-
ಕೋಪವನ್ನು ಅಂಕೆಯಲ್ಲಿಡುವ ಮೂಲಕ ‘ಕೆಟ್ಟದ್ದನ್ನು ಜಯಿಸುತ್ತಾ ಇರಿ’ಕಾವಲಿನಬುರುಜು—2010 | ಜೂನ್ 15
-
-
10. ಪ್ರತೀಕಾರವನ್ನು ಸಲ್ಲಿಸುವ ವಿಷಯದಲ್ಲಿ ಕ್ರೈಸ್ತರು ಯಾವ ಮನೋಭಾವವನ್ನು ತೋರಿಸಬೇಕು?
10 ಸಿಮೆಯೋನ್ ಮತ್ತು ಲೇವಿ ಹಾಗೂ ದಾವೀದ ಮತ್ತು ಅಬೀಗೈಲರ ನಡುವೆ ಸಂಭವಿಸಿದ ವಿಷಯವು ಸುಸ್ಪಷ್ಟವಾಗಿ ಏನನ್ನು ತೋರಿಸುತ್ತದೆ? ಏನೆಂದರೆ ಯೆಹೋವನು ಅಂಕೆತಪ್ಪಿದ ಕೋಪ ಮತ್ತು ಹಿಂಸಾಚಾರವನ್ನು ವಿರೋಧಿಸುತ್ತಾನೆ ಹಾಗೂ ಶಾಂತಿಶೀಲರ ಪ್ರಯತ್ನಗಳನ್ನು ಆಶೀರ್ವದಿಸುತ್ತಾನೆ ಎಂಬದನ್ನೇ. “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರೊಂದಿಗೆ ಶಾಂತಿಶೀಲರಾಗಿರಿ” ಎಂದು ಅಪೊಸ್ತಲ ಪೌಲನು ಬರೆದನು. ಅವನು ಮತ್ತೂ ಹೇಳಿದ್ದು: “ಪ್ರಿಯರೇ ನೀವು ಮುಯ್ಯಿಗೆ ಮುಯ್ಯಿ ತೀರಿಸದೆ ದೇವರ ಕ್ರೋಧಕ್ಕೆ ಎಡೆಮಾಡಿಕೊಡಿರಿ; ‘ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಯೆಹೋವನು ಹೇಳುತ್ತಾನೆ’ ಎಂದು ಬರೆದಿದೆ. ಆದರೆ ‘ನಿನ್ನ ವೈರಿಯು ಹಸಿದಿರುವುದಾದರೆ ಅವನಿಗೆ ಊಟಕ್ಕೆ ಕೊಡು; ಅವನು ಬಾಯಾರಿದ್ದರೆ ಅವನಿಗೆ ಏನನ್ನಾದರೂ ಕುಡಿಯಲು ಕೊಡು; ಹೀಗೆ ಮಾಡುವ ಮೂಲಕ ನೀನು ಅವನ ತಲೆಯ ಮೇಲೆ ಕೆಂಡವನ್ನು ಹೇರಿದಂತಾಗುವುದು.’ ಕೆಟ್ಟದ್ದು ನಿನ್ನನ್ನು ಜಯಿಸುವಂತೆ ಬಿಡಬೇಡ, ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುತ್ತಾ ಇರು.”—ರೋಮ. 12:18-21.a
-
-
ಕೋಪವನ್ನು ಅಂಕೆಯಲ್ಲಿಡುವ ಮೂಲಕ ‘ಕೆಟ್ಟದ್ದನ್ನು ಜಯಿಸುತ್ತಾ ಇರಿ’ಕಾವಲಿನಬುರುಜು—2010 | ಜೂನ್ 15
-
-
a ಇಲ್ಲಿ ‘ಕೆಂಡವು,’ ಅದಿರನ್ನು ಕರಗಿಸುವ ಒಂದು ಪುರಾತನ ವಿಧಾನಕ್ಕೆ ಸೂಚಿಸುತ್ತದೆ. ಲೋಹಗಳನ್ನು ಹೊರತೆಗೆಯಲಿಕ್ಕಾಗಿ ಅದಿರಿನ ಮೇಲೆ ಮತ್ತು ಕೆಳಗೆ ಕೆಂಡಗಳನ್ನು ಹಾಕಲಾಗುತ್ತಿತ್ತು. ಅಂತೆಯೇ ನಿರ್ದಯಿಗಳಿಗೆ ನಾವು ದಯೆತೋರಿಸುವಾಗ ಅವರ ಕಠಿನ ಮನೋಭಾವ ಕರಗಿ ಉತ್ತಮ ಗುಣಗಳು ಹೊರಬರಬಹುದು.
-