ಸುವಾರ್ತೆಯು ಮೊದಲನೆಯ ಶತಕದ ಶವಸಂಸ್ಕಾರದ ಪದ್ಧತಿಗಳ ಒಳನೋಟವನ್ನು ನಮಗೆ ಕೊಡುತ್ತದೆ. ಯೇಸುವು ನಾಯೀನ ಊರು ಬಾಗಲಿನ ಬಳಿ ಬಂದಾಗ ಅವನು “ಸತ್ತುಹೋಗಿದ್ದ ಒಬ್ಬನನ್ನು ಹೊರಗೆ ತರುತ್ತಿದ್ದರು, ಇವನು ತನ್ನ ತಾಯಿಗೆ (ವಿಧವೆ) ಒಬ್ಬನೇ ಮಗನು” ಮತ್ತು “ಆಕೆಯ ಸಂಗಡ ಗ್ರಾಮಸ್ಥರು ಅನೇಕರಿದ್ದರು.” (7:11,12) ದಫನ ಮಾಡುವಿಕೆಯು ಸಾಮಾನ್ಯವಾಗಿ ನಗರದ ಹೊರಗಡೆ ನಡೆಯಲ್ಪಟ್ಟಿತ್ತು ಮತ್ತು ಸತ್ತವನ ಸ್ನೇಹಿತರು ಶವದೊಟ್ಟಿಗೆ ಸಮಾಧಿಯ ತನಕ ಹೋಗುತ್ತಿದ್ದರು. ಚಟ್ಟವು ಹೆಣೆಗೆಯ ಕೆಲಸದ ದೋಲಿಯಾಗಿದ್ದು, ನಾಲ್ಕು ಬದಿಯಿಂದಲೂ ಬಿದಿರು ಹೊರಗೆ ಬಂದಿದ್ದು, ದಫನದ ನಿವೇಶನಕ್ಕೆ ಮೆರವಣಿಗೆಯಲ್ಲಿ ನಡೆಯುವಾಗ ನಾಲ್ಕು ಪುರುಷರು ತಮ್ಮ ಹೆಗಲ ಮೇಲಿಟ್ಟು ಕೊಂಡೊಯ್ಯುತ್ತಿದ್ದರು.
ಲೂಕನು ದಾಖಲಿಸಿದ ಇನ್ನೊಂದು ಉಪಮೆಯಲ್ಲಿ, ಕಳ್ಳರಿಂದ ಹೊಡೆಯಲ್ಪಟ್ಟ ಒಬ್ಬ ಮನುಷ್ಯನ ಕುರಿತು ಯೇಸುವು ಮಾತಾಡಿದನು. ಒಬ್ಬ ನೆರೆಯವನಾದ ಸಮಾರ್ಯದವನು “ಗಾಯಗಳಲ್ಲಿ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು ಕಟ್ಟಿದನು.”(10:34) ಗಾಯಗಳ ಜಾಗ್ರತೆ ವಹಿಸುವ ಒಂದು ಪದ್ಧತಿ ಇದಾಗಿತ್ತು. ಎಣ್ಣೆ (ಒಲಿವ್)ಯು ಗಾಯಗಳನ್ನು ಮೆದುಮಾಡಿ, ಶಮನಗೊಳಿಸುತ್ತದೆ. (ಯೆಶಾಯ 1:6) ಆದರೆ ದ್ರಾಕ್ಷಾರಸದ ಕುರಿತಾಗಿ ಏನು? ದ ಜರ್ನಲ್ ಆಫ್ ದ ಅಮೆರಿಕನ್ ಮೆಡಿಕಲ್ ಎಸೊಸಿಯೆಶನ್ ಹೇಳುವದು: ಗ್ರೀಸಿನಲ್ಲಿ ದ್ರಾಕ್ಷಾರಸವು ಒಂದು ಮುಖ್ಯ ಮದ್ದಾಗಿತ್ತು. ಕೊಸ್ನ ಹಿಪ್ಪೊಕ್ರೆಟಸ್ (ಸಾ.ಶ.ಪೂ.460-370): . . . ದ್ರಾಕ್ಷಾರಸವನ್ನು ಧಾರಾಳವಾಗಿ ಬಳಸಿದನು, ಅದನ್ನು ಗಾಯಕ್ಕೆ ಕಟ್ಟಲು, ಜ್ವರದವರಿಗೆ ತಂಪಾಗಿರಿಸಲು, ಭೇಧಿ ಮಾಡಿಸಲು ಮತ್ತು ಮೂತ್ರಸ್ರಾವ ಉತ್ತೇಜಕ ವಸ್ತುವಾಗಿಯೂ ಬಳಸಿದನು.” ಯೇಸುವಿನ ಉಪಮೆಯಲ್ಲಿ ಕೊಳೆತವನ್ನು ತಡೆಯುವ ಮತ್ತು ಸೋಂಕು ನಿವಾರಕ ಶಕ್ತಿಯಿರುವ ದ್ರಾಕ್ಷಾರಸದ ಗುಣಗಳು ಮತ್ತು ಗಾಯವನ್ನು ಗುಣಪಡಿಸಲು ಒಲಿವ್ ಎಣ್ಣೆ ಸಹಾಯಮಾಡುವ ಪರಿಣಾಮಕಾರ ಕತೆಯು ತಿಳಿಸಲಾಗಿದೆ. ನಿಜವಾದ ನೆರೆಯವನು ಕರುಣೆಯಿಂದ ವರ್ತಿಸುತ್ತಾನೆಂಬದು ಉಪಮೆಯ ಮುಖ್ಯ ವಿಚಾರ ಎಂಬುದೇನೋ ಸತ್ಯ. ಈ ರೀತಿಯಲ್ಲಿ ಇತರರೊಂದಿಗೆ ನಾವು ವರ್ತಿಸತಕ್ಕದ್ದು.—10:36,37.
ನಮ್ರತೆಯಲ್ಲಿ ಪಾಠಗಳು
ಊಟಕ್ಕೆ ಕರಿಸಿಕೊಂಡವರು ಪಂಕ್ತಿಯಲ್ಲಿ ಮೊದಲನೆಯ ಸ್ಥಾನವನ್ನು ಆರಿಸಿಕೊಳ್ಳುವದನ್ನು ನೋಡಿ ಯೆಸು ಹೇಳಿದ ಸಾಮ್ಯವನ್ನು ಲೂಕನೊಬ್ಬನೇ ಬರೆಯುತ್ತಾನೆ. ಹಬ್ಬದ ಸಮಯದಲ್ಲಿ ಅತಿಥಿಗಳು ಮೇಜಿನ ಮೂರು ಪಕ್ಕಗಳಲ್ಲಿ ಇರಿಸಿದ ದಿಂಬುಗಳಿಗೆ ಒರಗಿ ಕುಳಿತುಕೊಳ್ಳುತ್ತಿದ್ದರು. ವಾಡಿಕೆಯಂತೆ, ಪ್ರತಿಯೊಂದು ದಿಂಬಿನ ಮೇಲೆ ಮೂವರು ವ್ಯಕ್ತಿಗಳು ನಾಲ್ಕನೆಯ ಪಕ್ಕದಲ್ಲಿ ಬಡಿಸುವವರಿಗೆ ಸಮೀಪಿಸಲು ಹಾಗೆಯೇ ಬಿಡಲ್ಪಡುತ್ತಿತ್ತು. ವಾಡಿಕೆಯಂತೆ, ಪ್ರತಿಯೊಂದು ದಿಂಬಿಲ ಮೇಲೆ ಮೂವರು ವ್ಯಕ್ತಿಗಳು ಮೇಜಿಗೆ ಮುಖಮಾಡಿ, ಎಡಮೊಣಕೈ ಮೇಲೆ ಒರಗಿ, ಬಲಕೈಯಿಂದ ಆಹಾರವನ್ನು ತೆಗೆದುಕೊಳ್ಳುತ್ತಿದ್ದರು. ಮೂರು ಸ್ಥಾನಗಳು ಉನ್ನತವಾದ, ಮಧ್ಯಮದ ಹಾಗೂ ಕನಿಷ್ಟದ ದಿಂಬಿನ ಸ್ಥಾನಗಳಲ್ಲಿ ತೋರಿಸಲ್ಪಡುತ್ತಿತ್ತು. ಮೂರನೆಯ ದಿಂಬಿನ ಕನಿಷ್ಟ ಸ್ಥಾನವಿರುವವನಿಗೆ ಊಟದ ಸಾಲಿನಲ್ಲಿ ಕಡೆಯ ಸ್ಥಾನವಿರುತ್ತಿತ್ತು. ಯೇಸುವಂದದ್ದು: “ಯಜಮಾನನು ಊಟಕ್ಕೆ ನಿನ್ನನ್ನು ಕರೆದಾಗ ಕಡೆಯ ಸ್ಥಾನದಲ್ಲಿ ಕೂತುಕೋ; ಹೀಗೆ ಮಾಡಿದರೆ ನಿನ್ನನ್ನು ಕರೆದವನು, “ಇನ್ನೂ ಮೇಲಗೆ ಬಾ” ಅನ್ನುವನು. ಆಗ ಇತರ ಅತಿಥಿಗಳು ಮುಂದೆ ನಿನಗೆ ಗೌರವವುಂಟಾಗುವದು.” (14:7-10) ಹೌದು, ನಮಗಿಂತ ಇತರರನ್ನು ಮುಂದಿನ ಸ್ಥಾನದಲ್ಲಿಡಲು ನಾವು ನಮ್ರತೆಯುಳ್ಳವರಾಗಿರೋಣ. ವಾಸ್ತವದಲ್ಲಿ ಈ ಉದಾಹರಣೆಯನ್ನು ಅನ್ವಯಿಸುತ್ತಾ ಯೇಸುವಂದದ್ದು: “ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಅಂದನು.”—ಲೂಕ 14:11
ನಮ್ರತೆಯನ್ನು ಒತ್ತಿ ಹೇಳುತ್ತಾ ಮತ್ತು ಲೂಕನ ಸುವಾರ್ತೆಯಲ್ಲಿ ಅಸದೃಶವಾಗಿರುವ, ಯೇಸುವಿನ ಉದಾಹರಣೆಯು ಸುಂಕದವನೂ, ಫರಿಸಾಯನೂ ದೇವಾಲಯದಲ್ಲಿ ಪ್ರಾರ್ಥಿಸುವದಾಗಿದೆ. ಇನ್ನಿತರ ಸಂಗತಿಗಳೊಂದಿಗೆ, ಫರಿಸಾಯನು “ತಾನು ವಾರಕ್ಕೆ ಎರಡಾವರ್ತಿ ಉಪವಾಸ ಮಾಡುತ್ತೇನೆ” ಅಂದನು. (18:9-14) ನಿಯಮಶಾಸ್ತ್ರದಲ್ಲಿ ವಾರ್ಷಿಕವಾಗಿ ಒಂದೇ ಉಪವಾಸ ಮಾಡಬೇಕಾಗಿದೆ. (ಯಾಜಕಕಾಂಡ 16:29) ಆದರೆ ಫರಿಸಾಯರು ಉಪವಾಸ ಮಾಡುವುದನ್ನು ಅತೀ ದೂರದ ತನಕ ಕೊಂಡೊಯ್ದರು. ಉದಾಹರಣೆಯಲ್ಲಿ ತಿಳಿಸಲ್ಪಟ್ಟವನು ವಾರದ ಎರಡನೆಯದಿನ ಉಪವಾಸ ಮಾಡುತ್ತಿದ್ದನು. ಯಾಕೆಂದರೆ ಸೀನಾಯ ಬೆಟ್ಟಕ್ಕೆ ಮೋಶೆಯು ಹೋಗಿ ನಿಯಮಗಳ ಎರಡು ಕಲ್ಲು ಹಲಗೆಗಳನ್ನು ಪಡೆದುಕೊಂಡ ಸಮಯ ಅದಾಗಿತ್ತೆಂದು ನಂಬಲಾಗಿದೆ. ಅವನು ವಾರದ ಐದನೆಯ ದಿನ ಬೆಟ್ಟದಿಂದ ಇಳಿದನೆಂದು ತಿಳಿಸಲಾಗಿದೆ. (ವಿಮೋಚನಾಕಾಂಡ 31:18; 32:15-20) ಅವನ ಭಕ್ತಿಯ ರುಜುವಾತಾಗಿ ವಾರಕ್ಕೆ ಎರಡಾವರ್ತಿ ಮಾಡುವ ಉಪವಾಸಗಳನ್ನು ಫರಿಸಾಯನು ಉಲ್ಲೀಖಿಸುತ್ತಾನೆ. ಆದರೆ ಈ ಉದಾಹರಣೆಯು ನಾವು ಸ್ವ-ನೀತಿಯವರಾಗುವ ಬದಲು ವಿನೀತರಾಗಿರಲು ನಡಿಸಬೇಕು.
ಲೂಕನ ಸುವಾರ್ತೆಯ ಈ ರತ್ನಗಳು, ಅವು ಅಸದೃಶವಾದವುಗಳೂ, ಉಪದೇಶಯುಕ್ತವೂ ಆಗಿವೆ ಎಂದು ರುಜುವಾಗುತ್ತದೆ. ಯೇಸುವಿನ ಭೂಜೀವಿತದ ಹೃದಯ ಸ್ಪರ್ಶಿ ಘಟನೆಗಳನ್ನು ಮರುಕಳಿಸಲು ದಾಖಲೆಗಳನ್ನು ಘಟನೆಗಳು ನಮಗೆ ನೆರವಾಗುತ್ತದೆ. ಕೆಲವು ನಿರ್ದಿಷ್ಟ ಪದ್ಧತಿಗಳ ಹಿನ್ನೆಲೆ ಸಮಾಚಾರದಿಂದ ಕೂಡಾ ನಾವು ಪ್ರಯೋಜನ ಪಡೆಯುತ್ತೇವೆ. ನೆಚ್ಚಿನ ವೈದ್ಯನಾದ ಲೂಕನಿಂದ ಬಹಳಷ್ಟು ಉತ್ತಮವಾಗಿ ತನ್ನ ಸುವಾರ್ತೆಯಲ್ಲಿ ಕಲಿಸಲ್ಪಟ್ಟ ಕರುಣೆ ಮತ್ತು ನಮ್ರತೆಯಂತಹ ಪಾಠಗಳನ್ನು ನಾವು ಅನ್ವಯಿಸುವದಾದರೆ, ವಿಶೇಷವಾಗಿ ನಾವು ಆಶೀರ್ವದಿಸಲ್ಪಡುತ್ತೇವೆ.