ವಾಚಕರಿಂದ ಪ್ರಶ್ನೆಗಳು
ಒಂದನೆಯ ಯೋಹಾನ 4:18 ನಮಗನ್ನುವುದು: “ಪ್ರೀತಿಯು ಇರುವಲ್ಲಿ ಹೆದರಿಕೆಯಿಲ್ಲ. . . . ಪೂರ್ಣಪ್ರೀತಿಯು ಹೆದರಿಕೆಯನ್ನು ಹೊರಡಿಸಿಬಿಡುತ್ತದೆ.” ಆದರೆ ಪೇತ್ರನು ಬರೆದದ್ದು: “ಸಹೋದರರನ್ನು ಪ್ರೀತಿಸಿರಿ. ದೇವರಿಗೆ ಭಯಪಡಿರಿ.” (1 ಪೇತ್ರ 2:17) ನಾವು ಈ ಎರಡು ವಚನಗಳನ್ನು ಹೇಗೆ ಸರಿಹೊಂದಿಸಬಲ್ಲೆವು?
ಪೇತ್ರ ಮತ್ತು ಯೋಹಾನರಿಬ್ಬರೂ ಯೇಸು ಕ್ರಿಸ್ತನಿಂದಲೇ ನೇರವಾಗಿ ಕಲಿತಂತಹ ಅಪೊಸ್ತಲರಾಗಿದ್ದರು. ಹೀಗಿರುವದರಿಂದ ಅವರೇನನ್ನು ಬರೆದರೋ ಅದು ಸರಿಹೊಂದುತ್ತದೆ ಎಂಬ ಭರವಸೆಯಿಂದ ನಾವಿರಬಹುದು. ಮೇಲೆ ಉಲ್ಲೇಖಿಸಲ್ಪಟ್ಟಿರುವ ವಚನಗಳ ವಿಷಯದಲ್ಲಾದರೋ, ಆ ಇಬ್ಬರು ಅಪೊಸ್ತಲರು ವಿಭಿನ್ನ ಪ್ರಕಾರದ ಭಯದ ಕುರಿತಾಗಿ ಮಾತಾಡುತ್ತಿದ್ದದ್ದೇ ಕೀಲಿ ಕೈಯಾಗಿದೆ.
ನಾವು ಪ್ರಥಮವಾಗಿ ಪೇತ್ರನ ಸಲಹೆಯನ್ನು ಪರಿಗಣಿಸೋಣ. ಪೂರ್ವಾಪರವು ತೋರಿಸುವಂತೆ, ಅಧಿಕಾರದಲ್ಲಿರುವವರ ಕಡೆಗೆ ಜೊತೆ ಕ್ರೈಸ್ತರ ಮನೋಭಾವದ ಕುರಿತಾಗಿ ಪೇತ್ರನು ಅವರಿಗೆ ಪ್ರೇರಿತ ಸಲಹೆಯನ್ನು ನೀಡುತ್ತಿದ್ದನು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಿರ್ದಿಷ್ಟ ಕ್ಷೇತ್ರಗಳಲ್ಲಿ ಅಧೀನತೆಯ ಯೋಗ್ಯ ನೋಟದ ಮೇಲೆ ಅವನು ಹೇಳಿಕೆಯನ್ನೀಯುತ್ತಿದ್ದನು. ಹೀಗೆ, ಅರಸರಾಗಿ ಅಥವಾ ದೇಶಾಧಿಪತಿಗಳಾಗಿ, ಮಾನವ ಸರಕಾರಗಳಲ್ಲಿ ಅಧಿಕಾರಯುಕ್ತ ಸ್ಥಾನಗಳನ್ನು ಹೊಂದಿದ ಮನುಷ್ಯರಿಗೆ ಅಧೀನರಾಗಿರುವಂತೆ ಅವನು ಕ್ರೈಸ್ತರಿಗೆ ಸಲಹೆ ಕೊಟ್ಟನು. (1 ಪೇತ್ರ 2:13, 14) ಮುಂದುವರಿಸುತ್ತಾ ಪೇತ್ರನು ಬರೆದುದು: “ಎಲ್ಲರನ್ನೂ ಸನ್ಮಾನಿಸಿರಿ. ಸಹೋದರರನ್ನು ಪ್ರೀತಿಸಿರಿ. ದೇವರಿಗೆ ಭಯಪಡಿರಿ. ಅರಸನನ್ನು ಸನ್ಮಾನಿಸಿರಿ.”—1 ಪೇತ್ರ 2:17.
ಪೂರ್ವಾಪರವನ್ನು ಪರಿಗಣಿಸುವಾಗ, ಕ್ರೈಸ್ತರು “ದೇವರಿಗೆ ಭಯಪಡ” ಬೇಕು ಎಂದು ಪೇತ್ರನು ಹೇಳಿದಾಗ, ನಾವು ದೇವರಿಗಾಗಿ ಒಂದು ಆಳವಾದ, ಪೂಜ್ಯ ಗೌರವವನ್ನು, ಅತ್ಯುನ್ನತವ್ತಾದ ಅಧಿಕಾರವನ್ನು ಅಪ್ರಸನ್ನಗೊಳಿಸುವ ಒಂದು ಭಯವನ್ನು ಹೊಂದಿರಬೇಕೆಂದು ಅವನ ಅರ್ಥವಾಗಿತ್ತೆಂಬುದು ಸ್ಪಷ್ಟವಾಗಿಗುತ್ತದೆ.—ಇಬ್ರಿಯ 11:7ನ್ನು ಹೋಲಿಸಿರಿ.
ಅಪೊಸ್ತಲ ಯೋಹಾನನ ಹೇಳಿಕೆಯ ಕುರಿತಾಗಿ ಏನು? 1 ಯೋಹಾನ 4ನೆಯ ಅಧ್ಯಾಯದ ಆರಂಭದ ಭಾಗದಲ್ಲಿ, ಸುಳ್ಳು ಪ್ರವಾದಿಗಳಿಂದ ಬರುವಂತಹ “ಪ್ರೇರಿತ ನುಡಿಗಳನ್ನು” ಪರೀಕ್ಷಿಸುವ ಅಗತ್ಯದೊಂದಿಗೆ ಅಪೊಸ್ತಲನು ವ್ಯವಹರಿಸಿದನು. ಆ ನುಡಿಗಳು ಖಂಡಿತವಾಗಿಯೂ ಯೆಹೋವ ದೇವರಿಂದ ಉಗಮಿಸುವುದಿಲ್ಲ, ಅವು ದುಷ್ಟ ಲೋಕದಿಂದ ಬರುತ್ತವೆ ಅಥವಾ ಅದನ್ನು ಪ್ರತಿಬಿಂಬಿಸುತ್ತವೆ.
ವ್ಯತಿರಿಕ್ತವಾಗಿ, ಅಭಿಷಿಕ್ತ ಕ್ರೈಸ್ತರು “ದೇವರಿಂದ ಹುಟ್ಟಿದವರಾಗಿ” ದ್ದಾರೆ. (1 ಯೋಹಾನ 4:1-6) ಹಾಗಿರುವದರಿಂದ, ಯೋಹಾನನು ಪ್ರಚೋದಿಸಿದ್ದು: “ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಪ್ರೀತಿಯು ದೇವರಿಂದಾಗಿದೆ.” ಪ್ರೀತಿಯನ್ನು ತೋರಿಸುವುದರಲ್ಲಿ ದೇವರು ಆರಂಭದ ಹೆಜ್ಜೆಯನ್ನು ತೆಗೆದುಕೊಂಡನು—ಆತನು “ನಮ್ಮ ಪಾಪನಿವಾರಣಾರ್ಥವಾಗಿ ತನ್ನ ಮಗನನ್ನು ಕಳುಹಿಸಿಕೊಟ್ಟ”ನು. (1 ಯೋಹಾನ 4:7-10) ನಾವು ಹೇಗೆ ಪ್ರತಿಕ್ರಿಯಿಸಬೇಕು?
ಸ್ಪಷ್ಟವಾಗಿಗಿ, ನಮ್ಮ ಪ್ರೀತಿಯ ದೇವರೊಂದಿಗೆ ನಾವು ಐಕ್ಯರಾಗಿ ಉಳಿಯಬೇಕು. ನಾವು ಆತನ ಕುರಿತಾಗಿ ದಿಗಿಲುಗೊಳ್ಳಬಾರದು ಅಥವಾ ಅವನನ್ನು ಪ್ರಾರ್ಥನೆಯಲ್ಲಿ ಸಮೀಪಿಸುವ ಪ್ರತೀಕ್ಷೆಯ ವಿಷಯದಲ್ಲಿ ಕಂಪಿಸಬಾರದು. ಈ ಮುಂಚೆ ಯೋಹಾನನು ಸಲಹೆಯಿತ್ತದ್ದು: “ನಮ್ಮ ಹೃದಯವು ನಮ್ಮನ್ನು ದೋಷಿಗಳೆಂದು ನಿರ್ಣಯಿಸದಿದ್ದರೆ ನಮಗೆ ದೇವರ ವಿಷಯದಲ್ಲಿ ಧೈರ್ಯವುಂಟು. ಮತ್ತು ನಾವು ಆತನ ಆಜ್ಞೆಗಳನ್ನು ಕೈಕೊಂಡು ಆತನ ಎಣಿಕೆಯಲ್ಲಿ ಮೆಚ್ಚಿಕೆಯಾದ ಕಾರ್ಯಗಳನ್ನು ಮಾಡುವವರಾಗಿರುವದರಿಂದ ಏನು ಬೇಡಿಕೊಂಡರೂ ಆತನಿಂದ ಹೊಂದುವೆವು.” (1 ಯೋಹಾನ 3:21, 22) ಹೌದು, ಯಾವುದೇ ನಿಸ್ಸತ್ವವಿಲ್ಲದೆ ಅಥವಾ ಅಡ್ಡಗಟ್ಟಿಸುವ ಭಯವಿಲ್ಲದೇ ದೇವರನ್ನು ಸಮೀಪಿಸುವ ಸ್ವಾತಂತ್ರ್ಯವನ್ನು ಒಂದು ಒಳ್ಳೆಯ ಮನಸ್ಸಾಕ್ಷಿಯು ನಮಗೆ ಕೊಡುತ್ತದೆ. ಪ್ರೀತಿಯಿಂದ, ಯೆಹೋವನನ್ನು ಪ್ರಾರ್ಥನೆಯಲ್ಲಿ ಸಂಬೋಧಿಸಲು ಅಥವಾ ಸಮೀಪಿಸಲು ನಮಗೆ ಯಾವ ತಡೆಯೂ ಅನಿಸುವುದಿಲ್ಲ. ಈ ರೀತಿಯಲ್ಲಿ “ಪ್ರೀತಿಯು ಇರುವಲ್ಲಿ ಹೆದರಿಕೆಯಿಲ್ಲ.”
ಈ ಎರಡು ವಿಚಾರಗಳನ್ನು ನಾವು ಜೋಡಿಸೋಣ. ಒಬ್ಬ ಕ್ರೈಸ್ತನಿಗೆ, ಆತನ ಸ್ಥಾನ, ಶಕ್ತಿ ಮತ್ತು ನ್ಯಾಯಕ್ಕಾಗಿ ಆಳವಾದ ಗೌರವದಿಂದ ಹುಟ್ಟುವ, ಯೆಹೋವನ ಪೂಜ್ಯ ಭಯವು ಯಾವಾಗಲೂ ಇರಬೇಕು. ಆದರೆ ನಾವು ದೇವರನ್ನು ನಮ್ಮ ತಂದೆಯೋಪಾದಿಯೂ ಪ್ರೀತಿಸುತ್ತೇವೆ ಮತ್ತು ಆತನೆಡೆಗೆ ಒಂದು ಆಪ್ತ ಭಾವನೆ ಮತ್ತು ಅವನನ್ನು ಸಮೀಪಿಸಲು ಒಂದು ರೀತಿಯ ಸ್ವಾತಂತ್ರ್ಯದ ಅನಿಸಿಕೆ ನಮಗಾಗುತ್ತದೆ. ಆತನ ಕುರಿತಾಗಿ ಯಾವುದೇ ದಿಗಿಲಿನಿಂದ ತಡೆಹಿಡಿಯಲ್ಪಟ್ಟಿರುವ ಬದಲಿಗೆ, ಒಂದು ಮಗುವು ಒಬ್ಬ ಪ್ರೀತಿಯುಳ್ಳ ಹೆತ್ತವನನ್ನು ಸಮೀಪಿಸಲು ನಿರ್ದಾಕ್ಷಿಣ್ಯದ್ದಾಗಿರುವಂತೆ, ಆತನನ್ನು ನಾವು ಸಮೀಪಿಸಬಲ್ಲೆವೆಂದು ನಾವು ಭರವಸೆಯಿಡುತ್ತೇವೆ.—ಯಾಕೋಬ 4:8.