-
ದೇವರ ಸರ್ಕಾರ ಅಂದರೇನು?ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
-
-
7. ದೇವರ ಸರ್ಕಾರದ ನಿಯಮಗಳು ಶ್ರೇಷ್ಠವಾಗಿವೆ
ತಮ್ಮ ಪ್ರಜೆಗಳ ಪ್ರಯೋಜನಕ್ಕಾಗಿ, ಸಂರಕ್ಷಣೆಗಾಗಿ ಸರ್ಕಾರಗಳು ನಿಯಮಗಳನ್ನ ಮಾಡ್ತವೆ. ಅದೇ ರೀತಿ ದೇವರ ಸರ್ಕಾರಕ್ಕೂ ನಿಯಮಗಳಿವೆ. ಅದನ್ನ ನಾವೆಲ್ಲರೂ ಪಾಲಿಸಲೇಬೇಕು. 1 ಕೊರಿಂಥ 6:9-11 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಎಲ್ಲರೂ ದೇವರ ನೀತಿನಿಯಮಗಳನ್ನ ಪಾಲಿಸುವಾಗ ಈ ಭೂಮಿ ಹೇಗಿರುತ್ತೆ ಅಂತ ನಿಮಗನಿಸುತ್ತೆ?a
ತನ್ನ ಪ್ರಜೆಗಳೆಲ್ಲರೂ ತನ್ನ ನಿಯಮಗಳನ್ನ ಪಾಲಿಸಬೇಕು ಅಂತ ಯೆಹೋವ ದೇವರು ಬಯಸೋದು ಸರಿನಾ? ನಿಮಗೇನು ಅನಿಸುತ್ತೆ?
ಯೆಹೋವನ ನಿಯಮಗಳನ್ನ ಪಾಲಿಸದೇ ತಪ್ಪು ಮಾಡುತ್ತಿದ್ದ ವ್ಯಕ್ತಿಗಳು ಸಹ ಬದಲಾಗಬಹುದು ಅಂತ ನಿಮಗನಿಸುತ್ತಾ?—ವಚನ 11 ನೋಡಿ.
-
-
ಲೈಂಗಿಕತೆ ಬಗ್ಗೆ ಬೈಬಲ್ ಏನು ಹೇಳುತ್ತೆ?ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
-
-
ಪಾಠ 41
ಲೈಂಗಿಕತೆ ಬಗ್ಗೆ ಬೈಬಲ್ ಏನು ಹೇಳುತ್ತೆ?
ತುಂಬ ಜನರಿಗೆ ಲೈಂಗಿಕತೆ ಬಗ್ಗೆ ಮಾತಾಡಕ್ಕೆ ಮುಜುಗರ ಆಗುತ್ತೆ. ಆದರೆ ಬೈಬಲ್ ಅದರ ಬಗ್ಗೆ ನೇರವಾಗಿ, ಅದೇ ಸಮಯದಲ್ಲಿ ಗೌರವದಿಂದ ಮಾತಾಡುತ್ತೆ. ಲೈಂಗಿಕತೆ ಬಗ್ಗೆ ಬೈಬಲಿನಲ್ಲಿರುವ ಮಾಹಿತಿ ಬಗ್ಗೆ ನಾವು ಯಾಕೆ ತಿಳಿದುಕೊಳ್ಳಬೇಕು? ನಮಗೆ ಜೀವ ಕೊಟ್ಟಿರೋದು ಯೆಹೋವ ದೇವರು. ನಾವು ಯಾವ ರೀತಿಯ ಜೀವನ ನಡೆಸಿದ್ರೆ ಒಳ್ಳೇದು ಅಂತ ಆತನಿಗೆ ಚೆನ್ನಾಗಿ ಗೊತ್ತು. ಆತನ ನೀತಿನಿಯಮಗಳನ್ನ ಪಾಲಿಸೋದಾದ್ರೆ ನಮಗೆ ಪ್ರಯೋಜನ ಇದೆ ಮತ್ತು ನಾವು ಆತನನ್ನ ಮೆಚ್ಚಿಸುತ್ತೇವೆ. ಅಷ್ಟೇ ಅಲ್ಲ, ಈಗಲೂ ಮತ್ತು ಮುಂದೆ ಎಂದೆಂದೂ ಖುಷಿಯಾಗಿ ಇರುತ್ತೇವೆ.
1. ಲೈಂಗಿಕತೆ ಬಗ್ಗೆ ಯೆಹೋವ ದೇವರ ಅನಿಸಿಕೆ ಏನು?
ಮದುವೆಯಾದ ಗಂಡು ಹೆಣ್ಣು ಆನಂದಿಸಬೇಕು ಅಂತ ಯೆಹೋವ ದೇವರು ಲೈಂಗಿಕತೆಯನ್ನ ಉಡುಗೊರೆಯಾಗಿ ಕೊಟ್ಟಿದ್ದಾನೆ. ಈ ಉಡುಗೊರೆಯಿಂದ ದಂಪತಿಗಳಿಗೆ ಮಕ್ಕಳನ್ನ ಪಡೆದುಕೊಳ್ಳಲು ಆಗುತ್ತೆ. ಅಷ್ಟೇ ಅಲ್ಲ, ತಮ್ಮ ಪ್ರೀತಿಯನ್ನ, ಕೋಮಲ ಮಮತೆಯನ್ನ ಒಬ್ಬರಿಗೊಬ್ಬರು ಸಂತೋಷವಾಗಿ ಮತ್ತು ದೇವರು ಮೆಚ್ಚುವ ರೀತಿಯಲ್ಲಿ ತೋರಿಸಕ್ಕೂ ಆಗುತ್ತೆ. “ನಿನ್ನ ಯೌವನದ ಹೆಂಡತಿ ಜೊತೆ ಖುಷಿಯಾಗಿರು” ಅಂತ ಬೈಬಲ್ ಹೇಳುತ್ತೆ. (ಜ್ಞಾನೋಕ್ತಿ 5:18, 19) ಮದುವೆಯಾದ ಕ್ರೈಸ್ತರು ತಮ್ಮ ಸಂಗಾತಿಗೆ ನಿಷ್ಠರಾಗಿರಬೇಕು, ವ್ಯಭಿಚಾರ ಮಾಡಲೇಬಾರದು ಅಂತ ಯೆಹೋವನು ಬಯಸ್ತಾನೆ.—ಇಬ್ರಿಯ 13:4 ಓದಿ.
2. ಲೈಂಗಿಕ ಅನೈತಿಕತೆಯಲ್ಲಿ ಏನೆಲ್ಲಾ ಒಳಗೂಡಿದೆ?
“ಲೈಂಗಿಕ ಅನೈತಿಕತೆ ಮಾಡುವವರು . . . ದೇವರ ಆಳ್ವಿಕೆಯಲ್ಲಿ ಇರಲ್ಲ” ಅಂತ ಬೈಬಲ್ ಹೇಳುತ್ತೆ. (1 ಕೊರಿಂಥ 6:9, 10) ಬೈಬಲನ್ನ ಬರೆದವರು ಲೈಂಗಿಕ ಅನೈತಿಕತೆ ಬಗ್ಗೆ ಹೇಳುವಾಗ ಪೋರ್ನಿಯ ಅನ್ನೋ ಗ್ರೀಕ್ ಪದವನ್ನ ಬಳಸಿದ್ದಾರೆ. ಇದರಲ್ಲಿ (1) ಒಬ್ಬರಿಗೊಬ್ಬರು ಮದುವೆ ಆಗದ ಇಬ್ಬರು ವ್ಯಕ್ತಿಗಳ ನಡುವೆ ಇರುವ ಲೈಂಗಿಕ ಸಂಬಂಧa (2) ಸಲಿಂಗಕಾಮ ಮತ್ತು (3) ಪಶುಗಮನ (ಪ್ರಾಣಿಗಳ ಜೊತೆ ನಡೆಸುವ ಲೈಂಗಿಕತೆ) ಸೇರಿದೆ. ‘ಲೈಂಗಿಕ ಅನೈತಿಕತೆಯಿಂದ ದೂರ ಇರೋದರಿಂದ‘ ನಮಗೂ ಪ್ರಯೋಜನ ಇದೆ ಮತ್ತು ಯೆಹೋವ ದೇವರಿಗೂ ಸಂತೋಷ ಆಗುತ್ತೆ.—1 ಥೆಸಲೊನೀಕ 4:3.
ಹೆಚ್ಚನ್ನ ತಿಳಿಯೋಣ
ಲೈಂಗಿಕ ಅನೈತಿಕತೆಯಿಂದ ದೂರ ಇರೋದು ಹೇಗೆ ಅಂತ ತಿಳಿಯಿರಿ ಮತ್ತು ನೈತಿಕವಾಗಿ ಶುದ್ಧರಾಗಿ ಇರೋದ್ರಿಂದ ಸಿಗುವ ಪ್ರಯೋಜನಗಳ ಬಗ್ಗೆನೂ ತಿಳಿಯಿರಿ.
3. ಲೈಂಗಿಕ ಅನೈತಿಕತೆಯಿಂದ ದೂರ ಓಡಿ ಹೋಗಿ
ದೇವಭಕ್ತನಾಗಿದ್ದ ಯೋಸೇಫನಿಗೆ ಒಂದು ಸವಾಲು ಬಂತು. ಆದಿಕಾಂಡ 39:1-12 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಯೋಸೇಫ ಯಾಕೆ ಓಡಿ ಹೋದ?—ವಚನ 9 ನೋಡಿ.
ಯೋಸೇಫ ಮಾಡಿದ ನಿರ್ಧಾರ ಸರಿಯಾಗಿತ್ತು ಅಂತ ನಿಮಗೆ ಅನಿಸುತ್ತಾ? ಯಾಕೆ?
ಯುವಜನರು ಯೋಸೇಫನನ್ನ ಅನುಕರಿಸುತ್ತಾ ಲೈಂಗಿಕ ಅನೈತಿಕತೆಯಿಂದ ಹೇಗೆ ದೂರ ಇರಬಹುದು ಅಂತ ನೋಡಿ. ವಿಡಿಯೋ ನೋಡಿ.
ನಾವು ಸಹ ಲೈಂಗಿಕ ಅನೈತಿಕತೆಯನ್ನ ಮಾಡಲೇಬಾರದು ಅಂತ ದೇವರು ಬಯಸುತ್ತಾನೆ. 1 ಕೊರಿಂಥ 6:18 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಯಾವೆಲ್ಲಾ ಸನ್ನಿವೇಶಗಳು ಒಬ್ಬ ವ್ಯಕ್ತಿಯನ್ನ ಲೈಂಗಿಕ ಅನೈತಿಕತೆಯ ಬಲೆಗೆ ಬೀಳಿಸಬಹುದು?
ಲೈಂಗಿಕ ಅನೈತಿಕತೆಯಿಂದ ದೂರ ಓಡಿ ಹೋಗೋದು ಹೇಗೆ?
4. ಪ್ರಲೋಭನೆಯನ್ನ ಎದುರಿಸಲು ನಿಮ್ಮಿಂದ ಸಾಧ್ಯ!
ಲೈಂಗಿಕ ಅನೈತಿಕತೆ ಮಾಡಬೇಕು ಅನ್ನೋ ಪ್ರಲೋಭನೆಯನ್ನ ಎದುರಿಸಲು ಯಾವಾಗ ಕಷ್ಟ ಆಗಬಹುದು? ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.
ತನ್ನ ಯೋಚನೆ ಮತ್ತು ನಡತೆಯಿಂದ ಹೆಂಡತಿಗೆ ‘ಮೋಸ ಮಾಡುತ್ತಾ ಇದ್ದೀನಿ’ ಅಂತ ಗೊತ್ತಾದಾಗ ಆ ಸಹೋದರ ಏನು ಮಾಡಿದ?
ಕೆಲವೊಮ್ಮೆ ನಂಬಿಗಸ್ತ ಕ್ರೈಸ್ತರು ಕೂಡ ತಮ್ಮ ಯೋಚನೆಯನ್ನ ಶುದ್ಧವಾಗಿ ಇಟ್ಟುಕೊಳ್ಳಲು ಹೋರಾಡುತ್ತಾರೆ. ನೀವು ಹೇಗೆ ಕೆಟ್ಟ ಯೋಚನೆಗಳಿಂದ ದೂರ ಇರಬಹುದು? ಫಿಲಿಪ್ಪಿ 4:8 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ನಾವು ಯಾವ ರೀತಿಯ ವಿಷಯಗಳ ಬಗ್ಗೆ ಯೋಚನೆ ಮಾಡಬೇಕು?
ಬೈಬಲ್ ಓದೋದು ಮತ್ತು ಯೆಹೋವನ ಸೇವೆಯಲ್ಲಿ ಬಿಜ಼ಿಯಾಗಿ ಇರೋದು ತಪ್ಪಾದ ಯೋಚನೆಗಳಿಂದ ದೂರ ಇರೋಕೆ ಹೇಗೆ ಸಹಾಯ ಮಾಡುತ್ತೆ?
5. ಯೆಹೋವನ ನೀತಿನಿಯಮಗಳಿಂದ ನಮಗೆ ಪ್ರಯೋಜನ ಇದೆ
ನಮಗೆ ಏನು ಒಳ್ಳೇದು ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು. ಹಾಗಾಗಿ ನಾವು ಹೇಗೆ ನೈತಿಕವಾಗಿ ಶುದ್ಧರಾಗಿರಬಹುದು ಮತ್ತು ಅದರಿಂದ ನಮಗೇನು ಪ್ರಯೋಜನ ಇದೆ ಅಂತ ಆತನು ತಿಳಿಸಿದ್ದಾನೆ. ಜ್ಞಾನೋಕ್ತಿ 7:7-27 ಓದಿ ಅಥವಾ ಈ ವಿಡಿಯೋ ನೋಡಿ, ನಂತರ ಪ್ರಶ್ನೆಗಳನ್ನ ಚರ್ಚಿಸಿ.
ಒಬ್ಬ ಯುವಕ ಹೇಗೆ ತಪ್ಪು ದಾರಿ ಹಿಡಿದ?—ಜ್ಞಾನೋಕ್ತಿ 7:8, 9 ನೋಡಿ.
ಲೈಂಗಿಕ ಅನೈತಿಕತೆಯಿಂದ ಗಂಭೀರ ಪರಿಣಾಮಗಳು ಆಗುತ್ತೆ ಅಂತ ಜ್ಞಾನೋಕ್ತಿ 7:23, 26 ತಿಳಿಸುತ್ತೆ. ನಾವು ನೈತಿಕವಾಗಿ ಶುದ್ಧರಾಗಿದ್ರೆ ಯಾವೆಲ್ಲಾ ಸಮಸ್ಯೆಗಳಿಂದ ದೂರ ಇರಬಹುದು?
ನಾವು ನೈತಿಕವಾಗಿ ಶುದ್ಧರಾಗಿದ್ರೆ ಹೇಗೆ ಎಂದೆಂದೂ ಖುಷಿಯಾಗಿ ಬಾಳಲು ಆಗುತ್ತೆ?
ಸಲಿಂಗಕಾಮದ ಬಗ್ಗೆ ಬೈಬಲ್ ತುಂಬ ಕಟ್ಟುನಿಟ್ಟಾಗಿ ಹೇಳುತ್ತೆ ಅಂತ ಕೆಲವರು ಹೇಳುತ್ತಾರೆ. ಆದರೆ ಯೆಹೋವನು ನಮ್ಮನ್ನ ತುಂಬ ಪ್ರೀತಿಸ್ತಾನೆ ಮತ್ತು ನಾವೆಲ್ಲರೂ ಎಂದೆಂದೂ ಖುಷಿಯಾಗಿ ಜೀವಿಸಬೇಕು ಅಂತ ಬಯಸ್ತಾನೆ. ಅಂಥ ಜೀವನವನ್ನ ಪಡೆಯಬೇಕಂದ್ರೆ ಯೆಹೋವ ದೇವರ ನೀತಿನಿಯಮಗಳ ಪ್ರಕಾರ ನಾವು ಜೀವನ ಮಾಡಲೇಬೇಕು. 1 ಕೊರಿಂಥ 6:9-11 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಬೇರೆ ತಪ್ಪಾದ ಬಯಕೆಗಳ ತರಾನೇ ಸಲಿಂಗಕಾಮದ ಬಯಕೆಗಳು ಕೂಡ ತಪ್ಪು ಅಂತ ಈ ವಚನಗಳಿಂದ ನಮಗೆ ಹೇಗೆ ಗೊತ್ತಾಗುತ್ತೆ?
ನಾವು ದೇವರನ್ನ ಮೆಚ್ಚಿಸಬೇಕಂದ್ರೆ ನಮ್ಮ ಜೀವನದಲ್ಲಿ ಬದಲಾವಣೆಗಳನ್ನ ಮಾಡಿಕೊಳ್ಳಬೇಕು. ಆದರೆ ಅಂಥ ಬದಲಾವಣೆಗಳನ್ನ ಮಾಡಿಕೊಂಡ್ರೆ ಏನಾದ್ರೂ ಪ್ರಯೋಜನ ಇದೆಯಾ? ಕೀರ್ತನೆ 19:8, 11 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ನೈತಿಕತೆ ಬಗ್ಗೆ ಯೆಹೋವನು ಇಟ್ಟಿರೋ ನೀತಿನಿಯಮಗಳು ಸರಿಯಾಗೇ ಇವೆ ಅಂತ ನಿಮಗೆ ಅನಿಸುತ್ತಾ? ಯಾಕೆ?
ಕೆಲವರು ಹೀಗಂತಾರೆ: “ಇಬ್ಬರ ಮಧ್ಯ ಪ್ರೀತಿ ಇದ್ರೆ ಸಾಕು, ಅವರು ಸೆಕ್ಸ್ ಮಾಡೋದ್ರಲ್ಲಿ ತಪ್ಪೇನಿಲ್ಲ.”
ನಿಮಗೇನು ಅನಿಸುತ್ತೆ?
ನಾವೇನು ಕಲಿತ್ವಿ
ಗಂಡ ಹೆಂಡತಿ ಆನಂದಿಸೋಕೆ ಯೆಹೋವ ದೇವರು ಲೈಂಗಿಕತೆಯನ್ನ ಉಡುಗೊರೆಯಾಗಿ ಕೊಟ್ಟಿದ್ದಾನೆ.
ನೆನಪಿದೆಯಾ
ಲೈಂಗಿಕ ಅನೈತಿಕತೆಯಲ್ಲಿ ಏನೆಲ್ಲಾ ಒಳಗೂಡಿದೆ?
ಲೈಂಗಿಕ ಅನೈತಿಕತೆಯಿಂದ ದೂರ ಇರಲು ಯಾವುದು ಸಹಾಯ ಮಾಡುತ್ತೆ?
ಯೆಹೋವನ ನೀತಿನಿಯಮಗಳನ್ನ ಪಾಲಿಸೋದ್ರಿಂದ ನಮಗೆ ಯಾವೆಲ್ಲಾ ಪ್ರಯೋಜನಗಳಿವೆ?
ಇದನ್ನೂ ನೋಡಿ
ಒಟ್ಟಿಗೆ ಜೀವನ ಮಾಡಲು ಬಯಸುವ ಗಂಡು ಹೆಣ್ಣು ಮದುವೆ ಆಗಬೇಕು ಅಂತ ಯೆಹೋವ ದೇವರು ಯಾಕೆ ಬಯಸ್ತಾನೆ ಅಂತ ನೋಡಿ.
“ಮದ್ವೆ ಮಾಡ್ಕೊಳ್ದೆ ಒಟ್ಟಿಗೆ ಜೀವನ ಮಾಡೋದರ ಬಗ್ಗೆ ಬೈಬಲ್ ಏನು ಹೇಳುತ್ತೆ?” (jw.org ಲೇಖನ)
ಸಲಿಂಗಕಾಮ ತಪ್ಪು ಅಂತ ಬೈಬಲ್ ಹೇಳುತ್ತೆ. ಆದರೆ ಸಲಿಂಗಕಾಮಿಗಳನ್ನ ದ್ವೇಷಿಸಬೇಕು ಅಂತ ಅದರ ಅರ್ಥ ಅಲ್ಲ, ಯಾಕೆ?
ಸೆಕ್ಸ್ ಬಗ್ಗೆ ಯೆಹೋವ ದೇವರು ಕೊಟ್ಟಿರುವ ನಿಯಮಗಳು ನಮ್ಮನ್ನ ಸಂರಕ್ಷಿಸುತ್ತೆ, ಹೇಗೆ?
“ಮೌಖಿಕ ಸೆಕ್ಸ್ (ಓರಲ್ಸೆಕ್ಸ್) ಕೂಡ ಒಂದು ಲೈಂಗಿಕ ಕ್ರಿಯೆನಾ?” (jw.org ಲೇಖನ)
ತನ್ನ ಜೀವನ ರೀತಿಯಲ್ಲಿ ಬದಲಾವಣೆ ಮಾಡಿ ಯೆಹೋವನಿಗೆ ಇಷ್ಟವಾಗುವ ರೀತಿಯಲ್ಲಿ ನಡೆದುಕೊಳ್ಳಲು ಒಬ್ಬ ಸಲಿಂಗಕಾಮಿಗೆ ಯಾವುದು ಸಹಾಯ ಮಾಡಿತು ಅಂತ ತಿಳಿದುಕೊಳ್ಳಲು “ಅವರು ನನ್ನ ಜೊತೆ ಗೌರವದಿಂದ ನಡೆದುಕೊಂಡರು” ಅನ್ನೋ ಲೇಖನ ನೋಡಿ.
a ಇದರಲ್ಲಿ ಲೈಂಗಿಕ ಸಂಭೋಗ, ಬಾಯಿ ಸೆಕ್ಸ್ (ಓರಲ್ ಸೆಕ್ಸ್), ಗುದದ್ವಾರದ ಮೂಲಕ ಮಾಡುವ ಸೆಕ್ಸ್ (ಏನಲ್ ಸೆಕ್ಸ್), ಮತ್ತು ಬೇರೊಬ್ಬ ವ್ಯಕ್ತಿಯ ಜನನಾಂಗವನ್ನ ಲೈಂಗಿಕ ರೀತಿಯಲ್ಲಿ ಉಜ್ಜುವುದು ಅಥವಾ ನೇವರಿಸುವುದು ಸೇರಿದೆ.
-
-
ನೀವು ಗಂಭೀರ ತಪ್ಪು ಮಾಡಿದರೆ ಏನು ಮಾಡಬೇಕು?ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
-
-
ನಾವು ಯೆಹೋವ ದೇವರನ್ನ ತುಂಬ ಪ್ರೀತಿಸುತ್ತೇವೆ. ಅದಕ್ಕೇ ಆತನ ಮನಸ್ಸಿಗೆ ನೋವಾಗದ ಹಾಗೆ ನಡೆದುಕೊಳ್ಳೋಕೆ ಬಯಸುತ್ತೇವೆ. ಹಾಗಿದ್ರೂ ನಾವು ಆಗಾಗ ತಪ್ಪುಗಳನ್ನ ಮಾಡುತ್ತೇವೆ. ಕೆಲವೊಮ್ಮೆ ನಾವು ಗಂಭೀರ ತಪ್ಪುಗಳನ್ನೂ ಮಾಡಿಬಿಡಬಹುದು. (1 ಕೊರಿಂಥ 6:9, 10) ಒಂದುವೇಳೆ ನೀವು ಗಂಭೀರ ತಪ್ಪನ್ನ ಮಾಡಿದ್ರೆ ಯೆಹೋವನು ನಿಮ್ಮನ್ನ ಯಾವತ್ತೂ ಪ್ರೀತಿಸಲ್ಲ ಅಂತ ನೆನಸಬೇಡಿ. ಯಾಕಂದ್ರೆ ಆತನು ನಿಮ್ಮನ್ನ ಕ್ಷಮಿಸಲಿಕ್ಕೆ ಮತ್ತು ಸಹಾಯ ಮಾಡಲಿಕ್ಕೆ ಯಾವಾಗಲೂ ರೆಡಿ ಇರುತ್ತಾನೆ.
1. ಯೆಹೋವ ದೇವರು ನಮ್ಮನ್ನ ಕ್ಷಮಿಸಬೇಕಾದ್ರೆ ಏನು ಮಾಡಬೇಕು?
ನಮಗೆ ಯೆಹೋವನ ಮೇಲೆ ಪ್ರೀತಿ ಇರುವುದರಿಂದಾನೇ ಒಂದು ಗಂಭೀರ ತಪ್ಪನ್ನ ಮಾಡಿದ ಮೇಲೆ ‘ನಾನು ಹೀಗೆ ಮಾಡಿಬಿಟ್ಟೆನಲ್ಲಾ’ ಅಂತ ನೊಂದುಕೊಳ್ಳುತ್ತೇವೆ. ಆದರೆ ಯೆಹೋವ ದೇವರು ನಮಗೆ ಈ ಸಾಂತ್ವನವನ್ನ ಕೊಟ್ಟಿದ್ದಾನೆ: “ನಿಮ್ಮ ಪಾಪಗಳು ಕಡುಗೆಂಪಾಗಿದ್ರೂ ಅವನ್ನ ಹಿಮದ ತರ ಬೆಳ್ಳಗೆ ಮಾಡ್ತೀನಿ.” (ಯೆಶಾಯ 1:18) ನಾವು ಮನಸಾರೆ ಪಶ್ಚಾತ್ತಾಪಪಟ್ಟರೆ ಯೆಹೋವ ದೇವರು ಅದನ್ನ ಪೂರ್ತಿಯಾಗಿ ಕ್ಷಮಿಸುತ್ತಾನೆ. ಆದರೆ ಪಶ್ಚಾತ್ತಾಪಪಡೋದು ಹೇಗೆ? ನಾವು ಮಾಡಿದ ತಪ್ಪಿಗೆ ನಿಜವಾಗಲೂ ದುಃಖಿಸಬೇಕು. ಇಲ್ಲಿವರೆಗೆ ಮಾಡುತ್ತಿದ್ದ ತಪ್ಪನ್ನ ಬಿಟ್ಟುಬಿಡಬೇಕು ಮತ್ತು ಕ್ಷಮೆಗಾಗಿ ಯೆಹೋವನ ಹತ್ತಿರ ಅಂಗಲಾಚಿ ಬೇಡಿಕೊಳ್ಳಬೇಕು. ಅಷ್ಟೇ ಅಲ್ಲ ನಮ್ಮ ತಪ್ಪಿಗೆ ಕಾರಣವಾಗಿರುವ ಕೆಟ್ಟ ಯೋಚನೆಗಳನ್ನ, ಅಭ್ಯಾಸಗಳನ್ನ ಬಿಟ್ಟುಬಿಡಬೇಕು. ಯೆಹೋವ ದೇವರ ನೀತಿನಿಯಮಗಳಿಗೆ ಅನುಸಾರವಾಗಿ ಜೀವನ ಮಾಡಬೇಕು.—ಯೆಶಾಯ 55:6, 7 ಓದಿ.
2. ನಾವು ತಪ್ಪು ಮಾಡಿದಾಗ ನಮಗೆ ಸಹಾಯ ಮಾಡಲಿಕ್ಕಾಗಿ ಯೆಹೋವನು ಹಿರಿಯರನ್ನ ಹೇಗೆ ಬಳಸುತ್ತಾನೆ?
ಒಂದುವೇಳೆ ಗಂಭೀರ ತಪ್ಪನ್ನ ಮಾಡಿದ್ರೆ “ಸಭೆ ಹಿರಿಯರಿಗೆ ನಿಮ್ಮ ಹತ್ರ ಬರಕ್ಕೆ ಹೇಳಿ” ಅಂತ ಯೆಹೋವನು ಹೇಳುತ್ತಾನೆ. (ಯಾಕೋಬ 5:14, 15 ಓದಿ.) ಈ ಹಿರಿಯರು ಯೆಹೋವನನ್ನು ಮತ್ತು ಆತನ ಸೇವಕರನ್ನ ಪ್ರೀತಿಸುತ್ತಾರೆ. ನಾವು ಯೆಹೋವನ ಜೊತೆ ಮತ್ತೆ ಆಪ್ತ ಸ್ನೇಹವನ್ನ ಬೆಳೆಸಿಕೊಳ್ಳಲು ಅವರು ಸಹಾಯ ಮಾಡುತ್ತಾರೆ. ಅದಕ್ಕಂತಾನೇ ಅವರಿಗೆ ತರಬೇತಿ ಸಿಕ್ಕಿರುತ್ತೆ.—ಗಲಾತ್ಯ 6:1.
ಒಂದುವೇಳೆ ನಾವು ಗಂಭೀರ ತಪ್ಪನ್ನ ಮಾಡಿದ್ರೆ ಹಿರಿಯರು ನಮಗೆ ಹೇಗೆ ಸಹಾಯ ಮಾಡುತ್ತಾರೆ? ಇಬ್ಬರು ಅಥವಾ ಮೂರು ಹಿರಿಯರು ನಮಗೆ ಬೈಬಲಿನ ಮೂಲಕ ತಿದ್ದಿ ಬುದ್ಧಿಹೇಳುತ್ತಾರೆ, ಮತ್ತೆ ಅಂಥ ತಪ್ಪುಗಳನ್ನ ಮಾಡದೇ ಇರೋಕೆ ಸಲಹೆಗಳನ್ನ ಮತ್ತು ಪ್ರೋತ್ಸಾಹವನ್ನ ಕೊಡುತ್ತಾರೆ. ಸ್ವಲ್ಪ ಸಮಯದವರೆಗೆ ಸಭೆಯಲ್ಲಿ ಕೆಲವೊಂದು ವಿಷಯಗಳನ್ನ ಮಾಡದೇ ಇರೋಕೆ ಹಿರಿಯರು ನಮಗೆ ಹೇಳಬಹುದು. ಯಾಕಂದ್ರೆ ಆ ಸಮಯವನ್ನ ನಾವು ಯೆಹೋವ ದೇವರ ಜೊತೆ ಆಪ್ತ ಸ್ನೇಹವನ್ನ ಮತ್ತೆ ಬಲಪಡಿಸೋಕೆ ಬಳಸಬೇಕಾಗುತ್ತೆ. ಗಂಭೀರ ತಪ್ಪು ಮಾಡಿದವರು ಪಶ್ಚಾತ್ತಾಪಪಡದಿದ್ದರೆ ಅಂಥವರನ್ನ ಸಭೆಯಿಂದ ಬಹಿಷ್ಕಾರ ಮಾಡಲಾಗುತ್ತೆ. ಹೀಗೆ ಮಾಡೋದ್ರಿಂದ ಸಭೆಯಲ್ಲಿರುವ ಬೇರೆಯವರ ಮೇಲೆ ಕೆಟ್ಟ ಪರಿಣಾಮ ಬೀರಲ್ಲ.
ಹೆಚ್ಚನ್ನ ತಿಳಿಯೋಣ
ಗಂಭೀರ ತಪ್ಪು ಮಾಡಿದವರಿಗೆ ಸಹಾಯ ಮಾಡಲಿಕ್ಕಾಗಿ ಯೆಹೋವನು ಯಾವೆಲ್ಲಾ ಏರ್ಪಾಡುಗಳನ್ನ ಮಾಡಿದ್ದಾನೆ ಮತ್ತು ಅಂಥ ಏರ್ಪಾಡುಗಳಿಂದ ನಾವು ಹೇಗೆ ಪ್ರಯೋಜನ ಪಡೆಯಬಹುದು ಅಂತ ಕಲಿಯಿರಿ.
3. ತಪ್ಪನ್ನ ಒಪ್ಪಿಕೊಂಡರೆ ನಮಗೇ ಪ್ರಯೋಜನ
ನಾವು ತಪ್ಪು ಮಾಡಿದಾಗ ಯೆಹೋವ ದೇವರಿಗೆ ತುಂಬ ಬೇಜಾರಾಗುತ್ತೆ. ಹಾಗಾಗಿ ನಾವು ಮಾಡಿರುವ ತಪ್ಪನ್ನ ದೇವರ ಹತ್ತಿರ ಒಪ್ಪಿಕೊಳ್ಳಬೇಕು. ಕೀರ್ತನೆ 32:1-5 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ನಮ್ಮ ತಪ್ಪುಗಳನ್ನ ಮುಚ್ಚಿಡುವುದಕ್ಕಿಂತ ಅದನ್ನ ಯೆಹೋವನ ಹತ್ತಿರ ಹೇಳಿಕೊಳ್ಳೋದು ಯಾಕೆ ಒಳ್ಳೇದು?
ನಾವು ಯೆಹೋವ ದೇವರ ಹತ್ತಿರ ನಮ್ಮ ತಪ್ಪುಗಳನ್ನ ಒಪ್ಪಿಕೊಳ್ಳೋಕೆ ಹಿರಿಯರ ಸಹಾಯ ಪಡೆದುಕೊಂಡ್ರೆ ನಮ್ಮ ಮನಸ್ಸಿನ ಭಾರ ಹಗುರವಾಗುತ್ತೆ. ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.
ವಿಡಿಯೋದಲ್ಲಿ ನೋಡಿದ ಹಾಗೆ, ಯೆಹೋವ ದೇವರ ಹತ್ತಿರ ವಾಪಸ್ ಬರಕ್ಕೆ ಕ್ಯಾನನ್ಗೆ ಹಿರಿಯರು ಹೇಗೆ ಸಹಾಯ ಮಾಡಿದರು?
ನಮಗೆ ಸಹಾಯ ಮಾಡಕ್ಕೆ ಹಿರಿಯರು ಯಾವಾಗಲೂ ರೆಡಿಯಾಗಿರುತ್ತಾರೆ. ಹಾಗಾಗಿ ನಾವು ಮಾಡಿದ ತಪ್ಪಿನ ಬಗ್ಗೆ ಹಿರಿಯರ ಹತ್ತಿರ ಮುಚ್ಚುಮರೆಯಿಲ್ಲದೆ ಪ್ರಾಮಾಣಿಕವಾಗಿ ಹೇಳಿಕೊಳ್ಳಬೇಕು. ಯಾಕೋಬ 5:16 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ನಮ್ಮ ತಪ್ಪಿನ ಬಗ್ಗೆ ಮುಚ್ಚುಮರೆಯಿಲ್ಲದೆ ಹಿರಿಯರ ಹತ್ತಿರ ಹೇಳಿಕೊಳ್ಳುವಾಗ ನಮಗೆ ಸಹಾಯ ಮಾಡಲಿಕ್ಕೆ ಅವರಿಗೆ ಹೇಗೆ ಸುಲಭವಾಗುತ್ತೆ?
4. ಬಹಿಷ್ಕಾರ: ಒಂದು ಪ್ರೀತಿಯ ಏರ್ಪಾಡು
ಗಂಭೀರ ತಪ್ಪುಗಳನ್ನ ಮಾಡಿರುವ ವ್ಯಕ್ತಿ ಯೆಹೋವನ ನೀತಿನಿಯಮಗಳನ್ನ ಪಾಲಿಸೋಕೆ ಇಷ್ಟಪಡದಿದ್ದರೆ ಅವನು ಒಬ್ಬ ಯೆಹೋವನ ಸಾಕ್ಷಿಯಾಗಿ ಮುಂದುವರೆಯಲು ಸಾಧ್ಯವಿಲ್ಲ. ಅವನನ್ನ ಸಭೆಯಿಂದ ಬಹಿಷ್ಕಾರ ಮಾಡಲಾಗುತ್ತೆ. ನಾವು ಅಂಥವರ ಜೊತೆ ಮಾತಾಡಲ್ಲ, ಸಹವಾಸನೂ ಮಾಡಲ್ಲ. 1 ಕೊರಿಂಥ 5:6, 11 ಮತ್ತು 2 ಯೋಹಾನ 9-11 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಸ್ವಲ್ಪ ಹುಳಿ ನಾದಿದ ಹಿಟ್ಟನ್ನೆಲ್ಲ ಹುಳಿಮಾಡುತ್ತೆ. ಅದೇ ರೀತಿ ಪಶ್ಚಾತಾಪಪಡದ ಒಬ್ಬ ವ್ಯಕ್ತಿ ಜೊತೆ ನಾವು ಸಹವಾಸ ಮಾಡೋದ್ರಿಂದ ಸಭೆಯಲ್ಲಿರುವ ಎಲ್ಲರ ಮೇಲೆ ಹೇಗೆ ಪರಿಣಾಮ ಬೀರುತ್ತೆ?
ಬಹಿಷ್ಕಾರ ಆಗಿರುವ ತುಂಬ ಜನರು ಮತ್ತೆ ಸಭೆಗೆ ವಾಪಸ್ ಬಂದಿದ್ದಾರೆ. ಅದಕ್ಕೆ ಸಹಾಯ ಮಾಡಿದ್ದು ಅವರಿಗೆ ಸಿಕ್ಕಿದ ಶಿಸ್ತು. ಅದರಿಂದ ಅವರಿಗೆ ನೋವಾಗಿದ್ರೂ ಮಾಡಿದ ತಪ್ಪು ಎಷ್ಟು ಗಂಭೀರವಾಗಿತ್ತು ಅಂತ ಅರ್ಥ ಮಾಡಿಕೊಳ್ಳೋಕೆ ಸಹಾಯ ಮಾಡಿದೆ. (ಕೀರ್ತನೆ 141:5) ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.
ವಿಡಿಯೋದಲ್ಲಿ ನೋಡಿದ ಹಾಗೆ ಬಹಿಷ್ಕಾರದ ಏರ್ಪಾಡು ಸೋನಿಯಾಗೆ ಹೇಗೆ ಸಹಾಯ ಮಾಡಿತು?
ಬಹಿಷ್ಕಾರದ ಏರ್ಪಾಡು ಹೇಗೆ . . .
ಯೆಹೋವ ದೇವರ ಹೆಸರಿಗೆ ಮಹಿಮೆ ತರುತ್ತೆ?
ಯೆಹೋವ ನ್ಯಾಯವಂತ ಮತ್ತು ಪ್ರೀತಿಯಿರುವ ದೇವರು ಅಂತ ಹೇಗೆ ತೋರಿಸಿಕೊಡುತ್ತೆ?
5. ನಾವು ಪಶ್ಚಾತಾಪಪಟ್ಟರೆ ಯೆಹೋವನು ಕ್ಷಮಿಸುತ್ತಾನೆ
ಒಬ್ಬ ವ್ಯಕ್ತಿ ಪಶ್ಚಾತಾಪಪಟ್ಟರೆ ಯೆಹೋವ ದೇವರಿಗೆ ಹೇಗನಿಸುತ್ತೆ ಅಂತ ಅರ್ಥಮಾಡಿಸಲಿಕ್ಕೆ ಯೇಸು ಒಂದು ಉದಾಹರಣೆಯನ್ನ ಕೊಟ್ಟನು. ಲೂಕ 15:1-7 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಈ ವಚನಗಳಿಂದ ಯೆಹೋವ ದೇವರ ಬಗ್ಗೆ ನೀವೇನು ಕಲಿತ್ರಿ?
ಯೆಹೆಜ್ಕೇಲ 33:11 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಪಶ್ಚಾತಾಪಪಟ್ಟಿದ್ದರೆ ಏನು ಮಾಡಿರಲೇ ಬೇಕು?
ಕೆಲವರು ಹೀಗಂತಾರೆ: “ನಾನು ಮಾಡಿದ ತಪ್ಪನ್ನೆಲ್ಲಾ ಹಿರಿಯರ ಹತ್ತಿರ ಹೇಳಿಕೊಂಡರೆ ಎಲ್ಲಿ ಬಹಿಷ್ಕಾರ ಮಾಡಿಬಿಡುತ್ತಾರೋ ಅಂತ ಭಯ ಆಗುತ್ತೆ.”
ಈ ರೀತಿ ಅಂದುಕೊಳ್ಳುವವರಿಗೆ ನೀವೇನು ಹೇಳುತ್ತೀರ?
ನಾವೇನು ಕಲಿತ್ವಿ
ನಾವು ಒಂದು ಗಂಭೀರ ತಪ್ಪನ್ನ ಮಾಡಿದ ಮೇಲೆ ನಿಜವಾಗಿ ಪಶ್ಚಾತಾಪಪಟ್ಟು, ಇನ್ನುಮುಂದೆ ಅಂತ ತಪ್ಪನ್ನ ಮಾಡೋದಿಲ್ಲ ಅಂತ ದೃಢ ನಿರ್ಧಾರ ಮಾಡಿದ್ರೆ ಯೆಹೋವ ದೇವರು ನಮ್ಮನ್ನ ಕ್ಷಮಿಸುತ್ತಾನೆ.
ನೆನಪಿದೆಯಾ
ನಾವು ಯಾಕೆ ನಮ್ಮ ತಪ್ಪುಗಳನ್ನ ಯೆಹೋವ ದೇವರ ಹತ್ತಿರ ಒಪ್ಪಿಕೊಳ್ಳಬೇಕು?
ನಮ್ಮ ತಪ್ಪುಗಳನ್ನ ಯೆಹೋವ ದೇವರು ಕ್ಷಮಿಸಬೇಕಾದ್ರೆ ನಾವು ಏನೆಲ್ಲಾ ಮಾಡಬೇಕು?
ಗಂಭೀರ ತಪ್ಪು ಮಾಡಿರೋದಾದ್ರೆ ನಾವು ಯಾಕೆ ಹಿರಿಯರ ಸಹಾಯ ಪಡೆದುಕೊಳ್ಳಬೇಕು?
ಇದನ್ನೂ ನೋಡಿ
ಯೆಶಾಯ 1:18ರಲ್ಲಿ ಹೇಳಿರುವ ಹಾಗೆ ಕ್ಷಮಿಸುವ ವಿಷಯದಲ್ಲಿ ಯೆಹೋವ ದೇವರಿಗೆ ಎಷ್ಟು ದೊಡ್ಡ ಮನಸ್ಸಿದೆ ಅಂತ ಅರ್ಥಮಾಡಿಕೊಂಡ ಒಬ್ಬ ವ್ಯಕ್ತಿಯ ಅನುಭವ ನೋಡಿ.
ಬಹಿಷ್ಕಾರದ ಏರ್ಪಾಡು ಸಭೆಯಲ್ಲಿರುವ ಎಲ್ಲರಿಗೆ ಹೇಗೆ ಪ್ರಯೋಜನ ತರುತ್ತೆ?
“ಬಹಿಷ್ಕಾರ—ಪ್ರೀತಿಯ ಏರ್ಪಾಡು” (ಕಾವಲಿನಬುರುಜು, ಏಪ್ರಿಲ್ 15, 2015)
ಬಹಿಷ್ಕಾರದ ಏರ್ಪಾಡಿನ ಬಗ್ಗೆ ಸತ್ಯದಲ್ಲಿ ಇಲ್ಲದ ಒಬ್ಬರ ಹತ್ತಿರ ಹೇಗೆ ವಿವರಿಸಬಹುದು ಅಂತ ತಿಳಿಯಿರಿ.
“ಈ ಹಿಂದೆ ತಮ್ಮ ಧರ್ಮದ ವ್ಯಕ್ತಿಗಳಾಗಿದ್ದವರನ್ನು ಯೆಹೋವನ ಸಾಕ್ಷಿಗಳು ಬಹಿಷ್ಕರಿಸುತ್ತಾರಾ?” (jw.org ಲೇಖನ)
ಸತ್ಯಬಿಟ್ಟು ಹೋದ ಒಬ್ಬ ವ್ಯಕ್ತಿಗೆ ಯೆಹೋವ ದೇವರೇ ತನ್ನನ್ನ ವಾಪಸ್ ಕರೆದ ಅಂತ ಅನಿಸಿತು. ಇದರ ಬಗ್ಗೆ ತಿಳಿಯಲು “ಯೆಹೋವನ ಬಳಿ ಹಿಂದಿರುಗಿ ಹೋಗಬೇಕು” ಅನ್ನೋ ಜೀವನ ಕಥೆ ನೋಡಿ.
-