-
3 | ದ್ವೇಷದ ಕಳೆಯನ್ನ ಮನಸ್ಸಿಂದ ಕಿತ್ತಾಕಿಕಾವಲಿನಬುರುಜು (ಸಾರ್ವಜನಿಕ)—2022 | ನಂ. 1
-
-
ಬೈಬಲ್ ಕಲಿಸೋದು:
“ನಿಮ್ಮ ಯೋಚಿಸೋ ವಿಧಾನವನ್ನ ಬದಲಾಯಿಸೋಕೆ ಬಿಟ್ಟುಕೊಡಿ. ಆಗ ದೇವರು ಇಷ್ಟಪಡೋ ವಿಷ್ಯಗಳು ಯಾವಾಗ್ಲೂ ಒಳ್ಳೇದಾಗಿ, ಪರಿಪೂರ್ಣವಾಗಿ, ಸರಿಯಾಗಿ ಇರುತ್ತೆ ಅಂತ ಪರೀಕ್ಷಿಸಿ ಅರ್ಥ ಮಾಡ್ಕೊಳ್ತೀರ.”—ರೋಮನ್ನರಿಗೆ 12:2.
ಅರ್ಥ ಏನು?
ನಾವು ಮನಸ್ಸಲ್ಲಿ ಏನು ಯೋಚಿಸ್ತೀವಿ ಅನ್ನೋದನ್ನ ದೇವರು ಗಮನಿಸ್ತಾ ಇರ್ತಾನೆ. (ಯೆರೆಮೀಯ 17:10) ನಾವು ದ್ವೇಷದಿಂದ ಮಾತಾಡೋದನ್ನ ಮತ್ತು ನಡ್ಕೊಳ್ಳೋದನ್ನ ನಿಲ್ಲಿಸಿದ್ರೆ ಮಾತ್ರ ಸಾಕಾಗಲ್ಲ, ಅದಕ್ಕಿಂತ ಹೆಚ್ಚಿನದ್ದನ್ನು ಮಾಡಬೇಕು. ದ್ವೇಷದ ಕಿಡಿ ಶುರುವಾಗೋದೇ ಮನಸ್ಸಲ್ಲಿ. ಹಾಗಾಗಿ ನಮ್ಮ ಮನಸ್ಸಲ್ಲಿ ದ್ವೇಷವನ್ನ ಹುಟ್ಟಿಸೋ ಯಾವುದಾದ್ರೂ ವಿಷಯಗಳಿದ್ರೆ ತಕ್ಷಣ ಅದನ್ನು ಬೇರು ಸಮೇತ ಕಿತ್ತಾಕಬೇಕು. ಹೀಗೆ ಮಾಡೋದಾದ್ರೆ ಮಾತ್ರ ನಮ್ಮನ್ನು “ಬದಲಾಯಿಸಿಕೊಂಡು” ದ್ವೇಷ ಅನ್ನೋ ಸರಪಳಿಯನ್ನ ಕಿತ್ತು ಹಾಕೋಕೆ ಆಗುತ್ತೆ.
-