ಬೈಬಲಿನ ದೃಷ್ಟಿಕೋನ
ಬದಲಿ ತಾಯಿತನ ಅದು ಕ್ರೈಸ್ತರಿಗೊ?
ಪ್ರಾಚೀನ ರೋಮನ್ ಕವಿ ಹಾರೆಸ್, “ಒಬ್ಬ ಮನುಷ್ಯನು ಯೋಗ್ಯಪುರುಷನಾಗಿರುವ ವರೆಗೆ, ಅವನು ಯಾವ ಹೆತ್ತವರಿಗೆ ಜನಿಸಿದವನೆಂಬುದು ಲೆಕ್ಕಕ್ಕೆ ಬಾರದ ವಿಷಯ”, ಎಂದು ಬರೆದಾಗ, ಬದಲಿ ತಾಯಿತನದ ಬಗ್ಗೆ ಅವನಿಗೆ ಏನೂ ಗೊತ್ತಿರಲಿಲ್ಲ. “ಸೌಶೀಲ್ಯವು ಇಲ್ಲದಿರುವಾಗ ಜನನವು ಏನೂ ಅಲ್ಲ,” ಎಂಬ 17 ನೆಯ ಶತಮಾನದ ಒಬ್ಬ ಫ್ರೆಂಚ್ ಬರಹಗಾರನ ಸೂತ್ರವು ಕೂಡ, ಬದಲಿ ಜನನದ ಸಾಮಾನ್ಯ ಜ್ಞಾನವು ಒಂದು ನ್ಯಾಯಸಂಬಂಧದ ಜವುಗು ನೆಲ ಆಗುವ ಮೊದಲು ಬರೆಯಲ್ಪಟ್ಟಿತು. ಆದರೆ, ಮಿಜ್ ಪತ್ರಿಕೆಯಲ್ಲಿ, ಮೇರಿ ಟಾಮ್ ವರದಿಸುವ ಹಾಗೆ, ಹೊಸ ಸಂತಾನೋತ್ಪತಿಯ್ತ ಯಂತ್ರವಿಜ್ಞಾನದ ಜೊತೆಗೆ, “ಅಂಡಾಣುವಿನ ಉತ್ಪಾದಕಳ, ಮಗು ಆಗುವ ಭ್ರೂಣವನ್ನು ಬೆಳೆಸುವವಳ, ಹಾಗೂ ಒಮ್ಮೆ ಹುಟ್ಟಿದ ಮಗುವಿನ ಸಾಕುವವಳ ಕಾರ್ಯಗಳನ್ನು” ಎರಡು ಯಾ ಮೂರು “ತಾಯಂದಿರಲ್ಲಿ” ವಿಭಾಗಿಸಬಹುದು. “ಸೌಶೀಲ್ಯ” ಮತ್ತು “ಲೆಕ್ಕ”ದ ಪ್ರಶ್ನೆಯು ಅಸ್ಪಷ್ಟವೂ ಸಂಕೀರ್ಣವೂ ಆಗಿದೆ.
ಬದಲಿ ತಾಯಿಗಳನ್ನು ಉಪಯೋಗಿಸುವ ಕ್ರಮ, ಮಧ್ಯ 1970 ಗಳಲ್ಲಿ, ಹಿಂದೆಂದೂ ಎದುರಿಸದೆ ಇದ್ದಂತಹ ಸಾಮಾಜಿಕ, ನೈತಿಕ, ಹಾಗೂ ನ್ಯಾಯ ಸಂಬಂಧವಾದ ಸಮಸ್ಯೆಗಳನ್ನು ಎಬ್ಬಿಸುತ್ತಾ, ಲೋಕ ದೃಶ್ಯದೊಳಗೆ ರಭಸದಿಂದ ಒಳನುಗಿತ್ಗು. ಕೆಲವು ಫಲವತಾಗ್ತಿಲ್ಲದ ದಂಪತಿಗಳು, ಸಂತಾನೋತ್ಪತಿಯ್ತ ಈ ಅಸಾಂಪ್ರದಾಯಿಕ ಮಾರ್ಗದ ಲಾಭವನ್ನು ಪಡೆಯಲು ಆತುರರಾಗಿದ್ದರು. ಇನ್ನೊಂದೆಡೆಯಲ್ಲಿ, ಡಾಕ್ಟರುಗಳು, ವಕೀಲರು, ಹಾಗೂ ಶಾಸಕರು, ಎಬ್ಬಿಸಲ್ಪಟ್ಟ ನೀತಿಯ ಮತ್ತು ನೈತಿಕ ಪ್ರಶ್ನೆಗಳಿಗೆ ಸೂಚಿತವಾಗುವ ಮಾರ್ಗದರ್ಶನವನ್ನು ರಚಿಸುವ ಪ್ರಯತ್ನದಲ್ಲಿ, ವಿಸ್ತಾರಗೊಳ್ಳುತ್ತಿರುವ ಫಲಶಕ್ತಿಯ ಯಂತ್ರವಿಜ್ಞಾನದ ಜೊತೆಗೆ ಹೆಜ್ಜೆಯನ್ನಿಡಲು ಹೋರಾಡುತ್ತಿದ್ದಾರೆ.
ಬದಲಿ ತಾಯಿತನ ಎಂದರೇನು?
ಕೃತಕವಾಗಿ ಬೀಜಾವಾಪನೆ ಆದಂಥ ಒಬ್ಬ ಹೆಂಗಸು ಇನ್ನೊಂದು ಹೆಂಗಸಿಗೆ ಮಗುವನ್ನು ಪಡೆಯುವುದೆ ಬದಲಿ, ಯಾ ಒಪ್ಪಂದದ ತಾಯಿತನವಾಗಿದೆ. ಆಕೆಯೊಂದಿಗೆ ಒಪ್ಪಂದ ಮಾಡಿದಂತಹ ದಂಪತಿಗಳ ಗಂಡನ ವೀರ್ಯಾಣುವಿನಿಂದ ಕೃತಕ ಬೀಜಾವಾಪನೆಯ ಮೂಲಕ ಬದಲಿ ತಾಯಿಯು ಗರ್ಭಿತಳಾದಾಗ, ಸಾಂಪ್ರದಾಯಿಕವೆಂದು ಕರೆಯಲ್ಪಡುವ ಬದಲಿತನವು ಸಂಭವಿಸುತ್ತದೆ. ಆದುದರಿಂದ ಬದಲಿ ಸ್ತ್ರೀಯು ಆ ಮಗುವಿನ ಅನುವಂಶೀಯ ತಾಯಿ ಆಗಿದ್ದಾಳೆ. ಗರ್ಭಧಾರಣೆಯ ಬದಲಿತನ ಎಂದರೆ, ಇನ್ ವಿಟ್ರೊ (ಪರೀಕ್ಷಾ ಪ್ರನಾಳ) ಫಲವತ್ತು ಮಾಡುವಿಕೆ ಎಂಬ ಕಾರ್ಯಗತಿಯಲ್ಲಿ, ಹೆಂಡತಿಯ ಅಂಡಾಣು ಹಾಗೂ ಗಂಡನ ವೀರ್ಯಾಣುವನ್ನು ಗರ್ಭದ ಹೊರಗೆ ಕೂಡಿಸಲಾಗುತ್ತದೆ, ಮತ್ತು ಫಲಿತಾಂಶವಾಗಿ ಬರುವ ಭ್ರೂಣವನ್ನು ಬದಲಿಯ ಗರ್ಭಾಶಯದಲ್ಲಿ ಗರ್ಭಧಾರಣೆಗಾಗಿ ಇಡಲಾಗುತ್ತದೆ.
ಬದಲಿ ತಾಯಿತನದಲ್ಲಿ ಏರಿಕೆ ಯಾಕೆ? ಒಂದು ವಿಷಯವೇನೆಂದರೆ, ಉನ್ನತ ಯಂತ್ರಕಲಾ ವಿಜ್ಞಾನವು ಹೆಂಗಸರು ಮಕ್ಕಳನ್ನು ಪಡೆಯಲು ಸಹಾಯ ಮಾಡುವುದಕ್ಕೆ ಅನೇಕ ಮಾರ್ಗಗಳನ್ನು ಕಂಡುಹಿಡಿದಿದೆ. ಒಂದು ಮಗುವನ್ನು ಪಡೆಯುವ ತೀಕ್ಷೈ ಆಶೆ ದಂಪತಿಗಳಿಗಿರಬಹುದು, ಆದರೂ ಫಲವತಲ್ತದ್ಲ ಕಾರಣ, ಅನನುಕೂಲತೆಯ ಕಾರಣ, ಯಾ ದತ್ತು ತೆಗೆದುಕೊಳ್ಳಲು ಅತಿ ಕಡಿಮೆ ಆರೋಗ್ಯವಂತ ಮಕ್ಕಳಿರುವ ಕಾರಣ, ಅವರು ಒಂದನ್ನು ಪಡೆಯಲಾಗುವುದಿಲ್ಲ. ಆದುದರಿಂದ ಒಂದು ಮಗುವನ್ನು ಪಡೆಯಲು ಅವರು ಇನ್ನೊಬ್ಬ ವ್ಯಕ್ತಿಯ ದೇಹವನ್ನು ಬಾಡಿಗೆಗಾಗಿ ತೆಗೆದುಕೊಳ್ಳುತ್ತಾರೆ. ಹಣದ ದೊಡ್ಡ ಮೊತ್ತವು ಒಳಗೂಡಿರುವದರಿಂದ, ಬದಲಿತನವನ್ನು “ಅನೈಚ್ಛಿಕ ಪರಾಧೀನತೆ ಮತ್ತು ಗುಲಾಮಗಿರಿ” ಹಾಗೂ “ಬಡವರ ಫಲಶಕ್ತಿಯ ಸ್ಥಿತಿಯನ್ನು ಕಳಚಿಹಾಕುವುದು,” ಎಂಬ ಇಂತಹ ಅಪ್ರಶಂಸನೀಯ ಶಬಗ್ಧಳಿಂದ ವರ್ಣಿಸಲಾಗಿದೆ.
ಅಮೆರಿಕದಲ್ಲಿ, ನ್ಯೂ ಜರ್ಸಿಯ ಶ್ರೇಷ್ಠ ನ್ಯಾಯಾಲಯವು, ಬಡವರನ್ನು ಶೋಷಣೆ ಮಾಡುವ ಹಣವಂತರ ಸಾಮರ್ಥ್ಯವನ್ನು ಗುರುತಿಸುತ್ತಾ, ಒಂದು ಬದಲಿತನದ ಕೇಸ್ನಲ್ಲಿ “ಕೊನೆಯದಾಗಿ, ದುಡಿಮೆ, ಪ್ರೀತಿ, ಯಾ ಜೀವವನ್ನು ಕೊಂಡುಕೊಳ್ಳಬಹುದಾದ ಧನಕ್ಕೆ ಸಲ್ಲಿಸುವುದಕ್ಕಿಂತ ಅತಿ ಪ್ರಾಮುಖ್ಯವಾಗಿದೆಯೆಂದು ಸಮಾಜವು ಪರಿಗಣಿಸುವ ಮೌಲ್ಯಗಳು ಇವೆ,” ಎಂಬುದಾಗಿ ಹೇಳಿತು. ಫ್ರಾನ್ಸಿನ ಶ್ರೇಷ್ಠ ನ್ಯಾಯಾಲಯವು, ಬದಲಿ ತಾಯಿತನವು ಒಂದು ಹೆಂಗಸಿನ ದೇಹವನ್ನು ಕೆಡಿಸುತ್ತದೆ ಮತ್ತು “ಮಾನವ ದೇಹವನ್ನು ಸಾಲವಾಗಿ ಕೊಡಬಾರದು, ಬಾಡಿಗೆಗಾಗಿ ಕೊಡಬಾರದು, ಮಾರ ಬಾರದು,” ಎಂದು ಹೇಳಿತು.
ಬದಲಿತನದಲ್ಲಿ ಸಮಸ್ಯೆಗಳು
ಬದಲಿತನವು ಅನೇಕ ಸಮಸ್ಯೆಗಳನ್ನು ತರುತ್ತದೆ. ಜನ್ಮ ಕೊಟ್ಟಂಥ ಹೆಂಗಸು ಮಗುವನ್ನು ಇಟ್ಟುಕೊಳ್ಳುವುದಾದರೆ, ಕುರೂಪವಾದ ನ್ಯಾಯ ಜಗಳಗಳ ಸಾಧ್ಯತೆಯು ಒಂದಾಗಿದೆ. ಅದು ಯಾರ ಮಗುವಾಗಿದೆ, ಜನ್ಮ ಕೊಡುವಂಥ ಹೆಂಗಸಿನದೊ ಯಾ ಅಂಡಾಣುವನ್ನು ಒದಗಿಸುವ ಹೆಂಗಸಿನದೊ? ಆದುದರಿಂದ ಒಂದು ಮಗುವಿನ ಜನನವು, ಸಾಮಾನ್ಯವಾಗಿ ಹರ್ಷಿಸುವ ಸಮಯವಾಗಿದ್ದರೂ, ಕೆಲವೊಮ್ಮೆ ನ್ಯಾಯಸಭೆಯ ಹೋರಾಟಕ್ಕೆ ನಡೆಸುತ್ತದೆ. ಇನ್ನೊಂದು ಸಮಸ್ಯೆಯು: ಬದಲಿ ತಾಯಿಗಳಾಗಲು ಒಪ್ಪಿದ ಕೆಲವು ಹೆಂಗಸರು ಒಪ್ಪಂದವಾದ ಮಗುವಿನ ವಿಕಾಸ ಮತ್ತು ಜನನದೊಂದಿಗೆ ಅವರ ಭಾವನೆಗಳು ಬದಲಾಗುವುದನ್ನು ಕಂಡಿದ್ದಾರೆ. ಕೆಲವು ತಿಂಗಳುಗಳ ಮುಂಚೆ ಒಪ್ಪಿದ ಒಪ್ಪಂದವನ್ನು ಸ್ವೀಕರಿಸಲು ಅವರಿಗೆ ಹೆಚ್ಚು ಕಠಿನವಾಗುತ್ತದೆ. ತಾಯಿ ಮತ್ತು ಆಕೆಯೊಳಗಿರುವ ಮಗುವಿನ ನಡುವೆ ಒಂದು ಶಕ್ತಿಯುತ ಅಂಟಿಕೆಯ ಸಂಬಂಧವು ರೂಪಿಸಲ್ಪಡುತ್ತದೆ. ಒಬ್ಬಾಕೆ ಬದಲಿ ತಾಯಿ, ಈ ಅಂಟಿಕೆಯನ್ನು ನಿರೀಕ್ಷಿಸದೆ, ಮಗುವನ್ನು ಕೊಟ್ಟುಬಿಡುವುದರ ಕುರಿತು: “ಅದು ಯಾರೋ ಒಬ್ಬರು ಸತ್ತಂತಿತ್ತು. ನನ್ನ ದೇಹವು ನನ್ನ ಮಗಳಿಗಾಗಿ ಅಳುತಿತ್ತು,” ಎಂಬ ತನ್ನ ಭಾವನೆಗಳನ್ನು ವಿವರಿಸುತ್ತಾಳೆ.
ಮತ್ತೂ, ಇಂತಹ ಒಂದು ಜನನವು ಬದಲಿ ತಾಯಿಯ ಬೇರೆ ಮಕ್ಕಳ ಮೇಲೆ, ಮಗುವನ್ನು ಸ್ವೀಕರಿಸುವ ಕುಟುಂಬದ ಮೇಲೆ, ಮತ್ತು ಆ ಮಗುವಿನ ಮೇಲೆಯೆ ಯಾವ ಬಹು ಕಾಲದ ಪರಿಣಾಮಗಳನ್ನು ಮಾಡಬಹುದು? ಯಾ ಒಂದು ಬದಲಿ ತಾಯಿಯಿಂದ ಜನಿಸಿದ ಮಗುವಿಗೆ ಜನನ ದೋಷ ಇರುವದಾದರೆ ಏನು ಸಂಭವಿಸುವುದು? ತಂದೆಯು ಮಗುವನ್ನು ತೆಗೆದುಕೊಳ್ಳುವಂತೆ ನಿರ್ಬಂಧಿಸಲ್ಪಡುತ್ತಾನೆಯೆ? ಇಲ್ಲವಾದರೆ, ಮಗುವಿನ ಪೋಷಣೆಗಾಗಿ ಯಾರು ಹಣ ಕೊಡುವರು? ಮತ್ತು ಇದಕ್ಕಿಂತಲೂ ಅತಿ ಪ್ರಾಮುಖ್ಯವಾದ ಪ್ರಶ್ನೆಯು, ಬದಲಿ ತಾಯಿತನದ ಕುರಿತು ದೇವರ ನೋಟವೇನು?
ಬದಲಿ ತಾಯಿತನವು ಮದುವೆಯನ್ನು ಗೌರವಿಸುತದ್ತೊ?
ದೇವರು ಮದುವೆಯನ್ನು ಪವಿತ್ರವಾದ ವಿಷಯವಾಗಿ ನೋಡುತ್ತಾನೆಂದು ಆತನ ವಾಕ್ಯವು ನಮಗೆ ಹೇಳುತ್ತದೆ. ಉದಾಹರಣೆಗೆ, ಇಬ್ರಿಯ 13:4 ಹೇಳುವುದು: “ಗಂಡ ಹೆಂಡರ ಸಂಬಂಧವು ನಿಷ್ಕಲಂಕವಾಗಿರಬೇಕು. ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳುಕೊಳ್ಳಿರಿ.”a ಎಲ್ಲಾ ಕ್ರೈಸ್ತರೂ ಮದುವೆಯನ್ನು ಗೌರವದ್ದಾಗಿ ಪರಿಗಣಿಸಿ, ಅದನ್ನು ಆ ರೀತಿಯಲ್ಲಿ ಇಟ್ಟು ಕೊಳ್ಳುವಂತೆ ದೇವರು ಅಪೇಕ್ಷಿಸುತ್ತಾನೆ. ಮದುವೆಯನ್ನು ಯಾವುದು ಕಳಂಕಿತಗೊಳಿಸುತ್ತದೆ? ಮದುವೆಯ ಮೊದಲು ಅದನ್ನು ಅಗೌರವಿಸುವ, ಅವಿವಾಹಿತರ ಸಂಭೋಗ, ಮತ್ತು ಮದುವೆಯನ್ನು ಪ್ರವೇಶಿಸಿದ ಅನಂತರ ಅದನ್ನು ಅಗೌರವಿಸುವ, ವ್ಯಭಿಚಾರ—ಇವುಗಳೇ.
ಬದಲಿ ತಾಯಿತನವು ಮದುವೆಯನ್ನು ಗೌರವಿಸಿ, ಮದುವೆಯ ಸಂಬಂಧವನ್ನು ನಿಷ್ಕಳಂಕವಾಗಿಡುತದ್ತೊ? ಸರಳವಾಗಿ ಹೇಳುವುದಾದರೆ, ಇಲ್ಲ. ದಾನಿ ವೀರ್ಯಾಣುವಿನಿಂದ ಹೆಂಗಸು ಬೀಜಾವಾಪನೆ ಮಾಡಿಸಿಕೊಳ್ಳುವುದು ಸಾಂಪ್ರದಾಯಿಕ ಬದಲಿತನಕ್ಕೆ ಆವಶ್ಯವಾಗಿದೆ. ಯಾಜಕಕಾಂಡ 18:20 ರಲ್ಲಿ ಹೀಗೆ ಹೇಳುವ ಬೈಬಲಿನ ನೋಟವನ್ನು ಕಾಣಬಹುದು, “ಪರಸ್ತ್ರೀಗಮನದಿಂದ ಅಪರಿಶುದ್ಧರಾಗಬಾರದು.” ಸಂಭೋಗದ ಮೂಲಕ ಬೀಜಾವಾಪನೆಯ ಹಾಗೂ ದಾನಿ ನೆಡುವಿಕೆಯಿಂದ ಕೃತಕ ಬೀಜಾವಾಪನೆಯ ನಡುವೆ ಭೇದವನ್ನು ಮಾಡಲು ಯಾವ ಬೈಬಲ್ ಆಧಾರಗಳೂ ಇಲ್ಲ. ಆದುದರಿಂದ, ಎರಡೂ ವಿಷಯಗಳಲ್ಲಿ, ಒಬ್ಬ ಹೆಂಗಸಿನ ನ್ಯಾಯವಾದ ಗಂಡನಲ್ಲದೆ ಬೇರೆ ಪುರುಷನಿಂದ ಬೀಜಾವಾಪನೆ ನಡೆಯುವುದರಿಂದ, ಅದು ಅವಿವಾಹಿತರ ಸಂಭೋಗ ಯಾ ವ್ಯಭಿಚಾರವಾಗುತ್ತದೆ.
ಗರ್ಭಧಾರಣೆಯ ಬದಲಿತನದ ಕುರಿತೇನು? ಇದು ಕೂಡ ಮದುವೆಯ ಸಂಬಂಧವನ್ನು ಕಳಂಕಿತಗೊಳಿಸುತ್ತದೆ. ಫಲಿಸುವಂತಹ ಅಂಡಾಣು ಗಂಡ ಮತ್ತು ಹೆಂಡತಿಯ ಕೂಡುವಿಕೆಯಿಂದ ಆಗಿರುವುದು ನಿಜ, ಆದರೆ ತದನಂತರ ಅದನ್ನು ಇನ್ನೊಂದು ಹೆಂಗಸಿನ ಗರ್ಭದಲ್ಲಿ ಇಡಲಾಗುತ್ತದೆ, ಮತ್ತು ವಾಸ್ತವದಲ್ಲಿ ಆಕೆಯನ್ನು ಗರ್ಭವತಿಯನ್ನಾಗಿ ಮಾಡುತ್ತದೆ. ಈ ಗರ್ಭಧಾರಣೆಯು, ಬದಲಿ ಹೆಂಗಸು ಮತ್ತು ಆಕೆಯ ಸ್ವಂತ ಗಂಡನ ನಡುವಿನ ಲೈಂಗಿಕ ಸಂಬಂಧಗಳ ಕಾರಣವಾಗಿರುವದಿಲ್ಲ. ಆದುದರಿಂದ, ಆಕೆಯ ಸಂತಾನೋತ್ಪತಿಯ್ತ ಅಂಗಗಳನ್ನು ಆಕೆಯ ಸ್ವಂತ ಸಂಗಾತಿಯಲ್ಲದೆ ಬೇರೆ ಯಾರಿಂದಲೋ ಈಗ ಉಪಯೋಗಿಸಲಾಗುತ್ತಿದೆ. ಇದು ಒಬ್ಬ ಹೆಂಗಸು ತನ್ನ ಸ್ವಂತ ಗಂಡನಿಗೋಸ್ಕರ ಒಂದು ಮಗುವನ್ನು ಪಡೆಯಬೇಕೆಂಬ ಬೈಬಲಿನ ನೈತಿಕ ತತ್ವಗಳಿಗೆ ಅಸಮಂಜಸವಾಗಿದೆ. (ಧರ್ಮೋಪದೇಶಕಾಂಡ 23:2 ಹೋಲಿಸಿ.) ಬದಲಿ ಹೆಂಗಸಿನ ಸ್ವಂತ ಗಂಡನ ಬದಲಾಗಿ ಬೇರೊಬ್ಬ ಮನುಷ್ಯನು ಆಕೆಯ ಸಂತಾನೋತ್ಪತಿಯ್ತ ಅಂಗಗಳನ್ನು ಉಪಯೋಗಿಸುವುದು ಸೂಕವ್ತಾಗಿರುವುದಿಲ್ಲ. ಅದು ಮದುವೆ ಸಂಬಂಧದ ಸರಿಯಾದ ಉಪಯೋಗವಲ್ಲ. ಆದುದರಿಂದ, ಬದಲಿ ತಾಯಿತನವು ಕ್ರೈಸರ್ತಿಗಲ್ಲ. (g93 3/8)
[ಅಧ್ಯಯನ ಪ್ರಶ್ನೆಗಳು]
a ನ್ಯೂ ಟೆಸಮ್ಟೆಂಟ್ ವರ್ಡ್ ಸಡ್ಟೀಸ್, ಎಂಬ ಪರಾಮರ್ಶ ಗ್ರಂಥವು, ಇಬ್ರಿಯ 13:4 ರ “ಮದುವೆಯ ಸಂಬಂಧ” ದ ಅರ್ಥವು ಮದುವೆಯ ಸ್ಥಿತಿ ಮಾತ್ರವಲ್ಲ ಅದರ ಉಪಯೋಗವು ಕೂಡ ಕಳಂಕಿತವಾಗಬಾರದೆಂದು ತೋರಿಸುತ್ತದೆ.
[ಪುಟ 27 ರಲ್ಲಿರುವ ಚಿತ್ರ ಕೃಪೆ]
Pastel by Mary Cassatt, The Metropolitan Museum of Art, Gift of Mrs. Ralph J. Hines, 1960. (60.181)