-
ಯೇಸುವನ್ನು ದಂಡನೆಗೊಳಪಡಿಸಿದ ಮಹಾ ಯಾಜಕಕಾವಲಿನಬುರುಜು—2006 | ಜನವರಿ 15
-
-
ಕಾಯಫನು ತನ್ನ ಜೊತೆ ಅಧಿಪತಿಗಳಿಗೆ ಹೀಗೆಂದಾಗ ಅವನ ದುಷ್ಟತನವು ಬಯಲಿಗೆ ಬಂತು: “ನಿಮಗೇನೂ ತಿಳಿಯುವದಿಲ್ಲ; ಜನವೆಲ್ಲಾ ನಾಶವಾಗುವದಕ್ಕಿಂತ ಒಬ್ಬ ಮನುಷ್ಯನು ಜನಕ್ಕೋಸ್ಕರ ಸಾಯುವದು ನಿಮಗೆ ಹಿತವೆಂದು ನೀವು ಆಲೋಚಿಸುವದೂ ಇಲ್ಲ.” ಆ ವೃತ್ತಾಂತವು ಮುಂದುವರಿಸುವುದು: “ಇದನ್ನು ಅವನು ತನ್ನಷ್ಟಕ್ಕೆ ತಾನೇ ಹೇಳಲಿಲ್ಲ; ಆದರೆ ತಾನು ಆ ವರುಷದ ಮಹಾಯಾಜಕನಾಗಿದ್ದದರಿಂದ ದೇವಪ್ರೇರಣೆಯಿಂದ ಮಾತಾಡಿ ಯೇಸು ಆ ಜನಕ್ಕೋಸ್ಕರ ಸಾಯುವದಕ್ಕಿದ್ದನೆಂದು ಹೇಳಿದನು. ಯೇಸು ಆ ಜನಕ್ಕೋಸ್ಕರ ಮಾತ್ರವಲ್ಲದೆ ಚದರಿರುವ ದೇವರ ಮಕ್ಕಳನ್ನು ಒಟ್ಟುಗೂಡಿಸುವದಕ್ಕೆ ಸಹ ಸಾಯುವದಕ್ಕಿದ್ದನು. ಆ ದಿನದಿಂದ [ಯೇಸುವನ್ನು] ಕೊಲ್ಲುವದಕ್ಕೆ ಆಲೋಚಿಸುತ್ತಿದ್ದರು.”—ಯೋಹಾನ 11:49-53.
ಕಾಯಫನಿಗೆ ತಾನಾಡಿದಂಥ ಮಾತುಗಳ ಪೂರ್ಣ ಅರ್ಥ ತಿಳಿದಿರಲಿಲ್ಲ. ಆದರೆ ಅವನು ಮಹಾ ಯಾಜಕನಾಗಿ ಸೇವೆಸಲ್ಲಿಸುತ್ತಿದುದರಿಂದ ಪ್ರವಾದನೆ ನುಡಿದದ್ದು ನಿಜ.b ಯೇಸುವಿನ ಮರಣವು ಉಪಯುಕ್ತವಾಗಿರಲಿತ್ತು, ಆದರೆ ಯೆಹೂದ್ಯರಿಗೆ ಮಾತ್ರ ಅಲ್ಲ. ಅವನ ವಿಮೋಚನಾ ಮೌಲ್ಯದ ಯಜ್ಞವು, ಎಲ್ಲ ಮಾನವಕುಲವನ್ನು ಪಾಪಮರಣಗಳಿಂದ ಬಿಡಿಸುವ ಮಾಧ್ಯಮವಾಗಿರಲಿತ್ತು.
-
-
ಯೇಸುವನ್ನು ದಂಡನೆಗೊಳಪಡಿಸಿದ ಮಹಾ ಯಾಜಕಕಾವಲಿನಬುರುಜು—2006 | ಜನವರಿ 15
-
-
b ಹಿಂದೆ ಯೆಹೋವನು, ಇಸ್ರಾಯೇಲ್ಯರ ಬಗ್ಗೆ ಸತ್ಯಭರಿತ ಪ್ರವಾದನೆಗಳನ್ನು ನುಡಿಯಲು ದುಷ್ಟ ಬಿಳಾಮನನ್ನು ಉಪಯೋಗಿಸಿದ್ದನು.—ಅರಣ್ಯಕಾಂಡ 23:1–24:24.
-