-
‘ಯೆಹೋವನಿಂದ ಶಕ್ತಿ ಪಡ್ಕೊಂಡು ಧೈರ್ಯವಾಗಿ ಮಾತಾಡಿದ್ರು’ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
-
-
8. (ಎ) ಪೌಲ ಮತ್ತು ಬಾರ್ನಬ ಯಾಕೆ ಇಕೋನ್ಯವನ್ನ ಬಿಟ್ಟು ಹೋದ್ರು? (ಬಿ) ಅವ್ರ ಈ ಮಾದರಿಯಿಂದ ನಾವೇನು ಕಲಿಬಹುದು?
8 ಸ್ವಲ್ಪ ಸಮಯ ಆದ್ಮೇಲೆ, ಇಕೋನ್ಯದ ವಿರೋಧಿಗಳು ಪೌಲ ಮತ್ತು ಬಾರ್ನಬನನ್ನ ಕಲ್ಲೆಸೆದು ಕೊಲ್ಲಬೇಕಂತ ಸಂಚು ಮಾಡಿದ್ರು. ಇದ್ರ ಬಗ್ಗೆ ಈ ಇಬ್ರು ಮಿಷನರಿಗಳಿಗೆ ಗೊತ್ತಾದಾಗ ಅವರು ಬೇರೆ ಜಾಗಕ್ಕೆ ಹೋಗಿ ಸಾರೋಕೆ ತೀರ್ಮಾನ ಮಾಡಿದ್ರು. (ಅ. ಕಾ. 14:5-7) ಇವತ್ತೂ ಪ್ರಚಾರಕರಾದ ನಾವು ಇದೇ ತರ ಮಾಡಿ ನಮಗೆ ವಿವೇಚನೆ ಇದೆ ಅಂತ ತೋರಿಸ್ತೀವಿ. ಜನ್ರು ನಮ್ಮ ಮೇಲೆ ಸುಳ್ಳು ಆರೋಪಗಳನ್ನ ಹಾಕೋವಾಗ ಧೈರ್ಯದಿಂದ ಮಾತಾಡ್ತೀವಿ. (ಫಿಲಿ. 1:7; 1 ಪೇತ್ರ 3:13-15) ಹಾಗಂತ ಅತಿಯಾದ ಧೈರ್ಯ ತೋರಿಸಲ್ಲ. ಏನಾದ್ರೂ ತೊಂದ್ರೆ ಇದೆ ಅಂತ ಗೊತ್ತಾದ್ರೆ ನಮ್ಮ ಮತ್ತು ನಮ್ಮ ಜೊತೆ ಇರೋ ಸಹೋದರ ಸಹೋದರಿಯರ ಪ್ರಾಣಕ್ಕೆ ಅಪಾಯ ಆಗೋಂಥ ಯಾವ ಕೆಲ್ಸನೂ ಮಾಡಲ್ಲ.—ಜ್ಞಾನೋ. 22:3.
-