ತಾಳ್ಮೆಯಿಂದ ಓಟವನ್ನು ಓಡುವುದು
“ನಮಗೆ ನೇಮಕವಾದ ಓಟವನ್ನು ತಾಳ್ಮೆಯಿಂದ ಓಡೋಣ.”—ಇಬ್ರಿಯ 12:1, NW.
1. (ಎ) ಯೆಹೋವ ದೇವರಿಗೆ ನಾವು ಒಂದು ಸಮರ್ಪಣೆಯನ್ನು ಮಾಡುವಾಗ, ನಮ್ಮ ಮುಂದೆ ಏನು ಇಡಲ್ಪಡುತ್ತದೆ? (ಬಿ) ಯಾವ ರೀತಿಯ ಓಟಕ್ಕಾಗಿ ಕ್ರೈಸ್ತನೊಬ್ಬನು ತನ್ನನ್ನು ಸಿದ್ಧಪಡಿಸಿಕೊಳ್ಳಬೇಕು?
ಯೇಸು ಕ್ರಿಸ್ತನ ಮೂಲಕವಾಗಿ ನಾವು ಯೆಹೋವನಿಗೆ ನಮ್ಮನ್ನು ಸಮರ್ಪಿಸಿಕೊಂಡಾಗ, ದೇವರು ನಮ್ಮ ಮುಂದೆ ಒಂದು ಸಾಂಕೇತಿಕವಾದ ಓಟವನ್ನು ಇಟ್ಟನು. ಆ ಓಟದ ಅಂತ್ಯದಲ್ಲಿ, ಅದನ್ನು ಸಾಫಲ್ಯದಿಂದ ಮುಗಿಸುವವರೆಲ್ಲರಿಗೆ ಒಂದು ಬಹುಮಾನವನ್ನು ಅನುಗ್ರಹಿಸಲಾಗುವದು. ಯಾವ ಬಹುಮಾನ? ನಿತ್ಯಜೀವ! ಈ ಅತ್ಯುತ್ಕೃಷ್ಟ ಬಹುಮಾನವನ್ನು ಪಡೆಯಲು, ಕ್ರೈಸ್ತ ಓಟಗಾರನಿಗೆ ತಯಾರಿಸುವ ಅಗತ್ಯವಿದೆ, ಅದು ಕೇವಲ ಅಲ್ಪ-ಗತಿಯ ದೌಡಲ್ಲ, ಬದಲಾಗಿ ದೀರ್ಘ-ಗತಿಯ ಒಂದು ಓಟವಾಗಿದೆ. ಆದ್ದರಿಂದ ಅವನಿಗೆ ತಾಳ್ಮೆಯ ಅಗತ್ಯವಿದೆ. ಓಟದ ದೀರ್ಘ ಪರಿಶ್ರಮವನ್ನು ಮತ್ತು ಆ ಓಟದ ಸಮಯದಲ್ಲಿ ಎದುರಾಗುವ ಅಡಿತ್ಡಡೆಗಳನ್ನು ಎರಡನ್ನೂ ಅವನಿಗೆ ತಾಳಿಕೊಳ್ಳಲಿಕ್ಕಿದೆ.
2, 3. (ಎ) ಕ್ರೈಸ್ತ ಓಟವನ್ನು ಕೊನೆಯ ತನಕ ಓಡುವಂತೆ ನಮಗೆ ಯಾವುದು ಸಹಾಯ ಮಾಡುವುದು? (ಬಿ) ತಾಳ್ಮೆಯ ಓಟವನ್ನು ಓಡಲು ಸಂತೋಷವು ಯೇಸುವಿಗೆ ಹೇಗೆ ಸಹಾಯ ಮಾಡಿತು?
2 ಅಂಥ ಒಂದು ಓಟವನ್ನು ಕೊನೆಯ ತನಕ ಓಡುವರೆ ನಮಗೆ ಯಾವುದು ಸಹಾಯಕಾರಿಯಾಗಿದೆ? ಒಳ್ಳೇದು, ಯೇಸು ಭೂಮಿಯಲ್ಲಿ ಮನುಷ್ಯನಾಗಿದ್ದಾಗ ಅವನಿಗೆ ಯಾವುದು ಸಹಾಯ ಮಾಡಿತ್ತು? ಸಂತೋಷವೆಂಬ ಆ ಗುಣದಿಂದ ಅವನು ಅಂತರ್ಯದ ಬಲವನ್ನು ಸೆಳೆದನು. ಇಬ್ರಿಯ 12:1-3 ಹೇಳುವುದು: “ಇಷ್ಟುಮಂದಿ ಸಾಕ್ಷಿಯವರು ಮೇಘದೋಪಾದಿಯಲ್ಲಿ ನಮ್ಮ ಸುತ್ತಲೂ ಇರುವದರಿಂದ ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪವನ್ನು ನಾವು ಸಹಾ ತೆಗೆದಿಟ್ಟು ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ (ತಾಳ್ಮೆಯಿಂದ, NW) ಓಡೋಣ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಹಿಂಸಾಕಂಭದ ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ. ನೀವು ಮನಗುಂದಿದವರಾಗಿ ಬೇಸರಗೊಳ್ಳದಂತೆ ಆತನನ್ನು ಆಲೋಚಿಸಿರಿ. ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು.”
3 ಯೇಸುವು ತನ್ನ ಸಾರ್ವಜನಿಕ ಶುಶ್ರೂಷೆಯ ಸಮಯದಲ್ಲೆಲ್ಲಾ, ಯೆಹೋವನ ಸಂತೋಷದ ಕಾರಣದಿಂದಲೇ ತನ್ನ ಓಟವನ್ನು ಓಡಶಕ್ತನಾದನು. (ನೆಹೆಮೀಯ 8:10 ಹೋಲಿಸಿ.) ಹಿಂಸಾಕಂಬದ ಮೇಲೆ ಅಪಕೀರ್ತಿಯ ಮರಣವನ್ನು ಸಹ ಸಹಿಸಿಕೊಳ್ಳಲು ಆತನ ಸಂತೋಷವೇ ಅವನಿಗೆ ಸಹಾಯ ಮಾಡಿತು. ಆ ಮೇಲೆ ಅವನು ಮೃತರಿಂದ ಎದ್ದು ಬರುವ ಮತ್ತು ತನ್ನ ತಂದೆಯ ಬಲಗಡೆಗೆ ಏರಿಹೋಗುವ ಮತ್ತು ದೇವರ ಕಾರ್ಯವನ್ನು ಪೂರ್ಣಗೊಳಿಸುವಂತೆ ನೋಡುವ ಅವರ್ಣನೀಯ ಆನಂದವನ್ನು ಅನುಭವಿಸಿದನು. ದೇವರ ಪಕ್ಕದಲ್ಲಿರುವ ಮನುಷ್ಯನೋಪಾದಿ ತನ್ನ ತಾಳ್ಮೆಯಿಂದಾಗಿ ಅವನು ನಿತ್ಯಜೀವಕ್ಕೆ ತನಗಿರುವ ಹಕ್ಕನ್ನು ಸಾಧಿಸಿಕೊಂಡನು. ಹೌದು, ಲೂಕ 21:19 ಹೇಳುವಂತೆ, “ನಿಮ್ಮ ಸೈರಣೆಯಿಂದ ನಿಮ್ಮ ಪ್ರಾಣಗಳನ್ನು ಪಡಕೊಳ್ಳುವಿರಿ.”
4. ತನ್ನ ಜೊತೆ ಓಟಗಾರರಿಗೆ ಯೇಸು ಯಾವ ರೀತಿಯ ಮಾದರಿಯನ್ನಿಟ್ಟನು, ಮತ್ತು ನಾವು ನಮ್ಮ ಮನಸ್ಸನ್ನು ಯಾವುದರಲ್ಲಿ ಇಡಬೇಕು?
4 ಯೇಸು ಕ್ರಿಸ್ತನು ತನ್ನ ಹಿಂಬಾಲಕ ಓಟಗಾರರಿಗೆ ಮಾದರಿಗಳಲ್ಲಿ ಅತ್ಯುತ್ತಮವಾದದ್ದನ್ನು ಇಟ್ಟನು, ಮತ್ತು ನಾವು ಸಹಾ ಜಯಶಾಲಿಗಳಾಗಬಲ್ಲೆವೆಂಬ ಆಶ್ವಾಸನೆಯನ್ನು ಆತನ ಮಾದರಿಯು ನಮಗೆ ಕೊಡುತ್ತದೆ. (1 ಪೇತ್ರ 2:21) ಯೇಸು ನಮಗೆ ಏನು ಮಾಡಲು ಹೇಳುತ್ತಾನೋ ಅದನ್ನು ನಾವು ಮಾಡಬಲ್ಲೆವು. ಆತನು ತಾಳಿಕೊಂಡಂತೆ, ನಾವು ಸಹಾ ತಾಳಿಕೊಳ್ಳಬಲ್ಲೆವು. ನಾವಾತನ ದೃಢವಾದ ಅನುಕರಣೆಯನ್ನು ಬಿಡದೆ ಹಿಡಿಯುವಾಗ, ನಾವು ಸಂತೋಷಿಗಳಾಗಿರುವ ಕಾರಣಗಳ ಮೇಲೆ ನಾವು ನಮ್ಮ ಮನಸ್ಸನ್ನು ಇಡಲೇಬೇಕು. (ಯೋಹಾನ 15:11, 20, 21) ಆ ಮಹಿಮಾಭರಿತ ಬಹುಮಾನವಾದ ನಿತ್ಯಜೀವವು ದೊರೆಯುವ ತನಕ ಯೆಹೋವನ ಸೇವೆಯಲ್ಲಿ ಓಟವನ್ನು ಎಡೆಬಿಡದೆ ಓಡುವಂತೆ ಆ ಸಂತೋಷವು ನಮಗೆ ಬಲವನ್ನು ಕೊಡುವದು.—ಕೊಲೊಸ್ಸೆಯ 1:10, 11.
5. ನಮ್ಮ ಮುಂದಿರುವ ಓಟಕ್ಕಾಗಿ ನಾವು ಸಂತೋಷಿತರೂ ಬಲವುಳ್ಳವರೂ ಆಗುವುದು ಹೇಗೆ?
5 ಈ ಓಟವನ್ನು ಎಡೆಬಿಡದೆ ಓಡಲು ನಮಗೆ ಸಹಾಯಕವಾಗಿ, ಯೆಹೋವನು ನಮಗೆ ಬಲಾಧಿಕ್ಯವನ್ನು ಒದಗಿಸುತ್ತಾನೆ. ನಾವು ಹಿಂಸೆಗೆ ಒಳಗಾದಾಗ, ಈ ಬಲಾಧಿಕ್ಯವು ಮತ್ತು ಹಿಂಸೆಯನ್ನು ಅನುಭವಿಸುವ ಸುಯೋಗವನ್ನು ಏಕೆ ಪಡೆದಿದ್ದೇವೆಂಬ ಜ್ಞಾನವು ನಮ್ಮನ್ನು ಬಲಪಡಿಸುತ್ತದೆ. (2 ಕೊರಿಂಥ 4:7-9) ದೇವರ ನಾಮವನ್ನು ಗೌರವಿಸುವುದಕ್ಕಾಗಿ ಮತ್ತು ಆತನ ಪರಮಾಧಿಕಾರದ ನಿರ್ದೋಷೀಕರಣಕ್ಕಾಗಿ ನಾವು ಅನುಭವಿಸುವ ಯಾವುದೇ ಕಷ್ಟವು ಯಾರೂ ನಮ್ಮಿಂದ ಅಪಹರಿಸಲಾಗದ ಒಂದು ಸಂತೋಷಕ್ಕೆ ಕಾರಣವಾಗಿದೆ. (ಯೋಹಾನ 16:22) ಆದುದರಿಂದಲೇ ಅಪೊಸ್ತಲರು ಯೇಸುವಿನ ಸಂಬಂಧದಲ್ಲಿ ಯೆಹೋವ ದೇವರು ಪೂರೈಸಿದ ಆಶ್ಚರ್ಯಕರ ವಿಷಯಗಳಿಗೆ ಸಾಕ್ಷಿಕೊಟ್ಟದ್ದಕ್ಕಾಗಿ ಯೆಹೂದಿ ಸನ್ಹೇದ್ರಿನ್ನ ಅಪ್ಪಣೆಯಿಂದ ಹೊಡೆಯಲ್ಪಟ್ಟಾಗ, “ತಾವು ಆ ಹೆಸರಿನ ನಿಮಿತ್ತವಾಗಿ ಅವಮಾನಪಡುವುದಕ್ಕೆ ಯೋಗ್ಯರೆನಿಸಿಕೊಂಡರೆಂದು” ಸಂತೋಷಿಸಿದರು. (ಅಪೊಸ್ತಲರ ಕೃತ್ಯಗಳು 5:41, 42) ಅವರ ಸಂತೋಷವು ಹಿಂಸೆಯಿಂದ ತಾನೇ ಬಂದಿರಲಿಲ್ಲ, ಯೆಹೋವ ದೇವರನ್ನು ಮತ್ತು ಯೇಸು ಕ್ರಿಸ್ತನನ್ನು ತಾವು ಮೆಚ್ಚಿಸುತ್ತಿದ್ದೇವೆಂದು ಅರಿತುಕೊಂಡ ಅಂತರ್ಯದ ಆಳವಾದ ತೃಪ್ತಿಯಿಂದ ಅದು ಬಂದಿತ್ತು.
6, 7. ಸಂಕಟಗಳು ಬಂದಾಗ್ಯೂ ಕ್ರೈಸ್ತ ಓಟಗಾರನು ಉಲ್ಲಾಸಿಸಬಲ್ಲನೇಕೆ, ಮತ್ತು ಯಾವ ಫಲಿತಾಂಶದೊಂದಿಗೆ?
6 ನಮ್ಮ ಜೀವಿತಗಳಲ್ಲಿ ಇನ್ನೊಂದು ಪೋಷಕ ಶಕ್ತಿಯು ದೇವರು ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯೇ. ಪೌಲನು ಅದನ್ನು ಹೀಗೆ ಬರೆದಿದ್ದಾನೆ: “ಹೀಗಿರಲಾಗಿ ನಾವು ನಂಬಿಕೆಯಿಂದ ನೀತಿವಂತರಾದ ಕಾರಣ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರೊಂದಿಗೆ ಉಂಟಾದ ಸಮಾಧಾನದಲ್ಲಿ ಇರೋಣ. ನಾವು ಈಗ ನೆಲೆಗೊಂಡಿರುವ ದೇವರ ಕೃಪಾಶ್ರಯದಲ್ಲಿ ಆತನ ಮುಖಾಂತರವೇ ನಂಬಿಕೆಯಿಂದ ಪ್ರವೇಶವಾಯಿತು. ಮತ್ತು ದೇವರ ಮಹಿಮೆಯನ್ನು ಹೊಂದುವೆವೆಂಬ ಭರವಸದಿಂದ ಉಲ್ಲಾಸವಾಗಿದ್ದೇವೆ. ಯಾಕಂದರೆ ಉಪದ್ರವದಿಂದ ತಾಳ್ಮೆಯು ಹುಟ್ಟುತ್ತದೆ, ತಾಳ್ಮೆಯಿಂದ ಅನುಭವ ಸಿದ್ಧಿ (ಮೆಚ್ಚಿಗೆಯ ಸ್ಥಿತಿ, NW) ಹುಟ್ಟುತ್ತದೆ, ಮೆಚ್ಚಿಗೆಯ ಸ್ಥಿತಿಯಿಂದ ನಿರೀಕ್ಷೆಯು ಹುಟ್ಟುತ್ತದೆಂದು ಬಲ್ಲೆವು. ಈ ನಿರೀಕ್ಷೆಯು ನಮ್ಮ ಆಶೆಯನ್ನು ಭಂಗಪಡಿಸುವುದಿಲ್ಲ.”—ರೋಮಾಪುರ 5:1-5.
7 ಉಪದ್ರವಗಳು ತಾವೇ ಸಂತೋಷಕರವಲ್ಲ, ಆದರೂ ಅವು ಅನಂತರ ಹುಟ್ಟಿಸುವ ಶಾಂತಿಶೀಲ ಫಲಗಳು ಆನಂದಕರವಾಗಿವೆ. ಈ ಫಲಗಳು ತಾಳ್ಮೆ, ಮೆಚ್ಚಿಗೆಯ ಸ್ಥಿತಿ, ನಿರೀಕ್ಷೆ ಮತ್ತು ಆ ನಿರೀಕ್ಷೆಯ ನೆರವೇರಿಕೆಯೇ. ನಾವು ತೋರಿಸುವ ತಾಳ್ಮೆಯು ದೈವಿಕ ಮೆಚ್ಚಿಗೆಯನ್ನು ಗಳಿಸುವಂತೆ ನಮ್ಮನ್ನು ನಡಿಸುವದು. ನಮಗೆ ದೇವರ ಮೆಚ್ಚಿಗೆಯು ದೊರೆತಾಗ, ಆತನು ಮಾಡಿರುವ ವಾಗ್ದಾನಗಳ ನೆರವೇರಿಕೆಗಾಗಿ ನಾವು ಆತ್ಮ ವಿಶ್ವಾಸದಿಂದ ನಿರೀಕ್ಷಿಸಬಹುದು. ಈ ನಿರೀಕ್ಷೆಯು ನಮ್ಮನ್ನು ಯೋಗ್ಯ ಮಾರ್ಗದಲ್ಲಿ ಇಡುತ್ತದೆ ಮತ್ತು ಈ ನಿರೀಕ್ಷೆಯು ಕೈಗೂಡುವ ತನಕ ಅದು ನಮ್ಮನ್ನು ಉಪದ್ರವಗಳ ಕೆಳಗೆ ಪ್ರೋತ್ಸಾಹಿಸುತ್ತದೆ.—2 ಕೊರಿಂಥ 4:16-18.
ಸಹಿಸಿಕೊಳ್ಳುವವರು ಧನ್ಯರು!
8. ಈ ಕಾಯುವ ಕಾಲಾವಧಿಯು ನಮಗೆ ವ್ಯರ್ಥವಾದ ಕಾಲ ಕಳೆಯುವಿಕೆಯಲ್ಲವೇಕೆ?
8 ಓಟಗಾರರಿಗೆ ಬಹುಮಾನವು ವಿತರಣೆಯಾಗಲು ದೈವಿಕವಾಗಿ ಗೊತ್ತು ಮಾಡಲ್ಪಟ್ಟ ಸಮಯವನ್ನು ಕಾಯುತ್ತಿರುವಾಗ, ನಾವು ಅನುಭವಿಸುವ ಕೆಲವು ಬದಲಾವಣೆಗಳು ಅಲ್ಲಿವೆ. ಪರೀಕ್ಷೆಗಳನ್ನು ಸಾಫಲ್ಯತೆಯಿಂದ ಎದುರಿಸುವದರಿಂದ ಉಂಟಾಗುವ ಆತ್ಮಿಕ ಸುಧಾರಣೆಗಳೇ ಅವಾಗಿವೆ, ಮತ್ತು ಅವು ನಮಗೆ ದೇವರ ಮಹಾ ಮೆಚ್ಚಿಗೆಯನ್ನು ಗಳಿಸುತ್ತವೆ. ನಾವು ಏನಾಗಿದ್ದೇವೆಂದು ಅವು ರುಜುಪಡಿಸುತ್ತವೆ ಮತ್ತು ಪುರಾತನ ಕಾಲದ ನಂಬಿಗಸ್ತರು ತೋರಿಸಿದ ಅವೇ ಸದ್ಗುಣಗಳನ್ನು, ವಿಶೇಷವಾಗಿ ನಮ್ಮ ಮಾದರಿಯಾದ ಯೇಸು ಕ್ರಿಸ್ತನು ಪ್ರದರ್ಶಿಸಿದವುಗಳನ್ನು ತೋರಿಸುವ ಸಂದರ್ಭವನ್ನು ಕೊಡುತ್ತದೆ. ಶಿಷ್ಯ ಯಾಕೋಬನು ಹೇಳುವುದು: “ನನ್ನ ಸಹೋದರರೇ, ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನು ಉಂಟುಮಾಡುತ್ತದೆಂದು ತಿಳಿದು ನೀವು ನಾನಾ ವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ಎಣಿಸಿರಿ. ಆ ತಾಳ್ಮೆಯು ಸಿದ್ಧಿಗೆ ಬರಲಿ; ಆಗ ನೀವು ಶಿಕ್ಷಿತರೂ ಸರ್ವಸುಗುಣವುಳ್ಳವರೂ ಏನೂ ಕಡಿಮೆಯಿಲ್ಲದವರೂ ಆಗಿರುವಿರಿ.” (ಯಾಕೋಬ 1:2-4) ಹೌದು, ಹಲವಾರು ವಿಧವಾದ ಕಷ್ಟಗಳು ಬರುವುದನ್ನು ನಾವು ನಿರೀಕ್ಷಿಸಬಹುದು, ಆದರೆ ಇವು ನಮಗೆ ಯೋಗ್ಯ ಸದ್ಗುಣಗಳನ್ನು ಬೆಳೆಸುತ್ತಾ ಇರುವಂತೆ ಸಾಧಕವಾಗುವದು. ಯಾವ ಕಷ್ಟ ಬಿಕ್ಕಟ್ಟುಗಳನ್ನೇ ನಾವು ಎದುರಿಸಲಿ, ಆ ಬಹುಮಾನವನ್ನು ಜಯಿಸುವ ತನಕ ನಾವೀ ಓಟದಲ್ಲಿ ಉಳಿಯುವೆವು ಎಂಬದನ್ನು ಹೀಗೆ ನಾವು ತೋರಿಸಿಕೊಡುವೆವು.
9, 10. (ಎ) ಕಷ್ಟಗಳನ್ನು ತಾಳಿಕೊಳ್ಳುವವರು ಧನ್ಯರೇಕೆ, ಮತ್ತು ನಾವು ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು? (ಬಿ) ಪುರಾತನ ಕಾಲದ ಧನ್ಯರು ಯಾರು, ಮತ್ತು ನಾವೂ ಅವರೊಂದಿಗೆ ಹೇಗೆ ಸೇರಿಕೊಳ್ಳಬಲ್ಲೆವು?
9 ಹೀಗೆ ಯಾಕೋಬನು, “ಕಷ್ಟವನ್ನು ಸಹಿಸಿಕೊಳ್ಳುವವನು ಧನ್ಯನು; ಅವನು ಪರಿಶೋಧಿತನಾದ ಮೇಲೆ ಜೀವವೆಂಬ ಜಯಮಾಲೆಯನ್ನು ಹೊಂದುವನು; ಯೆಹೋವನು ತನ್ನನ್ನು ಪ್ರೀತಿಸುವವರಿಗೆ ಇದನ್ನು ವಾಗ್ದಾನ ಮಾಡಿದ್ದಾನೆ,” ಎಂದು ಹೇಳಿದ್ದರಲ್ಲೇನೂ ಆಶ್ಚರ್ಯವಿಲ್ಲ! (ಯಾಕೋಬ 1:12) ಆದುದರಿಂದ ನಾವು ಎಡೆಬಿಡದೆ ಹೊಂದಿಕೆಯಲ್ಲಿ ಆ ಕಷ್ಟಗಳನ್ನು ಎದುರಿಸೋಣ, ಅವನ್ನು ಪರಿಹರಿಸುವಂತೆ ನಮ್ಮನ್ನು ಬಲಪಡಿಸುವ ಆ ದೈವಿಕ ಗುಣಗಳಿಂದ ಸಜ್ಜಿತರಾಗೋಣ.—2 ಪೇತ್ರ 1:5-8.
10 ದೇವರು ನಮ್ಮೊಂದಿಗೆ ವ್ಯವಹರಿಸುವ ರೀತಿಯು ಹೊಸತಲ್ಲ ಅಥವಾ ಅಪೂರ್ವವಲವ್ಲೆಂಬದನ್ನು ನೆನಪಿಡಿರಿ. ಪುರಾತನ ಕಾಲದ “ಮೇಘದೋಪಾದಿಯ” ನಂಬಿಗಸ್ತ ಸಾಕ್ಷಿಗಳು ದೇವರಿಗೆ ತಮ್ಮ ಏಕನಿಷ್ಠೆಯನ್ನು ರುಜುಪಡಿಸಿದಾಗ ಇದೇ ರೀತಿಯಲ್ಲಿ ವ್ಯವಹರಿಸಲ್ಪಟ್ಟಿದ್ದರು. (ಇಬ್ರಿಯ 12:1) ಅವರ ಕಡೆಗಿನ ದೇವರ ಮೆಚ್ಚಿಗೆಯು ಬೈಬಲಿನಲ್ಲಿ ದಾಖಲೆಯಾಗಿದೆ ಮತ್ತು ನಾವು ಅವರನ್ನು ಧನ್ಯರೆಂದು ಪರಿಗಣಿಸುತ್ತೇವೆ ಯಾಕಂದರೆ ಪರೀಕ್ಷೆಯ ಕೆಳಗೆ ಅವರು ದೃಢರಾಗಿ ನಿಂತರು. ಯಾಕೋಬನು ಹೇಳುವದು: “ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ವಿಷಯದಲ್ಲಿ ಯೆಹೋವನ ಹೆಸರಿನಿಂದ ಮಾತಾಡಿದ ಪ್ರವಾದಿಗಳನ್ನೇ ಮಾದರಿ ಮಾಡಿಕೊಳ್ಳಿರಿ. ತಾಳಿಕೊಂಡಿರುವವರನ್ನು ಧನ್ಯರೆಂದು ಹೇಳುತ್ತೇವಲ್ಲವೇ. ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಯೆಹೋವನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಯೆಹೋವನು ಕರುಣಾಸಾಗರನೂ ದಯಾಳುವೂ ಆಗಿದ್ದಾನೆಂದು ತಿಳಿದಿದ್ದೀರಷ್ಟೆ.” (ಯಾಕೋಬ 5:10, 11) ಈ ಕಠಿಣ ದಿವಸಗಳಲ್ಲಿ, ಪ್ರಾಚೀನ ಶತಮಾನಗಳಲ್ಲಿನ ಆ ಪ್ರವಾದಿಗಳು ಮಾಡಿದಂತೆಯೇ ಯೆಹೋವನನ್ನು ಸಮಗ್ರತೆಯಿಂದ ಸೇವಿಸುವ ಜನರು ಈ ಲೋಕದ ದೃಶ್ಯದಲ್ಲಿ ಗೋಚರಿಸುವರು ಎಂಬದಾಗಿ ಮುಂತಿಳಿಸಲ್ಪಟ್ಟಿತ್ತು. ಹಾಗೆ ಮಾಡುವವರಲ್ಲಿ ಒಬ್ಬರಾಗಿ ಕಂಡುಬರುವದಾದರೆ ನಾವು ಧನ್ಯರಲ್ಲವೇ?—ದಾನಿಯೇಲ 12:3; ಪ್ರಕಟನೆ 7:9.
ಯೆಹೋವನ ಉತ್ತೇಜಕ ವಾಕ್ಯದಿಂದ ಆಧಾರ ಪಡೆಯುವದು
11. ದೇವರ ವಾಕ್ಯವು ನಮಗೆ ತಾಳಿಕೊಳ್ಳಲು ಸಹಾಯ ಮಾಡುವದು ಹೇಗೆ, ಮತ್ತು ನಾವು ಯೇಸುವಿನ ಸಾಮ್ಯದ ಬಂಡೆಯ ನೆಲವಾಗಿರಬಾರದೇಕೆ?
11 ತಾಳ್ಮೆಗೆ ನೆರವಾಗುವ ಇನ್ನೊಂದು ಸಹಾಯಕ್ಕೆ ಕೈತೋರಿಸುತ್ತಾ ಪೌಲನು, “ಸೈರಿಸುವ ತಾಳ್ಮೆಯ ಮೂಲಕ ಮತ್ತು ಶಾಸ್ತ್ರವಚನಗಳಲ್ಲಿ ಆಧರಿಸಿರುವ ಉತ್ತೇಜನದ ಮೂಲಕ ನಾವು ನಮ್ಮ ನಿರೀಕ್ಷೆಯನ್ನು ದೃಢವಾಗಿ ಹಿಡಿಯಬಹುದು” ಎಂದು ಹೇಳಿದ್ದಾನೆ. (ರೋಮಾಪುರ 15:4, ದ ಟ್ವೆಂಟಿಯತ್ ಸೆಂಟ್ಯುರಿ ನ್ಯೂ ಟೆಸ್ಟಮೆಂಟ್.) ಎಲ್ಲಾ ಸಮಯದಲ್ಲಿ ಒಂದು ಯೋಗ್ಯವಾದ ಪ್ರತಿಕ್ರಿಯೆಯನ್ನು ನಮ್ಮಿಂದ ಹೊರದೆಗೆಯಲಾಗುವಂತೆ, ದೇವರ ವಾಕ್ಯವಾದ ಸತ್ಯವು, ನಮ್ಮೊಳಗೆ ಆಳವಾಗಿ ಬೇರೂರಿರಬೇಕು. ಬಿತ್ತುವವನ ಸಾಮ್ಯದಲ್ಲಿ ಯೇಸುವಿನಿಂದ ವರ್ಣಿಸಲ್ಪಟ್ಟ ಆ ಬಂಡೆಯ ನೆಲದಂತೆ ನಾವಿದ್ದರೆ ಯಾವುದೇ ಪ್ರಯೋಜನವನ್ನು ಹೊಂದಲಾರೆವು: “ಬೇರೆ ಕೆಲವರು ವಾಕ್ಯವನ್ನು ಕೇಳಿದ ಕೂಡಲೇ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ. ತಮಗೆ ಬೇರಿಲ್ಲದ ಕಾರಣ ಇವರು ಸ್ವಲ್ಪ ಕಾಲ ಮಾತ್ರವೇ ಇದ್ದು ಬಳಿಕ ಆ ವಾಕ್ಯದ ನಿಮಿತ್ತವಾಗಿ ಸಂಕಟವಾಗಲಿ ಹಿಂಸೆಯಾಗಲಿ ಬಂದರೆ ಬೇಗ ಎಡವಿ ಬೀಳುತ್ತಾರೆ. ಇವರೇ ಬೀಜಬಿದ್ದ ಬಂಡೆಯ ನೆಲವಾಗಿರುವರು.” (ಮಾರ್ಕ 4:16, 17) ದೇವರ ವಾಕ್ಯದ ಸತ್ಯವು ಅಂಥವರಲ್ಲಿ ಆಳವಾಗಿ ಬೇರೂರಲ್ಪಡುವುದಿಲ್ಲ; ಆದಕಾರಣ ಸಂಕಟಗಳ ಸಮಯದಲ್ಲಿ, ಬಲ ಮತ್ತು ನಿರೀಕ್ಷೆಯ ನಿಜಮೂಲವಾದ ಅದರಲ್ಲಿ ಆಧರಿಸಿ ನಿಲ್ಲಲು ಅವರು ಅಶಕ್ತರಾಗಿರುತ್ತಾರೆ.
12. ನಾವು ಸುವಾರ್ತೆಯನ್ನು ಸ್ವೀಕರಿಸುವಾಗ ಯಾವ ವಿಷಯವಾಗಿ ನಮ್ಮನ್ನು ವಂಚಿಸಿಕೊಳ್ಳಬಾರದು?
12 ರಾಜ್ಯದ ಸುವಾರ್ತೆಯನ್ನು ಸ್ವೀಕರಿಸುವ ಯಾವನಾದರೂ ಏನು ಹಿಂಬಾಲಿಸಿ ಬರಲಿದೆಯೇ ಆ ವಿಷಯವಾಗಿ ತನ್ನನ್ನು ವಂಚಿಸಿಕೊಳ್ಳಬಾರದು. ಅವನು ಸಂಕಟಗಳೂ ಹಿಂಸೆಗಳೂ ಬರಬಹುದಾದ ಒಂದು ಜೀವಿತ ಮಾರ್ಗವನ್ನು ತಕ್ಕೊಳ್ಳುತ್ತಾ ಇದ್ದಾನೆ. (2 ತಿಮೊಥಿ 3:12) ಆದರೆ ದೇವರ ವಾಕ್ಯಕ್ಕೆ ದೃಢವಾಗಿ ಹಿಡಿದುಕೊಂಡದ್ದಕ್ಕಾಗಿ ಮತ್ತು ಬೇರೆಯವರಿಗೆ ಅದನ್ನು ತಿಳಿಸಿದ್ದಕ್ಕಾಗಿ ಹಲವಾರು ವಿಧದ ಕಷ್ಟಗಳಿಗೆ ಗುರಿಯಾಗುವುದಾದರೆ, ಅವನು ಅದನ್ನು “ಆನಂದಕರ”ವಾಗಿ ಪರಿಗಣಿಸತಕ್ಕದ್ದು.—ಯಾಕೋಬ 1:2, 3.
13. ಥೆಸಲೊನೀಕದ ಕ್ರೈಸ್ತರ ವಿಷಯದಲ್ಲಿ ಪೌಲನು ಸಂತೋಷಿಸಿದ್ದು ಹೇಗೆ ಮತ್ತು ಏಕೆ?
13 ಒಂದನೆಯ ಶತಮಾನದಲ್ಲಿ, ಪೌಲನ ಸಾರುವಿಕೆಯ ಕಾರಣ ಥೆಸಲೊನೀಕದಲ್ಲಿ ವಿರೋಧಿಗಳು ದೊಂಬಿಯೆದ್ದರು. ಪೌಲನು ಬೆರೋಯಕ್ಕೆ ಹೋದಾಗ ಈ ಹಿಂಸಕರು ಪೌಲನನ್ನು ಅಲಿಗ್ಲೂ ಹಿಂಬಾಲಿಸಿ ಹೆಚ್ಚು ಕಲಹವೆಬ್ಬಿಸಲು ಪ್ರಯತ್ನಿಸಿದರು. ಥೆಸಲೊನೀಕದಲ್ಲಿ ಉಳಿದಿದ್ದ ನಂಬಿಗಸ್ತರಿಗೆ, ಹಿಂಸಿತ ಅಪೊಸ್ತಲನು ಬರೆದದ್ದು: “ಸಹೋದರರೇ, ನಾವು ಯಾವಾಗಲೂ ನಿಮ್ಮ ವಿಷಯದಲ್ಲಿ ದೇವರಿಗೆ ಕೃತಜ್ಞತಾಸ್ತುತಿ ಮಾಡುವದಕ್ಕೆ ಬದ್ಧರಾಗಿದ್ದೇವೆ. ಹಾಗೆ ಮಾಡುವದು ಯೋಗ್ಯ; ಯಾಕಂದರೆ ನಿಮ್ಮ ನಂಬಿಕೆಯು ಬಹಳ ಅಭಿವೃದ್ಧಿಹೊಂದುತ್ತಾ ಬರುತ್ತದೆ. ಪರಸ್ಪರವಾದ ಪ್ರೀತಿ ನಿಮ್ಮೆಲ್ಲರಲಿಯ್ಲೂ ಹೆಚ್ಚುತ್ತಾ ಬರುತ್ತದೆ. ಹೀಗಿರುವದರಿಂದ ನಿಮಗೆ ಬಂದಿರುವ ಎಲ್ಲಾ ಹಿಂಸೆಗಳಲ್ಲಿಯೂ ನೀವು ಅನುಭವಿಸುತ್ತಿರುವ ಸಂಕಟಗಳಲ್ಲಿಯೂ ತೋರಿ ಬಂದ ನಿಮ್ಮ ತಾಳ್ಮೆ ನಂಬಿಕೆಗಳನ್ನು ನೆನಸಿ ನಿಮ್ಮ ವಿಷಯವಾಗಿ ಹೆಚ್ಚಳಪಟ್ಟು ದೇವರ ಸಭೆಗಳೊಳಗೆ ನಾವೇ ಮಾತಾಡುತ್ತೇವೆ. ದೇವರು ನ್ಯಾಯವಾದ ತೀರ್ಪು ಮಾಡುತ್ತಾನೆಂಬದಕ್ಕೆ ನಿಮ್ಮ ತಾಳ್ಮೆಯು ಸ್ಪಷ್ಟವಾಗಿದ ನಿದರ್ಶನೆಯಾಗಿದೆ. ಯಾವ ದೇವರ ರಾಜ್ಯಕ್ಕೋಸ್ಕರ ನೀವು ಕಷ್ಟವನ್ನುನುಭವಿಸುತ್ತೀರೋ ಅದಕ್ಕೆ ನೀವು ಯೋಗ್ಯರಾಗಬೇಕೆಂಬದೇ ದೇವರ ಅಭಿಪ್ರಾಯ.” (2 ಥೆಸಲೊನೀಕ 1:3-5) ವೈರಿಗಳ ಕೈಯಿಂದ ಹಿಂಸೆಗಳು ಬಂದಾಗ್ಯೂ ಥೆಸಲೊನೀಕದ ಕ್ರೈಸ್ತರು ಕ್ರಿಸ್ತಸದೃಶ್ಯತೆಯಲ್ಲಿ ಮತ್ತು ಸಂಖ್ಯೆಯಲ್ಲಿ ಹೆಚ್ಚುತ್ತಾ ಬಂದರು. ಅದು ಹೇಗೆ ಶಕ್ಯವಾಯಿತು? ಹೇಗಂದರೆ ಅವರು ಯೆಹೋವನ ಉತ್ತೇಜಕ ವಾಕ್ಯದಿಂದ ಬಲವನ್ನು ಹೀರಿಕೊಂಡದರ್ದಿಂದಲೇ. ಅವರು ಕರ್ತನ ಆಜೆಗ್ಞಳಿಗೆ ವಿಧೇಯರಾದರು ಮತ್ತು ತಾಳ್ಮೆಯಿಂದ ಓಟವನ್ನು ಓಡಿದರು.—2 ಧೆಸಲೊನೀಕ 2:13-17.
ಬೇರೆಯವರ ರಕ್ಷಣೆಗಾಗಿ
14. (ಎ) ಕಷ್ಟಗಳ ನಡುವೆಯೂ ಶುಶ್ರೂಷೆಯಲ್ಲಿ ನಾವು ಸಂತೋಷದಿಂದ ಇರುವುದು ಯಾವ ಕಾರಣಗಳಿಗಾಗಿ? (ಬಿ) ಯಾವುದಕ್ಕಾಗಿ ನಾವು ಪ್ರಾರ್ಥಿಸುತ್ತೇವೆ ಮತ್ತು ಏಕೆ?
14 ಮುಖ್ಯವಾಗಿ ದೇವರ ನಿರ್ದೋಷೀಕರಣಕ್ಕಾಗಿ, ನಾವು ಕಷ್ಟಗಳನ್ನು ಮತ್ತು ಹಿಂಸೆಗಳನ್ನು ನಂಬಿಗಸ್ತಿಕೆಯಿಂದ ಮತ್ತು ಗೊಣಗುಟ್ಟದೆ ತಾಳಿಕೊಳ್ಳುತ್ತೇವೆ. ಆದರೆ ಅಂಥ ವಿಷಯಗಳಿಗೆ ನಾವೇಕೆ ಅಧೀನಪಡಿಸಿಕೊಳ್ಳಬೇಕೆಂಬದಕ್ಕೆ ಇನ್ನೊಂದು ನಿಸ್ವಾರ್ಥ ಕಾರಣವು ಅಲ್ಲಿದೆ: “ರಕ್ಷಣೆಗಾಗಿ ಬಹಿರಂಗ ಘೋಷಣೆಯನ್ನು” ಮಾಡಲು ದೇವರ ರಾಜ್ಯಕ್ಕಾಗಿ ಹೆಚ್ಚು ಪ್ರಚಾರಕರು ಏಳುವಂತೆ ನಾವು ಬೇರೆಯವರಿಗೆ ರಾಜ್ಯದ ಶುಭವಾರ್ತೆಯನ್ನು ಹೇಳುತ್ತಾ ಮುಂದುವರಿಯಲಿಕ್ಕಾಗಿಯೇ. (ರೋಮಾಪುರ 10:10) ಹೆಚ್ಚು ರಾಜ್ಯ ಪ್ರಚಾರಕರನ್ನು ಒದಗಿಸುವ ಮೂಲಕ ಬೆಳೆಯ ಯಜಮಾನನು ನಮ್ಮ ಕಾರ್ಯವನ್ನು ಆಶೀರ್ವದಿಸುವಂತೆ ದೇವರ ಸೇವೆಯನ್ನು ಮಾಡುವವರು ಪ್ರಾರ್ಥಿಸಬೇಕಾಗಿದೆ. (ಮತ್ತಾಯ 9:38) ಪೌಲನು ತಿಮೊಥಿಗೆ ಬರೆದದ್ದು: “ನೀನು ನನ್ನಿಂದ ಅನೇಕ ಸಾಕ್ಷಿಗಳ ಮುಂದೆ ಕೇಳಿದ ಉಪದೇಶವನ್ನು ಇತರರಿಗೆ ಬೋಧಿಸಶಕ್ತರಾದ ನಂಬಿಗಸ್ತ ಮನುಷ್ಯರಿಗೆ ಒಪ್ಪಿಸಿಕೊಡು. ಕ್ರಿಸ್ತ ಯೇಸುವಿನ ಒಳ್ಳೇ ಸೈನಿಕನಂತೆ ನನ್ನೊಂದಿಗೆ ಶ್ರಮೆವಹಿಸು.”—2 ತಿಮೊಧಿ 2:2, 3.
15. ನಾವು ನಮ್ಮನ್ನು ಸೈನಿಕರಂತೆ ಮತ್ತು “ರಂಗಸ್ಥಳದಲ್ಲಿ” ಪ್ರತಿಸ್ಪರ್ಧಿಗಳಂತೆ ನಡಿಸಿಕೊಳ್ಳಬೇಕು ಏಕೆ?
15 ಒಬ್ಬ ಸೈನಿಕನು ಮಿಲಿಟರಿಯಲಿಲ್ಲದ ನಾಗರಿಕನ ಕಡಿಮೆ ನಿರ್ಬಂಧದ ಜೀವಿತದಿಂದ ತನ್ನನ್ನು ಪ್ರತ್ಯೇಕಿಸಿಕೊಳ್ಳುತ್ತಾನೆ. ತದ್ರೀತಿಯಲ್ಲಿ ನಾವು, ಕರ್ತನ ಸೈನ್ಯದಲ್ಲಿ ಇರದೆ, ವಾಸ್ತವದಲ್ಲಿ ವಿರೋಧ ಪಕ್ಷದಲ್ಲಿ ಇರುವವರ ಕಾರ್ಯಾಧಿಗಳಲ್ಲಿ ನಮ್ಮನ್ನು ಸಿಕ್ಕಿಸಿಕೊಳ್ಳಬಾರದು, ಹೀಗೆ ಪೌಲನು ತಿಮೊಥಿಗೆ ಮತ್ತೂ ಬರೆದದ್ದು: “ಯುದ್ಧಕ್ಕೆ ಹೋಗುವ ಸೈನಿಕನು ಲೋಕವ್ಯವಹಾರದಲ್ಲಿ ಸಿಕ್ಕಿಕೊಳ್ಳದೆ ತನ್ನನ್ನು ಸೈನ್ಯದಲ್ಲಿ ಸೇರಿಸಿಕೊಂಡವರನ್ನು ಮೆಚ್ಚಿಸುವದಕ್ಕೆ ಪ್ರಯಾಸಪಡುತ್ತಿರುವನಲ್ಲವೇ? ಇದಲ್ಲದೆ ಯಾವನಾದರೂ ರಂಗಸ್ಥಳದಲ್ಲಿ ಎದುರಾಳಿಯೊಡನೆ ಹೋರಾಡುವಾಗ ನಿಯಮದ ಪ್ರಕಾರ ಹೋರಾಡದಿದ್ದರೆ ಅವನಿಗೆ ಜಯಮಾಲೆಯು ದೊರೆಯುವದಿಲ್ಲ.” (2 ತಿಮೊಥಿ 2:4, 5) “ಜೀವದ ಜಯಮಾಲೆಯ” ಓಟದಲ್ಲಿ ವಿಜೇತರಾಗುವದಕ್ಕೋಸ್ಕರ, ಓಟಗಾರರು ಆತ್ಮ ಸಂಯಮವನ್ನು ಅಭ್ಯಾಸಿಸಬೇಕು ಮತ್ತು ನಿರುಪಯೋಗವಾದ ಭಾರಗಳನ್ನು ಮತ್ತು ಅಭ್ಯಂತರಗಳನ್ನು ವರ್ಜಿಸಬೇಕು. ಈ ರೀತಿಯಲ್ಲಿ ಅವರು ರಕ್ಷಣಾ ಸುವಾರ್ತೆಯನ್ನು ಇತರರಿಗೆ ತರುವುದರಲ್ಲಿ ತಮ್ಮನ್ನು ಕೇಂದ್ರೀಕರಿಸಬಲ್ಲರು.—ಯಾಕೋಬ 1:12; 1 ಕೊರಿಂಥ 9:24, 25 ಹೋಲಿಸಿ.
16. ಏನನ್ನು ಬಂಧಿಸಲು ಸಾಧ್ಯವಿಲ್ಲ, ಮತ್ತು ಯಾರ ಪ್ರಯೋಜನಕ್ಕಾಗಿ ನಾವು ತಾಳಿಕೊಳ್ಳುತ್ತೇವೆ?
16 ನಾವು ದೇವರನ್ನು ಮತ್ತು ಆತನನ್ನು ಹುಡುಕಲು ಬಯಸುವ ಕುರಿಸದೃಶ್ಯರನ್ನು ಪ್ರೀತಿಸುವುದರಿಂದ, ರಕ್ಷಣಾ ಸಂದೇಶದೊಂದಿಗೆ ಅವರನ್ನು ತಲಪಲಿಕ್ಕಾಗಿ ಬಹಳ ಪ್ರಯಾಸಪಡಲು ಸಂತೋಷಿಸುತ್ತೇವೆ. ದೇವರ ವಾಕ್ಯವನ್ನು ಸಾರಿದಕ್ಕಾಗಿ ವೈರಿಗಳು ನಮ್ಮನ್ನು ಬಂಧನಕ್ಕೆ ಹಾಕಬಹುದು. ಆದರೆ ದೇವರ ವಾಕ್ಯವನ್ನು ಬಂಧಿಸ ಸಾಧ್ಯವಿಲ್ಲ, ಮತ್ತು ಇತರರ ರಕ್ಷಣೆಗಾಗಿ ಅದನ್ನು ತಿಳಿಸುವುದಕ್ಕೆ ಬೇಡಿಗಳನ್ನು ಹಾಕಲಾಗದು. ಕಷ್ಟಗಳನ್ನು ಎದುರಿಸಲು ತಾನೇಕೆ ಅಷ್ಟು ಸಿದ್ಧಮನಸ್ಕನೆಂಬದನ್ನು ಪೌಲನು ತಿಮೊಥಿಗೆ ವಿವರಿಸಿದನು: “ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೂ, ದಾವೀದನ ವಂಶದವನೂ ಆಗಿರುವ ಯೇಸು ಕ್ರಿಸ್ತನನ್ನು ಜ್ಞಾಪಕಮಾಡಿಕೋ. ಇದೇ ನಾನು ಸಾರುವ ಸುವಾರ್ತೆ. ಇದರಲ್ಲಿ ನಾನು ಕಷ್ಟವನ್ನನುಭವಿಸಿ ದುಷ್ಕರ್ಮಿಯಂತೆ ಸಂಕೋಲೆಯಿಂದ ಕಟ್ಟಲ್ಪಟ್ಟವನಾಗಿದ್ದೇನೆ. ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ. ಆದಕಾರಣ ದೇವರಾರಿಸಿಕೊಂಡವರು ನನ್ನ ಕೂಡ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ನಿತ್ಯಪ್ರಭಾವಸಹಿತವಾಗಿ ಹೊಂದಬೇಕೆಂದು ನಾನು ಅವರಿಗೋಸ್ಕರ ಎಲ್ಲವನ್ನೂ ತಾಳಿಕೊಳ್ಳುತ್ತೇನೆ.” (2 ತಿಮೊಥಿ 2:8-10) ಇಂದು ನಮ್ಮ ಜ್ಞಾಪಕದಲ್ಲಿ ಆ ಸ್ವರ್ಗೀಯ ರಾಜ್ಯಕ್ಕೆ ಬಾಧ್ಯರಿರುವ ಚಿಕ್ಕ ಉಳಿಕೆಯವರ ಗುಂಪು ಮಾತ್ರವಲ್ಲ, ಒಳ್ಳೇ ಕುರುಬನಾದ ಯೇಸು ಕ್ರಿಸ್ತನ ಬೇರೆ ಕುರಿಗಳು ಸಹಾ ಅಂದರೆ ಕ್ರಿಸ್ತನ ರಾಜ್ಯದ ಕೆಳಗೆ ಭೂ ಪರದೈಸವನ್ನು ಪಡೆಯಲಿರುವ ಮಹಾ ಸಮೂಹದವರೂ ಇದ್ದಾರೆ.—ಪ್ರಕಟನೆ 7:9-17.
17. ನಾವು ಓಟವನ್ನು ಬಿಟ್ಟು ಹಿಂಜರಿಯಬಾರದೇಕೆ, ಮತ್ತು ಓಟದಲ್ಲಿ ನಾವು ಕೊನೆಯ ತನಕ ಮುಂದರಿದರೆ ಫಲಿತಾಂಶವೇನಿದೆ?
17 ನಾವು ಹಿಂಜರಿಯುವವರಾದರೆ, ನಮ್ಮನ್ನಾಗಲಿ ಬೇರೆ ಯಾರನ್ನೇ ಆಗಲಿ ರಕ್ಷಣೆಯ ಕಡೆಗೆ ನಡಿಸಲು ನೆರವಾಗಲಾರೆವು. ಯಾವುದೇ ಅಡತ್ಡಡೆಗಳು ಬರಲಿ, ಕ್ರೈಸ್ತ ಓಟದಲ್ಲಿ ತಾಳಿಕೊಳ್ಳುವ ಮೂಲಕ, ನಾವು ಸದಾ ನಮ್ಮನ್ನು ಬಹುಮಾನದ ಸಾಲಿನಲ್ಲಿರಿಸುವೆವು ಮತ್ತು ಇತರರನ್ನು ರಕ್ಷಣೆಗೆ ನಡಿಸಲು ನೇರವಾಗಿ ಸಹಾಯ ಮಾಡಬಲ್ಲೆವು ಮತ್ತು ಅದೇ ಸಮಯದಲ್ಲಿ ಇತರರಿಗೆ ಬಲವನ್ನೀಯುವ ಪ್ರಭಾವಿತ ಮಾದರಿಗಳಾಗುವೆವು. ನಮ್ಮ ನಿರೀಕ್ಷೆಯು ಸ್ವರ್ಗೀಯವಾಗಿರಲಿ ಯಾ ಐಹಿಕವಾಗಿರಲಿ, “ನಮ್ಮ ಮುಂದೆ ಇಟ್ಟಿರುವ ಬಿರುದನ್ನು (ಬಹುಮಾನವನ್ನು, NW) ಗುರಿಮಾಡಿಕೊಂಡು” ಓಡುತ್ತಾ ಇರುವ ಪೌಲನ ಮನೋಭಾವವು ನಮಗೆ ಅನುಕರಿಸಲು ಉತ್ತಮ ಮಾದರಿಯಾಗಿದೆ.—ಫಿಲಿಪ್ಪಿಯ 3:14, 15.
ಓಟದಲ್ಲಿ ದೃಢತೆಯ ಮುಂದೊತ್ತುವಿಕೆ
18. ಬಹುಮಾನವನ್ನು ಗಳಿಸುವುದು ಯಾವುದರ ಮೇಲೆ ಆಧರಿಸಿದೆ, ಆದರೆ ಕೊನೆಯ ತನಕ ದೃಢರಾಗಿ ನಿಲ್ಲಲು ಏನನ್ನು ವರ್ಜಿಸಬೇಕು?
18 ಯೆಹೋವನ ನಿರ್ದೋಷೀಕರಣಕ್ಕಾಗಿ ಕ್ರಿಸ್ತೀಯ ಮಾರ್ಗಕ್ರಮವನ್ನು ಜಯಶಾಲಿಗಳಾಗಿ ಕೊನೆಗೊಳಿಸುವುದು ಮತ್ತು ಆತನು ನಮಗಾಗಿ ಕಾದಿರಿಸಿದ ಬಹುಮಾನವನ್ನು ಪಡೆಯುವದು, ಓಟದ ಇಡೀ ಅವಧಿಯಲ್ಲಿಲ್ಲಾ ದೃಢತೆಯಿಂದ ಮುಂದೊತ್ತುವುದರಲ್ಲಿ ಆಧರಿಸಿದೆ. ಆದುದರಿಂದ ನೀತಿಯ ಹಿತಕ್ಕಾಗಿ ಕಾರ್ಯಸಾಧಕವಲ್ಲದ ವಿಷಯಗಳೊಂದಿಗೆ ನಮ್ಮನ್ನು ಭಾರಗೊಳಿಸಿಕೊಂಡಲ್ಲಿ, ಆ ಓಟದಲ್ಲಿ ಕೊನೆಯ ತನಕ ನಾವು ಉಳಿಯಲಾರೆವು. ಅವುಗಳನ್ನು ಕಳಚಿಹಾಕಿದರೂ, ಆವಶ್ಯಕತೆಗಳಿನ್ನೂ ನಮ್ಮಿಂದ ಶಕ್ಯವಾದ ಎಲ್ಲಾ ಬಲವನ್ನು ತಂದುಕೊಳ್ಳುವದನ್ನು ಕೇಳಿಕೊಳ್ಳುತ್ತದೆ. ಆದುದರಿಂದ ಪೌಲನು ಸೂಚಿಸುವುದು: “ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪವನ್ನೂ ನಾವು ಸಹಾ ತೆಗೆದಿಟ್ಟು . . . ನಮಗೆ ನೇಮಕವಾದ ಓಟವನ್ನು ತಾಳ್ಮೆಯಿಂದ ಓಡೋಣ.” (ಇಬ್ರಿಯ 12:1) ಗುರಿಯಾಗಲಿರುವ ಕಷ್ಟಗಳನ್ನು ಯೇಸುವಿನಂತೆ ನಾವು ಅತಿರೇಕವಾಗಿ ಒತ್ತಿಹೇಳದೆ ಸಂತೋಷದ ಬಹುಮಾನಕ್ಕೆ ತೆರಲಿರುವ ಚಿಕ್ಕ ಬೆಲೆಯಾಗಿ ಅದನ್ನು ಪರಿಗಣಿಸಬೇಕು.—ರೋಮಾಪುರ 8:18, ಹೋಲಿಸಿ.
19. (ಎ) ತನ್ನ ಜೀವಮಾನದ ಅಂತ್ಯದ ಸುಮಾರಿಗೆ ಪೌಲನು ಯಾವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದನು? (ಬಿ) ತಾಳ್ಮೆಯ ಓಟದ ಅಂತ್ಯವನ್ನು ನಾವು ಸಮೀಪಿಸುವಾಗ, ವಾಗ್ದತ್ತ ಬಹುಮಾನದ ಯಾವ ಆತ್ಮವಿಶ್ವಾಸವು ನಮಗಿರಬೇಕು?
19 ತನ್ನ ಜೀವಮಾನದ ಅಂತ್ಯದ ಸುಮಾರಿಗೆ ಪೌಲನು ಹೀಗೆ ಹೇಳಶಕ್ತನಾದನು: “ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ. ನನ್ನ ಓಟವನ್ನು ಕಡೆಗಾಣಿಸಿದ್ದೇನೆ. ಕ್ರಿಸ್ತನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ. ನೀತಿವಂತರಿಗೆ ದೊರಕುವ ಜಯಮಾಲೆಯು ನನಗೆ ಸಿದ್ಧವಾಗಿದೆ.” (2 ತಿಮೊಥಿ 4:7, 8) ನಾವು ಈ ತಾಳ್ಮೆಯ ಓಟದಲ್ಲಿರುವದು ನಿತ್ಯಜೀವದ ಬಹುಮಾನವನ್ನು ಪಡೆಯುವದಕ್ಕಾಗಿಯೇ. ನಾವು ಓಟವನ್ನು ಪ್ರಾರಂಭಿಸಿದಾಗ ನಿರೀಕ್ಷಿಸಿದ್ದಕ್ಕಿಂತ ಈ ಓಟವು ತುಸು ದೀರ್ಘವಾಗಿರುವ ಕಾರಣ ನಮ್ಮ ತಾಳ್ಮೆಯು ಕುಂದಿಹೋದಲ್ಲಿ, ವಾಗ್ದತ್ತ ಬಹುಮಾನವನ್ನು ಪಡೆಯಲು ಅತಿ ಹತ್ತಿರ ಬರುತ್ತಲೇ ಸೋತುಹೋಗುವೆವು. ನಿಶ್ಚಯತೆ ಉಳ್ಳವರಾಗಿರಿ. ಬಹುಮಾನವು ಅಲ್ಲಿದೆ ಎಂಬದಕ್ಕೆ ಯಾವ ಸಂದೇಹವೂ ಇಲ್ಲ.
20. ಓಟದ ಕೊನೆಯನ್ನು ಮುಟ್ಟುವ ತನಕ ನಮ್ಮ ನಿರ್ಧಾರವು ಏನಾಗಿರಬೇಕು?
20 ಹೀಗೆ, ಮಹಾ ಸಂಕಟವು ಆರಂಭವಾಗಿ, ಮೊದಲಾಗಿ ಮಹಾ ಬಾಬೆಲಿಗೂ ಮತ್ತು ಅನಂತರ ಸೈತಾನನ ಸಂಘಟನೆಯ ಉಳಿದ ಭಾಗಕ್ಕೂ ನಾಶನವನ್ನು ತರುವದನ್ನು ನೋಡುವಾಗ ನಮ್ಮ ನೇತ್ರಗಳು ದಣಿದುಹೋಗದಿರಲಿ. (2 ಪೇತ್ರ 3:11, 12) ನಮ್ಮ ಸುತ್ತಲಿರುವ ಎಲ್ಲಾ ಪರಿಚಯದ ಚಿಹ್ನೆಗಳ ವೀಕ್ಷಣೆಯಲ್ಲಿ, ನಾವು ನಂಬಿಕೆಯಿಂದ ಮುಂದೆ ನೋಡೋಣ. ನಾವು ನಮ್ಮ ತಾಳ್ಮೆಯ ಶಕಿಯ್ತೆಂಬ ನಡುಕಟ್ಟನ್ನು ಬಿಗಿಯಾಗಿ ಕಟ್ಟಿಕೊಳ್ಳೋಣ ಮತ್ತು ಯೆಹೋವನು ನಮ್ಮ ಮುಂದೆ ಇಟ್ಟಿರುವ ಓಟವನ್ನು ಕೊನೆಗಾಣಿಸುವ ತನಕ ಮತ್ತು ಆ ಸಂತೋಷದ ಬಹುಮಾನವನ್ನು ಗಳಿಸುವ ತನಕ, ಕ್ರಿಸ್ತನ ಮೂಲಕವಾಗಿ ಯೆಹೋವನ ನಿರ್ದೋಷೀಕರಣಕ್ಕಾಗಿ ಧೈರ್ಯದಿಂದ ಓಡೋಣ. (w91 11/1)
ನೀವು ಹೇಗೆ ಉತ್ತರಿಸುವಿರಿ?
▫ ಯಾವ ರೀತಿಯ ಓಟಕ್ಕಾಗಿ ಕ್ರೈಸ್ತನು ತಯಾರಿಸಬೇಕು?
▫ ಓಟವನ್ನು ಓಡುವುದರಲ್ಲಿ ಸಂತೋಷವು ಅಷ್ಟು ಪ್ರಾಮುಖ್ಯವೇಕೆ?
▫ ಕಷ್ಟಗಳ ಮಧ್ಯೆಯೂ ನಾವು ಶುಶ್ರೂಷೆಯಲ್ಲಿ ಉಳಿಯುವುದು ಯಾವ ಮುಖ್ಯ ಕಾರಣಗಳಿಗಾಗಿ?
▫ ದೇವರು ನಮ್ಮ ಮುಂದೆ ಇಟ್ಟಿರುವ ಓಟವನ್ನು ನಾವು ಬಿಟ್ಟುಬಿಡಬಾರದೇಕೆ?
[ಪುಟ 15 ರಲ್ಲಿರುವ ಚಿತ್ರ]
ದೂರಗತಿಯ ಓಟದಲ್ಲಿ ಹೇಗೋ ಹಾಗೆ ಕ್ರೈಸ್ತರು ತಾಳಿಕೊಳ್ಳಲೇ ಬೇಕು
[ಪುಟ 17 ರಲ್ಲಿರುವ ಚಿತ್ರ]
“ಜೀವದ ಜಯಮಾಲೆಯನ್ನು” ಪಡೆಯುವುದಕ್ಕಾಗಿ, ಓಟಗಾರರು ಆತ್ಮಸಂಯಮವನ್ನು ಅಭ್ಯಾಸಿಸಬೇಕು