ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ಆಗಸ್ಟ್ 5-11
ಬೈಬಲಿನಲ್ಲಿರುವ ರತ್ನಗಳು | 2 ತಿಮೊಥೆಯ 1-4
“ದೇವರು ನಮಗೆ ಹೇಡಿತನದ ಮನೋಭಾವವನ್ನು ಕೊಡಲಿಲ್ಲ”
(2 ತಿಮೊಥೆಯ 1:7) ದೇವರು ನಮಗೆ ಹೇಡಿತನದ ಮನೋವೃತ್ತಿಯನ್ನು ಕೊಡದೆ ಶಕ್ತಿ, ಪ್ರೀತಿ ಮತ್ತು ಸ್ವಸ್ಥಬುದ್ಧಿಯ ಮನೋವೃತ್ತಿಯನ್ನು ಕೊಟ್ಟಿದ್ದಾನೆ.
w09 5/15 ಪುಟ 15 ಪ್ಯಾರ 9
ಯುವಜನರೇ, ನಿಮ್ಮ ಅಭಿವೃದ್ಧಿಯನ್ನು ಪ್ರಕಟಪಡಿಸಿ
9 ತಿಮೊಥೆಯನಿಗೆ ಸಹಾಯ ಮಾಡಲು ಪೌಲನು ಸಮಯಾನಂತರ ಅವನಿಗೆ ನೆನಪಿಸಿದ್ದು: “ದೇವರು ನಮಗೆ ಹೇಡಿತನದ ಮನೋವೃತ್ತಿಯನ್ನು ಕೊಡದೆ ಶಕ್ತಿ, ಪ್ರೀತಿ ಮತ್ತು ಸ್ವಸ್ಥಬುದ್ಧಿಯ ಮನೋವೃತ್ತಿಯನ್ನು ಕೊಟ್ಟಿದ್ದಾನೆ.” (2 ತಿಮೊ. 1:7) “ಸ್ವಸ್ಥಬುದ್ಧಿ”ಯನ್ನು ಹೊಂದಿರುವುದರ ಅರ್ಥ ವಿವೇಚನೆಯಿಂದ ಯೋಚಿಸಲು ಮತ್ತು ತರ್ಕಿಸಲು ಶಕ್ತರಾಗಿರುವುದಾಗಿದೆ. ಇದರಲ್ಲಿ, ಎಲ್ಲವನ್ನು ಅಂದರೆ ಸನ್ನಿವೇಶ ನಿಮಗೆ ಇಷ್ಟವಾಗಲಿ ಇಲ್ಲದಿರಲಿ ಅದನ್ನು ಎದುರಿಸುವ ಸಾಮರ್ಥ್ಯವು ಒಳಗೂಡಿದೆ. ಕೆಲವು ಅಪ್ರೌಢ ಯುವ ಜನರು ಹೇಡಿತನದ ಮನೋವೃತ್ತಿಯನ್ನು ತೋರಿಸುತ್ತಾ, ಅತಿಯಾದ ನಿದ್ದೆ, ವಿಪರೀತ ಟಿ.ವಿ. ವೀಕ್ಷಣೆ, ಮಾದಕ ವಸ್ತು ಇಲ್ಲವೇ ಅಮಲೌಷಧಗಳ ದುರುಪಯೋಗ, ಯಾವಾಗಲೂ ಪಾರ್ಟಿಗಳಿಗೆ ಹೋಗುವ ಅಥವಾ ಲೈಂಗಿಕ ಅನೈತಿಕತೆಯಲ್ಲಿ ತೊಡಗುವ ಮೂಲಕ ಕಷ್ಟಕರ ಸನ್ನಿವೇಶಗಳ ಒತ್ತಡವನ್ನು ದೂರಮಾಡಲು ಪ್ರಯತ್ನಿಸುತ್ತಾರೆ. ಕ್ರೈಸ್ತರನ್ನಾದರೋ, “ಭಕ್ತಿಹೀನತೆಯನ್ನೂ ಲೌಕಿಕ ಆಶೆಗಳನ್ನೂ ವಿಸರ್ಜಿಸಿ ಈ ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ ಸ್ವಸ್ಥಬುದ್ಧಿಯಿಂದಲೂ ನೀತಿಯಿಂದಲೂ ದೇವಭಕ್ತಿಯಿಂದಲೂ ಜೀವಿಸುವಂತೆ”ಉತ್ತೇಜಿಸಲಾಗಿದೆ.—ತೀತ 2:12.
(2 ತಿಮೊಥೆಯ 1:8) ಆದುದರಿಂದ ನಮ್ಮ ಕರ್ತನ ಕುರಿತು ಹೇಳುವ ಸಾಕ್ಷಿಯ ವಿಷಯವಾಗಿಯೂ ಅವನ ನಿಮಿತ್ತವಾಗಿ ಸೆರೆಯವನಾದ ನನ್ನ ವಿಷಯವಾಗಿಯೂ ನೀನು ನಾಚಿಕೆಪಡದೆ ದೇವರ ಶಕ್ತಿಗನುಸಾರ ಸುವಾರ್ತೆಗೋಸ್ಕರ ಕಷ್ಟವನ್ನು ಅನುಭವಿಸು.
w03 3/1 ಪುಟ 9-10 ಪ್ಯಾರ 7
‘ಸ್ಥಿರಚಿತ್ತನಾಗಿರು, ಧೈರ್ಯದಿಂದಿರು!’
7 ತಿಮೊಥೆಯನಿಗೆ ಬರೆದ ಪತ್ರದಲ್ಲಿ ಪೌಲನಂದದ್ದು: ‘ದೇವರು ನಮಗೆ ಕೊಟ್ಟಿರುವ ಆತ್ಮವು ಬಲದ . . . ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ. ಆದದರಿಂದ ನೀನು ನಮ್ಮ ಕರ್ತನನ್ನು ಕುರಿತು ಹೇಳುವ ಸಾಕ್ಷಿಯ ವಿಷಯದಲ್ಲಿ ನಾಚಿಕೆಪಡದಿರು.’ (2 ತಿಮೊಥೆಯ 1: 7, 8; ಮಾರ್ಕ 8:38) ಈ ಮಾತುಗಳನ್ನು ಓದಿದ ಮೇಲೆ ನಾವು ನಮ್ಮನ್ನು ಹೀಗೆ ಕೇಳಿಕೊಳ್ಳಬಹುದು: ‘ನನ್ನ ಧಾರ್ಮಿಕ ನಂಬಿಕೆಗಳ ಕುರಿತು ನಾನು ನಾಚಿಕೆಪಡುತ್ತೇನೋ ಅಥವಾ ನಾನು ಧೈರ್ಯಶಾಲಿಯಾಗಿದ್ದೇನೋ? ನಾನು ಕೆಲಸ ಮಾಡುವ ಸ್ಥಳದಲ್ಲಿ (ಅಥವಾ ಶಾಲೆಯಲ್ಲಿ) ನನ್ನ ಸುತ್ತಮುತ್ತಲಿರುವವರಿಗೆ ನಾನು ಒಬ್ಬ ಯೆಹೋವನ ಸಾಕ್ಷಿಯಾಗಿದ್ದೇನೆಂದು ಹೇಳುತ್ತೇನೊ ಇಲ್ಲವೆ ಆ ನಿಜತ್ವವನ್ನು ಮುಚ್ಚಿಡಲು ಪ್ರಯತ್ನಿಸುತ್ತೇನೊ? ಇತರರಿಗಿಂತ ಭಿನ್ನನಾಗಿರಲು ನನಗೆ ನಾಚಿಕೆಯಾಗುತ್ತದೊ ಇಲ್ಲವೆ, ಯೆಹೋವನೊಂದಿಗೆ ನನಗಿರುವ ಸಂಬಂಧದಿಂದಾಗಿ, ಭಿನ್ನನಾಗಿರುವುದರಲ್ಲಿ ಹೆಮ್ಮೆಪಡುತ್ತೇನೊ?’ ಸುವಾರ್ತೆಯನ್ನು ಸಾರುವ ವಿಷಯದಲ್ಲಿ ಯಾರಿಗಾದರೂ ಹೆದರಿಕೆಯ ಭಾವನೆಗಳಿರುವುದಾದರೆ ಅಥವಾ ಜನಪ್ರಿಯವಲ್ಲದ ಒಂದು ನಿಲುವನ್ನು ತೆಗೆದುಕೊಳ್ಳುವುದರಲ್ಲಿ ನಕಾರಾತ್ಮಕ ಭಾವವಿರುವುದಾದರೆ, ಯೆಹೋವನು ಯೆಹೋಶುವನಿಗೆ ಕೊಟ್ಟ ಈ ಬುದ್ಧಿವಾದವನ್ನು ಅವನು ಜ್ಞಾಪಕಕ್ಕೆ ತರಲಿ: “ಸ್ಥಿರಚಿತ್ತನಾಗಿರು, ಧೈರ್ಯದಿಂದಿರು.” ಈ ಮಾತನ್ನು ಎಂದಿಗೂ ಮರೆಯದಿರಿ, ಅದೇನೆಂದರೆ—ನಮ್ಮ ಸಹೋದ್ಯೋಗಿಗಳ ಅಥವಾ ಸಹಪಾಠಿಗಳ ಅಭಿಪ್ರಾಯವಲ್ಲ, ಬದಲಾಗಿ ಯೆಹೋವನ ಮತ್ತು ಯೇಸು ಕ್ರಿಸ್ತನ ದೃಷ್ಟಿಕೋನವೇ ಮಹತ್ವಪೂರ್ಣವಾಗಿದೆ.—ಗಲಾತ್ಯ 1:10.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(2 ತಿಮೊಥೆಯ 2:3, 4) ಕ್ರಿಸ್ತ ಯೇಸುವಿನ ಒಳ್ಳೇ ಸೈನಿಕನಂತೆ ಕಷ್ಟವನ್ನು ಅನುಭವಿಸುವುದರಲ್ಲಿ ನಿನ್ನ ಭಾಗವನ್ನು ವಹಿಸಿಕೊ. 4 ಸೈನಿಕನಾಗಿ ಸೇವೆಸಲ್ಲಿಸುತ್ತಿರುವ ಯಾವನೂ ತನ್ನನ್ನು ಸೈನಿಕನಾಗಿ ನೇಮಿಸಿಕೊಂಡವನ ಮೆಚ್ಚಿಗೆಯನ್ನು ಪಡೆಯಲಿಕ್ಕಾಗಿ ಜೀವನದ ವಾಣಿಜ್ಯ ವ್ಯವಹಾರಗಳಲ್ಲಿ ತನ್ನನ್ನು ಒಳಗೂಡಿಸಿಕೊಳ್ಳುವುದಿಲ್ಲ.
w17 ಜುಲೈ ಪುಟ 10 ಪ್ಯಾರ 13
ನಿಜವಾದ ಐಶ್ವರ್ಯವನ್ನು ಸಂಪಾದಿಸಿ
13 ತಿಮೊಥೆಯ ತುಂಬ ನಂಬಿಕೆಯಿದ್ದ ವ್ಯಕ್ತಿ. ಅವನನ್ನು “ಕ್ರಿಸ್ತ ಯೇಸುವಿನ ಒಳ್ಳೇ ಸೈನಿಕ” ಎಂದು ಕರೆದ ಮೇಲೆ ಪೌಲನು ಅವನಿಗೆ ಹೇಳಿದ್ದು: “ಸೈನಿಕನಾಗಿ ಸೇವೆಸಲ್ಲಿಸುತ್ತಿರುವ ಯಾವನೂ ತನ್ನನ್ನು ಸೈನಿಕನಾಗಿ ನೇಮಿಸಿಕೊಂಡವನ ಮೆಚ್ಚಿಗೆಯನ್ನು ಪಡೆಯಲಿಕ್ಕಾಗಿ ಜೀವನದ ವಾಣಿಜ್ಯ ವ್ಯವಹಾರಗಳಲ್ಲಿ ತನ್ನನ್ನು ಒಳಗೂಡಿಸಿಕೊಳ್ಳುವುದಿಲ್ಲ.” (2ತಿಮೊ. 2:3, 4) ಈಗ ಇರುವ ಯೇಸುವಿನ ಹಿಂಬಾಲಕರು, 10 ಲಕ್ಷಕ್ಕಿಂತ ಹೆಚ್ಚಿನ ಪೂರ್ಣ ಸಮಯದ ಸೇವಕರು ಸಹ, ಪೌಲನ ಸಲಹೆಯನ್ನು ಪಾಲಿಸಲು ತಮ್ಮಿಂದಾದ ಎಲ್ಲ ಪ್ರಯತ್ನ ಮಾಡುತ್ತಾರೆ. ಅತಿಯಾಸೆ ತುಂಬಿರುವ ಈ ಲೋಕ ತಮ್ಮ ಮುಂದಿಡುವ ಆಕರ್ಷಕ ಜಾಹೀರಾತುಗಳ ಮೋಡಿಗೆ ಅವರು ಬಲಿಬೀಳುವುದಿಲ್ಲ. “ಸಾಲಗಾರನು ಸಾಲಕೊಟ್ಟವನಿಗೆ ಸೇವಕ” ಎಂಬ ತತ್ವವನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ. (ಜ್ಞಾನೋ. 22:7) ಈ ಲೋಕದ ವಾಣಿಜ್ಯ ವ್ಯವಸ್ಥೆಯಲ್ಲಿ ನಮ್ಮ ಸಮಯ ಶಕ್ತಿಯನ್ನೆಲ್ಲಾ ವ್ಯಯಿಸಬೇಕೆಂದು ಸೈತಾನನು ಬಯಸುತ್ತಾನೆ. ಕೆಲವು ಜನರು ಮನೆ, ಕಾರು, ವಿದ್ಯಾಭ್ಯಾಸ ಅಥವಾ ಬರೀ ಮದುವೆಗೆಂದು ಭಾರಿ ಮೊತ್ತದ ಸಾಲ ಮಾಡುತ್ತಾರೆ. ಈ ವಿಷಯದಲ್ಲಿ ನಾವು ಜಾಗ್ರತೆ ವಹಿಸದಿದ್ದರೆ ಅನೇಕ ವರ್ಷಗಳ ವರೆಗೆ ಸಾಲದ ಹೊರೆಯನ್ನು ಹೊತ್ತು ಕಷ್ಟಪಡಬೇಕಾಗುತ್ತದೆ. ನಾವು ನಮ್ಮ ಜೀವನವನ್ನು ಸರಳೀಕರಿಸಿಕೊಂಡು, ಸಾಲ ಮಾಡದೆ, ಕಡಿಮೆ ಹಣ ಖರ್ಚು ಮಾಡಿದರೆ ಪ್ರಾಯೋಗಿಕ ವಿವೇಕ ತೋರಿಸುತ್ತಿದ್ದೇವೆ. ಆಗ ನಮಗೆ ದೇವರ ಸೇವೆ ಮಾಡಲು ಹೆಚ್ಚು ಸಮಯ, ಶಕ್ತಿ ಇರುತ್ತದೆ. ಇಲ್ಲಾ ಅಂದರೆ ಇಂದಿನ ವಾಣಿಜ್ಯ ವ್ಯವಸ್ಥೆಯ ಗುಲಾಮರಾಗಿಬಿಡುತ್ತೇವೆ.—1 ತಿಮೊ. 6:10.
(2 ತಿಮೊಥೆಯ 2:23) ಇದಲ್ಲದೆ, ಬುದ್ಧಿಯಿಲ್ಲದ ಮತ್ತು ವಿಚಾರಹೀನವಾದ ಪ್ರಶ್ನೆಗಳು ಜಗಳಗಳನ್ನು ಉಂಟುಮಾಡುತ್ತವೆ ಎಂಬುದನ್ನು ತಿಳಿದವನಾಗಿದ್ದು ಅವುಗಳನ್ನು ತಿರಸ್ಕರಿಸು.
w14 7/15 ಪುಟ 14 ಪ್ಯಾರ 10
ಯೆಹೋವನ ಜನರು ‘ಅನೀತಿಯನ್ನು ಬಿಟ್ಟುಬಿಡುತ್ತಾರೆ’
10 ಇಂದು ಯೆಹೋವನ ಸಾಕ್ಷಿಗಳಿಗೆ ಸಭೆಯೊಳಗೆ ಧರ್ಮಭ್ರಷ್ಟತೆ ಅಷ್ಟಾಗಿ ಎದುರಾಗುವುದಿಲ್ಲ. ಹಾಗಿದ್ದರೂ ಬೈಬಲ್ಗೆ ವಿರುದ್ಧವಾದ ಯಾವುದೇ ವಿಚಾರಗಳು ಯಾವ ಮೂಲದಿಂದ ಬಂದರೂ ನಾವು ಅವನ್ನು ತಿರಸ್ಕರಿಸುವ ನಿರ್ಣಾಯಕ ಕ್ರಮ ತೆಗೆದುಕೊಳ್ಳಬೇಕು. ಧರ್ಮಭ್ರಷ್ಟರೊಂದಿಗೆ ನೇರವಾಗಿಯಾಗಲಿ, ಅವರ ಬ್ಲಾಗ್ಗಳಿಗೆ ಪ್ರತಿಕ್ರಿಯಿಸುವ ಮೂಲಕವಾಗಲಿ ಅಥವಾ ಇನ್ನಾವುದೇ ಮಾಧ್ಯಮದ ಸಹಾಯದಿಂದಾಗಲಿ ವಾಗ್ವಾದ ಮಾಡಲು ಹೋಗುವುದು ಅವಿವೇಕತನ. ಅಂಥ ವ್ಯಕ್ತಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಸಂಪರ್ಕ ಇಟ್ಟುಕೊಳ್ಳಬೇಕು ಎಂದು ನಮಗನಿಸಬಹುದು. ಆದರೆ ಈಗಷ್ಟೇ ನಾವು ಕಲಿತ ಶಾಸ್ತ್ರಾಧಾರಿತ ನಿರ್ದೇಶನಕ್ಕೆ ಇದು ವಿರುದ್ಧವಾಗಿದೆ. ಆದ್ದರಿಂದ ಯೆಹೋವನ ಜನರಾದ ನಾವು ಧರ್ಮಭ್ರಷ್ಟತೆಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು, ಬಿಟ್ಟುಬಿಡಬೇಕು.
ಆಗಸ್ಟ್ 12-18
ಬೈಬಲಿನಲ್ಲಿರುವ ರತ್ನಗಳು | ತೀತ 1—ಫಿಲೆಮೋನ
“ಹಿರಿಯರನ್ನು ನೇಮಿಸಿರಿ”
(ತೀ 1:5-9) ನಾನು ನಿನಗೆ ಆಜ್ಞಾಪಿಸಿದಂತೆ, ಕ್ರೇತದಲ್ಲಿ ಲೋಪವುಳ್ಳ ವಿಷಯಗಳನ್ನು ನೀನು ಸರಿಪಡಿಸಲು ಸಾಧ್ಯವಾಗುವಂತೆಯೂ ಪಟ್ಟಣ ಪಟ್ಟಣಗಳಲ್ಲಿ ಹಿರೀಪುರುಷರ ನೇಮಕಗಳನ್ನು ಮಾಡಲು ಸಾಧ್ಯವಾಗುವಂತೆಯೂ ನಾನು ನಿನ್ನನ್ನು ಅಲ್ಲೇ ಬಿಟ್ಟುಬಂದೆನು. 6 ನೇಮಿಸಲ್ಪಡುವವನು ನಿಂದಾರಹಿತನೂ ಏಕಪತ್ನಿಯುಳ್ಳವನೂ ವಿಶ್ವಾಸಿಗಳಾದ ಮಕ್ಕಳನ್ನು ಹೊಂದಿರುವವನೂ ಆಗಿರಬೇಕು; ಅವರು ಅತಿಭೋಗಾಸಕ್ತಿಯ ಅಪವಾದವಿಲ್ಲದವರು ಅಥವಾ ಹತೋಟಿಯಲ್ಲಿಡಲಾಗದವರು ಎನಿಸಿಕೊಂಡವರಾಗಿರಬಾರದು. 7 ಏಕೆಂದರೆ ಒಬ್ಬ ಮೇಲ್ವಿಚಾರಕನು ದೇವರ ಮನೆವಾರ್ತೆಯವನಾಗಿರುವುದರಿಂದ ನಿಂದಾರಹಿತನಾಗಿರಬೇಕು; ಅವನು ಸ್ವೇಚ್ಛಾಪರನೂ ಮುಂಗೋಪಿಯೂ ಕುಡಿದು ಜಗಳಮಾಡುವವನೂ ಹೊಡೆಯುವವನೂ ಅಪ್ರಾಮಾಣಿಕ ಲಾಭಕ್ಕಾಗಿ ಆಶೆಪಡುವವನೂ ಆಗಿರದೆ 8 ಅತಿಥಿಸತ್ಕಾರಮಾಡುವವನೂ ಒಳ್ಳೇತನವನ್ನು ಪ್ರೀತಿಸುವವನೂ ಸ್ವಸ್ಥಬುದ್ಧಿಯುಳ್ಳವನೂ ನೀತಿವಂತನೂ ನಿಷ್ಠಾವಂತನೂ ಸ್ವನಿಯಂತ್ರಣವುಳ್ಳವನೂ 9 ಸ್ವಸ್ಥಬೋಧನೆಯ ಮೂಲಕ ಬುದ್ಧಿಹೇಳಲು ಮತ್ತು ಎದುರುಮಾತಾಡುವವರನ್ನು ಖಂಡಿಸಲು ಶಕ್ತನಾಗಿರುವಂತೆ ತನ್ನ ಬೋಧನಾ ಕಲೆಯ ವಿಷಯದಲ್ಲಿ ನಂಬತಕ್ಕ ವಾಕ್ಯವನ್ನು ದೃಢವಾಗಿ ಹಿಡಿದುಕೊಂಡವನೂ ಆಗಿರಬೇಕು.
w14 11/15 ಪುಟ 28-29
ವಾಚಕರಿಂದ ಪ್ರಶ್ನೆಗಳು
ಹಿಂದೆ ಎಲ್ಲಾ ನೇಮಕಗಳನ್ನು ಹೇಗೆ ಮಾಡಲಾಗುತ್ತಿತ್ತು ಎಂದು ಬೈಬಲಿನಲ್ಲಿ ಪ್ರತಿಯೊಂದು ವಿವರ ಕೊಟ್ಟಿಲ್ಲವಾದರೂ ಅದನ್ನು ಸೂಚಿಸುವ ಕೆಲವೊಂದು ಸುಳಿವುಗಳನ್ನು ನಾವು ಬೈಬಲಿನಲ್ಲಿ ಕಂಡುಕೊಳ್ಳಬಹುದು. ಪೌಲಬಾರ್ನಬರು ತಮ್ಮ ಮೊದಲ ಮಿಷನರಿ ಪ್ರಯಾಣ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ “ಅವರು ಪ್ರತಿ ಸಭೆಯಲ್ಲಿ . . . ಹಿರೀಪುರುಷರನ್ನು ನೇಮಿಸಿದರು ಮತ್ತು ಉಪವಾಸವಿದ್ದು ಪ್ರಾರ್ಥಿಸುತ್ತಾ ಅವರು ಯಾರಲ್ಲಿ ವಿಶ್ವಾಸಿಗಳಾಗಿದ್ದರೋ ಆ ಯೆಹೋವನ ಕೈಗೆ ಅವರನ್ನು ಒಪ್ಪಿಸಿದರು.” (ಅ. ಕಾ. 14:23) ತನ್ನ ಸಂಚರಣ ಸಂಗಡಿಗನಾದ ತೀತನಿಗೆ ವರ್ಷಗಳ ನಂತರ ಪೌಲನು ಬರೆದದ್ದು: “ನಾನು ನಿನಗೆ ಆಜ್ಞಾಪಿಸಿದಂತೆ, ಕ್ರೇತದಲ್ಲಿ ಲೋಪವುಳ್ಳ ವಿಷಯಗಳನ್ನು ನೀನು ಸರಿಪಡಿಸಲು ಸಾಧ್ಯವಾಗುವಂತೆಯೂ ಪಟ್ಟಣ ಪಟ್ಟಣಗಳಲ್ಲಿ ಹಿರೀಪುರುಷರ ನೇಮಕಗಳನ್ನು ಮಾಡಲು ಸಾಧ್ಯವಾಗುವಂತೆಯೂ ನಾನು ನಿನ್ನನ್ನು ಅಲ್ಲೇ ಬಿಟ್ಟುಬಂದೆನು.” (ತೀತ 1:5) ಅಪೊಸ್ತಲ ಪೌಲನ ಜೊತೆ ತುಂಬ ಪ್ರಯಾಣ ಮಾಡಿರುವ ತಿಮೊಥೆಯನಿಗೂ ಇದೇ ಅಧಿಕಾರವನ್ನು ಕೊಡಲಾಗಿದ್ದಿರಬೇಕು. (1 ತಿಮೊ. 5:22) ಇದರಿಂದ ಸ್ಪಷ್ಟವಾಗಿ ತಿಳಿದು ಬರುವುದೇನೆಂದರೆ ನೇಮಿಸುವ ಕೆಲಸವನ್ನು ಸಂಚರಣ ಮೇಲ್ವಿಚಾರಕರು ಮಾಡುತ್ತಿದ್ದರು. ಯೆರೂಸಲೇಮಿನಲ್ಲಿದ್ದ ಅಪೊಸ್ತಲರಾಗಲಿ ಹಿರೀಪುರುಷರಾಗಲಿ ಮಾಡುತ್ತಿರಲಿಲ್ಲ.
ಬೈಬಲಿನಲ್ಲಿ ದಾಖಲಾಗಿರುವ ಈ ಹಿಂದಿನ ಉದಾಹರಣೆಗಳನ್ನು ಮನಸ್ಸಿನಲ್ಲಿಟ್ಟು ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ ಹಿರಿಯರನ್ನು ಹಾಗೂ ಶುಶ್ರೂಷಾ ಸೇವಕರನ್ನು ನೇಮಕ ಮಾಡುವ ವಿಧಾನದಲ್ಲಿ ಬದಲಾವಣೆ ಮಾಡಿದೆ. ಸೆಪ್ಟೆಂಬರ್ 1, 2014 ರಿಂದ ಹಿರಿಯರನ್ನು ಹಾಗೂ ಶುಶ್ರೂಷಾ ಸೇವಕರನ್ನು ಈ ರೀತಿ ನೇಮಿಸಲಾಗುತ್ತಿದೆ: ಪ್ರತಿಯೊಬ್ಬ ಸರ್ಕಿಟ್ ಮೇಲ್ವಿಚಾರಕ ತನ್ನ ಸರ್ಕಿಟ್ನಲ್ಲಿ ಮಾಡಲಾಗಿರುವ ಶಿಫಾರಸ್ಸುಗಳನ್ನು ಜಾಗರೂಕತೆಯಿಂದ ಪರಿಶೀಲಿಸುತ್ತಾನೆ. ಸಭೆಗಳನ್ನು ಭೇಟಿಮಾಡುವಾಗ ಶಿಫಾರಸ್ಸು ಮಾಡಲಾಗಿರುವ ಸಹೋದರರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ. ಅವರ ಜೊತೆ ಸಾಧ್ಯವಾದರೆ ಸೇವೆಗೆ ಹೋಗುತ್ತಾನೆ. ಶಿಫಾರಸ್ಸು ಮಾಡಲಾಗಿರುವ ಸಹೋದರರ ಕುರಿತು ಹಿರಿಯ ಮಂಡಲಿಯೊಂದಿಗೆ ಮಾತಾಡುತ್ತಾನೆ. ನಂತರ ಸರ್ಕಿಟ್ ಮೇಲ್ವಿಚಾರಕ ಹಿರಿಯರನ್ನು ಹಾಗೂ ಶುಶ್ರೂಷಾ ಸೇವಕರನ್ನು ನೇಮಿಸುತ್ತಾನೆ. ಇದನ್ನು ತನ್ನ ಸರ್ಕಿಟ್ನಲ್ಲಿರುವ ಸಭೆಗಳಲ್ಲಿ ಮಾಡುತ್ತಾನೆ. ಈ ಏರ್ಪಾಡು ಒಂದನೇ ಶತಮಾನದಲ್ಲಿ ನೇಮಕ ಮಾಡಲಾಗುತ್ತಿದ್ದ ರೀತಿಗೆ ಹೋಲುತ್ತದೆ.
ಈ ಪ್ರಕ್ರಿಯೆಯಲ್ಲಿರುವ ಬೇರೆಬೇರೆ ಪಾತ್ರಗಳನ್ನು ಯಾರು ನಿರ್ವಹಿಸುತ್ತಾರೆ? ಮನೆಯವರಿಗೆ ಉಣಿಸುವ ಮುಖ್ಯ ಜವಾಬ್ದಾರಿ ಎಂದಿನಂತೆ ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿಗೆ’ ಇದೆ. (ಮತ್ತಾ. 24:45-47) ಈ ಜವಾಬ್ದಾರಿಯಲ್ಲಿ ಲೋಕವ್ಯಾಪಕ ಸಭೆಯನ್ನು ಸಂಘಟಿಸಲು ನೆರವಾಗುವಂಥ ಬೈಬಲ್ ತತ್ವಗಳನ್ನು ಪ್ರಾಯೋಗಿಕವಾಗಿ ಅನ್ವಯಿಸುವುದು ಹೇಗೆ ಎಂಬ ನಿರ್ದೇಶನ ಕೊಡುವುದು ಸೇರಿದೆ. ಇದಕ್ಕಾಗಿ ಅವರು ಪವಿತ್ರಾತ್ಮದ ಸಹಾಯದಿಂದ ಬೈಬಲನ್ನು ಚೆನ್ನಾಗಿ ಪರಿಶೀಲಿಸುತ್ತಾರೆ. ಈ ಆಳು ಸರ್ಕಿಟ್ ಮೇಲ್ವಿಚಾರಕರನ್ನು ಹಾಗೂ ಬ್ರಾಂಚ್ ಕಮಿಟಿಯ ಸದಸ್ಯರನ್ನು ನೇಮಿಸುತ್ತದೆ ಸಹ. ಆಳು ಕೊಡುವ ನಿರ್ದೇಶನ ಪಾಲಿಸಲು ಬ್ರಾಂಚ್ ಆಫೀಸ್ ಪ್ರಾಯೋಗಿಕ ಸಹಾಯ ಕೊಡುತ್ತದೆ. ಪ್ರತಿಯೊಂದು ಹಿರಿಯ ಮಂಡಲಿಗೆ ತಾವು ಶಿಫಾರಸ್ಸು ಮಾಡುವ ಸಹೋದರರು ಬೈಬಲಿನ ಅರ್ಹತೆಗಳನ್ನು ಪೂರೈಸುತ್ತಿದ್ದಾರೋ ಎಂದು ಕೂಲಂಕಷವಾಗಿ ಪರಿಶೀಲಿಸುವ ಗಂಭೀರ ಜವಾಬ್ದಾರಿಯಿದೆ. ಪ್ರತಿಯೊಬ್ಬ ಸರ್ಕಿಟ್ ಮೇಲ್ವಿಚಾರಕನಿಗೆ ಹಿರಿಯ ಮಂಡಲಿ ಮಾಡಿರುವ ಶಿಫಾರಸ್ಸಿನ ಕುರಿತು ಪ್ರಾರ್ಥನಾಪೂರ್ವಕವಾಗಿ ಹಾಗೂ ಜಾಗರೂಕತೆಯಿಂದ ಪರಿಶೀಲಿಸಿ ಅರ್ಹರಾದವರನ್ನು ನೇಮಕ ಮಾಡುವ ಗಂಭೀರ ಜವಾಬ್ದಾರಿಯಿದೆ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ತೀತ 1:12) “ಕ್ರೇತದವರು ಯಾವಾಗಲೂ ಸುಳ್ಳುಗಾರರೂ ಹಾನಿಕರ ಕಾಡುಮೃಗಗಳೂ ಕೆಲಸವಿಲ್ಲದ ಹೊಟ್ಟೆಬಾಕರೂ ಆಗಿದ್ದಾರೆ” ಎಂದು ಅವರಲ್ಲಿ ಒಬ್ಬನಾದ ಅವರ ಪ್ರವಾದಿಯೇ ಹೇಳಿದನು.
w89 E 5/15 ಪುಟ 31 ಪ್ಯಾರ 5
ವಾಚಕರಿಂದ ಪ್ರಶ್ನೆಗಳು
ಕ್ರೇತದವರ ಜಾತಿ ಅಥವಾ ಕುಲದ ಬಗ್ಗೆ ಜನರಿಗಿದ್ದ ಪೂರ್ವ ಅಭಿಪ್ರಾಯವನ್ನು ಪೌಲ ಬೆಂಬಲಿಸುತ್ತಿರಲಿಲ್ಲ. ಇದನ್ನು ಹೇಗೆ ಹೇಳಬಹುದು? ಕ್ರೇತದಲ್ಲಿ, ದೇವರ ಮೆಚ್ಚಿಗೆ ಪಡೆದು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟ ಅನೇಕ ಒಳ್ಳೆಯ ಕ್ರೈಸ್ತರಿದ್ದರು ಎಂದು ಪೌಲನಿಗೆ ಚೆನ್ನಾಗಿ ಗೊತ್ತಿತ್ತು. (ಅಕಾ 2:5, 11, 33) ಅಲ್ಲಿರುವ ಕ್ರೈಸ್ತರು ಪರಿಪೂರ್ಣ ವ್ಯಕ್ತಿಗಳು ಆಗಿರಲಿಲ್ಲ ನಿಜ. ಆದರೆ ಅವರಲ್ಲಿ ಯಾರೂ ಸುಳ್ಳುಗಾರರು ಅಥವಾ ಕೆಲಸವಿಲ್ಲದ ಹೊಟ್ಟೆಬಾಕರು ಆಗಿರಲಿಲ್ಲ ಎನ್ನೋದಂತು ಖಂಡಿತ. ಇಲ್ಲದಿದ್ದರೆ ದೇವರ ಮೆಚ್ಚುಗೆ ಅವರ ಮೇಲೆ ಇರುತ್ತಿರಲಿಲ್ಲ. (ಫಿಲಿಪ್ಪಿ 3:18, 19; ಪ್ರಕಟನೆ 21:8)ಲೋಕದಲ್ಲಿರುವ ಕೆಟ್ಟ ವಿಷಯಗಳನ್ನು ನೋಡಿ ಮನಗುಂದಿರುವ ಕೆಲವರು, ಇಂದು ಹೇಗೆ ಸುವಾರ್ತೆಯನ್ನು ಸ್ವೀಕರಿಸುತ್ತಿದ್ದಾರೋ, ಅಂಥ ಒಳ್ಳೆಯ ಜನರು ಕ್ರೇತದಲ್ಲಿ ಕೂಡ ಇದ್ದರು. ಹಾಗಾಗಿ, ಪೌಲ ಅಲ್ಲಿನ ಜನರ ಬಗ್ಗೆ ಇದ್ದ ಪೂರ್ವಾಭಿಪ್ರಾಯವನ್ನು ಬೆಂಬಲಿಸುತ್ತಿರಲಿಲ್ಲ ಅಂತ ಹೇಳಬಹುದು. —ಯೆಹೆಜ್ಕೇಲ 9:4; ಅಪೊಸ್ತಲರ ಕಾರ್ಯಗಳು 13:48.
(ಫಿಲೆಮೋನ 15, 16) ಅವನು ಸ್ವಲ್ಪಕಾಲ ನಿನ್ನಿಂದ ಹೋದದ್ದು ಪ್ರಾಯಶಃ ನೀನು ಅವನನ್ನು ನಿರಂತರಕ್ಕೂ ನಿನ್ನ ಬಳಿ ಇರಿಸಿಕೊಳ್ಳಲಿಕ್ಕಾಗಿಯೇ ಇರಬಹುದು. 16 ಇನ್ನು ಮೇಲೆ ಅವನು ದಾಸನಂತಿರದೆ, ದಾಸನಿಗಿಂತ ಉತ್ತಮನಾದ ಪ್ರಿಯ ಸಹೋದರನಂತಿದ್ದಾನೆ; ಅವನು ನನಗೇ ಪ್ರಿಯನಾಗಿರುವಾಗ ಲೋಕಸಂಬಂಧದಲ್ಲಿಯೂ ಕರ್ತನ ಸಂಬಂಧದಲ್ಲಿಯೂ ನಿನಗೆ ಇನ್ನೂ ಎಷ್ಟೋ ಹೆಚ್ಚು ಪ್ರಿಯನಾಗಿರುವನು.
w08 10/15 ಪುಟ 31 ಪ್ಯಾರ 5
ತೀತ, ಫಿಲೆಮೋನ ಮತ್ತು ಇಬ್ರಿಯರಿಗೆ ಬರೆದ ಪತ್ರಗಳ ಮುಖ್ಯಾಂಶಗಳು
15, 16—ಒನೇಸಿಮನನ್ನು ಸ್ವತಂತ್ರಗೊಳಿಸಲು ಪೌಲನು ಫಿಲೆಮೋನನ ಬಳಿ ಏಕೆ ಕೇಳಿಕೊಳ್ಳಲಿಲ್ಲ? ಪೌಲನು, “ದೇವರ ರಾಜ್ಯವನ್ನು ಪ್ರಸಿದ್ಧಿಪಡಿಸುತ್ತಾ ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿ ಉಪದೇಶಮಾಡುತ್ತಾ” ಇರುವ ತನ್ನ ನೇಮಕಕ್ಕೆ ಕಟ್ಟುನಿಟ್ಟಾಗಿ ಅಂಟಿಕೊಳ್ಳಲು ಬಯಸಿದನು. ಆದ್ದರಿಂದಲೇ ಗುಲಾಮಗಿರಿಯಂಥ ಸಾಮಾಜಿಕ ಸಮಸ್ಯೆಗಳಿಂದ ದೂರವಿರಲು ಅವನು ಬಯಸಿದನು.—ಅ. ಕೃ. 28:31.
ಆಗಸ್ಟ್ 19-25
ಬೈಬಲಿನಲ್ಲಿರುವ ರತ್ನಗಳು | ಇಬ್ರಿಯ 1-3
“ನೀತಿಯನ್ನು ಪ್ರೀತಿಸಿ, ಅಧರ್ಮವನ್ನು ದ್ವೇಷಿಸಿ”
(ಇಬ್ರಿಯ 1:8) ಮಗನ ವಿಷಯದಲ್ಲಾದರೋ, “ಸದಾಕಾಲಕ್ಕೂ ದೇವರೇ ನಿನ್ನ ಸಿಂಹಾಸನ ಮತ್ತು ನಿನ್ನ ರಾಜದಂಡವು ನೀತಿಯ ದಂಡವೇ.
w14 2/15 ಪುಟ 5 ಪ್ಯಾರ 8
ಮಹಿಮಾನ್ವಿತ ರಾಜನಾದ ಕ್ರಿಸ್ತನಿಗೆ ಜೈಕಾರವೆತ್ತಿ!
8 ಯೆಹೋವನು 1914 ರಲ್ಲಿ ಯೇಸುವನ್ನು ಮೆಸ್ಸೀಯ ರಾಜನಾಗಿ ಪ್ರತಿಷ್ಠಾಪಿಸಿದನು. ಮೆಸ್ಸೀಯನ ‘ರಾಜದಂಡವು ನ್ಯಾಯಸ್ಥಾಪಕವಾದದ್ದು.’ ಆದ್ದರಿಂದ ಅವನು ನೀತಿ, ನ್ಯಾಯದಿಂದ ಆಳ್ವಿಕೆ ನಡೆಸುವನೆಂಬ ಖಾತ್ರಿ ನಮಗಿದೆ. ‘ದೇವರು ಅವನ ಸಿಂಹಾಸನವಾಗಿರುವನು.’ ಅಂದರೆ ಅವನ ರಾಜ್ಯಕ್ಕೆ ಬುನಾದಿ ಯೆಹೋವನೇ. ಹಾಗಾಗಿ ಯೇಸುವಿನ ಆಳ್ವಿಕೆ ಕಾನೂನುಬದ್ಧವಾದದ್ದು. ಮಾತ್ರವಲ್ಲ ಈ ದೇವನೇಮಿತ ಅರಸನ ಸಿಂಹಾಸನವು “ಯುಗಯುಗಾಂತರಗಳಲ್ಲಿಯೂ” ಇರುವುದು. ಈ ಬಲಿಷ್ಠ ರಾಜನ ಆಳ್ವಿಕೆಯಡಿ ಯೆಹೋವನ ಸೇವೆ ಮಾಡಲು ನಿಮಗೆ ಹೆಮ್ಮೆಯೆನಿಸುವುದಿಲ್ಲವೇ?
(ಇಬ್ರಿಯ 1:9) ನೀನು ನೀತಿಯನ್ನು ಪ್ರೀತಿಸಿದಿ ಮತ್ತು ಅಧರ್ಮವನ್ನು ದ್ವೇಷಿಸಿದಿ. ಆದುದರಿಂದಲೇ ದೇವರು, ನಿನ್ನ ದೇವರು, ನಿನ್ನನ್ನು ನಿನ್ನ ಜೊತೆಗಾರರಿಗಿಂತ ಹೆಚ್ಚಾಗಿ ಪರಮಾನಂದತೈಲದಿಂದ ಅಭಿಷೇಕಿಸಿದ್ದಾನೆ” ಎಂದು ಹೇಳುತ್ತಾನೆ.
w14 2/15 ಪುಟ 4-5 ಪ್ಯಾರ 7
ಮಹಿಮಾನ್ವಿತ ರಾಜನಾದ ಕ್ರಿಸ್ತನಿಗೆ ಜೈಕಾರವೆತ್ತಿ!
7 ಕೀರ್ತನೆ 45:7 ಓದಿ. ಯೇಸು ನೀತಿಯನ್ನು ಗಾಢವಾಗಿ ಪ್ರೀತಿಸಿದನು. ತನ್ನ ತಂದೆಯನ್ನು ಅಗೌರವಿಸುವ ಎಲ್ಲವನ್ನು ದ್ವೇಷಿಸಿದನು. ಆದ್ದರಿಂದ ಯೆಹೋವನು ಅವನನ್ನು ಮೆಸ್ಸೀಯ ರಾಜ್ಯದ ರಾಜನಾಗಿ ಅಭಿಷೇಕಿಸಿದನು. ಅವನನ್ನು ಅವನ “ಜೊತೆಗಾರರಿಗಿಂತ” ಅಂದರೆ ದಾವೀದನ ವಂಶದಿಂದ ಬಂದ ಯೆಹೂದದ ರಾಜರಿಗಿಂತ “ಉನ್ನತಸ್ಥಾನಕ್ಕೆ ಏರಿಸಿ ಪರಮಾನಂದತೈಲದಿಂದ” ಅಭಿಷೇಕಿಸಿದನು. ಹಾಗೇಕೆ ಹೇಳಬಹುದು? ಏಕೆಂದರೆ ಯೇಸು ನೇರವಾಗಿ ಯೆಹೋವನಿಂದ ಅಭಿಷೇಕಿಸಲ್ಪಟ್ಟನು. ಯೆಹೋವನು ಅವನನ್ನು ರಾಜನಾಗಿ ಅದೇ ಸಮಯದಲ್ಲಿ ಮಹಾ ಯಾಜಕನಾಗಿಯೂ ಅಭಿಷೇಕಿಸಿದನು. (ಕೀರ್ತ. 2:2; ಇಬ್ರಿ. 5:5, 6) ಅಷ್ಟೇ ಅಲ್ಲದೆ, ಯೇಸುವನ್ನು ಅಭಿಷೇಕಿಸಿದ್ದು ಪವಿತ್ರಾತ್ಮದಿಂದ ಹಾಗೂ ಆತನು ಆಳುವುದು ಭೂಮಿಯಲ್ಲಲ್ಲ, ಸ್ವರ್ಗದಿಂದ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಇಬ್ರಿಯ 1:3) ಅವನು ದೇವರ ಮಹಿಮೆಯ ಪ್ರತಿಬಿಂಬವೂ ಆತನ ವ್ಯಕ್ತಿತ್ವದ ನಿಖರ ಪ್ರತಿರೂಪವೂ ಆಗಿದ್ದಾನೆ ಮತ್ತು ಅವನು ತನ್ನ ಶಕ್ತಿಯ ವಾಕ್ಯದಿಂದ ಎಲ್ಲವನ್ನೂ ಪೋಷಿಸುತ್ತಾನೆ; ಅವನು ನಮ್ಮ ಪಾಪಗಳನ್ನು ಶುದ್ಧೀಕರಿಸಿದ ಬಳಿಕ ಅತ್ಯುನ್ನತ ಸ್ಥಳಗಳಲ್ಲಿ ಮಹೋನ್ನತನ ಬಲಗಡೆಯಲ್ಲಿ ಕುಳಿತುಕೊಂಡನು.
it-1 ಪುಟ 1185 ಪ್ಯಾರ 1
ದೇವರ ಪ್ರತಿರೂಪ
ಯೇಸು ಯಾವಾಗಲೂ ಯೆಹೋವನನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸುತ್ತಿದ್ನಾ?
ಯೇಸು ದೇವರ ಪ್ರತಿರೂಪವಾಗಿದ್ದಾನೆ ಅಂತ ಬೈಬಲ್ ಹೇಳುತ್ತೆ. (2ಕೊರಿಂ 4:4) ಆ ಯೇಸು ಜೊತೆಗೇನೇ ದೇವರು “ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ” ಎಂದು ಮಾತಾಡಿದರಲ್ಲಿ ಸಂಶಯವಿಲ್ಲ. ಇಲ್ಲಿ “ನಮ್ಮ ಸ್ವರೂಪದಲ್ಲಿ” ಎಂದು ಹೇಳಿರುವುದರಿಂದ, ಸೃಷ್ಟಿಸಲ್ಪಟ್ಟ ದಿನದಿಂದ ಯೇಸು ತನ್ನ ತಂದೆಯ ಪ್ರತಿರೂಪವಾಗಿದ್ದನು ಎಂದು ಗೊತ್ತಾಗುತ್ತೆ. (ಆದಿ 1:26; ಯೋಹಾ 1:1-3; ಕೊಲೊ 1:15, 16) ಯೇಸು ಭೂಮಿಯಲ್ಲಿ ಮನುಷ್ಯನಾಗಿ ಹುಟ್ಟಿದಾಗ, ಒಬ್ಬ ಮನುಷ್ಯನಿಗೆ ಇರುವ ಮಿತಿಗಳು ಅವನಿಗೂ ಇತ್ತು. ಆದರೆ ಆ ಇತಿಮಿತಿಗಳಿದ್ದರೂ, ಯೇಸು ತನ್ನ ತಂದೆಯ ಗುಣಗಳನ್ನು ಮತ್ತು ವ್ಯಕ್ತಿತ್ವವನ್ನು ಒಬ್ಬ ಮನುಷ್ಯನಿಂದ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಪ್ರತಿಬಿಂಬಿಸಿದನು. ಹಾಗಾಗಿಯೇ, “ನನ್ನನ್ನು ನೋಡಿದವನು ನನ್ನ ತಂದೆಯನ್ನೂ ನೋಡಿದ್ದಾನೆ” ಎಂದು ಯೇಸು ಹೇಳಿದನು. (ಯೋಹಾ 14:9; 5:17, 19, 30, 36; 8:28, 38, 42) ಯೇಸುವಿಗೆ ಪುನರುತ್ಥಾನವಾದಾಗ “ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಎಲ್ಲ ಅಧಿಕಾರವು” ಅವನಿಗೆ ಸಿಕ್ಕಿತು. (1ಪೇತ್ರ 3:18; ಮತ್ತಾ 28:18) ಅವನನ್ನು ದೇವರು “ಉನ್ನತವಾದ ಸ್ಥಾನಕ್ಕೆ” ಏರಿಸಿದನು. ಎಲ್ಲಾ ಅಧಿಕಾರ ಪಡೆದು ಉನ್ನತ ಸ್ಥಾನಕ್ಕೆ ಏರಿರುವ ಯೇಸು, ಆರಂಭದಲ್ಲಿ ತಾನು ಸ್ವರ್ಗದಲ್ಲಿದ್ದಾಗ ತಂದೆಯನ್ನು ಪ್ರತಿಬಿಂಬಿಸಿದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಬಿಂಬಿಸುತ್ತಿದ್ದಾನೆ. (ಫಿಲಿ 2:9; ಇಬ್ರಿ 2:9) ಈಗ ಅವನು “ದೇವರ ಮಹಿಮೆಯ ಪ್ರತಿಬಿಂಬವೂ ಆತನ ವ್ಯಕ್ತಿತ್ವದ ನಿಖರ ಪ್ರತಿರೂಪವೂ ಆಗಿದ್ದಾನೆ.”—ಇಬ್ರಿ 1:2-4.
(ಇಬ್ರಿಯ 1:10-12) ಇದಲ್ಲದೆ “ಕರ್ತನೇ, ಆದಿಯಲ್ಲಿ ನೀನು ಭೂಮಿಯ ಅಸ್ತಿವಾರವನ್ನು ಹಾಕಿದಿ ಮತ್ತು ಆಕಾಶವು ನಿನ್ನ ಕೈಕೆಲಸವಾಗಿದೆ. 11 ಅವು ತಮ್ಮಲ್ಲಿ ತಾವೇ ನಾಶವಾಗುವವು, ಆದರೆ ನೀನು ಸದಾಕಾಲ ಉಳಿಯುವಿ; ಅವೆಲ್ಲವೂ ಮೇಲಂಗಿಯಂತೆ ಹಳೆಯದಾಗುವವು. 12 ನೀನು ಹೊದಿಕೆಯಂತೆ, ಮೇಲಂಗಿಯಂತೆ ಅವುಗಳನ್ನು ಮಡಿಸುವಿ ಮತ್ತು ಅವು ಬದಲಾಗುವವು; ನೀನಾದರೋ ಬದಲಾಗುವುದೇ ಇಲ್ಲ, ನಿನ್ನ ವರ್ಷಗಳು ಎಂದಿಗೂ ಮುಗಿದುಹೋಗುವುದೇ ಇಲ್ಲ.”
it-1 ಪುಟ 1063 ಪ್ಯಾರ 7
ಸ್ವರ್ಗ
ಕೀರ್ತನೆ 102:25, 26 ಸೃಷ್ಟಿಕರ್ತನಾದ ಯೆಹೋವನ ಬಗ್ಗೆ ಹೇಳುತ್ತೆ. ಆದರೆ ಪೌಲ ಈ ವಚನವನ್ನು ಯೇಸು ಕ್ರಿಸ್ತನಿಗೆ ಅನ್ವಯಿಸಿ ಮಾತಾಡಿದನು. ಯಾಕೆ? ಯಾಕೆಂದರೆ ದೇವರು ಪ್ರಪಂಚವನ್ನು ಸೃಷ್ಟಿ ಮಾಡುವಾಗ, ಆ ಸೃಷ್ಟಿಕಾರ್ಯದಲ್ಲಿ ಯೇಸು ಮುಖ್ಯ ಪಾತ್ರವಹಿಸಿದನು. ಹಾಗಾಗಿ ಪೌಲ, ಸೃಷ್ಟಿಕಾರ್ಯ ‘ಮೇಲಂಗಿಯಂತೆ’ ಬದಲಾದರೂ, ಅಳಿದುಹೋದರೂ ಸೃಷ್ಟಿಕಾರ್ಯದಲ್ಲಿ ಮುಖ್ಯ ಪಾತ್ರವಹಿಸಿದ ಯೇಸು ಶಾಶ್ವತವಾಗಿರುತ್ತಾನೆ ಎಂದು ಹೇಳಿದನು.—ಇಬ್ರಿ 1:1, 2, 8, 10-12; 1ಪೇತ್ರ 2:3.
ಆಗಸ್ಟ್ 26-ಸೆಪ್ಟೆಂಬರ್ 1
ಬೈಬಲಿನಲ್ಲಿರುವ ರತ್ನಗಳು | ಇಬ್ರಿಯ 4-6
“ದೇವರ ವಿಶ್ರಾಂತಿಯಲ್ಲಿ ಸೇರಲು ಸರ್ವ ಪ್ರಯತ್ನ ಮಾಡಿ”
(ಇಬ್ರಿಯ 4:1) ಆದುದರಿಂದ, ದೇವರ ವಿಶ್ರಾಂತಿಯಲ್ಲಿ ಸೇರುವ ವಾಗ್ದಾನವು ಇನ್ನೂ ಇರುವುದರಿಂದ ನಿಮ್ಮಲ್ಲಿ ಯಾವನಾದರೂ ಯಾವುದೇ ಸಮಯದಲ್ಲಿ ಆ ವಾಗ್ದಾನದ ಫಲವನ್ನು ಹೊಂದಲು ತಪ್ಪಿಹೋಗುವವನಾಗಿ ಕಂಡುಬಂದಾನೋ ಎಂದು ನಾವು ಭಯಪಡೋಣ.
(ಇಬ್ರಿಯ 4:4) ಒಂದು ಸ್ಥಳದಲ್ಲಿ ಆತನು ಏಳನೆಯ ದಿನದ ಕುರಿತು, “ದೇವರು ತನ್ನ ಕಾರ್ಯಗಳನ್ನೆಲ್ಲ ಮುಗಿಸಿ ಏಳನೆಯ ದಿನದಲ್ಲಿ ವಿಶ್ರಮಿಸಿದನು”.
w11 7/15 ಪುಟ 24-25 ಪ್ಯಾರ 3-5
ದೇವರ ವಿಶ್ರಾಂತಿ ದಿನ ಅಂದರೇನು?
3 ಏಳನೆಯ ದಿನವು ಕ್ರಿ.ಶ ಒಂದನೆಯ ಶತಮಾನದಲ್ಲೂ ಮುಂದುವರಿಯುತ್ತಿತ್ತು. ಈ ನಿರ್ಣಯಕ್ಕೆ ಬರಲು ನಮಗೆ ಎರಡು ಪುರಾವೆಗಳಿವೆ. ಮೊದಲನೆಯ ಪುರಾವೆಯು ಯೇಸು ತನ್ನ ವಿರೋಧಿಗಳಿಗೆ ಕೊಟ್ಟ ಉತ್ತರದಲ್ಲಿದೆ. ಯೇಸು ಸಬ್ಬತ್ ದಿನದಲ್ಲಿ ವಾಸಿಮಾಡಿದ್ದಕ್ಕಾಗಿ ಅವರು ಅವನನ್ನು ಟೀಕಿಸಿದರು. ಏಕೆಂದರೆ ಸಬ್ಬತ್ ದಿನದಂದು ವಾಸಿಮಾಡುವುದನ್ನು ಸಹ ಅವರು ಒಂದು ಕೆಲಸವಾಗಿ ಪರಿಗಣಿಸುತ್ತಿದ್ದರು. ಯೇಸು ಅವರಿಗೆ ಉತ್ತರ ಕೊಡುತ್ತಾ “ನನ್ನ ತಂದೆಯು ಇಂದಿನ ವರೆಗೂ ಕೆಲಸಮಾಡುತ್ತಾ ಇದ್ದಾನೆ ಮತ್ತು ನಾನೂ ಕೆಲಸಮಾಡುತ್ತಿದ್ದೇನೆ” ಎಂದು ಹೇಳಿದನು. (ಯೋಹಾ. 5:16, 17) ಅದರ ಅರ್ಥವೇನು? ಸಬ್ಬತ್ ದಿನದಲ್ಲಿ ಕೆಲಸಮಾಡಿದ ಆರೋಪವನ್ನು ಯೇಸುವಿನ ಮೇಲೆ ಹೊರಿಸಲಾಗಿತ್ತು. ಅವರ ಆರೋಪಕ್ಕೆ, “ನನ್ನ ತಂದೆಯು . . . ಕೆಲಸಮಾಡುತ್ತಾ ಇದ್ದಾನೆ” ಎಂಬ ಅವನ ಮಾತು ಉತ್ತರ ಕೊಟ್ಟಿತು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಯೇಸು ತನ್ನ ಟೀಕಾಕಾರರಿಗೆ ಹೀಗನ್ನುತ್ತಿದ್ದನು: ‘ನಾನೂ ನನ್ನ ತಂದೆಯೂ ಒಂದೇ ರೀತಿಯ ಕೆಲಸವನ್ನು ಮಾಡುತ್ತಿದ್ದೇವೆ. ಸಾವಿರಾರು ವರ್ಷಗಳಷ್ಟು ದೀರ್ಘದ ಸಬ್ಬತ್ ದಿನದಲ್ಲಿ ನನ್ನ ತಂದೆಯು ಕೆಲಸಮಾಡುತ್ತಿದ್ದಾನೆ. ಆದ್ದರಿಂದ ನಾನು ಸಬ್ಬತ್ ದಿನದಲ್ಲಿ ಕೆಲಸಮಾಡುವುದರಲ್ಲಿ ತಪ್ಪಿಲ್ಲ.’ ಹೀಗೆ, ಭೂಮಿಯ ಸಂಬಂಧದಲ್ಲಿ ಏಳನೆಯ ದಿನವು ಅಂದರೆ ದೇವರ ವಿಶ್ರಾಂತಿಯ ಮಹಾ ಸಬ್ಬತ್ ದಿನವು ತನ್ನ ಸಮಯದಲ್ಲೂ ಮುಂದುವರಿಯುತ್ತಿದೆ ಎಂದು ಯೇಸು ಸೂಚಿಸುತ್ತಿದ್ದನು.
4 ಎರಡನೆಯ ಪುರಾವೆಯನ್ನು ಅಪೊಸ್ತಲ ಪೌಲನು ಕೊಟ್ಟಿದ್ದಾನೆ. ದೇವರ ವಿಶ್ರಾಂತಿಯ ಬಗ್ಗೆ ಆದಿಕಾಂಡ 2:2 ರಿಂದ ಉಲ್ಲೇಖಿಸುವಾಗ ಪೌಲನು ದೇವಪ್ರೇರಣೆಯಿಂದ ಹೀಗೆ ಬರೆದನು: “ನಂಬಿಕೆಯಿಟ್ಟವರಾದ ನಾವಾದರೋ ಆತನ ವಿಶ್ರಾಂತಿಯಲ್ಲಿ ನಿಶ್ಚಯ ಸೇರುತ್ತೇವೆ.” (ಇಬ್ರಿ. 4:3, 4, 6, 9) ಹಾಗಾದರೆ ಏಳನೆಯ ದಿನವು ಪೌಲನ ಸಮಯದಲ್ಲೂ ಮುಂದುವರಿಯುತ್ತಿತ್ತು. ಇನ್ನು ಎಷ್ಟು ಸಮಯದ ವರೆಗೆ ದೇವರ ವಿಶ್ರಾಂತಿಯ ದಿನವು ಮುಂದುವರಿಯಲಿದೆ?
5 ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾವು ಮೊದಲು ಏಳನೆಯ ದಿನದ ಉದ್ದೇಶವನ್ನು ನೆನಪಿಗೆ ತಂದುಕೊಳ್ಳಬೇಕು. ಅದನ್ನು ಆದಿಕಾಂಡ 2:3 ಹೀಗೆ ವಿವರಿಸುತ್ತದೆ: “ದೇವರು . . . ಆ [ಏಳನೆಯ] ದಿನವನ್ನು ಪರಿಶುದ್ಧದಿನವಾಗಿರಲಿ ಎಂದು ಆಶೀರ್ವದಿಸಿದನು.” ಯೆಹೋವನು ಆ ದಿನವನ್ನು ಪರಿಶುದ್ಧದಿನವಾಗಿ ಮಾಡಿದ್ದು ಅಂದರೆ ಪವಿತ್ರೀಕರಿಸಿದ್ದು ಇಲ್ಲವೆ ಪ್ರತ್ಯೇಕವಾಗಿರಿಸಿದ್ದು ಭೂಮಿಗಾಗಿರುವ ತನ್ನ ಉದ್ದೇಶವನ್ನು ಪೂರೈಸಲಿಕ್ಕಾಗಿಯೇ. ಆತನ ಉದ್ದೇಶ, ಭೂಮಿಯು ವಿಧೇಯ ಸ್ತ್ರೀಪುರುಷರಿಂದ ತುಂಬಿಕೊಳ್ಳಬೇಕು ಹಾಗೂ ಅವರು ಭೂಮಿಯನ್ನೂ ಅದರಲ್ಲಿರುವ ಸಕಲ ಜೀವಿಗಳನ್ನೂ ನೋಡಿಕೊಳ್ಳಬೇಕು ಎಂಬುದೇ. (ಆದಿ. 1:28) ಈ ಉದ್ದೇಶವನ್ನು ಪೂರೈಸಲಿಕ್ಕಾಗಿಯೇ ಯೆಹೋವ ದೇವರು ಮತ್ತು ‘ಸಬ್ಬತ್ತಿನ ಒಡೆಯನಾಗಿರುವ’ ಯೇಸು ಕ್ರಿಸ್ತನು “ಇಂದಿನ ವರೆಗೂ ಕೆಲಸಮಾಡುತ್ತಾ” ಇದ್ದಾರೆ. (ಮತ್ತಾ. 12:8) ಭೂಮಿಗಾಗಿರುವ ಆ ಉದ್ದೇಶವು ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆಯ ಕೊನೆಯಲ್ಲಿ ಸಂಪೂರ್ಣವಾಗಿ ನೆರವೇರುವ ತನಕ ದೇವರ ವಿಶ್ರಾಂತಿಯ ದಿನ ಮುಂದುವರಿಯುವುದು.
(ಇಬ್ರಿಯ 4:6) ಆದುದರಿಂದ ಕೆಲವರು ಅದರಲ್ಲಿ ಇನ್ನೂ ಸೇರಲಿಕ್ಕಿರುವುದರಿಂದ ಮತ್ತು ಸುವಾರ್ತೆಯು ಯಾರಿಗೆ ಮೊದಲು ಪ್ರಕಟಿಸಲ್ಪಟ್ಟಿತೋ ಅವರು ಅವಿಧೇಯತೆಯ ಕಾರಣ ಅದರಲ್ಲಿ ಸೇರದೇ ಹೋದುದರಿಂದ
w11 7/15 ಪುಟ 25 ಪ್ಯಾರ 6
ದೇವರ ವಿಶ್ರಾಂತಿ ದಿನ ಅಂದರೇನು?
6 ದೇವರು ತನ್ನ ಉದ್ದೇಶದ ಬಗ್ಗೆ ಆದಾಮಹವ್ವರಿಗೆ ಸ್ಪಷ್ಟವಾಗಿ ತಿಳಿಸಿದ್ದನು. ಅವರಾದರೋ ಆ ಉದ್ದೇಶಕ್ಕೆ ವಿರುದ್ಧವಾಗಿ ಕ್ರಿಯೆಗೈದರು. ಆದರೆ ಅವಿಧೇಯ ಮಾರ್ಗವನ್ನು ಹಿಡಿದವರು ಪ್ರಥಮ ಮಾನವರಾದ ಆದಾಮಹವ್ವರು ಮಾತ್ರವೇ ಆಗಿರಲಿಲ್ಲ. ಅವರ ನಂತರ ಲಕ್ಷಾಂತರ ಮಂದಿ ಅದೇ ಮಾರ್ಗವನ್ನು ಆಯ್ಕೆಮಾಡಿದ್ದಾರೆ. ಅಷ್ಟೇಕೆ ದೇವರಾದುಕೊಂಡ ಜನರು ಅಂದರೆ ಇಸ್ರಾಯೇಲ್ಯರು ಸಹ ಪದೇ ಪದೇ ಅವಿಧೇಯ ಮಾರ್ಗದಲ್ಲಿ ನಡೆದರು. ಒಂದನೇ ಶತಮಾನದಲ್ಲಿದ್ದ ಕೆಲವು ಕ್ರೈಸ್ತರೂ ಆ ಪ್ರಾಚೀನ ಇಸ್ರಾಯೇಲ್ಯರಂತೆ ಅವಿಧೇಯರಾಗುವ ಸಾಧ್ಯತೆಯಿತ್ತು. ಹಾಗಾಗಿಯೇ ಪೌಲನು ಅವರನ್ನು ಹೀಗೆ ಎಚ್ಚರಿಸಿದನು: “ಆದುದರಿಂದ ಯಾವನಾದರೂ ಅದೇ ನಮೂನೆಯ ಅವಿಧೇಯತೆಯಿಂದ ಬಿದ್ದಾನೆಂಬ ಭಯದಿಂದ, ಆ ವಿಶ್ರಾಂತಿಯಲ್ಲಿ ಸೇರುವುದಕ್ಕೆ ನಮ್ಮಿಂದಾಗುವ ಪರಮ ಪ್ರಯತ್ನವನ್ನು ಮಾಡೋಣ.”(ಇಬ್ರಿ. 4:11) ಪೌಲನ ಈ ಮಾತುಗಳು ತೋರಿಸುವಂತೆ, ಅವಿಧೇಯ ಜನರು ದೇವರ ವಿಶ್ರಾಂತಿಯ ದಿನವನ್ನು ಸೇರಲಾರರು. ಇದು ನಮಗೆ ಯಾವ ಅರ್ಥದಲ್ಲಿದೆ? ನಾವು ಯಾವುದೇ ವಿಧದಲ್ಲಿ ದೇವರ ಉದ್ದೇಶಕ್ಕೆ ತಿರುಗಿಬಿದ್ದರೂ ದೇವರ ವಿಶ್ರಾಂತಿಯ ದಿನವನ್ನು ಸೇರುವುದಿಲ್ಲವೆಂದೋ? ಈ ಪ್ರಶ್ನೆಗೆ ಉತ್ತರವು ನಮಗೆ ತುಂಬ ಪ್ರಾಮುಖ್ಯ ಮತ್ತು ಈ ಲೇಖನದಲ್ಲಿ ನಾವದರ ಬಗ್ಗೆ ಹೆಚ್ಚನ್ನು ಕಲಿಯಲಿದ್ದೇವೆ. ಆದರೆ ಅದಕ್ಕೂ ಮುಂಚೆ, ಇಸ್ರಾಯೇಲ್ಯರ ಕೆಟ್ಟ ಮಾದರಿಯನ್ನು ಮತ್ತು ಅವರು ಏಕೆ ದೇವರ ವಿಶ್ರಾಂತಿಯ ದಿನವನ್ನು ಸೇರಲಿಲ್ಲ ಎಂಬದನ್ನು ಪರಿಗಣಿಸೋಣ.
(ಇಬ್ರಿಯ 4:9-11) ಆದುದರಿಂದ ದೇವರ ಜನರಿಗೆ ಒಂದು ಸಬ್ಬತ್ ವಿಶ್ರಾಂತಿಯು ಇನ್ನೂ ಇದೆ. 10 ದೇವರು ತನ್ನ ಸ್ವಂತ ಕಾರ್ಯಗಳನ್ನು ಮುಗಿಸಿ ವಿಶ್ರಮಿಸಿಕೊಂಡಂತೆಯೇ, ದೇವರ ವಿಶ್ರಾಂತಿಯಲ್ಲಿ ಸೇರಿದವನು ಸಹ ತನ್ನ ಸ್ವಂತ ಕಾರ್ಯಗಳಿಂದ ವಿಶ್ರಮಿಸಿಕೊಂಡಿದ್ದಾನೆ. 11 ಆದುದರಿಂದ ಯಾವನಾದರೂ ಅದೇ ನಮೂನೆಯ ಅವಿಧೇಯತೆಯಿಂದ ಬಿದ್ದಾನೆಂಬ ಭಯದಿಂದ, ಆ ವಿಶ್ರಾಂತಿಯಲ್ಲಿ ಸೇರುವುದಕ್ಕೆ ನಮ್ಮಿಂದಾಗುವ ಪರಮ ಪ್ರಯತ್ನವನ್ನು ಮಾಡೋಣ.
w11 7/15 ಪುಟ 28 ಪ್ಯಾರ 16-17
ದೇವರ ವಿಶ್ರಾಂತಿ ದಿನ ಅಂದರೇನು?
16 ರಕ್ಷಣೆ ಪಡೆಯಬೇಕಾದರೆ ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸಲೇಬೇಕೆಂದು ನಮ್ಮಲ್ಲಿ ಯಾರೂ ನಂಬುವುದಿಲ್ಲ. ಪೌಲನು ಎಫೆಸ ಸಭೆಗೆ ಬರೆದ ಮಾತುಗಳು ಸ್ಪಷ್ಟವಾಗಿವೆ: “ಅಪಾತ್ರ ದಯೆಯಿಂದಾಗಿಯೇ ನೀವು ನಿಮ್ಮ ನಂಬಿಕೆಯ ಮೂಲಕ ರಕ್ಷಿಸಲ್ಪಟ್ಟಿದ್ದೀರಿ; ಇದು ನಿಮ್ಮಿಂದ ಉಂಟಾದದ್ದಲ್ಲ, ಇದು ದೇವರ ಉಡುಗೊರೆಯೇ. ಇದು ನಮ್ಮ ಕ್ರಿಯೆಗಳಿಂದ ಉಂಟಾದದ್ದೂ ಅಲ್ಲ; ಆದುದರಿಂದ ಹೊಗಳಿಕೊಳ್ಳುವುದಕ್ಕೆ ಯಾವ ಮನುಷ್ಯನಿಗೂ ಆಧಾರವಿಲ್ಲ.” (ಎಫೆ. 2:8, 9) ಹಾಗಾದರೆ ಇಂದು ಕ್ರೈಸ್ತರು ದೇವರ ವಿಶ್ರಾಂತಿಯಲ್ಲಿ ಹೇಗೆ ಸೇರಸಾಧ್ಯ? ಯೆಹೋವನು ಭೂಮಿಯ ಕಡೆಗಿನ ತನ್ನ ಉದ್ದೇಶವನ್ನು ಪೂರೈಸುವ ಸಲುವಾಗಿ ಏಳನೆಯ ದಿನವನ್ನು ಅಂದರೆ ತನ್ನ ವಿಶ್ರಾಂತಿಯ ದಿನವನ್ನು ಬದಿಗಿಟ್ಟನು ಎಂಬದನ್ನು ನೆನಪಿಸಿಕೊಳ್ಳಿ. ಯೆಹೋವನು ತನ್ನ ಉದ್ದೇಶದ ಕುರಿತು ಹಾಗೂ ಆತನು ನಮ್ಮಿಂದ ಅಪೇಕ್ಷಿಸುವ ಸಂಗತಿಯ ಕುರಿತು ತನ್ನ ಸಂಘಟನೆಯ ಮೂಲಕ ನಮಗೆ ತಿಳಿಸುತ್ತಾನೆ. ನಾವು ಯೆಹೋವನಿಗೆ ವಿಧೇಯರಾಗುವಲ್ಲಿ ಮತ್ತು ಆತನ ಸಂಘಟನೆಗೆ ಹೊಂದಿಕೆಯಲ್ಲಿ ಕ್ರಿಯೆಗೈಯುವಲ್ಲಿ ಆತನ ವಿಶ್ರಾಂತಿಯಲ್ಲಿ ಸೇರುವೆವು.
17 ಒಂದುವೇಳೆ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳು ಕೊಡುವ ಬೈಬಲಾಧಾರಿತ ಸಲಹೆಗಳನ್ನು ಅಸಡ್ಡೆಮಾಡಿ ನಾವು ನಮ್ಮದೇ ಆದ ದಾರಿಯಲ್ಲಿ ನಡೆಯುವಲ್ಲಿ ದೇವರ ಉದ್ದೇಶದ ವಿರುದ್ಧ ತಿರುಗಿಬಿದ್ದಂತಿರುವುದು. ಇದು ಯೆಹೋವನೊಂದಿಗಿನ ನಮ್ಮ ಸಮಾಧಾನ ಸಂಬಂಧಕ್ಕೆ ಕುತ್ತುತರುವುದು. ಮುಂದಿನ ಲೇಖನದಲ್ಲಿ, ವಿಧೇಯತೆ ತೋರಿಸಲು ನಮಗೆ ಅವಕಾಶ ನೀಡುವ ಕೆಲವೊಂದು ಸನ್ನಿವೇಶಗಳನ್ನು ಪರಿಗಣಿಸುವೆವು. ಈ ಸನ್ನಿವೇಶಗಳಲ್ಲಿ ನಾವು ಮಾಡುವ ನಿರ್ಣಯಗಳು ನಾವು ದೇವರ ವಿಶ್ರಾಂತಿಯಲ್ಲಿ ಸೇರಿದ್ದೇವೋ ಇಲ್ಲವೋ ಎನ್ನುವುದನ್ನು ತೋರಿಸಿಕೊಡುತ್ತವೆ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಇಬ್ರಿಯ 4:12) ದೇವರ ವಾಕ್ಯವು ಸಜೀವವಾದದ್ದೂ ಪ್ರಬಲವಾದದ್ದೂ ಯಾವುದೇ ಇಬ್ಬಾಯಿಕತ್ತಿಗಿಂತಲೂ ಹರಿತವಾದದ್ದೂ ಪ್ರಾಣಮನಸ್ಸುಗಳನ್ನು ಮತ್ತು ಕೀಲುಮಜ್ಜೆಗಳನ್ನು ವಿಭಾಗಿಸುವಷ್ಟರ ಮಟ್ಟಿಗೆ ತೂರಿಹೋಗುವಂಥದ್ದೂ ಹೃದಯದ ಆಲೋಚನೆಗಳನ್ನೂ ಸಂಕಲ್ಪಗಳನ್ನೂ ವಿವೇಚಿಸಲು ಶಕ್ತವಾಗಿರುವಂಥದ್ದೂ ಆಗಿದೆ.
w16 ಸೆಪ್ಟೆಂಬರ್ ಪುಟ 13
ವಾಚಕರಿಂದ ಪ್ರಶ್ನೆಗಳು
“ಸಜೀವವಾದದ್ದೂ ಪ್ರಬಲವಾದದ್ದೂ” ಆಗಿದೆ ಎಂದು ಇಬ್ರಿಯ 4:12 ರಲ್ಲಿ ತಿಳಿಸಲಾಗಿರುವ “ದೇವರ ವಾಕ್ಯ” ಯಾವುದು?
▪ ಈ ವಚನದ ಹಿನ್ನೆಲೆಯನ್ನು ನೋಡಿದರೆ ಅಪೊಸ್ತಲ ಪೌಲ ದೇವರ ವಾಕ್ಯವನ್ನು ಬೈಬಲಿನಲ್ಲಿರುವ ಸಂದೇಶಕ್ಕೆ ಅಥವಾ ದೇವರ ಉದ್ದೇಶಕ್ಕೆ ಸೂಚಿಸುತ್ತಿದ್ದ ಅಂತ ಗೊತ್ತಾಗುತ್ತದೆ.
ಬೈಬಲಿಗೆ ಜೀವನವನ್ನು ಬದಲಾಯಿಸುವ ಶಕ್ತಿಯಿದೆ ಎಂದು ತೋರಿಸಲು ನಮ್ಮ ಪ್ರಕಾಶನಗಳಲ್ಲಿ ಹೆಚ್ಚಾಗಿ ಇಬ್ರಿಯ 4:12 ನ್ನು ಬಳಸಲಾಗುತ್ತದೆ. ಬೈಬಲಿಗೆ ಆ ಶಕ್ತಿ ಇರುವುದು ನೂರಕ್ಕೆ ನೂರರಷ್ಟು ನಿಜ ಕೂಡ. ಹಾಗಿದ್ದರೂ ಈ ವಚನಕ್ಕಿರುವ ವಿಶಾಲಾರ್ಥವನ್ನು ತಿಳಿಯುವುದು ಒಳ್ಳೇದು. ದೇವರ ಉದ್ದೇಶಗಳು ಪವಿತ್ರ ಬರಹಗಳಲ್ಲಿ ಬಹಳ ಹಿಂದೆಯೇ ತಿಳಿಸಲಾಗಿತ್ತು. ಆ ಉದ್ದೇಶಗಳಿಗೆ ಹೊಂದಿಕೆಯಲ್ಲಿ ಜೀವಿಸುವಂತೆ ಇಬ್ರಿಯ ಕ್ರೈಸ್ತರನ್ನು ಉತ್ತೇಜಿಸುವಾಗ ಪೌಲನು ಈ ವಚನವನ್ನು ಬರೆದನು. ಈ ಸಂದರ್ಭದಲ್ಲಿ, ಈಜಿಪ್ಟ್ನಿಂದ ಬಿಡುಗಡೆಯಾಗಿ ಬಂದ ಇಸ್ರಾಯೇಲ್ಯರ ಉದಾಹರಣೆ ಕೊಟ್ಟನು. ಅವರಿಗೆ “ಹಾಲೂ ಜೇನೂ ಹರಿಯುವ” ವಾಗ್ದಾತ್ತ ದೇಶಕ್ಕೆ ಹೋಗುವ ಸೌಭಾಗ್ಯ ಇತ್ತು. ಅವರು ದೇವರ ವಿಶ್ರಾಂತಿಯಲ್ಲಿ ಸೇರಿ ಆತನ ಆಶೀರ್ವಾದಗಳನ್ನು ಅನುಭವಿಸಬಹುದಿತ್ತು.—ವಿಮೋ. 3:8; ಧರ್ಮೋ. 12:9, 10.
ಯೆಹೋವನ ಉದ್ದೇಶ ಅದೇ ಆಗಿತ್ತು. ಆದರೆ ಇಸ್ರಾಯೇಲ್ಯರು ನಂತರ ತಮ್ಮ ಹೃದಯಗಳನ್ನು ಕಠಿಣ ಮಾಡಿಕೊಂಡು ದೇವರಲ್ಲಿ ತಮ್ಮ ನಂಬಿಕೆ ಕಳಕೊಂಡರು. ಇದರಿಂದ ತಮಗೆ ಸಿಗಲಿದ್ದ ಆಶೀರ್ವಾದಗಳನ್ನು ಕಳಕೊಂಡರು. (ಅರ. 14:30; ಯೆಹೋ. 14:6-10) ಆದರೂ ‘ದೇವರ ವಿಶ್ರಾಂತಿಯಲ್ಲಿ ಸೇರುವ ವಾಗ್ದಾನವು ಇನ್ನೂ ಇದೆ’ ಎಂದು ಪೌಲ ಹೇಳಿದನು. (ಇಬ್ರಿ. 3:16-19; 4:1) ಆ “ವಾಗ್ದಾನ” ದೇವರು ವ್ಯಕ್ತಪಡಿಸಿರುವ ಉದ್ದೇಶದ ಭಾಗವಾಗಿದೆ. ಇಬ್ರಿಯ ಕ್ರೈಸ್ತರಂತೆ ನಾವು ಆ ಉದ್ದೇಶದ ಬಗ್ಗೆ ಓದಿ ಅದಕ್ಕೆ ಹೊಂದಿಕೆಯಲ್ಲಿ ಜೀವಿಸಲು ಸಾಧ್ಯ. ಈ ವಾಗ್ದಾನಕ್ಕೆ ಬೈಬಲಿನ ಆಧಾರ ಇದೆ ಎಂದು ಒತ್ತಿಹೇಳಲು ಪೌಲನು ಆದಿಕಾಂಡ 2:2 ಮತ್ತು ಕೀರ್ತನೆ 95:11 ನ್ನು ಉಲ್ಲೇಖಿಸಿದನು.
‘ದೇವರ ವಿಶ್ರಾಂತಿಯಲ್ಲಿ ಸೇರುವ ವಾಗ್ದಾನವು ಇನ್ನೂ ಇದೆ’ ಅನ್ನುವ ವಿಷಯ ನಮಗೆ ಸಂತೋಷ ತರುತ್ತದೆ. ಬೈಬಲ್ ತಿಳಿಸುವ ದೇವರ ವಿಶ್ರಾಂತಿಯಲ್ಲಿ ಸೇರಲು ಖಂಡಿತ ಸಾಧ್ಯ ಎಂದು ನಾವು ನಂಬುತ್ತೇವೆ. ಅದಕ್ಕಾಗಿ ಬೇಕಾದ ಹೆಜ್ಜೆಗಳನ್ನು ಕೂಡ ತೆಗೆದುಕೊಂಡಿದ್ದೇವೆ. ನಾವು ದೇವರ ವಿಶ್ರಾಂತಿಯಲ್ಲಿ ಸೇರಲು ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸಬೇಕಾಗಿಲ್ಲ ಅಥವಾ ಬೇರೆ ವಿಷಯಗಳನ್ನು ಮಾಡಿ ದೇವರ ಮೆಚ್ಚಿಗೆ ಪಡೆಯಬೇಕಾಗಿಲ್ಲ. ಬದಲಾಗಿ ದೇವರ ಮೇಲೆ ಮತ್ತು ಆತನ ಉದ್ದೇಶಗಳ ಮೇಲೆ ನಂಬಿಕೆ ಇಟ್ಟು, ಅದಕ್ಕೆ ಹೊಂದಿಕೆಯಲ್ಲಿ ಜೀವಿಸಿದರೆ ಸಾಕು. ಇಂದು, ಭೂವ್ಯಾಪಕವಾಗಿ ಸಾವಿರಾರು ಜನರು ಬೈಬಲನ್ನು ಅಧ್ಯಯನ ಮಾಡಿ ದೇವರ ಉದ್ದೇಶಗಳ ಬಗ್ಗೆ ಕಲಿಯುತ್ತಿದ್ದಾರೆ. ಅನೇಕರು ತಮ್ಮ ಜೀವನವನ್ನು ಬದಲಾಯಿಸಿ ನಂಬಿಕೆ ತೋರಿಸಿ ದೀಕ್ಷಾಸ್ನಾನ ಪಡೆದಿದ್ದಾರೆ. ಅವರ ಜೀವನಗಳು ಬದಲಾಗುತ್ತಿರುವ ವಿಷಯ ತಾನೇ “ದೇವರ ವಾಕ್ಯವು ಸಜೀವವಾದದ್ದೂ ಪ್ರಬಲವಾದದ್ದೂ” ಆಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬೈಬಲಿನಲ್ಲಿ ತಿಳಿಸಲಾಗಿರುವ ದೇವರ ಉದ್ದೇಶವು ನಮ್ಮ ಜೀವನವನ್ನು ಈಗಾಗಲೇ ಪ್ರಭಾವಿಸಿದೆ, ಇನ್ನು ಮುಂದೆಯೂ ಪ್ರಭಾವಿಸುತ್ತದೆ.
(ಇಬ್ರಿಯ 6:17, 18) ಇದೇ ರೀತಿಯಲ್ಲಿ ದೇವರು ತನ್ನ ಸಂಕಲ್ಪವು ಬದಲಾಗುವುದಿಲ್ಲ ಎಂಬುದನ್ನು ವಾಗ್ದಾನಕ್ಕೆ ಬಾಧ್ಯರಾಗುವವರಿಗೆ ಹೆಚ್ಚು ಹೇರಳವಾಗಿ ತೋರಿಸಬೇಕೆಂದು ಉದ್ದೇಶಿಸಿದಾಗ ಆತನು ಆಣೆಯಿಂದ ತನ್ನ ಮಾತನ್ನು ದೃಢೀಕರಿಸಿದನು. 18ಹೀಗೆ ದೇವರ ಆಶ್ರಯಕ್ಕಾಗಿ ಓಡಿಬಂದಿರುವ ನಾವು, ಆತನು ಯಾವುದರ ಕುರಿತು ಸುಳ್ಳಾಡಲಾರನೋ ಆ ಬದಲಾಗದ ಎರಡು ಸಂಗತಿಗಳ ಮೂಲಕ ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ದೃಢವಾಗಿ ಹಿಡಿದುಕೊಳ್ಳಲು ಬಲವಾದ ಉತ್ತೇಜನವನ್ನು ಹೊಂದಸಾಧ್ಯವಾಯಿತು.
it-1 ಪುಟ 1139 ಪ್ಯಾರ 2
ನಿರೀಕ್ಷೆ
‘ಸ್ವರ್ಗೀಯ ಕರೆಯಲ್ಲಿ ಪಾಲುಗಾರರಾಗಿರುವವರಿಗೆ’ ಅಂದರೆ ಸ್ವರ್ಗಕ್ಕೆ ಹೋಗುವ ನಿರೀಕ್ಷೆ ಇರುವವರಿಗೆ ನಿತ್ಯಜೀವ ಮತ್ತು ಹಾಳಾಗದ ದೇಹ ಸಿಗುವುದು ಖಂಡಿತ. (ಇಬ್ರಿ 3:1) ಇದನ್ನು ಹೇಗೆ ಹೇಳಬಹುದು? ಹೀಗೆ ಹೇಳಲು ಎರಡು ಆಧಾರಗಳಿವೆ. ಮೊದಲ ಆಧಾರ ದೇವರು ಕೊಟ್ಟಿರುವ ಮಾತು ಮತ್ತು ಎರಡನೇ ಆಧಾರ ಆ ಮಾತಿನ ಮೇಲೆ ದೇವರೇ ಮಾಡಿರುವ ಪ್ರಮಾಣ. ‘ಬದಲಾಗದ ಈ ಎರಡು ಸಂಗತಿಗಳು’ ಸುಳ್ಳಾಡದ ದೇವರಿಂದ ಬಂದಿರುವುದರಿಂದ, ಅವನು ಕೊಟ್ಟ ಮಾತು ಖಂಡಿತ ನಿಜವಾಗುತ್ತೆ. ಈ ನಿರೀಕ್ಷೆಯನ್ನು ನಂಬಲು ಇನ್ನೊಂದು ಕಾರಣ ಸಹ ಇದೆ. ಅದೇನೆಂದರೆ ಈ ನಿರೀಕ್ಷೆ ಯೇಸುವಿನ ಮೂಲಕ ಸಿಗುತ್ತೆ ಮತ್ತು ಅವನಿಗೆ ಈಗಾಗಲೇ ಸ್ವರ್ಗದಲ್ಲಿ ಅಮರ ಜೀವನ ಸಿಕ್ಕಿದೆ. ಹಾಗಾಗಿ, “ಈ ನಿರೀಕ್ಷೆಯು ನಮ್ಮ ಪ್ರಾಣಕ್ಕೆ ಲಂಗರದಂತಿದ್ದು ನಿಶ್ಚಯವಾದದ್ದೂ ದೃಢವಾದದ್ದೂ ಆಗಿದೆ; ಇದು ತೆರೆಯೊಳಗಿನಿಂದ ಪ್ರವೇಶಿಸುತ್ತದೆ (ಹಿಂದಿನ ಕಾಲದಲ್ಲಿ ಮಹಾಯಾಜಕನು ದಾಟಿ ಹೋಗುತ್ತಿದ್ದ ದೇವರ ಗುಡಾರದ ತೆರೆ). ನಮಗೋಸ್ಕರ ಮುಂದೂತನಾದ ಯೇಸು ಈಗಾಗಲೇ ಆ ತೆರೆಯ ಒಳಗೆ (ಸ್ವರ್ಗ) ಪ್ರವೇಶಿಸಿದ್ದಾನೆ; ಅವನು ಮೆಲ್ಕಿಜೆದೇಕನ ರೀತಿಗನುಸಾರ ಸದಾಕಾಲಕ್ಕೂ ಮಹಾ ಯಾಜಕನಾಗಿದ್ದಾನೆ.”—ಇಬ್ರಿ 6:17-20.