-
‘ನೀವು ನನ್ನ ಬಗ್ಗೆ ಸಾಕ್ಷಿ ಕೊಡ್ತೀರ’ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
-
-
4. ಅಪೊಸ್ತಲರ ಕಾರ್ಯ ಪುಸ್ತಕವನ್ನ ಲೂಕ ಹೇಗೆ ಆರಂಭಿಸಿದ್ದಾನೆ?
4 ಹಿಂದೆ ಲೂಕ ಪುಸ್ತಕವನ್ನ ಲೂಕ ಬರೆದಾಗ ಥೆಯೊಫಿಲನಿಗೆ ಬರೆದಿದ್ದ. ಅಪೊಸ್ತಲರ ಕಾರ್ಯ ಪುಸ್ತಕನ ಕೂಡ ಅದೇ ವ್ಯಕ್ತಿಗೆ ಬರೆದಿದ್ದಾನೆ.a ಲೂಕ ಪುಸ್ತಕದ ಕೊನೆಯಲ್ಲಿ ದಾಖಲಿಸಿದ ಘಟನೆಗಳ ಸಾರಾಂಶವನ್ನ ಅಪೊಸ್ತಲರ ಕಾರ್ಯ ಪುಸ್ತಕದ ಆರಂಭದಲ್ಲಿ ಕೊಟ್ಟಿದ್ದಾನೆ. ಆದ್ರೆ ಸ್ವಲ್ಪ ಭಿನ್ನವಾದ ಪದಗಳನ್ನ ಬಳಸಿದ್ದಾನೆ ಮತ್ತು ಹೆಚ್ಚಿನ ವಿವರಗಳನ್ನ ಸೇರಿಸಿದ್ದಾನೆ. ಹೀಗೆ ಅಪೊಸ್ತಲರ ಕಾರ್ಯ ಪುಸ್ತಕ ಲೂಕ ಪುಸ್ತಕದ ಮುಂದುವರಿದ ಭಾಗ ಅಂತ ಅವನು ಸ್ಪಷ್ಟಪಡಿಸಿದ್ದಾನೆ.
-
-
‘ನೀವು ನನ್ನ ಬಗ್ಗೆ ಸಾಕ್ಷಿ ಕೊಡ್ತೀರ’ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
-
-
a ಲೂಕ ಪುಸ್ತಕದಲ್ಲಿ ಈ ವ್ಯಕ್ತಿಯನ್ನ “ಮಾನ್ಯ ಥೆಯೊಫಿಲನೇ” ಅಂತ ಲೂಕ ಕರೆದಿದ್ದಾನೆ. (ಲೂಕ 1:1) ಥೆಯೊಫಿಲ ಒಬ್ಬ ಗಣ್ಯ ವ್ಯಕ್ತಿಯಾಗಿದ್ದ, ಆದ್ರೆ ಇನ್ನೂ ಒಬ್ಬ ಕ್ರೈಸ್ತನಾಗಿರಲಿಲ್ಲ ಅನ್ನೋ ಕಾರಣಕ್ಕೆ ಹೀಗೆ ಕರೆದಿರಬಹುದು ಅಂತ ಕೆಲವರು ಹೇಳ್ತಾರೆ. ಆದ್ರೆ ಅಪೊಸ್ತಲರ ಕಾರ್ಯ ಪುಸ್ತಕದಲ್ಲಿ ಲೂಕ ಬರೀ “ಪ್ರೀತಿಯ ಥೆಯೊಫಿಲ” ಅಂತ ಕರೆದಿದ್ದಾನೆ. ಲೂಕ ಪುಸ್ತಕ ಓದಿದ ಮೇಲೆ ಥೆಯೊಫಿಲ ಕ್ರೈಸ್ತನಾಗಿರಬೇಕು, ಹಾಗಾಗಿ ಆ ಗೌರವಸೂಚಕ ಶೈಲಿ ಬಿಟ್ಟು, ಥೆಯೊಫಿಲನನ್ನ ಒಬ್ಬ ಸಹೋದರ ಅನ್ನೋ ಭಾವನೆಯಿಂದ ಕರೆದಿದ್ದಾನೆ ಅನ್ನೋದು ಕೆಲವು ವಿದ್ವಾಂಸರ ಅಭಿಪ್ರಾಯ.
-