-
ದುಷ್ಟತ್ವವನ್ನು ದೇವರು ಅನುಮತಿಸಿರುವುದರಿಂದ ನಾವೇನು ಕಲಿತುಕೊಳ್ಳುತ್ತೇವೆ?ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ
-
-
8. ಪೌಲನು ಯಾವ ಸಂಗತಿಗಳನ್ನು ನಾವು ಪರಿಗಣಿಸುವಂತೆ ಪ್ರೋತ್ಸಾಹಿಸುತ್ತಾನೆ?
8 ರೋಮಾಪುರದವರಿಗೆ ಬರೆದ ಪತ್ರದಲ್ಲಿ ಅಪೊಸ್ತಲ ಪೌಲನು, “ದೇವರಲ್ಲಿ ಅನ್ಯಾಯ ಉಂಟೋ?” ಎಂದು ಪ್ರಶ್ನಿಸುತ್ತಾನೆ. ಬಳಿಕ ಅವನು, “ಎಂದಿಗೂ ಇಲ್ಲ,” ಎಂಬ ದೃಢಾಭಿಪ್ರಾಯದ ಉತ್ತರವನ್ನು ಕೊಡುತ್ತಾನೆ. ಬಳಿಕ ಅವನು ದೇವರ ಕರುಣೆಯನ್ನು ಒತ್ತಿಹೇಳಿ, ಫರೋಹನನ್ನು ಇನ್ನೂ ಸ್ವಲ್ಪಕಾಲ ಉಳಿಸುವ ವಿಷಯವಾಗಿ ಯೆಹೋವನು ಏನು ಹೇಳಿದನೊ ಅದಕ್ಕೆ ಸೂಚಿಸುತ್ತಾನೆ. ಮನುಷ್ಯರಾದ ನಾವು ಕುಂಬಾರನ ಕೈಯಲ್ಲಿರುವ ಜೇಡಿಮಣ್ಣಿನಂತೆ ಇದ್ದೇವೆಂದೂ ಪೌಲನು ತೋರಿಸುತ್ತಾನೆ. ಆ ಮೇಲೆ ಅವನು ಹೇಳುವುದು: “ಆದರೆ ದೇವರು ತನ್ನ ಕೋಪವನ್ನು ತೋರಿಸಿ ತನ್ನ ಶಕ್ತಿಯನ್ನು ಪ್ರಸಿದ್ಧಿಪಡಿಸಬೇಕೆಂದಿದ್ದರೂ ಹಾಗೆ ಮಾಡದೆ ತನ್ನ ಕೋಪಕ್ಕೆ ಗುರಿಯಾದ ನಾಶನಪಾತ್ರರನ್ನು ಬಹು ಸೈರಣೆಯಿಂದ ಸೈರಿಸಿಕೊಂಡಿದ್ದಾನೆ. ಮತ್ತು ಪ್ರಭಾವಹೊಂದುವದಕ್ಕೆ ತಾನು ಮುಂದಾಗಿ ಸಿದ್ಧಮಾಡಿದ ಕರುಣಾಪಾತ್ರರಲ್ಲಿ ತನ್ನ ಮಹಿಮಾತಿಶಯವನ್ನು ತೋರ್ಪಡಿಸಿದ್ದಾನೆ. ಆತನು ಕರುಣಿಸಿದ ನಮ್ಮನ್ನು ಯೆಹೂದ್ಯರೊಳಗಿಂದ ಮಾತ್ರ ಕರೆಯದೆ ಹೋಶೇಯನ ಗ್ರಂಥದ ವಚನದಲ್ಲಿ ತಾನು ಸೂಚಿಸಿದಂತೆ ಅನ್ಯಜನರೊಳಗಿಂದ ಸಹ ಕರೆದನು.”—ರೋಮಾಪುರ 9:14-24.
-
-
ದುಷ್ಟತ್ವವನ್ನು ದೇವರು ಅನುಮತಿಸಿರುವುದರಿಂದ ನಾವೇನು ಕಲಿತುಕೊಳ್ಳುತ್ತೇವೆ?ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ
-
-
10. ಯೆಹೋವನು ದುಷ್ಟರನ್ನು ಕಳೆದ 1,900 ವರುಷ ಕಾಲ ಸೈರಿಸಿಕೊಂಡಿರುವುದೇಕೆ?
10 ಯೇಸುವಿಗೆ ಪುನರುತ್ಥಾನವಾಗಿ 1,900ಕ್ಕೂ ಹೆಚ್ಚು ವರುಷಗಳಲ್ಲಿ, ಯೆಹೋವನು “ಕೋಪಕ್ಕೆ ಗುರಿಯಾದ” ಜನರನ್ನು ನಾಶನಕ್ಕೆ ಒಳಪಡಿಸದೆ ಹೆಚ್ಚು ಸೈರಿಸಿಕೊಂಡಿದ್ದಾನೆ. ಏಕೆ? ಒಂದು ಕಾರಣವೇನಂದರೆ, ಯೇಸು ಕ್ರಿಸ್ತನೊಂದಿಗೆ ಆತನ ಸ್ವರ್ಗೀಯ ರಾಜ್ಯದಲ್ಲಿ ಜೊತೆಗೂಡಲಿರುವವರನ್ನು ಆತನು ಸಿದ್ಧಪಡಿಸುತ್ತಿದ್ದುದರಿಂದಲೇ. ಇವರ ಸಂಖ್ಯೆಯು 1,44,000 ಮತ್ತು ಇವರೇ ಅಪೊಸ್ತಲ ಪೌಲನು ಹೇಳಿರುವ ‘ಕರುಣಾಪಾತ್ರರು’ ಆಗಿದ್ದಾರೆ. ಪ್ರಥಮವಾಗಿ, ಈ ಸ್ವರ್ಗೀಯ ವರ್ಗಕ್ಕೆ ಸೇರಲು ಯೆಹೂದ್ಯರಿಗೆ ಕರೆ ಕೊಡಲಾಯಿತು. ತರುವಾಯ, ದೇವರು ಅನ್ಯಜನಾಂಗಗಳ ಜನರಿಗೆ ಕರೆ ಕೊಟ್ಟನು. ಯೆಹೋವನು ತನ್ನನ್ನು ಸೇವಿಸಲು ಇವರಲ್ಲಿ ಯಾರನ್ನೂ ನಿರ್ಬಂಧಿಸಲಿಲ್ಲ. ಆದರೆ ಅವರಲ್ಲಿ ಯಾರು ಕೃತಜ್ಞತೆಯಿಂದ ತನ್ನ ಪ್ರೀತಿಯ ಏರ್ಪಾಡುಗಳಿಗೆ ಓಗೊಟ್ಟರೊ, ಅವರಲ್ಲಿ ಕೆಲವರಿಗೆ ಸ್ವರ್ಗೀಯ ರಾಜ್ಯದಲ್ಲಿ ತನ್ನ ಪುತ್ರನೊಂದಿಗೆ ಜೊತೆ ರಾಜರಾಗುವ ಸದವಕಾಶವನ್ನು ಒದಗಿಸಿದನು. ಆ ಸ್ವರ್ಗೀಯ ವರ್ಗದ ಸಿದ್ಧತೆಯು ಈಗ ಹೆಚ್ಚುಕಡಮೆ ಮುಗಿದಿದೆ.—ಲೂಕ 22:29; ಪ್ರಕಟನೆ 14:1-4.
-