-
ಅವನನ್ನು ಸೆರೆಹಿಡಿಯಲು ಅಸಫಲರಾದರುಅತ್ಯಂತ ಮಹಾನ್ ಪುರುಷ
-
-
ಯೇಸುವಿನ ಬೋಧನೆಗೆ ಪ್ರತಿವರ್ತನೆ ತೋರಿಸಿದ ಕೆಲವರು, ಹೀಗನ್ನಲು ಆರಂಭಿಸಿದರು: “ನಿಜವಾಗಿ ಈತನು ಬರಬೇಕಾದ ಪ್ರವಾದಿ,” ಮೋಶೆಗಿಂತಲೂ ದೊಡ್ಡವನಾದ ಒಬ್ಬ ಪ್ರವಾದಿ ಬರಲಿರುವನು ಎಂದು ವಾಗ್ದಾನಿಸಿದ್ದನ್ನು ಅವರು ಸೂಚಿಸುತ್ತಿದ್ದಿರಬೇಕು. ಇನ್ನಿತರರು ಹೇಳಿದ್ದು: “ಇವನು ಕ್ರಿಸ್ತನು.” ಆದರೆ ಇತರರು ಪ್ರತಿಭಟಿಸಿದ್ದು: “ಕ್ರಿಸ್ತನು ಗಲಿಲಾಯದಿಂದ ಬರುವದು ಹೇಗೆ? ದಾವೀದನ ಸಂತಾನದಿಂದಲೂ ದಾವೀದನು ಇದ್ದ ಬೇತ್ಲೆಹೇಮೆಂಬ ಗ್ರಾಮದಿಂದಲೂ ಕ್ರಿಸ್ತನು ಬರುವನು ಎಂಬದಾಗಿ ಶಾಸ್ತ್ರದಲ್ಲಿ ಉಂಟಲ್ಲವೇ?”
-
-
ಅವನನ್ನು ಸೆರೆಹಿಡಿಯಲು ಅಸಫಲರಾದರುಅತ್ಯಂತ ಮಹಾನ್ ಪುರುಷ
-
-
ಗಲಿಲಾಯದಿಂದ ಪ್ರವಾದಿಯು ಬರಲಿರುವನು ಎಂದು ಧರ್ಮಶಾಸ್ತ್ರವು ನೇರವಾಗಿ ಹೇಳದಿರುವದಾದರೂ, ಆ ಪ್ರಾಂತ್ಯದಿಂದ ಒಂದು “ದೊಡ್ಡ ಬೆಳಕು” ಕಾಣಿಸಲಿರುವದು ಎಂದು ಹೇಳುವದರಿಂದ ಕ್ರಿಸ್ತನು ಅಲ್ಲಿಂದ ಆಗಮಿಸಲಿದ್ದಾನೆ ಎಂದು ಅವು ತೋರಿಸುತ್ತವೆ. ಇನ್ನೂ ಹೆಚ್ಚಾಗಿ, ಯೇಸುವು ಹಟ್ಟಿದ್ದು ಬೇತ್ಲೆಹೇಮಿನಲ್ಲಿ ಮತ್ತು ಅವನು ದಾವೀದನ ಸಂತಾನದವನಾಗಿದ್ದನು. ಫರಿಸಾಯರಿಗೆ ಇದೆಲ್ಲಾ ಪ್ರಾಯಶಃ ತಿಳಿದಿರುವದಾದರೂ, ಯೇಸುವಿನ ಕುರಿತು ಜನರಲ್ಲಿ ಹಬ್ಬಿರುವ ತಪ್ಪು ಕಲ್ಪನೆಗಳಿಗೆ ಅವರು ಪ್ರಾಯಶಃ ಜವಾಬ್ದಾರರಾಗಿದ್ದರು. ಯೋಹಾನ 7:32-52; ಯೆಶಾಯ 9:1, 2; ಮತ್ತಾಯ 4:13-17.
-