-
‘ಆತನ ಕಾಲ ಇನ್ನೂ ಬಂದಿರಲಿಲ್ಲ’ಕಾವಲಿನಬುರುಜು—2000 | ಸೆಪ್ಟೆಂಬರ್ 15
-
-
17. (ಎ) ಪೆರಿಯದಲ್ಲಿ ಸಾರುತ್ತಿದ್ದಾಗ ಯೇಸು ಯಾವ ತುರ್ತಿನ ಸಂದೇಶವನ್ನು ಪಡೆದುಕೊಳ್ಳುತ್ತಾನೆ? (ಬಿ) ತಾನು ಯಾವ ನಿರ್ಣಯವನ್ನು ತೆಗೆದುಕೊಳ್ಳಬೇಕಾಗಿದೆಯೋ ಅದರ ಉದ್ದೇಶದ ಬಗ್ಗೆ ಹಾಗೂ ಘಟನೆಗಳ ಸಮಯಾವಧಿಯ ಬಗ್ಗೆ ಯೇಸುವಿಗೆ ಚೆನ್ನಾಗಿ ಗೊತ್ತಿದೆ ಎಂಬುದನ್ನು ಯಾವುದು ತೋರಿಸುತ್ತದೆ?
17 ಆ ತುರ್ತಿನ ಸಂದೇಶವನ್ನು, ಲಾಜರನ ಸಹೋದರಿಯರಾಗಿದ್ದ ಮಾರ್ಥ ಹಾಗೂ ಮರಿಯರು ಯೇಸುವಿಗೆ ಕಳುಹಿಸಿರುತ್ತಾರೆ; ಇವರು ಯೂದಾಯದ ಬೇಥಾನ್ಯದಲ್ಲಿ ವಾಸಿಸುತ್ತಿರುತ್ತಾರೆ. “ಸ್ವಾಮೀ, ನಿನ್ನ ಪ್ರಿಯಮಿತ್ರನು ಅಸ್ವಸ್ಥನಾಗಿದ್ದಾನೆ” ಎಂದು ಸಂದೇಶವಾಹಕನು ಹೇಳುತ್ತಾನೆ. ಅದಕ್ಕೆ ಯೇಸು ಉತ್ತರಿಸುವುದು: “ಈ ರೋಗವು ಮರಣಕ್ಕಾಗಿ ಬಂದದ್ದಲ್ಲ; ಇದರಿಂದ ದೇವಕುಮಾರನಿಗೆ ಮಹಿಮೆ ಉಂಟಾಗುವಂತೆ ದೇವರ ಮಹಿಮೆಗೋಸ್ಕರ ಬಂದದ್ದು.” ಈ ಉದ್ದೇಶವನ್ನು ಪೂರೈಸಲಿಕ್ಕಾಗಿಯೇ ಯೇಸು ತಾನಿದ್ದ ಸ್ಥಳದಲ್ಲೇ ಇನ್ನೂ ಎರಡು ದಿನಗಳ ತನಕ ಉಳಿಯುತ್ತಾನೆ. ತದನಂತರ ಅವನು ತನ್ನ ಶಿಷ್ಯರಿಗೆ ಹೇಳುವುದು: “ತಿರಿಗಿ ಯೂದಾಯಕ್ಕೆ ಹೋಗೋಣ.” ಅವನ ಮಾತನ್ನು ನಂಬಲಾರದೆ ಶಿಷ್ಯರು “ಗುರುವೇ, ಯೆಹೂದ್ಯರು ಆಗಲೇ ನಿನ್ನನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದರು; ತಿರಿಗಿ ಅಲ್ಲಿಗೇ ಹೋಗುತ್ತೀಯಾ?” ಎಂದು ಕೇಳುತ್ತಾರೆ. ಆದರೆ, ‘ಹಗಲಿನ ತಾಸುಗಳಲ್ಲಿ’ ಉಳಿದಿರುವ ಸಮಯವು ಅಥವಾ ತನ್ನ ಭೂಶುಶ್ರೂಷೆಗಾಗಿ ದೇವರು ನೇಮಿಸಿರುವ ಕಾಲವು ಕೊನೆಗೊಳ್ಳುತ್ತಿದೆ ಎಂಬುದನ್ನು ಯೇಸು ಅರಿತುಕೊಳ್ಳುತ್ತಾನೆ. ಆದುದರಿಂದ, ತಾನು ಏನು ಮಾಡಬೇಕು ಮತ್ತು ಏಕೆ ಮಾಡಬೇಕು ಎಂಬುದು ಅವನಿಗೆ ಚೆನ್ನಾಗಿ ಗೊತ್ತಿದೆ.—ಯೋಹಾನ 11:1-10.
-
-
‘ಆತನ ಕಾಲ ಇನ್ನೂ ಬಂದಿರಲಿಲ್ಲ’ಕಾವಲಿನಬುರುಜು—2000 | ಸೆಪ್ಟೆಂಬರ್ 15
-
-
21. ಲಾಜರನ ಪುನರುತ್ಥಾನದ ಅದ್ಭುತಕಾರ್ಯವು ಯಾವುದಕ್ಕೆ ಪೀಠಿಕೆಯಾಗಿದೆ?
21 ಹೀಗೆ, ಯೇಸು ಬೇಥಾನ್ಯಕ್ಕೆ ಎರಡು ದಿನ ತಡವಾಗಿ ಹೋಗಿದ್ದರಿಂದ, ಯಾರೊಬ್ಬರೂ ಕಡೆಗಣಿಸಲಾರದಂತಹ ಒಂದು ಅದ್ಭುತಕಾರ್ಯವನ್ನು ಮಾಡಲು ಶಕ್ತನಾದನು. ಅದೇನೆಂದರೆ, ದೇವರಿಂದ ಶಕ್ತಿಪಡೆದವನಾದ ಯೇಸು, ಸತ್ತು ನಾಲ್ಕು ದಿವಸಗಳಾಗಿದ್ದ ಒಬ್ಬ ಮನುಷ್ಯನನ್ನು ಪುನರುತ್ಥಾನಗೊಳಿಸಿದನು. ತುಂಬ ಗೌರವಭರಿತ ಸ್ಥಾನದಲ್ಲಿದ್ದ ಹಿರೀಸಭೆಯವರು ಸಹ ಇದನ್ನು ನೋಡುವಂತೆ ಒತ್ತಾಯಿಸಲ್ಪಟ್ಟರು ಮತ್ತು ಅದ್ಭುತಕಾರ್ಯಗಳನ್ನು ನಡೆಸಿದವನನ್ನು ಕೊಲ್ಲುವ ಸಂಚುಹೂಡಿದರು! ಹೀಗೆ, ಯೇಸುವಿನ ಭೂಶುಶ್ರೂಷೆಯಲ್ಲಾದ ಈ ಬದಲಾವಣೆಗೆ, ಅವನು ಮಾಡಿದ ಈ ಅದ್ಭುತಕಾರ್ಯವು ಒಂದು ಪೀಠಿಕೆಯಾಗಿ ಪರಿಣಮಿಸುತ್ತದೆ. ಅಂದರೆ ಈ ಮುಂಚೆ ‘ಆತನ ಕಾಲ ಇನ್ನೂ ಬಂದಿರಲಿಲ್ಲ,’ ಆದರೆ ಈಗ ‘ಆ ಸಮಯ ಬಂದಿದೆ.’
-