-
ನಿಮ್ಮ ನಿರೀಕ್ಷೆಯಿಂದ ನಂಬಿಕೆಯನ್ನು ಬಲಪಡಿಸಿಕೊಳ್ಳಿಕಾವಲಿನಬುರುಜು (ಅಧ್ಯಯನ)—2016 | ಅಕ್ಟೋಬರ್
-
-
10. ಧೈರ್ಯದಿಂದಿರಲು ಮತ್ತು ಯೆಹೋವನಿಗೆ ನಿಷ್ಠರಾಗಿರಲು ಅನೇಕರಿಗೆ ಯಾವುದು ಸಹಾಯಮಾಡಿತು?
10 ಇಬ್ರಿಯ 11ನೇ ಅಧ್ಯಾಯದಲ್ಲಿ ಅಪೊಸ್ತಲ ಪೌಲನು ಹೀಗೆ ಹೇಳಿದನು: “ಮೃತರಾಗಿದ್ದ ತಮ್ಮವರನ್ನು ಸ್ತ್ರೀಯರು ಪುನರುತ್ಥಾನದ ಮೂಲಕ ಪುನಃ ಪಡೆದುಕೊಂಡರು; ಇತರ ಪುರುಷರು ಉತ್ತಮವಾದ ಪುನರುತ್ಥಾನವನ್ನು ಹೊಂದುವುದಕ್ಕೋಸ್ಕರ ಯಾವುದೇ ರೀತಿಯ ವಿಮೋಚನಾ ಮೌಲ್ಯದಿಂದ ಬಿಡುಗಡೆಯನ್ನು ಸ್ವೀಕರಿಸದೇ ಹೋದದ್ದಕ್ಕಾಗಿ ಯಾತನೆಯನ್ನು ಅನುಭವಿಸಿದರು.” (ಇಬ್ರಿ. 11:35) ಅನೇಕರು ವಿರೋಧವನ್ನು ತಾಳಿಕೊಂಡರು ಮತ್ತು ಯೆಹೋವನಿಗೆ ನಿಷ್ಠರಾಗಿ ಉಳಿದರು. ಏಕೆಂದರೆ ದೇವರು ಮಾತುಕೊಟ್ಟ ಪುನರುತ್ಥಾನದಲ್ಲಿ ಅವರಿಗೆ ಸಂಪೂರ್ಣ ನಂಬಿಕೆಯಿತ್ತು. ಭವಿಷ್ಯತ್ತಿನಲ್ಲಿ ಯೆಹೋವನು ತಮಗೆ ಪುನಃ ಜೀವಕೊಟ್ಟು ಇದೇ ಭೂಮಿಯ ಮೇಲೆ ನಿತ್ಯಜೀವವನ್ನು ಕೊಡಲಿದ್ದಾನೆಂದು ಅವರಿಗೆ ಗೊತ್ತಿತ್ತು. ನಾಬೋತ ಮತ್ತು ಜೆಕರ್ಯನ ಬಗ್ಗೆ ಯೋಚಿಸಿ. ದೇವರಿಗೆ ವಿಧೇಯತೆ ತೋರಿಸಿದ್ದಕ್ಕಾಗಿ ಅವರನ್ನು ಕಲ್ಲೆಸೆದು ಕೊಲ್ಲಲಾಯಿತು. (1 ಅರ. 21:3, 15; 2 ಪೂರ್ವ. 24:20, 21) ದಾನಿಯೇಲನನ್ನು ಹಸಿದ ಸಿಂಹಗಳಿರುವ ಗವಿಗೆ ಬಿಸಾಡಲಾಯಿತು. ಅವನ ಸ್ನೇಹಿತರನ್ನು ಧಗಧಗನೆ ಉರಿಯುವ ಬೆಂಕಿಗೆ ಹಾಕಲಾಯಿತು. ಯೆಹೋವನಿಗೆ ನಿಷ್ಠೆ ತೋರಿಸದೆ ಇರುವುದಕ್ಕಿಂತ ಸಾವೇ ಲೇಸೆಂದು ಇವರೆಲ್ಲರೂ ಅಂದುಕೊಂಡರು. ಯೆಹೋವ ದೇವರು ಖಂಡಿತ ಪವಿತ್ರಾತ್ಮದ ಮೂಲಕ ಸಹಾಯ ಮಾಡುತ್ತಾನೆ, ತಮ್ಮನ್ನು ಕಷ್ಟಗಳಿಂದ ಬಿಡಿಸುತ್ತಾನೆ ಎನ್ನುವ ಸಂಪೂರ್ಣ ನಂಬಿಕೆ ಅವರಿಗಿತ್ತು.—ದಾನಿ. 3:16-18, 20, 28; 6:13, 16, 21-23; ಇಬ್ರಿ. 11:33, 34.
-
-
ನಿಮ್ಮ ನಿರೀಕ್ಷೆಯಿಂದ ನಂಬಿಕೆಯನ್ನು ಬಲಪಡಿಸಿಕೊಳ್ಳಿಕಾವಲಿನಬುರುಜು (ಅಧ್ಯಯನ)—2016 | ಅಕ್ಟೋಬರ್
-
-
12. ಯಾರ ಉತ್ತಮ ಮಾದರಿಯನ್ನು ನಾವೆಲ್ಲರೂ ಅನುಕರಿಸಬಹುದು? (ಬಿ) ಕಷ್ಟಗಳನ್ನು ತಾಳಿಕೊಳ್ಳಲು ಅವನಿಗೆ ಯಾವುದು ಸಹಾಯಮಾಡಿತು?
12 ಯೇಸು ಕ್ರಿಸ್ತನು ಎಲ್ಲರಿಗಿಂತ ಅತೀ ಕಷ್ಟದ ಸನ್ನಿವೇಶವನ್ನು ಎದುರಿಸಿ, ಯೆಹೋವನಿಗೆ ನಿಷ್ಠನಾಗಿ ಉಳಿದನು. ತಾಳಿಕೊಳ್ಳಲು ಯೇಸುವಿಗೆ ಯಾವುದು ಸಹಾಯಮಾಡಿತು? ಪೌಲನು ಹೀಗೆ ಹೇಳಿದನು: “ಅವನು [ಯೇಸು] ತನ್ನ ಮುಂದೆ ಇಡಲ್ಪಟ್ಟಿದ್ದ ಆನಂದಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಯಾತನಾ ಕಂಬವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಕುಳಿತುಕೊಂಡಿದ್ದಾನೆ.” (ಇಬ್ರಿ. 12:2) ಈ ಮಾತುಗಳನ್ನಾಡಿದ ನಂತರ ಪೌಲನು ಕ್ರೈಸ್ತರಿಗೆ ಯೇಸುವಿನ ಮಾದರಿಯನ್ನು ‘ನಿಕಟವಾಗಿ ಪರಿಗಣಿಸುವಂತೆ’ ಉತ್ತೇಜಿಸಿದನು. (ಇಬ್ರಿಯ 12:3 ಓದಿ.) ಒಂದನೇ ಶತಮಾನದಲ್ಲಿ ಅನೇಕರು ಯೆಹೋವನಿಗೆ ನಿಷ್ಠರಾಗಿ ಉಳಿಯಲು ಯೇಸುವಿನಂತೆ ಪ್ರಾಣ ಕೊಟ್ಟರು. ಅವರಲ್ಲಿ ಒಬ್ಬನು ಅಂತಿಪನು. (ಪ್ರಕ. 2:13) ಹಿಂದಿನ ದೇವಸೇವಕರಂತೆ ಭೂಮಿಯ ಮೇಲಿನ ನಿತ್ಯಜೀವಕ್ಕಾಗಿ ಇವರು ಕಾಯದೆ, ಈಗಾಗಲೇ ತಮ್ಮ ಬಹುಮಾನವನ್ನು ಪಡೆದುಕೊಂಡಿದ್ದಾರೆ. (ಇಬ್ರಿ. 11:35) ಯೇಸು 1914ರಲ್ಲಿ ರಾಜನಾದ ಸ್ವಲ್ಪ ಕಾಲದ ನಂತರ ಅಭಿಷಿಕ್ತ ಕ್ರೈಸ್ತರು ಸ್ವರ್ಗಕ್ಕೆ ಪುನರುತ್ಥಾನವಾಗಿ ಅಮರತ್ವ ಪಡೆದುಕೊಂಡರು. ಅವರು ಯೇಸುವಿನೊಂದಿಗೆ ಸೇರಿ ಅಲ್ಲಿಂದ ಮಾನವರನ್ನು ಆಳುವರು.—ಪ್ರಕ. 20:4.
-