-
“ಅಳುವವರೊಂದಿಗೆ ಅಳಿರಿ”ಕಾವಲಿನಬುರುಜು (ಅಧ್ಯಯನ)—2017 | ಜುಲೈ
-
-
14. ತಮ್ಮವರನ್ನು ಕಳಕೊಂಡ ದುಃಖದಲ್ಲಿರುವವರಿಗೆ ನಾವು ಹೇಗೆ ಸಾಂತ್ವನ ಹೇಳಬಹುದು?
14 ತಮ್ಮವರನ್ನು ಕಳಕೊಂಡ ಶೋಕದಲ್ಲಿರುವವರಿಗೆ ಏನು ಹೇಳಬೇಕೆಂದೇ ನಮಗೆ ಕೆಲವೊಮ್ಮೆ ಗೊತ್ತಾಗಲ್ಲ. ಆದರೆ “ಮತಿವಂತರ ಮಾತೇ ಮದ್ದು” ಎಂದು ಬೈಬಲ್ ಹೇಳುತ್ತದೆ. (ಜ್ಞಾನೋ. 12:18) ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗc ಎಂಬ ಕಿರುಹೊತ್ತಗೆಯಲ್ಲಿರುವ ಮಾತುಗಳನ್ನು ಉಪಯೋಗಿಸಿ ಕೆಲವರು ಸಂತೈಸಿದ್ದಾರೆ. ನಾವು ‘ಅಳುವವರೊಂದಿಗೆ ಅಳುವ’ ಮೂಲಕವೂ ದುಃಖದಲ್ಲಿರುವವರಿಗೆ ತುಂಬ ಸಹಾಯ ಮಾಡುತ್ತೇವೆ. (ರೋಮ. 12:15) ಪತಿಯನ್ನು ಕಳಕೊಂಡ ಗ್ಯಾಬಿ ಎಂಬವರು ಅಳುವುದರ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸುತ್ತಾರೆ. ಅವರು ಹೇಳುವುದು: “ನನ್ನ ಮಿತ್ರರು ನನ್ನ ಜೊತೆ ಸೇರಿ ಅಳುವಾಗ ಸ್ವಲ್ಪ ಸಾಂತ್ವನ ಸಿಗುತ್ತದೆ. ಆಗ ನಾನೊಬ್ಬಳೇ ಅಲ್ಲ, ನನ್ನ ನೋವನ್ನು ಹಂಚಿಕೊಳ್ಳಲು ಬೇರೆಯವರೂ ಇದ್ದಾರೆನ್ನುವ ಭಾವನೆ ಬರುತ್ತದೆ.”
-
-
“ಅಳುವವರೊಂದಿಗೆ ಅಳಿರಿ”ಕಾವಲಿನಬುರುಜು (ಅಧ್ಯಯನ)—2017 | ಜುಲೈ
-
-
20. ಯೆಹೋವನ ವಾಗ್ದಾನಗಳು ನಮಗೆ ಯಾಕೆ ತುಂಬ ಸಾಂತ್ವನ ಕೊಡುತ್ತವೆ?
20 ಸಾಂತ್ವನ ನೀಡುವ ದೇವರಾದ ಯೆಹೋವನು ಸತ್ತವರನ್ನು ಪುನರುತ್ಥಾನ ಮಾಡಿ ಎಲ್ಲ ದುಃಖವನ್ನು ಪೂರ್ತಿಯಾಗಿ ತೆಗೆದುಹಾಕುತ್ತಾನೆ ಎನ್ನುವುದು ನೆಮ್ಮದಿ ಕೊಡುವ ವಿಷಯ ಅಲ್ಲವೆ? (ಯೋಹಾ. 5:28, 29) ಯೆಹೋವನು “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು” ಎಂದು ಬೈಬಲ್ ಮಾತು ಕೊಡುತ್ತದೆ. (ಯೆಶಾ. 25:8) ಆ ದಿನದಲ್ಲಿ ಭೂಮಿಯಲ್ಲಿರುವ ಯಾರಿಗೂ ‘ಅಳುವವರೊಂದಿಗೆ ಅಳುವ’ ಪರಿಸ್ಥಿತಿ ಬರುವುದಿಲ್ಲ. ಅದರ ಬದಲಿಗೆ ಎಲ್ಲರೂ ‘ಆನಂದಿಸುವವರೊಂದಿಗೆ ಆನಂದಿಸುವರು.’—ರೋಮ. 12:15.
-