ಆರಾಧಿಸುವುದು ಯಾವ ದೇವರನ್ನು?
ಪಶುಗಳಿಗಿಂತ ಬೇರೆಯಾಗಿ, ಮನುಷ್ಯರಾದ ನಾವಾದರೊ ಆರಾಧಿಸುವ ಸಾಮರ್ಥ್ಯವನ್ನು ಪಡೆದಿರುತ್ತೇವೆ. ಇದು ನಮ್ಮ ಜನನದಿಂದಲೆ ನಮ್ಮ ಸಹಜ ಸ್ವರೂಪದ ಭಾಗವಾಗಿರುತ್ತದೆ. ನಮಗೆ ನೈತಿಕ ಭಾವನೆಯೂ ಇದೆ, ಯಾವುದು ಸರಿ ಮತ್ತು ಯಾವುದು ತಪ್ಪು ಎಂಬ ವಿಷಯವನ್ನು ಮಾರ್ಗದರ್ಶಿಸುವ ಒಂದು ಮನಸ್ಸಾಕ್ಷಿಯೂ ನಮಗಿದೆ. ಹಲವಾರು ವಿಧಗಳಲ್ಲಿ ನಾವು ಆ ಮನಸ್ಸಾಕ್ಷಿಯನ್ನು ಹಿಂಬಾಲಿಸುತ್ತೇವೆ, ಮತ್ತು ಹಾಗೆ ಮಾಡುವುದರಲ್ಲಿ ಮಾರ್ಗದರ್ಶನೆಗಾಗಿ ಅನೇಕರು ಒಬ್ಬ ದೇವರ ಅಥವಾ ದೇವರುಗಳ ಕಡೆಗೆ ನೋಡುತ್ತಾರೆ.
ಕಳೆದ ಒಂದೆರಡು ಶತಮಾನಗಳಲ್ಲಿ, ಕೆಲವು ಲೌಕಿಕ ಜ್ಞಾನಿಗಳು, ಸರ್ವಶಕ್ತನಾದ ದೇವರ ಮತ್ತು ನಿರ್ಮಾಣಿಕನ ಅಸ್ತಿತ್ವವನ್ನು ಅಲ್ಲಗಳೆದಿರುತ್ತಾರೆ. 1844 ರಲ್ಲಿ, ಕಾರ್ಲ್ ಮಾರ್ಕ್ಸ್ನು, ಧರ್ಮವು ಮನುಷ್ಯರ “ಶಾಮಕ ಔಷಧ” ಎಂದು ಘೋಷಿಸಿದನು. ತದನಂತರ, ಚಾರ್ಲ್ಸ್ ಡಾರ್ವಿನ್, ವಿಕಾಸವಾದದ ಕಲ್ಪನೆಯನ್ನು ಹೊರತಂದನು. ಅನಂತರ ಬಂತು ಬಾಲಿವ್ಷಿಕ್ ಕ್ರಾಂತಿ. ಪೂರ್ವ ಯೂರೋಪಿನಲ್ಲಿ ನಾಸ್ತಿಕವಾದವು ಅಧಿಕೃತ ರಾಜ್ಯ ಕಾನೂನಾಯಿತು ಮತ್ತು ಧರ್ಮವು 1917 ರ ಸಂತತಿಯೊಂದಿಗೆ ಅವಸಾನ ಹೊಂದುವದೆಂದು ವಾದಿಸಲ್ಪಟ್ಟಿತ್ತು. ಆದರೆ ಆ ನಾಸ್ತಿಕರು ಮಾನವರ ಸಹಜ ಸ್ವರೂಪವನ್ನು ಬದಲಾಯಿಸಲಾರದೆ ಹೋದರು. ಪೂರ್ವ ಯೂರೋಪಿನಲ್ಲಿ ಇಂದು ಧರ್ಮದ ಹಿಮ್ಮರಳುವಿಕೆಯಲ್ಲಿ ಇದರ ರುಜುವಾತು ತೋರಿಬರುತ್ತದೆ.
ಆದರೂ ಬೈಬಲು ಹೇಳುವ ಪ್ರಕಾರ, “ಆಕಾಶದಲ್ಲಿಯಾಗಲಿ ಭೂಮಿಯ ಮೇಲಾಗಲಿ, ಅನೇಕ ‘ದೇವರುಗಳು’ ಮತ್ತು ‘ಕರ್ತರು’ ಹೇಗಿದ್ದಾರೊ ಹಾಗೆಯೆ, ‘ದೇವರೆನಿಸಿಕೊಳ್ಳುವ’ ಅನೇಕರು ಇದ್ದಾರೆ.” (1 ಕೊರಿಂಥ 8:5) ಯುಗಾಂತರಗಳಿಂದ ಮಾನವಕುಲವು ದೇವರುಗಳ ಸಮೂಹವನ್ನೆ ಆರಾಧಿಸಿರುತ್ತಾರೆ. ಫಲಶಕ್ತಿಯ, ಪ್ರೀತಿಯ, ಯುದ್ಧದ ಮತ್ತು ದ್ರಾಕ್ಷಾಮದ್ಯ ಮತ್ತು ದುಂದೌತಣದ ದೇವರುಗಳೂ ಇದ್ದಾರೆ. ಹಿಂದೂ ಧರ್ಮ ಒಂದರಲ್ಲಿಯೆ ದೇವರುಗಳ ಸಂಖ್ಯೆ ಲಕ್ಷಾಂತರದಲ್ಲಿದೆ.
ದೇವರ ತ್ರಿತ್ವಗಳು ಬೆಬಿಲೊನ್, ಅಶ್ಯೂರ್ಯ ಮತ್ತು ಇಜಿಪ್ಟಿನಲ್ಲಿ ಹಾಗೂ ಬೌದ್ಧದೇಶಗಳಲ್ಲಿ ಪ್ರವರ್ಧಮಾನಕ್ಕೆ ಬಂದಿತ್ತು. ಕ್ರೈಸ್ತ ಪ್ರಪಂಚಕ್ಕೂ ಅದರ “ಪವಿತ್ರ” ತ್ರಯೈಕ್ಯವಿದೆ. ಇಸ್ಲಾಂ, ತ್ರಿಯೈಕ್ಯವನ್ನು ತಿರಸ್ಕರಿಸುತ್ತಾ, “ಅಲ್ಲಾಹನ ಹೊರತು ಬೇರೆ ದೇವರಿಲ್ಲ” ಎನ್ನುತ್ತದೆ. ಅಷ್ಟಲ್ಲದೆ, ಅದೃಶ್ಯನಾದ ಒಬ್ಬ ಸರ್ವಶಕ್ತ ದೇವರ ಕಲ್ಪನೆಯನ್ನು ಪರಿಹಾಸ್ಯ ಮಾಡುವ ಜನರಿಗೆ ಸಹಾ ತಮ್ಮದೆ ಆದ ದೇವರುಗಳು ಇರುತ್ತಾರೆ. ದೃಷ್ಟಾಂತಕ್ಕಾಗಿ, ಫಿಲಿಪ್ಪಿ 3:19 ರಲ್ಲಿ, ಪ್ರಾಪಂಚಿಕ ಬೆನ್ನಟ್ಟುವಿಕೆಗಳ ಪಾಶಕ್ಕೆ ಸಿಕ್ಕಿಬಿದ್ದ ಮಾನವರ ಕುರಿತು ಬೈಬಲು ಹೇಳುವದು: “ಹೊಟ್ಟೆಯೇ ಅವರ ದೇವರು.”
ಹೆಚ್ಚಿನ ಜನರು ತಾವು ಯಾವ ದೇಶ ಅಥವಾ ಸಮಾಜದೊಳಗೆ ಹುಟ್ಟಿ ಬಂದಿರುವರೊ ಅದರ ದೇವ-ದೇವತೆಗಳನ್ನು ಪೂಜಿಸುತ್ತಾರೆ. ಇದು ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಎಲ್ಲಾ ತರದ ಭಕ್ತಿಗಳು ಒಂದೇ ಸ್ಥಳಕ್ಕೆ ನಡಿಸುತ್ತವೊ—ಒಂದು ಪರ್ವತ ಶಿಕರಕ್ಕೆ ನಡಿಸುವ ಹಾದಿಗಳ ಹಾಗೆ? ಅಥವಾ ಅನೇಕ ಧರ್ಮಗಳ ರಹಸ್ಯಾರ್ಥಗಳುಳ್ಳ ಮಾರ್ಗಗಳು ಆಪತಿಗ್ತೆ—ಪ್ರಪಾತಕ್ಕೆ ನಡಿಸುವ ಹಾದಿಗಳಂತೆ ಇವೆಯೆ? ಭಕ್ತಿಗಾಗಿ ಯೋಗ್ಯವಾದ ಅನೇಕ ಮಾರ್ಗಗಳಿವೆಯೆ ಅಥವಾ ಕೇವಲ ಒಂದೇ ಮಾರ್ಗವೊ? ಅಲ್ಲಿ ಅನೇಕ ಸ್ತುತ್ಯಾರ್ಹ ದೇವರುಗಳು ಇದ್ದಾರೊ ಅಥವಾ ನಮ್ಮ ಸಂಪೂರ್ಣ ಭಕ್ತಿ ಮತ್ತು ಆರಾಧನೆಗೆ ಅರ್ಹನಾದ ಕೇವಲ ಒಬ್ಬನೆ ಸರ್ವಶಕ್ತ ದೇವರು ಇದ್ದಾನೋ?
ಸುಳ್ಳು ದೇವರುಗಳ ಏಳಿಕ್ವೆ
ಮೇಲಿನ ಪ್ರಶ್ನೆಗಳು ನಮ್ಮ ನಿಕಟವಾದ ಪರೀಕೆಗ್ಷೆ ಅರ್ಹವಾಗಿವೆ. ಏಕೆ? ಏಕೆಂದರೆ ಧರ್ಮದ ಕುರಿತು ಅತ್ಯಂತ ಪುರಾತನ ಅಧಿಕೃತ ಬರಹವಾದ ಬೈಬಲು, ಒಬ್ಬ ಸುಳ್ಳು ದೇವರು ಒಂದು ಸರ್ಪದ ಮೂಲಕ ಕಾರ್ಯನಡಿಸಿ, ನಮ್ಮ ಪ್ರಥಮ ಮೂಲಪಿತೃಗಳನ್ನು ಹೇಗೆ ಒಂದು ವಿಪತ್ಕಾರಕ ಮಾರ್ಗಕ್ಕೆ ಸೆಳೆದನೆಂಬದನ್ನು ವಿವರಿಸುತ್ತದೆ. ಅವನ ಆ ತಂತ್ರದ ಸಂಕಟಮಯ ಫಲಿತಾಂಶಗಳನ್ನು ನಾವು ಈ ದಿನಗಳ ತನಕವೂ ಅನುಭವಿಸುತ್ತಿದ್ದೇವೆ. (ಆದಿಕಾಂಡ 3:1-13, 16-19; ಕೀರ್ತನೆ 51:5) “ದೇವರ ಮಗನಾದ” ಯೇಸುವು ಆ ದಂಗೆಖೋರ ದೇವರನ್ನು “ಇಹಲೋಕಾಧಿಪತಿ” ಎಂದು ನುಡಿದಿದ್ದಾನೆ. ಅವನ ಅಪೊಸ್ತಲರಲ್ಲೊಬ್ಬನು, ಅವನನ್ನು “ಈ ವಿಷಯಗಳ ವ್ಯವಸ್ಥೆಯ ದೇವರು” ಎಂಬದಾಗಿ ಕರೆದಿದ್ದಾನೆ. (ಯೋಹಾನ 1:34; 12:31; 16:11; 2 ಕೊರಿಂಥ 4:4) ಪ್ರಕಟನೆ 12 ನೆಯ ಅಧ್ಯಾಯ 9 ನೆಯ ವಚನವು ಅವನನ್ನು, “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪವು” ಎಂದು ವರ್ಣಿಸಿಯದೆ. ಸುಳ್ಳು ಧರ್ಮದ ಒಂದು ಲೋಕ ಸಾಮ್ರಾಜ್ಯವು ಸೈತಾನನ ಅಧಿಕಾರದ ಕೆಳಗೆ ಬಿದ್ದಿರುತ್ತದೆ.
ಸೈತಾನನು ಪ್ರಧಾನ ವಂಚಕನು. (1 ತಿಮೊಥಿ 2:14) ಅವನು ಅನೇಕ ವಿಧದ ದೇವತ್ವಗಳನ್ನು—ಪೂರ್ವಜರ ಆತ್ಮಗಳು, ವಿಗ್ರಹಗಳು, ಬೊಂಬೆಗಳು, ಕನ್ಯೆ ಮೇರಿಯ ಚಿತ್ರಗಳು ಇತ್ಯಾದಿಗಳನ್ನು ಪ್ರವರ್ಧಿಸುವ ಮೂಲಕ ಮಾನವ ಕುಲದ ಸ್ವಭಾವಸಿದ್ಧ ಆರಾಧನಾ ಅಪೇಕ್ಷೆಯನ್ನು ಕುತಂತ್ರದಿಂದ ದುರುಪಯೋಗಿಸುತ್ತಾನೆ. ಪರಾಕ್ರಮಿಗಳಾದ ಅಧಿಪತಿಗಳು, ವಿಜೇತ ಸೇನಾನಿಗಳು ಮತ್ತು ಸಿನೆಮಾ ಮತ್ತು ಕ್ರೀಡಾ ತಾರೆಗಳಂಥ ಮಾನವ ದೇವರುಗಳ ಆರಾಧನೆಯನ್ನು ಸಹಾ ಅವನು ಮುಂತಂದಿದ್ದಾನೆ. (ಅಪೊಸ್ತಲರ ಕೃತ್ಯಗಳು 12:21-23) ನಾವಾದರೊ ಎಚ್ಚರದಿಂದ ಕಾದುಕೊಂಡು, ಯಾರು ನಿಜವಾಗಿಯೂ “ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲವೊ” ಆ ಒಬ್ಬನೆ ಸತ್ಯ ದೇವರನ್ನು ಹುಡುಕಿ ಆರಾಧಿಸಲು ನಿರ್ಧಾರವನ್ನು ಮಾಡಿದವರಾಗಿರುವುದು ನಮಗೆ ಒಳ್ಳೆಯದು.—ಅಪೊಸ್ತಲರ ಕೃತ್ಯಗಳು 17:27.
ಹಾಗಾದರೆ ನಾವು ಆರಾಧಿಸಬೇಕಾದ ಈ ಅಸದೃಶ ದೇವರು ಯಾರು? ಸುಮಾರು 3,000 ವರ್ಷಗಳ ಹಿಂದೆ, ಬೈಬಲ್ ಕೀರ್ತನೆಗಾರನು ಆತನನ್ನು, “ಮಹೋನ್ನತನು . . . , ಸರ್ವಶಕ್ತನು . . . , ನಾನು ಭರಸವಿಡುವ ನನ್ನ ದೇವರು,” ಎಂಬದಾಗಿ ವರ್ಣಿಸಿ, ಅವನನ್ನು ಆತನ ಸುಪ್ರಸಿದ್ಧ—“ಯೆಹೋವ” ನಾಮದಿಂದ ಕರೆದನು. (ಕೀರ್ತನೆ 91:1, 2) ಆರಂಭದಲ್ಲಿ, ಮೋಶೆಯು ಅವನ ಕುರಿತಾಗಿ ಹೇಳಿದ್ದು: “ನಮ್ಮ ದೇವರಾದ ಯೆಹೋವನು ಒಬ್ಬನೇ ದೇವರು.” (ಧರ್ಮೋಪದೇಶಕಾಂಡ 6:4) ಮತ್ತು ಪ್ರವಾದಿ ಯೆಶಾಯನು ದೇವರು ತಾನೇ ಹೀಗಂದದ್ದನ್ನು ಉಲ್ಲೇಕಿಸುತ್ತಾ ಹೇಳಿದ್ದು: “ನಾನು ಯೆಹೋವನು. ಇದು ನನ್ನ ನಾಮವು; ನಾನು ನನ್ನ ಮಹಿಮೆಯನ್ನು ಮತ್ತೊಬ್ಬರಿಗೆ ಸಲ್ಲಗೊಡಿಸೆನು, ನನ್ನ ಸ್ತೋತ್ರವನ್ನು ವಿಗ್ರಹಗಳ ಪಾಲುಮಾಡೆನು.”—ಯೆಶಾಯ 42:8.
ಯೆಹೋವನು ತನ್ನ ನಾಮವನ್ನು, ಸುಳ್ಳು ದೇವರಾದ ಸೈತಾನನು ಅದರ ಮೇಲೆ ತಂದಿರುವ ಎಲ್ಲಾ ನಿಂದೆಯಿಂದ ಮುಕ್ತವಾಗುವಂತೆ ಮಾಡಲು ಉದ್ದೇಶಿಸಿದ್ದಾನೆ. ಇದನ್ನು ಮಾಡುವ ವಿಧಾನ ಹೇಗೆಂಬದನ್ನು ಆತನು ಸಾ.ಶ.ಪೂ. 1513 ನೆಯ ವರ್ಷದಲ್ಲಿ, ತನ್ನ ಜನರನ್ನು ಇಜಿಪ್ಟಿನ ದಬ್ಬಾಳಿಕೆಯಿಂದ ಬಿಡಿಸಲು ತನ್ನ ಪ್ರವಾದಿಯಾದ ಮೋಶೆಯನ್ನುಪಯೋಗಿಸಿದಾಗ, ದೃಷ್ಟಾಂತವಾಗಿ ತೋರಿಸಿದನು. ಆ ಸಂದರ್ಭದಲ್ಲಿ ದೇವರು ತನ್ನ ಯೆಹೋವ ನಾಮವನ್ನು ಈ ಮಾತುಗಳೊಂದಿಗೆ ಜತೆಗೂಡಿಸಿದನು: “ನಾನು ಎಂಥವನಾಗಿರುವೆನೋ ಅಂಥವನಾಗಿರುವೆನು.” (ವಿಮೋಚನಾಕಾಂಡ 3:14, 15) ಆತನು ಇಜಿಪ್ಟಿನ ಫರೋಹನ ವಿರುದ್ಧವಾಗಿ ತನ್ನನ್ನು ನಿರ್ದೋಷೀಕರಿಸಿಕೊಳ್ಳಲಿದ್ದನು, ಆದರೆ, ಮೊದಲು ಆ ದುಷ್ಟ ಅಧಿಪತಿಗೆ ಆತನು ಹೇಳಿದ್ದು: “ಆದರೆ ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಸಿದ್ಧ ಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಸಾಯಿಸದೆ ಉಳಿಸಿದೆನು.”—ವಿಮೋಚನಕಾಂಡ 9:16.
ಪರಿಸ್ಥಿತಿಯು ಇಂದು ಅದೇ ರೀತಿ ಇದೆ. ಪುರಾತನ ಫರೋಹನಂತೆ, ಈ ಲೋಕದ ದೇವರಾದ ಸೈತಾನನು ಯೆಹೋವನನ್ನು ಧಿಕ್ಕರಿಸುತ್ತಾನೆ ಮತ್ತು ನೀತಿಯನ್ನೂ ಸತ್ಯವನ್ನೂ ಪ್ರೀತಿಸುವ ಮಾನವರ ವಿರುದ್ಧವಾಗಿ ಕುತಂತ್ರದಿಂದ ಆತ್ಮಿಕ ಯುದ್ಧವನ್ನು ನಡಿಸುತ್ತಾ ಇದ್ದಾನೆ. (ಎಫೆಸ 6:11, 12, 18) ಸೈತಾನನ ವಿರೋಧದ ಎದುರಲ್ಲಿ ಪುನಃ ಇನ್ನೊಮ್ಮೆ ದೇವರು ತನ್ನ ನಾಮವನ್ನು ಪ್ರಸಿದ್ಧಪಡಿಸಲು ಉದ್ದೇಶಿಸಿದ್ದಾನೆ. ಆದರೂ, ಸೈತಾನನನ್ನೂ ಅವನ ಸಕಲ ಕೆಲಸಗಳನ್ನೂ ನಾಶಮಾಡುವ ಮೂಲಕ ತನ್ನ ಶಕ್ತಿಯನ್ನು ತೋರಿಸುವ ಮುಂಚಿತವಾಗಿ, ಯೆಹೋವನು ತನ್ನ ಆರಾಧಕರನ್ನು ಭೂಮಿಯಲ್ಲೆಲ್ಲಾ ತನ್ನ ನಾಮವನ್ನು ಘೋಷಿಸುವಂತೆ ಕಳುಹಿಸುತ್ತಾನೆ. ಆತನ ನಾಮಕ್ಕೆ ಈ ರೀತಿ ಸಾಕ್ಷಿ ಕೊಡುವಂಥಾದ್ದು ಸತ್ಯಾರಾಧನೆಯ ಪ್ರಾಮುಖ್ಯ ಭಾಗವಾಗಿದೆ.
ತಕ್ಕದ್ದಾಗಿಯೆ, ಈ ಆರಾಧಕರು ಆತನ ಸಾಕ್ಷಿಗಳಾಗಿರುವರು, ಯೆಹೋವನ ಸಾಕ್ಷಿಗಳಾಗಿರುವರು, “ನನ್ನ ಸ್ತೋತ್ರವನ್ನು ಪ್ರಚಾರಪಡಿಸಲಿ ಎಂದು ನಾನು ಸೃಷ್ಟಿಸಿಕೊಂಡ ಆಪ್ತಜನರು” ಆಗಿರುವರು ಎಂದು ದೇವರು ತಾನೆ ನುಡಿದಿದ್ದಾನೆ. (ಯೆಶಾಯ 43:10-12, 21) ಅವರು ಯೆಹೋವನ ಸ್ತುತಿಯನ್ನು ಹೇಗೆ ಪ್ರಚಾರಪಡಿಸುತ್ತಾರೆ? ಅವರು ಬಹಿರಂಗವಾಗಿ ಮತ್ತು ಮನೆಯಿಂದ ಮನೆಗೆ, ಅವನ ಪುತ್ರನಾದ ಯೇಸು ಕ್ರಿಸ್ತನಿಂದ ಆಳಲ್ಪಡುವ ಯೆಹೋವನ ರಾಜ್ಯವು ಈ ಭೂಮಿಯಲ್ಲಿರುವ ವಿಧೇಯ ಮಾನವರಿಗೆ ನಿರಂತರವಾದ ಆಶೀರ್ವಾದಗಳನ್ನು ತರುವದು ಎಂಬ ಸುವಾರ್ತೆಯನ್ನು ಸಾರುತ್ತಲೂ, ಕಲಿಸುತ್ತಲೂ ಇರುತ್ತಾರೆ. ಹೀಗೆ ಅವರು ಒಂದನೆಯ ಶತಮಾನದ ಕ್ರೈಸ್ತರಂತೆ, “ಎಡೆಬಿಡದೆ” ದೇವರನ್ನು ಆರಾಧಿಸುತ್ತಿದ್ದಾರೆ. (ಅಪೊಸ್ತಲರ ಕೃತ್ಯಗಳು 5:42; 20:20, 21) ಇದರಲ್ಲಿ ಅವರು ದೈವಿಕ ಆಶೀರ್ವಾದವನ್ನು ಅನುಭವಿಸಿದ್ದಾರೊ? ಹಿಂಬಾಲಿಸುವ ಪುಟಗಳು ಉತ್ತರ ಕೊಡುತ್ತವೆ. (w92 1/1)