ಪಾಠ 36
ಎಲ್ಲಾ ವಿಷಯಗಳಲ್ಲೂ ಪ್ರಾಮಾಣಿಕರಾಗಿರಿ
ಪ್ರಾಮಾಣಿಕರಾಗಿರೋ ಸ್ನೇಹಿತರು ಸಿಗಬೇಕು ಅಂತ ನಾವೆಲ್ಲರೂ ಬಯಸ್ತೇವೆ. ಯೆಹೋವನೂ ತನ್ನ ಸ್ನೇಹಿತರು ಪ್ರಾಮಾಣಿಕರಾಗಿರಬೇಕು ಅಂತ ಇಷ್ಟಪಡುತ್ತಾನೆ. ಆದರೆ ನಮ್ಮ ಸುತ್ತಮುತ್ತ ಮೋಸ ಮಾಡುವವರು ಇರುವಾಗ ನಾವು ಪ್ರಾಮಾಣಿಕರಾಗಿ ಇರೋದು ಸ್ವಲ್ಪ ಕಷ್ಟ. ಎಲ್ಲಾ ವಿಷಯಗಳಲ್ಲಿ ಪ್ರಾಮಾಣಿಕರಾಗಿದ್ದರೆ ನಮಗೇನು ಪ್ರಯೋಜನ ಇದೆ?
1. ಪ್ರಾಮಾಣಿಕರಾಗಿರಲು ಒಂದು ಮುಖ್ಯ ಕಾರಣ ಏನು?
ನಾವು ಪ್ರಾಮಾಣಿಕರಾಗಿರುವಾಗ ಯೆಹೋವ ದೇವರನ್ನ ಗೌರವಿಸುತ್ತೇವೆ, ಪ್ರೀತಿಸುತ್ತೇವೆ ಅಂತ ತೋರಿಸಿಕೊಡುತ್ತೇವೆ. ನಾವು ಏನು ಮಾಡುತ್ತೇವೆ ಅನ್ನೋದಷ್ಟೇ ಅಲ್ಲ ನಾವೇನು ಯೋಚಿಸುತ್ತೇವೆ ಅನ್ನೋದೂ ಯೆಹೋವನಿಗೆ ಗೊತ್ತಾಗುತ್ತೆ. (ಇಬ್ರಿಯ 4:13) ನಾವು ಮನಸಾರೆ ಪ್ರಾಮಾಣಿಕತೆ ತೋರಿಸುವಾಗ ಯೆಹೋವನಿಗೆ ತುಂಬ ಖುಷಿಯಾಗುತ್ತೆ. “ಯಾಕಂದ್ರೆ ಯೆಹೋವ ಮೋಸಗಾರನನ್ನ ಇಷ್ಟಪಡಲ್ಲ, ಆದ್ರೆ ಆತನು ಪ್ರಾಮಾಣಿಕನ ಆಪ್ತ ಸ್ನೇಹಿತ” ಅಂತ ಬೈಬಲ್ ಹೇಳುತ್ತೆ.—ಜ್ಞಾನೋಕ್ತಿ 3:32.
2. ನಾವು ಪ್ರತಿದಿನ ಹೇಗೆಲ್ಲಾ ಪ್ರಾಮಾಣಿಕರಾಗಿ ಇರಬಹುದು?
ನಾವು “ಒಬ್ಬರ ಜೊತೆ ಒಬ್ಬರು ಸತ್ಯನೇ ಮಾತಾಡಬೇಕು” ಅಂತ ಯೆಹೋವ ದೇವರು ಬಯಸ್ತಾನೆ. (ಜೆಕರ್ಯ 8:16, 17) ಇದರ ಅರ್ಥ ಏನು? ನಾವು ಎಲ್ಲರ ಜೊತೆ ಪ್ರಾಮಾಣಿಕರಾಗಿ ಇರಬೇಕು. ನಮ್ಮ ಜೊತೆ ಕೆಲಸ ಮಾಡುವವರ, ಸಹೋದರ ಸಹೋದರಿಯರ ಅಥವಾ ಸರ್ಕಾರಿ ಅಧಿಕಾರಿಗಳ ಹತ್ತಿರ ಸುಳ್ಳು ಹೇಳಲ್ಲ ಅಥವಾ ಮುಖ್ಯವಾದ ವಿಷಯಗಳನ್ನ ಮುಚ್ಚಿಡಲ್ಲ. ಪ್ರಾಮಾಣಿಕ ಜನರು ಕದಿಯಲ್ಲ, ಮೋಸ ಮಾಡೋದಿಲ್ಲ. (ಜ್ಞಾನೋಕ್ತಿ 24:28 ಮತ್ತು ಎಫೆಸ 4:28 ಓದಿ.) ಅವರು ತೆರಿಗೆಯನ್ನ (ಟ್ಯಾಕ್ಸ್) ಪ್ರಾಮಾಣಿಕವಾಗಿ ಕಟ್ಟುತ್ತಾರೆ. (ರೋಮನ್ನರಿಗೆ 13:5-7) ಹೀಗೆ ಮಾಡೋದಾದ್ರೆ ನಾವು ‘ಎಲ್ಲ ವಿಷಯದಲ್ಲೂ ಪ್ರಾಮಾಣಿಕವಾಗಿ ಇರುತ್ತೇವೆ.’—ಇಬ್ರಿಯ 13:18.
3. ಪ್ರಾಮಾಣಿಕರಾಗಿದ್ದರೆ ಯಾವೆಲ್ಲಾ ಪ್ರಯೋಜನಗಳಿವೆ?
ನಮಗೆ ಪ್ರಾಮಾಣಿಕರು ಅನ್ನೋ ಒಳ್ಳೇ ಹೆಸರಿದ್ರೆ ಜನರು ನಮ್ಮ ಮೇಲೆ ನಂಬಿಕೆ ಇಡುತ್ತಾರೆ. ನಾವು ಪ್ರಾಮಾಣಿಕರಾಗಿ ಇದ್ದರೆ ಸಭೆಯಲ್ಲಿ ಪ್ರೀತಿ, ಶಾಂತಿ ಮತ್ತು ಸುರಕ್ಷತೆಯ ಭಾವನೆ ಇರುತ್ತೆ. ನಮಗೆ ಒಳ್ಳೇ ಮನಸ್ಸಾಕ್ಷಿ ಇರುತ್ತೆ. ಜೊತೆಗೆ ನಮ್ಮ ಪ್ರಾಮಾಣಿಕತೆ ‘ರಕ್ಷಕನಾದ ದೇವರ ಬೋಧನೆಯ ಅಂದವನ್ನ ಹೆಚ್ಚಿಸುತ್ತೆ.’ ಅಷ್ಟೇ ಅಲ್ಲ, ನಮ್ಮ ಪ್ರಾಮಾಣಿಕತೆ ನೋಡಿ ಬೇರೆಯವರೂ ಯೆಹೋವನ ಬಗ್ಗೆ ಕಲಿಯಲು ಇಷ್ಟಪಡ್ತಾರೆ.—ತೀತ 2:10.
ಹೆಚ್ಚನ್ನ ತಿಳಿಯೋಣ
ನಾವು ಪ್ರಾಮಾಣಿಕರಾಗಿದ್ದರೆ ಯೆಹೋವನಿಗೆ ಮತ್ತು ನಮಗೆ ಹೇಗೆ ಖುಷಿಯಾಗುತ್ತೆ ಅಂತ ಕಲಿಯಿರಿ. ಅಷ್ಟೇ ಅಲ್ಲ ನಾವು ಎಲ್ಲಾ ವಿಷಯಗಳಲ್ಲೂ ಹೇಗೆ ಪ್ರಾಮಾಣಿಕರಾಗಿ ಇರಬಹುದು ಅಂತನೂ ಕಲಿಯಿರಿ.
4. ನಾವು ಪ್ರಾಮಾಣಿಕರಾಗಿದ್ದರೆ ಯೆಹೋವನಿಗೆ ತುಂಬ ಖುಷಿಯಾಗುತ್ತೆ
ಕೀರ್ತನೆ 44:21 ಮತ್ತು ಮಲಾಕಿ 3:16 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಯೆಹೋವನಿಂದ ಸತ್ಯವನ್ನ ಮುಚ್ಚಿಡೋದು ಮೂರ್ಖತನ ಯಾಕೆ?
ಸತ್ಯ ಹೇಳಿದ್ರೆ ತೊಂದರೆ ಆಗುತ್ತೆ ಅಂತ ಗೊತ್ತಿದ್ರೂ ನಾವು ಸತ್ಯವನ್ನೇ ಹೇಳುವಾಗ ಯೆಹೋವನಿಗೆ ಹೇಗನಿಸುತ್ತೆ?
5. ಯಾವಾಗ್ಲೂ ಪ್ರಾಮಾಣಿಕರಾಗಿರಿ
ಯಾವಾಗ್ಲೂ ಪ್ರಾಮಾಣಿಕರಾಗಿ ಇರೋದು ಕಷ್ಟ ಅಂತ ಕೆಲವರು ನೆನಸ್ತಾರೆ. ಆದರೆ ನಾವು ಯಾಕೆ ಯಾವಾಗ್ಲೂ ಪ್ರಾಮಾಣಿಕರಾಗಿ ಇರಬೇಕು? ವಿಡಿಯೋ ನೋಡಿ.
ಇಬ್ರಿಯ 13:18 ಓದಿ, ನಂತರ ಕೆಳಗಿನ ಸನ್ನಿವೇಶಗಳಲ್ಲಿ ಹೇಗೆ ಪ್ರಾಮಾಣಿಕರಾಗಿ ಇರಬಹುದು ಅನ್ನೋದನ್ನ ಚರ್ಚಿಸಿ:
ಕುಟುಂಬದಲ್ಲಿ
ಕೆಲಸದ ಸ್ಥಳ ಅಥವಾ ಶಾಲೆಯಲ್ಲಿ
ಬೇರೆ ಸನ್ನಿವೇಶಗಳಲ್ಲಿ
6. ಪ್ರಾಮಾಣಿಕರಾಗಿದ್ದರೆ ಪ್ರಯೋಜನಗಳಿವೆ
ಪ್ರಾಮಾಣಿಕರಾಗಿದ್ದರೆ ಕೆಲವು ತೊಂದರೆಗಳು ಬರಬಹುದು ಅಂತ ಮೊದಮೊದಲು ಅನಿಸುತ್ತೆ. ಆದರೆ ಹೋಗ್ತಾ ಹೋಗ್ತಾ ಅದ್ರಿಂದ ಆಶೀರ್ವಾದ ಇದೆ ಅಂತ ಗೊತ್ತಾಗುತ್ತೆ. ಕೀರ್ತನೆ 34:12-16 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಪ್ರಾಮಾಣಿಕರಾಗಿದ್ದರೆ ಜೀವನದಲ್ಲಿ ಹೇಗೆ ಖುಷಿಯಾಗಿರಬಹುದು?
ಪ್ರಾಮಾಣಿಕರಾಗಿರೋ ಗಂಡಹೆಂಡತಿ ಮಧ್ಯೆ ಒಳ್ಳೇ ಬಾಂಧವ್ಯ ಇರುತ್ತೆ
ಪ್ರಾಮಾಣಿಕ ಕೆಲಸಗಾರರು ಮಾಲೀಕರ ನಂಬಿಕೆಯನ್ನ ಗಳಿಸ್ತಾರೆ
ಒಬ್ಬ ಪ್ರಾಮಾಣಿಕ ವ್ಯಕ್ತಿ ಸರ್ಕಾರಿ ಅಧಿಕಾರಿಗಳಿಂದ ಒಳ್ಳೇ ಹೆಸರನ್ನ ಪಡೆದುಕೊಳ್ಳುತ್ತಾನೆ
ಕೆಲವರು ಹೀಗಂತಾರೆ: “ಚಿಕ್ಕಪುಟ್ಟ ಸುಳ್ಳು ಹೇಳೋದ್ರಲ್ಲಿ ತಪ್ಪೇನಿಲ್ಲ.”
ಚಿಕ್ಕದಾಗಲಿ, ದೊಡ್ಡದಾಗಲಿ ಸುಳ್ಳು ಹೇಳೋರನ್ನ ಕಂಡರೆ ಯೆಹೋವನಿಗೆ ಇಷ್ಟ ಆಗಲ್ಲ ಯಾಕೆ?
ನಾವೇನು ಕಲಿತ್ವಿ
ತನ್ನ ಸ್ನೇಹಿತರು ನಡೆನುಡಿಯಲ್ಲಿ ಪ್ರಾಮಾಣಿಕರಾಗಿ ಇರಬೇಕು ಅಂತ ಯೆಹೋವನು ಬಯಸ್ತಾನೆ.
ನೆನಪಿದೆಯಾ
ನಾವು ಹೇಗೆಲ್ಲಾ ಪ್ರಾಮಾಣಿಕರಾಗಿ ಇರಬಹುದು?
ಸತ್ಯವನ್ನ ಮುಚ್ಚಿಡೋದು ಮೂರ್ಖತನ ಯಾಕೆ?
ನೀವು ಯಾವಾಗ್ಲೂ ಪ್ರಾಮಾಣಿಕರಾಗಿರಲು ಯಾಕೆ ಇಷ್ಟಪಡುತ್ತೀರಾ?
ಇದನ್ನೂ ನೋಡಿ
ಮಕ್ಕಳು ಪ್ರಾಮಾಣಿಕರಾಗಿರಲು ಹೆತ್ತವರು ಹೇಗೆ ಕಲಿಸಬಹುದು?
ಕೊಟ್ಟ ಮಾತಿನಂತೆ ನಡೆದುಕೊಂಡರೆ ಯಾವೆಲ್ಲಾ ಆಶೀರ್ವಾದಗಳು ಸಿಗುತ್ತೆ?
ನಾವು ಕಟ್ಟುವ ತೆರಿಗೆಯನ್ನ ಒಳ್ಳೇ ರೀತಿಯಲ್ಲಿ ಬಳಕೆ ಮಾಡಿಲ್ಲಾ ಅಂದ್ರೂ ತೆರಿಗೆ ಕಟ್ಟಲೇಬೇಕಾ?
ಮೋಸಗಾರನಾದ ಒಬ್ಬ ವ್ಯಕ್ತಿಗೆ ಪ್ರಾಮಾಣಿಕನಾಗೋಕೆ ಯಾವ ವಿಷಯ ಸಹಾಯ ಮಾಡಿತು?
“ಯೆಹೋವನ ಕರುಣೆ ಮತ್ತು ಕ್ಷಮೆಯನ್ನು ಅನುಭವಿಸಿ ನೋಡಿದೆ” (ಕಾವಲಿನಬುರುಜು, ಜುಲೈ 1, 2015)