ಇತರರಿಗೆ ಸಹಾಯಮಾಡಲು ನಿಮಗೆ ‘ಮನಸ್ಸುಂಟೊ’?
1 ಯೇಸು ನಿಜವಾಗಿಯೂ ಜನರ ಬಗ್ಗೆ ಕಾಳಜಿ ವಹಿಸಿದನು. ಒಬ್ಬ ಕುಷ್ಠರೋಗಿಯು ಸಹಾಯಕ್ಕಾಗಿ ಆತನಲ್ಲಿ ಕೇಳಿಕೊಂಡಾಗ, ಯೇಸು ಕೈನೀಡಿ ಅವನನ್ನು ಮುಟ್ಟಿ, “ನನಗೆ ಮನಸ್ಸುಂಟು; ಶುದ್ಧವಾಗು” ಅಂದನು. (ಓರೆ ಅಕ್ಷರಗಳು ನಮ್ಮವು.) (ಮಾರ್ಕ 1:40-44) ಇತರರಿಗೆ ಸಹಾಯಮಾಡುವ ವಿಷಯದಲ್ಲಿ ನಾವು ಯೇಸುವಿನ ಮನೋಭಾವವನ್ನು ಯಾವ ರೀತಿಯಲ್ಲಿ ಅನುಕರಿಸಸಾಧ್ಯವಿದೆ?
2 ಆಸಕ್ತ ಜನರು: ಯೆಹೋವನ ಆರಾಧಕರಾಗುವಂತೆ ಆಸಕ್ತ ಜನರಿಗೆ ಸಹಾಯಮಾಡುವುದರಲ್ಲಿ ಸಭೆಯಲ್ಲಿರುವ ಪ್ರತಿಯೊಬ್ಬ ಸದಸ್ಯನಿಗೂ ಒಂದು ಪಾತ್ರವಿದೆ. ಕೂಟಗಳಿಗೆ ಹೊಸಬರು ಬರುವಾಗ ಅವರನ್ನು ವಂದಿಸಿ, ಅವರ ಪರಿಚಯಮಾಡಿಕೊಳ್ಳಿರಿ. ಅವರನ್ನು ಉತ್ತೇಜಿಸಲು ಮಾರ್ಗಗಳನ್ನು ಹುಡುಕಿರಿ. ಅವರು ಕೂಟಗಳಲ್ಲಿ ಮಾಡುವ ಹೇಳಿಕೆಗಳಿಗಾಗಿ ಅವರನ್ನು ಪ್ರಶಂಸಿಸಿರಿ. ಅವರು ತಮ್ಮ ಜೀವಿತಗಳಲ್ಲಿ ಬೈಬಲ್ ಮೂಲತತ್ತ್ವಗಳನ್ನು ಅನ್ವಯಿಸಲು ಮಾಡುವ ಪ್ರಯತ್ನಕ್ಕಾಗಿ ಗಣ್ಯತೆಯನ್ನು ವ್ಯಕ್ತಪಡಿಸಿರಿ. ಸಭೆಯಲ್ಲಿ ನಿಜವಾದ ಸ್ನೇಹಿತರನ್ನು ಮಾಡಿಕೊಳ್ಳಲು ಅವರಿಗಿರುವ ಸಾಧ್ಯತೆಗಳನ್ನು ನೋಡುವಂತೆ ಸಹಾಯಮಾಡಿರಿ.
3 ಜೊತೆ ವಿಶ್ವಾಸಿಗಳು: “ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವ”ರು ಅನೇಕ ವಿಧಗಳಲ್ಲಿ ನಮ್ಮಿಂದ ಸಹಾಯ ಪಡೆಯಲು ಅರ್ಹರಾಗಿದ್ದಾರೆ. (ಗಲಾ. 6:10) ಅನೇಕರು ಆರೋಗ್ಯದ ಸಮಸ್ಯೆಗಳೊಂದಿಗೆ ಹೆಣಗಾಡುತ್ತಿದ್ದಾರೆ. ಉತ್ತೇಜನದಾಯಕ ಭೇಟಿಯನ್ನು ನೀಡುವ ಮೂಲಕ ಅವರಿಗೆ ಅತ್ಯಗತ್ಯವಾಗಿರುವ ಸಹವಾಸವನ್ನು ನೀವು ಒದಗಿಸಸಾಧ್ಯವಿದೆ ಮಾತ್ರವಲ್ಲ, ಅವರಿಗೆ ವ್ಯಾವಹಾರಿಕ ವಿಧಗಳಲ್ಲಿ ನೀವು ಸಹಾಯಮಾಡಲೂ ಸಾಧ್ಯವಿದೆ. ಕೆಲವರು ತಮ್ಮ ಜೀವಿತಗಳಲ್ಲಿ ಇನ್ನಿತರ ಸಂಕಷ್ಟಗಳನ್ನು ಎದುರಿಸುತ್ತಿರಬಹುದು. ಅವರಿಗೆ ಕಿವಿಗೊಡಲು ಹಾಗೂ ಅವರನ್ನು ಕಟ್ಟಲು ಸಮಯ ತೆಗೆದುಕೊಳ್ಳುವ ಮೂಲಕ ಅವರ ಕುರಿತು ನಿಮಗಿರುವ ಚಿಂತೆಯನ್ನು ತೋರಿಸಿರಿ. (1 ಥೆಸ. 5:14) ಹಿರಿಯರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವಾಗ, ಅವರಿಗೂ ನಮ್ಮ ಸಹಕಾರದ ಅಗತ್ಯವಿದೆ. (ಇಬ್ರಿ. 13:17) ಸಿದ್ಧಮನಸ್ಸನ್ನು ಹಾಗೂ ಸಹಾಯಮಾಡುವ ಆತ್ಮವನ್ನು ಪ್ರದರ್ಶಿಸುವ ಮೂಲಕ ನಾವು ನಮ್ಮ ಜೊತೆ ವಿಶ್ವಾಸಿಗಳಿಗೆ “ಬಲವರ್ಧಕ ಸಹಾಯ”ವಾಗಸಾಧ್ಯವಿದೆ.—ಕೊಲೊ. 4:11, NW.
4 ಕುಟುಂಬದ ಸದಸ್ಯರು: ನಮ್ಮ ಸ್ವಂತ ಕುಟುಂಬ ವೃತ್ತದೊಳಗೂ, ಯೇಸು ಜನರ ಕಡೆಗೆ ತೋರಿಸಿದಂತಹ ಕಾಳಜಿಯನ್ನು ತೋರಿಸಲು ನಾವು ಶ್ರಮಪಡಬೇಕು. ಅತ್ಯಧಿಕ ಕಾಳಜಿಯು, ‘ಕರ್ತನಿಗೆ [“ಯೆಹೋವನಿಗೆ,” NW] ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಮಕ್ಕಳನ್ನು ಸಾಕಿಸಲಹು’ವಂತೆ ಹೆತ್ತವರನ್ನು ಪ್ರೇರೇಪಿಸುತ್ತದೆ. (ಎಫೆ. 6:4) ಸಮಯಕ್ಕೆ ಸರಿಯಾಗಿ ಕುಟುಂಬ ಅಧ್ಯಯನ, ಸಭಾ ಕೂಟಗಳು, ಅಥವಾ ಕ್ಷೇತ್ರ ಸೇವೆಗೆ ತಯಾರಾಗುವ ಮೂಲಕ ಮಕ್ಕಳು ತಮ್ಮ ಭಾಗವನ್ನು ಮಾಡಸಾಧ್ಯವಿದೆ. ವಯಸ್ಸಾಗುವಿಕೆಯಿಂದ ಬರುವ ಸಂಕಷ್ಟಗಳನ್ನು ಎದುರಿಸಲು ಕೋಮಲತೆಯಿಂದ ತಮ್ಮ ಹೆತ್ತವರಿಗೆ ಸಹಾಯಮಾಡುವ ಮೂಲಕ, ಬೆಳೆದ ಮಕ್ಕಳು ಯೇಸುವಿನ ಅನುಕಂಪವನ್ನು ಪ್ರತಿಬಿಂಬಿಸಸಾಧ್ಯವಿದೆ. ಇಂಥ ಮತ್ತು ಇನ್ನಿತರ ರೀತಿಗಳಲ್ಲಿ ನಾವೆಲ್ಲರೂ “[ನಮ್ಮ] ಸ್ವಂತ ಮನೆವಾರ್ತೆಯಲ್ಲಿ ದೇವಭಕ್ತಿಯನ್ನು ಆಚರಿಸ”ಸಾಧ್ಯವಿದೆ.—1 ತಿಮೊ. 5:4, NW.
5 ಇತರರಿಗೆ ಸಹಾಯಮಾಡುವ ವಿಷಯದಲ್ಲಿ ನಾವು ಯೇಸುವನ್ನು ಅನುಕರಿಸುವಾಗ, ಸಮಸ್ಯೆಗಳನ್ನು ಕಡಿಮೆಗೊಳಿಸಲು ಮತ್ತು ನಮ್ಮ ಕುಟುಂಬವನ್ನು ಹಾಗೂ ಸಭೆಯನ್ನು ಹತ್ತಿರಕ್ಕೆ ತರಲು ನಮ್ಮಿಂದ ಸಾಧ್ಯವಾಗಬಹುದು. ಎಲ್ಲದಕ್ಕಿಂತಲೂ ಮುಖ್ಯವಾಗಿ, “ಕನಿಕರವುಳ್ಳ ತಂದೆ”ಯಾದ ಯೆಹೋವನಿಗೆ ನಾವು ಘನತೆಯನ್ನು ತರುತ್ತೇವೆ.—2 ಕೊರಿಂ. 1:3.