ಹೂರ ತೋರಿಕಯನ್ನು ಮಾತ್ರವೇ ನೀವು ನೋಡುತ್ತೀರೋ?
ಹೆನ್ಜ್ ಎಂಬ ಹದಿವಯಸ್ಕನು, ದ್ವೇಷಾಂಧನಾಗಿ, ತನ್ನ ಮಲತಂದೆಯನ್ನು ಕೊಲ್ಲಲು ಯೋಜಿಸಿದ್ದನು. ಆದರೆ ಅದನ್ನು ಮಾಡಲು ಅವನಿಗೆ ಧೈರ್ಯದ ಕೊರತೆ ಇದ್ದದ್ದು ಸಂತೋಷಕರ. ಕೆಲವು ವರ್ಷಗಳ ನಂತರ ಅವನು ಆತ್ಮಹತ್ಯೆಯನ್ನು ಮಾಡಲು ನಿಶ್ಚಯಿಸಿದನು, ಆದರೆ ಅದನ್ನೂ ನಿರ್ವಹಿಸದಾದನು. ಕಳ್ಳತನ ಮತ್ತು ಮಾದಕೌಷದಿ ಸಾಗಣೆಯಲ್ಲಿ ಒಳಗೂಡಿದನು, ಸೆರೆಮನೆಗೂ ಹೋದನು. ಅನಂತರ, ಅವನ ಮದುವೆಯೂ ವೈಫಲ್ಯಗೊಂಡಿತು.
ಇಂದು, ಹೆನ್ಗ್ಜೆ ಮಾದಕೌಷಧದ ಚಟವಿಲ್ಲ. ಒಂದು ಪ್ರಾಮಾಣಿಕ ಜೀವನವನ್ನು ನಡಿಸುತ್ತಿದ್ದಾನೆ. ವಿವಾಹದಲ್ಲಿ ಸಂತೋಷದಿಂದಿದ್ದಾನೆ ಮತ್ತು ಮಲತಂದೆಯೊಂದಿಗೆ ಒಳ್ಳೇ ಸಂಬಂಧವಿದೆ. ಈ ಬದಲಾವಣೆಯನ್ನು ತಂದದ್ದು ಯಾವುದು? ಯೆಹೋವನ ಸಾಕ್ಷಿಗಳೊಂದಿಗೆ ಬೈಬಲಧ್ಯಯನ ಆರಂಭಿಸಿದ್ದೇ. ಕ್ರಮೇಣ, ಜೀವಿತದ ಮೇಲಿನ ಅವನ ಹೊರನೋಟ ಬದಲಾಗ ತೊಡಗಿತು.
ಹೆನ್ಜ್ನ್ನು ಬಹಳ ಸಮಯದಿಂದ ತಿಳಿದಿದ್ದ ಜನರು ಅವನನ್ನು ಒಂದು ಆಶಾಹೀನ ಸಂಗತಿಯಾಗಿ ಬಿಟ್ಟಿದ್ದರು, ನಿಸ್ಸಂಶಯ. ಆದರೆ, ಅವನಂತಹ ಅನೇಕ ಜನರ ಒಳ್ಳಿತಿಗಾಗಿ ದೇವರಾದರೋ ಅವನನ್ನು ವಿಮೋಚನೆಗೆ ಅನರ್ಹನಾಗಿ ನೋಡಲಿಲ್ಲ. ಏಕೆ ಇಲ್ಲ? ಕಾರಣ: “ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ.”—1 ಸಮುವೇಲ 16:7.
ದೇವರ ಮತ್ತು ಮನುಷ್ಯರ ನಡುವಣ ಒಂದು ದೊಡ್ಡ ವ್ಯತ್ಯಾಸವು ಅದೇ. ನಾವು ಬಾಹ್ಯ ತೋರಿಕೆಯಿಂದ ತೀರ್ಮಾನಿಸುವ ಪ್ರವೃತ್ತಿಯವರು. “ಮನಸ್ಸಿನ ಮೇಲಾದ ಮೊದಲ ಭಾವನೆಯೇ ಕೊನೆಯ ತನಕ ಬಾಳುವ ಭಾವನೆ” ಎನ್ನುತ್ತೇವೆ ಕೂಡ. ಇನ್ನೊಂದು ಮಾತಿನಲ್ಲಿ ಹೇಳುವದಾದರೆ, ಆರಂಭದ ಪ್ರತಿಕ್ರಿಯೆಯ ಮೇಲೆ ಆಧರಿಸಿ, ನಾವು ಜನರನ್ನು ತೀರ್ಮಾನಿಸುವ ಪ್ರವೃತ್ತಿಯವರು. ಆದರೆ ದೇವರು ಹೃದಯವನ್ನು ತಿಳಿಯಶಕ್ತನಾಗಿರಲಾಗಿ ನ್ಯಾಯವಂತನೂ ನಿಷ್ಪಕ್ಷಪಾತಿಯೂ ಆಗಿದ್ದಾನೆ. ಆದುದರಿಂದಲೇ ಆತನು, ತನ್ನ ಮಗನಾದ ಯೇಸು ಕ್ರಿಸ್ತನನ್ನು “ಎಲ್ಲಾ ಮನುಷ್ಯರು ರಕ್ಷಣೆ ಹೊಂದಿ ಸತ್ಯಜ್ಞಾನಕ್ಕೆ ಸೇರಬೇಕೆಂದು” ಈ ಭೂಮಿಗೆ ಕಳುಹಿಸಿಕೊಟ್ಟನು. (1 ತಿಮೊಥಿ 2:4) ಈ ಸಂಬಂಧದಲ್ಲಿ ಸಮರ್ಪಿತ ಕ್ರೈಸ್ತರಿಗೆ, ದೇವರ ರಾಜ್ಯದ ಸುವಾರ್ತೆಯನ್ನು ಎಲ್ಲಾ ಮಾನವರಿಗೆ ಆಸಕ್ತಿಯಿಂದ ಸಾರುವ ಮೂಲಕ “ದೇವರ ಜೊತೆ ಕೆಲಸಗಾರರಾಗುವ” ಸುಯೋಗವಿದೆ. (1 ಕೊರಿಂಥದವರಿಗೆ 3:9) ಆದರೂ, ಕ್ರೈಸ್ತರಲ್ಲಿ ಕೆಲವು ಸೀಮಿತಗಳಿವೆ—ಜನರ ಹೃದಯಗಳನ್ನು ಅವರು ತಿಳಿಯಲಾರರು. ಆದ್ದರಿಂದ, ಅವರು ನಿಷ್ಪಕ್ಷಪಾತಿಗಳಾಗಿರಬೇಕು ಮತ್ತು ಬಾಹ್ಯ ತೋರಿಕೆಯಿಂದ ದುರಭಿಪ್ರಾಯಪಡುವುದನ್ನು ವಿಸರ್ಜಿಸಬೇಕು.
ಯೇಸುವಿನ ಮಲತಮ್ಮನಾದ ಯಾಕೋಬನು ಆದಿ ಕ್ರೈಸ್ತ ಸಭೆಯಲ್ಲಿ ಇದರ ಅಪಾಯವನ್ನು ಕಂಡನು. ಅವನಂದದ್ದು: “ನನ್ನ ಸಹೋದರರೇ, ಪ್ರಭಾವವುಳ್ಳ ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟವರಾದ ನೀವು ಪಕ್ಷಪಾತಿಗಳಾಗಿರಬಾರದು. ಹೇಗಂದರೆ ಒಬ್ಬ ಮನುಷ್ಯನು ಚಿನ್ನದ ಉಂಗುರವನ್ನೂ ಶೋಭಾಯಮಾನ ವಸ್ತ್ರಗಳನ್ನೂ ಹಾಕಿಕೊಂಡು ನಿಮ್ಮ ಸಭಾ ಮಂದಿರದೊಳಗೆ ಬರಲು ಮತ್ತು ಒಬ್ಬ ಬಡ ಮನುಷ್ಯನು ಹೀನವಾದ ಬಟ್ಟೆ ಹಾಕಿಕೊಂಡು ಬರಲು ನೀವು ಶೋಭಾಯಮಾನ ವಸ್ತ್ರಗಳನ್ನು ಧರಿಸಿಕೊಂಡಿರುವವನ್ನು ಮರ್ಯಾದೆಯಿಂದ ನೋಡಿ . . . ನೀವು ನಿಮ್ಮಲ್ಲಿ ಭೇದ ಮಾಡುವವರಾಗಿ ಅನ್ಯಾಯವಾದ ತೀರ್ಪನ್ನು ಮಾಡುವವರಾದೀರಲ್ಲಾ.” ನಮ್ಮ ರಾಜ್ಯ ಸಭಾಗೃಹಗಳಿಗೆ ಪ್ರಥಮವಾಗಿ ಬರುವ ಜನರನ್ನು ಕೆಲವು ಸಾರಿ ನಾವು ಇದೇ ಆಧಾರದಲ್ಲಿ ಅನ್ಯಾಯವಾಗಿ ತೀರ್ಪು ಮಾಡುತ್ತೇವೂ?—ಯಾಕೋಬ 2:1-4.
ಯೇಸು ಮಾದರಿಯನ್ನಿಟ್ಟನು
ಯೇಸು ಜನರನ್ನು ವಿಮೋಚನೆಗೆ ಅನರ್ಹವಾದ ಪಾಪಿಗಳಾಗಿ ಅಲ್ಲ, ಬದಲಾಗಿ, ಅವಶ್ಯವಾದ ನೆರವನ್ನೂ ಯೋಗ್ಯ ಪ್ರೇರೇಪಣೆಯನ್ನೂ ಕೊಟ್ಟಲ್ಲಿ ಬದಲಾವಣೆ ಮಾಡಬಲ್ಲ ಪ್ರಾಮಾಣಿಕ ವ್ಯಕ್ತಿಗಳಾಗಿ ನೋಡಿದನು. ಆದ್ದರಿಂದಲೇ, “ಆತನು ಎಲ್ಲರ ವಿಮೋಚನಾರ್ಥವಾಗಿ ತನ್ನನ್ನು ಒಪ್ಪಿಸಿಬಿಟ್ಟನು.” (1 ತಿಮೊಥಿ 2:6) ಆತನ ಸಾರುವ ಚಟುವಟಿಕೆಯಲ್ಲಿ, ಸುಹೃದಯದ ಯಾವನನ್ನಾದರೂ ಅಸ್ಪರ್ಶನಾಗಿ, ಗಮನಕ್ಕೆ ಅಯೋಗ್ಯನಾಗಿ ಅವನು ನೋಡಲಿಲ್ಲ. ಜನರ ಕಡೆಗೆ ಅವನ ನೋಟವು ಸ್ವನೀತಿಯ ಯಾವುದೇ ಗರ್ವ ಭಾವನೆಯನ್ನು ಪ್ರಕಟಿಸಲಿಲ್ಲ.—ಲೂಕ 5:12, 13.
ಫರಿಸಾಯರಿಗಿಂತ ಅವನೆಷ್ಟು ಬೇರೆಯಾಗಿದ್ದನು, ಅವರ ಕುರಿತು ನಾವು ಓದುವುದು: “ಫರಿಸಾಯರಾದ ಶಾಸ್ತ್ರಿಗಳು ಆತನ ಹಿಂದೆ ಹೋಗಿ ಆತನು ಪಾಪಿಗಳ ಮತ್ತು ಸುಂಕದವರ ಸಂಗಡ ಊಟಮಾಡುವುದನ್ನು ಕಂಡು ಆತನ ಶಿಷ್ಯರಿಗೆ—ಈತನು ಸುಂಕದವರ ಮತ್ತು ಪಾಪಿಗಳ ಸಂಗಡ ಊಟಮಾಡುತ್ತಾನೆ ನೋಡಿರಿ ಎಂದು ಹೇಳಿದರು. ಯೇಸು ಇದನ್ನು ಕೇಳಿ— ಕ್ಷೇಮದಿಂದಿರುವವನಿಗೆ ವೈದ್ಯನು ಬೇಕಾಗಿಲ್ಲ; ಕ್ಷೇಮವಿಲ್ಲದವರಿಗೆ ಬೇಕು. ನಾನು ನೀತಿವಂತನನ್ನು ಕರೆಯುವದಕ್ಕೆ ಬಂದವನಲ್ಲ, ಪಾಪಿಗಳನ್ನು ಕರೆಯುವದಕ್ಕೆ ಬಂದವನು ಅಂದನು.”—ಮಾರ್ಕ 2:16, 17.
ಇದರ ಅರ್ಥ ಯೇಸು ಆ ಪಾಪಿಗಳಿಂದ ಮತ್ತು ಸುಂಕದವರಿಂದ ನಡಿಸಲ್ಪಟ್ಟ ಅಪ್ರಾಮಾಣಿಕ, ಕೆಟ್ಟ ಪದ್ಧತಿಗಳನ್ನು ಮಾನ್ಯಮಾಡಿದ್ದನೆಂದಲ್ಲ. ಪ್ರಾಯಶಃ ತಿಳಿಯದೆ ಅಥವಾ ಹತೋಟಿಗೆ ಮೀರಿದ ಪರಿಸ್ಥಿತಿಗಳಿಂದಾಗಿ ಜನರು ದುರ್ಮಾರ್ಗದ ಜೀವಿತಕ್ಕೆ ಬೀಳಬಹುದೆಂದು ಆತನಿಗೆ ಗೊತ್ತಿತ್ತು. ಆದುದರಿಂದ ಆತನು ತಿಳುವಳಿಕೆಯನ್ನು ತೋರಿಸಿದನು, “ಅವರು ಕುರುಬನಿಲ್ಲದ ಕುರಿಗಳ ಹಾಗಿದಾರ್ದಲ್ಲಾ ಎಂದು ಕನಿಕರಪಟ್ಟನು.” (ಮಾರ್ಕ 6:34) ಅವರ ದುಷ್ಕೃತ್ಯ ಮತ್ತು ಪ್ರಾಯಶಃ ಅವರ ಸುಹೃದಯಗಳ ನಡುವಣ ಭೇದವನ್ನು ಅವನು ಪ್ರೀತಿಯಿಂದ ಗಮನಿಸಿದನು.
ತನ್ನ ಹಿಂಬಾಲಕರೊಂದಿಗೆ ವ್ಯವಹರಿಸುವಲ್ಲಿ ಸಹಾ ಯೇಸು ಹೊರಗಣ ತೋರಿಕೆಯ ಆಚೇ ನೋಡಿದನು. ಅವರು ಆಗಾಗ್ಯೆ ತಪ್ಪುಗಳನ್ನು ಮಾಡುತ್ತಿದ್ದ ಪಾಪಿಗಳಾಗಿದ್ದರು, ಅದರೆ ಯೇಸುವು ಅಸಮಂಜಸ ಪರಿಪೂರ್ಣತೆಯನ್ನು ಕೇಳಿಕೊಳ್ಳಲಿಲ್ಲ, ಪ್ರತಿಯೊಂದು ಚಿಕ್ಕಪುಟ್ಟ ತಪ್ಪಿಗಾಗಿ ಸದಾ ಅವರನ್ನು ಜರೆಯುತ್ತಿರಲಿಲ್ಲ. ಅವರ ಹೇತುಗಳು ಒಳ್ಳೆಯದಿದ್ದವು ಅಥವಾ, ನಾವಿಂದು ಹೇಳುವಂತೆ, ಅವರ ಹೃದಯವು ಯೋಗ್ಯ ಸ್ಥಳದಲ್ಲಿತ್ತು. ಅವರಿಗೆ ಬೇಕಾಗಿದ್ದದ್ದು ಸಹಾಯ ಮತ್ತು ಪ್ರೋತ್ಸಾಹನೆ. ಅದನ್ನು ಕೊಡುವದರಲ್ಲಿ ಯೇಸು ಎಂದೂ ಜಿಪುಣನಿರಲಿಲ್ಲ. ಅವನು ಜನರನ್ನು ದೇವರು ವೀಕ್ಷಿಸುವ ರೀತಿಯಲ್ಲಿ ನೋಡಿದ್ದನೆಂಬದು ನಿಸ್ಸಂಶಯ. ಆತನ ಮಹತ್ತಾದ ಮಾದರಿಯನ್ನು ನಾವು ಅನುಸರಿಸಲು ಪ್ರಯತ್ನಿಸುತ್ತೇವೋ?
ನೀವು “ನ್ಯಾಯವಾದ ತೀರ್ಪು ಮಾಡುತ್ತೀರೋ”?
ಒಮ್ಮೆ ಯೇಸು ಸಬ್ಬತ್ ದಿನದಲ್ಲಿ ಒಬ್ಬನನ್ನು ವಾಸಿಮಾಡಿದ ಕಾರಣದಿಂದ ಕುಪಿತರಾದ, ಸ್ವನೀತಿಯ ಒಂದು ದೂರುಗಾರರ ಗುಂಪಿನಿಂದ ಎದುರಿಸಲ್ಪಟ್ಟನು. ಆತನು ಅವರಿಗೆ ಬೋಧಿಸಿದ್ದು: “ಕಣ್ಣಿಗೆ ತೋರಿದರ್ದ ಮೇಲೆ ತೀರ್ಪು ಮಾಡಬೇಡಿರಿ; ನ್ಯಾಯವಾದ ತೀರ್ಪು ಮಾಡಿರಿ.” ಆ “ಮನುಷ್ಯನನ್ನು ಸಂಪೂರ್ಣವಾಗಿ ಸ್ವಸ್ಥ ಮಾಡಿದ” ಯೇಸುವಿನ ಮಹತ್ಕಾರ್ಯಕ್ಕಾಗಿ ಅವರು ಆನಂದ ಪಡದೆ “ಕೋಪಗೊಂಡದ್ದೂ,” ಯೇಸುವನ್ನು ಸಬ್ಬತ್ ನಿಯಮಭಂಜಕನಾಗಿ ನೋಡಿದ್ದೂ ಏಕೆ? ಹೊರ ತೋರಿಕೆಯನ್ನು ನೋಡಿ ತೀರ್ಪು ಮಾಡಿದ ಮೂಲಕ ಅವರು ತಮ್ಮ ದುರುದ್ದೇಶಗಳನ್ನು ಬಯಲು ಪಡಿಸಿದರು. ಅವರ ತೀರ್ಪು ಸ್ವನೀತಿಯದ್ದೂ, ಅನ್ಯಾಯದ್ದೂ ಆಗಿತ್ತೆಂಬದ್ದನ್ನು ಅವರು ಏಕಕಾಲದಲ್ಲಿ ತೋರಿಸಿಕೊಟ್ಟರು.—ಯೋಹಾನ 7:23, 24.
ಒಂದುವೇಳೆ ನಾವು ಸಹಾ ಇದೇ ತಪ್ಪನ್ನು ಮಾಡಬಹುದು ಹೇಗೆ? ಪಶ್ಚಾತ್ತಾಪಿ ವ್ಯಕ್ತಿಯು ಸಭೆಗೆ ಪುನಃ ಹಿಂದಿರುಗುವಾಗ ಅಥವಾ ಐಹಿಕ ವ್ಯಕ್ತಿಯು ಸತ್ಯವನ್ನು ಕಲಿತು ಆತ್ಮಿಕ ವಾಸಿಯಿಂದ ಪ್ರಯೋಜನ ಪಡೆಯುವಾಗ ಆನಂದಿಸಲು ತಪ್ಪುವದರಿಂದಲೇ. ಕೆಲವು ಸಾರಿ ಜನರ ಅಯುಕ್ತ ಉಡುಪು ಯಾ ನೀಟುಗಾರಿಕೆಯ ಕಾರಣ ನಾವು ತೀರ್ಪು ಮಾಡಿ, ಅವರೆಂದೂ ಸಾಕ್ಷಿಗಳಾಗರೆಂಬ ಭಾವನೆಯನ್ನು ತಾಳಬಹುದು. ಆದಾಗ್ಯೂ, ಅನೇಕ ಹಿಪ್ಪೀಗಳು ಮತ್ತು ಇತರ ಅಯುಕ್ತ ಜೀವನ ಪದ್ಧತಿಗಳಿದವ್ದರು ಕ್ರಮೇಣ, ಯೆಹೋವನ ಕ್ರೈಸ್ತ ಸಾಕ್ಷಿಗಳಾಗಿದ್ದಾರೆ. ಅಂಥವರು ಬದಲಾವಣೆಗಳನ್ನು ಮಾಡುವ ಕಾರ್ಯಗತಿಯಲ್ಲಿರುವಾಗ ನಾವಾದರೋ “ಕಣ್ಣಿಗೆ ತೋರಿದರ್ದ ಮೇಲೆ ತೀರ್ಪು ಮಾಡದೆ” ಇರಬೇಕು ಮತ್ತು ಅವರ ಒಳ್ಳೇ ಹೃದಯ ಸ್ಥಿತಿಗೆ ನಮ್ಮನ್ನು ಕುರುಡುಗೊಳಿಸಬಾರದು.
ಯೇಸುವಿನ ಒಳ್ಳೇ ಮಾದರಿಯನ್ನು ಅನುಸರಿಸಿ, ಅಂಥವರಿಗಾಗಿ ಪ್ರಾರ್ಥನೆ ಮಾಡುವದೂ ಮತ್ತು ಅವರು ಕ್ರೈಸ್ತ ಪಕ್ವತೆಗೆ ಮುಟ್ಟುವಂತೆ ವ್ಯಾವಹಾರಿಕ ಸಹಾಯವನ್ನು ಕೊಡುವದೂ ಅದೆಷ್ಟು ಒಳ್ಳೆಯದು! ಅವರಲ್ಲಿ ಆನಂದಕ್ಕೆ ಒಂದು ಕಾರಣವನ್ನು ಕಾಣುವದು ನಮಗೆ ಕಷ್ಟಕರವಾಗಿ ತೋರಬಹುದು. ಆದರೆ ಯೆಹೋವನು ಕ್ರಿಸ್ತನ ಮೂಲಕ ಅವರನ್ನು ತನ್ನ ಕಡೆಗೆ ಸೆಳೆಯುತ್ತಾನಾದರೆ, ನಮ್ಮ ಸ್ವಂತ ಸಂಕುಚಿತ ಮಾನದಂಡದ ಆಧಾರದಿಂದ ಅವರನ್ನು ತಿರಸ್ಕರಿಸಲು ನಾವ್ಯಾರು? (ಯೋಹಾನ 6:44) ಜನರ ಹೃದಯವಾಗಲಿ ಸ್ಥಿತಿಗತಿಗಳಾಗಲಿ ನಮಗೆ ತಿಳಿಯದಿರುವಾಗ, ಸ್ವನೀತಿಯಿಂದ ಅವರಿಗೆ ತೀರ್ಪು ಮಾಡುವುದು, ಸ್ವತಃ ನಮ್ಮನ್ನೇ ಪ್ರತಿಕೂಲ ತೀರ್ಪಿಗೆ ಗುರಿ ಮಾಡಬಹುದು.—ಮತ್ತಾಯ 7:1-5 ಹೋಲಿಸಿ.
ಅಂಥವರನ್ನು ಕಟುವಾಗಿ ತೀರ್ಪು ಮಾಡುವ ಬದಲಿಗೆ ನಾವು ಮಾದರಿಯನ್ನಿಟ್ಟು ಅವರಿಗೆ ಸಹಾಯ, ಪ್ರೋತ್ಸಾಹನೆ, ಉಪದೇಶವನ್ನು ಕೊಡಬೇಕು. ಆದರೆ, ದಯೆ ತೋರಿಸುವಲ್ಲಿ, ಪ್ರಾಯಶಃ ಲೋಕದಲ್ಲಿ ಪ್ರಖ್ಯಾತರೆನಿಸುವ ಹೊಸಬರನ್ನು ನಾವು ನಿಶ್ಚಯವಾಗಿ ಪೂಜ್ಯ ಭಾವದಿಂದಲೋ ಎಂಬಂತೆ ನೋಡಬಾರದು. ಅದು ಪಕ್ಷಪಾತದ ಒಂದು ರೂಪ. ಅದು ನಮ್ಮ ಪಾಲಿನ ಅಪಕ್ವತೆಯನ್ನೂ ತೋರಿಸುತ್ತದೆ. ಆ ವ್ಯಕ್ತಿಗಾದರೂ, ನಾವು ತೋರಿಸುವ ಪೂಜ್ಯ ಭಾವವು ದೀನನಾಗಲು ಸಹಾಯ ಮಾಡುವದೋ? ಇಲ್ಲವೇ, ಅವನನ್ನು ಪೇಚಾಟಕ್ಕೆ ಒಳಪಡಿಸುವದೋ?—ಯಾಜಕಕಾಂಡ 19:15.
ದೇವರು ಅಪೇಕ್ಷಿಸುವುದಕ್ಕಿಂತ ಹೆಚ್ಚನ್ನು ಅಪೇಕ್ಷಿಸಬೇಡಿ
ಹೃದಯವನ್ನು ನೋಡುವವನಾದ ಯೆಹೋವನಿಗೆ ಹೋಲಿಕೆಯಲ್ಲಿ, ಇತರರ ಕಡೆಗಿನ ನಮ್ಮ ನೋಟವು ಅತಿ ಸೀಮಿತವಾಗಿದೆ. (1 ಪೂರ್ವಕಾಲವೃತ್ತಾಂತ 28:9) ಇದನ್ನು ಗಣ್ಯಮಾಡುವಿಕೆಯು ನಮ್ಮನ್ನು ಆಧುನಿಕ ದಿನದ ಫರಿಸಾಯರಾಗುವುದರಿಂದ ತಡೆಯುತ್ತದೆ, ಯಾವುದು ಸರಿಯೆಂದು ನಾವು ತಿಳಿಯುತ್ತೇವೋ ಅದಕ್ಕೆ ಜನರು ಒಪ್ಪುವಂತೆ ನಮ್ಮ ಸ್ವ-ನಿರ್ಮಿತ ನೀತಿಯ ಅಚ್ಚಿನೊಳಗೆ ಅವರನ್ನು ದಬ್ಬಲು ಪ್ರಯತ್ನಿಸದಂತೆ ಮಾಡುತ್ತದೆ. ನಾವು ಜನರನ್ನು ದೇವರ ನೋಟದಲ್ಲಿ ನೋಡಲು ಪ್ರಯತ್ನಿಸುವುದಾದರೆ, ಆತನಿಗಿಂತ ಹೆಚ್ಚನ್ನು ಅವರಿಂದ ಅಪೇಕ್ಷಿಸಲಾರೆವು. ನಾವು, “ಶಾಸ್ತ್ರದಲ್ಲಿ ಬರೆದಿರುವುದನ್ನು ಮೀರಿ ಹೋಗಲಾರೆವು.” (1 ಕೊರಿಂಥದವರಿಗೆ 4:6) ಇದನ್ನು ಕ್ರೈಸ್ತ ಹಿರಿಯರು ವಿಶೇಷವಾಗಿ ಹೃದಯಕ್ಕೆ ತಕ್ಕೊಳ್ಳುವುದು ಮಹತ್ವವುಳ್ಳದ್ದು.—1 ಪೇತ್ರ 5:2, 3.
ಇದನ್ನು ನಾವು ಉಡುಪಿನ ವಿಷಯದಲ್ಲಿ ದೃಷ್ಟಾಂತಿಸಬಹುದು. ಬೈಬಲ್ ಆವಶ್ಯಕತೆಯು—ದೇವರು ಅವಶ್ಯಪಡಿಸುವುದು—ಕ್ರೈಸ್ತನ ಉಡುಪು ಶುಚಿಯೂ, ನೀಟೂ, ಸುವ್ಯವಸ್ಧಿತವೂ ಆಗಿರಬೇಕು, “ಹಾಳತಕ್ಕೆ ಮತ್ತು ಸ್ವಸ್ಥಚಿತ್ತಕ್ಕೆ” ನ್ಯೂನತೆಯದ್ದಾಗಿ ಇರಬಾರದು ಎಂಬದನ್ನು. (1 ತಿಮೊಥಿ 2:9; 3:2, NW) ಹೀಗಿರಲಾಗಿ, ಒಂದು ಸಭೆಯ ಹಿರಿಯರು ಕೆಲವು ವರ್ಷಗಳ ಹಿಂದೆ, ಆ ದೇಶದಲ್ಲಿ ಯಾವುದೇ ನಸುಬಣ್ಣವು ಸಾಮಾನ್ಯವಾಗಿ ಸ್ವೀಕೃತವಿದ್ದರೂ, ತಮ್ಮ ಸಭೆಯ ಪ್ರತಿಯೊಬ್ಬ ಬಹಿರಂಗ ಭಾಷಕನು ಬಿಳೀ ಬಣ್ಣದ ಶರ್ಟನ್ನೇ ಹಾಕಬೇಕೆಂದು ಅವಶ್ಯಪಡಿಸಿದ ಮೂಲಕ “ಶಾಸ್ತ್ರದಲ್ಲಿ ಬರೆದುದನ್ನು ಮೀರಿ” ಹೋದರು. ಬಣ್ಣದ ಶರ್ಟನ್ನು ಹಾಕಿಕೊಂಡು ಬಂದ ಅತಿಥಿ ಭಾಷಕರನ್ನು, ಅಂತಹ ತುರ್ತು ಪರಿಸ್ಥಿತಿಗಳಿಗಾಗಿಯೇ ರಾಜ್ಯ ಸಭಾಗೃಹದಲ್ಲಿಡಲ್ಪಟ್ಟ ಶರ್ಟುಗಳಲ್ಲೊಂದಕ್ಕೆ ಬದಲಾಯಿಸುವಂತೆ ಕೇಳಲಾಗುತ್ತಿತ್ತು. ನಮ್ಮ ವ್ಯಕ್ತಿಪರ ರುಚಿಗಳನ್ನು ಇತರರ ಮೇಲೆ ಬಲವಂತವಾಗಿ ಹೊರಿಸದಂತೆ ನಾವೆಷ್ಟು ಜಾಗ್ರತೆ ವಹಿಸಬೇಕು ! ಮತ್ತು ಪೌಲನ ಸೂಚನೆ ಅದೆಷ್ಟು ತಕ್ಕದ್ದಾಗಿದೆ: “ನಿಮ್ಮ ಸೈರಣೆಯು ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ.”—ಫಿಲಿಪ್ಪಿಯವರಿಗೆ 4:5.
ಹೊರ ತೋರಿಕೆಗಿಂತ ಆಚೇ ನೋಡುವುದರಿಂದ ಒಳ್ಳೇ ಪರಿಣಾಮಗಳು
ಜನರ ಹೃದಯಗಳನ್ನು ನಾವು ನೋಡಲಾರೆವು ಎಂಬದನ್ನು ಗಣ್ಯಮಾಡುವದರಿಂದ, ಕ್ರೈಸ್ತ ಸಭೆಯ ಹೊರಗೂ ಮತ್ತು ಒಳಗೂ, ನಮ್ನ ಸುತ್ತಲಿರುವ ಎಲ್ಲರೊಂದಿಗೆ ಒಳ್ಳೇ ಸಂಬಂಧವನ್ನು ಕಾಪಾಡುವಂತೆ ಸಹಾಯವಾಗುವುದು. ಇತರರ ಕುರಿತು ಸಕಾರಾತ್ಮಕವಾಗಿ ಯೋಚಿಸುವಂತೆ, ಅವರ ಹೇತುಗಳ ಕುರಿತು ಸಂದೇಹಿಸದಂತೆ ನೆರವಾಗುವುದು ಯಾಕಂದರೆ, “ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸಹೋದವರೂ ನಾನಾವಿಧವಾದ ದುರಾಶೆಗಳಿಗೆ ಮತ್ತು ಭೋಗಗಳಿಗೆ ಅಧೀನರೂ ಆಗಿದ್ದೆವು.” (ತೀತ 3:3) ಇದನ್ನು ಮನವರಿಕೆ ಮಾಡಿ, ನಾವು ಪ್ರತಿಯೊಬ್ಬರಿಗೆ ಸಾರಲು ಸಿದ್ಧ ಮನಸ್ಕರಾಗಿರಬೇಕು, ಹೊರ ತೋರಿಕೆಗೆ ಅಯೋಗ್ಯರಾಗಿ ಕಾಣಬಹುದಾದ ಜನರಿಗೂ ಸಾರಬೇಕು. ಸತ್ಯವನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ನಿರ್ಣಯವು ಎಷ್ಟೆಂದರೂ ಅವರದ್ದೇ. ಆದರೆ ಅದನ್ನು ಎಲ್ಲರಿಗೂ ಸಾರುವುದು ನಮ್ಮ ಜವಾಬ್ದಾರಿ.
ಹೆನ್ನ್ಜಂಥಾ ಅನೇಕ ಯೆಹೋವನ ಸಾಕ್ಷಿಗಳು, ಹೊರತೋರಿಕೆಗಿಂತ ಆಚೇ ಕಡೆ ನೋಡಿದ ಮತ್ತು ತಮ್ಮ ಮೊದಲ ಭಾವನೆಗನುಸಾರ ತೀರ್ಪು ಮಾಡದ ಸಹೋದರ ಮತ್ತು ಸಹೋದರಿಯರಿಂದ ಕ್ರೈಸ್ತ ಸಭೆಯೊಳಗೆ ಸ್ವಾಗತಿಸಲ್ಪಟ್ಟದ್ದಕ್ಕಾಗಿ ಸಂತೋಷಿತರಾಗಿದ್ದಾರೆ.
ದಕ್ಷಿಣ ಜರ್ಮನಿಯ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹವನ್ನು ಒಂದು ಭಾನುವಾರ ಹಾಜರಾದ ಫ್ರೇಂಕ್ನ್ನು ತಕ್ಕೊಳ್ಳಿರಿ. ಹಾಜರಾದವರು ಕಂಡದ್ದೇನು? ಉದ್ದವಾದ ಕೂದಲು ಮತ್ತು ಗಡ್ಡವಿಟ್ಟು, ಕೊಳಕು ಬಟ್ಟೆಹಾಕಿದ ಒರಟು ಯುವಕನನ್ನು, ಸ್ಥಳೀಕ ಸರಾಯಿ ಅಂಗಡಿಯ ನಿತ್ಯದ ಗಿರಾಕಿ ಮತ್ತು ಕಡು ಧೂಮಪಾನಿಯೆಂದು ಹೆಸರಾದ ಹಾಗೂ—ತನ್ನ ಜತೆಗಾರ್ತಿಯನ್ನೂ ತನ್ನ ಅವಳಿ ಕೂಸುಗಳನ್ನೂ ದುರ್ಲಕ್ಷ್ಯಿಸಿ ಬಿಟ್ಟವನನ್ನು. ಆದರೂ, ಅವನನ್ನು ಕೂಟದಲ್ಲಿ ಹೃತ್ಪೂರ್ವಕವಾಗಿ ಸ್ವಾಗತಿಸಲಾಯಿತು. ಅವನೆಷ್ಟು ಪ್ರಭಾವಿತನಾದನೆಂದರೆ ಮುಂದಿನ ವಾರ ಪುನಃ ಬಂದನು. ಆಗ ಅವರು ಕಂಡದ್ದೇನು? ನೀಟಾಗಿ ತಲೆಬಾಚಿ, ಶುಚಿಯಾದ ಬಟ್ಟೆತೊಟ್ಟ ಯುವಕನನ್ನು. ಮೂರನೇ ವಾರ ಬಂದಾಗ ಅವನು ಧೂಮಪಾನ ತ್ಯಜಿಸಿದ್ದ ಮತ್ತು ತನ್ನ ಜತೆಗಾರ್ತಿ ಮತ್ತು ಅವರ ಇಬ್ಬರು ಮಕ್ಕಳೊಂದಿಗೆ ಬಂದಿದ್ದ. ನಾಲ್ಕನೆಯ ಭಾನುವಾರ, ತಮ್ಮ ವಿವಾಹವನ್ನು ಕಾನೂನುಬದ್ಧ ಮಾಡಲು ಆಗಲೇ ಲೈಸನ್ಸ್ ಪಡೆದ ಯುವಕ ಮತ್ತು ಯುವತಿ ಅಲ್ಲಿದದ್ದನ್ನು ಅವರು ಕಂಡರು. ಐದನೇ ಭಾನುವಾರ, ಸುಳ್ಳುಧರ್ಮದೊಂದಿಗೆ ಎಲ್ಲಾ ಸಂಬಂಧವನ್ನು ಕಡಿದು ಹಾಕಿದ್ದ ಯುವಕನನ್ನು ಅವರು ಕಂಡರು. ಇಂದು, ಸುಮಾರು ನಾಲ್ಕು ವರ್ಷಗಳ ನಂತರ, “ಅನೇಕ ವರ್ಷಗಳಿಂದ ನಮ್ಮ ಸಹೋದರರಾಗಿದವ್ದರೆಂದು ನೆನಸುವಷ್ಟು ಒಂದು ಉತ್ತಮ ಪ್ರಭಾವವನ್ನು ಹಾಕುವ ಕುಟುಂಬವಾಗಿದ್ದಾರೆ ಅವರು” ಎಂದು ಯೆಹೋವನ ಸಾಕ್ಷಿಯೊಬ್ಬರು ವರದಿಸಿದ್ದಾರೆ.
ಒಂದು ಪುಸ್ತಕದ ಗುಣಮಟ್ಟವು ಅದರ ರಕ್ಷಾವರಣದಲ್ಲಿ, ಯಾ ಒಂದು ಮನೆಯ ದರ್ಜೆಯು ಅದರ ಹೊರತೋರಿಕೆಯಿಂದ ಪ್ರತಿಬಿಂಬಿಸುವುದಿಲ್ಲ. ತದ್ರೀತಿ, ಒಬ್ಬ ವ್ಯಕ್ತಿಯ ನಿಜ ಗುಣವು ಅವನ ಹೊರ ತೋರಿಕೆಯಿಂದ ಪ್ರತಿಬಿಂಬಿಸುವುದಿಲ್ಲ. ದೇವರ ನೋಟದಲ್ಲಿ ಜನರನ್ನು ನೋಡಲು ಪ್ರಯತ್ನಿಸುವ ಕ್ರೈಸ್ತರು ಮೊದಲ ಭಾವನೆಯಿಂದ ತೀರ್ಪು ಮಾಡಲಾರರು. ದೇವರು “ಒಳಗಣ ಹೃದಯವನ್ನು” ನೋಡುವಾತನು, ಮತ್ತು ಅದಕ್ಕಾಗಿ ನಾವು ಕೃತಜ್ಞರಾಗಿರತಕ್ಕದ್ದು.—1 ಪೇತ್ರ 3:3, 4. (w89 11/1)