ಪಾಠ 28
ಯೆಹೋವನು ಮತ್ತು ಯೇಸು ತೋರಿಸಿದ ಪ್ರೀತಿಗೆ ಕೃತಜ್ಞತೆ ತೋರಿಸಿ
ನಿಮ್ಮ ಫ್ರೆಂಡ್ ನಿಮಗೆ ಏನಾದ್ರು ಗಿಫ್ಟ್ ಕೊಟ್ಟರೆ ಹೇಗನಿಸುತ್ತೆ? ನಿಮಗೆ ತುಂಬ ಖುಷಿಯಾಗುತ್ತೆ ಅಲ್ವಾ! ಅದಕ್ಕಾಗಿ ಅವರಿಗೆ ಥ್ಯಾಂಕ್ಸ್ ಹೇಳುತ್ತೀರ. ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು ಕೂಡ ತುಂಬ ಬೆಲೆಬಾಳುವ ಒಂದು ಗಿಫ್ಟನ್ನ ನಮಗೆ ಕೊಟ್ಟಿದ್ದಾರೆ. ಅದು ಯಾವುದು? ಅದಕ್ಕೆ ನಾವು ಹೇಗೆ ಕೃತಜ್ಞತೆ ತೋರಿಸಬಹುದು?
1. ನಾವು ಕೃತಜ್ಞತೆ ತೋರಿಸಬಹುದಾದ ಒಂದು ವಿಧ ಯಾವುದು?
‘ಯೇಸುವಿನ ಮೇಲೆ ನಂಬಿಕೆ ಇಡೋ ಪ್ರತಿಯೊಬ್ಬನೂ’ ಶಾಶ್ವತವಾಗಿ ಜೀವಿಸ್ತಾನೆ ಅಂತ ಬೈಬಲ್ ಮಾತು ಕೊಡುತ್ತೆ. (ಯೋಹಾನ 3:16) ಯೇಸುವಿನ ಮೇಲೆ ನಾವು ಹೇಗೆ ನಂಬಿಕೆಯನ್ನ ತೋರಿಸಬಹುದು? ನಮಗೆ ನಂಬಿಕೆ ಇದೆ ಅಂತ ಹೇಳಿದ್ರಷ್ಟೇ ಸಾಕಾಗಲ್ಲ, ಅದನ್ನ ನಮ್ಮ ನಡೆಯಲ್ಲಿ, ಮಾಡುವ ತೀರ್ಮಾನಗಳಲ್ಲಿ ತೋರಿಸಬೇಕು. (ಯಾಕೋಬ 2:17) ಹೀಗೆ ನಮ್ಮ ನಡೆ-ನುಡಿಯಲ್ಲಿ ನಂಬಿಕೆಯನ್ನ ತೋರಿಸಿದ್ರೆ ಯೇಸುವಿನ ಮತ್ತು ಯೆಹೋವನ ಜೊತೆಗಿರುವ ಸ್ನೇಹವನ್ನ ಬಲಪಡಿಸಲು ಆಗುತ್ತೆ.—ಯೋಹಾನ 14:21 ಓದಿ.
2. ಯೆಹೋವನಿಗೆ ಮತ್ತು ಯೇಸುವಿಗೆ ಕೃತಜ್ಞತೆ ತೋರಿಸಲು ಯಾವ ವಿಶೇಷ ಸಂದರ್ಭ ನಮಗಿದೆ?
ಯೇಸು ಸಾಯುವ ಹಿಂದಿನ ಸಂಜೆ, ತನ್ನ ಪ್ರಾಣತ್ಯಾಗಕ್ಕಾಗಿ ಕೃತಜ್ಞತೆ ತೋರಿಸಬಹುದಾದ ಇನ್ನೊಂದು ವಿಷಯದ ಬಗ್ಗೆ ಹೇಳಿದನು. ಅವತ್ತು ಸಂಜೆ ಯೇಸು ತನ್ನ ಶಿಷ್ಯರಿಗೆ ಒಂದು ವಿಶೇಷ ಸಂದರ್ಭಕ್ಕೆ ಸೇರಿ ಬರುವಂತೆ ಹೇಳಿದನು. ಯೇಸು ಶುರುಮಾಡಿದ ಈ ವಿಶೇಷ ಸಂದರ್ಭವನ್ನ ಬೈಬಲ್ “ಒಡೆಯನ ರಾತ್ರಿ ಊಟ” ಅಂತ ಹೇಳುತ್ತೆ. ಇದನ್ನ ಯೇಸು ಕ್ರಿಸ್ತನ ಮರಣದ ಸ್ಮರಣೆ ಅಂತನೂ ಕರೆಯಲಾಗುತ್ತೆ. (1 ಕೊರಿಂಥ 11:20) ಯೇಸು ನಮಗೆ ಜೀವ ಕೊಟ್ಟಿದ್ದನ್ನ ಅಪೊಸ್ತಲರು ಮತ್ತು ಕ್ರೈಸ್ತರಾದ ನಾವೆಲ್ಲರೂ ನೆನಪಿಸಿಕೊಳ್ಳಬೇಕು ಅಂತ ಆತನು ಬಯಸಿದನು. ಯೇಸು ಹೀಗೆ ಆಜ್ಞೆ ಕೊಟ್ಟನು: “ನನ್ನನ್ನ ನೆನಪಿಸ್ಕೊಳ್ಳೋಕೆ ಇದನ್ನ ಮಾಡ್ತಾ ಇರಿ.” (ಲೂಕ 22:19) ಸ್ಮರಣೆಗೆ ಹಾಜರಾಗುವ ಮೂಲಕ ಯೆಹೋವನು ಮತ್ತು ಯೇಸು ತೋರಿಸಿದ ಪ್ರೀತಿಗೆ ಕೃತಜ್ಞತೆಯನ್ನ ತೋರಿಸಬಹುದು.
ಹೆಚ್ಚನ್ನ ತಿಳಿಯೋಣ
ಯೆಹೋವನು ಮತ್ತು ಯೇಸು ತೋರಿಸಿದ ಪ್ರೀತಿಗೆ ಇನ್ನೂ ಹೇಗೆಲ್ಲಾ ಕೃತಜ್ಞತೆ ತೋರಿಸಬಹುದು ಅಂತ ತಿಳಿದುಕೊಳ್ಳಿ. ಯೇಸುವಿನ ಮರಣದ ಸ್ಮರಣೆ ಯಾಕೆ ಮುಖ್ಯ ಅಂತನೂ ಕಲಿಯಿರಿ.
3. ಕೃತಜ್ಞತೆ ನಮ್ಮ ಮನಸ್ಸಿನಲ್ಲಿ ಇದ್ದರೆ ಮಾತ್ರ ಸಾಕಾಗಲ್ಲ
ಈ ಸನ್ನಿವೇಶವನ್ನ ಸ್ವಲ್ಪ ಚಿತ್ರಿಸಿಕೊಳ್ಳಿ: ನೀವು ನೀರಿನಲ್ಲಿ ಮುಳುಗುತ್ತಿರುವಾಗ ಯಾರೋ ಒಬ್ಬ ವ್ಯಕ್ತಿ ನಿಮ್ಮನ್ನ ಕಾಪಾಡಿದ. ಆ ವ್ಯಕ್ತಿ ಮಾಡಿದ ಸಹಾಯವನ್ನ ನೀವು ಮರೆತು ಬಿಡ್ತೀರಾ? ಅಥವಾ ಅದಕ್ಕೆ ಯಾವೆಲ್ಲಾ ರೀತಿಯಲ್ಲಿ ಕೃತಜ್ಞತೆ ತೋರಿಸಬಹುದು ಅಂತ ಯೋಚಿಸ್ತೀರಾ?
ನಾವು ಸಾವಿಲ್ಲದ ಜೀವನವನ್ನ ಪಡೆಯೋಕೆ ಯೆಹೋವ ದೇವರ ಪ್ರೀತಿಯೇ ಕಾರಣ. 1 ಯೋಹಾನ 4:8-10 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಯೇಸು ಕೊಟ್ಟ ಪ್ರಾಣ ಯಾಕೆ ಒಂದು ವಿಶೇಷ ಉಡುಗೊರೆಯಾಗಿದೆ?
ಯೆಹೋವನು ಮತ್ತು ಯೇಸು ತೋರಿಸಿದ ಪ್ರೀತಿಯ ಬಗ್ಗೆ ಯೋಚಿಸುವಾಗ ನಿಮಗೆ ಹೇಗನಿಸುತ್ತೆ?
ಯೆಹೋವನಿಗೆ ಮತ್ತು ಯೇಸುವಿಗೆ ಇಷ್ಟವಾಗುವ ತರ ನಡೆದರೆ ಅವರು ತೋರಿಸಿದ ಪ್ರೀತಿಗೆ ನಾವು ಕೃತಜ್ಞತೆಯನ್ನ ತೋರಿಸಕ್ಕಾಗುತ್ತೆ. 2 ಕೊರಿಂಥ 5:15 ಮತ್ತು 1 ಯೋಹಾನ 4:11; 5:3 ಓದಿ. ಪ್ರತಿಯೊಂದು ವಚನವನ್ನ ಓದಿದ ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಈ ವಚನದಲ್ಲಿ ಇರೋ ತರ ನಾವು ಹೇಗೆ ನಮ್ಮ ಕೃತಜ್ಞತೆಯನ್ನ ತೋರಿಸಬಹುದು?
4. ಯೇಸುವಿನ ಮಾದರಿಯನ್ನ ಅನುಕರಿಸಿ
ಯೇಸುವಿನ ಮಾದರಿಯನ್ನ ಅನುಕರಿಸುವ ಮೂಲಕ ಕೂಡ ನಾವು ಕೃತಜ್ಞತೆಯನ್ನ ತೋರಿಸಬಹುದು. 1 ಪೇತ್ರ 2:21 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ನಮ್ಮ ಜೀವನದಲ್ಲಿ ಯೇಸುವನ್ನ ಹೇಗೆಲ್ಲಾ ಅನುಕರಿಸಬಹುದು?
5. ಕ್ರಿಸ್ತನ ಮರಣದ ಸ್ಮರಣೆಗೆ ಹಾಜರಾಗಿ
‘ಒಡೆಯನ ರಾತ್ರಿ ಊಟವನ್ನ’ ಮೊದಲ ಸಲ ಶುರುಮಾಡಿದ ದಿನ ಏನಾಯ್ತು ಅಂತ ನೋಡಿ, ಲೂಕ 22:14, 19, 20 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಆ ದಿನ ಸಂಜೆ ಯೇಸು ಏನು ಮಾಡಿದನು?
ರೊಟ್ಟಿ ಮತ್ತು ದ್ರಾಕ್ಷಾಮದ್ಯ ಏನನ್ನ ಸೂಚಿಸುತ್ತೆ?—ವಚನ 19 ಮತ್ತು 20 ನೋಡಿ.
ತನ್ನ ಶಿಷ್ಯರು ಪ್ರತಿ ವರ್ಷ ತನ್ನ ಮರಣದ ದಿನವನ್ನ ನೆನಪಿಸಿಕೊಳ್ಳಬೇಕು ಅಂತ ಯೇಸು ಬಯಸಿದನು. ಅದಕ್ಕೇ ‘ಒಡೆಯನ ರಾತ್ರಿ ಊಟವನ್ನ’ ತಾನು ಮಾಡಿದ ರೀತಿಯಲ್ಲಿ ಶಿಷ್ಯರೂ ಮಾಡಬೇಕು ಅಂತ ಹೇಳಿದನು. ಯೇಸು ಹೇಳಿದ ತರಾನೇ ಯೆಹೋವನ ಸಾಕ್ಷಿಗಳು ಪ್ರತಿ ವರ್ಷ ಆತನ ಮರಣವನ್ನ ನೆನಪಿಸಿಕೊಳ್ಳೋಕೆ ಸೇರಿ ಬರುತ್ತಾರೆ. ಈ ವಿಶೇಷ ಕೂಟದ ಬಗ್ಗೆ ತಿಳಿಯಲು ವಿಡಿಯೋ ನೋಡಿ ನಂತರ ಪ್ರಶ್ನೆಯನ್ನ ಚರ್ಚಿಸಿ.
ಯೇಸುವಿನ ಮರಣದ ಸ್ಮರಣೆಯಲ್ಲಿ ಏನೆಲ್ಲಾ ನಡೆಯುತ್ತೆ?
ಸ್ಮರಣೆಯ ರೊಟ್ಟಿ ಮತ್ತು ದ್ರಾಕ್ಷಾಮದ್ಯ. ರೊಟ್ಟಿ: ಯೇಸುವಿನ ಪರಿಪೂರ್ಣ ದೇಹವನ್ನ ಸೂಚಿಸುತ್ತೆ. ದ್ರಾಕ್ಷಾಮದ್ಯ: ಯೇಸುವಿನ ರಕ್ತವನ್ನ ಸೂಚಿಸುತ್ತೆ
ಕೆಲವರು ಹೀಗಂತಾರೆ: “ದೇವರ ಮೇಲೆ ನಂಬಿಕೆಯಿಟ್ಟರೆ ಸಾಕು, ಎಲ್ಲಾ ಒಳ್ಳೇದಾಗುತ್ತೆ.”
ಯೋಹಾನ 3:16 ಮತ್ತು ಯಾಕೋಬ 2:17 ವಚನಗಳಲ್ಲಿ ಹೇಳುವ ತರ ಬರೀ ನಂಬಿಕೆ ಇಟ್ಟರೆ ಮಾತ್ರ ಸಾಕಾಗಲ್ಲ ಅಂತ ಹೇಗೆ ಹೇಳುತ್ತೀರಾ?
ನಾವೇನು ಕಲಿತ್ವಿ
ಯೇಸುವಿನ ಮೇಲೆ ನಂಬಿಕೆಯಿಟ್ಟರೆ ಮತ್ತು ಸ್ಮರಣೆಗೆ ಹಾಜರಾದ್ರೆ ನಾವು ಆತನಿಗೆ ಕೃತಜ್ಞತೆ ತೋರಿಸ್ತೇವೆ.
ನೆನಪಿದೆಯಾ
ಯೇಸುವಿನ ಮೇಲೆ ನಂಬಿಕೆ ಇಡೋದು ಅಂದ್ರೆ ಏನು?
ಯೆಹೋವನು ಮತ್ತು ಯೇಸು ತೋರಿಸಿದ ಪ್ರೀತಿಗೆ ನೀವು ಹೇಗೆ ಕೃತಜ್ಞತೆ ತೋರಿಸ್ತೀರಾ?
ಕ್ರಿಸ್ತನ ಮರಣದ ಸ್ಮರಣೆಗೆ ಹಾಜರಾಗೋದು ಯಾಕೆ ತುಂಬ ಪ್ರಾಮುಖ್ಯ?
ಇದನ್ನೂ ನೋಡಿ
ಯೇಸು ಜೀವ ಕೊಟ್ಟಿದ್ದರ ಬಗ್ಗೆ ಕಲಿಯೋದ್ರಿಂದ ನಮಗೆ ಏನು ಮಾಡೋಕೆ ಪ್ರೋತ್ಸಾಹ ಸಿಗುತ್ತೆ?
ನಂಬಿಕೆಯ ಬಗ್ಗೆ ಇನ್ನಷ್ಟು ತಿಳಿಯಿರಿ ಮತ್ತು ಅದನ್ನ ಹೇಗೆ ತೋರಿಸಬಹುದು ಅಂತ ಕಲಿಯಿರಿ.
“ಯೆಹೋವನ ವಾಗ್ದಾನಗಳಲ್ಲಿ ನಂಬಿಕೆ ಇಡಿ” (ಕಾವಲಿನಬುರುಜು, ಅಕ್ಟೋಬರ್ 2016)
ಕ್ರಿಸ್ತನು ಮಾಡಿದ ಪ್ರಾಣ ತ್ಯಾಗದ ಬಗ್ಗೆ ಕಲಿತ ಒಬ್ಬ ಸ್ತ್ರೀಗೆ ಹೇಗೆಲ್ಲಾ ಪ್ರಯೋಜನ ಸಿಕ್ತು ಅಂತ ನೋಡಲು “ನಾನೀಗ ಖುಷಿಯಾಗಿದ್ದೀನಿ, ಒಳ್ಳೇ ಮನಸ್ಸಾಕ್ಷಿನೂ ಇದೆ” ಅನ್ನೋ ಜೀವನ ಕಥೆ ಓದಿ.
ಸ್ಮರಣೆಯಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನ ಯಾಕೆ ಕೆಲವರು ಮಾತ್ರ ತೆಗೆದುಕೊಳ್ಳುತ್ತಾರೆ ಅಂತ ತಿಳಿದುಕೊಳ್ಳಿ.
“ಯೇಸುವಿನ ಮರಣದ ಸ್ಮರಣೆಯನ್ನ ಯೆಹೋವನ ಸಾಕ್ಷಿಗಳು ಯಾಕೆ ಬೇರೆ ತರಾನೇ ಮಾಡ್ತಾರೆ?” (jw.org ಲೇಖನ)