-
ಯೆಹೋವನ ಸಂಘಟನೆಯನ್ನು ಎಂದಿಗೂ ಬಿಟ್ಟುಹೋಗಬೇಡಿಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
-
-
8 ಸಹನೆಯನ್ನು ಬೆಳೆಸಿಕೊಳ್ಳುವುದು ಎಷ್ಟು ಪ್ರಾಮುಖ್ಯವೆಂದು ಯಾಕೋಬನು ಬರೆದನು: “ನನ್ನ ಸಹೋದರರೇ, ನೀವು ನಾನಾವಿಧವಾದ ಪರೀಕ್ಷೆಗಳನ್ನು ಎದುರಿಸುವಾಗ ನಿಮ್ಮ ನಂಬಿಕೆಯ ಪರೀಕ್ಷಿತ ಗುಣಮಟ್ಟವು ತಾಳ್ಮೆಯನ್ನು [ಸಹನೆಯನ್ನು] ಉಂಟುಮಾಡುತ್ತದೆಂದು ತಿಳಿದವರಾಗಿದ್ದು ಅವೆಲ್ಲವುಗಳನ್ನು ಆನಂದಕರವಾದದ್ದಾಗಿ ಪರಿಗಣಿಸಿರಿ. ತಾಳ್ಮೆಯು [ಸಹನೆಯು] ತನ್ನ ಕೆಲಸವನ್ನು ಸಂಪೂರ್ಣಗೊಳಿಸಲಿ; ಆಗ ನೀವು ಯಾವುದೇ ವಿಷಯದಲ್ಲಿ ಕೊರತೆಯುಳ್ಳವರಾಗಿರದೆ ಎಲ್ಲ ವಿಧಗಳಲ್ಲಿ ಸಂಪೂರ್ಣರೂ ಸ್ವಸ್ಥರೂ ಆಗಿರುವಿರಿ.” (ಯಾಕೋ. 1:2-4) ಇಲ್ಲಿ ಹೇಳಿರುವಂತೆ ಕಷ್ಟಪರೀಕ್ಷೆಗಳು ಬಂದಾಗ ನಾವು ಬೇಸರಪಡಬಾರದು, ಆನಂದಪಡಬೇಕು. ಏಕೆಂದರೆ ಕಷ್ಟಪರೀಕ್ಷೆ ಬಂದಾಗಲೇ ಸಹನೆಯನ್ನು ಬೆಳೆಸಿಕೊಳ್ಳಲು ಆಗುತ್ತದೆ. ಸಹನೆಯು ನಮಗೆ ಯೇಸುವಿನಲ್ಲಿದ್ದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಮತ್ತು ಎಲ್ಲಾ ವಿಷಯಗಳಲ್ಲಿ ದೇವರಿಗೆ ಮೆಚ್ಚಿಗೆಯಾಗುವಂತೆ ಜೀವಿಸಲು ಕಲಿಸುತ್ತದೆ. ಅಲ್ಲದೆ ಇತರ ಕ್ರೈಸ್ತ ಗುಣಗಳನ್ನೂ ನಮ್ಮಲ್ಲಿ ಬೆಳೆಸುತ್ತದೆ. ಪ್ರತಿ ದಿನ ನಮ್ಮ ನಂಬಿಕೆಗೆ ಬರುವ ಪರೀಕ್ಷೆಗಳನ್ನು ಜಯಿಸುತ್ತಿರುವಲ್ಲಿ ಸಹನೆಯು ಹೆಚ್ಚುತ್ತಾ ಹೋಗುತ್ತದೆ.
-
-
ಯೆಹೋವನ ಸಂಘಟನೆಯನ್ನು ಎಂದಿಗೂ ಬಿಟ್ಟುಹೋಗಬೇಡಿಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
-
-
10 ಕಷ್ಟ ಬಂದಾಗ ನಾವು ಸಹನೆ ತೋರಿಸುತ್ತೇವಾ ಇಲ್ಲವಾ ಎಂಬುದು ಕಷ್ಟಗಳ ಬಗ್ಗೆ ನಾವು ಯಾವ ರೀತಿ ಯೋಚಿಸುತ್ತೇವೆ ಅನ್ನುವುದರ ಮೇಲೆ ಹೊಂದಿಕೊಂಡಿದೆ. ‘ಕಷ್ಟಪರೀಕ್ಷೆಗಳನ್ನು ಆನಂದಕರವಾದದ್ದಾಗಿ ಪರಿಗಣಿಸಿರಿ’ ಎಂದು ಯಾಕೋಬನು ಹೇಳಿದ್ದನ್ನು ಮರೆಯಬೇಡಿ. ಕೆಲವೊಮ್ಮೆ ದೈಹಿಕವಾಗಿ, ಮಾನಸಿಕವಾಗಿ ನಮಗೆ ತುಂಬ ನೋವು ತರುವ ಪರೀಕ್ಷೆಗಳನ್ನು ತಾಳಿಕೊಳ್ಳುತ್ತಾ ಆನಂದದಿಂದಿರುವುದು ಅಷ್ಟು ಸುಲಭವಲ್ಲ. ಆದರೆ ತಾಳಿಕೊಂಡದ್ದಕ್ಕೆ ಪ್ರತಿಫಲವಾಗಿ ಯೆಹೋವನು ಶಾಶ್ವತ ಜೀವನವನ್ನು ಕೊಡುತ್ತಾನೆ. ಅಪೊಸ್ತಲರು ಕಷ್ಟದಲ್ಲಿದ್ದಾಗಲೂ ಹೇಗೆ ಆನಂದದಿಂದಿದ್ದರೆಂದು ಗಮನಿಸಿ. “ಅವರು . . . ಅಪೊಸ್ತಲರನ್ನು ಕರೆಸಿ ಚಡಿಗಳಿಂದ ಹೊಡೆಸಿ ಯೇಸುವಿನ ಹೆಸರನ್ನು ಎತ್ತಿ ಮಾತಾಡುವುದನ್ನು ನಿಲ್ಲಿಸುವಂತೆ ಅಪ್ಪಣೆಕೊಟ್ಟು ಅವರನ್ನು ಕಳುಹಿಸಿಬಿಟ್ಟರು. ಆದರೆ ಅವನ ಹೆಸರಿನ ನಿಮಿತ್ತ ತಾವು ಅವಮಾನಪಡಲು ಯೋಗ್ಯರೆನಿಸಿಕೊಂಡದ್ದಕ್ಕಾಗಿ ಸಂತೋಷಿಸುತ್ತಾ ಅವರು ಹಿರೀಸಭೆಯಿಂದ ಹೊರಟುಹೋದರು.” (ಅ. ಕಾ. 5:40, 41) ಯೇಸುವಿನ ಆಜ್ಞೆಯನ್ನು ಪಾಲಿಸುತ್ತಿರುವುದಕ್ಕೇ ತಮಗೆ ಕಷ್ಟ ಬರುತ್ತಿದೆ ಮತ್ತು ಇವೆಲ್ಲ ಯೆಹೋವನು ತಮ್ಮನ್ನು ಮೆಚ್ಚಿದ್ದಾನೆಂಬುದಕ್ಕೆ ಪುರಾವೆ ಎಂದು ಅಪೊಸ್ತಲರಿಗೆ ಗೊತ್ತಿತ್ತು. ಹಾಗಾಗಿಯೇ ಸಮಯಾನಂತರ ಪೇತ್ರನು ನೀತಿಯ ನಿಮಿತ್ತ ಪರೀಕ್ಷೆಗಳನ್ನು ಎದುರಿಸುವುದು ಸಾರ್ಥಕ ಎಂದು ಬರೆದನು.—1 ಪೇತ್ರ 4:12-16.
-