-
ವಾಚಕರಿಂದ ಪ್ರಶ್ನೆಗಳುಕಾವಲಿನಬುರುಜು (ಅಧ್ಯಯನ)—2018 | ಡಿಸೆಂಬರ್
-
-
ಅಪೊಸ್ತಲ ಪೌಲನು ಯಾವ ಅರ್ಥದಲ್ಲಿ “ಮೂರನೆಯ ಸ್ವರ್ಗಕ್ಕೆ” ಮತ್ತು ‘ಪರದೈಸಿಗೆ’ ಒಯ್ಯಲ್ಪಟ್ಟನು?—2 ಕೊರಿಂ. 12:2-4.
ಪೌಲನು 2 ಕೊರಿಂಥ 12:2, 3ರಲ್ಲಿ “ಮೂರನೆಯ ಸ್ವರ್ಗಕ್ಕೆ ಒಯ್ಯಲ್ಪಟ್ಟ” ಮನುಷ್ಯನ ಬಗ್ಗೆ ಮಾತಾಡುತ್ತಾನೆ. ಆ ಮನುಷ್ಯ ಯಾರು? ಕೊರಿಂಥ ಸಭೆಗೆ ಬರೆದ ಪತ್ರದಲ್ಲಿ ದೇವರು ತನ್ನನ್ನು ಒಬ್ಬ ಅಪೊಸ್ತಲನಂತೆ ಉಪಯೋಗಿಸುತ್ತಿದ್ದಾನೆ ಎಂದು ಪೌಲನು ಒತ್ತಿಹೇಳಿದನು. (2 ಕೊರಿಂ. 11:5, 23) ನಂತರ “ದರ್ಶನಗಳ ಕುರಿತೂ ಪ್ರಕಟನೆಗಳ ಕುರಿತೂ” ಮಾತಾಡಿದನು. ಆ ಸಂದರ್ಭದಲ್ಲಿ ಪೌಲನು ಬೇರೆ ಸಹೋದರರ ಬಗ್ಗೆ ಮಾತಾಡಲಿಲ್ಲ. ಹಾಗಾಗಿ ದರ್ಶನಗಳು ಮತ್ತು ಪ್ರಕಟನೆಗಳು ಸಿಕ್ಕಿದ ಆ ಮನುಷ್ಯನು ಪೌಲನೇ ಆಗಿರಬೇಕು.—2 ಕೊರಿಂ. 12:1, 5.
“ಮೂರನೆಯ ಸ್ವರ್ಗಕ್ಕೆ ಒಯ್ಯಲ್ಪಟ್ಟ” ಮತ್ತು ‘ಪರದೈಸಿಗೆ’ ಹೋದ ಮನುಷ್ಯನು ಪೌಲನೇ ಎಂದು ಗೊತ್ತಾಯಿತು. (2 ಕೊರಿಂ. 12:2-4) ಪೌಲನು ತನ್ನ ಪತ್ರದಲ್ಲಿ “ಪ್ರಕಟನೆಗಳ” ಬಗ್ಗೆ ಮಾತಾಡಿದನು. ಆತನಿಗೆ ಭವಿಷ್ಯದಲ್ಲಿ ಬರಲಿರುವ ವಿಷಯಗಳ ಬಗ್ಗೆ ತಿಳಿಸಲಾಯಿತು ಎಂದು ಇದರಿಂದ ಗೊತ್ತಾಗುತ್ತದೆ.
ಪೌಲನು ನೋಡಿದ “ಮೂರನೆಯ ಸ್ವರ್ಗ” ಏನಾಗಿತ್ತು?
ಕನ್ನಡ ಬೈಬಲಿನಲ್ಲಿ “ಸ್ವರ್ಗ” ಎಂಬ ಪದವನ್ನು “ಆಕಾಶ” ಎಂದು ಭಾಷಾಂತರಿಸಲಾಗಿದೆ. ಇದು ಕೆಲವು ಕಡೆ ನಮ್ಮ ಕಣ್ಣಿಗೆ ಕಾಣುವ ಆಕಾಶಕ್ಕೆ ಸೂಚಿಸುತ್ತದೆ. (ಆದಿ. 11:4; 27:28; ಮತ್ತಾ. 6:26) ಇನ್ನೂ ಕೆಲವು ಕಡೆ ಇದನ್ನು ಬೇರೆ ಅರ್ಥದಲ್ಲೂ ಉಪಯೋಗಿಸಲಾಗಿದೆ. ಕೆಲವೊಮ್ಮೆ ಅದು ಮಾನವ ಆಡಳಿತಕ್ಕೂ ಸೂಚಿಸುತ್ತದೆ. (ದಾನಿ. 4:20-22) ದೇವರಿಂದ ಆಳಲ್ಪಡುವ ರಾಜ್ಯಕ್ಕೂ ಅದು ಸೂಚಿಸಬಹುದು.—ಪ್ರಕ. 21:1.
ಪೌಲನು ‘ಮೂರನೆಯ ಸ್ವರ್ಗವನ್ನು’ ನೋಡಿದನು. ಮೂರನೆಯದ್ದು ಅಂದರೆ ಏನು? ಬೈಬಲಲ್ಲಿ ಒಂದು ವಿಷಯಕ್ಕೆ ಒತ್ತು ನೀಡಲು ಅಥವಾ ತೀವ್ರತೆ ವ್ಯಕ್ತಪಡಿಸಲು ಅದನ್ನು ಮೂರು ಸಾರಿ ಹೇಳಲಾಗುತ್ತದೆ. (ಯೆಶಾ. 6:3; ಯೆಹೆ. 21:27; ಪ್ರಕ. 4:8) ಹಾಗಾದರೆ ಪೌಲನು “ಮೂರನೆಯ ಸ್ವರ್ಗ” ಎಂದು ಹೇಳಿದಾಗ ಒಂದು ಶ್ರೇಷ್ಠವಾದ, ಉನ್ನತವಾದ ಆಳ್ವಿಕೆಯ ಬಗ್ಗೆ ಮಾತಾಡುತ್ತಿದ್ದನು ಎಂದು ಕಾಣುತ್ತದೆ. ಇದು ಯೇಸು ಕ್ರಿಸ್ತನು ಮತ್ತು 1,44,000 ಸಹರಾಜರು ಆಳುವ ಮೆಸ್ಸೀಯ ರಾಜ್ಯವಾಗಿದೆ. (2004, ಅಕ್ಟೋಬರ್ 15ರ ಕಾವಲಿನಬುರುಜುವಿನ ಪುಟ 8, ಪ್ಯಾರ 5 ನೋಡಿ.) ಈ ಮೆಸ್ಸೀಯ ರಾಜ್ಯವನ್ನು ದೇವರು ವಾಗ್ದಾನ ಮಾಡಿದ “ನೂತನ ಆಕಾಶ” ಎಂದು ಅಪೊಸ್ತಲ ಪೇತ್ರ ಬರೆದಿದ್ದಾನೆ. ಅದನ್ನೇ ನಾವು ಎದುರುನೋಡುತ್ತಿದ್ದೇವೆ.—2 ಪೇತ್ರ 3:13.
-
-
ವಾಚಕರಿಂದ ಪ್ರಶ್ನೆಗಳುಕಾವಲಿನಬುರುಜು (ಅಧ್ಯಯನ)—2018 | ಡಿಸೆಂಬರ್
-
-
ಎರಡನೇ ಕೊರಿಂಥ 12:2ರಲ್ಲಿ ತಿಳಿಸಲಾಗಿರುವ “ಮೂರನೆಯ ಸ್ವರ್ಗ” ಯೇಸು ಮತ್ತು 1,44,000 ಮಂದಿಯ ಕೆಳಗಿರುವ ಮೆಸ್ಸೀಯ ರಾಜ್ಯಕ್ಕೆ ಅಥವಾ ‘ನೂತನ ಆಕಾಶಕ್ಕೆ’ ಸೂಚಿಸುತ್ತದೆ ಎಂದು ತೋರುತ್ತದೆ.—2 ಪೇತ್ರ 3:13.
ದೇವರ ರಾಜ್ಯದ ಆಳ್ವಿಕೆ ಶ್ರೇಷ್ಠ, ಉನ್ನತ ಆಗಿರುವುದರಿಂದ ಅದನ್ನು “ಮೂರನೆಯ ಸ್ವರ್ಗ” ಎಂದು ಕರೆಯಲಾಗಿದೆ.
-