ಯೆಹೋವನ ಮಹಾ ಆತ್ಮಿಕ ದೇವಾಲಯ
“ಮಹಾಯಾಜಕನು ನಮಗಿದ್ದಾನೆ. . . . ಈತನು ಪವಿತ್ರಸ್ಥಾನದಲ್ಲಿ ಅಂದರೆ ಮನುಷ್ಯನು ಹಾಕದೆ ಕರ್ತನೇ [“ಯೆಹೋವನೇ,” NW] ಹಾಕಿದ ನಿಜವಾದ ದೇವದರ್ಶನಗುಡಾರದಲ್ಲಿ ಯಾಜಕೋದ್ಯೋಗ ನಡಿಸುವವನಾಗಿದ್ದಾನೆ.”—ಇಬ್ರಿಯ 8:1, 2.
1. ಪಾಪಪೂರ್ಣ ಮಾನವಕುಲಕ್ಕೆ ಯಾವ ಪ್ರೀತಿಯ ಒದಗಿಸುವಿಕೆಯನ್ನು ದೇವರು ಮಾಡಿದನು?
ಯೆಹೋವ ದೇವರು, ಮಾನವಕುಲಕ್ಕಾಗಿರುವ ತನ್ನ ಮಹಾ ಪ್ರೀತಿಯಿಂದಾಗಿ, ಲೋಕದ ಪಾಪಗಳನ್ನು ತೆಗೆದುಹಾಕಲು ಒಂದು ಯಜ್ಞವನ್ನು ಒದಗಿಸಿದನು. (ಯೋಹಾನ 1:29; 3:16) ಅದು ಸ್ವರ್ಗದಿಂದ ತನ್ನ ಜ್ಯೇಷ್ಠ ಪುತ್ರನ ಜೀವವನ್ನು, ಮರಿಯಳೆಂಬ ಹೆಸರಿನ ಒಬ್ಬಾಕೆ ಯೆಹೂದಿ ಕನ್ಯೆಯ ಗರ್ಭಕ್ಕೆ ವರ್ಗಾಯಿಸುವುದನ್ನು ಅವಶ್ಯಪಡಿಸಿತು. ಮರಿಯಳು ಗರ್ಭತಾಳಲಿರುವ ಮಗುವು “ಪವಿತ್ರ ಶಿಶು ದೇವರ ಮಗನೆನಿಸಿಕೊಳ್ಳುವದು” ಎಂಬುದಾಗಿ ಯೆಹೋವನ ದೇವದೂತನು ಆಕೆಗೆ ಸ್ಪಷ್ಟವಾಗಿ ವಿವರಿಸಿದನು. (ಲೂಕ 1:34, 35) ಮರಿಯಳನ್ನು ಮದುವೆಯಾಗಲು ನಿಶ್ಚಯಾರ್ಥವಾಗಿದ್ದ ಯೋಸೇಫನಿಗೆ, ಯೇಸುವಿನ ಗರ್ಭಧಾರಣೆಯ ಅದ್ಭುತಕರ ಸ್ವರೂಪದ ಕುರಿತು ಹೇಳಲಾಯಿತು ಮತ್ತು ಇವನು “ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿಕಾಯುವನು” ಎಂಬುದಾಗಿ ಅವನು ತಿಳಿದುಕೊಂಡನು.—ಮತ್ತಾಯ 1:20, 21.
2. ಯೇಸು ಸುಮಾರು 30 ವರ್ಷ ಪ್ರಾಯದವನಾಗಿದ್ದಾಗ ಏನು ಮಾಡಿದನು, ಮತ್ತು ಏಕೆ?
2 ಯೇಸು ಬೆಳೆದಂತೆ, ತನ್ನ ಅದ್ಭುತಕರವಾದ ಜನನದ ಕುರಿತಾದ ಈ ವಾಸ್ತವಾಂಶಗಳಲ್ಲಿ ಕೆಲವನ್ನು ಅವನು ಗ್ರಹಿಸಿದ್ದಿರಲೇಬೇಕು. ಭೂಮಿಯ ಮೇಲೆ ತಾನೊಂದು ಜೀವರಕ್ಷಕ ಕೆಲಸವನ್ನು ಮಾಡಬೇಕೆಂದು ತನ್ನ ಸ್ವರ್ಗೀಯ ತಂದೆಯು ಬಯಸಿದನೆಂದು ಅವನಿಗೆ ಗೊತ್ತಿತ್ತು. ಆದುದರಿಂದ, ಸುಮಾರು 30 ವರ್ಷ ಪ್ರಾಯದ, ಒಬ್ಬ ಪೂರ್ತಿಯಾಗಿ ಬೆಳೆದ ಮನುಷ್ಯನೋಪಾದಿ, ಯೇಸು ಯೋರ್ದಾನ್ ನದಿಯಲ್ಲಿ ದೀಕ್ಷಾಸ್ನಾನಪಡೆದುಕೊಳ್ಳಲು ದೇವರ ಪ್ರವಾದಿಯಾದ ಯೋಹಾನನ ಬಳಿಗೆ ಬಂದನು.—ಮಾರ್ಕ 1:9; ಲೂಕ 3:23.
3. (ಎ) “ಯಜ್ಞನೈವೇದ್ಯಗಳು ನಿನಗೆ ಇಷ್ಟವಾಗಿರಲಿಲ್ಲ,” ಎಂಬ ಮಾತುಗಳಿಂದ ಯೇಸು ಏನನ್ನು ಅರ್ಥೈಸಿದನು? (ಬಿ) ಯೇಸು ತನ್ನ ಶಿಷ್ಯರಾಗಲು ಬಯಸುವವರೆಲ್ಲರಿಗಾಗಿ ಯಾವ ಎದ್ದುಕಾಣುವ ಮಾದರಿಯನ್ನಿಟ್ಟನು?
3 ಯೇಸು ತನ್ನ ದೀಕ್ಷಾಸ್ನಾನದ ಸಮಯದಲ್ಲಿ ಪ್ರಾರ್ಥಿಸುತ್ತಿದ್ದನು. (ಲೂಕ 3:21) ತನ್ನ ಜೀವನದ ಈ ಸಮಯದಂದಿನಿಂದ ಅವನು, ಅಪೊಸ್ತಲ ಪೌಲನಿಂದ ತದನಂತರ ಸೂಚಿಸಲ್ಪಟ್ಟಂತೆ, ಕೀರ್ತನೆ 40:6-8ರ ಮಾತುಗಳನ್ನು ನೆರವೇರಿಸಿದನೆಂಬುದು ಸುವ್ಯಕ್ತ: “ಯಜ್ಞನೈವೇದ್ಯಗಳು ನಿನಗೆ ಇಷ್ಟವಾಗಿರಲಿಲ್ಲ, ನನಗೆ ದೇಹವನ್ನು ಸಿದ್ಧಮಾಡಿಕೊಟ್ಟಿ.” (ಇಬ್ರಿಯ 10:5) ಹೀಗೆ ಯೆರೂಸಲೇಮಿನ ದೇವಾಲಯದಲ್ಲಿ ಪ್ರಾಣಿ ಯಜ್ಞಗಳು ಅರ್ಪಿಸಲ್ಪಡುವುದನ್ನು ಮುಂದುವರಿಸಲು ದೇವರು “ಇಷ್ಟ”ಪಡಲಿಲ್ಲವೆಂಬ ತನ್ನ ಅರಿವನ್ನು ಯೇಸು ತೋರ್ಪಡಿಸಿದನು. ಬದಲಿಗೆ, ಒಂದು ಯಜ್ಞದೋಪಾದಿ ಅರ್ಪಿಸಲು, ದೇವರು ತನಗಾಗಿ—ಯೇಸುವಿಗಾಗಿ—ಒಂದು ಪರಿಪೂರ್ಣ ಮಾನವ ದೇಹವನ್ನು ತಯಾರಿಸಿದ್ದನೆಂದು ಅವನು ಗ್ರಹಿಸಿದನು. ಇದು ಪ್ರಾಣಿ ಯಜ್ಞಗಳ ಯಾವುದೇ ಹೆಚ್ಚಿನ ಅಗತ್ಯವನ್ನು ತೆಗೆದುಹಾಕಲಿತ್ತು. ದೇವರ ಚಿತ್ತಕ್ಕೆ ಅಧೀನನಾಗುವ ತನ್ನ ಹೃತ್ಪೂರ್ವಕ ಬಯಕೆಯನ್ನು ತೋರಿಸುತ್ತಾ, ಯೇಸು ಪ್ರಾರ್ಥಿಸುವುದನ್ನು ಮುಂದುವರಿಸಿದನು: “ಇಗೋ, ದೇವರೇ, ನಿನ್ನ ಚಿತ್ತವನ್ನು ನೆರವೇರಿಸುವದಕ್ಕೆ ಬಂದಿದ್ದೇನೆ. ಗ್ರಂಥದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದದೆ.” (ಇಬ್ರಿಯ 10:7) ಯೇಸು, ತದನಂತರ ತನ್ನ ಶಿಷ್ಯರಾಗಲಿದ್ದ ಎಲ್ಲರಿಗಾಗಿ ಆ ದಿನದಂದು ಧೈರ್ಯ ಮತ್ತು ನಿಸ್ವಾರ್ಥ ಭಕ್ತಿಯ ಎಂತಹ ಅತ್ಯುತ್ಕೃಷ್ಟವಾದ ಮಾದರಿಯನ್ನಿಟ್ಟನು!—ಮಾರ್ಕ 8:34.
4. ಯೇಸು ತನ್ನನ್ನು ಅರ್ಪಿಸಿಕೊಂಡ ವಿಷಯದ ಕುರಿತು ದೇವರು ತನ್ನ ಮೆಚ್ಚಿಕೆಯನ್ನು ಹೇಗೆ ತೋರಿಸಿದನು?
4 ಯೇಸುವಿನ ದೀಕ್ಷಾಸ್ನಾನದ ಪ್ರಾರ್ಥನೆಗೆ ದೇವರು ಮೆಚ್ಚಿಕೆಯನ್ನು ತೋರಿಸಿದನೊ? ಯೇಸುವಿನ ಆದುಕೊಂಡ ಅಪೊಸ್ತಲರಲ್ಲಿ ಒಬ್ಬನು ನಮಗೆ ಉತ್ತರವನ್ನು ಕೊಡಲಿ: “ಯೇಸು ಸ್ನಾನಮಾಡಿಸಿಕೊಂಡ ಕೂಡಲೆ ನೀರಿನಿಂದ ಮೇಲಕ್ಕೆ ಬರಲು ಇಗೋ, ಆತನಿಗೆ ಆಕಾಶವು ತೆರೆಯಿತು; ಮತ್ತು ದೇವರ ಆತ್ಮ ಪಾರಿವಾಳದ ಹಾಗೆ ಇಳಿದು ತನ್ನ ಮೇಲೆ ಬರುವದನ್ನು ಕಂಡನು. ಆಗ—ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶವಾಣಿ ಆಯಿತು.”—ಮತ್ತಾಯ 3:16, 17; ಲೂಕ 3:21, 22.
5. ಅಕ್ಷರಶಃ ದೇವಾಲಯದ ವೇದಿಯಿಂದ ಏನು ಚಿತ್ರಿಸಲ್ಪಟ್ಟಿತು?
5 ಯಜ್ಞಕ್ಕಾಗಿ ಯೇಸುವಿನ ದೇಹದ ಅರ್ಪಣೆಯ ದೇವರ ಸ್ವೀಕಾರವು ಅರ್ಥೈಸಿದ್ದೇನೆಂದರೆ, ಒಂದು ಆತ್ಮಿಕ ಅರ್ಥದಲ್ಲಿ, ಯೆರೂಸಲೇಮಿನ ದೇವಾಲಯದಲ್ಲಿದ್ದ ವೇದಿಗಿಂತಲೂ ಹೆಚ್ಚು ದೊಡ್ಡದಾದ ಒಂದು ವೇದಿಯು ಪ್ರಮುಖತೆಯನ್ನು ಪಡೆಯಿತು. ಎಲ್ಲಿ ಪ್ರಾಣಿಗಳು ಯಜ್ಞಕ್ಕಾಗಿ ಅರ್ಪಿಸಲ್ಪಟ್ಟವೊ, ಆ ಅಕ್ಷರಶಃ ವೇದಿಯು ಆ ಆತ್ಮಿಕ ವೇದಿಯನ್ನು ಮುನ್ಚಿತ್ರಿಸಿತು, ಇದು ಕಾರ್ಯತಃ ಯೇಸುವಿನ ಮಾನವ ಜೀವವನ್ನು ಒಂದು ಯಜ್ಞದೋಪಾದಿ ಸ್ವೀಕರಿಸಲಿಕ್ಕಾಗಿದ್ದ ದೇವರ “ಚಿತ್ತ” ಅಥವಾ ಏರ್ಪಾಡಾಗಿತ್ತು. (ಇಬ್ರಿಯ 10:10) ಅದಕ್ಕಾಗಿಯೇ ಅಪೊಸ್ತಲ ಪೌಲನು ಜೊತೆ ಕ್ರೈಸ್ತರಿಗೆ ಹೀಗೆ ಬರೆಯಸಾಧ್ಯವಿತ್ತು: “ನಮಗೊಂದು ಯಜ್ಞವೇದಿ ಉಂಟು, ಈ ವೇದಿಯ ಪದಾರ್ಥಗಳನ್ನು ತಿನ್ನುವದಕ್ಕೆ ಯೆಹೂದ್ಯರ ಗುಡಾರದಲ್ಲಿ [ಅಥವಾ, ದೇವಾಲಯದಲ್ಲಿ] ಸೇವೆಯನ್ನು ನಡಿಸುವವರಿಗೆ ಹಕ್ಕಿಲ್ಲ.” (ಇಬ್ರಿಯ 13:10) ಬೇರೆ ಮಾತುಗಳಲ್ಲಿ, ಸತ್ಯ ಕ್ರೈಸ್ತರು, ಹೆಚ್ಚಿನ ಯೆಹೂದಿ ಯಾಜಕರು ತಿರಸ್ಕರಿಸಿದ ಒಂದು ಶ್ರೇಷ್ಠವಾದ ಪಾಪ ಪರಿಹಾರಕ ಯಜ್ಞದಿಂದ ಪ್ರಯೋಜನಪಡೆಯುತ್ತಾರೆ.
6. (ಎ) ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ ಯಾವುದು ಮುಂದಕ್ಕೆ ಬಂದಿತು? (ಬಿ) ಮೆಸ್ಸೀಯ ಅಥವಾ ಕ್ರಿಸ್ತನೆಂಬ ಬಿರುದು ಏನನ್ನು ಅರ್ಥೈಸುತ್ತದೆ?
6 ಪವಿತ್ರಾತ್ಮದೊಂದಿಗೆ ಯೇಸುವಿನ ಅಭಿಷೇಕವು, ದೇವರು ಈಗ ತನ್ನ ಇಡೀ ಆತ್ಮಿಕ ದೇವಾಲಯದ ಏರ್ಪಾಡನ್ನು—ಯೇಸು ಮಹಾ ಯಾಜಕನಂತೆ ಸೇವೆಮಾಡುವುದರೊಂದಿಗೆ—ಅಸ್ತಿತ್ವಕ್ಕೆ ತಂದಿದ್ದನೆಂಬುದನ್ನು ಅರ್ಥೈಸಿತು. (ಅ. ಕೃತ್ಯಗಳು 10:38; ಇಬ್ರಿಯ 5:5) ಈ ಬಹು ಮುಖ್ಯವಾದ ಘಟನೆಯ ವರ್ಷವನ್ನು ಶಿಷ್ಯನಾದ ಲೂಕನು, “ಚಕ್ರವರ್ತಿಯಾದ ತಿಬೇರಿಯನು ಪಟ್ಟಕ್ಕೆ ಬಂದ ಹದಿನೈದನೆಯ ವರುಷ”ವೆಂಬುದಾಗಿ ಎತ್ತಿತೋರಿಸುವಂತೆ ಪ್ರೇರಿಸಲ್ಪಟ್ಟನು. (ಲೂಕ 3:1-3) ಅದು ಸಾ.ಶ. 29ನೆಯ ವರ್ಷಕ್ಕೆ ಅನುರೂಪವಾಗಿದೆ—ಯೆರೂಸಲೇಮಿನ ಗೋಡೆಗಳ ಪುನರ್ನಿರ್ಮಾಣಕ್ಕೆ ಅರಸನಾದ ಅರ್ತಷಸ್ತನು ಆಜ್ಞೆಯನ್ನಿತ್ತ ಸಮಯದಿಂದ ನಿಖರವಾಗಿ ವರ್ಷಗಳ 69 ವಾರಗಳು ಅಥವಾ 483 ವರ್ಷಗಳು. (ನೆಹೆಮೀಯ 2:1, 5-8) ಪ್ರವಾದನೆಗನುಸಾರ, “ಅಭಿಷಿಕ್ತನಾದ ಪ್ರಭುವು” ಆ ಮುಂತಿಳಿಸಲ್ಪಟ್ಟ ವರ್ಷದಲ್ಲಿ ಕಾಣಿಸಿಕೊಳ್ಳಲಿದ್ದನು. (ದಾನಿಯೇಲ 9:25) ಅನೇಕ ಯೆಹೂದ್ಯರಿಗೆ ಇದರ ಅರಿವಿತ್ತೆಂಬುದು ಸುವ್ಯಕ್ತ. ಮೆಸ್ಸೀಯನ ಅಥವಾ ಕ್ರಿಸ್ತನ—“ಅಭಿಷಿಕ್ತನು” ಎಂಬ ಅದೇ ಅರ್ಥವಿರುವ ಹೀಬ್ರು ಹಾಗೂ ಗ್ರೀಕ್ ಪದಗಳಿಂದ ಬರುವ ಬಿರುದುಗಳು—ತೋರಿಸಿಕೊಳ್ಳುವಿಕೆಯ ಕುರಿತು “ಜನರು . . . ಎದುರುನೋಡುವವರಾಗಿ” ಇದ್ದರೆಂದು ಲೂಕನು ವರದಿಸುತ್ತಾನೆ.—ಲೂಕ 3:15.
7. (ಎ) ದೇವರು “ಅತಿಪರಿಶುದ್ಧ” ಸ್ಥಳವನ್ನು ಯಾವಾಗ ಅಭಿಷೇಕಿಸಿದನು, ಮತ್ತು ಇದು ಏನನ್ನು ಅರ್ಥೈಸಿತು? (ಬಿ) ಯೇಸುವಿಗೆ ತನ್ನ ದೀಕ್ಷಾಸ್ನಾನದ ಸಮಯದಲ್ಲಿ ಇನ್ನೇನು ಸಂಭವಿಸಿತು?
7 ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ, ದೇವರ ಸ್ವರ್ಗೀಯ ನಿವಾಸವು ಅಭಿಷೇಕಿಸಲ್ಪಟ್ಟಿತು, ಅಥವಾ ಮಹಾ ಆತ್ಮಿಕ ದೇವಾಲಯದ ಏರ್ಪಾಡಿನಲ್ಲಿ “ಅತಿಪರಿಶುದ್ಧ”ವೆಂಬಂತೆ ಪ್ರತ್ಯೇಕವಾಗಿ ಇಡಲ್ಪಟ್ಟಿತ್ತು. (ದಾನಿಯೇಲ 9:24) “ಮನುಷ್ಯನು ಹಾಕದೆ ಕರ್ತನೇ [“ಯೆಹೋವನೇ,” NW] ಹಾಕಿದ ನಿಜವಾದ ದೇವದರ್ಶನಗುಡಾರ [ಅಥವಾ, ದೇವಾಲಯ]” ಜಾರಿಗೆ ಬಂದಿತ್ತು. (ಇಬ್ರಿಯ 8:2) ಮತ್ತೂ, ನೀರು ಹಾಗೂ ಪವಿತ್ರಾತ್ಮದಿಂದಾದ ತನ್ನ ದೀಕ್ಷಾಸ್ನಾನದ ಮುಖಾಂತರ, ಮನುಷ್ಯನಾದ ಯೇಸು ಕ್ರಿಸ್ತನು ಪುನಃ ಒಮ್ಮೆ ದೇವರ ಆತ್ಮಿಕ ಪುತ್ರನೋಪಾದಿ ಜನಿಸಿದನು. (ಹೋಲಿಸಿ ಯೋಹಾನ 3:3.) ದೇವರು ಸಕಾಲದಲ್ಲಿ ತನ್ನ ಪುತ್ರನನ್ನು ಸ್ವರ್ಗೀಯ ಜೀವಿತಕ್ಕೆ ಪುನಃ ಕರೆಯುವನೆಂಬುದನ್ನು ಇದು ಅರ್ಥೈಸಿತು. ಅಲ್ಲಿ ಅವನು “ಸದಾಕಾಲವೂ ಮೆಲ್ಕಿಜೆದೇಕನ ತರಹದ” ರಾಜನೂ ಮಹಾ ಯಾಜಕನೂ ಆಗಿ, ತನ್ನ ತಂದೆಯ ಬಲಗಡೆಯಲ್ಲಿ ಸೇವೆ ಸಲ್ಲಿಸುವನು.—ಇಬ್ರಿಯ 6:20; ಕೀರ್ತನೆ 110:1, 4.
ಸ್ವರ್ಗೀಯ ಮಹಾಪವಿತ್ರಸ್ಥಾನ
8. ಯಾವ ಹೊಸ ವೈಶಿಷ್ಟ್ಯಗಳನ್ನು ಸ್ವರ್ಗದಲ್ಲಿರುವ ದೇವರ ಸಿಂಹಾಸನವು ಈಗ ತೆಗೆದುಕೊಂಡಿತ್ತು?
8 ಯೇಸುವಿನ ದೀಕ್ಷಾಸ್ನಾನದ ದಿನದಂದು, ದೇವರ ಸ್ವರ್ಗೀಯ ಸಿಂಹಾಸನವು ಹೊಸ ವೈಶಿಷ್ಟ್ಯಗಳನ್ನು ವಹಿಸಿಕೊಂಡಿತ್ತು. ಲೋಕದ ಪಾಪಗಳ ಪರಿಹಾರಕ್ಕಾಗಿ ಒಂದು ಪರಿಪೂರ್ಣ ಮಾನವ ಯಜ್ಞದ ಕುರಿತಾದ ದೇವರ ವಿವರಣೆಯು, ಮನುಷ್ಯನ ಪಾಪಪೂರ್ಣತೆಗೆ ವೈದೃಶ್ಯವಾಗಿ ದೇವರ ಪವಿತ್ರತೆಯನ್ನು ಒತ್ತಿಹೇಳಿತು. ಈಗ ಶಾಂತಗೊಳಿಸಲ್ಪಡುವುದಕ್ಕೆ ಅಥವಾ ಪ್ರಸನ್ನಗೊಳಿಸಲ್ಪಡುವುದಕ್ಕಿರುವ ತನ್ನ ಇಚ್ಛೆಯನ್ನು ದೇವರು ವ್ಯಕ್ತಪಡಿಸಿದರಲ್ಲಿ, ಆತನ ಕರುಣೆಯೂ ಅತ್ಯುಜ್ವಲಗೊಳಿಸಲ್ಪಟ್ಟಿತು. ಹೀಗೆ ಸ್ವರ್ಗದಲ್ಲಿರುವ ದೇವರ ಸಿಂಹಾಸನವು, ಎಲ್ಲಿ ಮಹಾ ಯಾಜಕನು ಒಂದು ದೃಷ್ಟಾಂತದ ರೂಪವುಳ್ಳ ವಿಧದಲ್ಲಿ ಪಾಪಪರಿಹಾರ ಮಾಡಲು ಪ್ರಾಣಿಯ ರಕ್ತದೊಂದಿಗೆ ವರ್ಷಕ್ಕೊಮ್ಮೆ ಪ್ರವೇಶಿಸಿದನೊ, ಆ ದೇವಾಲಯದ ಅತ್ಯಂತ ಒಳಗಿನ ಅರೆಯಂತಾಗಿತ್ತು.
9. (ಎ) ಪವಿತ್ರಸ್ಥಾನ ಮತ್ತು ಮಹಾಪವಿತ್ರಸ್ಥಾನದ ನಡುವೆ ಇದ್ದ ತೆರೆಯು ಏನನ್ನು ಚಿತ್ರಿಸಿತು? (ಬಿ) ಯೇಸು ದೇವರ ಆತ್ಮಿಕ ದೇವಾಲಯದ ತೆರೆಯ ಆಚೆ ಹೇಗೆ ಪ್ರವೇಶವನ್ನು ಪಡೆದನು?
9 ಮಹಾಪವಿತ್ರಸ್ಥಾನದಿಂದ ಪವಿತ್ರಸ್ಥಾನವನ್ನು ಬೇರ್ಪಡಿಸಿದ ತೆರೆಯು ಯೇಸುವಿನ ಮಾಂಸಿಕ ಶರೀರವನ್ನು ಚಿತ್ರಿಸಿತು. (ಇಬ್ರಿಯ 10:19, 20) ಅದು, ಯೇಸು ಭೂಮಿಯ ಮೇಲೆ ಒಬ್ಬ ಮನುಷ್ಯನಾಗಿದ್ದಾಗ ತನ್ನ ತಂದೆಯ ಸಾನ್ನಿಧ್ಯದೊಳಗೆ ಪ್ರವೇಶಿಸುವುದರಿಂದ ಅವನನ್ನು ತಡೆದ ತಡೆಗಟ್ಟಾಗಿತ್ತು. (1 ಕೊರಿಂಥ 15:50) ಯೇಸುವಿನ ಮರಣದ ಸಮಯದಲ್ಲಿ, “ದೇವಾಲಯದ ತೆರೆಯು ಮೇಲಿಂದ ಕೆಳಗಿನ ವರೆಗೂ ಹರಿದು ಎರಡು ಭಾಗವಾಯಿತು.” (ಮತ್ತಾಯ 27:51) ಇದು, ಸ್ವರ್ಗದೊಳಕ್ಕೆ ಯೇಸುವಿನ ಪ್ರವೇಶವನ್ನು ತಡೆಯುತ್ತಿದ್ದ ತಡೆಗಟ್ಟು ಈಗ ತೆಗೆದುಹಾಕಲ್ಪಟ್ಟಿತ್ತೆಂಬುದನ್ನು ನಾಟಕೀಯವಾಗಿ ಸೂಚಿಸಿತು. ಮೂರು ದಿನಗಳ ನಂತರ, ಯೆಹೋವ ದೇವರು ಒಂದು ಎದ್ದುಕಾಣುವ ಅದ್ಭುತಕಾರ್ಯವನ್ನು ನಡೆಸಿದನು. ಆತನು ಯೇಸುವನ್ನು ಸತ್ತವರಿಂದ, ಮಾಂಸ ಹಾಗೂ ರಕ್ತವಿರುವ ಒಬ್ಬ ಮರ್ತ್ಯ ಮಾನವನಂತಲ್ಲ, ಬದಲಿಗೆ “ಸದಾಕಾಲವಿರುವ” ಮಹಿಮಾಭರಿತ ಆತ್ಮ ಜೀವಿಯೋಪಾದಿ ಎಬ್ಬಿಸಿದನು. (ಇಬ್ರಿಯ 7:24) ನಲ್ವತ್ತು ದಿನಗಳ ತರುವಾಯ, ಯೇಸು ಸ್ವರ್ಗಕ್ಕೆ ಏರಿಹೋಗಿ, “ದೇವರ ಸಮ್ಮುಖದಲ್ಲಿ ನಮಗೋಸ್ಕರ . . . ಕಾಣಿಸಿಕೊಳ್ಳುವದಕ್ಕೆ,” ವಾಸ್ತವವಾದ “ಅತಿಪರಿಶುದ್ಧವಾದದ್ದನ್ನು” ಪ್ರವೇಶಿಸಿದನು.—ಇಬ್ರಿಯ 9:24.
10. (ಎ) ಯೇಸು ತನ್ನ ಸ್ವರ್ಗೀಯ ತಂದೆಗೆ ತನ್ನ ಯಜ್ಞದ ಮೌಲ್ಯವನ್ನು ಸಾದರಪಡಿಸಿದ ತರುವಾಯ ಏನು ಸಂಭವಿಸಿತು? (ಬಿ) ಪವಿತ್ರಾತ್ಮದಿಂದ ಅಭಿಷೇಕಿಸಲ್ಪಡುವುದು ಕ್ರಿಸ್ತನ ಶಿಷ್ಯರಿಗೆ ಏನನ್ನು ಅರ್ಥೈಸಿತು?
10 ಲೋಕದ ಪಾಪಗಳಿಗಾಗಿ ಪರಿಹಾರವೆಂಬಂತೆ ದೇವರು ಯೇಸುವಿನ ಸುರಿಸಲ್ಪಟ್ಟ ರಕ್ತದ ಮೌಲ್ಯವನ್ನು ಸ್ವೀಕರಿಸಿದನೊ? ನಿಶ್ಚಯವಾಗಿಯೂ ಆತನು ಸ್ವೀಕರಿಸಿದನು. ಇದರ ಪ್ರಮಾಣವು, ನಿಖರವಾಗಿ ಯೇಸುವಿನ ಪುನರುತ್ಥಾನದ 50 ದಿನಗಳ ತರುವಾಯ, ಉತ್ಸವದ ದಿನವಾದ ಪಂಚಾಶತ್ತಮದಂದು ಬಂದಿತು. ದೇವರ ಪವಿತ್ರಾತ್ಮವು ಯೆರೂಸಲೇಮಿನಲ್ಲಿ ಒಟ್ಟಿಗೆ ಕೂಡಿಬಂದಿದ್ದ ಯೇಸುವಿನ 120 ಶಿಷ್ಯರ ಮೇಲೆ ಸುರಿಸಲ್ಪಟ್ಟಿತು. (ಅ. ಕೃತ್ಯಗಳು 2:1, 4, 33) ತಮ್ಮ ಮಹಾ ಯಾಜಕನಾದ ಯೇಸು ಕ್ರಿಸ್ತನಂತೆ, ಈಗ ಅವರು ದೇವರ ಮಹಾ ಆತ್ಮಿಕ ದೇವಾಲಯದ ಏರ್ಪಾಡಿನ ಕೆಳಗೆ “ಆತ್ಮೀಯಯಜ್ಞಗಳನ್ನು ಸಮರ್ಪಿಸುವದಕ್ಕೆ ಪವಿತ್ರ ಯಾಜಕವರ್ಗ”ದೋಪಾದಿ ಸೇವೆಮಾಡಲು ಅಭಿಷೇಕಿಸಲ್ಪಟ್ಟಿದ್ದರು. (1 ಪೇತ್ರ 2:5) ಇನ್ನೂ ಹೆಚ್ಚಾಗಿ, ಈ ಅಭಿಷಿಕ್ತ ಜನರು ಒಂದು ಹೊಸ ರಾಷ್ಟ್ರವನ್ನು, ದೇವರ ಆತ್ಮಿಕ ಇಸ್ರಾಯೇಲಿನ “ಪವಿತ್ರ ರಾಷ್ಟ್ರವನ್ನು” (NW) ರಚಿಸಿದರು. ಇನ್ನುಮುಂದೆ—ಯೆರೆಮೀಯ 31:31ರಲ್ಲಿ ದಾಖಲಿಸಲ್ಪಟ್ಟ “ಹೊಸ . . . ಒಡಂಬಡಿಕೆಯ” ವಾಗ್ದಾನದಂತಹ—ಇಸ್ರಾಯೇಲಿನ ಕುರಿತಾದ ಒಳ್ಳೆಯ ವಿಷಯಗಳ ಬಗ್ಗೆ ಇರುವ ಎಲ್ಲ ಪ್ರವಾದನೆಗಳು, ಅಭಿಷಿಕ್ತ ಕ್ರೈಸ್ತ ಸಭೆಗೆ, ವಾಸ್ತವವಾದ “ದೇವರ ಇಸ್ರಾಯೇಲ್”ಗೆ ಅನ್ವಯಿಸಲಿದ್ದವು.—1 ಪೇತ್ರ 2:9; ಗಲಾತ್ಯ 6:16.
ದೇವರ ಆತ್ಮಿಕ ದೇವಾಲಯದ ಇತರ ವೈಶಿಷ್ಟ್ಯಗಳು
11, 12. (ಎ) ಯೇಸುವಿನ ವಿಷಯದಲ್ಲಿ ಯಾಜಕೀಯ ಅಂಗಳದಿಂದ ಯಾವುದು ಚಿತ್ರಿಸಲ್ಪಟ್ಟಿತು, ಮತ್ತು ಅವನ ಅಭಿಷಿಕ್ತ ಹಿಂಬಾಲಕರ ವಿಷಯದಲ್ಲಿ ಅದು ಏನಾಗಿದೆ? (ಬಿ) ನೀರಿನ ಗಂಗಾಳವು ಏನನ್ನು ಚಿತ್ರಿಸುತ್ತದೆ, ಮತ್ತು ಅದು ಹೇಗೆ ಉಪಯೋಗಿಸಲ್ಪಡುತ್ತಿದೆ?
11 ಮಹಾಪವಿತ್ರಸ್ಥಾನವು ಎಲ್ಲಿ ದೇವರು ಸಿಂಹಾಸನಾರೂಢನಾಗಿದ್ದಾನೊ, ಆ “ಪರಲೋಕ”ವನ್ನೇ ಚಿತ್ರಿಸಿತಾದರೂ, ದೇವರ ಆತ್ಮಿಕ ದೇವಾಲಯದ ಇತರ ಎಲ್ಲ ವೈಶಿಷ್ಟ್ಯಗಳು ಭೂಮಿಯ ಮೇಲಿರುವ ವಿಷಯಗಳಿಗೆ ಸಂಬಂಧಿಸುತ್ತವೆ. (ಇಬ್ರಿಯ 9:24) ಯೆರೂಸಲೇಮಿನಲ್ಲಿದ್ದ ದೇವಾಲಯದಲ್ಲಿ, ಒಂದು ಒಳಗಿನ ಯಾಜಕೀಯ ಅಂಗಳವಿತ್ತು, ಅಲ್ಲಿ ಯಜ್ಞಕ್ಕಾಗಿ ಒಂದು ವೇದಿ ಹಾಗೂ ಪವಿತ್ರ ಸೇವೆಯನ್ನು ಗೈಯುವ ಮೊದಲು ತಮ್ಮನ್ನು ಶುದ್ಧಪಡಿಸಿಕೊಳ್ಳಲು ಯಾಜಕರು ಉಪಯೋಗಿಸಿದ ನೀರಿನ ಒಂದು ದೊಡ್ಡ ಗಂಗಾಳವಿತ್ತು. ಈ ವಿಷಯಗಳು ದೇವರ ಆತ್ಮಿಕ ದೇವಾಲಯದ ಏರ್ಪಾಡಿನಲ್ಲಿ ಏನನ್ನು ಚಿತ್ರಿಸುತ್ತವೆ?
12 ಯೇಸು ಕ್ರಿಸ್ತನ ವಿಷಯದಲ್ಲಿ, ಒಳಗಿನ ಯಾಜಕೀಯ ಅಂಗಳವು ದೇವರ ಪರಿಪೂರ್ಣ ಮಾನವ ಪುತ್ರನೋಪಾದಿ ಅವನ ಪಾಪರಹಿತ ಸ್ಥಿತಿಯನ್ನು ಚಿತ್ರಿಸಿತು. ಯೇಸುವಿನ ಯಜ್ಞದಲ್ಲಿ ನಂಬಿಕೆಯನ್ನು ಇಡುವ ಮುಖಾಂತರ, ಕ್ರಿಸ್ತನ ಅಭಿಷಿಕ್ತ ಹಿಂಬಾಲಕರಿಗೆ ನೀತಿಯು ಆರೋಪಿಸಲ್ಪಟ್ಟಿದೆ. ಹೀಗೆ, ಅವರು ಪಾಪರಹಿತರಾಗಿದ್ದಾರೊ ಎಂಬಂತೆ ದೇವರು ಅವರೊಂದಿಗೆ ನ್ಯಾಯವಾಗಿ ವ್ಯವಹರಿಸಬಲ್ಲನು. (ರೋಮಾಪುರ 5:1; 8:1, 33) ಆದಕಾರಣ, ಈ ಅಂಗಳವು, ಪವಿತ್ರ ಯಾಜಕತ್ವದ ಒಬ್ಬೊಬ್ಬ ಸದಸ್ಯರು ದೇವರ ಮುಂದೆ ಅನುಭವಿಸುವ, ಆರೋಪಿಸಲ್ಪಟ್ಟ ನೀತಿಯ ಮಾನವ ಸ್ಥಿತಿಯನ್ನು ಕೂಡ ಚಿತ್ರಿಸುತ್ತದೆ. ಅದೇ ಸಮಯದಲ್ಲಿ, ಅಭಿಷಿಕ್ತ ಕ್ರೈಸ್ತರು ಇನ್ನೂ ಅಪರಿಪೂರ್ಣರಾಗಿದ್ದು, ಪಾಪಮಾಡುವುದಕ್ಕೆ ಅಧೀನರಾಗಿದ್ದಾರೆ. ಅಂಗಳದಲ್ಲಿರುವ ನೀರಿನ ಗಂಗಾಳವು, ಮಹಾ ಯಾಜಕನು ಪವಿತ್ರ ಯಾಜಕತ್ವವನ್ನು ಪ್ರಗತಿಪರವಾಗಿ ಶುದ್ಧಗೊಳಿಸಲು ಯಾವುದನ್ನು ಉಪಯೋಗಿಸುತ್ತಾನೊ, ಆ ದೇವರ ವಾಕ್ಯವನ್ನು ಚಿತ್ರಿಸುತ್ತದೆ. ಈ ಶುದ್ಧೀಕರಿಸುವ ಪ್ರಕ್ರಿಯೆಗೆ ಅಧೀನಪಡಿಸಿಕೊಳ್ಳುವ ಮೂಲಕ, ದೇವರನ್ನು ಘನಪಡಿಸುವ ಮತ್ತು ಆತನ ಶುದ್ಧಾರಾಧನೆಯ ಕಡೆಗೆ ಹೊರಗಿನವರನ್ನು ಆಕರ್ಷಿಸುವ ಒಂದು ಅತ್ಯುತ್ಕೃಷ್ಟವಾದ ತೋರಿಕೆಯನ್ನು ಅವರು ಪಡೆದುಕೊಂಡಿದ್ದಾರೆ.—ಎಫೆಸ 5:25, 26; ಹೋಲಿಸಿ ಮಲಾಕಿಯ 3:1-3.
ಪವಿತ್ರಸ್ಥಾನ
13, 14. (ಎ) ದೇವಾಲಯದ ಪವಿತ್ರಸ್ಥಾನವು, ಯೇಸು ಮತ್ತು ಅವನ ಅಭಿಷಿಕ್ತ ಹಿಂಬಾಲಕರ ವಿಷಯದಲ್ಲಿ ಏನನ್ನು ಚಿತ್ರಿಸುತ್ತದೆ? (ಬಿ) ಬಂಗಾರದ ದೀಪಸ್ತಂಭವು ಏನನ್ನು ಚಿತ್ರಿಸುತ್ತದೆ?
13 ದೇವಾಲಯದ ಮೊದಲನೆಯ ಅರೆಯು, ಅಂಗಳದ ಸ್ಥಿತಿಗಿಂತ ಶ್ರೇಷ್ಠವಾದ ಒಂದು ಸ್ಥಿತಿಯನ್ನು ಚಿತ್ರಿಸುತ್ತದೆ. ಪರಿಪೂರ್ಣ ಮಾನವನಾದ ಯೇಸು ಕ್ರಿಸ್ತನ ವಿಷಯದಲ್ಲಿ, ಅದು ಸ್ವರ್ಗೀಯ ಜೀವಿತಕ್ಕೆ ಹಿಂದಿರುಗಲು ಉದ್ದೇಶಿಸಲ್ಪಟ್ಟ ದೇವರ ಆತ್ಮಿಕ ಪುತ್ರನೋಪಾದಿ ಅವನ ಪುನರ್ಜನನವನ್ನು ಚಿತ್ರಿಸುತ್ತದೆ. ಕ್ರಿಸ್ತನ ಸುರಿಸಲ್ಪಟ್ಟ ರಕ್ತದಲ್ಲಿ ತಮ್ಮ ನಂಬಿಕೆಯ ಆಧಾರದ ಮೇಲೆ ನೀತಿವಂತರೆಂದು ಪ್ರಕಟಿಸಲ್ಪಟ್ಟ ತರುವಾಯ, ಈ ಅಭಿಷಿಕ್ತ ಹಿಂಬಾಲಕರು ಸಹ ದೇವರ ಆತ್ಮದ ಈ ವಿಶೇಷವಾದ ಕಾರ್ಯಾಚರಣೆಯನ್ನು ಅನುಭವಿಸುತ್ತಾರೆ. (ರೋಮಾಪುರ 8:14-17) “ನೀರಿನಿಂದಲೂ [ಅಂದರೆ, ಅವರ ದೀಕ್ಷಾಸ್ನಾನ] ಆತ್ಮನಿಂದಲೂ,” ಅವರು ದೇವರ ಆತ್ಮಿಕ ಪುತ್ರರಂತೆ “ಹೊಸದಾಗಿ ಹುಟ್ಟಿ”ದ್ದಾರೆ. ಹೇಳಿದಂಥ ಸ್ಥಿತಿಯಲ್ಲಿ ಅವರು ಮರಣದ ವರೆಗೆ ನಂಬಿಗಸ್ತರಾಗಿ ಉಳಿಯುವುದಾದರೆ, ಅವರಿಗೆ ದೇವರ ಆತ್ಮ ಪುತ್ರರಂತೆ ಸ್ವರ್ಗೀಯ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಡುವ ನಿರೀಕ್ಷೆಯಿದೆ.—ಯೋಹಾನ 3:5, 7; ಪ್ರಕಟನೆ 2:10.
14 ಭೂದೇವಾಲಯದ ಪವಿತ್ರಸ್ಥಾನದ ಒಳಗೆ ಸೇವೆಮಾಡಿದ ಯಾಜಕರು, ಹೊರಗಿದ್ದ ಆರಾಧಕರಿಗೆ ಅಗೋಚರವಾಗಿದ್ದರು. ಅಂತೆಯೇ, ಒಂದು ಪ್ರಮೋದವನ ಭೂಮಿಯ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆಯುಳ್ಳ ದೇವರ ಆರಾಧಕರಲ್ಲಿ ಹೆಚ್ಚಿನವರಿಂದ ಪಾಲ್ಗೊಳ್ಳಲ್ಪಡದ ಅಥವಾ ಪೂರ್ಣವಾಗಿ ಅರ್ಥಮಾಡಿಕೊಳ್ಳಲ್ಪಡದ ಒಂದು ಆತ್ಮಿಕ ಪರಿಸ್ಥಿತಿಯನ್ನು ಅಭಿಷಿಕ್ತ ಕ್ರೈಸ್ತರು ಅನುಭವಿಸುತ್ತಾರೆ. ಸಾಕ್ಷಿಗುಡಾರದ ಬಂಗಾರದ ದೀಪಸ್ತಂಭವು ಅಭಿಷಿಕ್ತ ಕ್ರೈಸ್ತರ ಜ್ಞಾನೋದಯವಾದ ಸ್ಥಿತಿಯನ್ನು ಚಿತ್ರಿಸುತ್ತದೆ. ದೇವರ ಪವಿತ್ರಾತ್ಮದ ಕಾರ್ಯಾಚರಣೆಯು, ದೀಪಗಳಲ್ಲಿರುವ ಎಣ್ಣೆಯಂತೆ ಬೈಬಲಿನ ಮೇಲೆ ಬೆಳಕನ್ನು ಚೆಲ್ಲುತ್ತದೆ. ಅದರ ಫಲಿತಾಂಶವಾಗಿ ಕ್ರೈಸ್ತರು ಪಡೆಯುವ ತಿಳಿವಳಿಕೆಯನ್ನು ಅವರು ತಮ್ಮಲ್ಲಿಯೇ ಇಟ್ಟುಕೊಳ್ಳುವುದಿಲ್ಲ. ಬದಲಿಗೆ, ಅವರು ಹೀಗೆ ಹೇಳಿದ ಯೇಸುವಿಗೆ ವಿಧೇಯರಾಗುತ್ತಾರೆ: “ನೀವು ಲೋಕಕ್ಕೆ ಬೆಳಕಾಗಿದ್ದೀರಿ. . . . ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.”—ಮತ್ತಾಯ 5:14, 16.
15. ನೈವೇದ್ಯವಾದ ರೊಟ್ಟಿಗಳ ಮೇಜಿನ ಮೇಲಿರುವ ರೊಟ್ಟಿಯಿಂದ ಏನು ಚಿತ್ರಿಸಲ್ಪಟ್ಟಿದೆ?
15 ಈ ಜ್ಞಾನೋದಯವಾದ ಸ್ಥಿತಿಯಲ್ಲಿ ಉಳಿಯಲು, ಅಭಿಷಿಕ್ತ ಕ್ರೈಸ್ತರು ನೈವೇದ್ಯವಾದ ರೊಟ್ಟಿಗಳ ಮೇಜಿನ ಮೇಲಿರುವ ರೊಟ್ಟಿಯಿಂದ ಚಿತ್ರಿಸಲ್ಪಟ್ಟ ವಿಷಯವನ್ನು ಕ್ರಮವಾಗಿ ಉಣ್ಣಬೇಕು. ಅವರ ಆತ್ಮಿಕ ಆಹಾರದ ಪ್ರಧಾನ ಮೂಲವು ದೇವರ ವಾಕ್ಯವಾಗಿದೆ, ಅದನ್ನು ಅವರು ಪ್ರತಿದಿನ ಓದಲು ಮತ್ತು ಮನನಮಾಡಲು ಪ್ರಯತ್ನಿಸುತ್ತಾರೆ. ಯೇಸು ಸಹ ಅವರಿಗೆ ತನ್ನ ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ’ನ ಮುಖಾಂತರ “ಹೊತ್ತುಹೊತ್ತಿಗೆ ಆಹಾರ ಕೊಡಲಿಕ್ಕೆ” ಮಾತುಕೊಟ್ಟಿದ್ದಾನೆ. (ಮತ್ತಾಯ 24:45) ಈ “ಆಳು” ಯಾವುದೇ ನಿರ್ದಿಷ್ಟವಾದ ಸಮಯದಲ್ಲಿ, ಭೂಮಿಯ ಮೇಲಿರುವ ಅಭಿಷಿಕ್ತ ಕ್ರೈಸ್ತರ ಇಡೀ ಮಂಡಳಿಯಾಗಿದೆ. ಬೈಬಲ್ ಪ್ರವಾದನೆಗಳ ನೆರವೇರಿಕೆಯ ವಿಷಯವಾಗಿ ಮಾಹಿತಿಯನ್ನು ಪ್ರಕಾಶಿಸಲು ಮತ್ತು ಆಧುನಿಕ ದೈನಂದಿನ ಜೀವಿತದಲ್ಲಿ ಬೈಬಲ್ ಮೂಲತತ್ವಗಳ ಅನ್ವಯದ ವಿಷಯವಾಗಿ ಸಮಯೋಚಿತವಾದ ಮಾರ್ಗದರ್ಶನೆಯನ್ನು ನೀಡಲು, ಕ್ರಿಸ್ತನು ಈ ಅಭಿಷಿಕ್ತ ಮಂಡಳಿಯನ್ನು ಉಪಯೋಗಿಸಿದ್ದಾನೆ. ಆದಕಾರಣ, ಅಭಿಷಿಕ್ತ ಕ್ರೈಸ್ತರು ಗಣ್ಯತಾಪೂರ್ವಕವಾಗಿ ಇಂತಹ ಎಲ್ಲ ಆತ್ಮಿಕ ಒದಗಿಸುವಿಕೆಗಳನ್ನು ಉಣ್ಣುತ್ತಾರೆ. ಆದರೆ ಅವರ ಆತ್ಮಿಕ ಜೀವಿತಗಳ ಪೋಷಣೆಯು ತಮ್ಮ ಮನಸ್ಸು ಹಾಗೂ ಹೃದಯಗಳೊಳಗೆ ದೇವರ ಜ್ಞಾನವನ್ನು ತೆಗೆದುಕೊಳ್ಳುವುದಕ್ಕಿಂತಲೂ ಹೆಚ್ಚಿನ ವಿಷಯದ ಮೇಲೆ ಅವಲಂಬಿಸುತ್ತದೆ. ಯೇಸು ಹೇಳಿದ್ದು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು.” (ಯೋಹಾನ 4:34) ಅಂತೆಯೇ, ಅಭಿಷಿಕ್ತ ಕ್ರೈಸ್ತರು ದೇವರ ಪ್ರಕಟಿಸಲ್ಪಟ್ಟ ಚಿತ್ತವನ್ನು ಮಾಡುವುದಕ್ಕೆ ತಮ್ಮನ್ನು ಪ್ರತಿದಿನ ಬಳಸಿಕೊಳ್ಳುವ ಮೂಲಕ ತೃಪ್ತಿಯನ್ನು ಅನುಭವಿಸುತ್ತಾರೆ.
16. ಧೂಪವೇದಿಯ ಬಳಿಯಲ್ಲಿ ಮಾಡಲ್ಪಟ್ಟ ಸೇವೆಯಿಂದ ಏನು ಚಿತ್ರಿಸಲ್ಪಟ್ಟಿದೆ?
16 ಬೆಳಗ್ಗೆ ಮತ್ತು ಸಂಜೆ, ಯಾಜಕನೊಬ್ಬನು ಪವಿತ್ರಸ್ಥಾನದಲ್ಲಿರುವ ಧೂಪವೇದಿಯ ಮೇಲೆ ದೇವರಿಗೆ ಧೂಪವನ್ನು ಅರ್ಪಿಸಿದನು. ಅದೇ ಸಮಯದಲ್ಲಿ, ಯಾಜಕರಲ್ಲದ ಆರಾಧಕರು ದೇವರ ಆಲಯದ ಹೊರಗಿನ ಅಂಗಳಗಳಲ್ಲಿ ನಿಂತುಕೊಂಡಿರುವಾಗ ಆತನಿಗೆ ಪ್ರಾರ್ಥಿಸಿದರು. (ಲೂಕ 1:8-10) “ಧೂಪವೆಂದರೆ ದೇವ ಜನರ ಪ್ರಾರ್ಥನೆಗಳೆಂದು ಅರ್ಥ,” ಎಂಬುದಾಗಿ ಬೈಬಲು ವಿವರಿಸುತ್ತದೆ. (ಪ್ರಕಟನೆ 5:8, NW) “ನನ್ನ ಪ್ರಾರ್ಥನೆಯು ಧೂಪದಂತೆಯೂ . . . ನಿನಗೆ ಸಮರ್ಪಕವಾಗಲಿ,” ಎಂಬುದಾಗಿ ಕೀರ್ತನೆಗಾರನಾದ ದಾವೀದನು ಬರೆದನು. (ಕೀರ್ತನೆ 141:2) ಅಭಿಷಿಕ್ತ ಕ್ರೈಸ್ತರೂ ಯೇಸು ಕ್ರಿಸ್ತನ ಮುಖಾಂತರ ಯೆಹೋವನನ್ನು ಪ್ರಾರ್ಥನೆಯಲ್ಲಿ ಸಮೀಪಿಸುವುದರ ತಮ್ಮ ಸುಯೋಗವನ್ನು ಅಮೂಲ್ಯವೆಂದೆಣಿಸುತ್ತಾರೆ. ಹೃದಯದಿಂದ ಹರಿಯುವ ಉದ್ರಿಕ್ತ ಪ್ರಾರ್ಥನೆಗಳು ಪರಿಮಳ ಬೀರುವ ಧೂಪದಂತಿವೆ. ಅಭಿಷಿಕ್ತ ಕ್ರೈಸ್ತರು, ತಮ್ಮ ತುಟಿಗಳನ್ನು ಇತರರಿಗೆ ಕಲಿಸಲು ಉಪಯೋಗಿಸುತ್ತಾ, ದೇವರನ್ನು ಬೇರೆ ವಿಧಗಳಲ್ಲೂ ಸ್ತುತಿಸುತ್ತಾರೆ. ತೊಂದರೆಗಳ ಎದುರಿನಲ್ಲಿ ಅವರ ತಾಳ್ಮೆಯು ಮತ್ತು ಪರೀಕ್ಷೆಯ ಕೆಳಗೆ ಅವರ ಸಮಗ್ರತೆಯು ದೇವರಿಗೆ ವಿಶೇಷವಾಗಿ ಸಂತೋಷಕರವಾಗಿದೆ.—1 ಪೇತ್ರ 2:20, 21.
17. ದೋಷಪರಿಹಾರ ದಿನದಂದು ಮಹಾಪವಿತ್ರಸ್ಥಾನದೊಳಕ್ಕೆ ಮಹಾ ಯಾಜಕನ ಪ್ರಥಮ ಪ್ರವೇಶದಿಂದ ಒದಗಿಸಲ್ಪಟ್ಟ ಪ್ರವಾದನಾತ್ಮಕ ಚಿತ್ರದ ನೆರವೇರಿಕೆಯಲ್ಲಿ ಏನು ಒಳಗೊಂಡಿತ್ತು?
17 ದೋಷಪರಿಹಾರ ದಿನದಂದು, ಇಸ್ರಾಯೇಲಿನ ಮಹಾ ಯಾಜಕನು ಮಹಾಪವಿತ್ರಸ್ಥಾನವನ್ನು ಪ್ರವೇಶಿಸಿ, ಕೆಂಪಗೆ ಕಾದ ಕೆಂಡಗಳುಳ್ಳ ಒಂದು ಬಂಗಾರದ ಧೂಪಾರತಿಯಲ್ಲಿ ಧೂಪವನ್ನು ಸುಡಬೇಕಿತ್ತು. ಇದು ಅವನು ಪಾಪಾರ್ಪಣೆಗಳ ರಕ್ತವನ್ನು ಒಳಗೆ ತರುವ ಮೊದಲು ಮಾಡಬೇಕಿತ್ತು. ಈ ಪ್ರವಾದನಾತ್ಮಕ ಚಿತ್ರದ ನೆರವೇರಿಕೆಯಲ್ಲಿ, ನಮ್ಮ ಪಾಪಗಳಿಗಾಗಿ ಏಕೈಕ ಬಾಳುವ ಯಜ್ಞದಂತೆ ಯೇಸು ತನ್ನ ಜೀವವನ್ನು ಅರ್ಪಿಸುವ ಮೊದಲು, ಮನುಷ್ಯನಾದ ಅವನು ಯೆಹೋವ ದೇವರಿಗೆ ಪರಿಪೂರ್ಣ ಸಮಗ್ರತೆಯನ್ನು ವ್ಯಕ್ತಪಡಿಸಿದನು. ಹೀಗೆ, ಸೈತಾನನು ತನ್ನ ಮೇಲೆ ಯಾವ ಒತ್ತಡವನ್ನೇ ತರಲಿ ಒಬ್ಬ ಪರಿಪೂರ್ಣ ಮನುಷ್ಯನು ದೇವರಿಗೆ ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳಸಾಧ್ಯವಿದೆ ಎಂಬುದನ್ನು ಅವನು ಪ್ರದರ್ಶಿಸಿದನು. (ಜ್ಞಾನೋಕ್ತಿ 27:11) ಪರೀಕ್ಷೆಗೊಳಪಡಿಸಲ್ಪಟ್ಟಾಗ, ಯೇಸು “ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ,” ಪ್ರಾರ್ಥನೆಯ ಉಪಯೋಗವನ್ನು ಮಾಡಿದನು, ಮತ್ತು “ದೇವರ ಮೇಲಣ ಭಯಭಕ್ತಿಯ ನಿಮಿತ್ತ ಕೇಳಲ್ಪಟ್ಟನು.” (ಇಬ್ರಿಯ 5:7) ಈ ವಿಧದಲ್ಲಿ ಅವನು ಯೆಹೋವನನ್ನು ವಿಶ್ವದ ನೀತಿವಂತ ಹಾಗೂ ನ್ಯಾಯವಾದ ಪರಮಾಧಿಕಾರಿಯೋಪಾದಿ ಮಹಿಮೆಪಡಿಸಿದನು. ದೇವರು ಯೇಸುವನ್ನು ಸತ್ತವರಿಂದ ಅಮರ ಸ್ವರ್ಗೀಯ ಜೀವಿತಕ್ಕೆ ಪುನರುತ್ಥಾನಗೊಳಿಸುವ ಮೂಲಕ ಬಹುಮಾನಿಸಿದನು. ಈ ಉನ್ನತ ಸ್ಥಾನದಲ್ಲಿ, ಯೇಸು ಭೂಮಿಗೆ ತನ್ನ ಬರುವಿಕೆಯ ಎರಡನೆಯ ಕಾರಣವನ್ನು, ಅಂದರೆ, ದೇವರೊಂದಿಗೆ ಪಶ್ಚಾತ್ತಾಪಿಗಳಾದ ಮಾನವ ಪಾಪಿಗಳನ್ನು ರಾಜಿಮಾಡುವ ಕಾರಣಕ್ಕೆ ಗಮನಕೊಡುತ್ತಾನೆ.—ಇಬ್ರಿಯ 4:14-16.
ದೇವರ ಆತ್ಮಿಕ ದೇವಾಲಯದ ಹೆಚ್ಚು ಮಹಾ ಮಹಿಮೆ
18. ಯೆಹೋವನು ತನ್ನ ಆತ್ಮಿಕ ದೇವಾಲಯಕ್ಕೆ ಎದ್ದುಕಾಣುವ ಮಹಿಮೆಯನ್ನು ಹೇಗೆ ತಂದಿರುತ್ತಾನೆ?
18 “ಈ ಆಲಯದ ಮುಂದಿನ ವೈಭವವು ಹಿಂದಿನ ವೈಭವಕ್ಕಿಂತ ವಿಶೇಷವಾಗಿರುವದು,” ಎಂಬುದಾಗಿ ಯೆಹೋವನು ಮುಂತಿಳಿಸಿದನು. (ಹಗ್ಗಾಯ 2:9) ಯೇಸುವನ್ನು ಒಬ್ಬ ಅಮರ ರಾಜ ಹಾಗೂ ಮಹಾ ಯಾಜಕನೋಪಾದಿ ಪುನರುತ್ಥಾನಗೊಳಿಸುವ ಮೂಲಕ, ಯೆಹೋವನು ತನ್ನ ಆತ್ಮಿಕ ದೇವಾಲಯಕ್ಕೆ ಗಮನಾರ್ಹವಾದ ಮಹಿಮೆಯನ್ನು ತಂದನು. ಯೇಸು ಈಗ “ತನಗೆ ವಿಧೇಯರಾಗಿರುವವರೆಲ್ಲರಿಗೂ ನಿರಂತರವಾದ ರಕ್ಷಣೆ”ಯನ್ನು ತರುವ ಸ್ಥಾನದಲ್ಲಿದ್ದಾನೆ. (ಇಬ್ರಿಯ 5:9) ಇಂತಹ ವಿಧೇಯತೆಯನ್ನು ತೋರಿಸಿದವರಲ್ಲಿ ಮೊದಲಿಗರು, ಸಾ.ಶ. 33ರಲ್ಲಿ ಪಂಚಾಶತ್ತಮದಂದು ಪವಿತ್ರಾತ್ಮವನ್ನು ಪಡೆದ 120 ಶಿಷ್ಯರಾಗಿದ್ದರು. ಇಸ್ರಾಯೇಲಿನ ಈ ಆತ್ಮಿಕ ಪುತ್ರರು ಅಂತಿಮವಾಗಿ 1,44,000 ಜನರಾಗಿ ಪರಿಣಮಿಸುವರೆಂದು ಪ್ರಕಟನೆ ಪುಸ್ತಕವು ಮುಂತಿಳಿಸಿತು. (ಪ್ರಕಟನೆ 7:4) ಮರಣಹೊಂದಿದ ನಂತರ, ರಾಜನ ಅಧಿಕಾರದಲ್ಲಿ ಯೇಸುವಿನ ಸಾನ್ನಿಧ್ಯದ ಸಮಯವನ್ನು ಎದುರುನೋಡುತ್ತಾ, ಅವರಲ್ಲಿ ಅನೇಕರು ಮಾನವಕುಲದ ಸಾಮಾನ್ಯ ಸಮಾಧಿಯಲ್ಲಿ ನಿದ್ರಿಸಬೇಕಿತ್ತು. ದಾನಿಯೇಲ 4:10-17, 20-27ರಲ್ಲಿರುವ ಪ್ರವಾದನಾತ್ಮಕ ಕಾಲಗಣನೆಯು, 1914ನ್ನು ಯೇಸು ತನ್ನ ವೈರಿಗಳ ಮಧ್ಯದಲ್ಲಿ ಆಳುವುದನ್ನು ಆರಂಭಿಸಲಿಕ್ಕಾಗಿರುವ ಸಮಯವಾಗಿ ಸೂಚಿಸುತ್ತದೆ. (ಕೀರ್ತನೆ 110:2) ಅನೇಕ ದಶಕಗಳ ಮೊದಲೇ, ಅಭಿಷಿಕ್ತ ಕ್ರೈಸ್ತರು ಆ ವರ್ಷಕ್ಕಾಗಿ ಅತ್ಯಾಸಕ್ತಿಯಿಂದ ಕಾದರು. ಪ್ರಥಮ ಜಾಗತಿಕ ಯುದ್ಧ ಮತ್ತು ಅದನ್ನು ಒಡಗೂಡಿದ ಮಾನವಕುಲದ ಮೇಲಿನ ಸಂಕಟಗಳು, ಯೇಸು ಖಂಡಿತವಾಗಿಯೂ 1914ರಲ್ಲಿ ರಾಜನಾಗಿ ಸಿಂಹಾಸನಾರೂಢನಾದನೆಂಬುದಕ್ಕೆ ಪ್ರಮಾಣವನ್ನು ಒದಗಿಸಿದವು. (ಮತ್ತಾಯ 24:3, 7, 8) ಇದಾದ ಸ್ವಲ್ಪ ಸಮಯದಲ್ಲಿಯೇ, “ವಿಚಾರಣೆಯು ದೇವರ ಮನೆಯಲ್ಲಿಯೇ ಪ್ರಾರಂಭ”ವಾಗುವ ಸಮಯವು ಒದಗಿಬಂದ ಕಾರಣ, ಯೇಸು ಮರಣದಲ್ಲಿ ನಿದ್ರಿಸುತ್ತಿದ್ದ ತನ್ನ ಅಭಿಷಿಕ್ತ ಶಿಷ್ಯರಿಗೆ ಮಾಡಿದ ಈ ವಾಗ್ದಾನವನ್ನು ನೆರವೇರಿಸಿದನು: “ನಿಮ್ಮನ್ನು ಕರಕೊಂಡು ಹೋಗಿ ನನ್ನ ಬಳಿಗೆ ಸೇರಿಸಿಕೊಳ್ಳುವೆನು.”—1 ಪೇತ್ರ 4:17; ಯೋಹಾನ 14:3.
19. 1,44,000 ಜನರಲ್ಲಿ ಉಳಿಕೆಯವರು ಸ್ವರ್ಗೀಯ ಮಹಾಪವಿತ್ರಸ್ಥಾನಕ್ಕೆ ಹೇಗೆ ಪ್ರವೇಶವನ್ನು ಪಡೆಯುವರು?
19 ಪವಿತ್ರ ಯಾಜಕತ್ವದ 1,44,000 ಸದಸ್ಯರೆಲ್ಲರೂ ಅಂತಿಮವಾಗಿ ಮುದ್ರೆಹಾಕಲ್ಪಟ್ಟು, ತಮ್ಮ ಸ್ವರ್ಗೀಯ ನಿವಾಸಕ್ಕೆ ಒಟ್ಟುಗೂಡಿಸಲ್ಪಟ್ಟಿಲ್ಲ. ಅವರಲ್ಲಿ ಉಳಿಕೆಯವರು, ಪವಿತ್ರಸ್ಥಾನದಿಂದ ಚಿತ್ರಿಸಲ್ಪಟ್ಟ ಆತ್ಮಿಕ ಸ್ಥಿತಿಯಲ್ಲಿ—ದೇವರ ಪವಿತ್ರ ಸಾನ್ನಿಧ್ಯದಿಂದ “ತೆರೆ,” ಅಥವಾ ತಮ್ಮ ಮಾಂಸಿಕ ದೇಹಗಳ ತಡೆಯಿಂದ ಬೇರ್ಪಡಿಸಲ್ಪಟ್ಟು—ಇನ್ನೂ ಭೂಮಿಯ ಮೇಲೆ ಜೀವಿಸುತ್ತಾರೆ. ಇವರು ನಂಬಿಗಸ್ತಿಕೆಯಲ್ಲಿ ಮರಣಹೊಂದಿದಂತೆ, ಸ್ವರ್ಗದಲ್ಲಿ ಈಗಾಗಲೇ ಇರುವ 1,44,000 ಜನರನ್ನು ಜೊತೆಗೂಡಲು, ತತ್ಕ್ಷಣ ಅಮರ ಆತ್ಮ ಜೀವಿಗಳೋಪಾದಿ ಪುನರುತ್ಥಾನಗೊಳಿಸಲ್ಪಡುತ್ತಾರೆ.—1 ಕೊರಿಂಥ 15:51-53.
20. ಪವಿತ್ರ ಯಾಜಕತ್ವದ ಉಳಿಕೆಯವರು ಈ ಸಮಯದಲ್ಲಿ ಯಾವ ಅತ್ಯಾವಶ್ಯಕ ಕೆಲಸವನ್ನು ಮಾಡುತ್ತಿದ್ದಾರೆ, ಮತ್ತು ಯಾವ ಫಲಿತಾಂಶಗಳೊಂದಿಗೆ?
20 ಸ್ವರ್ಗದಲ್ಲಿ ಶ್ರೇಷ್ಠನಾದ ಮಹಾ ಯಾಜಕನೊಂದಿಗೆ ಇಷ್ಟೊಂದು ಯಾಜಕರು ಸೇವೆಮಾಡುವುದರ ಜೊತೆಗೆ, ದೇವರ ಆತ್ಮಿಕ ದೇವಾಲಯವು ಕೂಡಿಸಲ್ಪಟ್ಟ ಮಹಿಮೆಯನ್ನು ಪಡೆದಿದೆ. ಈ ಮಧ್ಯೆ, ಪವಿತ್ರ ಯಾಜಕತ್ವದ ಉಳಿಕೆಯವರು ಭೂಮಿಯ ಮೇಲೆ ಅಮೂಲ್ಯವಾದೊಂದು ಕೆಲಸವನ್ನು ಮಾಡುತ್ತಿದ್ದಾರೆ. ತಮ್ಮ ಸಾರುವ ಕಾರ್ಯದ ಮುಖಾಂತರ, ಹಗ್ಗಾಯ 2:7ರಲ್ಲಿ ಮುಂತಿಳಿಸಿದಂತೆ, ದೇವರು ತನ್ನ ನ್ಯಾಯತೀರ್ಪಿನ ಅಭಿವ್ಯಕ್ತಿಗಳೊಂದಿಗೆ ‘ಸಕಲಜನಾಂಗಗಳನ್ನು ನಡುಗಿಸುತ್ತಿದ್ದಾನೆ.’ ಅದೇ ಸಮಯದಲ್ಲಿ, “ಸಮಸ್ತಜನಾಂಗಗಳ ಇಷ್ಟವಸ್ತುಗಳು” ಎಂಬುದಾಗಿ ವರ್ಣಿಸಲ್ಪಟ್ಟ ಲಕ್ಷಾಂತರ ಆರಾಧಕರು, ಯೆಹೋವನ ದೇವಾಲಯದ ಭೂಅಂಗಳಗಳೊಳಗೆ ಒಟ್ಟುಗೂಡುತ್ತಿದ್ದಾರೆ. ಇವರು ಆರಾಧನೆಗಾಗಿರುವ ದೇವರ ಏರ್ಪಾಡಿನೊಳಗೆ ಹೇಗೆ ಹೊಂದಿಕೊಳ್ಳುತ್ತಾರೆ, ಮತ್ತು ಆತನ ಮಹಾ ಆತ್ಮಿಕ ದೇವಾಲಯಕ್ಕಾಗಿ ಯಾವ ಮುಂದಿನ ಮಹಿಮೆಯನ್ನು ನಾವು ನಿರೀಕ್ಷಿಸಬಲ್ಲೆವು? ಈ ಪ್ರಶ್ನೆಗಳು ಮುಂದಿನ ಲೇಖನದಲ್ಲಿ ಪರೀಕ್ಷಿಸಲ್ಪಡುವವು.
ಪುನರ್ವಿಮರ್ಶಾ ಪ್ರಶ್ನೆಗಳು
◻ ಯಾವ ಎದ್ದುಕಾಣುವ ಮಾದರಿಯನ್ನು ಯೇಸು ಸಾ.ಶ. 29ರಲ್ಲಿ ಸ್ಥಾಪಿಸಿದನು?
◻ ಯಾವ ಏರ್ಪಾಡು ಸಾ.ಶ. 29ರಲ್ಲಿ ಕಾರ್ಯಮಾಡುವುದನ್ನು ಆರಂಭಿಸಿತು?
◻ ಪವಿತ್ರಸ್ಥಾನ ಮತ್ತು ಮಹಾಪವಿತ್ರಸ್ಥಾನದಿಂದ ಏನು ಚಿತ್ರಿಸಲ್ಪಟ್ಟಿವೆ?
◻ ಮಹಾ ಆತ್ಮಿಕ ದೇವಾಲಯವು ಹೇಗೆ ಮಹಿಮಾಭರಿತಗೊಳಿಸಲ್ಪಟ್ಟಿದೆ?
[ಪುಟ 17 ರಲ್ಲಿರುವ ಚಿತ್ರ]
ಸಾ.ಶ. 29ರಲ್ಲಿ ಯೇಸು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟಾಗ, ದೇವರ ಮಹಾ ಆತ್ಮಿಕ ಆಲಯವು ಕಾರ್ಯಮಾಡುವುದನ್ನು ಆರಂಭಿಸಿತು