-
ನಿಮಗೆ ತಿಳಿದಿತ್ತೋ?ಕಾವಲಿನಬುರುಜು—2011 | ಏಪ್ರಿಲ್ 15
-
-
▪ “ಕ್ರಿಸ್ತನೊಂದಿಗೆ ಅನ್ಯೋನ್ಯತೆಯಲ್ಲಿ ನಮ್ಮನ್ನು . . . ವಿಜಯೋತ್ಸವದ ಮೆರವಣಿಗೆಯಲ್ಲಿ ನಡೆಸುವ ಹಾಗೂ ದೇವರ ಕುರಿತಾದ ಜ್ಞಾನವೆಂಬ ಸುವಾಸನೆಯನ್ನು ನಮ್ಮ ಮೂಲಕ ಎಲ್ಲ ಸ್ಥಳಗಳಲ್ಲಿ ಪ್ರಸರಿಸುವ ದೇವರಿಗೆ ಕೃತಜ್ಞತೆ ಸಲ್ಲಿಸಲ್ಪಡಲಿ! ರಕ್ಷಣೆಯ ಮಾರ್ಗದಲ್ಲಿರುವವರ ಮತ್ತು ನಾಶನದ ಮಾರ್ಗದಲ್ಲಿರುವವರ ನಡುವೆ ನಾವು ದೇವರಿಗೆ ಕ್ರಿಸ್ತನ ಪರಿಮಳವಾಗಿದ್ದೇವೆ. ನಾಶನದ ಮಾರ್ಗದಲ್ಲಿರುವವರಿಗೆ ಮರಣದಿಂದ ಹುಟ್ಟಿ ಮರಣಕ್ಕೆ ನಡೆಸುವ ವಾಸನೆಯಾಗಿಯೂ ರಕ್ಷಣೆಯ ಮಾರ್ಗದಲ್ಲಿರುವವರಿಗೆ ಜೀವದಿಂದ ಹುಟ್ಟಿ ಜೀವಕ್ಕೆ ನಡೆಸುವ ವಾಸನೆಯಾಗಿಯೂ ಇದ್ದೇವೆ” ಎಂದು ಪೌಲನು ಬರೆದನು.—2 ಕೊರಿಂ. 2:14-16.
-
-
ನಿಮಗೆ ತಿಳಿದಿತ್ತೋ?ಕಾವಲಿನಬುರುಜು—2011 | ಏಪ್ರಿಲ್ 15
-
-
ಕೆಲವರಿಗೆ ಜೀವವನ್ನು ಇನ್ನೂ ಕೆಲವರಿಗೆ ಮರಣವನ್ನು ಸೂಚಿಸುತ್ತಿದ್ದ “ಕ್ರಿಸ್ತನ ಪರಿಮಳ” ಎಂದು ಉಪಯೋಗಿಸಲಾಗಿರುವ ರೂಪಕಾಲಂಕಾರವನ್ನು “ಪ್ರಾಯಶಃ ರೋಮನ್ನರು ಮೆರವಣಿಗೆಯುದ್ದಕ್ಕೂ ಧೂಪಸುಡುತ್ತಿದ್ದ ಪದ್ಧತಿಯಿಂದ ತೆಗೆದುಕೊಂಡಿರಬೇಕು” ಎಂದು ದಿ ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಬೈಬಲ್ ಎನ್ಸೈಕ್ಲಪೀಡಿಯ ಹೇಳುತ್ತದೆ. “ಧೂಪದಿಂದ ಬರುತ್ತಿದ್ದ ಸುವಾಸನೆಯು ಗೆದ್ದವರಿಗೆ ವಿಜಯವನ್ನೂ ಸೋತು ಕೈದಿಗಳಾಗಿದ್ದವರಿಗೆ ತಮ್ಮ ಮುಂದಿದ್ದ ಸಾವನ್ನೂ ಜ್ಞಾಪಿಸುತ್ತಿತ್ತು.” (w10-E 08/01)
-