-
ಆಧ್ಯಾತ್ಮಿಕ ವ್ಯಕ್ತಿ ಆಗಿರುವುದು ಅಂದರೆ ಏನು?ಕಾವಲಿನಬುರುಜು (ಅಧ್ಯಯನ)—2018 | ಫೆಬ್ರವರಿ
-
-
ಒಬ್ಬ ಆಧ್ಯಾತ್ಮಿಕ ವ್ಯಕ್ತಿಯನ್ನು ಗುರುತಿಸುವುದು ಹೇಗೆ?
3. ಭೌತಿಕ ವ್ಯಕ್ತಿ ಮತ್ತು ಆಧ್ಯಾತ್ಮಿಕ ವ್ಯಕ್ತಿಯ ಮಧ್ಯೆ ಇರುವ ವ್ಯತ್ಯಾಸವನ್ನು ಬೈಬಲ್ ಹೇಗೆ ವಿವರಿಸುತ್ತದೆ?
3 ಒಬ್ಬ ಆಧ್ಯಾತ್ಮಿಕ ವ್ಯಕ್ತಿಯನ್ನು ಗುರುತಿಸಲು ನಾವು ಮೊದಲಾಗಿ “ಆಧ್ಯಾತ್ಮಿಕ ಮನುಷ್ಯ” ಮತ್ತು “ಭೌತಿಕ ಮನುಷ್ಯನ” ಮಧ್ಯೆ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು. ಇದನ್ನು ಅರ್ಥಮಾಡಿಕೊಳ್ಳಲು ಅಪೊಸ್ತಲ ಪೌಲನು ಸಹಾಯ ಮಾಡುತ್ತಾನೆ. (1 ಕೊರಿಂಥ 2:14-16 ಓದಿ.) ಒಬ್ಬ ಭೌತಿಕ ಮನುಷ್ಯನು “ದೇವರಾತ್ಮದ ವಿಷಯಗಳನ್ನು ಹುಚ್ಚುಮಾತಾಗಿ ಎಣಿಸುವುದರಿಂದ ಅವುಗಳನ್ನು ಸ್ವೀಕರಿಸುವುದಿಲ್ಲ; . . . ಅವನು ಅವುಗಳನ್ನು ತಿಳಿದುಕೊಳ್ಳಲಾರನು.” ಆದರೆ ಒಬ್ಬ ಆಧ್ಯಾತ್ಮಿಕ ವ್ಯಕ್ತಿ “ಎಲ್ಲವನ್ನೂ ಪರೀಕ್ಷಿಸುತ್ತಾನೆ.” ಅವನಲ್ಲಿ ‘ಕ್ರಿಸ್ತನ ಮನಸ್ಸು’ ಇರುತ್ತದೆ ಅಂದರೆ ಅವನು ಕ್ರಿಸ್ತನಂತೆ ಯೋಚಿಸಲು ಪ್ರಯತ್ನಿಸುತ್ತಾನೆ. ನಾವು ಆಧ್ಯಾತ್ಮಿಕ ವ್ಯಕ್ತಿಗಳಾಗಿರಬೇಕೆಂದು ಪೌಲನು ಪ್ರೋತ್ಸಾಹಿಸುತ್ತಾನೆ. ಬೇರೆ ಯಾವ ವಿಧಗಳಲ್ಲಿ ಭೌತಿಕ ವ್ಯಕ್ತಿಗಳು ಆಧ್ಯಾತ್ಮಿಕ ವ್ಯಕ್ತಿಗಳಿಗಿಂತ ಭಿನ್ನರಾಗಿರುತ್ತಾರೆ?
-
-
ಆಧ್ಯಾತ್ಮಿಕ ವ್ಯಕ್ತಿ ಆಗಿರುವುದು ಅಂದರೆ ಏನು?ಕಾವಲಿನಬುರುಜು (ಅಧ್ಯಯನ)—2018 | ಫೆಬ್ರವರಿ
-
-
6. ಆಧ್ಯಾತ್ಮಿಕ ವ್ಯಕ್ತಿಯನ್ನು ಗುರುತಿಸುವುದು ಹೇಗೆ?
6 ಹಾಗಾದರೆ ಒಬ್ಬ ಆಧ್ಯಾತ್ಮಿಕ ವ್ಯಕ್ತಿಯನ್ನು ಗುರುತಿಸುವುದು ಹೇಗೆ? ಇಂಥ ವ್ಯಕ್ತಿ ದೇವರೊಂದಿಗಿರುವ ತನ್ನ ಸಂಬಂಧದ ಬಗ್ಗೆ ತುಂಬ ಯೋಚಿಸುತ್ತಾನೆ. ಪವಿತ್ರಾತ್ಮದ ಮಾರ್ಗದರ್ಶನದಂತೆ ನಡೆಯುತ್ತಾನೆ ಮತ್ತು ಯೆಹೋವನನ್ನು ಅನುಕರಿಸಲು ಪ್ರಯತ್ನಿಸುತ್ತಾನೆ. (ಎಫೆ. 5:1) ವಿಷಯಗಳನ್ನು ಯೆಹೋವನ ದೃಷ್ಟಿಯಿಂದ ನೋಡಲು ಪ್ರಯತ್ನಿಸುತ್ತಾನೆ. ದೇವರು ಯಾವಾಗಲೂ ತನ್ನ ಮುಂದೆಯೇ ಇದ್ದಾನೆ ಅನ್ನುವ ರೀತಿ ನಡಕೊಳ್ಳುತ್ತಾನೆ. ಆಧ್ಯಾತ್ಮಿಕ ವ್ಯಕ್ತಿ ತನ್ನ ಜೀವನದ ಪ್ರತಿಯೊಂದು ವಿಷಯದಲ್ಲೂ ಯೆಹೋವನ ಮಟ್ಟಗಳಿಗೆ ಮಾನ್ಯತೆ ಕೊಡುತ್ತಾನೆ. (ಕೀರ್ತ. 119:33; 143:10) ಅವನು ‘ಶರೀರಭಾವದ ಕಾರ್ಯಗಳನ್ನು’ ಮಾಡುವುದಿಲ್ಲ, ‘ಪವಿತ್ರಾತ್ಮದಿಂದ ಉಂಟಾಗುವ ಫಲವನ್ನು’ ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಾನೆ. (ಗಲಾ. 5:22, 23) ಆಧ್ಯಾತ್ಮಿಕ ವ್ಯಕ್ತಿಯಾಗಿರುವುದು ಅಂದರೆ ಏನೆಂದು ಅರ್ಥಮಾಡಿಕೊಳ್ಳಲು ಈ ಹೋಲಿಕೆ ಸಹಾಯ ಮಾಡುತ್ತದೆ: ವ್ಯಾಪಾರ-ವ್ಯವಹಾರದಲ್ಲೇ ಸದಾ ಮುಳುಗಿರುವ ವ್ಯಕ್ತಿ ಒಳ್ಳೇ ವ್ಯಾಪಾರಿ ಆಗುತ್ತಾನೆ. ಆಧ್ಯಾತ್ಮಿಕ ವಿಷಯಗಳ ಮೇಲೆ ಸದಾ ಮನಸ್ಸಿಡುವ ವ್ಯಕ್ತಿ ಆಧ್ಯಾತ್ಮಿಕ ವ್ಯಕ್ತಿ ಆಗುತ್ತಾನೆ.
7. ಆಧ್ಯಾತ್ಮಿಕ ವ್ಯಕ್ತಿಗಳ ಬಗ್ಗೆ ಬೈಬಲ್ ಏನು ಹೇಳುತ್ತದೆ?
7 ಆಧ್ಯಾತ್ಮಿಕ ವ್ಯಕ್ತಿಗಳು ಸಂತೋಷವಾಗಿರುತ್ತಾರೆ ಎಂದು ಬೈಬಲ್ ಹೇಳುತ್ತದೆ. ಮತ್ತಾಯ 5:3ರಲ್ಲಿ “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು; ಸ್ವರ್ಗದ ರಾಜ್ಯವು ಅವರದು” ಎಂದು ಯೇಸು ಹೇಳಿದ್ದಾನೆ. ಆಧ್ಯಾತ್ಮಿಕ ವ್ಯಕ್ತಿಗಳಾಗುವುದರಿಂದ ಸಿಗುವ ಪ್ರಯೋಜನದ ಬಗ್ಗೆ ರೋಮನ್ನರಿಗೆ 8:6 ತಿಳಿಸುತ್ತದೆ. ಅದು ಹೇಳುವುದು: “ಶರೀರಭಾವಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡುವುದು ಮರಣದ ಅರ್ಥದಲ್ಲಿದೆ; ಆದರೆ ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡುವುದು ಜೀವ ಮತ್ತು ಶಾಂತಿಯ ಅರ್ಥದಲ್ಲಿದೆ.” ಹಾಗಾಗಿ ನಾವು ಆಧ್ಯಾತ್ಮಿಕ ವ್ಯಕ್ತಿಗಳಾಗಿದ್ದರೆ ದೇವರೊಂದಿಗೆ ಮತ್ತು ನಮ್ಮೊಳಗೇ ಶಾಂತಿ ಇರುತ್ತದೆ, ನಿತ್ಯಜೀವದ ನಿರೀಕ್ಷೆಯೂ ಸಿಗುತ್ತದೆ.
-