ನಿಮ್ಮ ತಾಳ್ಮೆಗೆ ದೇವ ಭಕ್ತಿಯನ್ನು ಕೂಡಿಸಿರಿ
“ನಿಮಗಿರುವ ನಂಬಿಕೆಗೆ . . . ತಾಳ್ಮೆಯನ್ನೂ ತಾಳ್ಮೆಗೆ [ದೇವ, NW] ಭಕ್ತಿಯನ್ನೂ . . . ಕೂಡಿಸಿರಿ.”—2 ಪೇತ್ರ 1:5, 6.
1, 2. (ಎ) ಇಸವಿ 1930 ರುಗಳಿಂದ ಆರಂಭಿಸಿ, ನಾಜೀ ನಿಯಂತ್ರಣದ ಕೆಳಗೆ ಇದ್ದ ಪ್ರದೇಶಗಳಲ್ಲಿ ಯೆಹೋವನ ಸಾಕ್ಷಿಗಳಿಗೆ ಏನು ಸಂಭವಿಸಿತು, ಮತ್ತು ಯಾಕೆ? (ಬಿ) ಈ ಕ್ರೂರವಾದ ಉಪಚಾರಕ್ಕೆ ಗುರಿಯಾದ ಯೆಹೋವನ ಜನರಿಗೆ ಏನಾಯಿತು?
ಇಪ್ಪತ್ತನೆಯ ಶತಮಾನದ ಇತಿಹಾಸದಲ್ಲಿ ಅದು ಅಂಧಕಾರದ ಅವಧಿಯಾಗಿತ್ತು. ಇಸವಿ 1930 ರುಗಳಲ್ಲಿ ಆರಂಭಿಸಿ, ನಾಜೀ ನಿಯಂತ್ರಣದ ಕೆಳಗೆ ಇದ್ದ ಪ್ರದೇಶಗಳಲ್ಲಿನ ಸಾವಿರಾರು ಯೆಹೋವನ ಸಾಕ್ಷಿಗಳು ಅನ್ಯಾಯವಾಗಿ ಬಂಧಿಸಲ್ಪಟ್ಟರು ಮತ್ತು ಕೂಟಶಿಬಿರಗಳಲ್ಲಿ ಹಾಕಲ್ಪಟ್ಟರು. ಯಾಕೆ? ಯಾಕಂದರೆ ಅವರು ತಟಸ್ಥರಾಗಿ ಉಳಿಯಲು ಯತ್ನಿಸಿದರು ಮತ್ತು ಹಿಟ್ಲರನನ್ನು ಸುತ್ತಿಸಲು ನಿರಾಕರಿಸಿದರು. ಅವರನ್ನು ಹೇಗೆ ನಡೆಸಿಕೊಳ್ಳಲಾಯಿತು? “. . . ಎಸ್ಎಸ್ ಸೈನಿಕರ ಕ್ರೌರ್ಯ ರತಿಗೆ ಬೈಬಲ್ ವಿದ್ಯಾರ್ಥಿಗಳು [ಯೆಹೋವನ ಸಾಕ್ಷಿಗಳು] ಗುರಿಯಾದ ರೀತಿಯಲ್ಲಿ, ಕೈದಿಗಳ ಬೇರೆ ಯಾವ ಗುಂಪೂ ಗುರಿಯಾಗಲಿಲ್ಲ. ಅದು ಶಾರೀರಿಕ ಮತ್ತು ಮಾನಸಿಕ ಹಿಂಸೆಗಳ ಕೊನೆಯಿಲ್ಲದ ಸರಪಣಿಯ ಮೂಲಕ ಗುರುತಿಸಲಾದ ಕ್ರೌರ್ಯವಾಗಿದ್ದು, ಹಿಂಸೆಗಳು ಯಾವ ರೀತಿಯಲ್ಲಿದ್ದವೆಂದು ಲೋಕದ ಯಾವ ಭಾಷೆಗೂ ಅಭಿವ್ಯಕ್ತಿಸಲು ಸಾಧ್ಯವಿರಲಿಲ್ಲ.”—ಕಾರ್ಲ್ ವಿಟ್ಟಿಗ್, ಜರ್ಮನ್ ಸರಕಾರದ ಮಾಜಿ ಅಧಿಕಾರಿ.
2 ಸಾಕ್ಷಿಗಳಿಗೆ ಏನು ಸಂಭವಿಸಿತು? ದ ನಾಜೀ ಸ್ಟೇಟ್ ಆ್ಯಂಡ್ ದ ನ್ಯೂ ರಿಲಿಜಿಯನ್ಸ್: ಫೈವ್ ಕೇಸ್ ಸಡ್ಟೀಸ್ ಇನ್ ನಾನ್ ಕನ್ಫರ್ಮಿಟಿ, ಎಂಬ ಆಕೆಯ ಪುಸ್ತಕದಲ್ಲಿ, ಡಾ. ಕ್ರಿಸ್ಟೀನ್ ಇ. ಕಿಂಗ್ ಗಮನಿಸಿದ್ದು: “[ಬೇರೆ ಧಾರ್ಮಿಕ ಗುಂಪುಗಳೊಂದಿಗೆ ವ್ಯತಿರಿಕ್ತವಾಗಿ] ಸಾಕ್ಷಿಗಳ ವಿರುದ್ಧ ಮಾತ್ರ ಸರಕಾರವು ಅಸಫಲವಾಗಿತ್ತು.” ಹೌದು, ಅವರಲ್ಲಿ ನೂರಾರು ಜನರಿಗೆ ಮರಣದ ವರೆಗೆ ತಾಳಿಕೊಳ್ಳುವುದರ ಅರ್ಥದಲ್ಲಿ ಅದು ಇದ್ದರೂ ಕೂಡ, ಯೆಹೋವನ ಸಾಕ್ಷಿಗಳು ಒಟ್ಟಾಗಿ ಸ್ಥಿರಚಿತ್ತರಾಗಿದ್ದರು.
3. ತೀವ್ರವಾದ ಕಷ್ಟಗಳನ್ನು ತಾಳಿಕೊಳ್ಳಲು ಯೆಹೋವನ ಸಾಕ್ಷಿಗಳನ್ನು ಯಾವುದು ಶಕ್ತರನ್ನಾಗಿ ಮಾಡಿದೆ?
3 ಯೆಹೋವನ ಸಾಕ್ಷಿಗಳು ನಾಜೀ ಜರ್ಮನಿಯಲ್ಲಿ ಮಾತ್ರವಲ್ಲ ಲೋಕದ ಎಲ್ಲೆಡೆಯೂ ಇಂಥ ಸಂಕಟಗಳನ್ನು ತಾಳಿಕೊಳ್ಳುವಂತೆ ಯಾವುದು ಶಕ್ತಗೊಳಿಸಿದೆ? ಅವರ ದೇವ ಭಕ್ತಿಯಿಂದಾಗಿ ತಾಳಿಕೊಳ್ಳುವಂತೆ ಅವರ ಸ್ವರ್ಗೀಯ ತಂದೆಯು ಅವರಿಗೆ ಸಹಾಯ ಮಾಡಿದ್ದಾನೆ. “ಕರ್ತನು ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವದಕ್ಕೂ . . . ಬಲ್ಲವನಾಗಿದ್ದಾನೆ,” ಎಂದು ಅಪೊಸ್ತಲ ಪೇತ್ರನು ವಿವರಿಸುತ್ತಾನೆ. (2 ಪೇತ್ರ 2:9) ಅದೇ ಪತ್ರದಲ್ಲಿ ಮುಂಚೆ ಪೇತ್ರನು ಕ್ರೈಸ್ತರಿಗೆ, “ನಿಮಗಿರುವ ನಂಬಿಕೆಗೆ . . . ತಾಳ್ಮೆಯನ್ನೂ ತಾಳ್ಮೆಗೆ ಭಕ್ತಿಯನ್ನೂ . . . ಕೂಡಿಸಿರಿ,” ಎಂದು ಬುದ್ಧಿ ಹೇಳಿದ್ದನು. (2 ಪೇತ್ರ 1:5, 6) ಆದುದರಿಂದ ತಾಳ್ಮೆಯು ದೇವ ಭಕ್ತಿಗೆ ನಿಕಟವಾಗಿ ಸಂಬಂಧಿಸಿದೆ. ವಾಸ್ತವದಲ್ಲಿ, ಕಡೇತನಕ ತಾಳಿಕೊಳ್ಳಲು, ನಾವು ‘ಭಕ್ತಿಯನ್ನು ಸಂಪಾದಿಸುವುದಕ್ಕೆ ಪ್ರಯಾಸಪಡ’ ಬೇಕು ಮತ್ತು ಅದನ್ನು ವ್ಯಕ್ತಪಡಿಸಬೇಕು. (1 ತಿಮೊಥೆಯ 6:11) ಆದರೆ ನಿಖರವಾಗಿ ದೇವ ಭಕ್ತಿ ಏನಾಗಿದೆ?
ದೇವ ಭಕ್ತಿಯೆಂದರೇನು
4, 5. ದೇವ ಭಕ್ತಿ ಎಂದರೇನು?
4 “ದೇವ ಭಕ್ತಿ”ಗೆ ಇರುವ ಗ್ರೀಕ್ ನಾಮಪದ (ಯುಸಬಿಯಾ) ವನ್ನು “ಸೂಕ್ತವಾದ ಪೂಜ್ಯಭಾವನೆ” ಎಂಬುದಾಗಿ ಅಕ್ಷರಾರ್ಥಕವಾಗಿ ಭಾಷಾಂತರಿಸಬಹುದು.a (2 ಪೇತ್ರ 1:6, ಕಿಂಗ್ಡಂ ಇಂಟರ್ಲಿನಿಯರ್) ಅದು ದೇವರ ಕಡೆಗೆ ಹೃತ್ಪೂರ್ವಕ ಆದರದ ಭಾವನೆಯನ್ನು ಸೂಚಿಸುತ್ತದೆ. ಡಬ್ಲ್ಯೂ. ಇ. ವೈನ್ ಇವರಿಗನುಸಾರ, ವಿಶೇಷಣವಾದ ಇಸುಬೆಸ್, ಅಕ್ಷರಶಃ “ಒಳ್ಳೆಯ ಪೂಜ್ಯತೆ” ಎಂಬ ಅರ್ಥಕೊಡುತ್ತದೆ, “ದೇವರ ಪರಿಶುದ್ಧ ಭಯದ ಮೂಲಕ ನಿರ್ದೇಶಿಸಲಾದ ಬಲವು, ಭಕ್ತಿಯ ಚಟುವಟಿಕೆಯಲ್ಲಿ ಅಭಿವ್ಯಕ್ತಿಯನ್ನು ಕಂಡುಕೊಳ್ಳುವುದನ್ನು” ತೋರಿಸುತ್ತದೆ.—2 ಪೇತ್ರ 2:9, ಇಂಟ್.
5 ಆದುದರಿಂದ “ದೇವ ಭಕ್ತಿ” ಎಂಬ ಅಭಿವ್ಯಕ್ತಿಯು, ಆತನಿಗೆ ಮೆಚ್ಚಿಗೆಯಾದದ್ದನ್ನು ಮಾಡುವಂತೆ ನಮ್ಮನ್ಮು ಪ್ರೇರಿಸುವ ಯೆಹೋವನಿಗಾಗಿರುವ ಪೂಜ್ಯಭಾವನೆ ಯಾ ಭಕ್ತಿಯನ್ನು ಸೂಚಿಸುತ್ತದೆ. ನಾವು ದೇವರನ್ನು ಹೃದಯದಿಂದ ಪ್ರೀತಿಸುವುದರಿಂದ, ಕಠಿನವಾದ ಕಷ್ಟಗಳ ಎದುರಿನಲ್ಲಿಯೂ ಕೂಡ ಇದನ್ನು ಮಾಡಲಾಗುತ್ತದೆ. ಅದು ನಮ್ಮ ಜೀವಿತಗಳನ್ನು ನಾವು ಜೀವಿಸುವ ರೀತಿಯಲ್ಲಿ ಅಭಿವ್ಯಕ್ತಿಯನ್ನು ಕಂಡುಕೊಳ್ಳುವ ಯೆಹೋವನ ಕಡೆಗೆ ಇರುವ ನಿಷ್ಠೆಯ ವೈಯಕ್ತಿಕ ಒಲವು ಆಗಿದೆ. ನಿಜ ಕ್ರೈಸ್ತರು “ಸುಖಸಮಾಧಾನಗಳು ಉಂಟಾಗಿ . . . ಪೂರ್ಣಭಕ್ತಿಯಿಂದ” ಅವರ ಜೀವಿತಗಳನ್ನು ನಡೆಸುವಂತೆ ಪ್ರಾರ್ಥಿಸಲು ಪ್ರೋತ್ಸಾಹಿಸಲ್ಪಟ್ಟಿದ್ದಾರೆ. (1 ತಿಮೊಥೆಯ 2:1, 2) ನಿಘಂಟುಕಾರರಾದ ಜೆ. ಪಿ. ಲೊ ಮತ್ತು ಇ. ಎ. ನಿಡಾರವರಿಗನುಸಾರ, “ಅನೇಕ ಭಾಷೆಗಳಲ್ಲಿ 1 ತಿಮೊ. 2:2 ರಲ್ಲಿರುವ [ಯುಸೆಬಿಯಾ] ಸೂಕ್ತವಾಗಿಯೇ, ‘ದೇವರು ಇಚ್ಛಿಸಿದಂತೆ ಜೀವಿಸುವುದು’ ಯಾ ‘ದೇವರು ನಮಗೆ ಹೇಳಿರುವಂತೆ ಜೀವಿಸುವುದು’ ಎಂಬುದಾಗಿ ಭಾಷಾಂತರಿಸಬಹುದು.”
6. ತಾಳ್ಮೆ ಮತ್ತು ದೇವ ಭಕ್ತಿಯ ನಡುವೆ ಇರುವ ಸಂಬಂಧವೇನು?
6 ಈಗ ನಾವು ತಾಳ್ಮೆ ಮತ್ತು ದೇವ ಭಕ್ತಿಯ ನಡುವೆ ಇರುವ ಸಂಬಂಧವನ್ನು ಉತ್ತಮವಾಗಿ ಗಣ್ಯಮಾಡಬಹುದು. ದೇವರು ಇಚ್ಛಿಸಿದಂತೆ ನಾವು ಜೀವಿಸುವುದರಿಂದ—ದೇವ ಭಕ್ತಿಯೊಂದಿಗೆ—ನಂಬಿಕೆಯ ಕಷ್ಟಗಳನ್ನು ತಪ್ಪದೆ ತರುವ ಲೋಕದ ದ್ವೇಷವನ್ನು ನಾವು ತಂದುಕೊಳ್ಳುತ್ತೇವೆ. (2 ತಿಮೊಥೆಯ 3:12) ನಮ್ಮ ಸ್ವರ್ಗೀಯ ತಂದೆಯೊಂದಿಗಿನ ನಮ್ಮ ವೈಯಕ್ತಿಕ ಒಲವು ಅಲ್ಲದೆ ಇಂಥ ಕಷ್ಟಗಳನ್ನು ತಾಳಿಕೊಳ್ಳುವಂತೆ ಪ್ರಚೋದಿಸಲ್ಪಡುವ ಬೇರೆ ಯಾವ ಮಾರ್ಗವೂ ನಮಗಿಲ್ಲ. ಅಷ್ಟೇ ಅಲ್ಲದೆ, ಯೆಹೋವನು ಅಂಥ ಹೃತ್ಪೂರ್ವಕ ಭಕ್ತಿಗೆ ಪ್ರತಿಕ್ರಿಯಿಸುತ್ತಾನೆ. ಆತನಲ್ಲಿ ಅವರಿಗೆ ಭಕ್ತಿ ಇರುವ ಕಾರಣ, ಎಲ್ಲಾ ರೀತಿಯ ವಿರೋಧದ ಎದುರಿನಲ್ಲಿಯೂ ಆತನನ್ನು ಮೆಚ್ಚಿಸಲು ಹೆಣಗಾಡುತ್ತಿರುವವರನ್ನು ಪರಲೋಕದಿಂದ ನೋಡಿ ಗಮನಿಸುವುದು, ಆತನಲ್ಲಿ ಎಂಥ ಭಾವನೆಯನ್ನು ಮೂಡಿಸಬಹುದೆಂದು ಊಹಿಸಿರಿ. “ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವದಕ್ಕೂ” ಆತನು ಅಣಿಮಾಡುವನು ಎಂಬುವುದರಲ್ಲಿ ಯಾವ ಆಶ್ಚರ್ಯವೂ ಇರುವುದಿಲ್ಲ!
7. ದೇವ ಭಕ್ತಿಯನ್ನು ಯಾಕೆ ಬೆಳಸಿಕೊಳ್ಳಬೇಕು?
7 ಹೇಗಿದ್ದರೂ, ನಾವು ದೇವ ಭಕ್ತಿಯೊಂದಿಗೆ ಹುಟ್ಟುವುದಿಲ್ಲ, ಅಥವಾ ಅದನ್ನು ದೇವ ಭಕ್ತ ಹೆತ್ತವರಿಂದ ಸ್ವಯಂ ಆಗಿ ಸಂಪಾದಿಸಲ್ಪಡುವುದಿಲ್ಲ. (ಆದಿಕಾಂಡ 8:21) ಬದಲಾಗಿ, ಅದನ್ನು ಬೆಳಸಬೇಕು. (1 ತಿಮೊಥೆಯ 4:7, 10) ನಮ್ಮ ತಾಳ್ಮೆಗೆ ಮತ್ತು ನಮ್ಮ ನಂಬಿಕೆಗೆ ದೇವ ಭಕ್ತಿಯನ್ನು ಕೂಡಿಸಲು ನಾವು ಕೆಲಸಮಾಡಬೇಕು. ಪೇತ್ರನು ಹೇಳುವಂತೆ ಇದು “ಶ್ರದ್ಧೆಯ ಪ್ರಯತ್ನ” ವನ್ನು ಕೇಳಿಕೊಳ್ಳುತ್ತದೆ. (2 ಪೇತ್ರ 1:5 NW) ಹಾಗಾದರೆ, ನಾವು ದೇವ ಭಕ್ತಿಯನ್ನು ಹೇಗೆ ಸಂಪಾದಿಸಬಲ್ಲೆವು?
ಭಕ್ತಿಯನ್ನು ನಾವು ಸಂಪಾದಿಸುವುದು ಹೇಗೆ?
8. ಅಪೊಸ್ತಲ ಪೇತ್ರನಿಗನುಸಾರ, ದೇವ ಭಕ್ತಿಯನ್ನು ಸಂಪಾದಿಸುವುದರ ಕೀಲಿ ಕೈ ಯಾವುದು?
8 ದೇವ ಭಕ್ತಿಯನ್ನು ಸಂಪಾದಿಸುವುದರ ಕೀಲಿ ಕೈಯನ್ನು ಅಪೊಸ್ತಲ ಪೇತ್ರನು ವಿವರಿಸಿದನು. ಅವನಂದದ್ದು: “ದೇವರ ವಿಷಯವಾಗಿಯೂ ನಮ್ಮ ಕರ್ತನಾದ ಯೇಸುವಿನ ವಿಷಯವಾಗಿಯೂ ಪರಿಜ್ಞಾನವು ನಿಮಗೆ ಉಂಟಾಗುವದರಲ್ಲಿ ಕೃಪೆಯೂ ಶಾಂತಿಯೂ ನಿಮಗೆ ಹೆಚ್ಚೆಚ್ಚಾಗಿ ದೊರೆಯಲಿ. ನಮ್ಮನ್ನು ತನ್ನ ಪ್ರಭಾವದಿಂದಲೂ ಗುಣಾತಿಶಯದಿಂದಲೂ ಕರೆದ ದೇವರ ವಿಷಯವಾಗಿ ಯೇಸುವಿನ ದಿವ್ಯಶಕ್ತಿಯು ನಮಗೆ ಪರಿಜ್ಞಾನವನ್ನು ಕೊಟ್ಟದ್ದರಲ್ಲಿ ಜೀವಕ್ಕೂ ಭಕ್ತಿಗೂ ಬೇಕಾದದ್ದೆಲ್ಲವು ದೊರೆಯಿತೆಂದು ಬಲೆವ್ಲಷ್ಟೆ.” (2 ಪೇತ್ರ 1:2, 3) ಆದುದರಿಂದ, ನಮ್ಮ ನಂಬಿಕೆ ಮತ್ತು ತಾಳ್ಮೆಗೆ ದೇವ ಭಕ್ತಿಯನ್ನು ಕೂಡಿಸಲು, ನಾವು ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ನಿಷ್ಕೃಷ್ಟವಾದ ಅಂದರೆ, ಪೂರ್ಣ ಯಾ ಸಮಗ್ರವಾದ ಜ್ಞಾನದಲ್ಲಿ ಬೆಳೆಯಬೇಕು.
9. ದೇವರ ಮತ್ತು ಕ್ರಿಸ್ತನ ನಿಷ್ಕೃಷ್ಟವಾದ ಜ್ಞಾನವು ಅವರು ಯಾರಾಗಿದ್ದಾರೆಂದು ಕೇವಲ ತಿಳಿದುಕೊಳ್ಳುವುದಕ್ಕಿಂತ ಹೆಚ್ಚನ್ನು ಒಳಗೂಡಿದೆ ಎಂಬುದನ್ನು ಹೇಗೆ ದೃಷ್ಟಾಂತಿಸಬಹುದು?
9 ದೇವರ ಮತ್ತು ಕ್ರಿಸ್ತನ ನಿಷ್ಕೃಷ್ಟವಾದ ಜ್ಞಾನವನ್ನು ಹೊಂದುವುದರ ಅರ್ಥ ಏನಾಗಿದೆ? ಸ್ಪಷ್ಟವಾಗಿಗಿ, ಕೇವಲ ಅವರು ಯಾರು ಎಂದು ಗೊತ್ತಿರುವುದಕ್ಕಿಂತ ಹೆಚ್ಚನ್ನು ಅದು ಒಳಗೊಳ್ಳುತ್ತದೆ. ದೃಷ್ಟಾಂತಕ್ಕೆ: ನಿಮ್ಮ ಪಕ್ಕದ ಮನೆ ನೆರೆಯವನು ಯಾರೆಂದು ನಿಮಗೆ ಗೊತ್ತಿರಬಹುದು ಮತ್ತು ನೀವು ಹೆಸರು ಹೇಳಿ ಅವನನ್ನು ವಂದಿಸಲೂಬಹುದು. ಆದರೆ ಹಣದ ಒಂದು ದೊಡ್ಡ ಮೊತ್ತವನ್ನು ನೀವು ಅವನಿಗೆ ಸಾಲ ಕೊಡುವಿರೊ? ಅವನು ಯಾವ ರೀತಿಯ ವ್ಯಕ್ತಿ ಎಂದು ನಿಮಗೆ ಗೊತ್ತಾಗುವ ತನಕ ನೀವು ಹಾಗೆ ಮಾಡುವುದಿಲ್ಲ. (ಹೋಲಿಸಿ ಜ್ಞಾನೋಕ್ತಿ 11:15.) ಅದೇ ರೀತಿಯಲ್ಲಿ, ಯೆಹೋವನನ್ನು ಮತ್ತು ಯೇಸುವನ್ನು ನಿಷ್ಕೃಷ್ಟವಾಗಿ ಯಾ ಪೂರ್ಣವಾಗಿ ತಿಳಿದಿರುವುದು, ಅವರು ಅಸ್ತಿತ್ವದಲ್ಲಿ ಇದ್ದಾರೆಂದು ಕೇವಲ ನಂಬುವುದು ಮತ್ತು ಅವರ ಹೆಸರುಗಳ ಕುರಿತು ಅರಿವುಳ್ಳವರಾಗಿರುವುದಕ್ಕಿಂತ ಹೆಚ್ಚನ್ನು ಅರ್ಥೈಸುತ್ತದೆ. ಅವರ ಸಲುವಾಗಿ ಮರಣದ ವರೆಗೂ ಕೂಡ ಕಷ್ಟಗಳನ್ನು ತಾಳಿಕೊಳ್ಳುವಂತೆ ಸಿದ್ಧರಾಗಿರಲು, ನಾವು ಅವರನ್ನು ನಿಜವಾಗಿಯೂ ಬಹಳ ನಿಕಟವಾಗಿ ಅರಿತಿರಬೇಕು. (ಯೋಹಾನ 17:3) ಇದು ಏನನ್ನು ಒಳಗೊಂಡಿರುತ್ತದೆ?
10. ಯೆಹೋವನ ಮತ್ತು ಯೇಸುವಿನ ಕುರಿತಾದ ನಿಷ್ಕೃಷ್ಟವಾದ ಜ್ಞಾನವನ್ನು ಹೊಂದಿರುವುದು ಯಾವ ಎರಡು ವಿಷಯಗಳನ್ನು ಒಳಗೊಂಡಿರುತ್ತದೆ, ಮತ್ತು ಯಾಕೆ?
10 ಯೆಹೋವನ ಮತ್ತು ಯೇಸುವಿನ ನಿಷ್ಕೃಷ್ಟವಾದ ಯಾ ಸಂಪೂರ್ಣವಾದ ಜ್ಞಾನವನ್ನು ಹೊಂದುವುದು ಎರಡು ವಿಷಯಗಳನ್ನು ಒಳಗೊಳ್ಳುತ್ತದೆ: (1) ವ್ಯಕ್ತಿಗಳಂತೆ ಅವರನ್ನು ಅರಿಯುವುದು—ಅವರ ಗುಣಗಳು, ಭಾವನೆಗಳು, ಮತ್ತು ಮಾರ್ಗಗಳು—ಮತ್ತು (2) ಅವರ ಉದಾಹರಣೆಯನ್ನು ಅನುಸರಿಸುವುದು. ದೇವ ಭಕ್ತಿಯು ಯೆಹೋವನೊಂದಿಗೆ ಹೃತ್ಪೂರ್ವಕವಾದ ಒಂದು ವೈಯಕ್ತಿಕ ಒಲುಮೆಯನ್ನು ಒಳಗೊಂಡಿರುತ್ತದೆ ಮತ್ತು ನಮ್ಮ ಜೀವಿತಗಳನ್ನು ಜೀವಿಸುವ ರೀತಿಯಿಂದ ವ್ಯಕ್ತವಾಗುತ್ತದೆ. ಆದುದರಿಂದ, ಅದನ್ನು ಸಂಪಾದಿಸಲು, ನಾವು ಯೆಹೋವನನ್ನು ವೈಯಕ್ತಿಕವಾಗಿ ಅರಿಯಬೇಕು ಮತ್ತು ಮಾನವ ರೀತಿಯಲ್ಲಿ ಸಾಧ್ಯವಾಗುವ ಮಟ್ಟಿಗೆ ಆತನ ಚಿತ್ತ ಮತ್ತು ಮಾರ್ಗಗಳೊಂದಿಗೆ ಸಂಪೂರ್ಣವಾಗಿ ಪರಿಚಿತರಾಗಬೇಕು. ಯಾರ ಸ್ವರೂಪದಲ್ಲಿ ನಾವು ಸೃಷ್ಟಿಸಲ್ಪಟ್ಟಿದ್ದೇವೊ ಆ ಯೆಹೋವನನ್ನು ನಿಜವಾಗಿಯೂ ಅರಿಯಲು, ನಾವು ಅಂಥ ಜ್ಞಾನವನ್ನು ಉಪಯೋಗಿಸಬೇಕು ಮತ್ತು ಆತನಂತೆ ಇರಲು ಹೆಣಗಾಡಬೇಕು. (ಆದಿಕಾಂಡ 1:26-28; ಕೊಲೊಸ್ಸೆ 3:10) ಅವನು ಏನನ್ನು ಹೇಳಿದನೊ ಮತ್ತು ಮಾಡಿದನೊ ಅದರಲ್ಲಿ ಯೇಸು ಯೆಹೋವನನ್ನು ಪರಿಪೂರ್ಣವಾಗಿ ಅನುಸರಿಸಿದರಿಂದ, ದೇವ ಭಕ್ತಿಯನ್ನು ವಿಕಸಿಸುವುದರಲ್ಲಿ ಯೇಸುವನ್ನು ನಿಷ್ಕೃಷ್ಟವಾಗಿ ಅರಿಯುವುದು ಅಮೂಲ್ಯವಾದ ಒಂದು ಸಹಾಯಕವಾಗಿದೆ.—ಇಬ್ರಿಯ 1:3.
11. (ಎ) ದೇವರ ಮತ್ತು ಕ್ರಿಸ್ತನ ಕುರಿತಾದ ನಿಷ್ಕೃಷ್ಟವಾದ ಜ್ಞಾನವನ್ನು ನಾವು ಹೇಗೆ ಪಡೆಯಲು ಸಾಧ್ಯವಿದೆ? (ಬಿ) ನಾವು ಏನನ್ನು ಓದುತ್ತೇವೊ ಅದರ ಮೇಲೆ ಮನನಮಾಡುವುದು ಯಾಕೆ ಪ್ರಾಮುಖ್ಯವಾಗಿದೆ?
11 ದೇವರ ಮತ್ತು ಯೇಸುವಿನ ಕುರಿತು ಅಂಥ ನಿಷ್ಕೃಷ್ಟವಾದ ಜ್ಞಾನವನ್ನಾದರೂ ನಾವು ಹೇಗೆ ಪಡೆಯ ಸಾಧ್ಯ? ಬೈಬಲನ್ನು ಮತ್ತು ಬೈಬಲ್ ಆಧಾರಿತ ಪ್ರಕಾಶನಗಳನ್ನು ಶ್ರದ್ಧೆಯಿಂದ ಅಭ್ಯಾಸಿಸುವ ಮೂಲಕ.b ಹೇಗಿದ್ದರೂ, ನಮ್ಮ ವೈಯಕ್ತಿಕ ಬೈಬಲ್ ಅಭ್ಯಾಸವು ನಮ್ಮ ದೇವ ಭಕ್ತಿಯ ಸಂಪಾದನೆಯಲ್ಲಿ ಫಲಿಸಬೇಕಾದರೆ, ನಾವು ಮನನಮಾಡಲು, ಅಂದರೆ, ನಾವು ಓದಿದ ವಿಷಯದ ಮೇಲೆ ಆಲೋಚಿಸಲು ಯಾ ಚಿಂತಿಸಲು ಸಮಯವನ್ನು ತೆಗೆದುಕೊಳ್ಳುವುದು ಪ್ರಾಮುಖ್ಯವಾಗಿದೆ. (ಹೋಲಿಸಿ ಯೆಹೋಶುವ 1:8.) ಇದು ಪ್ರಾಮುಖ್ಯವಾಗಿದೆ ಯಾಕೆ? ದೇವ ಭಕ್ತಿಯು ದೇವರ ಕಡೆಗೆ ಆದರದ, ಹೃತ್ಪೂರ್ವಕವಾದ ಭಾವನೆಯಾಗಿದೆ ಎಂಬುದನ್ನು ನೆನಪಿನಲ್ಲಿಡಿ. ಶಾಸ್ತ್ರಗಳಲ್ಲಿ, ಮನನವು ಸತತವಾಗಿ ಸಾಂಕೇತಿಕ ಹೃದಯದೊಂದಿಗೆ—ಆಂತರಿಕ ವ್ಯಕ್ತಿಯೊಂದಿಗೆ ಸೇರಿಸಲ್ಪಟ್ಟಿದೆ. (ಕೀರ್ತನೆ 19:14; 49:3; ಜ್ಞಾನೋಕ್ತಿ 15:28) ನಾವು ಏನನ್ನು ಓದುತ್ತೇವೊ ಅದನ್ನು ಗಣ್ಯತಾಪೂರ್ವಕವಾಗಿ ಆಲೋಚಿಸುವಾಗ, ನಮ್ಮ ಅನಿಸಿಕೆಗಳನ್ನು ಕೆರಳಿಸುತ್ತಾ, ನಮ್ಮ ಭಾವನೆಗಳನ್ನು ಸ್ಪರ್ಶಿಸುತ್ತಾ, ಮತ್ತು ನಮ್ಮ ಯೋಚನೆಯನ್ನು ಪ್ರಭಾವಿಸುತ್ತಾ, ಅದು ಆಂತರಿಕ ವ್ಯಕ್ತಿಯ ಕಡೆಗೆ ಹರಿಯುತ್ತದೆ. ಆಗ ಮಾತ್ರ ಅಭ್ಯಾಸವು ಯೆಹೋವನೊಂದಿಗೆ ಇರುವ ನಮ್ಮ ವೈಯಕ್ತಿಕ ಒಲುಮೆಯನ್ನು ಬಲಗೊಳಿಸಬಲ್ಲದು ಮತ್ತು ಪಂಥಾಹ್ವಾನದ ಸನ್ನಿವೇಶಗಳ ಯಾ ಕಠಿನವಾದ ಕಷ್ಟಗಳ ಎದುರಿನಲ್ಲಿಯೂ ಕೂಡ ದೇವರನ್ನು ಮೆಚ್ಚಿಸುವ ರೀತಿಯಲ್ಲಿ ಜೀವಿಸುವಂತೆ ನಮ್ಮನ್ನು ಪ್ರೇರಿಸಬಹುದು.
ಮನೆಯಲ್ಲಿ ದೇವ ಭಕ್ತಿಯನ್ನಾಚರಿಸುವುದು
12. (ಎ) ಪೌಲನಿಗನುಸಾರ, ಕ್ರೈಸ್ತನೊಬ್ಬನು ದೇವ ಭಕ್ತಿಯನ್ನು ಮನೆಯಲ್ಲಿ ಹೇಗೆ ಆಚರಿಸಬಹುದು? (ಬಿ) ಯಾಕೆ ನಿಜ ಕ್ರೈಸ್ತರು ವಯಸ್ಸಾಗುತ್ತಿರುವ ಹೆತ್ತವರಿಗಾಗಿ ಕಾಳಜಿವಹಿಸುತ್ತಾರೆ?
12 ದೇವ ಭಕ್ತಿಯು ಮೊದಲು ಮನೆಯಲ್ಲಿ ಆಚರಿಸಲ್ಪಡಬೇಕು. ಅಪೊಸ್ತಲ ಪೌಲನು ಹೇಳುವುದು: “ಒಬ್ಬ ವಿಧವೆಗೆ ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇದ್ದರೆ ಅವರೇ ಮೊದಲು ತಮ್ಮ ಮನೆಯವರಿಗೆ ಭಕ್ತಿ ತೋರಿಸುವದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪಕಾರಮಾಡುವದಕ್ಕೂ ಕಲಿತುಕೊಳ್ಳಲಿ.” (1 ತಿಮೊಥೆಯ 5:4) ಪೌಲನು ಗಮನಿಸಿದಂತೆ, ವಯಸ್ಸಾದ ಹೆತ್ತವರ ಕಾಳಜಿವಹಿಸುವುದು, ದೇವ ಭಕ್ತಿಯ ಒಂದು ಅಭಿವ್ಯಕ್ತಿಯಾಗಿದೆ. ಕೇವಲ ಕರ್ತವ್ಯದ ಪ್ರಜ್ಞೆಯಿಂದ ಮಾತ್ರವಲ್ಲ ಆದರೆ ಅವರ ಹೆತ್ತವರಿಗಾಗಿರುವ ಅವರ ಪ್ರೀತಿಯಿಂದಲೇ ನಿಜ ಕ್ರೈಸ್ತರು ಅಂಥ ಕಾಳಜಿಯನ್ನು ಒದಗಿಸುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ, ಒಬ್ಬನ ಕುಟುಂಬಕ್ಕಾಗಿ ಕಾಳಜಿವಹಿಸುವುದರ ಮೇಲೆ ಯೆಹೋವನು ಇಡುವಂಥ ಪ್ರಾಮುಖ್ಯತೆಯನ್ನು ಅವರು ಗಮನಿಸುತ್ತಾರೆ. ಅಗತ್ಯದ ಸಮಯದಲ್ಲಿ ಅವರ ಹೆತ್ತವರಿಗೆ ಸಹಾಯ ಮಾಡಲು ನಿರಾಕರಿಸುವುದು ‘ಕ್ರಿಸ್ತನಂಬಿಕೆಯನ್ನು ತಿರಸ್ಕರಿಸುವುದಕ್ಕೆ’ ಸಮಾನವಾಗಿರುವುದು ಎಂಬ ಒಳ್ಳೆಯ ಅರಿವು ಅವರಿಗೆ ಇದೆ.— 1 ತಿಮೊಥೆಯ 5:8.
13. ದೇವ ಭಕ್ತಿಯನ್ನು ಮನೆಯಲ್ಲಿ ಆಚರಿಸುವುದು ನಿಜವಾದ ಒಂದು ಸವಾಲಾಗಿರಬಹುದು ಯಾಕೆ, ಆದರೆ ಒಬ್ಬರ ಹೆತ್ತವರಿಗಾಗಿ ಕಾಳಜಿವಹಿಸುವುದರಿಂದ ಯಾವ ತೃಪ್ತಿಯು ಫಲಿಸುತ್ತದೆ?
13 ಸರ್ವಸಮ್ಮತವಾಗಿ, ದೇವ ಭಕ್ತಿಯನ್ನು ಮನೆಯಲ್ಲಿ ಆಚರಿಸುವುದು ಯಾವಾಗಲೂ ಸುಲಭವಲ್ಲ. ಗಣನೀಯವಾದ ಅಂತರಗಳಿಂದ ಕುಟುಂಬದ ಸದಸ್ಯರು ಬೇರ್ಪಡಿಸಲ್ಪಟ್ಟಿರಬಹುದು. ಬೆಳೆದ ಮಕ್ಕಳು ತಮ್ಮ ಸ್ವಂತ ಕುಟುಂಬಗಳನ್ನು ಪಾಲಿಸುತ್ತಾ, ಆರ್ಥಿಕವಾಗಿ ಒದ್ದಾಡುತ್ತಿರಬಹುದು. ಒಬ್ಬ ಹೆತ್ತವನಿಗೆ ಅಗತ್ಯವಾಗಿರುವ ಕಾಳಜಿಯ ಸ್ವರೂಪ ಯಾ ಮಟ್ಟವು ಅದನ್ನು ಒದಗಿಸುತ್ತಿರುವವರ ಶಾರೀರಿಕ, ಮಾನಸಿಕ, ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಭಾರವನ್ನು ಹೇರಬಲ್ಲದು. ಆದರೂ, ಒಬ್ಬನ ಹೆತ್ತವರಿಗಾಗಿ ಕಾಳಜಿವಹಿಸುವುದು “ತಕ್ಕದಾದ ಪರಿಹಾರಕ್ಕೆ” ಸಮವಾಗಿದೆ ಎಂದು ತಿಳಿಯುವುದರಲ್ಲಿ ನಿಜವಾದ ತೃಪ್ತಿಯಿರಬಲ್ಲದು ಮಾತ್ರವಲ್ಲ “ಯಾವ ತಂದೆಯಿಂದ ಭೂಪರಲೋಕದಲ್ಲಿರುವ ಪ್ರತಿಜನವೂ ಹೆಸರು ತೆಗೆದುಕೊಳ್ಳುತ್ತದೋ ಆ ತಂದೆಯ” ಯನ್ನು ಕೂಡ ಮೆಚ್ಚಿಸುತ್ತದೆ.—ಎಫೆಸ 3:14, 15.
14, 15. ಒಬ್ಬ ಹೆತ್ತವನಿಗಾಗಿ ಮಕ್ಕಳ ದೇವ ಭಕ್ತಿಯ ಕಾಳಜಿಯ ಒಂದು ಉದಾಹರಣೆಯನ್ನು ತಿಳಿಸಿರಿ.
14 ನಿಜವಾಗಿಯೂ ಹೃದಯ ಸ್ಪರ್ಶಿಸುವ ಒಂದು ಉದಾಹರಣೆಯನ್ನು ಪರಿಗಣಿಸಿರಿ. ಎಲಿಸ್ಲ್ ಮತ್ತು ಅವನ ಐದು ಜನ ಸಹೋದರ ಸಹೋದರಿಯರು ಮನೆಯಲ್ಲಿ ಅವರ ತಂದೆಯನ್ನು ನೋಡಿಕೊಳ್ಳುವುದರಲ್ಲಿ ನಿಜವಾದ ಒಂದು ಪಂಥಾಹ್ವಾನವನ್ನು ಎದುರಿಸುತ್ತಾರೆ. “ಅವರನ್ನು ಸಂಪೂರ್ಣವಾಗಿ ನಿಸ್ಸತ್ವಗೊಳಿಸಿದ ಒಂದು ಧಕ್ಕೆಯನ್ನು 1986 ರಲ್ಲಿ ನನ್ನ ತಂದೆ ಅನುಭವಿಸಿದರು,” ಎಂಬುದಾಗಿ ಎಲಿಸ್ಲ್ ವಿವರಿಸುತ್ತಾನೆ. ಅವರು ಹಾಸಿಗೆ ಹುಣ್ಣನ್ನು ಬೆಳಸಿಕೊಳ್ಳದೆ ಇರುವಂತೆ ಹಾಸಿಗೆಯ ಮೇಲೆ ಅವನ ಸ್ಥಾನವನ್ನು ಕ್ರಮವಾಗಿ ಬದಲಾಯಿಸುವುದರಿಂದ ಅವರಿಗೆ ಸ್ನಾನಮಾಡಿಸುವುದರ ವರೆಗೆ ಹರಡಿರುವ ಅವರ ತಂದೆಯ ಅಗತ್ಯಗಳನ್ನು ನೋಡಿಕೊಳ್ಳುವುದರಲ್ಲಿ ಆರು ಮಕ್ಕಳು ಭಾಗವಹಿಸುತ್ತಾರೆ. “ಅವರಿಗಾಗಿ ನಾವು ಓದುತ್ತೇವೆ, ಅವರೊಂದಿಗೆ ಮಾತಾಡುತ್ತೇವೆ, ಅವರಿಗಾಗಿ ಸಂಗೀತವನ್ನು ನುಡಿಸುತ್ತೇವೆ. ಅವರ ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಕುರಿತು ಅವರಿಗೆ ಅರಿವಿದೆಯೋ ಇಲ್ಲವೋ ಎಂಬ ವಿಷಯದಲ್ಲಿ ನಾವು ನಿಶ್ಚಿತರಾಗಿರುವುದಿಲ್ಲ, ಆದರೆ ಅವರಿಗೆ ಎಲ್ಲದರ ಸಂಪೂರ್ಣ ಅರಿವಿದೆಯೋ ಎಂಬಂತೆ ನಾವು ಅವರನ್ನು ನಡೆಸಿಕೊಳ್ಳುತ್ತೇವೆ.”
15 ಅವರು ಮಾಡುವಂತೆ ಮಕ್ಕಳು ಯಾಕೆ ಅವರ ತಂದೆಗಾಗಿ ಕಾಳಜಿವಹಿಸುತ್ತಾರೆ? ಎಲಿಸ್ಲ್ ಮುಂದುವರಿಸುತ್ತಾನೆ: “ಇಸವಿ 1964 ರಲ್ಲಿ ನನ್ನ ತಾಯಿಯ ಮರಣದ ತರುವಾಯ, ತಂದೆಯು ನಮ್ಮನ್ನು ಒಂಟಿಯಾಗಿಯೇ ಬೆಳಸಿದರು. ಆ ಸಮಯದಲ್ಲಿ, ನಾವು 5 ರಿಂದ 14 ವಯಸ್ಸಿನವರಾಗಿದ್ದೆವು. ಆಗ ನಮಗಾಗಿ ಅವರಿದ್ದರು; ಈಗ ಅವರಿಗಾಗಿ ನಾವು ಇದ್ದೇವೆ.” ಸ್ಪಷ್ಟವಾಗಿಗಿ, ಅಂಥ ಕಾಳಜಿಯನ್ನು ಒದಗಿಸುವುದು ಸುಲಭವಲ್ಲ, ಮತ್ತು ಮಕ್ಕಳು ಕೆಲವೊಮ್ಮೆ ನಿರಾಶೆಗೊಳ್ಳುತ್ತಾರೆ. “ನಮ್ಮ ತಂದೆಯ ಪರಿಸ್ಥಿತಿಯು ತಾತ್ಕಾಲಿಕವಾದ ಸಮಸ್ಯೆಯೆಂದು ನಾವು ಗ್ರಹಿಸುತ್ತೇವೆ,” ಎಂಬುದಾಗಿ ಎಲಿಸ್ಲ್ ಹೇಳುತ್ತಾನೆ. “ನಮ್ಮ ತಂದೆಯು ಉತ್ತಮ ಆರೋಗ್ಯಕ್ಕೆ ಪುನಃ ಸ್ಥಾಪಿಸಲ್ಪಡುವ ಮತ್ತು ನಮ್ಮ ತಾಯಿಯೊಂದಿಗೆ ಪುನಃ ಐಕ್ಯವಾಗಬಲ್ಲ ಸಮಯಕ್ಕೆ ನಾವು ಮುನ್ನೋಡುತ್ತೇವೆ.” (ಯೆಶಾಯ 33:24; ಯೋಹಾನ 5:28, 29) ಖಂಡಿತವಾಗಿಯೂ, ಒಬ್ಬ ಹೆತ್ತವನಿಗಾಗಿ ಇಂಥ ಸಮರ್ಪಿತ ಕಾಳಜಿಯು, ಹೆತ್ತವರನ್ನು ಗೌರವಿಸಲು ಮಕ್ಕಳಿಗೆ ಆಜ್ಞೆಕೊಡುವವನ ಹೃದಯವನ್ನು ಬೆಚ್ಚನೆಗೊಳಿಸತಕ್ಕದ್ದು.c—ಎಫೆಸ 6:1, 2.
ದೇವ ಭಕ್ತಿ ಮತ್ತು ಶುಶ್ರೂಷೆ
16. ನಾವು ಶುಶ್ರೂಷೆಯಲ್ಲಿ ಏನನ್ನು ಮಾಡುತ್ತೇವೊ ಅದರ ಪ್ರಥಮ ಕಾರಣವು ಏನಾಗಿರಬೇಕು?
16 ‘ಅವನನ್ನು ಬಿಡದೆ ಹಿಂಬಾಲಿಸಲು’ ಇರುವ ಯೇಸುವಿನ ಆಮಂತ್ರಣವನ್ನು ನಾವು ಸ್ವೀಕರಿಸುವಾಗ, ರಾಜ್ಯದ ಸುವಾರ್ತೆಯನ್ನು ಸಾರಲು ಮತ್ತು ಶಿಷ್ಯರನ್ನಾಗಿ ಮಾಡುವ ದೇವ ಆದೇಶದ ಕೆಳಗೆ ನಾವು ಬರುತ್ತೇವೆ. (ಮತ್ತಾಯ 16:24; 24:14; 28:19, 20) ಸ್ಪಷ್ಟವಾಗಿಗಿ ಈ “ಕಡೇದಿವಸಗಳ”ಲ್ಲಿ ಶುಶ್ರೂಷೆಯಲ್ಲಿ ಒಂದು ಪಾಲನ್ನು ಹೊಂದಿರುವುದು ಕ್ರಿಸ್ತೀಯ ಹಂಗಾಗಿದೆ. (2 ತಿಮೊಥೆಯ 3:1) ಹಾಗಿದ್ದರೂ ಸಾರುವುದಕ್ಕಾಗಿ ಮತ್ತು ಕಲಿಸುವುದಕ್ಕಾಗಿ ಇರುವ ನಮ್ಮ ಉದ್ದೇಶವು ಕೇವಲ ಒಂದು ಕರ್ತವ್ಯ ಯಾ ಹಂಗಿನ ಭಾವವನ್ನು ಮೀರಿ ಇರಬೇಕು. ಯೆಹೋವನಿಗಾಗಿರುವ ಆಳವಾದ ಪ್ರೀತಿಯು ನಾವು ಶುಶ್ರೂಷೆಯಲ್ಲಿ ಏನನ್ನು ಮಾಡುತ್ತೇವೊ ಮತ್ತು ಎಷ್ಟನ್ನು ಮಾಡುತ್ತೇವೊ ಅದಕ್ಕಾಗಿ ಪ್ರಥಮ ಕಾರಣವಾಗಿರಬೇಕು. “ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು” ಎಂಬುದಾಗಿ ಯೇಸು ಹೇಳಿದನು. (ಮತ್ತಾಯ 12:34) ಹೌದು, ನಮ್ಮ ಹೃದಯಗಳು ಯೆಹೋವನಿಗಾಗಿ ಪ್ರೀತಿಯಿಂದ ತುಂಬಿಹರಿಯುವಾಗ, ಇತರರಿಗೆ ಆತನ ಕುರಿತು ಸಾಕ್ಷಿನೀಡಲು ನಾವು ಒತ್ತಾಯಿಸಲ್ಪಡುತ್ತೇವೆ. ದೇವರಿಗಾಗಿ ಪ್ರೀತಿಯು ನಮ್ಮ ಉದ್ದೇಶವಾಗಿದ್ದಾಗ, ನಮ್ಮ ಶುಶ್ರೂಷೆಯು ನಮ್ಮ ದೇವ ಭಕ್ತಿಯ ಅರ್ಥಪೂರ್ಣ ಅಭಿವ್ಯಕ್ತಿಯಾಗಿದೆ.
17. ಶುಶ್ರೂಷೆಗಾಗಿ ಸರಿಯಾದ ಉದ್ದೇಶವನ್ನು ನಾವು ಹೇಗೆ ಬೆಳಸಬಹುದು?
17 ಶುಶ್ರೂಷೆಗಾಗಿ ಸರಿಯಾದ ಉದ್ದೇಶವನ್ನು ನಾವು ಹೇಗೆ ಬೆಳಸಬಹುದು? ಆತನನ್ನು ಪ್ರೀತಿಸುವುದಕ್ಕಾಗಿ ಯೆಹೋವನು ನಮಗೆ ಕೊಟ್ಟಿರುವ ಮೂರು ಕಾರಣಗಳ ಕುರಿತು ಗಣ್ಯಮಾಡುವಂತೆ ಚಿಂತನೆ ಮಾಡಿರಿ. (1) ನಮಗಾಗಿ ಆತನು ಏನನ್ನು ಈಗಾಗಲೇ ಮಾಡಿದ್ದಾನೊ ಅದಕ್ಕಾಗಿ ನಾವು ಯೆಹೋವನನ್ನು ಪ್ರೀತಿಸುತ್ತೇವೆ. ಪ್ರಾಯಶ್ಚಿತ ಬಲಿಯನ್ನು ಒದಗಿಸುವುದಕ್ಕಿಂತ ಹೆಚ್ಚಿನ ಪ್ರೀತಿಯನ್ನು ಆತನು ತೋರಿಸಲು ಸಾಧ್ಯವಾಗುತ್ತಿರಲಿಲ್ಲ. (ಮತ್ತಾಯ 20:28; ಯೋಹಾನ 15:13) (2) ಆತನು ನಮಗಾಗಿ ಈಗ ಏನನ್ನು ಮಾಡುತ್ತಿದ್ದಾನೊ ಅದಕ್ಕಾಗಿ ನಾವು ಯೆಹೋವನನ್ನು ಪ್ರೀತಿಸುತ್ತೇವೆ. ನಮ್ಮ ಪ್ರಾರ್ಥನೆಗಳನ್ನು ಉತ್ತರಿಸುವ ಯೆಹೋವನೊಂದಿಗೆ ನಮಗೆ ಮಾತಾಡುವ ಸ್ವಾತಂತ್ರ್ಯವಿದೆ. (ಕೀರ್ತನೆ 65:2; ಇಬ್ರಿಯ 4:14-16) ನಾವು ರಾಜ್ಯದ ಅಭಿರುಚಿಗಳಿಗೆ ಪ್ರಥಮತೆಯನ್ನು ಕೊಡುವಾಗ, ನಾವು ಜೀವನದ ಅವಶ್ಯಕತೆಗಳಲ್ಲಿ ಆನಂದಿಸುತ್ತೇವೆ. (ಮತ್ತಾಯ 6:25-33) ನಾವು ಎದುರಿಸುವ ಸಮಸ್ಯೆಗಳೊಂದಿಗೆ ನಿಭಾಯಿಸಲು ನಮಗೆ ಸಹಾಯ ಮಾಡುವ ಆತ್ಮಿಕ ಆಹಾರದ ಏಕಪ್ರಕಾರದ ಸಂಗ್ರಹವನ್ನು ನಾವು ಪಡೆಯುತ್ತೇವೆ. (ಮತ್ತಾಯ 24:45) ಲೋಕದ ಉಳಿದ ಭಾಗದಿಂದ ನಮ್ಮನ್ನು ನಿಜವಾಗಿಯೂ ಬೇರೆಯಾಗಿ ಇಡುವ ಲೋಕವ್ಯಾಪಕ ಕ್ರಿಸ್ತೀಯ ಸಹೋದರತ್ವದ ಒಂದು ಭಾಗವಾಗಿರುವುದರ ಆಶೀರ್ವಾದವು ನಮಗಿದೆ. (1 ಪೇತ್ರ 2:17) (3) ಆತನು ನಮಗಾಗಿ ಇನ್ನೂ ಏನನ್ನು ಮಾಡಲಿದ್ದಾನೊ ಅದಕ್ಕಾಗಿ ಕೂಡ ನಾವು ಯೆಹೋವನನ್ನು ಪ್ರೀತಿಸುತ್ತೇವೆ. ಆತನ ಪ್ರೀತಿಯ ಕಾರಣ, ಭವಿಷ್ಯದಲ್ಲಿ ನಿತ್ಯಜೀವದ ಮೇಲೆ—“ವಾಸ್ತವವಾದ ಜೀವನದ ಮೇಲೆ ದೃಢವಾದ ಹಿಡಿತ”—ನಮಗಿದೆ. (1 ತಿಮೊಥೆಯ 6:12, 19) ನಮ್ಮ ಪರವಾಗಿ ಯೆಹೋವನ ಪ್ರೀತಿಯನ್ನು ನಾವು ಪರಿಗಣಿಸುವಾಗ, ಆತನ ಮತ್ತು ಆತನ ಅಮೂಲ್ಯವಾದ ಉದ್ದೇಶಗಳ ಕುರಿತು ಇತರರಿಗೆ ಹೇಳುವುದರಲ್ಲಿ ಸಮರ್ಪಿತವಾದ ಪಾಲನ್ನು ಹೊಂದಿರುವಂತೆ ಖಂಡಿತವಾಗಿ ನಮ್ಮ ಹೃದಯಗಳು ನಮ್ಮನ್ನು ಪ್ರೇರಿಸುವುವು! ಶುಶ್ರೂಷೆಯಲ್ಲಿ ನಾವು ಏನನ್ನು ಮಾಡಬೇಕು ಯಾ ಎಷ್ಟನ್ನು ಮಾಡಬೇಕು ಎಂಬುದಾಗಿ ಇತರರು ನಮಗೆ ಹೇಳುವಂತಿರುವುದಿಲ್ಲ. ನಾವು ಏನನ್ನು ಮಾಡಬಲ್ಲೆವೂ ಅದನ್ನು ಮಾಡುವಂತೆ ನಮ್ಮ ಹೃದಯಗಳು ನಮ್ಮನ್ನು ಪ್ರೇರಿಸುವುವು.
18, 19. ಶುಶ್ರೂಷೆಯಲ್ಲಿ ಭಾಗವಹಿಸಲಿಕ್ಕಾಗಿ ಒಬ್ಬಾಕೆ ಸಹೋದರಿಯು ಯಾವ ಅಡಿಯ್ಡನ್ನು ಜಯಿಸಿದಳು?
18 ಪಂಥಾಹ್ವಾನವಾಗಿರುವ ಪರಿಸ್ಥಿತಿಗಳ ಎದುರಿನಲ್ಲಿಯೂ ಕೂಡ, ದೇವ ಭಕ್ತಿಯಿಂದ ಪ್ರಚೋದಿಸಲ್ಪಟ್ಟ ಒಂದು ಹೃದಯವು ಮಾತಾಡುವಂತೆ ಒತ್ತಾಯಿಸಲ್ಪಡುವುದು. (ಹೋಲಿಸಿ ಯೆರೆಮೀಯ 20:9.) ಇದು ಅತಿ ನಾಚಿಕೆ ಸ್ವಭಾವದ ಕ್ರೈಸ್ತ ಸ್ತ್ರೀ, ಸೆಲ್ಟಳ ವಿಷಯದಿಂದ ತೋರಿಸಲ್ಪಟ್ಟಿದೆ. ಅವಳು ಮೊದಲು ಬೈಬಲನ್ನು ಅಭ್ಯಾಸಿಸಲು ಆರಂಭಿಸಿದಾಗ, ‘ನಾನು ಮನೆಯಿಂದ ಮನೆಗೆ ಎಂದೂ ಹೋಗಲು ಸಾಧ್ಯವಿಲ್ಲ!’ ಎಂಬುದಾಗಿ ಅವಳು ಯೋಚಿಸಿದಳು. ಅವಳು ವಿವರಿಸುವುದು: “ನಾನು ಯಾವಾಗಲೂ ಬಹಳ ಸುಮ್ಮನಾಗಿರುತ್ತಿದ್ದೆ. ಒಂದು ಸಂಭಾಷಣೆಯನ್ನು ಆರಂಭಿಸಲು ಇತರರನ್ನು ಸಮೀಪಿಸಲು ನನಗೆ ಎಂದೂ ಸಾಧ್ಯವಾಗುತ್ತಿರಲಿಲ್ಲ.” ಅವಳು ಅಭ್ಯಾಸವನ್ನು ಮುಂದುವರಿಸಿದಂತೆ, ಯೆಹೋವನಿಗಾಗಿ ಅವಳ ಪ್ರೀತಿಯು ಬೆಳೆಯಿತು, ಮತ್ತು ಆತನ ಕುರಿತು ಇತರರೊಂದಿಗೆ ಮಾತಾಡಲು ಅವಳು ಕಡು ಬಯಕೆಯನ್ನು ವಿಕಸಿಸಿಕೊಂಡಳು. “ನನ್ನ ಬೈಬಲ್ ಶಿಕ್ಷಕಿಗೆ ಹೀಗೆ ನಾನು ಹೇಳಿದ್ದು ನನಗೆ ನೆನಪಿದೆ, ‘ನಾನು ಮಾತಾಡಲು ಬಹಳವಾಗಿ ಬಯಸುತ್ತೇನೆ, ಆದರೆ ಅದು ನನಗೆ ಸಾಧ್ಯವಿಲ್ಲ, ಅದು ನನ್ನನ್ನು ಕಾಡಿಸುತ್ತಿದೆ.’ ಅವಳು ನನಗೆ ಏನು ಹೇಳಿದಳೊ ಅದನ್ನು ನಾನು ಎಂದೂ ಮರೆಯೆನು: ‘ಸೆಲ್ಟ, ನೀನು ಮಾತಾಡಲು ಬಯಸುತ್ತಿ ಎಂಬ ಸಂಗತಿಗಾಗಿ ಕೃತಜ್ಞತೆವುಳ್ಳವಳಾಗಿರು.’”
19 ಬೇಗನೆ, ಸೆಲ್ಟ ತನ್ನ ಪಕ್ಕದ ಮನೆಯ ನೆರೆಯವಳಿಗೆ ಸಾಕ್ಷಿನೀಡುವುದನ್ನು ತಾನಾಗಿಯೇ ಕಂಡುಕೊಂಡಳು. ಅನಂತರ ಅವಳಿಗೆ ಅದ್ಭುತವಾದ ಒಂದು ಹೆಜ್ಜೆ—ಪ್ರಥಮ ಬಾರಿಗೆ ಅವಳು ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಭಾಗವಹಿಸುವಿಕೆ—ಅವಳು ತೆಗೆದುಕೊಂಡಳು. (ಅ. ಕೃತ್ಯಗಳು 20:20, 21) ಅವಳು ಜ್ಞಾಪಿಸಿಕೊಳ್ಳುವುದು: “ನಾನು ನನ್ನ ಪ್ರಸಂಗವನ್ನು ಬರೆದಿಟ್ಟುಕೊಂಡಿದ್ದೆ. ಆದರೆ ನಾನು ಎಷ್ಟು ಗಾಬರಿಗೊಂಡಿದ್ದೆ ಎಂದರೆ ಅದನ್ನು ನನ್ನ ಮುಂದೆ ಇಟ್ಟುಕೊಂಡಿದ್ದರೂ ಕೂಡ, ನನ್ನ ಟಿಪ್ಪಣಿಗಳನ್ನು ನೋಡಲು ಕೂಡ ನಾನು ಹೆದರಿದ್ದೆ!” ಈಗ, ಸುಮಾರು 35 ವರ್ಷಗಳ ನಂತರವೂ, ಸ್ಟೇಲ್ಲಾ ಇನ್ನೂ ನಾಚಿಕೆಸ್ವಭಾವದವಳಾಗಿದ್ದಾಳೆ. ಆದರೂ, ಅವಳು ಕ್ಷೇತ್ರ ಶುಶ್ರೂಷೆಯನ್ನು ಪ್ರೀತಿಸುತ್ತಾಳೆ ಮತ್ತು ಅದರಲ್ಲಿ ಅರ್ಥಪೂರ್ಣವಾದ ಪಾಲನ್ನು ಹೊಂದಿರಲು ಮುಂದುವರಿದಿದ್ದಾಳೆ.
20. ಹಿಂಸೆ ಯಾ ಸೆರೆಮನೆವಾಸವೂ ಕೂಡ ಯೆಹೋವನ ಸಮರ್ಪಿತ ಸಾಕ್ಷಿಗಳ ಬಾಯಿಗಳನ್ನು ಮುಚ್ಚಲು ಆಗುವುದಿಲ್ಲವೆಂದು ಯಾವ ಉದಾಹರಣೆಯು ತೋರಿಸುತ್ತದೆ?
20 ಯೆಹೋವನ ಸಮರ್ಪಿತ ಸಾಕ್ಷಿಗಳ ಬಾಯಿಯನ್ನು ಹಿಂಸೆ ಯಾ ಸೆರೆಮನೆವಾಸವಾಗಲಿ ಮುಚ್ಚಲು ಸಾಧ್ಯವಿಲ್ಲ. ಜರ್ಮನಿಯ ಅರ್ನೆಸ್ಟ್ ಮತ್ತು ಹಿಲ್ಡ್ಗಾರ್ಟ್ ಜೇಲಿಗಾರ್ರ ಉದಾಹರಣೆಯನ್ನು ಪರಿಗಣಿಸಿರಿ. ಅವರ ನಂಬಿಕೆಯ ಕಾರಣವಾಗಿ, ಅವರ ನಡುವೆ ಅವರು 40 ಕ್ಕಿಂತ ಹೆಚ್ಚಿನ ವರ್ಷಗಳನ್ನು ನಾಜೀ ಕೂಟಶಿಬಿರಗಳಲ್ಲಿ ಮತ್ತು ಕಮ್ಯೂನಿಸ್ಟ್ ಸೆರೆಮನೆಗಳಲ್ಲಿ ಕಳೆದಿದ್ದಾರೆ. ಸೆರೆಮನೆಯಲ್ಲಿಯೂ ಕೂಡ, ಬೇರೆ ಕೈದಿಗಳಿಗೆ ಸಾಕ್ಷಿನೀಡುವುದರಲ್ಲಿ ಪಟ್ಟುಹಿಡಿದರು. ಹಿಲ್ಡ್ಗಾರ್ಟ್ ಜ್ಞಾಪಿಸಿಕೊಂಡದ್ದು: “ಸೆರೆಮನೆಯ ಅಧಿಕಾರಿಗಳು ನನ್ನನ್ನು ವಿಶೇಷವಾಗಿ ಅಪಾಯಕಾರಿ ಎಂದು ವರ್ಗೀಕರಿಸಿದರು ಯಾಕಂದರೆ, ಒಬ್ಬಾಕೆ ಕಾವಲಗಾರ್ತಿಯು ಹೇಳಿದಂತೆ, ಇಡೀ ದಿನವೆಲ್ಲಾ ನಾನು ಬೈಬಲಿನ ಕುರಿತು ಮಾತಾಡಿದೆ. ಆದುದರಿಂದ ನನ್ನನ್ನು ತಳಮನೆಯ ಕೋಣೆಯಲ್ಲಿ ಹಾಕಿದರು.” ಅವರಿಗೆ ಕೊನೆಯದಾಗಿ ಅವರ ಸ್ವಾತಂತ್ರ್ಯವನ್ನು ಕೊಟ್ಟ ತರುವಾಯ, ಸಹೋದರ ಮತ್ತು ಸಹೋದರಿ ಜೇಲಿಗಾರ್ ಇಬ್ಬರೂ ತಮ್ಮ ಪೂರ್ಣ ಸಮಯವನ್ನು ಕ್ರೈಸ್ತ ಶುಶ್ರೂಷೆಗೆ ಸಮರ್ಪಿಸಿದರು. ತಮ್ಮ ಮರಣದ ವರೆಗೆ, ಸಹೋದರ ಜೇಲಿಗಾರ್ 1985 ರ ತನಕ ಮತ್ತು ಅವರ ಹೆಂಡತಿ 1992ರ ತನಕ ನಂಬಿಗಸತ್ತೆಯಿಂದ ಸೇವೆಸಲ್ಲಿಸಿದರು.
21. ನಮ್ಮ ತಾಳ್ಮೆಗೆ ದೇವ ಭಕ್ತಿಯನ್ನು ಕೂಡಿಸಲು ನಾವು ಏನನ್ನು ಮಾಡಬೇಕು?
21 ದೇವರ ವಾಕ್ಯವನ್ನು ಶ್ರದ್ಧೆಯಿಂದ ಅಭ್ಯಾಸಿಸಲು ಮತ್ತು ನಾವು ಏನನ್ನು ಕಲಿಯುತ್ತೇವೊ ಅದನ್ನು ಗಣ್ಯತಾಪೂರ್ವಕವಾಗಿ ಮನನ ಮಾಡಲು ಸಮಯವನ್ನು ತೆಗೆದುಕೊಳ್ಳುವ ಮೂಲಕ, ನಾವು ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ನಿಷ್ಕೃಷ್ಟವಾದ ಜ್ಞಾನದಲ್ಲಿ ಬೆಳೆಯುವೆವು. ಇದು, ಪೂರ್ಣ ಪ್ರಮಾಣದಲ್ಲಿ ಆ ಅಮೂಲ್ಯವಾದ ಗುಣ—ದೇವ ಭಕ್ತಿಯನ್ನು ನಾವು ಸಂಪಾದಿಸುವುದರಲ್ಲಿ ಫಲಿಸುವುದು. ಕ್ರೈಸ್ತರೋಪಾದಿ ನಮ್ಮ ಮೇಲೆ ಬರುವ ವಿಭಿನ್ನ ಕಷ್ಟಗಳನ್ನು ತಾಳಿಕೊಳ್ಳಲು ದೇವ ಭಕ್ತಿಯನ್ನು ಬಿಟ್ಟು ಬೇರೆ ಮಾರ್ಗವಿಲ್ಲ. ‘ನಮ್ಮ ನಂಬಿಕೆಗೆ ತಾಳ್ಮೆಯನ್ನು ಮತ್ತು ನಮ್ಮ ತಾಳ್ಮೆಗೆ ಭಕ್ತಿಯನ್ನು ಕೂಡಿಸಲು’ ಮುಂದುವರಿಯುತ್ತಾ, ನಾವು ಅಪೊಸ್ತಲ ಪೇತ್ರನ ಬುದ್ಧಿವಾದವನ್ನು ಅನುಸರಿಸೋಣ.—2 ಪೇತ್ರ 1:5, 6.
[ಅಧ್ಯಯನ ಪ್ರಶ್ನೆಗಳು]
a ಯುಸಬಿಯಾದ ಸಂಬಂಧದಲ್ಲಿ, ವಿಲಿಯಂ ಬಾರ್ಕ್ಲೇ ಗಮನಿಸುವುದು: “ಶಬ್ದದ ಸೆಬ್- ಭಾಗವೇ [ಮೂಲ] ಪೂಜ್ಯ ಭಾವನೆ ಯಾ ಆರಾಧನೆ ಎಂಬ ಅರ್ಥವನ್ನು ಕೊಡುತ್ತದೆ. ಸೂಕ್ತ ಕ್ಕಾಗಿ ಇರುವ ಗ್ರೀಕ್ ಪದವು ಯು ಆಗಿದೆ; ಆದುದರಿಂದ, ಯುಸಬಿಯಾ ಆರಾಧನೆಯಾಗಿದೆ, ಸೂಕ್ತವಾಗಿ ಮತ್ತು ಸರಿಯಾಗಿ ಕೊಡಲಾದ ಭಕ್ತಿಯಾಗಿದೆ.”—ನ್ಯೂ ಟೆಸ್ಟಮೆಂಟ್ ವರ್ಡ್ಸ್.
b ದೇವರ ವಾಕ್ಯದ ನಮ್ಮ ಜ್ಞಾನವನ್ನು ಅಧಿಕಗೊಳಿಸಲು ಹೇಗೆ ಅಭ್ಯಾಸಿಸಬೇಕು ಎಂಬುದರ ಕುರಿತು ಚರ್ಚೆಗಾಗಿ, ಆಗಸ್ಟ್ 15, 1993ರ ಕಾವಲಿನಬುರುಜು, ಪುಟಗಳು 12-17 ನೋಡಿರಿ.
c ವೃದ್ಧ ಹೆತ್ತವರ ಕಡೆಗೆ ದೇವ ಭಕ್ತಿಯನ್ನು ಆಚರಿಸುವುದರ ಕುರಿತು ಒಂದು ಪೂರ್ಣ ಚರ್ಚೆಗಾಗಿ, ದಶಂಬರ 1, 1987ರ ಕಾವಲಿನಬುರುಜು ನೋಡಿರಿ.
ನಿಮ್ಮ ಉತ್ತರವೇನು?
▫ ದೇವ ಭಕ್ತಿ ಎಂದರೇನು?
▫ ತಾಳ್ಮೆ ಮತ್ತು ದೇವ ಭಕ್ತಿಯ ನಡುವೆ ಇರುವ ಸಂಬಂಧವೇನು?
▫ ದೇವ ಭಕ್ತಿಯನ್ನು ಸಂಪಾದಿಸುವುದರ ಕೀಲಿ ಕೈ ಏನಾಗಿದೆ?
▫ ಕ್ರೈಸ್ತನೊಬ್ಬನು ದೇವ ಭಕ್ತಿಯನ್ನು ಮನೆಯಲ್ಲಿ ಹೇಗೆ ಆಚರಿಸಬಹುದು?
▫ ನಾವು ಶುಶ್ರೂಷೆಯಲ್ಲಿ ಏನನ್ನು ಮಾಡುತ್ತೇವೊ ಅದರ ಪ್ರಥಮ ಕಾರಣ ಏನಾಗಿರಬೇಕು?
[ಪುಟ 18 ರಲ್ಲಿರುವ ಚಿತ್ರ]
ತಾಳ್ಮೆ ಮತ್ತು ಭಕ್ತಿಯು ರೆವನ್ಸ್ಬ್ರಕ್ನ ನಾಜೀ ಕೂಟಶಿಬಿರದಲ್ಲಿ ಬಂಧಿತರಾದ ಯೆಹೋವನ ಸಾಕ್ಷಿಗಳಿಂದ ಪ್ರದರ್ಶಿಸಲ್ಪಟ್ಟಿತು