-
ಯಾವ ರೀತಿಯ ಆರಾಧನೆ ದೇವರಿಗೆ ಇಷ್ಟ?ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
-
-
2. ನಾವು ಯೆಹೋವನನ್ನು ಹೇಗೆ ಆರಾಧಿಸಬೇಕು?
ಯೆಹೋವನು ನಮ್ಮ ಸೃಷ್ಟಿಕರ್ತ ಆಗಿರೋದ್ರಿಂದ ನಾವು ಆತನನ್ನ ಮಾತ್ರ ಆರಾಧಿಸಬೇಕು. (ಪ್ರಕಟನೆ 4:11) ಅಂದರೆ ನಾವು ಆತನನ್ನ ಪ್ರೀತಿಸಬೇಕು ಮತ್ತು ಯಾವುದೇ ಮೂರ್ತಿಗಳ, ವಸ್ತುಗಳ ಸಹಾಯವಿಲ್ಲದೆ ದೇವರಿಗೆ ಆಪ್ತರಾಗಬೇಕು.—ಯೆಶಾಯ 42:8 ಓದಿ.
ನಾವು ಮಾಡುವ ಆರಾಧನೆ ‘ಪವಿತ್ರವಾಗಿ ಮತ್ತು ಯೆಹೋವನು ಮೆಚ್ಚೋ’ ರೀತಿಯಲ್ಲಿ ಇರಬೇಕು. (ರೋಮನ್ನರಿಗೆ 12:1) ಇದರ ಅರ್ಥ ನಾವು ಆತನ ನೀತಿನಿಯಮಗಳ ಪ್ರಕಾರ ಜೀವಿಸಬೇಕು. ಉದಾಹರಣೆಗೆ ಯೆಹೋವನನ್ನು ಪ್ರೀತಿಸುವವರು ಮದುವೆ ಬಗ್ಗೆ ಆತನಿಟ್ಟಿರುವ ನಿಯಮಗಳನ್ನ ಪ್ರೀತಿಸ್ತಾರೆ ಮತ್ತು ಪಾಲಿಸ್ತಾರೆ. ಅಷ್ಟೇ ಅಲ್ಲ ಅವರು ದೇಹಕ್ಕೆ ಹಾನಿಮಾಡುವ ಯಾವುದೇ ವಿಷಯಗಳನ್ನ ಮಾಡಲ್ಲ. ಉದಾಹರಣೆಗೆ, ಅಡಿಕೆ, ತಂಬಾಕು ಸೇವನೆ ಮಾಡಲ್ಲ. ಅಷ್ಟೇ ಅಲ್ಲ ಕುಡಿಕತನದ ಚಟದಿಂದ ಮತ್ತು ಮತ್ತೇರಿಸಿಕೊಳ್ಳೋಕಾಗಿ ಅಮಲೌಷಧ (ಡ್ರಗ್ಸ್) ತೆಗೆದುಕೊಳ್ಳೋದರಿಂದ ದೂರವಿರುತ್ತಾರೆ.a
-
-
ಜೀವ ಅಮೂಲ್ಯ ಅದಕ್ಕೆ ಕೃತಜ್ಞತೆ ತೋರಿಸಿಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
-
-
3. ನಿಮ್ಮ ಆರೋಗ್ಯವನ್ನ ಚೆನ್ನಾಗಿ ನೋಡಿಕೊಳ್ಳಿ
ಯಾವಾಗ್ಲೂ ಯೆಹೋವ ದೇವರಿಗೆ ಇಷ್ಟ ಆಗುವ ರೀತಿಯಲ್ಲಿ ನಡೆದುಕೊಳ್ತೇವೆ ಅಂತ ನಾವು ಸಮರ್ಪಣೆಯಲ್ಲಿ ಮಾತುಕೊಟ್ಟಿದ್ದೇವೆ. ಹಾಗಾಗಿ ನಮ್ಮ ಇಡೀ ಜೀವನವನ್ನ ಆತನ ಸೇವೆಗಾಗಿ ಬಳಸ್ತೇವೆ. ಹೀಗೆ ಮಾಡುವಾಗ ನಮ್ಮ ಜೀವವನ್ನ ದೇವರು ಮೆಚ್ಚುವ ಬಲಿಯಾಗಿ ಕೊಟ್ಟಂತೆ ಇರುತ್ತೆ. ರೋಮನ್ನರಿಗೆ 12:1, 2 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ನಿಮ್ಮ ಆರೋಗ್ಯವನ್ನ ಯಾಕೆ ಚೆನ್ನಾಗಿ ನೋಡಿಕೊಳ್ಳಬೇಕು?
ನಿಮ್ಮ ಆರೋಗ್ಯವನ್ನ ಚೆನ್ನಾಗಿ ನೋಡಿಕೊಳ್ಳೋಕೆ ಇನ್ನೂ ಏನೆಲ್ಲಾ ಮಾಡಬಹುದು?
-