-
ರೋಮನ್ ಇತಿಹಾಸದಿಂದ ಒಂದು ಪಾಠಕಾವಲಿನಬುರುಜು—2002 | ಜೂನ್ 15
-
-
ರೋಮನ್ ಇತಿಹಾಸದಿಂದ ಒಂದು ಪಾಠ
“ನಾನು ಎಫೆಸದಲ್ಲಿ ಮೃಗಗಳೊಂದಿಗೆ ಯುದ್ಧಮಾಡಿದ್ದು ಕೇವಲ ಮಾನುಷಾಭಿಪ್ರಾಯದಿಂದಾದರೆ.” ಒಂದನೆಯ ಕೊರಿಂಥ 15:32ರಲ್ಲಿ ದಾಖಲೆಯಾಗಿರುವ ಈ ಮಾತುಗಳ ಅರ್ಥವು, ಅಪೊಸ್ತಲ ಪೌಲನಿಗೆ ಒಂದು ರೋಮನ್ ಅಖಾಡದಲ್ಲಿ ಹೋರಾಡುವ ಶಿಕ್ಷೆಯನ್ನು ವಿಧಿಸಲಾಗಿತ್ತು ಎಂದು ಕೆಲವರು ನೆನಸುತ್ತಾರೆ. ಅವನು ಹೋರಾಡಿದನೊ ಇಲ್ಲವೊ, ಆದರೆ ಆ ಸಮಯದಲ್ಲಂತೂ ಅಖಾಡಗಳಲ್ಲಿ ಮರಣದ ತನಕ ಹೋರಾಡುವ ಪದ್ಧತಿಯು ಸಾಮಾನ್ಯವಾಗಿತ್ತು. ಆ ಅಖಾಡದ ಕುರಿತು ಮತ್ತು ಅದರಲ್ಲಿ ನಡೆಯುತ್ತಿದ್ದ ಸ್ಪರ್ಧೆಗಳ ಕುರಿತು ಇತಿಹಾಸವು ನಮಗೆ ಏನನ್ನು ತಿಳಿಯಪಡಿಸುತ್ತದೆ?
-
-
ರೋಮನ್ ಇತಿಹಾಸದಿಂದ ಒಂದು ಪಾಠಕಾವಲಿನಬುರುಜು—2002 | ಜೂನ್ 15
-
-
‘ಈ ಖಡ್ಗಮಲ್ಲರು ಯಾರಾಗಿದ್ದರು?’ ಎಂದು ನೀವು ಕೇಳಬಹುದು. ಅವರು ಗುಲಾಮರು, ಮರಣದಂಡನೆ ವಿಧಿಸಲ್ಪಟ್ಟಿದ್ದ ಪಾತಕಿಗಳು, ಯುದ್ಧ ಕೈದಿಗಳು ಅಥವಾ ಉದ್ರೇಕದಿಂದ ಇಲ್ಲವೆ ಖ್ಯಾತಿ ಮತ್ತು ಐಶ್ವರ್ಯದ ನಿರೀಕ್ಷೆಯಿಂದ ಆಕರ್ಷಿಸಲ್ಪಟ್ಟಿದ್ದ ಸಾಮಾನ್ಯ ಜನರಾಗಿದ್ದಿರಬಹುದು. ಇವರೆಲ್ಲರಿಗೂ ಸೆರೆಮನೆಸದೃಶ ಶಾಲೆಗಳಲ್ಲಿ ತರಬೇತನ್ನು ಕೊಡಲಾಗುತ್ತಿತ್ತು. ಜೋಕೀ ಎ ಸ್ಪೆಕ್ಟಾಕಾಲೀ (ಆಟಗಳು ಮತ್ತು ಸಾರ್ವಜನಿಕ ಪ್ರದರ್ಶನಗಳು) ಎಂಬ ಪುಸ್ತಕವು, ತರಬೇತಿ ಪಡೆಯುತ್ತಿದ್ದ ಈ ಖಡ್ಗಮಲ್ಲರನ್ನು, “ಕಾವಲುಗಾರರು ಸದಾ ಎಚ್ಚರಿಕೆಯಿಂದ ಕಾಯುತ್ತಿದ್ದರು ಮತ್ತು ಅವರು ಕಟ್ಟುನಿಟ್ಟಾದ ಶಿಸ್ತಿಗೂ, ವಿಪರೀತ ಕಠಿನವಾದ ನಿಯಮಗಳಿಗೂ ಮತ್ತು ವಿಶೇಷವಾಗಿ ನಿರ್ದಯೆಯ ಶಿಕ್ಷೆಗೂ ಒಳಗಾಗುತ್ತಿದ್ದರು. . . . ಈ ರೀತಿಯ ಉಪಚಾರವು ಅನೇಕವೇಳೆ ಆತ್ಮಹತ್ಯೆಗೂ, ದಂಗೆ ಮತ್ತು ಬಂಡಾಯಗಳಿಗೂ ನಡೆಸಿತು” ಎಂದು ಹೇಳುತ್ತದೆ. ರೋಮ್ನ ಅತಿ ದೊಡ್ಡ ಖಡ್ಗಮಲ್ಲರ ಶಾಲೆಯಲ್ಲಿ ಕಡಮೆಪಕ್ಷ ಒಂದು ಸಾವಿರ ನಿವಾಸಿಗಳಿಗೆ ಬೇಕಾಗುವಷ್ಟು ಚಿಕ್ಕ ಕೋಣೆಗಳಿದ್ದವು. ಪ್ರತಿಯೊಬ್ಬನಿಗೆ ಅವನವನ ವಿಶಿಷ್ಟ ಕವಾಯಿತು ಇತ್ತು. ಕೆಲವರು ಕವಚ, ಗುರಾಣಿ ಮತ್ತು ಖಡ್ಗವುಳ್ಳವರಾಗಿ ಹೋರಾಡಿದರು, ಇತರರು ಜಾಲಬಂಧ ಮತ್ತು ತ್ರಿಶೂಲಗಳುಳ್ಳವರಾಗಿ ಹೋರಾಡಿದರು. ‘ಬೇಟೆ’ ಎಂಬ ಇನ್ನೊಂದು ಜನಪ್ರಿಯ ಪ್ರದರ್ಶನದಲ್ಲಿ ಇತರರನ್ನು ಕಾಡುಮೃಗಗಳೊಂದಿಗೆ ಹೋರಾಡುವಂತೆ ತರಬೇತುಗೊಳಿಸಲಾಗುತ್ತಿತ್ತು. ಪೌಲನು ಇಂತಹದೇ ಪ್ರದರ್ಶನವನ್ನು ಸೂಚಿಸುತ್ತಿದ್ದಿರಬಹುದೊ?
-
-
ರೋಮನ್ ಇತಿಹಾಸದಿಂದ ಒಂದು ಪಾಠಕಾವಲಿನಬುರುಜು—2002 | ಜೂನ್ 15
-
-
ಅಖಾಡದಲ್ಲಿ ಬೆಳಗ್ಗಿನ ಪ್ರದರ್ಶನವನ್ನು ‘ಬೇಟೆ’ಗಳಿಗೆ ಮೀಸಲಾಗಿಡಲಾಗುತ್ತಿತ್ತು. ಎಲ್ಲ ಜಾತಿಯ ಕಾಡುಮೃಗಗಳನ್ನು ರಂಗಸ್ಥಳದೊಳಕ್ಕೆ ಹೋಗುವಂತೆ ಒತ್ತಾಯಿಸಸಾಧ್ಯವಿತ್ತು. ಒಂದು ಗೂಳಿ ಮತ್ತು ಕರಡಿಯ ಹೋರಾಟವನ್ನು ನೋಡಿ ಜನರು ವಿಶೇಷವಾಗಿ ಆನಂದಿಸುತ್ತಿದ್ದರು. ಅನೇಕವೇಳೆ, ಇವೆರಡನ್ನು ಅವುಗಳಲ್ಲಿ ಒಂದು ಕೊಲ್ಲಲ್ಪಡುವ ತನಕ ಜೋಡಿಸಿ ಕಟ್ಟಲಾಗುತ್ತಿದ್ದು, ಆ ಬಳಿಕ ಅದರಲ್ಲಿ ಬದುಕಿ ಉಳಿದಿದ್ದ ಮೃಗವನ್ನು ಒಬ್ಬ ಬೇಟೆಗಾರನು ಕೊಲ್ಲುತ್ತಿದ್ದನು. ಇತರ ಜನಪ್ರಿಯ ಸ್ಪರ್ಧೆಗಳಲ್ಲಿ ಸಿಂಹಗಳನ್ನು ಹುಲಿಗಳಿಗೆ ಎದುರಾಗಿಯೂ ಆನೆಗಳನ್ನು ಕರಡಿಗಳಿಗೆ ಎದುರಾಗಿಯೂ ಬಿಡಲಾಗುತ್ತಿತ್ತು. ಸಾಮ್ರಾಜ್ಯದ ಪ್ರತಿಯೊಂದು ಮೂಲೆಯಿಂದ ತರಲ್ಪಟ್ಟಿದ್ದ ವಿದೇಶೀ ಮೃಗಗಳನ್ನು ಕೊಲ್ಲುವುದರಲ್ಲಿ ಬೇಟೆಗಾರರು ತಮ್ಮ ಕೌಶಲವನ್ನು ಪ್ರದರ್ಶಿಸುತ್ತಿದ್ದರು. ವೆಚ್ಚವು ಎಷ್ಟೇ ತಗಲುತ್ತಿರಲಿ, ಚಿರತೆ, ಖಡ್ಗಮೃಗ, ನೀರ್ಗುದುರೆ, ಜಿರಾಫೆ, ಕತ್ತೆ ಕಿರುಬ, ಒಂಟೆ, ತೋಳ ಮತ್ತು ಜಿಂಕೆಗಳನ್ನು ತರಲಾಗುತ್ತಿತ್ತು.
ದೃಶ್ಯ ಹಿನ್ನೆಲೆಗಳು ಇಂತಹ ಬೇಟೆಗಳನ್ನು ಅವಿಸ್ಮರಣೀಯವಾಗಿ ಮಾಡುತ್ತಿದ್ದವು. ಕಾಡುಗಳನ್ನು ಚಿತ್ರಿಸಲು ಬಂಡೆ, ಕೆರೆ ಮತ್ತು ಮರಗಳಿರುತ್ತಿದ್ದವು. ಕೆಲವು ಅಖಾಡಗಳಲ್ಲಿ ಮೃಗಗಳು ಮಾಯೆಯಿಂದಲೊ ಎಂಬಂತೆ ನೆಲದಡಿಯ ಮೇಲೆತ್ತಿಗೆಯ ಯಂತ್ರದ ಸಹಾಯದಿಂದ ಇಲ್ಲವೆ ನೆಲಬಾಗಿಲಿನಿಂದ ಹೊರಬರುತ್ತಿದ್ದವು. ಅನಿರೀಕ್ಷಿತ ಮೃಗೀಯ ಸ್ವಭಾವಗಳು ಆಸಕ್ತಿಯನ್ನು ಹೆಚ್ಚಿಸುತ್ತಿದ್ದರೂ, ಈ ಬೇಟೆಗಳನ್ನು ವಿಶೇಷವಾಗಿ ಆಕರ್ಷಕವಾಗಿ ಮಾಡುತ್ತಿದ್ದದ್ದು ಅವುಗಳಲ್ಲಿದ್ದ ಕ್ರೂರತೆಯೇ.
-