ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ಜೂನ್ 3-9
ಬೈಬಲಿನಲ್ಲಿರುವ ರತ್ನಗಳು | ಗಲಾತ್ಯ 4-6
ಒಂದು “ಸಾಂಕೇತಿಕ ನಾಟಕ”
it-1 ಪುಟ 1018 ಪ್ಯಾರ 2
ಹಾಗರ್
ಅಪೊಸ್ತಲ ಪೌಲನಿಗನುಸಾರ ಹಾಗರಳು ಮಾಂಸಿಕ ಇಸ್ರಾಯೇಲ್ ಜನಾಂಗವನ್ನು ಪ್ರತಿನಿಧಿಸಿದಳು. ಈ ಜನಾಂಗದೊಟ್ಟಿಗೆ ಯೆಹೋವನು ಸೀನಾಯಿಬೆಟ್ಟದಲ್ಲಿ ಧರ್ಮಶಾಸ್ತ್ರದ ಒಡಂಬಡಿಕೆ ಮಾಡಿಕೊಂಡನು. ಆ ಒಡಂಬಡಿಕೆಯು “ದಾಸತ್ವಕ್ಕಾಗಿ ಮಕ್ಕಳನ್ನು” ಹುಟ್ಟಿಸಿತು. ಇಸ್ರಾಯೇಲ್ ಜನಾಂಗದ ಜನರು ಪಾಪಿಗಳಾಗಿ ಇದ್ದದರಿಂದ ಆ ಒಡಂಬಡಿಕೆಯ ಶರತ್ತುಗಳನ್ನು ಪಾಲಿಸಲು ಅವರಿಂದ ಆಗಲಿಲ್ಲ. ಹೀಗೆ ಅವರು ದಾಸತ್ವದಲ್ಲೇ ಇರಬೇಕಾಯಿತು. ಒಡಂಬಡಿಕೆಯ ಕೆಳಗಿದ್ದಾಗ ಅವರು ಸ್ವತಂತ್ರರಾಗಲಿಲ್ಲ. ಬದಲಿಗೆ ಮರಣಕ್ಕೆ ಅರ್ಹರಾದ ಶಾಪಕ್ಕೆ ಒಳಗಾಗಿದ್ದರಿಂದ ದಾಸತ್ವದಲ್ಲಿದ್ದರು, ದಾಸರಾಗಿದ್ದರು. (ಯೋಹಾ 8:34: ರೋಮ 8:1-3) ಪೌಲನ ಕಾಲದಲ್ಲಿದ್ದ ಯೆರೂಸಲೇಮ್ ಪಟ್ಟಣ ಹಾಗರಳಿಗೆ ಅನುರೂಪವಾಗಿತ್ತು. ಯಾಕೆಂದರೆ ಮಾಂಸಿಕ ಇಸ್ರಾಯೇಲ್ ಜನಾಂಗವನ್ನು ಪ್ರತಿನಿಧಿಸಿದ್ದ ರಾಜಧಾನಿ ಯೆರೂಸಲೇಮ್ ಮತ್ತು ಅದರ ಮಕ್ಕಳು ದಾಸತ್ವದಲ್ಲಿ ಇದ್ದವು. ಆದರೆ ಆತ್ಮಾಭಿಷಿಕ್ತ ಕ್ರೈಸ್ತರು “ಮೇಲಣ ಯೆರೂಸಲೇಮ್” ಎಂಬ ದೇವರ ಸಾಂಕೇತಿಕ ಸ್ತ್ರೀಯ ಮಕ್ಕಳಾಗಿದ್ದಾರೆ. ಈ ಮೇಲಣ ಯೆರೂಸಲೇಮ್ ಸ್ವತಂತ್ರ ಸ್ತ್ರೀಯಾದ ಸಾರಳಿಗೆ ಅನುರೂಪವಾಗಿದೆ. ಸಾರಳು ಹೇಗೆ ದಾಸತ್ವದಲ್ಲಿ ಇರಲಿಲ್ಲವೋ ಹಾಗೆಯೇ ಮೇಲಣ ಯೆರೂಸಲೇಮ್ ದಾಸತ್ವದಲ್ಲಿ ಇರಲಿಲ್ಲ. ಆತ್ಮಾಭಿಷಿಕ್ತರು ಕ್ರಿಸ್ತನಿಂದ ಬಿಡುಗಡೆ ಹೊಂದಿ ಸ್ವತಂತ್ರರಾಗಿದ್ದಾರೆ. ಆದರೆ ಹೇಗೆ ಇಸಾಕನು ಇಷ್ಮಾಯೇಲನಿಂದ ಹಿಂಸಿಸಲ್ಪಟ್ಟನೋ ಹಾಗೆಯೇ ‘ಮೇಲಣ ಯೆರೂಸಲೇಮಿನ’ ಮಕ್ಕಳು ಸಹ ದಾಸತ್ವದಲ್ಲಿದ್ದ ಯೆರೂಸಲೇಮಿನ ಮಕ್ಕಳಿಂದ ಹಿಂಸಿಸಲ್ಪಟ್ಟರು. ಆದರೆ ಹಾಗರಳು ಮತ್ತು ಅವಳ ಮಗನು ಹೊರಗೆ ಹಾಕಲ್ಪಟ್ಟದ್ದು ಮಾಂಸಿಕ ಇಸ್ರಾಯೇಲ್ಯರನ್ನು ಒಂದು ಜನಾಂಗವಾಗಿ ದೇವರು ತಳ್ಳಿಹಾಕಿದ್ದನ್ನು ಪ್ರತಿನಿಧಿಸುತ್ತದೆ.—ಗಲಾ 4:21-31; ಯೋಹಾ 8:31-40 ಸಹ ನೋಡಿ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
w10 11/1 ಪುಟ 15
ನಿಮಗೆ ತಿಳಿದಿತ್ತೋ?
ಪೌಲನು ತನ್ನ ದೇಹದಲ್ಲಿ “ಯೇಸುವಿನ ದಾಸನ ಬರೆಯ ಗುರುತನ್ನು ಹೊಂದಿದ್ದೇನೆ” ಎಂದು ಯಾವುದಕ್ಕೆ ಸೂಚಿಸಿ ಮಾತಾಡುತ್ತಿದ್ದನು?—ಗಲಾತ್ಯ 6:17.
▪ ಪೌಲನ ಈ ಮಾತು ಒಂದನೇ ಶತಮಾನದ ಜನರಿಗೆ ಬೇರೆ ಬೇರೆ ಅರ್ಥಗಳನ್ನು ಕೊಟ್ಟಿರಬಹುದು. ಉದಾಹರಣೆಗೆ, ಹಿಂದಿನ ಕಾಲದಲ್ಲಿ ಯುದ್ಧ ಕೈದಿಗಳಿಗೆ, ದೇವಾಲಯದಲ್ಲಿ ಕಳ್ಳತನ ಮಾಡಿದ ಕಳ್ಳರಿಗೆ, ನಿರಾಶ್ರಿತರಾಗಿ ಬಂದ ಆಳುಗಳಿಗೆ ಕಬ್ಬಿಣವನ್ನು ಕಾಯಿಸಿ ಗುರುತು ಹಾಕಲಾಗುತ್ತಿತ್ತು. ಈ ರೀತಿ ಮನುಷ್ಯರಿಗೆ ಬರೆಯ ಗುರುತು ಹಾಕಿದರೆ ಅದು ತುಂಬ ಅವಮಾನದ ವಿಷಯವಾಗಿತ್ತು.
ಆದರೆ ಕೆಲವೊಮ್ಮೆ ಬರೆಯ ಗುರುತನ್ನು ಒಳ್ಳೇ ದೃಷ್ಟಿಯಲ್ಲೂ ನೋಡುತ್ತಿದ್ದರು. ಹಿಂದಿನ ಕಾಲದಲ್ಲಿ ಅನೇಕರು ತಾವು ಇಂಥ ಕುಲಕ್ಕೆ ಅಥವಾ ಧರ್ಮಕ್ಕೆ ಸೇರಿದವರು ಅನ್ನೋ ಗುರುತಿಗಾಗಿ ಬರೆ ಹಾಕಿಕೊಳ್ಳುತ್ತಿದ್ದರು. ಉದಾಹರಣೆಗೆ, “ಸಿರಿಯನ್ನರು ಹದದ ಮತ್ತು ಆಟಾರ್ಗಾಟಿಸ್ ಎಂಬ ದೇವರುಗಳಿಗೆ ತಮ್ಮನ್ನು ಅರ್ಪಿಸಿಕೊಂಡಾಗ ಕೈಯಲ್ಲಿ ಅಥವಾ ಕುತ್ತಿಗೆಯಲ್ಲಿ ಬರೆ ಹಾಕಿಕೊಳ್ಳುತ್ತಿದ್ದರು. . . . ಡೈಯನೈಸಸ್ ದೇವರ ಭಕ್ತರು ಐವಿ ಎಲೆಯ ಗುರುತನ್ನು ಹಾಕಿಕೊಳ್ಳುತ್ತಿದ್ದರು” ಎಂದು ಹೊಸ ಒಡಂಬಡಿಕೆಯ ದೇವತಾಶಾಸ್ತ್ರದ ಶಬ್ದಕೋಶ (ಇಂಗ್ಲಿಷ್) ಹೇಳುತ್ತದೆ.
ಪೌಲ ಮಿಷನರಿ ಕೆಲಸ ಮಾಡುತ್ತಿದ್ದಾಗ ಬೇರೆ ಬೇರೆ ಸಮಯದಲ್ಲಿ ಅವನ ಮೇಲೆ ನಡೆದ ದೌರ್ಜನ್ಯದ ಗುರುತುಗಳ ಬಗ್ಗೆ ಪೌಲ ಹೇಳಿರಬಹುದು ಎಂದು ಆಧುನಿಕ ಕಾಲದ ವಿಮರ್ಶಕರು ಹೇಳುತ್ತಾರೆ. (2 ಕೊರಿಂಥ 11:23-27) ಹೀಗಿದ್ದರೂ ಪೌಲನು ತನ್ನ ದೇಹದಲ್ಲಿ ಇರುವ ಗುರುತುಗಳನ್ನಲ್ಲ ಬಹುಶಃ ತನ್ನನ್ನು ಕ್ರೈಸ್ತನಾಗಿ ಗುರುತಿಸಿದ ತನ್ನ ಜೀವನ ರೀತಿಯನ್ನು ಸೂಚಿಸಿ ಮಾತಾಡಿರಬಹುದು.
ಜೂನ್ 10-16
ಬೈಬಲಿನಲ್ಲಿರುವ ರತ್ನಗಳು | ಎಫೆಸ 1–3
“ಯೆಹೋವನ ಆಡಳಿತ ಮತ್ತು ಅದರ ಕೆಲಸ”
it-2 ಪುಟ 837 ಪ್ಯಾರ 4
ಪವಿತ್ರ ರಹಸ್ಯ
ಮೆಸ್ಸೀಯ ರಾಜ್ಯ. ಪೌಲನು ತನ್ನ ಪತ್ರಿಕೆಗಳಲ್ಲಿ ಕ್ರಿಸ್ತನ ಪವಿತ್ರ ರಹಸ್ಯದ ಪ್ರಕಟನೆಯನ್ನು ಪೂರ್ತಿಯಾಗಿ ವಿವರಿಸಿದ್ದಾನೆ. ಎಫೆಸ 1:9-11 ರಲ್ಲಿ ದೇವರು ತನ್ನ ಚಿತ್ತದ “ಪವಿತ್ರ ರಹಸ್ಯವನ್ನು” ತಿಳಿಯಪಡಿಸಿದ್ದನ್ನು ಹೇಳುತ್ತಾ ಅವನಂದದ್ದು: “ಇದು ಆತನು ತನ್ನಲ್ಲಿ ಉದ್ದೇಶಿಸಿದ ಸುಸಂತೋಷಕ್ಕನುಸಾರವಾದದ್ದು. ಅದೇನಂದರೆ ನೇಮಿತ ಕಾಲದ ಪರಿಮಿತಿಯು ಪೂರ್ಣಗೊಂಡಾಗ ಒಂದು ಆಡಳಿತದ ಮೂಲಕ ಸ್ವರ್ಗದಲ್ಲಿರುವ ವಿಷಯಗಳನ್ನೂ ಭೂಮಿಯಲ್ಲಿರುವ ವಿಷಯಗಳನ್ನೂ ಹೀಗೆ ಸಮಸ್ತವನ್ನೂ ಕ್ರಿಸ್ತನಲ್ಲಿ ಪುನಃ ಒಂದುಗೂಡಿಸುವುದೇ. ಹೌದು ಕ್ರಿಸ್ತನಲ್ಲಿ ಅವನೊಂದಿಗೆ ಐಕ್ಯದಲ್ಲಿ ನಾವು ಸಹ ಭಾದ್ಯಸ್ಥರಾಗಿ ನೇಮಿಸಲ್ಪಟ್ಟೆವು. ತನ್ನ ಚಿತ್ತವು ಮಾರ್ಗದರ್ಶಿಸುವ ಪ್ರಕಾರ ಸಮಸ್ತ ಕಾರ್ಯಗಳನ್ನು ನಡಿಸುವಂಥ ದೇವರು ತನ್ನ ಉದ್ದೇಶಕ್ಕನುಸಾರ ನಮ್ಮನ್ನು ಪೂರ್ವನಿಶ್ಚಯಮಾಡಿದನು.” ಈ ‘ಪವಿತ್ರ ರಹಸ್ಯದಲ್ಲಿ’ ಮೆಸ್ಸೀಯ ರಾಜ್ಯ ಅಂದರೆ ಸರ್ಕಾರ ಸೇರಿದೆ. ಪೌಲನು ಹೇಳಿರುವ ‘ಸ್ವರ್ಗದಲ್ಲಿರುವ ವಿಷಯಗಳು’ ಯಾವುವೆಂದರೆ ಕ್ರಿಸ್ತನೊಂದಿಗೆ ಸ್ವರ್ಗದ ರಾಜ್ಯದಲ್ಲಿ ಆಳುವ ಭಾವೀ ಬಾಧ್ಯಸ್ಥರು. ‘ಭೂಮಿಯಲ್ಲಿರುವ ವಿಷಯಗಳು’ ಯಾರೆಂದರೆ ಆ ರಾಜ್ಯದ ಭೂಪ್ರಜೆಗಳು. ಯೇಸು ತನ್ನ ಶಿಷ್ಯರಿಗೆ “ದೇವರ ರಾಜ್ಯದ ಪವಿತ್ರ ರಹಸ್ಯವು ನಿಮಗೆ ಕೊಡಲ್ಪಟ್ಟಿದೆ” ಎಂದು ಹೇಳಿದಾಗ ‘ಪವಿತ್ರ ರಹಸ್ಯಕ್ಕೂ’ ದೇವರ ರಾಜ್ಯಕ್ಕೂ ಸಂಬಂಧವಿದೆ ಎಂದು ಸೂಚಿಸಿದನು.—ಮಾರ್ಕ 4:11.
ಜೂನ್ 17-23
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-1 ಪುಟ 1128 ಪ್ಯಾರ 3
ಪವಿತ್ರತೆ
ಪವಿತ್ರಾತ್ಮ. ಯೆಹೋವನ ಕಾರ್ಯಕಾರಿ ಶಕ್ತಿ ಅಥವಾ ಪವಿತ್ರಾತ್ಮವು ಆತನ ನಿಯಂತ್ರಣದಲ್ಲಿರುವ ಶಕ್ತಿ ಮತ್ತು ಅದು ಯಾವಾಗಲೂ ಆತನ ಉದ್ದೇಶವನ್ನು ನೆರವೇರಿಸುತ್ತದೆ. ಅದು ಶುದ್ಧ, ನಿರ್ಮಲ, ಪವಿತ್ರ ಆಗಿದ್ದು ದೇವರು ಅದನ್ನು ಒಳ್ಳೇ ಉದ್ದೇಶಕ್ಕಾಗಿ ಮಾತ್ರ ಬಳಸುತ್ತಾನೆ. ಆದುದರಿಂದಲೇ ಅದನ್ನು “ಪರಿಶುದ್ಧಾತ್ಮ” ಮತ್ತು “ಪವಿತ್ರಾತ್ಮ” ಎಂದು ಕರೆಯಲಾಗಿದೆ. (ಕೀರ್ತ 51:11; ಲೂಕ 11:13; ರೋಮ 1:4; ಎಫೆ 1:13) ಪವಿತ್ರಾತ್ಮವು ಒಬ್ಬ ವ್ಯಕ್ತಿಯನ್ನು ಪವಿತ್ರವೂ ಶುದ್ಧವೂ ಆದ ಕಾರ್ಯನಡಿಸಲು ಪ್ರಭಾವಿಸುತ್ತದೆ. ಯಾವುದೇ ಅಶುದ್ಧತೆ ಅಥವಾ ಕೆಟ್ಟ ಅಭ್ಯಾಸ ಅವನಲ್ಲಿದ್ದರೆ ಅದು ಪವಿತ್ರಾತ್ಮವನ್ನು ತಡೆಯುತ್ತದೆ ಇಲ್ಲವೆ ‘ದುಃಖಪಡಿಸುತ್ತದೆ.’ (ಎಫೆ 4:30) ಪವಿತ್ರಾತ್ಮ ಒಂದು ವ್ಯಕ್ತಿಯಲ್ಲ, ಆದರೂ ಅದು ದೇವರ ಪರಿಶುದ್ಧ ವ್ಯಕ್ತಿತ್ವವನ್ನು ತೋರಿಸುವುದರಿಂದ ಅದಕ್ಕೂ “ದುಃಖ” ಆಗುತ್ತದೆ. ಒಬ್ಬನು ಮಾಡುವ ಯಾವುದೇ ಕೆಟ್ಟ ಕ್ರಿಯೆಗಳು ‘ಪವಿತ್ರಾತ್ಮದ ಬೆಂಕಿಯನ್ನು ನಂದಿಸಿ ಬಿಡಬಲ್ಲವು.’ (1ಥೆಸ 5:19) ಅಂಥ ಕೆಟ್ಟ ಕೃತ್ಯಗಳನ್ನು ಮಾಡುತ್ತಾ ಮುಂದುವರಿದರೆ ಅವನು ದೇವರ ಪವಿತ್ರಾತ್ಮವನ್ನು ‘ದುಃಖಪಡಿಸುತ್ತಾನೆ.’ ಇದರ ಪರಿಣಾಮವಾಗಿ ಆ ದಂಗೆಕೋರನನ್ನು ದೇವರು ಶತ್ರುವಾಗಿ ನೋಡುತ್ತಾನೆ. (ಯೆಶಾ 63:10) ಒಬ್ಬನು ಪವಿತ್ರಾತ್ಮವನ್ನು ದೂಷಿಸುವಷ್ಟರ ಮಟ್ಟಿಗೂ ಹೋಗಿ ಅದನ್ನು ದುಃಖಪಡಿಸುವ ಸಾಧ್ಯತೆ ಇದೆ. ಆದರೆ ಯಾರು ಪವಿತ್ರಾತ್ಮದ ವಿರುದ್ಥ ದೂಷಣೆ ಮಾಡಿ ಪಾಪ ಮಾಡುತ್ತಾರೊ ಅವರಿಗೆ ಈ ವಿಷಯಗಳ ವ್ಯವಸ್ಥೆಯಲ್ಲಾಗಲಿ ಬರಲಿರುವ ವ್ಯವಸ್ಥೆಯಲ್ಲಾಗಲಿ ಕ್ಷಮಾಪಣೆ ಇಲ್ಲ ಎಂದು ಯೇಸು ಕ್ರಿಸ್ತನೇ ಹೇಳಿದ್ದಾನೆ.—ಮತ್ತಾ 12:31, 32; ಮಾರ್ಕ 3:28-30; ಸ್ಪಿರಿಟ್ ನೋಡಿ.
it-1 ಪುಟ 1006 ಪ್ಯಾರ 2
ಲೋಭ
ಕ್ರಿಯೆಯಲ್ಲಿ ತೋರಿಬರುವ ಗುಣ. ಒಬ್ಬ ವ್ಯಕ್ತಿಯಲ್ಲಿ ಲೋಭವಿದ್ದರೆ ಅವನಲ್ಲಿ ತಪ್ಪಾದ, ಮಿತಿಮೀರಿದ ಆಸೆಗಳು ಇರುತ್ತವೆ. ಅವು ಅವನ ಕ್ರಿಯೆಯಲ್ಲಿ ತೋರಿಬರುತ್ತವೆ. ತಪ್ಪಾದ ಆಸೆಯು ಬಸುರಾದಾಗ ಪಾಪವನ್ನು ಹೆರುತ್ತದೆ ಎಂದು ಬೈಬಲ್ ಬರಹಗಾರನಾದ ಯಾಕೋಬನು ಹೇಳಿದ್ದಾನೆ. (ಯಾಕೋ 1:14, 15) ಹಾಗಾಗಿ ಒಬ್ಬ ವ್ಯಕ್ತಿ ಲೋಭಿಯಾಗಿದ್ದಾನಾ ಎಂದು ಅವನ ಕ್ರಿಯೆಗಳಿಂದಲೇ ಗೊತ್ತಾಗುತ್ತದೆ. ಒಬ್ಬ ಲೋಭಿಯು ವಿಗ್ರಹಾರಾಧಕನಿಗೆ ಸಮ ಎಂದು ಅಪೊಸ್ತಲ ಪೌಲನು ಹೇಳಿದ್ದಾನೆ. (ಎಫೆ 5:5) ಲೋಭಿಗೆ ತನ್ನ ಆಸೆ-ವಸ್ತುಗಳೇ ದೇವರಾಗಿ ಬಿಡುತ್ತವೆ ಅಂದರೆ ಅವನು ಸೃಷ್ಟಿಕರ್ತನ ಸೇವೆ, ಆರಾಧನೆಗಿಂತ ಅವುಗಳಿಗೇ ಮೊದಲ ಸ್ಥಾನ ಕೊಡುತ್ತಾನೆ.—ರೋಮ 1:24, 25.
ಜೂನ್ 24-30
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-2 ಪುಟ 528 ಪ್ಯಾರ 5
ಯಜ್ಞಗಳು
ಪಾನದ್ರವ್ಯ. ಇತರ ಯಜ್ಞಗಳ ಜೊತೆ ಪಾನದ್ರವ್ಯವನ್ನು ಅರ್ಪಿಸಲಾಗುತ್ತಿತ್ತು. ಅದರಲ್ಲೂ ಇಸ್ರಾಯೇಲ್ಯರು ವಾಗ್ದತ್ತ ದೇಶದಲ್ಲಿ ವಾಸಿಸಲು ಆರಂಭಿಸಿದಾಗಿಂದ ಪಾನದ್ರವ್ಯವನ್ನು ಅರ್ಪಿಸಲು ಆರಂಭಿಸಿದರು. (ಅರ 15:2, 5, 8-10) ಇದರಲ್ಲಿ ದ್ರಾಕ್ಷಾರಸವು (ಮದ್ಯ) ಸೇರಿತ್ತು. ಇದನ್ನು ಯಜ್ಞವೇದಿಯ ಮೇಲೆ ಸುರಿಯಬೇಕಿತ್ತು. (ಅರ 28:7, 14; ಹೋಲಿಸಿ ವಿಮೋ 30:9; ಅರ 15:10.) ಫಿಲಿಪ್ಪಿಯಲ್ಲಿದ್ದ ಕ್ರೈಸ್ತರಿಗೆ ಅಪೊಸ್ತಲ ಪೌಲನು, “ನಂಬಿಕೆಯು ನಿಮ್ಮನ್ನು ನಡಿಸಿರುವ ಯಜ್ಞ ಮತ್ತು ಸಾರ್ವಜನಿಕ ಸೇವೆಯ ಮೇಲೆ ನಾನು ಪಾನದ್ರವ್ಯವಾಗಿ ಸುರಿಯಲ್ಪಡುತ್ತಿರುವುದಾದರೂ ಸಂತೋಷಪಡುತ್ತೇನೆ” ಎಂದು ಬರೆದನು. ಇಲ್ಲಿ ಆತನು ತನ್ನನ್ನು ಪಾನದ್ರವ್ಯಕ್ಕೆ ಹೋಲಿಸಿಕೊಂಡಿದ್ದಾನೆ. ಜೊತೆ ಕ್ರೈಸ್ತರಿಗಾಗಿ ತನ್ನನ್ನೇ ಮುಡಿಪಾಗಿಡಲು ಆತನಿಗಿರುವ ಸಿದ್ಧಮನಸ್ಸನ್ನು ಅದು ಸೂಚಿಸುತ್ತದೆ. (ಫಿಲಿ 2:17) ಆತನು ಸಾಯುವ ಸ್ವಲ್ಪ ಮುಂಚೆ ತಿಮೊಥೆಯನಿಗೆ ಹೀಗೆ ಬರೆದನು: “ನಾನು ಈಗಾಗಲೇ ಪಾನದ್ರವ್ಯವಾಗಿ ಅರ್ಪಿತನಾಗುತ್ತಾ ಇದ್ದೇನೆ ಮತ್ತು ನಾನು ಬಿಡುಗಡೆ ಹೊಂದಲಿಕ್ಕಾಗಿರುವ ತಕ್ಕ ಸಮಯವು ಸಮೀಪಕ್ಕೆ ಬಂದಿದೆ.”—2ತಿಮೊ 4:6.