ನಿಮಗೆ ಸೇವೆ ಮಾಡುವ ಯೋಗ್ಯತೆ ಇದೆಯೇ?
“ನಮಗೆ ಸಾಕಷ್ಟು ಯೋಗ್ಯತ ಬರುವುದು ದೇವರಿಂದಲೇ.”—2 ಕೊರಿಂಥ 3:5, NW.
1. ಕ್ರೈಸ್ತ ಸಭೆಯಲ್ಲಿ ಯಾವ ವಿಧದ ಜನರಿಗೆ ಸ್ಥಳವಿಲ್ಲ?
ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು ಕೆಲಸಗಾರರು. ಯೇಸು ಹೇಳಿದ್ದು: “ನನ್ನ ತಂದೆಯು ಇಂದಿನ ವರೆಗೂ ಕೆಲಸ ಮಾಡುತ್ತಾನೆ. ನಾನೂ ಕೆಲಸ ಮಾಡುತ್ತೇನೆ.” (ಯೋಹಾನ 5:17) ಕೆಲಸ ಮಾಡಲು ನಿರಾಕರಿಸುವವರನ್ನು ದೇವರು ಮೆಚ್ಚುವುದಿಲ್ಲ. ಇತರರ ಮೇಲೆ ಅಧಿಕಾರ ನಡಿಸಲಿಕ್ಕಾಗಿ ಜವಾಬ್ದಾರಿ ಹುಡುಕುವವರ ಮೇಲೆಯೂ ಆತನಿಗೆ ಮೆಚ್ಚಿಕೆಯಿರದು. ಸೋಮಾರಿಗಳಿಗೆ ಅಥವಾ ಸ್ವಾರ್ಥದ ಹೆಬ್ಬಯಕೆಯಿರುವವರಿಗೆ ಕ್ರೈಸ್ತ ಸಭೆಯಲ್ಲಿ ಸ್ಥಳವಿಲ್ಲ.—ಮತ್ತಾಯ 20:25-27; 2 ಥೆಸಲೊನೀಕ 3:10.
2. ಕ್ರೈಸ್ತ ಸಭೆಯಲ್ಲಿ ಜವಾಬ್ದಾರಿ ವಹಿಸಲು ಈಗ ದೊಡ್ಡ ಸಂಖ್ಯೆಯಲ್ಲಿ ಪುರುಷರು ಬೇಕಾಗಿದ್ದಾರೆ ಏಕೆ?
2 ಯೆಹೋವನ ಸಾಕ್ಷಿಗಳಿಗೆ ‘ಕರ್ತನ ಕೆಲಸದಲ್ಲಿ ಮಾಡಲು ಯಥೇಷ್ಟವಿದೆ.’ ವಿಶೇಷವಾಗಿ, ಸತ್ಯಾರಾಧನೆಯ “ಬೆಟ್ಟಕ್ಕೆ” ಅನೇಕ ಜನರು ಹರಿದು ಬರುತ್ತಿರುವ ಈ ಸಮಯದಲ್ಲಿ ಇದು ನಿಜ. (1 ಕೊರಿಂಥ 15:58; ಯೆಶಾಯ 2:2-4) ಸಭೆಯ ಜವಾಬ್ದಾರಿ ವಹಿಸಲು ಆತ್ಮಿಕವಾಗಿ ಅರ್ಹತೆಯುಳ್ಳ ಎಷ್ಟೋ ಪುರುಷರು ಬೇಕಾಗಿದ್ದಾರೆ. ಸ್ವಾರ್ಥದ ಮಹಾಕಾಂಕ್ಷೆಯಿಂದ ಪ್ರೇರಿಸಲ್ಪಟ್ಟಿರದ ಇಂಥ ಪುರುಷರು ತಮ್ಮನ್ನಲ್ಲ, ಯೆಹೋವನನ್ನು ಘನಪಡಿಸುತ್ತಾರೆ. (ಜ್ಞಾನೋಕ್ತಿ 8:13) ದೇವರು ‘ಹೊಸ ಒಡಂಬಡಿಕೆಯ ಶುಶ್ರೂಷಕರನ್ನು ಸಾಕಷ್ಟು ಯೋಗ್ಯರನ್ನಾಗಿ ಮಾಡುವಂತೆಯೇ’ ಸಭಾ ಜವಾಬ್ದಾರಿಗಳಿಗೆ ತಾವು ಯೋಗ್ಯತೆ ಹೊಂದುವಂತೆ ದೇವರು ಸಹಾಯ ಮಾಡುತ್ತಾನೆಂದು ಅವರಿಗೆ ತಿಳಿದದೆ.—2 ಕೊರಿಂಥ 3:4-6.
3. ಮೂಲತಃ ಹಿರಿಯರ ಮತ್ತು ಶುಶ್ರೂಷಾ ಸೇವಕರ ಜವಾಬ್ದಾರಿಗಳೇನು?
3 ಇಂದು, ಆದಿಕ್ರೈಸ್ತರ ಮಧ್ಯೆ ಇದ್ದಂತೆಯೇ, ಪುರುಷರು ಪವಿತ್ರಾತ್ಮದ ಮೂಲಕ ಮತ್ತು ಯೆಹೋವನ ಸಂಘಟನಾ ಏರ್ಪಾಡಿನ ಮೂಲಕ ಹಿರಿಯರು ಮತ್ತು ಶುಶ್ರೂಷಾ ಸೇವಕರಾಗಿ ಸೇವೆ ಮಾಡಲಿಕ್ಕಾಗಿ ನೇಮಿಸಲ್ಪಡುತ್ತಾರೆ. (ಅಪೊಸ್ತಲರ ಕೃತ್ಯಗಳು 20:28; ಫಿಲಿಪ್ಪಿಯ 1:1; ತೀತ 1:5) ಹಿರಿಯರು ದೇವರ ಮಂದೆಯನ್ನು ಆತ್ಮಿಕವಾಗಿ ಪಾಲಿಸುತ್ತಾ ರಕ್ಷಾತ್ಮಕ ಮೇಲ್ವಿಚಾರಣೆಯನ್ನು ಒದಗಿಸುತ್ತಾರೆ. ಯಾರ ಜವಾಬ್ದಾರಿಯಲ್ಲಿ ಆತ್ಮಿಕ ಮೇಲ್ವಿಚಾರಣೆ ನೇರವಾಗಿ ಸೇರಿರುವುದಿಲ್ಲವೋ ಆ ಶುಶ್ರೂಷಾ ಸೇವಕರು ಇವರಿಗೆ ನೆರವು ನೀಡುತ್ತಾರೆ. (1 ಪೇತ್ರ 5:2; ಇದಕ್ಕೆ ಅಪೊಸ್ತಲರ ಕೃತ್ಯಗಳು 6:1-6 ಹೋಲಿಸಿ.) ಸೇವೆ ಮಾಡಲು ಬಂದ ದೇವ ಪುತ್ರನಂತೆ, ಇಂಥ ನಿಯಮಿತರು ಸಹ ವಿಶ್ವಾಸಿಗಳ ಸೇವೆ ಮಾಡಲು ಬಯಸುತ್ತಾರೆ. (ಮಾರ್ಕ 10:45) ನೀವು ಕ್ರೈಸ್ತ ಪುರುಷರಾಗಿರುವಲ್ಲಿ, ಇಂಥ ಮನೋಭಾವ ನಿಮಗಿದೆಯೇ?
ಸಾಮಾನ್ಯವಾಗಿರುವ ಯೋಗ್ಯತೆಗಳು
4. ಸಭಾ ಜವಾಬ್ದಾರಿ ಹೊತ್ತಿರುವವರಿಗಿರುವ ಯೋಗ್ಯತೆಗಳನ್ನು ನಾವು ವಿಶೇಷವಾಗಿ ಎಲ್ಲಿ ಕಂಡುಕೊಳ್ಳುತ್ತೇವೆ?
4 ಸಭಾ ಜವಾಬ್ದಾರಿಗಳನ್ನು ವಹಿಸುವವರಿಗಿರುವ ಆವಶ್ಯಕತೆಗಳು ಅಪೊಸ್ತಲ ಪೌಲನಿಂದ ವಿಶೇಷವಾಗಿ 1 ತಿಮೊಥಿ 3:1-10, 12, 13 ಮತ್ತು ತೀತ 1:5-9 ರಲ್ಲಿ ಕೊಡಲ್ಪಟ್ಟಿವೆ. ಯಾವುದರಲ್ಲಿ ಕೆಲವು ಯೋಗ್ಯತೆಗಳು ಹಿರಿಯರಿಗೂ ಶುಶ್ರೂಷಾ ಸೇವಕರಿಗೂ ಅನ್ವಯಿಸುತ್ತವೂ ಅಂಥ ಯೋಗ್ಯತೆಗಳನ್ನು ಪರಿಗಣಿಸುವಾಗ ಅವುಗಳನ್ನು ನಾವು ಲೌಕಿಕ ಮಟಾನ್ಟುಸಾರ ವೀಕ್ಷಿಸಬಾರದು. ಅವುಗಳನ್ನು ನಾವು ಅವುಗಳ ಒಂದನೆಯ ಶತಮಾನದ ಹಿನ್ನೆಲೆಯಲ್ಲಿ ಮತ್ತು ಯೆಹೋವನ ಜನರಿಗೆ ಅನ್ವಯಿಸುವ ರೀತಿಯಲ್ಲಿ ವೀಕ್ಷಿಸಬೇಕು. ಈ ಯೋಗ್ಯತೆಗಳನ್ನು ಮುಟ್ಟಲು ಪರಿಪೂರ್ಣತೆ ಕೇಳಿಕೊಳ್ಳಲ್ಪಡುವುದಿಲ್ಲ, ಏಕಂದರೆ ಹಾಗಿರುವಲ್ಲಿ ಯಾವ ಮಾನವನೂ ಇದಕ್ಕೆ ಯೋಗ್ಯನಾಗಲಾರನು. (1 ಯೋಹಾನ 1:8) ಆದರೆ ನೀವು ಕ್ರೈಸ್ತ ಪುರುಷರಾಗಿರುವಲ್ಲಿ, ನಿಮಗೆ ಈಗ ಸಭಾ ಜವಾಬ್ದಾರಿಗಳಿರಲಿ, ಇಲ್ಲದಿರಲಿ, ನಿಮ್ಮ ವೈಯಕ್ತಿಕ ಯೋಗ್ಯತೆಗಳನ್ನು ಏಕೆ ವಿಶೇಷ್ಲಿಸಬಾರದು?
5. ನಿಂದಾ ರಹಿತನಾಗಿರುವುದು ಎಂದರೇನು?
5 ನಿಂದಾರಹಿತನು; ಹೊರಗಿನವರಿಂದ ಉತ್ತಮ ಸಾಕ್ಷಿ ಇರುವವನು; ದೋಷಾರೋಪಣೆ ಇಲ್ಲದವನು. (1 ತಿಮೊಥಿ 3:2, 7, 8, 10; ತೀತ 1:6, 7) ನೇಮಿಸಲ್ಪಡುವಾಗ ಮತ್ತು ಸೇವೆ ಮಾಡುತ್ತಿರುವಾಗ ಶುಶ್ರೂಷಾ ಸೇವಕರೂ ಹಿರಿಯರೂ ನಿಂದಾರಹಿತರಾಗಿರಬೇಕು, ಅಂದರೆ, ದೋಷಾರೋಪಣೆಯಿಲ್ಲದವರು ಮತ್ತು ಕೆಟ್ಟ ನಡತೆ ಮತ್ತು ಬೋಧನೆಯ ನ್ಯಾಯವಾದ ಆಪಾದನೆಯ ಕಾರಣ ತಪ್ಪು ಮನಗಾಣಿಸಲ್ಪಡುವ ಆವಶ್ಯಕತೆ ಇಲ್ಲದವರು ಆಗಿರತಕ್ಕದ್ದು. “ಸುಳ್ಳು ಸಹೋದರರು” ಅಥವಾ ಇತರರು ಹಾಕುವ ಅಸತ್ಯ ಆಪಾದನೆಗಳು ಒಬ್ಬನನ್ನು ನಿಂದಾರ್ಹನಾಗಿ ಮಾಡುವುದಿಲ್ಲ. ಒಬ್ಬ ಪುರುಷನನ್ನು ಸಭೆಯ ಸೇವೆಗೆ ಅನರ್ಹನಾಗಿ ಮಾಡಲು ಆಪಾದನೆಯು ಕ್ಷುದ್ರವಾಗಿರಬಾರದು. ಮತ್ತು ಶಾಸ್ತ್ರದ ಮಟ್ಟಕ್ಕೆ ಹೊಂದಿಕೆಯಾಗಿ ಅದು ರುಜುಮಾಡಲ್ಪಡತಕ್ಕದ್ದು. (2 ಕೊರಿಂಥ 11:26; 1 ತಿಮೊಥಿ 5:19) ಸಭೆಯಲ್ಲಿ ನೇಮಕ ಹೊಂದಿರುವವನು, “ಹೊರಗಣವರಿಂದ ಒಳ್ಳೆಯವನೆನಸಿಕೊಂಡಿರಬೇಕು; ಇಲ್ಲದಿದ್ದರೆ ನಿಂದೆಗೆ ಗುರಿಯಾಗುವನು, ಮತ್ತು ಸೈತಾನನ ಉರ್ಲಿನೊಳಗೆ ಸಿಕ್ಕಿಬಿದ್ದಾನು.” ಒಬ್ಬ ಪುರುಷನು ಗತಕಾಲಗಳಲ್ಲಿ ಘೋರ ಪಾಪಮಾಡಿರುವುದಾದರೆ, ಅವನ ಆ ಕಳಂಕ ಉಜ್ಜಲ್ಪಟ್ಟು ಉತ್ತಮ ಹೆಸರನ್ನು ಅವನು ಗಳಿಸಿದ ಮೇಲೆ ಅವನನ್ನು ನೇಮಿಸಸಾಧ್ಯವಿದೆ.
6. ಏಕ ಪತ್ನಿಯ ಪತಿ ಎಂದರೇನು?
6 ಏಕಪತ್ನಿಯುಳ್ಳವನು. (1 ತಿಮೊಥಿ 3:2, 12; ತೀತ 1:16) ವಿವಾಹಿತ ಪುರುಷನು ಮಾತ್ರ ಶುಶ್ರೂಷಾ ಸೇವಕರು ಮತ್ತು ಹಿರಿಯರಾಗಬೇಕೆಂದು ಇದರ ಅರ್ಥವಲ್ಲ. ಆದರೆ ವಿವಾಹಿತನಾಗಿರುವಲ್ಲಿ ಒಬ್ಬ ಪುರುಷನಿಗೆ ಜೀವದಿಂದಿರುವ ಒಬ್ಬಳೇ ಪತ್ನಿಯಿರತಕ್ಕದ್ದು ಮತ್ತು ಅವನು ಅವಳಿಗೆ ನಂಬಿಗಸ್ತನಾಗಿರಬೇಕು. (ಇಬ್ರಿಯ 13:4) ಒಂದನೆಯ ಶತಕದ ಅನೇಕ ಕ್ರೈಸ್ತೇತರ ಪುರುಷರಂತೆ ಅವನು ಬಹುಪತ್ನಿಗಳುಳ್ಳವನಾಗಿರಸಾಧ್ಯವಿಲ್ಲ.a
7. (ಎ)ಒಬ್ಬ ಪುರುಷನಿಗೆ ಹಿರಿಯನಾಗುವ ಅರ್ಹತೆ ಬರುವುದು ಶಾರೀರಿಕ ವಯಸ್ಸಿನಿಂದಲೋ? (ಬಿ) ಉತ್ತಮ ರೀತಿಯಲ್ಲಿ ಕುಟುಂಬದ ಅಧ್ಯಕ್ಷತೆ ವಹಿಸುವುದರಲ್ಲಿ ಏನು ಸೇರಿದೆ?
7 ಪೂರ್ಣ ಗೌರವದಿಂದ ತನ್ನ ಮಕ್ಕಳನ್ನು ಅಧೀನದಲ್ಲಿಟ್ಟು ಕೊಂಡು ಸ್ವಂತ ಮನೆಯವರನ್ನು ಚೆನ್ನಾಗಿ ಆಳುವವನು. (1 ತಿಮೊಥಿ 3:4, 5, 12; ತೀತ 1:6) ಹಿರಿಯರು ಕಡಿಮೆ ಪಕ್ಷ 30 ವಯಸ್ಸಿನವರಾದರೂ ಆಗಿರಬೇಕೆಂದು ಕೆಲವರಿಗನಿಸಬಹುದು. ಆದರೆ ಬೈಬಲು ಯಾವ ಕನಿಷ್ಠ ವಯಸ್ಸಿನ ಮಿತಿಯನ್ನೂ ಇಡುವುದಿಲ್ಲ. ಆದರೂ ಆತ್ಮಿಕ ರೀತಿಯಲ್ಲಿ ಒಬ್ಬನು ವಯಸ್ಸಾದವನಂತೆ ವರ್ತಿಸಬೇಕು. ಶುಶ್ರೂಷಾ ಸೇವಕರೂ ಹಿರಿಯರೂ ಮಕ್ಕಳಿರುವ ವಯಸ್ಸಿನವರಾಗಬೇಕು. ವಿವಾಹಿತನು, ಹೊರಗೆ ದೇವಭಕ್ತಿಯಿಂದ ವರ್ತಿಸಿ ಮನೆಯಲ್ಲಿ ದಬ್ಬಾಳಿಕೆ ನಡಿಸುವಲ್ಲಿ, ಅವನು ಅರ್ಹನಲ್ಲ. ಅವನ ಬೈಬಲಿನ ಸೂತ್ರಗಳಿಗನುಸಾರ ಕುಟುಂಬದ ಪ್ರತಿಯೊಬ್ಬ ಸದಸ್ಯನ ಆತ್ಮಿಕ ಸಾಫಲ್ಯ ಅವನ ಉದ್ದೇಶವಾಗಿರಬೇಕು. ಸಾಮಾನ್ಯ ನಿಯಮವಾಗಿ, ತಂದೆಯಾಗಿರುವ ಹಿರಿಯನಿಗೆ ಸ್ವದರ್ತನೆಯ ‘ನಂಬುತ್ತಿರುವ’ ಅಪ್ರಾಪ್ತ ವಯಸ್ಸಿನ ಮಕ್ಕಳಿರಬೇಕು. ಇಂಥವರು ದೇವರಿಗೆ ಸಮರ್ಪಣಾಭಿಮುಖವಾಗಿ ಪ್ರಗತಿ ಹೊಂದುತ್ತಿರಬೇಕು ಅಥವಾ ಅವರು ಆಗಲೇ ಯೆಹೋವನ ಸಾಕ್ಷಿಗಳಾಗಿ ದೀಕ್ಷಾಸ್ನಾನ ಹೊಂದಿದವರಾಗಬೇಕು. ತನ್ನ ಮಕ್ಕಳಲ್ಲಿ ನಂಬಿಕೆಯನ್ನು ಬೆಳೆಸಲಾಗದ ಪುರುಷನು ಅದನ್ನು ಇತರರಲ್ಲಿ ಬೆಳೆಸುವುದು ಅಸಂಭವನೀಯ.
8. ಕುಟುಂಬಸ್ಥನು ಹಿರಿಯನಾಗುವ ಮೊದಲು ಅವನು ಏನು ಮಾಡಲು ಕಲಿಯತಕ್ಕದ್ದು?
8 ಒಬ್ಬ ಕುಟುಂಬಸ್ಥನು, ಸಭೆಯಲ್ಲಿ ಆತ್ಮಿಕ ಮೇಲ್ವಿಚಾರಣೆ ಒದಗಿಸಲು ಸಮರ್ಥತೆಯುಳ್ಳ ಹಿರಿಯನಾಗುವ ಮೊದಲು ತನ್ನ ಸ್ವಂತ ಕುಟುಂಬವನ್ನು ನಡೆಸುವ ವಿಧವನ್ನು ತಿಳಿದಿರತಕ್ಕದ್ದು. “ಸ್ವಂತ ಮನೆಯವರನ್ನು ಆಳುವುದಕ್ಕೆ ತಿಳಿಯದವನು ದೇವರ ಸಭೆಯನ್ನು ಹೇಗೆ ಪರಾಮರಿಸುವನು?” (1 ತಿಮೊಥಿ 3:5) ಒಬ್ಬ ಪುರುಷನನ್ನು ಅವನ ಅವಿಶ್ವಾಸಿಯಾದ ಪತ್ನಿ ವಿರೋಧಿಸಬಹುದೆಂಬುದು ನಿಜ. (ಮತ್ತಾಯ 10:36; ಲೂಕ 12:52) ಅಥವಾ, ಇತರ ಮಕ್ಕಳು ಆತ್ಮಿಕವಾಗಿ ಸೌಖ್ಯವಾಗಿದ್ದರೂ ಒಬ್ಬ ಮಗನು ಘೋರ ಪಾಪವನ್ನು ಮಾಡಬಹುದು. ಹೀಗಿರುವಲ್ಲಿ, ನಿರೀಕ್ಷಿಸುವುದನ್ನೆಲ್ಲಾ ಆ ಪುರುಷನು ಮಾಡಿದ್ದರೆ ಮತ್ತು ವಿಶೇಷವಾಗಿ, ಕುಟುಂಬದ ಇತರರೊಂದಿಗೆ ಅವನಿಗೆ ಆತ್ಮಿಕ ಯಶಸ್ಸು ಲಭ್ಯವಾಗಿರುವುದಾದರೆ, ಕುಟುಂಬದ ಒಬ್ಬ ಸದಸ್ಯನಿಂದ ಅವನ ಉತ್ತಮ ಮೇಲ್ವಿಚಾರಣೆಯ ನಿರಾಕರಣೆಯು, ಅವನನ್ನು ಶುಶ್ರೂಷಾ ಸೇವಕ ಅಥವಾ ಹಿರಿಯನಾಗುವುದಕ್ಕೆ ಅನರ್ಹನಾಗಿ ಮಾಡುವ ಅಗತ್ಯವಿಲ್ಲ.
9. ಹಿರಿಯನು ಅಥವಾ ಶುಶ್ರೂಷಾ ಸೇವಕನು ಮದ್ಯ ಪಾನೀಯಗಳ ಕುರಿತು ಯಾವ ಜಾಗ್ರತೆವಹಿಸಬೇಕು?
9 ಕುಡಿದು ರಂಪು ಎಬ್ಬಿಸುವವನಲ್ಲ ಅಥವಾ ಮದ್ಯನಿರತನಲ್ಲ. (1 ತಿಮೊಥಿ 3:3, 8, NW; ತೀತ1:7) ಶುಶ್ರೂಷಾ ಸೇವಕನು ಅಥವಾ ಹಿರಿಯನು ಮದ್ಯ ಪಾನೀಯಗಳಲ್ಲಿ ಮಿತಿಮೀರಿ ಲೋಲುಪನಾಗಿರಬಾರದು. ಅವುಗಳ ಚಟ, ಯೋಚನೆ ಮತ್ತು ಭಾವಾವೇಶಗಳ ನಿಯಂತ್ರಣನಷ್ಟವನ್ನು ಫಲಿಸಿ ಕುಡಿದು ರಂಪೆಬ್ಬಿಸುವುದಕ್ಕೆ ಅಥವಾ ಹೊಡೆದಾಟಕ್ಕೆ ನಡೆಸಬಹುದು. ಅವನು ‘ಹೆಚ್ಚು ದ್ರಾಕ್ಷಾಮದ್ಯ ಅನುರಕ್ತನು’ ಆಗಿರಬಾರದು ಅಥವಾ ಕುಡಿಯುವ ಚಾಳಿ ಅಥವಾ ಹೆಚ್ಚು ಕುಡಿಯುವವನು ಎಂಬ ಖ್ಯಾತಿ ಅವನಿಗಿರಬಾರದು. (ಜ್ಞಾನೋಕ್ತಿ 23:20, 21, 29-35) ಪಾಲನೆಯ ಭೇಟಿಯೊಂದು ಅತಿರೇಕ ಕುಡಿತದಿಂದ ಕೆಡುವುದು ಎಂಥ ದುರುಂತ! ಒಬ್ಬ ಸಹೋದರನು ಒಂದು ವೇಳೆ ಕುಡಿಯುವುದಾದರೆ ಕೂಟ, ಸೇವೆ ಅಥವಾ ಇತರ ಪವಿತ್ರ ಸೇವೆಗಳಲ್ಲಿ ಭಾಗವಹಿಸುವಾಗ ಕುಡಿಯಬಾರದು.—ಯಾಜಕಕಾಂಡ 10:8-11; ಯೆಹೆಜ್ಕೇಲ 44:21.
10. ಹಣಪ್ರೇಮಿಗಳು ಮತ್ತು ಅಪ್ರಾಮಾಣಿಕ ಲಾಭಕ್ಕೆ ದುರಾಶೆ ಪಡುವವರು ಹಿರಿಯರು ಅಥವಾ ಶುಶ್ರೂಷಾ ಸೇವಕರಾಗಲು ಏಕೆ ಅರ್ಹರಲ್ಲ?
10 ದ್ರವ್ಯಾಶೆಯಿಲ್ಲದವನು, ಅಪ್ರಾಮಾಣಿಕ ಲಾಭದ ದುರಾಶೆಯಿಲ್ಲದವನು. (1 ತಿಮೊಥಿ 3:3, 8, NW; ತೀತ1:7) ಹಣಪ್ರೇಮಿಗಳು ಆತ್ಮಿಕ ಗಂಡಾಂತರದಲ್ಲಿದ್ದಾರೆ ಮತ್ತು “ಲೋಭಿಗಳು” ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ. ಹೀಗಿರುವುದರಿಂದ, ಇಂಥ ಪುರುಷರು ಹಿರಿಯರು ಅಥವಾ ಶುಶ್ರೂಷಾ ಸೇವಕರಾಗಲು ಅರ್ಹರಲ್ಲ. (1 ಕೊರಿಂಥ 6:9, 10; 1 ತಿಮೊಥಿ 6:9, 10) “ಅಪ್ರಾಮಾಣಿಕ” ಎಂಬುದರ ಮೂಲ ಗ್ರೀಕ್ ಪದವು ಯಾವುದೇ ರೀತಿಯ ಫಾಯಿದೆ ಅಥವಾ ಪ್ರಯೋಜನದ ಅರ್ಥವನ್ನೂ ಕೊಡುತ್ತದೆ. (ಫಿಲಿಪ್ಪಿಯ 1:21; 3:4-8) ದೇವರ “ಕುರಿಗಳನ್ನು” ಅಪ್ರಾಮಾಣಿಕತೆಯಿಂದ ಪಾಲಿಸುವ ಪ್ರಕೃತಿಯನ್ನು ಸೂಚಿಸುವ ಪುರುಷನು ಸಭಾ ಜವಾಬ್ದಾರಿಗೆ ಅರ್ಹನಲ್ಲವೆಂಬುದು ನಿಶ್ಚಯ. (ಯೆಹೆಜ್ಕೇಲ 34:7-10; ಅಪೊಸ್ತಲರ ಕೃತ್ಯಗಳು 20:33-35; ಯೂದ 16) ಮತ್ತು ನಿಯಮಿತನಾದ ಮೇಲೆ ಒಬ್ಬ ಪುರುಷನಿಗೆ ಹಣದ ಜವಾಬ್ದಾರಿ ಕೊಡಲ್ಪಡಬಹುದು ಮತ್ತು ಅವನು ಅದರಿಂದ ಸ್ವಲ್ಪ ಹಣವನ್ನು ಕದ್ದಾನು ಎಂಬುದನ್ನು ನಾವು ಗ್ರಹಿಸುವಾಗ, ಶಿಫಾರಸು ಮಾಡುವುದರಲ್ಲಿ ಸಾವಧಾನದ ಆವಶ್ಯಕತೆ ಇನ್ನೂ ಹೆಚ್ಚಾಗುತ್ತದೆ.—ಯೋಹಾನ 12:4-6.
11. “ಹೊಸದಾಗಿ ಪರಿವರ್ತನೆ ಹೊಂದಿದ ಪುರುಷನು” ಸಭಾ ಜವಾಬ್ದಾರಿಗೆ ಶಿಫಾರಸು ಮಾಡಲ್ಪಡಬಾರದೇಕೆ?
11 ಹೊಸದಾಗಿ ಪರಿವರ್ತಿತನಲ್ಲ; ಮೊದಲು ಅರ್ಹತೆಯ ಪರೀಕೆಗ್ಷೊಳಗಾದವನು. (1 ತಿಮೊಥಿ 3:6, 10, NW) ಹೊಸದಾಗಿ ದೀಕ್ಷಾಸ್ನಾನ ಹೊಂದಿದ ವ್ಯಕ್ತಿಗೆ, ಅವನು ನಿಯಮಿತ ಜವಾಬ್ದಾರಿಗಳನ್ನು ನಂಬಿಗಸ್ತಿಕೆಯಿಂದ ಪಾಲಿಸುವನೋ ಇಲ್ಲವೋ ಎಂದು ತೋರಿಸಲು ಸಮಯ ಸಿಕ್ಕಿರುವುದಿಲ್ಲ. ಅವನಲ್ಲಿ ಪೀಡಿತರಿಗೆ ಅನುತಾಪದ ಅಥವಾ ಜೊತೆ ಆರಾಧಕರಿಗೆ ಸಹಾಯ ನೀಡಲು ಬೇಕಾಗುವ ವಿವೇಕದ ಕೊರತೆಯಿದ್ದೀತು. ಅವನು ಇತರರನ್ನು ತಿರಸ್ಕಾರದಿಂದಲೂ ಕಾಣಬಹುದು. ಆದುದರಿಂದ, ಶುಶ್ರೂಷಾ ಸೇವಕನಾಗಿ ಮತ್ತು ವಿಶೇಷವಾಗಿ ಹಿರಿಯನಾಗಿ ಒಬ್ಬನನ್ನು ಶಿಫಾರಸು ಮಾಡುವ ಮೊದಲು ಒಬ್ಬ ಪುರುಷನು ಅರ್ಹತೆಯ ಸಂಬಂಧದಲ್ಲಿ “ಪರೀಕ್ಷಿಸಲ್ಪಡಬೇಕು,” ಮತ್ತು ಅವನು ಯುಕ್ತಾಯುಕ್ತ ಪರಿಜ್ಞಾನವುಳ್ಳವನೋ, ಭರವಸಾರ್ಹನೋ ಎಂಬುದನ್ನು ತೋರಿಸಬೇಕು. ಈ ಪರೀಕೆಗ್ಷೆ ಒಂದು ನಿರ್ದಿಷ್ಟ ಸಮಯವನ್ನು ಕೊಡಲಾಗುವುದಿಲ್ಲ, ಮತ್ತು ಆತ್ಮಿಕ ಬೆಳವಣಿಗೆಯ ವೇಗ ಒಬ್ಬೊಬ್ಬನದು ಒಂದೊಂದಾಗಿರುತ್ತದೆ. ಆದರೆ ಹಿರಿಯರು ಹೊಸ ಪುರುಷನನ್ನು ಬೇಗನೆ ಶಿಫಾರಸು ಮಾಡಬಾರದು. ಏಕಂದರೆ, ಆಗ “ಅವನು ಉಬ್ಬಿಕೊಂಡು ಸೈತಾನನಿಗೆ ಪ್ರಾಪ್ತವಾದ ಶಿಕ್ಷಾವಿಧಿಗೆ ಒಳಗಾದಾನು.” ಮೊದಲು ಆ ಪುರುಷನು ಕ್ರಿಸ್ತ ಸದೃಶ ನಮ್ರತೆಯನ್ನು ಪ್ರದರ್ಶಿಸಲಿ.—ಫಿಲಿಪ್ಪಿಯ 2:5-8.
ಶುಶ್ರೂಷಾ ಸೇವಕರ ಮೇಲೆ ರಂಗಬೆಳಕು
12. ಶುಶ್ರೂಷಾ ಸೇವಕರ ಆವಶ್ಯಕತೆಗಳನ್ನು ಅವರು ಮಾತ್ರ ಮುಟ್ಟಬೇಕೋ?
12 ಶುಶ್ರೂಷಾ ಸೇವಕರ ಕೆಲವು ಆವಶ್ಯಕತೆಗಳ ಪಟ್ಟಿಯನ್ನು ಕೊಡಲಾಗಿದೆ. ಆದರೂ, ಇಂಥ ಆವಶ್ಯಕತೆಗಳನ್ನು ಹಿರಿಯರು ತಲುಪದಿರುವಲ್ಲಿ ಅವರು ಆ ಸೇವೆಗೆ ಅರ್ಹರಾಗರು. ಕ್ರೈಸ್ತ ಪುರುಷನಾಗಿರುವ ನೀವು ಈ ವಿಷಯಗಳಲ್ಲಿ ಅರ್ಹರಾಗಿದ್ದೀರೋ?
13. ವಿಚಾರಶೀಲನಾಗಿರುವುದೆಂದರೇನು?
13 ವಿಚಾರಶೀಲನು. (1 ತಿಮೊಥಿ 3:8, NW) ಶುಶ್ರೂಷಾ ಸೇವಕನಾಗಲು ಅರ್ಹನಾಗುವ ಪುರುಷನು ತನ್ನ ಜವಾಬ್ದಾರಿಯನ್ನು ಲಘುವಾಗಿ ತೆಗೆದು ಕೊಳ್ಳ ಬಾರದು. ಅವನು ಗೌರವ ಸಂಪಾದಿಸುವಂತೆ ಘನ ರೀತಿಯಲ್ಲಿ ವರ್ತಿಸ ಬೇಕು. ಒಮ್ಮೊಮ್ಮೆ ಮಾಡಲ್ಪಡುವ ವಿನೋದವನ್ನು ಅಂಗೀಕರಿಸಬಹುದಾದರೂ ಅವನು ಸದಾ ಕ್ಷುದ್ರರೀತಿಯಲ್ಲಿ ವರ್ತಿಸುವುದಾದರೆ ಅರ್ಹನಾಗನು.
14. (ಎ)ಎರಡು ಮಾತಿನವಲ್ಲವೆಂದರೇನು? (ಬಿ) ಶುದ್ಧ ಮನಸ್ಸಾಕ್ಷಿ ಯಾವುದನ್ನು ಕೇಳಿಕೊಳ್ಳುತ್ತದೆ?
14 ಎರಡು ಮಾತಿನವನಲ್ಲ; ಶುದ್ಧಮನಸ್ಸಾಕ್ಷಿಯವನು. (1 ತಿಮೊಥಿ 3:8, 9) ಶುಶ್ರೂಷಾ ಸೇವಕರು (ಮತ್ತು ಹಿರಿಯರು) ಸತ್ಯವಾದಿಗಳಾಗಿರಬೇಕು, ಹರಟೆಯಾಡುವ ಕುಟಿಲಶೀಲದವರಾಗಿರಬಾರದು. ಅವರು ಎರಡು ಮಾತಿನವರಾಗಬಾರದ ಕಾರಣ, ಕಪಟದಿಂದ ಒಂದು ವಿಷಯವನ್ನು ಒಬ್ಬನಿಗೆ ಹೇಳಿ ಅದಕ್ಕೆ ತೀರಾ ವಿರುದ್ಧವಾದುದನ್ನು ಇನ್ನೊಬ್ಬರಿಗೆ ಹೇಳಬಾರದು. (ಜ್ಞಾನೋಕ್ತಿ 3:32; ಯಾಕೋಬ 3:17) ಈ ಪುರುಷರು ಪ್ರಕಟಿಸಲ್ಪಟ್ಟಿರುವ ಸತ್ಯವನ್ನು ನಿಷ್ಠೆಯಿಂದ ಸಮರ್ಥಿಸುವವರು. “ನಂಬಿಕೆಯ ಪವಿತ್ರ ರಹಸ್ಯವನ್ನು ಶುದ್ಧ ಮನಸ್ಸಾಕ್ಷಿಯಿಂದ ಹಿಡಿದಿರುವವರು” ಆಗಿರ ಬೇಕು. ಇಂಥ ಪುರುಷನ ಮನಸ್ಸಾಕ್ಷಿ ದೇವರ ಮುಂದೆ ತಾನು ಪ್ರಾಮಾಣಿಕನು, ಮೋಸ ಅಥವಾ ಅಶುದ್ಧವಾದ ಯಾವುದನ್ನೂ ಮಾಡದವನು ಎಂದು ಸಾಕ್ಷಿ ನೀಡಬೇಕು. (ರೋಮಾಪುರ 9:1; 2 ಕೊರಿಂಥ 1:12; 4:2; 7:1) ಒಬ್ಬನು ಸತ್ಯಕ್ಕೆ ಮತ್ತು ದಿವ್ಯ ಸೂತ್ರಗಳಿಗೆ ಅಂಟಿಕೊಳ್ಳದಿರುವಲ್ಲಿ, ದೇವರ ಮಂದೆಯ ಸೇವೆ ಮಾಡಲು ಅರ್ಹನಲ್ಲ.
ಹಿರಿಯರ ಯೋಗ್ಯತೆಗಳ ಮೇಲೆ ನೆಲೆಬೆಳಕು
15. ಈಗ ಯಾರ ಯೋಗ್ಯತೆಗಳನ್ನು ಪರೀಕ್ಷಿಸಲಾಗುತ್ತದೆ, ಮತ್ತು ಇವುಗಳಲ್ಲಿ ವಿಶೇಷವಾಗಿ ಯಾವುದು ಒಳಗೊಂಡಿದೆ?
15 ಹಲವು ಯೋಗ್ಯತೆಗಳು ಮುಖ್ಯವಾಗಿ ಹಿರಿಯರಿಗೆ ಅನ್ವಯಿಸಿ, ಪಾಲಕರಾಗಿ ಮತ್ತು ಬೋಧಕರಾಗಿ ಅವರು ಮಾಡುವ ಕೆಲಸದ ಸಂಬಂಧದಲ್ಲಿವೆ. ಕ್ರೈಸ್ತ ಪುರುಷರಾಗಿರುವ ನೀವು ಈ ಆವಶ್ಯಕತೆಗಳನ್ನು ಮುಟ್ಟುತ್ತೀರೋ?
16. (ಎ) ಮಿತಸ್ವಭಾವಿಯಾಗಿರಲು ಏನು ಅಗತ್ಯ? (ಬಿ) ಹಿರಿಯನು ಆತ್ಮ ಸಂಯಮವನ್ನು ಹೇಗೆ ಇಟ್ಟುಕೊಳ್ಳಬಲ್ಲನು?
16 ಮಿತಸ್ವಭಾವಿ; ಆತ್ಮ ಸಂಯಮಿ. (1 ತಿಮೊಥಿ 3:2, NW; ತೀತ 1:8) ಹಿರಿಯನು ಮಿತಸ್ವಭಾವಿಯಾಗಿರಬೇಕು. ಕೆಟ್ಟ ಚಾಳಿಗಳಿಗೆ ಗುಲಾಮನಾಗಿರಬಾರದು. ಪರೀಕ್ಷೆಗಳು ಬರುವಾಗ ಅವನು ಕೀರ್ತನೆಗಾರನಂತೆ “ನನ್ನ ಮನೋವ್ಯಥೆಗಳನ್ನು ನಿವಾರಿಸು, ಸಂಕಟಗಳಿಂದ ನನ್ನನ್ನು ಬಿಡಿಸು” ಎಂದು ಪ್ರಾರ್ಥಿಸುವಲ್ಲಿ ಅವನು ಸಮತೆ ಕಾಪಾಡಿಕೊಳ್ಳುವಂತೆ ದೇವರು ಅವನಿಗೆ ಸಹಾಯ ನೀಡುವನು. (ಕೀರ್ತನೆ 25:17) ಒಬ್ಬ ಮೇಲ್ವಿಚಾರಕನು ದೇವರ ಆತ್ಮಕ್ಕಾಗಿಯೂ ಪ್ರಾರ್ಥಿಸಿ, ಆತ್ಮ-ಸಂಯಮ ಸೇರಿರುವ ಅದರ ಫಲಗಳನ್ನು ಪ್ರದರ್ಶಿಸಬೇಕಎ. (ಲೂಕ 11:13; ಗಲಾತ್ಯ 5:22, 23) ಹೀಗೆ, ಯೋಚನೆ, ಮಾತು ಮತ್ತು ವರ್ತನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಈ ವಿಷಯವು ಒಬ್ಬ ಹಿರಿಯನು ಸಭೆಗೆ ಆತ್ಮಿಕ ಮಾರ್ಗದರ್ಶನ ನೀಡುವಾಗ ವೈಪರೀತ್ಯಗಳನ್ನು ವಿಸರ್ಜಿಸುವಂತೆ ಸಾಧ್ಯಮಾಡುತ್ತದೆ.
17. ಸ್ವಸ್ಥ ಮನಸ್ಕನಾಗಿರುವುದರಲ್ಲಿ ಏನು ಸೇರಿದೆ?
17 ಸ್ವಸ್ಥ ಮನಸ್ಕನು. (1 ತಿಮೊಥಿ 3:2, NW) ಒಬ್ಬ ಹಿರಿಯನು ವಿವೇಕಿ, ವಿವೇಚನೆಯುಳ್ಳವನು ಮತ್ತು ದೂರದೃಷ್ಟಿಯುಳ್ಳವನಾಗಿರಬೇಕು. ಮಾತು ಮತ್ತು ವರ್ತನೆಗಳಲ್ಲಿ ಅವನು ಉದ್ದೇಶಪೂರ್ಣನೂ ತರ್ಕಸಮ್ಮತನೂ ಆಗಿರಬೇಕು. ಅವನ ವಿನೀತ, ಸಮತೆಯ ಯೋಚನೆಗಳು ಯೆಹೋವನ ವಾಕ್ಯದ ಆರೋಗ್ಯಕರವಾದ ಬೋಧನೆಗಳು ಮೇಲೆ ಆಧಾರಿತವಾಗಿರಬೇಕು. ಈ ಕಾರಣದಿಂದ ಅವನು ಅದರ ಶೃದ್ಧೆಯ ಶಿಕ್ಷಾರ್ಥಿಯಾಗಿರಬೇಕು.—ರೋಮಾಪುರ 12:3; ತೀತ 1:10.
18. ಕ್ರಮಬದ್ಧನಾಗಿರುವುದು ಹಿರಿಯನಿಂದ ಏನು ಕೇಳಿಕೊಳ್ಳುತ್ತದೆ?
18 ಕ್ರಮಬದ್ಧನು (1 ತಿಮೊಥಿ 3:2, NW) ಇಲ್ಲಿ ಉಪಯೋಗಿಸಲ್ಪಟ್ಟಿರುವ ಗ್ರೀಕ್ ಪದವನ್ನು 1 ತಿಮೊಥಿ 2:9, NW ರಲ್ಲಿ “ಸುವ್ಯವಸ್ಥಿತ” ಎಂಬುದಾಗಿ ಭಾಷಾಂತರಿಸಲ್ಪಟ್ಟಿದೆ. ಆದುದರಿಂದ, ಒಬ್ಬ ಹಿರಿಯನ ಜೀವನ ಮಾದರಿ ಸಭ್ಯವೂ ಸುವ್ಯವಸ್ಥಿತವೂ ಆಗಿರಬೇಕು. ಉದಾಹರಣೆಗೆ, ಅವನು ಕಾಲನಿಷ್ಠೆಯುಳ್ಳವನಾಗಿರಬೇಕು. ಪ್ರಥಮ ಶತಮಾನದ ಕ್ರೈಸ್ತರು ದಾಖಲೆಗಳನ್ನು ಇಡುವ ಸಂಗತಿಯನ್ನು ಅತಿ ದೊಡ್ಡದಾಗಿ ಮಾಡಲಿಲ್ಲವೆಂದು ವ್ಯಕ್ತವಾಗುತ್ತದೆ. ಆದುದರಿಂದ ಮೇಲ್ವಿಚಾರಕನು ನಿಪುಣ ಕರಣಿಕ ಅಥವಾ ಗುಮಾಸ್ತನಾಗಿರಬೇಕೆಂದಿಲ್ಲ. ಈ ವಿಷಯಗಳಲ್ಲಿ ಅಗತ್ಯ ಬೀಳುವುದನ್ನು ಶುಶ್ರೂಷಾ ಸೇವಕರು ನೋಡಿ ಕೊಳ್ಳಬಹುದು. ಆದರೆ “ಕ್ರಮಬದ್ಧ” ವೆಂಬುದರ ಗ್ರೀಕ್ ಪದ ಸ್ವದರ್ತನೆಯನ್ನೂ ಸೂಚಿಸಬಲ್ಲದು ಮತ್ತು ಸ್ವಚ್ಛಂದನು ಅಥವಾ ಅವ್ಯವಸ್ಥಿತನಾಗಿರುವ ಒಬ್ಬನು ಹಿರಿಯನಾಗಲು ಅರ್ಹನಲ್ಲ.—1 ಥೆಸಲೊನೀಕ 5:14; 2 ಥೆಸಲೊನೀಕ 3:6-12; ತೀತ 1:10.
19. ಅತಿಥಿ ಸತ್ಕಾರ ಮಾಡುವಾಗ ಹಿರಿಯನು ಏನು ಮಾಡುತ್ತಾನೆ?
19 ಅತಿಥಿ ಸತ್ಕಾರ ಮಾಡುವವನು. (1 ತಿಮೊಥಿ 3:2; ತೀತ 1:8) ಒಬ್ಬ ಹಿರಿಯನು ‘ಅತಿಥಿ ಸತ್ಕಾರವನ್ನು ಅಭ್ಯಾಸಿಸುತ್ತಾನೆ.’ (ರೋಮಾಪುರ 12:13; ಇಬ್ರಿಯ 13:2) “ಸತ್ಕರಿಸು” ಎಂಬ ಪದದ ಅಕ್ಷರಾರ್ಥವು “ಅಪರಿಚಿತ ಪ್ರೇಮಿ” ಎಂದಾಗಿದೆ. ಆದುದರಿಂದ, ಸತ್ಕರಿಸುವ ಹಿರಿಯನು, ದರಿದ್ರರಲ್ಲಿ ಮತ್ತು ಧನಿಕರಲ್ಲಿ ಒಂದೇ ರೀತಿಯ ಆಸಕ್ತಿಯನ್ನು ತೋರಿಸುತ್ತಾ ಹೊಸಬರನ್ನು ಕ್ರೈಸ್ತ ಕೂಟಗಳಲ್ಲಿ ಸ್ವಾಗತಿಸುತ್ತಾನೆ. ಕ್ರೈಸ್ತತ್ವದ ಅಭಿರುಚಿಯಲ್ಲಿ ಸಂಚರಿಸುವವರಿಗೆ ಅವನು ಅತಿಥಿ ಸತ್ಕಾರ ಮಾಡಿ ಅವರನ್ನು “ದೇವರ ಸೇವಕರಿಗೆ” ಯೋಗ್ಯವಾದ ರೀತಿಯಿಂದ ಕಳುಹಿಸಿ ಕೊಡುತ್ತಾನೆ. (3 ಯೋಹಾನ 5-8) ಹೌದು, ಒಬ್ಬ ಹಿರಿಯನು, ವಿಶೇಷವಾಗಿ ಜೊತೆ ವಿಶ್ವಾಸಿಗಳಿಗೆ ಅವರ ಆವಶ್ಯಕತೆಗಳಿಗನುಸಾರ ಮತ್ತು ತನ್ನ ಪರಿಸ್ಥಿತಿಗೆ ಹೊಂದಿಕೊಂಡು ಅತಿಥಿ ಸತ್ಕಾರ ತೋರಿಸುತ್ತಾನೆ.—ಯಾಕೋಬ 2:14-17.
20. ಹಿರಿಯನು ಯಾವ ವಿಧಗಳಲ್ಲಿ ಕಲಿಯಲು ಅರ್ಹನಾಗಿರತಕ್ಕದ್ದು?
20 ಬೋಧಿಸುವುದರಲ್ಲಿ ಪ್ರವೀಣನು. (1 ತಿಮೊಥಿ 3:2) ಆತ್ಮಿಕ ಬೋಧಕನಾದ ಹಿರಿಯನ ಯೋಗ್ಯತೆಯು, ಮಾನಸಿಕ ಸಾಮರ್ಥ್ಯ ಅಥವಾ ಲೌಕಿಕ ವಿವೇಕದಿಂದ ಬರುವುದಿಲ್ಲ. (1 ಕೊರಿಂಥ 2:1-5, 13) ಅದು, “ಆರೋಗ್ಯಕರವಾದ ಶಿಕ್ಷಣದ ಮೂಲಕ ಬುದ್ಧಿಹೇಳಶಕ್ತನಾಗುವಂತೆ ಹಾಗೂ ವಿರೋಧಿಗಳನ್ನು ಖಂಡಿಸಿ ಮನಗಾಣಿಸುವಂತೆ ತನ್ನ ಶಿಕ್ಷಣ ಕಲೆಯ ಸಂಬಂಧದಲ್ಲಿ ನಂಬಿಕೆಯ ವಾಕ್ಯವನ್ನು ಬಿಗಿಯಾಗಿ” ಹಿಡಿದು ಕೊಳ್ಳುವುದರಿಂದ ಬರುತ್ತದೆ. (ತೀತ 1:9, NW; ಇದನ್ನು ಅಪೊಸ್ತಲರ ಕೃತ್ಯಗಳು 20:18-21, 26, 27ಕ್ಕೆ ಹೋಲಿಸಿ.) ಅವನು ‘ಅನುಕೂಲ ಪ್ರವೃತ್ತಿಯಿಲ್ಲದವರಿಗೆ ಮೃದುವಾಗಿ ಶಿಕ್ಷಣ ನೀಡಲು’ ಶಕ್ತನಾಗಿರ ತಕ್ಕದ್ದು. (2 ತಿಮೊಥಿ 2:23-26) ಒಬ್ಬ ಹಿರಿಯನು ಸಭೆಯಲ್ಲಿ ಅತ್ಯುತ್ತಮ ಸಾರ್ವಜನಿಕ ಭಾಷಣಗಾರನಾಗಿರದಿದ್ದರೂ, ಅವನು ದೇವರ ವಾಕ್ಯದ ಎಷ್ಟು ಉತ್ತಮ ವಿದ್ಯಾರ್ಥಿಯಾಗಿರಬೇಕಂದರೆ ಯಾರು ಸಹಾ ಬೈಬಲ್ ಅಭ್ಯಾಸವನ್ನು ಮಾಡುತ್ತಾರೋ ಅಂಥ ವಿಶ್ವಾಸಿಗಳಿಗೆ ಬೋಧಿಸುವಷ್ಟು ನುರಿತವನಾಗಿರಬೇಕು. (2 ಕೊರಿಂಥ 11:6) ಕುಟುಂಬಗಳು ಮತ್ತು ಒಬ್ಬೊಬ್ಬ ವ್ಯಕ್ತಿ ದೇವ ಭಕ್ತಿಯ ಜೀವಿತವನ್ನು ನಡಿಸುವಂತೆ ಸಹಾಯ ಮಾಡುವ “ಆರೋಗ್ಯಕರವಾದ ಬೋಧನೆಯನ್ನು” ನೀಡಲು ಅವನು ಯೋಗ್ಯತೆ ಪಡೆದಿರಬೇಕು.—ತೀತ 2:1-10.
21. (ಎ) ಹಿರಿಯನು ಹೊಡೆದಾಡುವವನಲ್ಲ ಎಂದು ಏಕೆ ಹೇಳಸಾಧ್ಯವಿದೆ? (ಬಿ) ವಿವೇಚನೆಯುಳ್ಳವನೆಂದರೇನು? (ಸಿ) ಕಲಹಪ್ರಿಯನಲ್ಲವೆಂದರೇನು?
21 ಹೊಡೆದಾಡುವವನಲ್ಲ. ವಿವೇಚನೆಯುಳ್ಳವನು, ಕಲಹಪ್ರಿಯನಲ್ಲ. (1 ತಿಮೊಥಿ 3:3, NW; ತೀತ 1:7) ಸಮಾಧಾನಿಯಾದ ಹಿರಿಯನು ಜನರನ್ನು ದೈಹಿಕವಾಗಿ ಹೊಡೆಯುವುದಿಲ್ಲ ಅಥವಾ ದೂಷಿಸುವ ಅಥವಾ ಮನಚುಚ್ಚುವ ಮಾತುಗಳಿಂದ ಬಾಯಿಬಡಿಯುವುದಿಲ್ಲ. (2 ಕೊರಿಂಥ 11:20 ಹೋಲಿಸಿ.) (“ಕುಡಿದು ರಂಪು ಎಬ್ಬಿಸುವವನಲ್ಲ” ಎಂಬ ಹಿಂದಿನ ಮಾತುಗಳು, ಅವನು, ಅನೇಕ ಸಲ ಜಗಳಕ್ಕೆ ನಡಿಸುವ ಮದ್ಯ ದುರುಪಯೋಗದಿಂದ ದೂರವಿರುತ್ತಾನೆಂದು ತೋರಿಸುತ್ತದೆ.) ಅವನು “ವಿವೇಚನೆಯುಳ್ಳವನು” (ಅಥವಾ, “ಬಿಟ್ಟುಕೊಡುವವನು”), ಸರ್ವಾಧಿಕಾರಿ ಮತ್ತು ಮೆಚ್ಚಿಸಲು ಕಷ್ಟವಾದ ವ್ಯಕ್ತಿಯಲ್ಲ—ಆಗಿರುವುದರಿಂದ ಚಿಕ್ಕ ವಿಷಯಗಳನ್ನು ವಿವಾದಾಂಶಗಳಾಗಿ ಮಾಡುವುದಿಲ್ಲ. (1 ಕೊರಿಂಥ 9:12; ಫಿಲಿಪ್ಪಿಯ 4:5; 1 ಪೇತ್ರ 2:18) ಒಬ್ಬ ಹಿರಿಯನು ಕಲಹಪ್ರಿಯ ಅಥವಾ, ಜಗಳಪ್ರಿಯನಲ್ಲವಾಗಿರುವುದರಿಂದ ಅವನ ಜಗಳಗಳಿಂದ ದೂರವಿದ್ದು “ಕೋಪ ಪ್ರವೃತ್ತಿ”ಯವನಾಗಿರುವುದಿಲ್ಲ.—ತೀತ 3:2; ಯಾಕೋಬ 1:19, 20.
22. ಹಿರಿಯನು ಸ್ವೇಚ್ಛಾಪರನಾಗಿರಬಾರದು ಎಂಬುದರಲ್ಲಿ ಏನು ಸೂಚಿತವಾಗಿದೆ?
22 ಸ್ವೇಚ್ಛಾಪರನಲ್ಲ. (ತೀತ 1:7) ಅಕ್ಷರಾರ್ಥದಲ್ಲಿ “ಸ್ವಸಂತೋಷರ್ಥಕನಲ್ಲ” ಎಂದು ಇದರ ಅರ್ಥ. (2 ಪೇತ್ರ 2:10 ಹೋಲಿಸಿ.) ಅವನು ಉದ್ಧತ ಭಾವದವನಾಗಿರದೆ ತನ್ನ ಸಾಮರ್ಥ್ಯಗಳ ವಿಷಯ ವಿನೀತಭಾವ ತಾಳಬೇಕು. ತಾನು ಮಾಡುವ ಕೆಲಸಗಳು ಇತರ ಯಾವನಿಗಿಂತಲೂ ಉತ್ತಮವೆಂದೆಣಿಸದೆ ಅವನು ಇತರರೊಂದಿಗೆ ಜವಾಬ್ದಾರಿಯಲ್ಲಿ ದೈನ್ಯತೆಯಿಂದ ಭಾಗಿಯಾಗಿ ಸಲಹೆಗಾರರ ಸಮೂಹ ಬೆಲೆಯುಳ್ಳದ್ದೆಂದು ಎಣಿಸುತ್ತಾನೆ.—ಅರಣ್ಯಕಾಂಡ 11:26-29; ಜ್ಞಾನೋಕ್ತಿ 11:14; ರೋಮಾಪುರ 12:3, 16.
23. (ಎ) “ಸದ್ಗುಣ ಪ್ರಿಯ”ನನ್ನು ನೀವು ಹೇಗೆ ನಿರೂಪಿಸುವಿರಿ? (ಬಿ) ನೀತಿವಂತನಾಗಿರುವುದೆಂದರೇನು?
23 ಸದ್ಗುಣ ಪ್ರಿಯನು, ಧರ್ಮಶೀಲನು. (ತೀತ 1:8, NW) ಹಿರಿಯನಾಗಲು ಯೋಗ್ಯತೆ ಹೊಂದಬೇಕಾದರೆ ಒಬ್ಬ ಪುರುಷನು ಒಳ್ಳೆಯದನ್ನು ಪ್ರೀತಿಸಿ ಧರ್ಮಶೀಲನಾಗಿರಬೇಕು. ಸದ್ಗುಣ ಪ್ರಿಯನು ಯೆಹೋವನ ದೃಷ್ಟಿಯಲ್ಲಿ ಯಾವುದು ಒಳ್ಳೆಯದೋ ಅದನ್ನು ಪ್ರೀತಿಸುತ್ತಾನೆ. ಅವನು ದಯಾಭರಿತ ಮತ್ತು ಸಹಾಯಕರವಾದ ಕೆಲಸಗಳನ್ನು ಮಾಡಿ ಇತರರ ಒಳ್ಳೇತನಕ್ಕೆ ಮಾನ್ಯತೆ ತೋರಿಸುತ್ತಾನೆ. (ಲೂಕ 6:35; ಇದನ್ನು ಅಪೊಸ್ತಲರ ಕೃತ್ಯಗಳು 9:36, 39ಕ್ಕೆ ಹೋಲಿಸಿ; 1 ತಿಮೊಥಿ 5:9, 10.) ನೀತಿವಂತನಾಗಿರುವುದೆಂದರೆ ದೇವರ ನಿಯಮ ಮತ್ತು ಮಟ್ಟಗಳಿಗೆ ಹೊಂದಿಕೊಳ್ಳುವುದೆಂದರ್ಥ. ಇಂಥವನು, ಇತರ ವಿಷಯಗಳೊಂದಿಗೆ, ನಿಷ್ಪಕ್ಷಪಾತಿಯಾಗಿದ್ದು ನೀತಿಯ, ನಿರ್ಮಲವಾದ, ಮತ್ತು ಸುಶೀಲದ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾನೆ. (ಲೂಕ 1:6; ಫಿಲಿಪ್ಪಿಯ 4:8, 9; ಯಾಕೋಬ 2:1-9) ಈ ಒಳ್ಳೆಯತನವು ನ್ಯಾಯವು ಕೇಳಿಕೊಳ್ಳುವುದಕ್ಕಿಂತಲೂ ಹೆಚ್ಚಿನದನ್ನು ಮಾಡುವುದರಿಂದ, ಈ ಸದ್ಗುಣಪ್ರಿಯನು ಇತರರಿಗೆ ತನ್ನಿಂದ ಕೇಳಿಕೊಳ್ಳಲ್ಪಡುವುದಕ್ಕಿಂತ ಹೆಚ್ಚಿನದನ್ನು ಮಾಡುತ್ತಾನೆ.—ಮತ್ತಾಯ 20:4, 13-15; ರೋಮಾಪುರ 5:7.
24. ಕರ್ತವ್ಯ ನಿಷ್ಠನಾಗಿರುವುದು ಏನು ಕೇಳಿಕೊಳ್ಳುತ್ತದೆ?
24 ಕರ್ತವ್ಯನಿಷ್ಠನು. (ತೀತ 1:8, NW) ಹಿರಿಯನಾಗುವ ಅರ್ಹತೆಯಿರುವ ಪುರುಷನು ಅವನ ಸಮಗ್ರತೆ ಹೇಗೆ ಪರೀಕ್ಷಿಸಲ್ಪಟ್ಟರೂ ಮುರಿಯಲಾಗದ ನಿಷ್ಠೆಯನ್ನು ದೇವರಿಗೆ ತೋರಿಸಿ ದೈವಿಕ ನಿಯಮಕ್ಕೆ ಅಂಟಿಕೊಳ್ಳುತ್ತಾನೆ. ಯೆಹೋವನು ತನ್ನಿಂದ ಅಪೇಕ್ಷಿಸುವುದನ್ನು ಅವನು ಮಾಡುತ್ತಾನೆ. ಮತ್ತು ನಂಬಿಕೆಯ ರಾಜ್ಯಘೋಷಕನಾಗಿರುವುದು ಇದರಲ್ಲಿ ಸೇರಿದೆ.—ಮತ್ತಾಯ 24:14; ಲೂಕ 1:74, 75; ಅಪೊಸ್ತಲರ ಕೃತ್ಯಗಳು 5:29; 1 ಥೆಸಲೊನೀಕ 2:10.
ಯೋಗ್ಯತೆಗಳನ್ನು ಮುಟ್ಟುವುದು
25. ಈ ವರೆಗೆ ಚರ್ಚಿಸಿದ ಯೋಗ್ಯತೆಗಳು ಯಾರಿಂದ ಅಪೇಕ್ಷಿಸಲ್ಪಡುತ್ತದೆ?
25 ಈಗ ಚರ್ಚಿಸಲಾಗಿರುವ ಯೋಗ್ಯತೆಗಳಲ್ಲಿ ಅಧಿಕಾಂಶ, ಪ್ರತಿ ಯೆಹೋವನ ಸಾಕ್ಷಿಯಿಂದಲೂ ಅಪೇಕ್ಷಿಸಲ್ಪಡುತ್ತದೆ ಮತ್ತು ಇವನ್ನು ದೇವರ ಆಶೀರ್ವಾದದ ಮೂಲಕ ಪ್ರತಿಯೊಬ್ಬನ ಅಧ್ಯಯನ, ಪ್ರಯತ್ನ, ಸುಸಹವಾಸ ಮತ್ತು ಪ್ರಾರ್ಥನೆಗಳಲ್ಲಿ ಪಡೆಯಬಹುದು. ಕೆಲವು ಯೋಗ್ಯತೆಗಳಲ್ಲಿ ಒಬ್ಬರು ಇನ್ನೊಬ್ಬರಿಗಿಂತ ಬಲವಾಗಿರಬಹುದು. ಆದರೆ ಶುಶ್ರೂಷಾ ಸೇವಕರು ಮತ್ತು ಹಿರಿಯರು ತಮ್ಮ ತಮ್ಮ ಸ್ಥಾನಗಳನ್ನು ಪಡೆಯಬೇಕಾದರೆ ಈ ಎಲ್ಲಾ ಯೋಗ್ಯತೆಗಳನ್ನು ತಕ್ಕ ಮಟ್ಟಿಗೆ ಹೊಂದಿರಬೇಕು.
26. ಕ್ರೈಸ್ತ ಪುರುಷರು ಸಭಾ ಜವಾಬ್ದಾರಿಗಳಿಗೆ ತಮ್ಮನ್ನು ದೊರಕಿಸಿಕೊಳ್ಳುವುದೇಕೆ?
26 ಯೆಹೋವನ ಸಾಕ್ಷಿಗಳೆಲ್ಲಾ ದೇವರ ಸೇವೆಯಲ್ಲಿ ತಮಗೆ ಸಾಧ್ಯವಿರುವುದನ್ನೆಲ್ಲಾ ಮಾಡಲು ಅಪೇಕ್ಷಿಸಬೇಕು. ಈ ಮನೋಭಾವ, ಕ್ರೈಸ್ತ ಪುರುಷರು ತಮ್ಮನ್ನು ಸಭಾ ಜವಾಬ್ದಾರಿಗಳನ್ನು ವಹಿಸಲಿಕ್ಕಾಗಿ ದೊರಕಿಸಿಕೊಳ್ಳುವಂತೆ ಪ್ರೇರಿಸುತ್ತದೆ. ನೀವು ಸಮರ್ಪಿತ, ದೀಕ್ಷಾಸ್ನಾತ ಸಾಕ್ಷಿಯಾಗಿದ್ದೀರೋ? ಹಾಗಿರುವಲ್ಲಿ, ಸಾಧಿಸುತ್ತಾ, ಸೇವೆ ಮಾಡುವ ಯೋಗ್ಯತೆ ಪಡೆಯಲು ಸಕಲ ಪ್ರಯತ್ನವನ್ನು ಮಾಡಿರಿ! (w90 9/1)
[ಅಧ್ಯಯನ ಪ್ರಶ್ನೆಗಳು]
a ಮಾರ್ಚ್ 15, 1983ರ ದ ವಾಚ್ಟವರ್ ಪುಟ 29ರಲ್ಲಿರುವ “ಶಾಸ್ತ್ರೀಯ ವಿವಾಹವಿಚ್ಛೇದಗಳು” ಉಪಶೀರ್ಷಿಕೆಯ ಕೆಳಗೆ ನೋಡಿರಿ.
ನೀವು ಹೇಗೆ ಉತ್ತರಿಸುವಿರಿ?
◻ ಸಭಾ ಜವಾಬ್ದಾರಿ ವಹಿಸಲು ಈಗ ದೀಕ್ಷಾಸ್ನಾತ ಪುರುಷರು ದೊಡ್ಡ ಸಂಖ್ಯೆಯಲ್ಲಿ ಬೇಕಾಗಿರುವುದೇಕೆ?
◻ ಶುಶ್ರೂಷಾ ಸೇವಕರು ಮುಟ್ಟಬೇಕಾದ ಕೆಲವು ಯೋಗ್ಯತೆಗಳು ಯಾವುವು?
◻ ಹಿರಿಯರು ಮುಟ್ಟಬೇಕಾದ ಕೆಲವು ಆವಶ್ಯಕ ಗುಣಗಳು ಯಾವುವು?
◻ ಹಿರಿಯನಿಗೆ ತನ್ನ ಕುಟುಂಬದ ಉತ್ತಮ ಅಧ್ಯಕ್ಷತೆ ವಹಿಸಲು ಗೊತ್ತಿರಬೇಕು ಏಕೆ?
◻ ಕ್ರೈಸ್ತ ಪುರುಷರು ಸಭಾ ಜವಾಬ್ದಾರಿಗಳಿಗೆ ತಮ್ಮನ್ನು ದೊರಕಿಸಿಕೊಳ್ಳುವಂತೆ ಯಾವುದು ಪ್ರೇರಿಸುತ್ತದೆ?
[ಪುಟ 16,17 ರಲ್ಲಿರುವಚಿತ್ರ]
ಹಿರಿಯರು ಮತ್ತು ಶುಶ್ರೂಷಾ ಸೇವಕರು ತಮ್ಮ ಕುಟುಂಬಗಳ ಅಧ್ಯಕ್ಷತೆಯನ್ನು ಬೈಬಲಿನ ಸೂತ್ರಾನುಸಾರ ವಹಿಸಬೇಕು