-
ಅಪೊಸ್ತಲರಂತೆ ಎಚ್ಚರವಾಗಿರಲು ಕಲಿಯಿರಿಕಾವಲಿನಬುರುಜು—2012 | ಜನವರಿ 15
-
-
4, 5. ಪೌಲ ಮತ್ತವನ ಸಂಗಡಿಗರನ್ನು ಪವಿತ್ರಾತ್ಮ ಹೇಗೆ ಮಾರ್ಗದರ್ಶಿಸಿತು?
4 ಮೊದಲನೇ ಪಾಠವೆಂದರೆ ಆ ಅಪೊಸ್ತಲರು ಎಲ್ಲಿ ಸಾರಬೇಕೆಂಬ ಮಾರ್ಗದರ್ಶನೆ ಪಡೆಯಲು ಎಚ್ಚರದಿಂದಿದ್ದರು. ಒಮ್ಮೆ ಪೌಲ ಹಾಗೂ ಅವನ ಸಂಗಡಿಗರು ಸಾರುವ ಪ್ರಯಾಣ ಕೈಗೊಂಡಾಗ ಯೇಸು ಪವಿತ್ರಾತ್ಮದ ಮೂಲಕ ಅವರನ್ನು ಮಾರ್ಗದರ್ಶಿಸಿದನು. (ಅ. ಕಾ. 2:33) ಆ ಪ್ರಯಾಣದ ಮಾರ್ಗವನ್ನು ನಾವೀಗ ಪರಿಶೀಲಿಸೋಣ.—ಅಪೊಸ್ತಲರ ಕಾರ್ಯಗಳು 16:6-10 ಓದಿ.
-
-
ಅಪೊಸ್ತಲರಂತೆ ಎಚ್ಚರವಾಗಿರಲು ಕಲಿಯಿರಿಕಾವಲಿನಬುರುಜು—2012 | ಜನವರಿ 15
-
-
6, 7. (ಎ) ಪೌಲ ಮತ್ತವನ ಸಂಗಡಿಗರು ಬಿಥೂನ್ಯದ ಬಳಿ ಬಂದಾಗ ಏನಾಯಿತು? (ಬಿ) ಆ ಶಿಷ್ಯರು ಯಾವ ನಿರ್ಣಯ ಮಾಡಿದರು? ಫಲಿತಾಂಶವೇನು?
6 ಸಾರಬೇಕೆಂಬ ಹುಮ್ಮಸ್ಸಿದ್ದ ಪೌಲನೂ ಅವನ ಸಂಗಡಿಗರೂ ಮುಂದೆ ಎಲ್ಲಿಗೆ ಪ್ರಯಾಣಿಸಿದರು? ವಚನ 7 ವಿವರಿಸುತ್ತದೆ: “ಅವರು ಮೂಸ್ಯದ ಹತ್ತಿರ ಬಂದಾಗ ಬಿಥೂನ್ಯಕ್ಕೆ ಹೋಗಲು ಪ್ರಯತ್ನಿಸಿದರು. ಆದರೆ ಯೇಸು ಪವಿತ್ರಾತ್ಮದ ಮೂಲಕ ಅವರನ್ನು ಅನುಮತಿಸಲಿಲ್ಲ.” ಏಷ್ಯಾ ಪ್ರಾಂತದಲ್ಲಿ ಸಾರುವುದನ್ನು ಪವಿತ್ರಾತ್ಮ ತಡೆದದ್ದರಿಂದ ಪೌಲ ಮತ್ತು ಅವನ ಸಂಗಡಿಗರು ಈಗ ಉತ್ತರದ ಕಡೆಗೆ ಅಂದರೆ ಬಿಥೂನ್ಯದ ಪಟ್ಟಣಗಳ ಕಡೆಗೆ ಹೋದರು. ಆದರೆ ಬಿಥೂನ್ಯದ ಸಮೀಪಕ್ಕೆ ಬಂದಾಗ ಯೇಸು ಪುನಃ ಪವಿತ್ರಾತ್ಮ ಶಕ್ತಿಯ ಮೂಲಕ ತಡೆದನು. ಇದು ಅವರಲ್ಲಿ ಖಂಡಿತ ಗೊಂದಲ ಮೂಡಿಸಿರಬೇಕು. ಏನನ್ನು ಸಾರಬೇಕು, ಹೇಗೆ ಸಾರಬೇಕು ಎಂದು ಅವರಿಗೆ ತಿಳಿದಿತ್ತು. ಆದರೆ ಎಲ್ಲಿ ಸಾರಬೇಕೆಂದು ತಿಳಿದಿರಲಿಲ್ಲ. ಅವರ ಸನ್ನಿವೇಶವನ್ನು ಹೀಗೆ ವಿವರಿಸಬಹುದು: ಏಷ್ಯಾದ ಕಡೆಗೆ ಹೋಗುವ ಬಾಗಿಲನ್ನು ತಟ್ಟಿದರು—ತೆರೆಯಲಿಲ್ಲ. ಬಿಥೂನ್ಯಕ್ಕೆ ಹೋಗುವ ಬಾಗಿಲನ್ನು ತಟ್ಟಿದರು—ಅದೂ ತೆರೆಯಲಿಲ್ಲ. ಅಷ್ಟಕ್ಕೆ ತಟ್ಟುವುದನ್ನು ನಿಲ್ಲಿಸಿ ಬಿಟ್ಟರಾ? ಇಲ್ಲ. ಅವರು ಹುರುಪಿನ ಸೌವಾರ್ತಿಕರಾಗಿದ್ದರು!
-