-
“ನಾನು ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ”!ಕಾವಲಿನಬುರುಜು—2001 | ಡಿಸೆಂಬರ್ 15
-
-
ಪೌಲನಾದರೋ ಒಂದಾದ ನಂತರ ಇನ್ನೊಂದು ಅಂಶವನ್ನು ಉಪಯೋಗಿಸಿ ತನ್ನನ್ನು ಸಮರ್ಥಿಸಿಕೊಂಡನು. ‘ನಾನು ಯಾವುದೇ ದಂಗೆಯನ್ನು ಎಬ್ಬಿಸಿಲ್ಲ. ಅವರು ಯಾವುದನ್ನು ಒಂದು “ಪಾಷಂಡಮತ”ವೆಂದು ಕರೆಯುತ್ತಾರೋ ಆ ಮತಕ್ಕೆ ನಾನು ಸೇರಿದವನಾಗಿದ್ದೇನೆ ಎಂಬುದು ನಿಜವಾದರೂ, ಒಂದು ಮತಕ್ಕೆ ಸೇರಿರುವುದು ಯೆಹೂದಿ ಆಜ್ಞೆಗಳನ್ನು ಪಾಲಿಸುವುದನ್ನು ಅರ್ಥೈಸುತ್ತದೆ. ಆಸ್ಯಸೀಮೆಯಿಂದ ಬಂದ ಕೆಲವು ಯೆಹೂದ್ಯರು ಈ ರೀತಿಯ ಗೊಂದಲವನ್ನು ಉದ್ರೇಕಿಸಿದರು. ಅವರು ನನ್ನ ವಿರುದ್ಧ ಆಪಾದಿಸಲು ಬಯಸುವಲ್ಲಿ, ತಪ್ಪುಹೊರಿಸುವುದಕ್ಕೆ ಅವರೇ ಇಲ್ಲಿಗೆ ಬರಬೇಕಾಗಿತ್ತು.’ ಬೇಕೆಂದೇ ಪೌಲನು ಆಪಾದನೆಗಳನ್ನು ಯೆಹೂದ್ಯರ ಮಧ್ಯೆ ಇರುವ ಧಾರ್ಮಿಕ ವಾಗ್ವಾದಕ್ಕೆ ಮಾತ್ರ ಸೀಮಿತಗೊಳಿಸಿದನು. ಏಕೆಂದರೆ ಈ ವಿಷಯದಲ್ಲಿ ರೋಮ್ಗೆ ವಿಚಾರಣಾಧಿಕಾರವಿರಲಿಲ್ಲ. ಈಗಾಗಲೇ ಮೊಂಡತನದಿಂದ ವರ್ತಿಸುತ್ತಿರುವ ಯೆಹೂದ್ಯರನ್ನು ಇನ್ನಷ್ಟು ಉದ್ರೇಕಿಸದಿರುವಂತೆ ಎಚ್ಚರಿಕೆ ವಹಿಸುತ್ತಾ, ಇನ್ನೂ ಹೆಚ್ಚಿನ ವಿಚಾರಣೆಯು ನಡೆಯದಂಥ ರೀತಿಯ ಕಾನೂನುಬದ್ಧ ಸನ್ನಿವೇಶವನ್ನು ಕಾರ್ಯತಃ ಜಾರಿಗೆ ತರುವ ಮೂಲಕ ಫೇಲಿಕ್ಸನು ಮೊಕದ್ದಮೆಯನ್ನು ಮುಂದೂಡಿದನು. ತಮಗೆ ವಿಚಾರಣಾಧಿಕಾರವಿದೆ ಎಂದು ವಾದಿಸಿದಂತಹ ಯೆಹೂದ್ಯರ ಕೈಗೂ ಪೌಲನು ಒಪ್ಪಿಸಲ್ಪಡಲಿಲ್ಲ, ರೋಮಿನ ನಿಯಮಕ್ಕನುಸಾರ ನ್ಯಾಯತೀರ್ಪನ್ನೂ ಪಡೆದುಕೊಳ್ಳಲಿಲ್ಲ, ಅಥವಾ ಅವನು ಬಿಡುಗಡೆಯನ್ನೂ ಹೊಂದಲಿಲ್ಲ. ಅಷ್ಟುಮಾತ್ರವಲ್ಲ, ನ್ಯಾಯತೀರ್ಪನ್ನು ನೀಡುವಂತೆ ಫೇಲಿಕ್ಸನನ್ನು ಒತ್ತಾಯಿಸಸಾಧ್ಯವಿರಲಿಲ್ಲ, ಮತ್ತು ಈ ಮೊಕದ್ದಮೆಯನ್ನು ವಿಳಂಬಿಸಲು ಫೇಲಿಕ್ಸನಿಗೆ ಬೇರೆ ಬೇರೆ ಉದ್ದೇಶಗಳಿದ್ದವು. ಮೊದಲನೆಯದಾಗಿ ಅವನು ಯೆಹೂದ್ಯರ ಅನುಗ್ರಹವನ್ನು ಪಡೆದುಕೊಳ್ಳಲು ಬಯಸುತ್ತಿದ್ದನು, ಎರಡನೆಯದಾಗಿ ಪೌಲನು ತನಗೆ ಲಂಚವನ್ನು ಕೊಡಬಹುದೆಂದು ಸಹ ಅವನು ನಿರೀಕ್ಷಿಸುತ್ತಿದ್ದನು.—ಅ. ಕೃತ್ಯಗಳು 24:10-19, 26.b
-
-
“ನಾನು ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ”!ಕಾವಲಿನಬುರುಜು—2001 | ಡಿಸೆಂಬರ್ 15
-
-
b ಇದು ಖಂಡಿತವಾಗಿಯೂ ಕಾನೂನಿಗೆ ವಿರುದ್ಧವಾದದ್ದಾಗಿತ್ತು. ಒಂದು ಮೂಲವು ಹೇಳುವುದು: “ಲೆಕ್ಸ್ ರೆಪೆಟೂನ್ಡಾರಮ್ ಎಂಬ ಹಣಸುಲಿಗೆಮಾಡುವುದರ ಕುರಿತಾದ ನಿಯಮದ ಕಟ್ಟುಪಾಡುಗಳ ಕೆಳಗೆ, ಅಧಿಕಾರ ಅಥವಾ ಆಡಳಿತದ ಸ್ಥಾನದಲ್ಲಿರುವ ಯಾರೇ ಆಗಲಿ, ಒಬ್ಬ ಮನುಷ್ಯನನ್ನು ಬಂಧಿಸಲಿಕ್ಕಾಗಿ ಅಥವಾ ಬಿಡುಗಡೆಮಾಡಲಿಕ್ಕಾಗಿ, ನ್ಯಾಯತೀರ್ಪನ್ನು ನೀಡಲಿಕ್ಕಾಗಿ ಅಥವಾ ನೀಡದಿರಲಿಕ್ಕಾಗಿ, ಇಲ್ಲವೆ ಒಬ್ಬ ಸೆರೆವಾಸಿಯನ್ನು ಬಿಡುಗಡೆಮಾಡಲಿಕ್ಕಾಗಿ ಲಂಚವನ್ನು ಬಯಸುವುದು ಅಥವಾ ಸ್ವೀಕರಿಸುವುದು ಕಟ್ಟುನಿಟ್ಟಾಗಿ ನಿಷೇಧಿಸಲ್ಪಟ್ಟಿತ್ತು.”
-