ಬೈಬಲಿನಲ್ಲಿರುವ ರತ್ನಗಳು | 2 ಥೆಸಲೊನೀಕ 1-3
ನಿಯಮರಾಹಿತ್ಯನನ್ನು ಬಯಲಿಗೆ ಎಳೆಯಲಾಗುತ್ತದೆ
ಈ ವಚನಗಳಲ್ಲಿ ಇರುವುದನ್ನು ಪೌಲ ಯಾವುದಕ್ಕೆ ಸೂಚಿಸುತ್ತಿದ್ದನು?
“ಪ್ರತಿಬಂಧಕ” (ವಚನ 6)—ಬಹುಶಃ ಅಪೊಸ್ತಲರು
‘ಬಯಲುಪಡಿಸಲ್ಪಡು’ (ವಚನ 6)—ಅಪೊಸ್ತಲರು ತೀರಿಹೋದ ಮೇಲೆ ಧರ್ಮಭ್ರಷ್ಟ ಕ್ರೈಸ್ತರು ಬಹಿರಂಗವಾಗಿ ಸುಳ್ಳು ಬೋಧನೆಗಳನ್ನು ಕಲಿಸಲು ಮತ್ತು ಕಪಟತನದಿಂದ ನಡಕೊಳ್ಳಲು ಆರಂಭಿಸಿದರು
“ನಿಯಮರಾಹಿತ್ಯದ ರಹಸ್ಯ” (ವಚನ 7)—ಪೌಲನ ಕಾಲದಲ್ಲಿ ಈ “ನಿಯಮರಾಹಿತ್ಯನು” ಯಾರು ಎಂದು ಜನರಿಗೆ ಗೊತ್ತಾಗಲಿಲ್ಲ
“ನಿಯಮರಾಹಿತ್ಯನು” (ವಚನ 8)—ಇಂದು ಕ್ರೈಸ್ತಪ್ರಪಂಚದ ಎಲ್ಲ ಪಾದ್ರಿಗಳು
‘ಕರ್ತನಾದ ಯೇಸು ತನ್ನ ಸಾನ್ನಿಧ್ಯವು ಸುವ್ಯಕ್ತವಾಗುವ ಸಮಯದಲ್ಲಿ [ನಿಯಮರಾಹಿತ್ಯನನ್ನು] ನಾಶಮಾಡುವನು’ (ವಚನ 8)—‘ನಿಯಮರಾಹಿತ್ಯನ’ ಮೇಲೆ ಮತ್ತು ಸೈತಾನನ ಉಳಿದ ವ್ಯವಸ್ಥೆಯ ಮೇಲೆ ಯೆಹೋವನ ನ್ಯಾಯತೀರ್ಪನ್ನು ಯೇಸು ಜಾರಿಗೊಳಿಸಿದಾಗ ತಾನೇ ಸ್ವರ್ಗೀಯ ರಾಜ ಅನ್ನುವುದನ್ನು ತೋರಿಸಿಕೊಡುತ್ತಾನೆ
ಹುರುಪಿನಿಂದ ಮತ್ತು ತುರ್ತಿನಿಂದ ಸಾರಲು ನಿಮ್ಮನ್ನು ಈ ವಚನಗಳು ಹೇಗೆ ಪ್ರೋತ್ಸಾಹಿಸುತ್ತವೆ?