ಯೆಹೋವನ ವಾಕ್ಯವು ಪ್ರಬಲವಾಗುತ್ತದೆ !
“ಈ ರೀತಿಯಾಗಿ ಯೆಹೋವನ ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲವಾಯಿತು.”—ಅ.ಕೃತ್ಯಗಳು 19:20.
1. ಬೈಬಲಿನ ಪುಸ್ತಕವಾದ ಅಪೊಸ್ತಲರ ಕೃತ್ಯಗಳ ಅಧ್ಯಯನದಲ್ಲಿ ನಾವೇನನ್ನು ಆವರಿಸಲಿದ್ದೇವೆ?
ಯೆಹೋವನು ಕಾರ್ಯ ಚಟುವಟಿಕೆಯ ಒಂದು ದ್ವಾರವನ್ನು ತೆರೆಯುತ್ತಾನೆ. ವಿಶೇಷವಾಗಿ “ಅನ್ಯಜನರಿಗೆ ಅಪೊಸ್ತಲನಾಗಿದ್ದ” ಪೌಲನ ಮೂಲಕ ಆ ಕೆಲಸವು ನುಗ್ಗುಮೊನೆಯೋಪಾದಿ ಮುಂದುವರಿಯಲಿತ್ತು. (ರೋಮಾಪುರದವರಿಗೆ 11:13) ನಮ್ಮ ಅಪೊಸ್ತಲರ ಕೃತ್ಯಗಳು ಅಭ್ಯಾಸದ ಮುಂದುವರಿಯೋಣವು ಖಂಡಿತವಾಗಿಯೂ ಅವನನ್ನು ರೋಮಾಂಚನಗೊಳಿಸುವ ಮಿಶನೆರಿ ಸಂಚಾರಗಳಲ್ಲಿ ತೊಡಗಿರುವುದನ್ನು ಕಾಣುತ್ತವೆ.—ಅ.ಕೃತ್ಯಗಳು 16:6–19:41.
2. (ಎ) ಸಾ.ಶ. 50 ರಿಂದ ಸಾ.ಶ. 56 ರ ತನಕ ಅಪೊಸ್ತಲ ಪೌಲನು ದೇವಪ್ರೇರಿತ ಬರಹಗಾರನೋಪಾದಿ ಹೇಗೆ ಸೇವೆ ಸಲ್ಲಿಸಿದನು? (ಬಿ) ಪೌಲನ ಮತ್ತು ಇತರರ ಶುಶ್ರೂಷೆಯನ್ನು ದೇವರು ಆಶೀರ್ವದಿಸಿದಂತೆ ಏನು ಸಂಭವಿಸಿತು?
2 ಪೌಲನು ದೇವ ಪ್ರೇರಿತ ಬರಹಗಾರನೂ ಕೂಡಾ ಆಗಿದ್ದನು. ಸುಮಾರು ಸಾ.ಶ. 50 ರಿಂದ ಸಾ.ಶ. 56 ರ ತನಕ, ಅವನು ಕೊರಿಂಥ್ಯದಿಂದ 1 ಮತ್ತು 2 ಥೆಸಲೋನಿಕ, ಆ ನಗರದಿಂದಲೇ ಯಾ ಸಿರಿಯಾದ ಅಂತಿಯೋಕ್ಯದಿಂದ ಗಲಾತ್ಯದವರಿಗೆ, ಎಫೆಸ್ಯದಿಂದ 1 ಕೊರಿಂಥದವರಿಗೆ, ಮಕೆದೋನ್ಯದಿಂದ 2 ಕೊರಿಂಥದವರಿಗೆ ಮತ್ತು ಕೊರಿಂಥ್ಯದಿಂದ ರೋಮಾಪುರದವರಿಗೆ ಪತ್ರಗಳನ್ನು ಬರೆದನು. ದೇವರು ಪೌಲನ ಮತ್ತು ಇತರರ ಶುಶ್ರೂಷೆಯನ್ನು ಆಶೀರ್ವದಿಸಿದಂತೆ “ಈ ರೀತಿಯಲ್ಲಿ ಯೆಹೋವನ ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲವಾಯಿತು.”—ಅ.ಕೃತ್ಯಗಳು 19:20.
ಏಶ್ಯಾದಿಂದ ಯುರೋಪಿಗೆ
3. ಪವಿತ್ರಾತ್ಮದ ಮಾರ್ಗದರ್ಶನದ ಸಂಬಂಧದಲ್ಲಿ ಪೌಲನೂ ಅವನ ಸಂಗಡಿಗರೂ ಹೇಗೆ ಒಂದು ಉತ್ತಮ ಮಾದರಿಯನ್ನು ಇಟ್ಟಿದ್ದಾರೆ?
3 ಪವಿತ್ರಾತ್ಮನ ಮಾರ್ಗದರ್ಶನೆಯನ್ನು ಸ್ವೀಕರಿಸುವುದರಲ್ಲಿ ಪೌಲನೂ ಅವನ ಸಂಗಡಿಗರೂ ಒಂದು ಉತ್ತಮ ಮಾದರಿಯನ್ನು ಇಟ್ಟಿದ್ದಾರೆ. (16:6-10) ಬಹುಶಃ ಕೇಳುವಂತಹ ರೀತಿಯ ಪ್ರಕಟನೆಗಳಲ್ಲಿ, ಸ್ವಪ್ನಗಳಲ್ಲಿ ಯಾ ದರ್ಶನಗಳಲ್ಲಿ, ಆತ್ಮನು ಏಶ್ಯಾ ಸೀಮೆಯಲ್ಲಿ ಮತ್ತು ಬಿಥೂನ್ಯ ಪ್ರಾಂತ್ಯದಲ್ಲಿ ಸುವಾರ್ತೆಯನ್ನು ಸಾರುವುದನ್ನು ತಡೆದನು, ಇಲ್ಲಿ ನಂತರ ಸುವಾರ್ತೆಯು ತಲುಪಿತು. (ಅ.ಕೃತ್ಯಗಳು 18:18-21; 1 ಪೇತ್ರನು 1:1, 2) ಆತ್ಮನು ಆರಂಭದಲ್ಲಿ ಪ್ರವೇಶವನ್ನು ಯಾಕೆ ತಡೆದನು? ಕೆಲಸಗಾರರು ಕೊಂಚವೇ, ಮತ್ತು ಆತ್ಮನು ಅವರನ್ನು ಯುರೋಪಿನ ಹೆಚ್ಚು ಫಲದಾಯಕ ಕ್ಷೇತ್ರಗಳಲ್ಲಿ ಮಾರ್ಗದರ್ಶಿಸುತ್ತಿದ್ದನು. ಅದರಂತೆ ಇಂದೂ ಕೂಡಾ, ಒಂದು ಕ್ಷೇತ್ರದಲ್ಲಿ ಪ್ರವೇಶವು ತಡೆಗಟ್ಟಲ್ಪಟ್ಟರೆ, ಯೆಹೋವನ ಸಾಕ್ಷಿಗಳು ಬೇರೆಡೆಯಲ್ಲಿ ಸಾರುತ್ತಾರೆ, ದೇವರ ಆತ್ಮನು ಅವರನ್ನು ಕುರಿಗಳಂಥಹವರೆಡೆಗೆ ನಡಿಸುತ್ತಾನೆಂಬ ಖಾತ್ರಿ ಅವರಿಗಿದೆ.
4. ಸಹಾಯಕ್ಕಾಗಿ ಮಕೆದೋನ್ಯದ ಮನುಷ್ಯನ ವಿನಂತಿಯ ಪೌಲನಿಗಾದ ದರ್ಶನಕ್ಕೆ ಪ್ರತಿವರ್ತನೆಯೇನು?
4 ಪೌಲನೂ ಅವನ ಸಂಗಡಿಗರೂ ಅನಂತರ ಏಶ್ಯಾ ಮೈನರಿನ ಒಂದು ಪ್ರದೇಶವಾದ ಮೂಸ್ಯವನ್ನು ‘ಸುಮ್ಮನೆ ದಾಟಿ’ ದರು, ಅದು ಒಂದು ಮಿಶನೆರಿ ಕ್ಷೇತ್ರವಾಗಿತ್ತು. ಆದಾಗ್ಯೂ ಒಂದು ದರ್ಶನದಲ್ಲಿ, ಪೌಲನು ಮಕೆದೋನ್ಯದ ಒಬ್ಬ ಮನುಷ್ಯನು ಸಹಾಯಕ್ಕಾಗಿ ಬೇಡುವುದನ್ನು ಕಂಡನು. ಆದುದರಿಂದ ಮಿಶನೆರಿಗಳು ಬಾಲ್ಕನ್ ಪರ್ಯಾಯ ದ್ವೀಪದ ಒಂದು ಪ್ರದೇಶವಾದ ಮಕೆದೋನ್ಯಕ್ಕೆ ತಡಮಾಡದೇ ಹೋದರು. ತದ್ರೀತಿಯಲ್ಲಿ, ಯೆಹೋವನ ಸಾಕ್ಷಿಗಳು ಪವಿತ್ರಾತ್ಮನಿಂದ ಮಾರ್ಗದರ್ಶಿಸಲ್ಪಟ್ಟು, ರಾಜ್ಯ ಘೋಷಕರು ಎಲ್ಲಿ ಹೆಚ್ಚು ಆವಶ್ಯಕವೋ ಅಲ್ಲಿ ಸೇವೆ ಸಲ್ಲಿಸುತ್ತಾರೆ.
5. (ಎ) ಫಿಲಿಪ್ಪಿಯಲ್ಲಿ ಯೆಹೋವನ ವಾಕ್ಯವು ಪ್ರಬಲವಾದದ್ದನ್ನು ಹೇಗೆ ಹೇಳಸಾಧ್ಯವಿದೆ? (ಬಿ) ಲುದ್ಯಳಂತೆ ಅನೇಕ ಆಧುನಿಕ ದಿನಗಳ ಸಾಕ್ಷಿಗಳು ಯಾವ ವಿಧದಲ್ಲಿ ಇದ್ದಾರೆ?
5 ಯೆಹೋವನ ವಾಕ್ಯವು ಮಕೆದೋನ್ಯದಲ್ಲಿ ಪ್ರಬಲವಾಯಿತು. (16:11-15) ಫಿಲಿಪ್ಪಿಯು ರೋಮೀಯ ನಾಗರಿಕರಿಂದ ಅಧಿಕವಾಗಿ ನಿವಾಸಿತವಾದ ಒಂದು ವಸಾಹತು ಆಗಿದ್ದು, ಪ್ರಾಯಶಃ ಅಲ್ಲಿ ಕೊಂಚ ಯೆಹೂದ್ಯರು ಇದ್ದರು ಮತ್ತು ಸಭಾಮಂದಿರವು ಇರಲಿಲ್ಲ. ಆದುದರಿಂದ, ನಗರದ ಹೊರಪ್ರದೇಶದಲ್ಲಿನ ನದೀತೀರದಲ್ಲಿದ್ದ “ಪ್ರಾರ್ಥನೆ ನಡೆಯುವ ಸ್ಥಳ” ಕ್ಕೆ ಸಹೋದರರು ಹೋದರು. ಅಲ್ಲಿ ಕೂಡಿಬಂದವರಲ್ಲಿ ಲುದ್ಯಳೆಂಬ ಸ್ತ್ರೀಯಿದ್ದಳು, ಇವಳು ಬಣ್ಣಹಾಕುವ ಉದ್ಯಮಕ್ಕೆ ಏಶ್ಯಾಮೈನರಿನಲ್ಲಿ ಹೆಸರುವಾಸಿಯಾಗಿದ್ದ ಥುವತೈರದ ಯೆಹೂದಿ ಮತಾಂತರಿಯಾಗಿದ್ದಿರಬಹುದು. ಅವಳು ಧೂಮ್ರವರ್ಣವನ್ನೂ, ವ ಆ ಬಣ್ಣದ ವಸ್ತ್ರ ಗಳನ್ನೂ ಮತ್ತು ಉಡುಪುಗಳನ್ನೂ ಮಾರುತ್ತಿದ್ದಳು. ಲುದ್ಯಳೂ ಅವಳ ಮನೆವಾರ್ತೆಯವರೂ ದೀಕ್ಷಾಸ್ನಾನ ಪಡೆದಾದ ನಂತರ, ಅವಳು ಎಷ್ಟೊಂದು ಕಟ್ಟಕ್ಕರೆಯಿಂದ ಅತಿಥಿ ಸತ್ಕಾರಮಾಡಲು ಒತ್ತಾಯಿಸಿದ್ದಳೆಂದರೆ, ಲೂಕನು ಬರೆದದ್ದು: “ನಮ್ಮನ್ನು ಬೇಡಿಕೊಂಡು ಬರುವಂತೆ ಬಲವಂತ ಮಾಡಿದಳು.” ಅಂಥಹ ಥರಹದ ಸಹೋದರಿಯರಿಗಾಗಿ ನಾವಿಂದು ಕೃತಜ್ಞರಾಗಿದ್ದೇವೆ.
ಸೆರೆಮನೆಯ ಯಜಮಾನನು ವಿಶ್ವಾಸೀಯಾದದ್ದು
6. ಪೈಶಾಚಿಕ ಚಟುವಟಿಕೆಯು ಫಿಲಿಪ್ಪಿಯಲ್ಲಿ ಪೌಲ ಸೀಲರ ಸೆರೆಮನೆವಾಸಕ್ಕೆ ನಡಿಸಿದ್ದು ಹೇಗೆ?
6 ಫಿಲಿಪ್ಪಿಯಲ್ಲಿನ ಆತ್ಮೀಕ ಬೆಳವಣಿಗೆಯಿಂದ ಸೈತಾನನು ಕೋಪಿಷ್ಠನಾಗಿದ್ದಿರಬೇಕು, ಯಾಕಂದರೆ ಅಲ್ಲಿಯ ಪೈಶಾಚಿಕ ಕೃತ್ಯಗಳು ಪೌಲ ಮತ್ತು ಸೀಲರನ್ನು ಸೆರೆಮನೆಗೆ ತಳ್ಳಿದವು. (16:16-24) ಅನೇಕ ದಿನಗಳಿಂದ “ಗಾರುಡಗಾತಿಯಾದ” (ಅಕ್ಷರಶಃ, “ಹೆಬ್ಬಾವಿನ ಆತ್ಮ”) ಒಬ್ಬ ಹುಡುಗಿಯು ಅವರನ್ನು ಹಿಂಬಾಲಿಸಿ ಬರುತ್ತಿದ್ದಳು. ಈ ಪಿಶಾಚಿಯು ವೇಷಧಾರಿ ಪಿತಿಯನ್ ಅಪಾಲೊ ಆಗಿದ್ದಿರಬಹುದು, ಪೈತನ್ ಹೆಸರಿನ ಸರ್ಪವೊಂದನ್ನು ಕೊಂದಿರುವ ಒಬ್ಬ ದೇವನು ಇವನಿದಿರ್ದಬಹುದು. ಕಣಿಹೇಳುವುದರಿಂದ ಈ ಹುಡುಗಿಯು ತನ್ನ ಯಜಮಾನರಿಗೆ ಬಹಳ ಆದಾಯ ತರುತ್ತಿದ್ದಳು. ಯಾಕೆ, ಅವಳು ರೈತರಿಗೆ ಯಾವಾಗ ಬಿತ್ತ ಬೇಕು, ಕನ್ಯೆಯರಿಗೆ ಯಾವಾಗ ಮದುವೆ ಆಗಬೇಕು ಮತ್ತು ಗನಿಕೆಲಸಗಾರರಿಗೆ ಬಂಗಾರಕ್ಕಾಗಿ ಎಲ್ಲಿ ಹುಡುಕ ಬೇಕು ಎಂದು ಹೇಳುತ್ತಿದ್ದಿರ ಬೇಕು ! ಅವಳು ಸಹೋದರರನ್ನು ಹಿಂಬಾಲಿಸುತ್ತಾ, ಕೂಗುತ್ತಿದ್ದಳು: “ಈ ಮನುಷ್ಯರು ಪರಾತ್ಪರ ದೇವರ ದಾಸರು; ನಿಮಗೆ ರಕ್ಷಣೆಯ ಮಾರ್ಗವನ್ನು ಸಾರುತ್ತಿದ್ದಾರೆ.” ಈ ಹೇಳಿಕೆಗಳನ್ನು ಪಿಶಾಚಿಯು ಮಾಡಲು ಕಾರಣ, ಪ್ರಾಯಶಃ ಅವಳ ಭವಿಷದಾಣ್ವಿಗಳು ಕೂಡಾ ದೈವಿಕವಾಗಿ ಪ್ರೇರಿತವಾದವುಗಳು ಎಂದು ತೋರಿಸಿಲಿಕ್ಕಾಗಿರ ಬಹುದು. ಆದರೆ ಯೆಹೋವನ ಮತ್ತು ರಕ್ಷಣೆಯ ಆತನ ಒದಗಿಸುವಿಕೆಗಳನ್ನು ಘೋಷಿಸುವ ಹಕ್ಕು ದೆವ್ವಗಳಿಗೆ ಇಲ್ಲ. ಪೌಲನು ಅವಳ ಕಿರುಕುಳದಿಂದ ಬೇಸರ ಪಟ್ಟು, ಯೇಸುವಿನ ಹೆಸರಿನಲ್ಲಿ ದೆವ್ವವನ್ನು ಬಿಡಿಸಿದನು. ಅವರ ಆದಾಯವು ನಷ್ಟ ಹೊಂದಿತು, ಆದುದರಿಂದ ಹುಡುಗಿಯ ಯಜಮಾನರು ಪೌಲ ಸೀಲರನ್ನು ಎಳೆದುಕೊಂಡು ಹೋಗಿ ಚಾವಡಿಯಲ್ಲಿ ಚಡಿಗಳಿಂದ ಹೊಡಿಸಿದರು. (2 ಕೊರಿಂಥದವರಿಗೆ 11:25) ಅನಂತರ ಅವರನ್ನು ಸೆರೆಮನೆಗೆ ದಬ್ಬಿ ಕಾಲುಗಳಿಗೆ ಕೋಳಗಳನ್ನು ಹಾಕಿಸಿದರು. ಒಬ್ಬನ ಕಾಲುಗಳನ್ನು ದೂರವಾಗಿ ಬೇರ್ಪಡಿಸಿ, ಅತಿಹೆಚ್ಚು ನೋವು ಉಂಟು ಮಾಡಲು ಈ ಸಾಧನಗಳನ್ನು ಬೇಕಾದಂತೆ ಅಳವಡಿಸಬಹುದು.
7. ಫಿಲಿಪ್ಪಿಯಲ್ಲಿ ಹೇಗೆ ಮತ್ತು ಯಾರಿಗೆ ಪೌಲ ಸೀಲರ ಸೆರೆಮನೆವಾಸವು ಆಶೀರ್ವಾದಕ್ಕೆ ನಡಿಸಿತು?
7 ಈ ಸೆರೆಮನೆವಾಸವು ಸೆರೆಮನೆ ಯಜಮಾನನಿಗೆ ಮತ್ತು ಅವನ ಕುಟುಂಬಕ್ಕೆ ಆಶೀರ್ವಾದಕರವಾಗಿ ಪರಿಣಮಿಸಿತು. (16:25-40) ಮಧ್ಯರಾತ್ರಿಯಲ್ಲಿ ಪೌಲ ಸೀಲರು ಪ್ರಾರ್ಥನೆ ಮಾಡುತ್ತಾ, ದೇವರಿಗೆ ಸ್ತುತಿಪದಗಳನ್ನು ಹಾಡುತ್ತಾ ಇದ್ದರು, ದೇವರು ಅವರೊಂದಿಗಿದ್ದಾನೆಂಬ ಖಾತ್ರಿ ಅವರಿಗಿತ್ತು. (ಕೀರ್ತನೆ 42:8) ಪಕ್ಕನೇ, ಒಂದು ಭೂಕಂಪದಿಂದ ಸೆರೆಮನೆಯ ಕದಗಳು ತೆರೆಯಲ್ಪಟ್ಟವು ಮತ್ತು ಮರದ ತೊಲೆಗಳಿಗೋ, ಗೋಡೆಗಳಿಗೋ ಬಿಗಿಯಲ್ಪಟ್ಟ ಎಲ್ಲರ ಬೇಡಿಗಳು ಕಳಚಿ ಬಿದ್ದವು. ಅವನ ಸೆರೆಯಲ್ಲಿದವ್ದರು ಪಾರಾಗಿ ಓಡಿಹೋದರೆಂದು ಎಣಿಸಿ ಸೆರೆಮನೆಯ ಯಜಮಾನನು ಮರಣದಂಡನೆಯ ಭೀತಿಯುಳ್ಳವನಾದನು. ಅವನು ಆತ್ಮಹತ್ಯ ಮಾಡಿಕೊಳ್ಳಬೇಕೆಂದಿರುವಾಗ, ಪೌಲನು ಕೂಗಿ ಹೇಳಿದ್ದು: “ನೀನೇನೂ ಕೇಡುಮಾಡಿಕೊಳ್ಳಬೇಡ, ನಾವೆಲ್ಲರೂ ಇಲ್ಲೇ ಇದ್ದೇವೆ !” ಪೌಲ ಸೀಲರನ್ನು ಹೊರಗೆ ಕರಕೊಂಡು ಬಂದು, ಸೆರೆಮನೆಯ ಯಜಮಾನನು ತಾನೇನು ಮಾಡಬೇಕೆಂದು ಬೇಡಿಕೊಂಡನು. “ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು,” ಎಂಬದು ಉತ್ತರವಾಗಿತ್ತು. ಯೆಹೋವನ ವಾಕ್ಯವನ್ನು ಕೇಳಿದ ನಂತರ, “ಅವನು ತನ್ನ ಮನೆಯವರೆಲ್ಲರ ಸಂಗಡ ತಡಮಾಡದೇ ದೀಕ್ಷಾಸ್ನಾನ ಪಡೆದುಕೊಂಡನು.” ಇದು ಎಂಥಹ ಸಂತೋಷವನ್ನು ತಂದಿರಬೇಕು !
8. ಫಿಲಿಪ್ಪಿಯ ಅಧಿಕಾರಿಗಳು ಯಾವ ಕ್ರಿಯೆಯನ್ನು ಗೈದರು, ಮತ್ತು ಅವರು ಬಹಿರಂಗವಾಗಿ ತಮ್ಮ ತಪ್ಪನ್ನೊಪ್ಪಿಕೊಂಡರೆ ಏನನ್ನು ಸಾಧಿಸಿದಂತಾಗುತ್ತಿತ್ತು?
8 ಮರುದಿನ ಪೌಲ ಸೀಲರನ್ನು ಬಿಟ್ಟು ಬಿಡುವಂತೆ ಅಧಿಪತಿಗಳು ಹೇಳಿಕಳುಹಿಸಿದರು. ಆದರೆ ಪೌಲನು ಹೇಳಿದ್ದು: ‘ಅವರು ವಿಚಾರಣೆ ಮಾಡದೆ ರೋಮಾಪುರದ ಹಕ್ಕುದಾರರಾದ ನಮ್ಮನ್ನು ಎಲ್ಲರ ಮುಂದೆ ಹೊಡಿಸಿ ಸೆರೆಮನೆಯೊಳಗೆ ಹಾಕಿಸಿದರು; ಈಗ ನಮ್ಮನ್ನು ಗುಪ್ತವಾಗಿ ಹೊರಗೆ ಕಳುಹಿಸುತ್ತಾರೋ? ಅವರೇ ಬಂದು ನಮ್ಮನ್ನು ಹೊರಗೆ ಕರಕೊಂಡು ಹೋದರೆ ಸರಿ.’ ಅಧಿಪತಿಗಳು ತಪ್ಪುಗಳನ್ನು ಬಹಿರಂಗವಾಗಿ ಒಪ್ಪಿಕೊಂಡರೆ, ಅವರು ಇತರ ಕ್ರೈಸ್ತರನ್ನು ಹೊಡೆಯಲು ಮತ್ತು ಸೆರೆಮನೆಗೆ ದಬ್ಬಲು ಅವರು ಹಿಂಜರಿಯ ಬಹುದು. ರೋಮಾಪುರದ ನಾಗರಿಕರನ್ನು ಹೊರದಬ್ಬಲು ಶಕ್ಯತೆಯಿಲ್ಲದರ್ದಿಂದ, ಅಧಿಪತಿಗಳು ಬಂದು ಬಿಟ್ಟುಹೋಗುವಂತೆ ಸಹೋದರರನ್ನು ಬೇಡಿಕೊಂಡರು, ಆದರೆ ಅವರು ತಮ್ಮ ಸಹವಿಶ್ವಾಸೀಗಳನ್ನು ಧೈರ್ಯಗೊಳಿಸಿದ ನಂತರವೇ ಹೊರಟು ಹೋದರು. ಅಂತಹ ಆಸಕ್ತಿಯು ಇಂದೂ ಕೂಡಾ ಆಡಳಿತ ಮಂಡಲಿಯ ಸದಸ್ಯರನ್ನು ಮತ್ತು ಇನ್ನಿತರ ಸಂಚರಣಾ ಮೇಲ್ವಿಚಾರಕರನ್ನು ಭೂವ್ಯಾಪಕವಾಗಿರುವ ದೇವಜನರನ್ನು ಸಂದರ್ಶಿಸಲು ಮತ್ತು ಪ್ರೋತ್ಸಾಹಿಸಲು ನಡಿಸುತ್ತದೆ.
ಥೆಸಲೋನಿಕ ಮತ್ತು ಬೆರೋಯದಲ್ಲಿ ಯೆಹೋವನ ವಾಕ್ಯವು ಪ್ರಬಲವಾಗುತ್ತದೆ
9. ಯೆಹೋವನ ಸಾಕ್ಷಿಗಳು ಇಂದೂ ಉಪಯೋಗಿಸುತ್ತಿರುವ ಯಾವ ವಿಧಾನವನ್ನು ಪೌಲನು ಬಳಸಿ, ಮೆಸ್ಸೀಯನು ಬಾಧೆ ಪಟ್ಟು, ಸತ್ತು ಮರಣದಿಂದ ಎದ್ದು ಬರಲಿದ್ದಾನೆಂದು ‘ವಿವರಿಸಿ ರುಜುಪಡಿಸಿದನು’?
9 ಅನಂತರ ಮಕೆದೋನ್ಯದ ರಾಜಧಾನಿ ಮತ್ತು ಮುಖ್ಯ ಸಮುದ್ರ ರೇವು ಆಗಿದ್ದ ಥೆಸಲೋನಿಕದಲ್ಲಿ ದೇವರ ವಾಕ್ಯವು ಪ್ರಬಲಗೊಳ್ಳುತ್ತದೆ. (17:1-9) ಅಲ್ಲಿ ಪೌಲನು ಯೆಹೂದ್ಯರೊಂದಿಗೆ ಯುಕ್ತವಾಗಿ ವಾದಿಸುತ್ತಾ ಮೆಸ್ಸೀಯನು ಬಾಧೆಯನ್ನನುಭವಿಸಿ ಸತ್ತು ಎದ್ದು ಬರುವುದು ಅಗತ್ಯ ಎಂದು “ವಿವರಿಸುತ್ತಾ, ಸ್ಥಾಪಿಸಿದನು.”[NW] (ಯೆಹೋವನ ಸಾಕ್ಷಿಗಳು ಇಂದು ಮಾಡುವಂತೆ, ಪೌಲನು ನೆರವೇರಿರುತ್ತಿರುವ ಘಟನೆಗಳೊಂದಿಗೆ ಪ್ರವಾದನೆಗಳನ್ನು ತುಲನೆಮಾಡುತ್ತಾ ಇದನ್ನು ಮಾಡಿದನು.) ಈ ರೀತಿ ಕೆಲವು ಯೆಹೂದ್ಯರು ಮತ್ತು ಬಹುಮಂದಿ ಅನ್ಯಜನಮತಾಂತರಿಗಳು ಮತ್ತು ಇನ್ನಿತರರು ಕೂಡಾ ವಿಶ್ವಾಸೀಗಳಾದರು. ಹೊಟ್ಟೇಕಿಚ್ಚು ಪಡುವ ಕೆಲವು ಯೆಹೂದ್ಯರು ಗಂಪುಕೂಡಿಸಿ, ಪೌಲ ಸೀಲರನ್ನು ಕಂಡುಕೊಳ್ಳಲು ಅಸಮರ್ಥರಾದಾಗ, ಯಾಸೋನನನ್ನೂ, ಇತರ ಸಹೋದರರನ್ನೂ ಊರಿನ ಅಧಿಕಾರಿಗಳ ಮುಂದೆ ಕೊಂಡೊಯ್ದು, ದೇಶದ್ರೋಹದ ಆಪಾದನೆಯನ್ನು ಹೊರಿಸಿದರು, ಸುಳ್ಳಾದ ಆರೋಪಣೆ ಯೆಹೋವನ ಜನರ ವಿರುದ್ಧ ಇಂದೂ ಕೂಡಾ ಹೊರಿಸಲಾಗುತ್ತಿದೆ. ಆದಾಗ್ಯೂ, “ಸಾಕಷ್ಟು ಹೊಣೆ ತೆಗೆದುಕೊಂಡ ನಂತರ” ಸಹೋದರರನ್ನು ಬಿಡುಗಡೆ ಮಾಡಲಾಯಿತು.
10. ಯಾವ ಅರ್ಥದಲ್ಲಿ ಬೆರೋಯದ ಯೆಹೂದ್ಯರು ಶಾಸ್ತ್ರ ಗ್ರಂಥಗಳನ್ನು ‘ಜಾಗರೂಕತೆಯಿಂದ ಶೋಧಿಸುತ್ತಿದ್ದರು’?
10 ಪೌಲ ಸೀಲರು ಅನಂತರ ಬೆರೋಯ ನಗರಕ್ಕೆ ಹೋದರು. (17:10-15) ಅಲ್ಲಿ ಯೆಹೂದ್ಯರು ಶಾಸ್ತ್ರ ಗ್ರಂಥಗಳನ್ನು ‘ಜಾಗರೂಕತೆಯಿಂದ ಪರೀಕ್ಷಿಸುತ್ತಿದ್ದರು.’ ಇದನ್ನೇ ಮಾಡುವಂತೆ ಇಂದು ಯೆಹೋವನ ಸಾಕ್ಷಿಗಳು ಜನರಿಗೆ ಪ್ರೋತ್ಸಾಹಿಸುತ್ತಾರೆ. ಬೆರೋಯದವರು ಪೌಲನಲ್ಲಿ ಸಂದೇಹಪಡಲಿಲ್ಲ, ಆದರೆ ಯೇಸುವು ಮೆಸ್ಸೀಯನೆಂದು ರುಜುಪಡಿಸಲು ಅವರು ಸಂಶೋಧನೆ ಮಾಡುತ್ತಿದ್ದರು. ಫಲಿತಾಂಶ? ಬಹು ಮಂದಿ ಯೆಹೂದ್ಯರೂ, ಕೆಲವು ಮಂದಿ ಗ್ರೀಕರೂ (ಪ್ರಾಯಶಃ ಮತಾಂತರಿಗಳಾಗಿರಬಹುದು) ವಿಶ್ವಾಸೀಗಳಾದರು. ಥೆಸಲೋನಿಕದ ಯೆಹೂದ್ಯರು ಜನರ ಗುಂಪುಗಳನ್ನು ರೇಗಿಸಿ ಕಲಕಿದಾಗ, ಸಹೋದರರು ಪೌಲನನ್ನು ಸಮುದ್ರತೀರದ ತನಕ ಜತೆಯಲ್ಲಿ ಹೋಗಿ ಸಾಗಕಳುಹಿಸಿದರು, ಅವನ ತಂಡದ ಕೆಲವರು ಅಥೇನೆಯದ ರೇವುಪಟ್ಟಣವಾದ ಪೈರಾಯುಸ್ (ಆಧುನಿಕ ದಿನಗಳ ಪಿರೈವಿಸ್) ನಲ್ಲಿ ಹಡಗನ್ನು ಏರಿರಬಹುದು.
ಯೆಹೋವನ ವಾಕ್ಯವು ಅಥೇನೆನಲ್ಲಿ ಪ್ರಬಲವಾಗುತ್ತದೆ
11. (ಎ) ಅಥೇನೆನಲ್ಲಿ ಪೌಲನು ಧೈರ್ಯದಿಂದ ಸಾಕ್ಷಿ ನೀಡಿದ್ದು ಹೇಗೆ, ಆದರೆ ಯಾರು ಅವನೊಡನೆ ವಾದಿಸಿದರು? (ಬಿ) ಪೌಲನು ಒಬ್ಬ “ಮಾತಾಳಿ” ಎಂದು ಹೇಳುವುದರಿಂದ ಕೆಲವರು ಯಾವ ತಾತ್ಪರ್ಯದಿಂದ ಹೇಳಿದ್ದರು?
11 ಅಥೇನೆನಲ್ಲಿ ಒಂದು ನಿರ್ಭೀತಿಯ ಸಾಕ್ಷಿಯು ಕೊಡಲ್ಪಟ್ಟಿತು. (17:16-21) ಯೇಸುವಿನ ಮತ್ತು ಪುನರುತ್ಥಾನದ ವಿಷಯದಲ್ಲಿ ಪೌಲನ ಮಾತುಗಳ ಕಾರಣ ತತ್ವವಿಚಾರಕರು ಅವನೊಂದಿಗೆ ಚರ್ಚಾಸ್ಪದ ರೀತಿಯಲ್ಲಿ ಮಾತಾಡಿದರು. ಕೆಲವರು ಸುಖಭೋಗಗಳನ್ನು ಒತ್ತಿ ಹೇಳುವ ಎಪಿಕೂರಿಯನರು. ಇತರರು ಜಿತೇಂದ್ರಿಯತೆಯನ್ನು ಒತ್ತಿ ಹೇಳುವ ಸ್ತೋಯಿಕರು. ‘ಈ ಮಾತಾಳಿ ಏನು ಹೇಳಬೇಕೆಂದಿದ್ದಾನೆ?’ ಪ್ರಶ್ನಿಸಿದರು ಕೆಲವರು. “ಮಾತಾಳಿ” (ಅಕ್ಷರಶಃ “ಬೀಜಗಳನ್ನು ಹೆಕ್ಕುವವನು”) ಅಂದರೆ ಪೌಲನು ಬೀಜಗಳನ್ನು ಹೆಕ್ಕುವ ಒಂದು ಪಕ್ಷಿಯೋಪಾದಿ ಇದ್ದು ಜ್ಞಾನದ ತುಣುಕುಗಳನ್ನು ಪಡಿಭಿಕ್ಷದೋಪಾದಿ ನೀಡುತ್ತಾನಾದರೂ, ವಿವೇಕರಹಿತನಾಗಿದ್ದಾನೆ ಎನ್ನುವುದು ಒಳಗೂಡಿತ್ತು. ಇತರರು ಅಂದದ್ದು: “ಇವನು ಅನ್ಯದೇಶದ ದೈವಗಳನ್ನು ಪ್ರಸಿದ್ಧಿ ಪಡಿಸುವವನಾಗಿದ್ದಾನೆ.” ಇದು ಗಂಭೀರವಾದದ್ದು, ಯಾಕಂದರೆ ಸೊಕ್ರ್ಯಾಟಿಕಸನು ಅಂತಹ ಆಪಾದನೆಯಿಂದಲೇ ತನ್ನ ಜೀವ ಕಳಗೊಂಡಿದ್ದನು. ಬಲುಬೇಗನೇ ಪೌಲನನ್ನು ಅರಿಯೊಪಾಗಕ್ಕೆ (ಮಾರ್ಸ್ ಬೆಟ್ಟ) ಕೊಂಡೊಯ್ಯುತ್ತಾರೆ, ಇದು ಅಕ್ರಾಪೊಲಿಸನ ಸಮೀಪದಲ್ಲಿ ಸೇರುತ್ತಿದ್ದ ತೆರೆದ ವಾತಾವರಣದಲ್ಲಿನ ವರಿಷ್ಠ ನ್ಯಾಯಾಲಯವಾಗಿದ್ದಿರಬಹುದು.
12. (ಎ) ಅರಿಯೊಪಾಗದ ಪೌಲನ ಭಾಷಣದಲ್ಲಿ ಯಾವ ಉತ್ತಮ ಬಹಿರಂಗ ಮಾತಾಡುವ ಲಕ್ಷಣಗಳು ಕಂಡುಬಂದವು? (ಬಿ) ದೇವರ ಕುರಿತು ಪೌಲನು ಯಾವ ವಿಷಯಗಳನ್ನು ಹೇಳಿದನು ಮತ್ತು ಯಾವ ಫಲಿತಾಂಶಗಳೊಂದಿಗೆ?
12 ಅರಿಯೊಪಾಗದ ಪೌಲನ ಭಾಷಣವು ಒಂದು ಪರಿಣಾಮಕಾರೀ ಪೀಠಿಕೆ, ತರ್ಕಬದ್ಧವಾದ ವಿಕಸನ ಮತ್ತು ಮನವರಿಕೆ ಮಾಡುವ ವಾದಸರಣಿ ಇದ್ದು ಕೊಂಡು, ಒಂದು ಶ್ರೇಷ್ಠತಮ ಉದಾಹರಣೆಯಾಗಿದೆ—ಇದನ್ನೇ ಯೆಹೋವನ ಸಾಕ್ಷಿಗಳ ದೇವಪ್ರಭುತ್ವ ಶಾಲೆಯಲ್ಲಿ ಕಲಿಸಲಾಗುತ್ತದೆ. (17:22-34) ಇತರರಿಗಿಂತ ಅಥೇನೆಯರರು ಹೆಚ್ಚು ಧಾರ್ಮಿಕತೆಯುಳ್ಳವರೆಂದು ಅವನು ಹೇಳಿದನು. ಯಾಕೆ, ಪ್ರಾಯಶಃ ಯಾವುದೇ ದೇವರನ್ನು ಅವಗಣಿಸದೇ ಇರಲಿಕ್ಕಾಗಿ, ಅವರಲ್ಲಿ “ತಿಳಿಯದ ದೇವರಿಗೆ” ಎಂದಿರುವ ಒಂದು ಬಲಿಪೀಠವೂ ಇತ್ತು ! ಪೌಲನು “ಒಬ್ಬ ಮನುಷ್ಯನಿಂದ ಎಲ್ಲಾ ಜನಾಂಗದವರನ್ನು ಹುಟ್ಟಿಸಿದ” ಮತ್ತು “ಅವರವರು ಇರತಕ್ಕ ಕಾಲಗಳನ್ನೂ ಮೇರೆಗಳನ್ನೂ ನಿಷ್ಕರ್ಷಿಸಿದ” ನಿರ್ಮಾಣಿಕನ ಕುರಿತಾಗಿ ಮಾತಾಡಿದನು. ಕಾನಾನ್ಯರನ್ನು ಯಾವಾಗ ಕಿತ್ತೆಸೆಯಬೇಕು ಎಂಬದು ಒಂದು ಉದಾಹರಣೆಯಾಗಿದೆ. (ಆದಿಕಾಂಡ 15:13-21; ದಾನಿಯೇಲ 2:21; 7:12) ಈ ದೇವರು, ಹುಡುಕಿದರೆ ಸಿಗುತ್ತಾನೆ, ಯಾಕಂದರೆ “ನಾವು ಅವನ ಸಂತಾನದವರಾಗಿದ್ದೇವೆ,” ಎಂದನು ಪೌಲನು, ಯೆಹೋವನಿಂದ ಮನುಷ್ಯರ ನಿರ್ಮಾಣ ಮತ್ತು ಅವರ ಕವಿಗಳಾದ ಅರಾಟಸ್ ಮತ್ತು ಕ್ಲಿಂತೆಸ್ ರನ್ನು ಉಲ್ಲೇಖಿಸುತ್ತಾ ಪ್ರಾಸಂಗಿಕವಾಗಿ ಹೇಳಿದನು. ದೇವರ ಸಂತಾನದವರೋಪಾದಿ, ಪರಿಪೂರ್ಣನಾದ ನಿರ್ಮಾಣಿಕನು ಅಪರಿಪೂರ್ಣನಾದ ಮಾನವನು ರಚಿಸುವ ವಿಗ್ರಹಕ್ಕೆ ಸಮಾನನಾಗಿ ಭಾವಿಸಬಾರದು. ಒಮ್ಮೆ ದೇವರು ಅಂಥಹ ಅಜ್ಞಾನಕಾಲಗಳನ್ನು ಲಕ್ಷ್ಯಕ್ಕೆ ತರಲಿಲ್ಲವಾದರೂ, ಈಗ ಅವನು ಮಾನವರು ಪಶ್ಚಾತ್ತಾಪ ಪಡಬೇಕೆಂದು ಹೇಳುತ್ತಾನೆ ಯಾಕಂದರೆ ಅವನ ನೇಮಿತನಾದವನಿಂದ ಜನರ ನ್ಯಾಯವಿಚಾರಣೆಗಾಗಿ ಒಂದು ದಿನವನ್ನು ನಿಷ್ಕರ್ಷಿಸಿದ್ದಾನೆ. ಪೌಲನು “ಯೇಸುವಿನ ಸುವಾರ್ತೆಯನ್ನು ಘೋಷಿಸುತ್ತಿದ್ದುದರಿಂದ” ಅವನ ಸಭಿಕರಿಗೆ ಆ ನ್ಯಾಯಾಧಿಪತಿಯು ಕ್ರಿಸ್ತನೆಂಬ ಅರ್ಥದಲ್ಲಿ ಅವನು ಹೇಳುತ್ತಾನೆಂದು ತಿಳಿದಿತ್ತು. (ಅ.ಕೃತ್ಯಗಳು 17:18; ಯೋಹಾನ 5:22, 30) ಪಶ್ಚಾತ್ತಾಪದ ಮಾತು ಎಪಿಕೂರಿಯನ್ರಿಗೆ ಬೇಸರ ಹಿಡಿಸಿದರೆ, ಗ್ರೀಕ್ ತತ್ವಜ್ಞಾನಿಗಳು ಅಮರತ್ವದ ಕುರಿತು ಒಪ್ಪಿಕೊಳ್ಳುವುದಾದರೂ, ಮರಣ ಮತ್ತು ಪುನರುತ್ಥಾನವನ್ನಲ್ಲ. ಆದುದರಿಂದ ಇಂದು ಅನೇಕರು ಸುವಾರ್ತೆಯನ್ನು ಔದಾಸೀನ್ಯತೆಯಿಂದ ನೋಡುವಂತೆ, ಕೆಲವರಂದರು: ‘ಇನ್ನೊಮ್ಮೆ ನಾವು ಕೇಳುತ್ತೇವೆ.’ ಆದರೆ ನ್ಯಾಯಾಧಿಪತಿಯಾದ ದಿಯೊನುಸ್ಯನೂ ಮತ್ತು ಇನ್ನಿತರ ಕೆಲವರೂ ವಿಶ್ವಾಸೀಗಳಾದರು.
ಕೊರಿಂಥದಲ್ಲಿ ದೇವರ ವಾಕ್ಯವು ಪ್ರಬಲವಾಗುತ್ತದೆ
13. ಶುಶ್ರೂಷೆಯಲ್ಲಿ ಪೌಲನು ತನ್ನನ್ನು ಪೋಷಿಸಿ ಕೊಂಡದ್ದು ಹೇಗೆ, ಮತ್ತು ಅಧುನಿಕ ದಿನಗಳ ಯಾವ ತುಲನೆಗಳನ್ನು ನಾವು ಕಾಣುತ್ತೇವೆ?
13 ಅಖಾಯ ಪ್ರಾಂತ್ಯದ ರಾಜಧಾನಿಯಾದ ಕೊರಿಂಥಕ್ಕೆ ಪೌಲನು ಹೋದನು. (18:1-11) ಅಲ್ಲಿ ಅವನು ಅಕ್ವಿಲನನ್ನೂ ಪ್ರಿಸ್ಕಿಲ್ಲಳನ್ನೂ ಕಂಡನು, ರೋಮೀಯ ನಾಗರಿಕರಲ್ಲದವರು ರೋಮಾಪುರವನ್ನು ಬಿಟ್ಟು ಹೋಗಬೇಕೆಂದು ಕೌದ್ಲಿಯ ಕೈಸರನು ಯೆಹೂದ್ಯರಿಗೆ ವಿಧಿಸಿದ ಕಾರಣ ಇವರು ಇಲ್ಲಿ ಬಂದಿದ್ದರು. ಅವನು ಶುಶ್ರೂಷೆಯಲ್ಲಿ ಸ್ವತಃ ಪೋಷಿಸಿಕೊಳ್ಳಲು, ಪೌಲನು ಈ ಕ್ರೈಸ್ತ ದಂಪತಿಗಳೊಂದಿಗೆ ಸೇರಿ ಗುಡಾರಗಳನ್ನು ಮಾಡುತ್ತಿದ್ದನು. (1 ಕೊರಿಂಥದವರಿಗೆ 16:19; 2 ಕೊರಿಂಥದವರಿಗೆ 11:9) ಕತ್ತರಿಸುವುದು ಮತ್ತು ಕಠಿಣ ಆಡಿನ-ಕೂದಲುಗಳಿಂದ ವಸ್ತ್ರ ವನ್ನು ಹೊಲಿಯುವುದು ಕಷ್ಟದ ದುಡಿತವಾಗಿತ್ತು. ತದ್ರೀತಿಯಲ್ಲಿ ಯೆಹೋವನ ಸಾಕ್ಷಿಗಳು ತಮ್ಮ ಲೌಕಿಕ ಕೆಲಸಗಳಿಂದ ಅವರು ಐಹಿಕ ಆವಶ್ಯಕತೆಯನ್ನು ಪೂರೈಸಿಕೊಳ್ಳುವಾಗ, ಅವರ ದೈವಪ್ರೇರಣೆಯ ಮುಖ್ಯಕೆಲಸ ಶುಶ್ರೂಷೆಯಾಗಿತ್ತು.
14. (ಎ) ಕೊರಿಂಥ್ಯದ ಯೆಹೂದ್ಯರಿಂದ ಅವಿರತ ವಿರೋಧವನ್ನು ಎದುರಿಸಿದಾಗ, ಪೌಲನೇನು ಮಾಡಿದನು? (ಬಿ) ಪೌಲನು ಕೊರಿಂಥ್ಯದಲ್ಲಿಯೇ ನಿಲ್ಲಬೇಕೆಂದು ಅವನಿಗೆ ಯಾವ ಆಶ್ವಾಸನೆ ಕೊಡಲ್ಪಟ್ಟಿತು?
14 ಪೌಲನು ಯೇಸುವಿನ ಮೆಸ್ಸೀಯತನವನ್ನು ಸಾಕ್ಷಿಹೇಳುವುದನ್ನು ಮುಂದುವರಿಸಿದಷ್ಟಕ್ಕೇ ಕೊರಿಂಥದ ಯೆಹೂದ್ಯರು ಅವನನ್ನು ಎದುರಿಸಿ ದೂಷಿಸಲಾರಂಭಿಸಿದರು. ಆದುದರಿಂದ ಅವನು ತನ್ನ ವಸ್ತ್ರ ಗಳನ್ನು ಝಾಡಿಸುತ್ತಾ ಅವರೆಡೆಗಿನ ತನ್ನ ಜವಾಬ್ದಾರಿಯ ಅನಂಗೀಕಾರವನ್ನು ತೋರಿಸಿದನು, ಮತ್ತು ಪ್ರಾಯಶಃ ರೋಮೀಯನಾಗಿರುವ ತೀತಯುಸ್ತನ ಮನೆಯಲ್ಲಿ ಕೂಟಗಳನ್ನು ಆರಂಭಿಸಿದನು. ಹಲವರು (ಸಭಾಮಂದಿರದ ಮಾಜೀ ಅಧ್ಯಕ್ಷನಾಗಿದ್ದ ಕ್ರಿಸ್ಪನೂ, ಅವನ ಮನೆಯವರೆಲ್ಲರೂ ಸಹಿತ) ಸ್ನಾತ ವಿಶ್ವಾಸೀಗಳಾದರು. ಯೆಹೂದ್ಯರ ವಿರೋಧವು ಕೊರಿಂಥದಲ್ಲಿ ತಾನು ನಿಲ್ಲುವುದರ ಔಚಿತ್ಯತೆಯ ಕುರಿತು ಯೋಚಿಸುತ್ತಿದ್ದರೆ, ದರ್ಶನವೊಂದರಲ್ಲಿ ಕರ್ತನು ಹೇಳಿದಾಗ ಅದು ಮಾಯವಾಯಿತು: ‘ನೀನು ಹೆದರಬೇಡ; ಸುಮ್ಮನಿರದೆ ಮಾತಾಡುತ್ತಲೇ ಇರು, ನಾನೇ ನಿನ್ನೊಂದಿಗಿದ್ದೇನೆ; ಯಾರೂ ನಿನಗೆ ಕೇಡು ಮಾಡುವುದಿಲ್ಲ, ಈ ಪಟ್ಟಣದಲ್ಲಿ ನನಗೆ ಬಹಳ ಮಂದಿ ಇದ್ದಾರೆ.’ ಆದುದರಿಂದ ಪೌಲನು ದೇವರ ವಾಕ್ಯವನ್ನು ಅಲ್ಲಿ ಕಲಿಸುತ್ತಾ, ಒಟ್ಟಿಗೆ ಒಂದೂವರೆ ವರ್ಷಗಳಷ್ಟು ಇದ್ದನು. ಯೆಹೋವನ ಜನರು ಇಂದು ಅಂಥಹ ದರ್ಶನಗಳನ್ನು ಪಡೆಯುತ್ತಿಲ್ಲವಾದರೂ ರಾಜ್ಯಾಭಿರುಚಿಗಳಿಗೆ ಪರಿಣಾಮ ತರುವ ತದ್ರೀತಿಯ ವಿವೇಕಯುಕ್ತ ತೀರ್ಮಾನಗಳನ್ನು ಮಾಡಲು ಪ್ರಾರ್ಥನೆ ಮತ್ತು ಪವಿತ್ರಾತ್ಮನ ಮಾರ್ಗದರ್ಶನೆಯು ಅವರಿಗೆ ಸಹಾಯ ಮಾಡುತ್ತದೆ.
15. ಅಧಿಪತಿಯಾದ ಗಲ್ಲಿಯೋನನ ಮುಂದೆ ಕೊಂಡೊಯ್ಯಲ್ಪಟ್ಟಾಗ ಏನು ಸಂಭವಿಸಿತು?
15 ಯೆಹೂದ್ಯರು ಪೌಲನನ್ನು ಅಧಿಪತಿಯಾದ ಗಲ್ಲಿಯೋನನ ಬಳಿಗೆ ಕೊಂಡೊಯ್ದರು. (18:12-17) ಪೌಲನು ಅಕ್ರಮವಾಗಿ ಧರ್ಮಪ್ರಸಾರ ಮಾಡುತ್ತಾನೆ ಎಂದವರ ಆಪಾದನೆಯ ತಾತ್ಪರ್ಯವಾಗಿತ್ತು—ಯೆಹೋವನ ಸಾಕ್ಷಿಗಳ ವಿರುದ್ಧ ಈಗಲೂ ಗ್ರೀಕ್ ಪಾದ್ರಿಗಳು ಮಾಡುವ ಸುಳ್ಳಾರೋಪವು ಇದೇ ಆಗಿರುತ್ತದೆ. ಧೂರ್ತತೆಯ ಅಪರಾಧಿಯಾಗಿ ಪೌಲನು ಇರಲಿಲ್ಲ ಎಂದೂ, ರೋಮಿನ ಒಳಿತಿನ ಮತ್ತು ಅದರ ನಿಯಮಗಳ ಕಡೆಗೆ ಯೆಹೂದ್ಯರಿಗೆ ಇದ್ದ ಗೌರವ ಕೊಂಚವೇ ಎಂದೂ ಆತನಿಗೆ ತಿಳಿದಿತ್ತು, ಆದ್ದರಿಂದ ಅವನು ಅವರನ್ನು ಹೊರಡಿಸಿಬಿಟ್ಟನು. ನೋಡುವವರು ಸಭಾಮಂದಿರದ ಹೊಸ ಅಧ್ಯಕ್ಷನನ್ನು ನ್ಯಾಯಸ್ಥಾನದ ಮುಂದೆಯೇ ಹೊಡೆದಾಗ ಗಲ್ಲಿಯೋನನು ನಡುಪ್ರವೇಶ ಮಾಡಲಿಲ್ಲ, ಪೌಲನ ವಿರುದ್ಧ ಗುಂಪು ದೊಂಬಿಯನ್ನು ಪ್ರಾಯಶಃ ಎಬ್ಬಿಸಲು ಮುಂದಾಳುವಾಗಿದವ್ದನು ಇದನ್ನು ಪಡೆಯಲು ಅರ್ಹನು ಎಂದೆಣಿಸಿರಬೇಕು.
16. ಒಂದು ದೀಕ್ಷೆಯ ಸಂಬಂಧದಲ್ಲಿ ಅವನ ಕೂದಲನ್ನು ಚಿಕ್ಕದಾಗಿ ಪೌಲನು ಕ್ಷೌರಮಾಡಿಸಿ ಕೊಂಡದ್ದು ಯಾಕೆ ಸ್ವೀಕರಣೀಯವಾಗಿತ್ತು?
16 ಪೌಲನು ಎಜೀಯನ್ ಬಂದರಾದ ಕೆಂಖ್ರೆಯದಿಂದ ಏಶ್ಯಾ ಮೈನರಿನ ಒಂದು ನಗರವಾದ ಎಫೆಸಕ್ಕೆ ಹೋಗುತ್ತಾನೆ. (18:18-22) ಆ ಸಂಚಾರದ ಮೊದಲು ‘ದೀಕ್ಷೆಯ ಕಾರಣ ಕ್ಷೌರ ಬಿಟ್ಟದ್ದರಿಂದ ಈಗ ಅದನ್ನು ಚಿಕ್ಕದ್ದಾಗಿ ಕತ್ತರಿಸುತ್ತಾನೆ.’ ಯೇಸುವಿನ ಹಿಂಬಾಲಕನಾಗುವ ಮೊದಲು ಪೌಲನು ಈ ದೀಕ್ಷೆಯನ್ನು ಮಾಡಿದ್ದನೋ, ಇಲ್ಲವೇ ಅವನ ದೀಕ್ಷೆಯ ಸಮಯದ ಆರಂಭವೂ ಯಾ ಅಂತ್ಯವೂ, ಅದನ್ನು ತಿಳಿಸಿರುವುದಿಲ್ಲ. ಕ್ರೈಸ್ತರು ನಿಯಮ ಶಾಸ್ತ್ರ ದಡಿಯಲ್ಲಿರುವುದಿಲ್ಲ, ಆದರೆ ಅದು ಪವಿತ್ರವೂ, ದೇವರಿಂದ ಕೊಡಲ್ಪಟ್ಟದ್ದೂ ಆಗಿತ್ತು ಮತ್ತು ಅಂಥಹ ದೀಕ್ಷೆಯಿಂದ ಪಾಪಕರವಾದದ್ದೇನೂ ಇರಲಿಲ್ಲ. (ರೋಮಾಪುರದವರಿಗೆ 6:14; 7:6, 12; ಗಲಾತ್ಯದವರಿಗೆ 5:18) ಎಫೆಸದಲ್ಲಿ, ಯೆಹೂದ್ಯರೊಂದಿಗೆ ಸಮಂಜಸತೆಯಿಂದ ತರ್ಕಿಸಿದನು ಮತ್ತು ದೇವರ ಚಿತ್ತವಿದ್ದಲ್ಲಿ ತಾನು ಪುನಃ ಬರುವನೆಂದು ತಿಳಿಸಿದನು. (ಆ ವಾಗ್ದಾನವು ನಂತರ ನೆರವೇರಿತು.) ಅವನು ಸಿರಿಯಾದ ಅಂತಿಯೋಕ್ಯಕ್ಕೆ ಹಿಂತಿರುಗಿದಾಗ ಅವನ ಎರಡನೆಯ ಮಿಶನೆರಿ ಪ್ರಯಾಣವು ಕೊನೆಗೊಂಡಿತು.
ಯೆಹೋವನ ವಾಕ್ಯವು ಎಫೆಸದಲ್ಲಿ ಪ್ರಬಲವಾಗುತ್ತದೆ
17. ದೀಕ್ಷಾಸ್ನಾನದ ಸಂಬಂಧದಲ್ಲಿ, ಅಪೊಲ್ಲೋಸನಿಗೆ ಮತ್ತು ಇತರ ಕೆಲವರಿಗೆ ಯಾವ ಉಪದೇಶವು ಆವಶ್ಯಕವಾಗಿತ್ತು?
17 ಪೌಲನು ಮೂರನೆಯ ಮಿಶನೆರಿ ಪ್ರಯಾಣವನ್ನು ಆರಂಭಿಸಿದನು (ಸುಮಾರು ಸಾ.ಶ. 52-56). (18:23–19:7) ತನ್ಮಧ್ಯೆ ಎಫೆಸದಲ್ಲಿ, ಅಪೊಲ್ಲೋಸನು ಯೇಸುವಿನ ಕುರಿತು ಕಲಿಸುತ್ತಿದ್ದನು, ಆದರೆ ನಿಯಮ ಶಾಸ್ತ್ರ ದ ವಿರುದ್ಧ ಮಾಡಿದ ಪಾಪಗಳಿಗಾಗಿ ಪಶ್ಚಾತ್ತಾಪ ಪಟ್ಟ ಕುರುಹಾಗಿ ಯೋಹಾನನ ದೀಕ್ಷಾಸ್ನಾನದ ಕುರಿತು ಮಾತ್ರ ತಿಳಿದಿದ್ದನು. ಪ್ರಿಸ್ಕಿಲ್ಲ ಮತ್ತು ಅಕ್ವಿಲರು “ಅವನಿಗೆ ದೇವರ ಮಾರ್ಗವನ್ನು ಇನ್ನೂ ಸೂಕ್ಷ್ಮವಾಗಿ ವಿವರಿಸಿದರು,” ಯೇಸುವಿನಂತೆ ದೀಕ್ಷಾಸ್ನಾನ ಪಡೆಯುವುದರಲ್ಲಿ ಒಬ್ಬ ವ್ಯಕ್ತಿಯು ನೀರಿನ ದೀಕ್ಷಾಸ್ನಾನವನ್ನೂ, ಪವಿತ್ರಾತ್ಮವನ್ನೂ ಪಡೆಯುವುದು ಸೇರಿರುತ್ತದೆ ಎಂದು ವಿವರಿಸಿರಬಹುದು. ಸಾ.ಶ. 33 ರ ಪಂಚಾಶತಮದಲ್ಲಿ ಪವಿತ್ರಾತ್ಮನ ದೀಕ್ಷಾಸ್ನಾನದ ನಂತರ ಯೋಹಾನನ ದೀಕ್ಷಾಸ್ನಾನ ಪಡೆದವರು ಪುನಃ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆಯಬೇಕಾಗಿದೆ. (ಮತ್ತಾಯ 3:11, 16; ಅ.ಕೃತ್ಯಗಳು 2:38) ಅನಂತರ ಎಫೆಸದಲ್ಲಿ 12 ಮಂದಿ ಯೋಹಾನನ ದೀಕ್ಷಾಸ್ನಾನ ಪಡೆದವರು “ಕರ್ತನಾದ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ ಕೊಂಡರು.” ಶಾಸ್ತ್ರ ವಚನದಲ್ಲಿ ದಾಖಲಿಸಿದ ಒಂದೇ ಮರು ದೀಕ್ಷಾಸ್ನಾನವಾಗಿದೆ. ಪೌಲನು ಅವರ ಮೇಲೆ ಕೈಗಳನ್ನಿಡಲು ಪವಿತ್ರಾತ್ಮವು ಅವರ ಮೇಲೆ ಬಂತು ಮತ್ತು ಸ್ವರ್ಗೀಯ ಮನ್ನಣೆಯ ಸೂಚನೆಯಾಗಿ ಎರಡು ಅದ್ಭುತಗಳು ನಡೆದವು—ನಾನಾ ಭಾಷೆಗಳಲ್ಲಿ ಮಾತಾಡುವುದು ಮತ್ತು ಪ್ರವಾದಿಸುವುದು.
18. ಎಫೆಸದಲ್ಲಿರುವಾಗ, ಪೌಲನು ಎಲ್ಲಿ ಸಾಕ್ಷಿ ನೀಡಿದನು, ಯಾವ ಫಲಿತಾಂಶಗಳೊಂದಿಗೆ?
18 3,00,000 ದಷ್ಟು ನಿವಾಸಿಗಳಿರುವ ನಗರವಾದ ಎಫೆಸದಲ್ಲಿ ಪೌಲನು ನಿಜವಾಗಿಯೂ ಕಾರ್ಯಮಗ್ನನಾಗಿದ್ದನು. (19:8-10) ಪುರಾತನ ಕಾಲಗಳಲ್ಲಿ ಪ್ರಪಂಚದ ಏಳು ಅದ್ಭುತಗಳಲ್ಲಿ ಅದರ ಅರ್ತೆಮೀ ದೇವಿಯ ದೇವಾಲಯವು ಒಂದಾಗಿತ್ತು ಮತ್ತು 25,000 ಆಸೀನಗಳಿರುವ ಒಂದು ನಾಟಕ ಮಂದಿರವೂ ಅಲ್ಲಿತ್ತು. ಸಭಾಮಂದಿರದಲ್ಲಿ ಪೌಲನು ಮನವರಿಕೆ ಮಾಡುವ ತರ್ಕಸರಣಿಯನ್ನು ಮಂಡಿಸಿ ‘ಒಡಂಬಡಿಸಿದನು.’ ಆದರೆ ಕೆಲವರು ಈ ಮಾರ್ಗದ ಯಾ ಕ್ರಿಸ್ತನ ನಂಬಿಕೆಯ ಮೇಲೆ ಆಧರಿತವಾದ ಜೀವನ ಪದ್ಧತಿಯ ಕುರಿತು ಕೆಟ್ಟದ್ದೆಂದು ಹೇಳಿದಾಗ ಅವನು ಅವರಿಂದ ಅಗಲಿಹೋದನು. ಎರಡು ವರ್ಷಗಳ ತನಕ ಪೌಲನು ಪ್ರತಿದಿನ ತುರನ್ನನ ಶಾಲೆಯ ಸಭಾಂಗಣದಲ್ಲಿ ವಾದಿಸಿದನು, “ವಾಕ್ಯವು” ಏಶ್ಯಾ ಸೀಮೆಯೆಲ್ಲೆಲ್ಲಾ ಹಬ್ಬಿತು.
19. ‘ಯೆಹೋವನ ವಾಕ್ಯವು ಹೆಚ್ಚುತ್ತಾ ಬಂದು ಪ್ರಬಲವಾಗುವಂತೆ’ ಎಫೆಸದಲ್ಲಿ ಏನು ಸಂಭವಿಸಿತು?
19 ವಾಸಿಮಾಡುವಿಕೆಯನ್ನು ಮತ್ತು ದೆವ್ವಗಳನ್ನು ಬಿಡಿಸಲು ಸಾಮರ್ಥ್ಯವನ್ನು ನೀಡುವುದರ ಮೂಲಕ ದೇವರು ಪೌಲನ ಚಟುವಟಿಕೆಗೆ ಮನ್ನಣೆ ತೋರಿಸಿದನು. (19:11-20) ಯೇಸುವಿನ ಹೆಸರಿನಲ್ಲಿ ಮಹಾಯಾಜಕ ಸ್ಕೇವನನ ಏಳು ಮಂದಿ ಮಕ್ಕಳು ದೆವ್ವವನ್ನು ಬಿಡಿಸ ಶಕ್ತರಾಗಲಿಲ್ಲ ಯಾಕಂದರೆ ಅವರು ದೇವರನ್ನು ಮತ್ತು ಕ್ರಿಸ್ತನನ್ನು ಪ್ರತಿನಿಧಿಸತ್ತಿರಲಿಲ್ಲ. ದೆವ್ವ-ಪೀಡಿತ ವ್ಯಕ್ತಿಯಿಂದ ಅವರು ಗಾಯಗೊಳಿಸಲ್ಪಟ್ಟರು ! ಇದು ಜನರನ್ನು ಭಯಭರಿತರನ್ನಾಗಿ ಮಾಡಿತು ಮತ್ತು “ಕರ್ತನಾದ ಯೇಸುವಿನ ಹೆಸರು ಪ್ರಖ್ಯಾತಗೊಂಡಿತು.” ವಿಶ್ವಾಸೀಗಳಾದವರು ತಮ್ಮ ಮಾಟಮಂತ್ರಗಳ ವ್ಯವಹಾರವನ್ನು ತ್ಯಜಿಸಿದರು ಮತ್ತು ಪ್ರಾಯಶಃ ಮಂತ್ರತಂತ್ರಗಳು ಮತ್ತು ಇತರ ಕ್ರಮವಿಧಾನಗಳಿರುವ ಅವರ ಪುಸ್ತಕಗಳನ್ನು ಬಹಿರಂಗವಾಗಿ ಸುಟ್ಟರು. “ಈ ರೀತಿಯಾಗಿ ಯೆಹೋವನ ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲವಾಯಿತು.” ಇಂದೂ ಕೂಡಾ. ಜನರನ್ನು ಪೈಶಾಚಿಕ ಹವ್ಯಾಸಗಳಿಂದ ಸ್ವತಂತ್ರಿಸಲು ದೇವಜನರು ಸಹಾಯ ನೀಡುತ್ತಾರೆ.—ಧರ್ಮೋಪದೇಶ ಕಾಂಡ 18:10-12.
ಧಾರ್ಮಿಕ ಅಸಹಿಷ್ಣುತೆಯು ಯಶಸ್ವೀಯಾಗುವುದಿಲ್ಲ
20. ಎಫೆಸದ ಅಕ್ಕಸಾಲಿಗರು ದೊಂಬಿಯೊಂದನ್ನು ಎಬ್ಬಿಸಿದ್ದು ಯಾಕೆ, ಮತ್ತು ಅದು ಹೇಗೆ ಮುಕ್ತಾಯಗೊಂಡಿತು?
20 ಯೆಹೋವನ ಸಾಕ್ಷಿಗಳು ಆಗಾಗ್ಯೆ ಸಿಟ್ಟಿಗೆದ್ದ ಜನರ ಗುಂಪುಗಳನ್ನು ಎದುರಿಸಿದ್ದಾರೆ ಮತ್ತು ಹಾಗೆಯೇ ಎಫೆಸದ ಕ್ರೈಸ್ತರೂ ಕೂಡಾ. (19:21-41) ವಿಶ್ವಾಸೀಗಳು ಹೆಚ್ಚಾದ ಹಾಗೆಯೇ ದೇಮೇತ್ರಿಯನೂ, ಇತರ ಅಕ್ಕಸಾಲಿಗರೂ ಹಣದಲ್ಲಿ ನಷ್ಟಗೊಂಡರು. ಯಾಕಂದರೆ ಬಹು-ಸ್ತನಗಳ ಫಲದಾಯಕ ದೇವತೆಯಾದ ಅರ್ತೆಮೀಯ ಬೆಳ್ಳಿಯ ಗುಡಿಗಳನ್ನು ಕೇವಲ ಕೊಂಚವೇ ಜನರು ಖರೀದಿಸಲಾರಂಭಿಸಿದರು. ದೇಮೇತ್ರಿಯನಿಂದ ಉದ್ರೇಕಿಸಲ್ಪಟ್ಟು, ಜನರ ಗುಂಪೊಂದು ಪೌಲನ ಸಂಗಡಿಗನಾದ ಗಾಯನನ್ನೂ ಅರಿಸ್ತಾರ್ಕನನ್ನೂ ಹಿಡಿದುಕೊಂಡು ನಾಟಕ ಶಾಲೆಯೊಳಗೆ ನುಗ್ಗಿದರು, ಆದರೆ ಶಿಷ್ಯರು ಪೌಲನನ್ನು ಒಳಗೆ ಹೋಗಲು ಬಿಡಲಿಲ್ಲ. ಹಬ್ಬದ ಮತ್ತು ಆಟಗಳ ಕೆಲವು ಅಧಿಕಾರಿಗಳೂ ಅವನು ನಾಟಕಶಾಲೆಯೊಳಗೆ ಹೋಗಿ ಅಪಾಯಕ್ಕೆ ಗುರಿಮಾಡಿಕೊಳ್ಳದಂತೆ ಅವನನ್ನು ಬೇಡಿಕೊಂಡರು. ಸುಮಾರು ಎರಡು ಗಂಟೆಗಳಷ್ಟು ಕಾಲ ಜನಸಮೂಹವು ಕೂಗಾಟನಡಿಸಿತು: “ಎಫೆಸದವರ ಅರ್ತೆಮೀ ದೇವಿ ಮಹಾದೇವಿ !” ಕಟ್ಟಕಡೆಗೆ, ಪಟ್ಟಣದ ದಾಖಲೆ ಇಡುವವನು (ಪೌರ ಸಂಸ್ಥೆಯ ಸರಕಾರದ ಮುಖ್ಯಸ್ಥನು), ಕೆಲಸಗಾರರು ಅವರ ದೂರುಗಳಿದ್ದರೆ ನ್ಯಾಯಸ್ಥಾನದ ತೀರ್ಪುಗಳನ್ನು ಮಾಡುವ ಅಧಿಪತಿಗಳ ಮುಂದೆ ಕೊಂಡೊಯ್ಯಲು ಅಥವಾ ಅವರ ಮೊಕದ್ದಮೆಯನ್ನು ನಾಗರಿಕರ “ನ್ಯಾಯವಾಗಿ ನೆರೆದ ಸಭೆಯಲ್ಲಿ” ತೀರ್ಮಾನಿಸಬಹುದು ಎಂದು ಹೇಳಿದನು. ಇಲ್ಲದಿದ್ದರೆ. ರೋಮೀಯರು ಇದೊಂದು ಅಕ್ರಮವಾದ ದಂಗೆ ಎಂದು ತಪ್ಪು ಹೊರಿಸಬಹುದು. ಇದನ್ನು ಹೇಳಿ ಅವನು ಸಭೆಯನ್ನು ಮುರಿದನು.
21. ಪೌಲನ ಕೆಲಸವನ್ನು ದೇವರು ಯಾವ ವಿಧದಲ್ಲಿ ಆಶೀರ್ವದಿಸಿದನು, ಮತ್ತು ಅವನು ಇಂದು ಯೆಹೋವನ ಸಾಕ್ಷಿಗಳನ್ನು ಹೇಗೆ ಆಶೀರ್ವದಿಸುತ್ತಾನೆ?
21 ಅನೇಕ ವಿಧದ ಪರಿಶೋಧನೆಗಳನ್ನು ಎದುರಿಸಲು ದೇವರು ಪೌಲನಿಗೆ ಸಹಾಯಮಾಡಿದನು ಮತ್ತು ಧಾರ್ಮಿಕ ತಪ್ಪುಗಳನ್ನು ತ್ಯಜಿಸುವಂತೆ ಮತ್ತು ಸತ್ಯವನ್ನು ಆಲಿಂಗಿಸುವಂತೆ ಜನರಿಗೆ ಮಾಡುವ ಅವನ ಪ್ರಯತ್ನಗಳನ್ನು ದೇವರು ಆಶೀರ್ವದಿಸಿದನು. (ಯೆರೆಮೀಯ 1:9, 10 ಹೋಲಿಸಿರಿ.) ನಮ್ಮ ಪರಲೋಕದ ತಂದೆಯು ತದ್ರೀತಿಯಲ್ಲಿ ನಮ್ಮ ಕಾರ್ಯಗಳನ್ನು ಆಶೀರ್ವದಿಸಿದ್ದಕ್ಕಾಗಿ ನಾವು ಎಷ್ಟು ಆಭಾರಿಗಳಾಗಿ ಇದ್ದೇವೆ! ಈ ರೀತಿ ಮೊದಲನೆಯ ಶತಮಾನದಲ್ಲಿದ್ದಂತೆಯೇ ಈಗಲೂ, ‘ಯೆಹೋವನ ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲವಾಯಿತು.’ (w90 6/15)
ನೀವು ಹೇಗೆ ಉತ್ತರಿಸುವಿರಿ?
◻ ಪವಿತ್ರಾತ್ಮನ ಮಾರ್ಗದರ್ಶನೆಯನ್ನು ಸ್ವೀಕರಿಸುವುದರಲ್ಲಿ ಪೌಲನು ಎಂಥಹ ಮಾದರಿಯನ್ನು ಇಟ್ಟಿದ್ದಾನೆ?
◻ ಈಗಲೂ ಯೆಹೋವನ ಸೇವಕರು ಬಳಸುವ ಯಾವ ವಿಧಾನದಿಂದ ಪೌಲನು ವಿಷಯಗಳನ್ನು ‘ವಿವರಿಸಿದನು ಮತ್ತು ರುಜುಪಡಿಸಿದನು’?
◻ ಅರಿಯೊಪಾಗದ ಪೌಲನ ಭಾಷಣಕ್ಕೆ ಮತ್ತು ಯೆಹೋವನ ಸಾಕ್ಷಿಗಳ ಸಾರುವಿಕೆಗೆ ಯಾವ ಸರಿಹೋಲಿಕೆಗಳು ಇವೆ?
◻ ಶುಶ್ರೂಷೆಯಲ್ಲಿ ಪೌಲನು ತನ್ನನ್ನು ಪೋಷಿಸಿ ಕೊಂಡದ್ದು ಹೇಗೆ, ಮತ್ತು ಇಂದು ಇದಕ್ಕೆ ಯಾವ ಸರಿದೂಗುವಿಕೆಗಳು ಇವೆ?
◻ ಪೌಲನ ಕಾರ್ಯಗಳಲ್ಲಿ ಮಾಡಿದಂತೆ, ಇಂದು ಯೆಹೋವನ ಸಾಕ್ಷಿಗಳ ಕಾರ್ಯವನ್ನು ದೇವರು ಹೇಗೆ ಆಶೀರ್ವದಿಸಿದ್ದಾನೆ?
[Pictures on page 26, 27]
ಯೆಹೋವನ ವಾಕ್ಯವು ಪ್ರಬಲವಾಯಿತು
1. ಫಿಲಿಪ್ಪಿಯಲ್ಲಿ
2. ಮತ್ತು 3. ಅಥೇನ್ನಲ್ಲಿ
4. ಮತ್ತು 6. ಎಫೆಸದಲ್ಲಿ
5. ರೋಮಾಪುರದಲ್ಲಿ
[ಕೃಪೆ]
Photo No. 4: Manley Studios