-
ವಾಚಕರಿಂದ ಪ್ರಶ್ನೆಗಳುಕಾವಲಿನಬುರುಜು—2001 | ಅಕ್ಟೋಬರ್ 1
-
-
ಒಂದನೆಯ ಶತಮಾನದ ಇಬ್ರಿಯ ಕ್ರೈಸ್ತರಿಗೆ ಅಪೊಸ್ತಲ ಪೌಲನು ಬರೆದುದು: “ದೇವರ ಜನರು ಅನುಭವಿಸುವದಕ್ಕಿರುವ ಸಬ್ಬತೆಂಬ ವಿಶ್ರಾಂತಿಯು ಇನ್ನೂ ಉಂಟು. ಹೇಗಂದರೆ ದೇವರು ತನ್ನ ಕೆಲಸಗಳನ್ನು ಮುಗಿಸಿ ಹೇಗೆ ವಿಶ್ರಮಿಸಿಕೊಂಡನೋ ಹಾಗೆಯೇ ಆತನ ವಿಶ್ರಾಂತಿಯಲ್ಲಿ ಸೇರಿರುವವನು ಸಹ ತನ್ನ ಕೆಲಸಗಳನ್ನು ಮುಗಿಸಿ ವಿಶ್ರಮಿಸಿಕೊಂಡಿದ್ದಾನೆ. ಆದದರಿಂದ ನಾವು ಆ ವಿಶ್ರಾಂತಿಯಲ್ಲಿ ಸೇರುವದಕ್ಕೆ ಪ್ರಯಾಸಪಡೋಣ.”—ಇಬ್ರಿಯ 4:9-11.
-
-
ವಾಚಕರಿಂದ ಪ್ರಶ್ನೆಗಳುಕಾವಲಿನಬುರುಜು—2001 | ಅಕ್ಟೋಬರ್ 1
-
-
ಇಬ್ರಿಯರಿಗೆ ಬರೆದ ಪತ್ರದಲ್ಲಿ ಪೌಲನ ಮಾತುಗಳಿಗೆ ನಾವು ಹಿಂದಿರುಗುವುದಾದರೆ, “ದೇವರ ಜನರು ಅನುಭವಿಸುವುದಕ್ಕಿರುವ ಸಬ್ಬತ್ತೆಂಬ ವಿಶ್ರಾಂತಿಯು ಇನ್ನೂ ಉಂಟು” ಎಂದು ಅವನು ಹೇಳುವುದನ್ನು ನಾವು ಗಮನಿಸುತ್ತೇವೆ. ಮತ್ತು “ಆ ವಿಶ್ರಾಂತಿಯಲ್ಲಿ ಸೇರುವುದಕ್ಕೆ” ಪ್ರಯಾಸಪಡೋಣ ಎಂದು ಅವನು ಜೊತೆ ಕ್ರೈಸ್ತರನ್ನು ಪ್ರೋತ್ಸಾಹಿಸಿದನು. ಪೌಲನು ಈ ಮಾತುಗಳನ್ನು ಬರೆದಾಗ, ಸುಮಾರು 4,000 ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ದೇವರ ವಿಶ್ರಾಂತಿಯ “ಆ ಏಳನೆಯ ದಿನವು” ಇನ್ನೂ ಮುಂದುವರಿಯುತ್ತಾ ಇತ್ತೆಂಬುದನ್ನು ಅದು ಸೂಚಿಸುತ್ತದೆ. “ಸಬ್ಬತ್ ದಿನಕ್ಕೆ ಒಡೆಯ”ನಾಗಿರುವ ಯೇಸು ಕ್ರಿಸ್ತನ ಸಹಸ್ರ ವರ್ಷದಾಳಿಕೆಯ ಅಂತ್ಯದಲ್ಲಿ, ಮಾನವಕುಲ ಮತ್ತು ಭೂಮಿಯ ಕಡೆಗೆ ದೇವರ ಉದ್ದೇಶವು ಪೂರ್ಣವಾಗಿ ನೆರವೇರುವ ತನಕ ಅದು ಕೊನೆಗೊಳ್ಳದು.—ಮತ್ತಾಯ 12:8; ಪ್ರಕಟನೆ 20:1-6; 21:1-4.
-
-
ವಾಚಕರಿಂದ ಪ್ರಶ್ನೆಗಳುಕಾವಲಿನಬುರುಜು—2001 | ಅಕ್ಟೋಬರ್ 1
-
-
ದೇವರ ವಿಶ್ರಾಂತಿಯ ಕುರಿತಾದ ಪೌಲನ ಚರ್ಚೆ ಮತ್ತು ಒಬ್ಬನು ಹೇಗೆ ಅದರಲ್ಲಿ ಸೇರಬಹುದು ಎಂಬ ವಿವರಣೆಯು ಯೆರೂಸಲೇಮಿನ ಹೀಬ್ರು ಕ್ರೈಸ್ತರಿಗೆ ಪ್ರೋತ್ಸಾಹನೆಯ ಮೂಲವಾಗಿತ್ತೆಂಬುದು ನಿಶ್ಚಯ. ಯಾಕೆಂದರೆ ಅವರು ತಮ್ಮ ನಂಬಿಕೆಗಾಗಿ ಬಹಳಷ್ಟು ಹಿಂಸೆ ಮತ್ತು ಅಪಹಾಸ್ಯವನ್ನು ತಾಳಿಕೊಂಡಿದ್ದರು. (ಅ. ಕೃತ್ಯಗಳು 8:1; 12:1-5) ತದ್ರೀತಿಯಲ್ಲಿ, ಇಂದಿನ ಕ್ರೈಸ್ತರಿಗೆ ಪೌಲನ ಮಾತುಗಳು ನಿಶ್ಚಯವಾಗಿಯೂ ಪ್ರೋತ್ಸಾಹನೆಯ ಮೂಲವಾಗಿರಬಲ್ಲವು. ತನ್ನ ನೀತಿಯ ರಾಜ್ಯದ ಕೆಳಗೆ ಬಂದು ಪರದೈಸ ಭೂಮಿಯನ್ನು ತರುವ ದೇವರ ವಾಗ್ದಾನದ ನೆರವೇರಿಕೆಯು ಹತ್ತಿರವಾಗಿದೆ ಎಂದು ಮನಗಂಡವರಾಗಿ, ನಾವು ಸಹ ನಮ್ಮ ಸ್ವಂತ ಕೆಲಸಗಳಿಂದ ವಿಶ್ರಮಿಸಿಕೊಂಡು, ದೇವರ ವಿಶ್ರಾಂತಿಯೊಳಗೆ ಪ್ರವೇಶಿಸಲು ಪ್ರಯಾಸಪಡಬೇಕು.—ಮತ್ತಾಯ 6:10, 33; 2 ಪೇತ್ರ 3:13.
-