-
‘ಪವಿತ್ರಶಕ್ತಿಯ ಸಹಾಯದಿಂದ ಅವರು ತುಂಬ ಖುಷಿಯಾಗಿದ್ರು’ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
-
-
5. ಸೈಪ್ರಸ್ ದ್ವೀಪದಲ್ಲಿ ಸಾಕ್ಷಿಕೊಡೋಕೆ ಬಾರ್ನಬ ಸೌಲ ಏನೆಲ್ಲಾ ಮಾಡಿದ್ರು ಅಂತ ವಿವರಿಸಿ.
5 ಬಾರ್ನಬ ಮತ್ತು ಸೌಲ ಅಂತಿಯೋಕ್ಯದಿಂದ ಸೆಲೂಕ್ಯಕ್ಕೆ ನಡ್ಕೊಂಡು ಹೋದ್ರು. ಯಾಕಂದ್ರೆ ಅದು ಅಲ್ಲೇ ಹತ್ರದಲ್ಲಿದ್ದ ಬಂದರು ಪಟ್ಟಣ ಆಗಿತ್ತು. ಆಮೇಲೆ ಸೆಲೂಕ್ಯದಿಂದ ಹಡಗಲ್ಲಿ ಸುಮಾರು 200 ಕಿ.ಮೀ. ದೂರದಲ್ಲಿದ್ದ ಸೈಪ್ರಸ್ ದ್ವೀಪಕ್ಕೆ ಪ್ರಯಾಣ ಮಾಡಿದ್ರು.d ಬಾರ್ನಬ ಸೈಪ್ರಸ್ನವನೇ ಆಗಿದ್ರಿಂದ ತನ್ನ ಸ್ವಂತ ಊರಿನವರಿಗೆ ಸಿಹಿಸುದ್ದಿ ಸಾರೋಕೆ ತುದಿಗಾಲಲ್ಲಿ ಇದ್ದ ಅಂತ ಅನ್ಸುತ್ತೆ. ಅದಕ್ಕೆ ಆ ದ್ವೀಪದ ಪೂರ್ವ ತೀರದಲ್ಲಿನ ಸಲಮೀಸ್ ಅನ್ನೋ ಪಟ್ಟಣಕ್ಕೆ ಬಂದ ತಕ್ಷಣ ಇವರು ಸಮಯ ವ್ಯರ್ಥಮಾಡದೆ “ಯೆಹೂದ್ಯರ ಸಭಾಮಂದಿರಗಳಲ್ಲಿ ದೇವ್ರ ಸಂದೇಶ ಸಾರಿದ್ರು.”e (ಅ. ಕಾ. 13:5) ಇವರು ಸೈಪ್ರಸ್ ದ್ವೀಪದ ಒಂದು ತುದಿಯಿಂದ ಇನ್ನೊಂದು ತುದಿ ತನಕ ಹೆಚ್ಚುಕಮ್ಮಿ 220 ಕಿ.ಮೀ. ನಡ್ಕೊಂಡು ಪ್ರಯಾಣ ಮಾಡಿದ್ರು. ಹೀಗೆ ಹೋಗೋವಾಗ ದಾರಿಯಲ್ಲಿದ್ದ ಮುಖ್ಯ ಪಟ್ಟಣದ ಜನ್ರಿಗೆ ಖಂಡಿತ ಸಿಹಿಸುದ್ದಿ ಸಾರಿರ್ತಾರೆ!
-
-
‘ಪವಿತ್ರಶಕ್ತಿಯ ಸಹಾಯದಿಂದ ಅವರು ತುಂಬ ಖುಷಿಯಾಗಿದ್ರು’ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
-
-
d ಒಂದನೇ ಶತಮಾನದಲ್ಲಿ ಒಂದು ಹಡಗು ದಿನಕ್ಕೆ ಸುಮಾರು 160 ಕಿ.ಮೀ. ದೂರ ಹೋಗ್ತಿತ್ತು. ಅದೂ ಹವಾಮಾನ ಚೆನ್ನಾಗಿದ್ರೆ ಮಾತ್ರ. ಇಲ್ಲಾಂದ್ರೆ ಅಷ್ಟು ದೂರ ಹೋಗೋಕೆ ಇನ್ನೂ ಜಾಸ್ತಿ ಸಮಯ ಹಿಡೀತಿತ್ತು.
-