-
“ಯೇಸು . . . ಕೊನೆಯ ವರೆಗೂ ಅವರನ್ನು ಪ್ರೀತಿಸಿದನು”“ನನ್ನನ್ನು ಹಿಂಬಾಲಿಸಿರಿ”
-
-
9 ತನ್ನ ಮರಣದ ದಿನದಂದು, ಯೇಸು ತನ್ನ ಪ್ರೀತಿಪಾತ್ರರ ಆಧ್ಯಾತ್ಮಿಕ ಹಿತಕ್ಷೇಮದ ಕುರಿತು ತನಗಿರುವ ಕಾಳಜಿಯನ್ನು ಮನಃಸ್ಪರ್ಶಿಸುವಂಥ ರೀತಿಯಲ್ಲಿ ತೋರಿಸಿದನು. ಆ ಘಟನೆಯನ್ನು ಚಿತ್ರಿಸಿಕೊಳ್ಳಿ. ಯೇಸು ಯಾತನಾಕಂಭದಲ್ಲಿ ವಿಪರೀತ ನೋವನ್ನು ಅನುಭವಿಸುತ್ತಿದ್ದಾನೆ. ಉಸಿರನ್ನು ಎಳೆದುಕೊಳ್ಳುವುದಕ್ಕಾಗಿ ಅವನು ತನ್ನ ಪಾದಗಳನ್ನು ಒತ್ತಿ ದೇಹವನ್ನು ಮೇಲೆಳೆದುಕೊಳ್ಳಬೇಕಿತ್ತು. ಹಾಗೆ ಮಾಡುವಾಗ, ಚಾವಟಿಯೇಟಿನಿಂದ ಗಾಯಗೊಂಡಿದ್ದ ಬೆನ್ನು ಆ ಯಾತನಾಕಂಭಕ್ಕೆ ಉಜ್ಜಲ್ಪಟ್ಟಿರಬೇಕು. ಮಾತ್ರವಲ್ಲ, ಮೊಳೆ ಜಡಿದು ಉಂಟಾದ ಪಾದದ ಗಾಯವು ದೇಹದ ಭಾರದಿಂದಾಗಿ ಇನ್ನಷ್ಟು ಆಳಕ್ಕೆ ಹರಿದು ಸಹಿಸಲಸಾಧ್ಯವಾದ ನೋವನ್ನು ಉಂಟುಮಾಡಿರಬೇಕು. ಉಸಿರಾಡುವುದು ಕಷ್ಟವಾದ್ದರಿಂದ ಮಾತಾಡುವುದು ಯೇಸುವಿಗೆ ಸುಲಭವಾಗಿರಲಿಲ್ಲ. ಒಂದೊಂದು ಅಕ್ಷರವನ್ನು ನುಡಿಯುವುದೂ ವೇದನಾಮಯವಾಗಿತ್ತು. ಆದರೂ ಕೊನೆ ಉಸಿರೆಳೆಯುವುದರೊಳಗೆ ನೋವನ್ನು ನುಂಗಿ ಅವನು ಮಾತಾಡಿದನು ಮತ್ತು ಅದು ತನ್ನ ತಾಯಿಯಾದ ಮರಿಯಳ ಮೇಲೆ ಅವನಿಟ್ಟಿದ್ದ ಅಪಾರ ಪ್ರೀತಿಯನ್ನು ತೋರಿಸಿಕೊಟ್ಟಿತು. ಅವನು ತನ್ನ ತಾಯಿಯನ್ನು ಹಾಗೂ ಪಕ್ಕದಲ್ಲಿ ನಿಂತಿದ್ದ ಅಪೊಸ್ತಲ ಯೋಹಾನನನ್ನು ನೋಡಿ, ಅಲ್ಲಿರುವವರಿಗೆ ಕೇಳಿಸುವಷ್ಟು ಗಟ್ಟಿಯಾದ ಸ್ವರದಲ್ಲಿ “ಸ್ತ್ರೀಯೇ ನೋಡು! ನಿನ್ನ ಮಗನು!” ಎಂದು ಮರಿಯಳಿಗೆ ಹೇಳಿದನು. ಅನಂತರ ಯೋಹಾನನಿಗೆ, “ನೋಡು! ನಿನ್ನ ತಾಯಿ!” ಎಂದು ಹೇಳಿದನು. (ಯೋಹಾನ 19:26, 27) ಆ ನಂಬಿಗಸ್ತ ಅಪೊಸ್ತಲನು ಮರಿಯಳ ಶಾರೀರಿಕ ಮತ್ತು ಭೌತಿಕ ಅಗತ್ಯಗಳನ್ನು ಮಾತ್ರವಲ್ಲ, ಆಧ್ಯಾತ್ಮಿಕ ಹಿತಾಸಕ್ತಿಯನ್ನೂ ನೋಡಿಕೊಳ್ಳುವನು ಎಂಬುದು ಯೇಸುವಿಗೆ ಚೆನ್ನಾಗಿ ಗೊತ್ತಿತ್ತು.b
-