ಅಧ್ಯಾಯ 27
ದೇವರ ರಾಜ್ಯವು ಜನಿಸುತ್ತದೆ!
ದರ್ಶನ 7—ಪ್ರಕಟನೆ 12:1-17
ವಿಷಯ: ಪರಲೋಕದ ಸ್ತ್ರೀಯು ಜನನವನ್ನೀಯುತ್ತಾಳೆ, ಮೀಕಾಯೇಲನು ಸೈತಾನನೊಂದಿಗೆ ಯುದ್ಧಮಾಡುತ್ತಾನೆ ಮತ್ತು ಅವನನ್ನು ಭೂಮಿಗೆ ದೊಬ್ಬುತ್ತಾನೆ
ನೆರವೇರಿಕೆಯ ಸಮಯ: 1914 ರಲ್ಲಿ ಕ್ರಿಸ್ತ ಯೇಸುವು ಸಿಂಹಾಸನಾಸೀನನಾದಂದಿನಿಂದ ಮಹಾ ಸಂಕಟದ ತನಕ
1. ಪ್ರಕಟನೆ 12 ರಿಂದ 14 ನೆಯ ಅಧ್ಯಾಯಗಳ ತನಕ ವರ್ಣಿಸಲ್ಪಟ್ಟ ಸೂಚನೆಗಳ ತಿಳಿವಳಿಕೆಯು ನಮಗೆ ಹೇಗೆ ಸಹಾಯಮಾಡಲಿದೆ?
ದೇವರ ಪವಿತ್ರವಾದ ರಹಸ್ಯವು ಬಿಚ್ಚಲ್ಪಟ್ಟಿದೆ. (ಪ್ರಕಟನೆ 10:7) ಯೆಹೋವನ ರಾಜ್ಯವು ಅವನ ಮೆಸ್ಸೀಯನ ಮೂಲಕ ಈಗ ಒಂದು ಚಲನಾತ್ಮಕ ವಾಸ್ತವಿಕತೆಯಾಗಿದೆ. ಅದು ಆಳುತ್ತದೆ! ಅದರ ಹಾಜರಿರುವಿಕೆಯು ಸೈತಾನನ ಮತ್ತು ಅವನ ಸಂತತಿಗೆ ನಾಶನವನ್ನು ಮತ್ತು ದೇವರ ಸ್ವರ್ಗೀಯ ಸಂಸ್ಥೆಯ ಸಂತಾನಕ್ಕೆ ಮಹಿಮಾಭರಿತ ವಿಜಯವನ್ನು ಅರ್ಥೈಸುತ್ತದೆ. ಆದಾಗ್ಯೂ, ಏಳನೆಯ ದೇವದೂತನು ತನ್ನ ತುತೂರಿ ಊದುವಿಕೆಯನ್ನು ಕೊನೆಗೊಳಿಸಿಲ್ಲ, ಯಾಕಂದರೆ ಅವನಿಗೆ ಮೂರನೆಯ ವಿಪತ್ತಿನ ಕುರಿತು ನಮಗೆ ಬಹಳಷ್ಟನ್ನು ಪ್ರಕಟಿಸಲು ಇದೆ. (ಪ್ರಕಟನೆ 11:14) ಪ್ರಕಟನೆ 12 ರಿಂದ 14 ನೆಯ ಅಧ್ಯಾಯಗಳಲ್ಲಿ ವರ್ಣಿಸಲಾದ ಸೂಚನೆಗಳು ಆ ವಿಪತ್ತಿನಲ್ಲಿ ಒಳಗೂಡಿರುವ ಮತ್ತು ದೇವರ ಪವಿತ್ರ ರಹಸ್ಯವನ್ನು ಮುಕ್ತಾಯಕ್ಕೆ ತರುವುದರಲ್ಲಿ ಒಳಗೂಡಿರುವ ಎಲ್ಲದರ ಕುರಿತಾದ ನಮ್ಮ ಗಣ್ಯತೆಯನ್ನು ವಿಕಸಿಸಲು ನಮಗೆ ಸಹಾಯ ಮಾಡುವುವು.
2. (ಎ) ಯೋಹಾನನು ಯಾವ ಒಂದು ಮಹಾ ಸೂಚನೆಯನ್ನು ನೋಡುತ್ತಾನೆ? (ಬಿ) ಮಹಾ ಸೂಚನೆಯ ಅರ್ಥವು ಯಾವಾಗ ಪ್ರಕಟಿಸಲ್ಪಟ್ಟಿತು?
2 ಯೋಹಾನನು ಈಗ ಒಂದು ಮಹಾ ಸೂಚನೆಯನ್ನು—ದೇವರ ಜನರಿಗೆ ಅತಿ ಪ್ರಮುಖ ಆಸಕ್ತಿಯ ಒಂದು ವಿಷಯವನ್ನು—ಕಾಣುತ್ತಾನೆ. ಅದು ಬೆರಗುಗೊಳಿಸುವ ಒಂದು ಪ್ರವಾದನಾ ದರ್ಶನವನ್ನು ಪ್ರಸ್ತಾಪಿಸುತ್ತದೆ. ಇದರ ಅರ್ಥವು ಮೊದಲು ಮಾರ್ಚ್ 1, 1925ರ ದ ವಾಚ್ಟವರ್ ಸಂಚಿಕೆಯಲ್ಲಿ “ಜನಾಂಗದ ಜನನ” ಎಂಬ ನಾಮಾಂಕಿತ ಲೇಖನವೊಂದರಲ್ಲಿ, ತದನಂತರ ಪುನಃ ಒಮ್ಮೆ 1926 ರಲ್ಲಿ ಡಿಲಿವರನ್ಸ್ ಪುಸ್ತಕದಲ್ಲಿ ಪ್ರಕಾಶಿಸಲ್ಪಟ್ಟಿತು. ಬೈಬಲ್ ತಿಳಿವಳಿಕೆಯ ಈ ಉಜ್ವಲವಾದ ಹೊಳಪು ಯೆಹೋವನ ಕಾರ್ಯದ ಅಭಿವೃದ್ಧಿಯಲ್ಲಿ ಒಂದು ಐತಿಹಾಸಿಕ ಸೂಚಕ ಆಯಿತು. ಆದುದರಿಂದ ಅದು ತೆರೆಯಲ್ಪಡಲು ಆರಂಭಿಸುವಾಗ, ಯೋಹಾನನು ರೂಪಕವನ್ನು ವರ್ಣಿಸಲಿ: “ಮತ್ತು ಪರಲೋಕದಲ್ಲಿ ಒಂದು ಮಹಾ ಸೂಚನೆ ಕಾಣಿಸಿತು, ಒಬ್ಬ ಸ್ತ್ರೀಯು ಸೂರ್ಯನನ್ನು ಧರಿಸಿಕೊಂಡಿದ್ದಳು, ಮತ್ತು ಆಕೆಯ ಕಾಲುಗಳ ಕೆಳಗೆ ಚಂದ್ರನಿದ್ದನು, ಮತ್ತು ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳುಳ್ಳ ಒಂದು ಕಿರೀಟವಿತ್ತು, ಮತ್ತು ಆಕೆಯು ಗರ್ಭಿಣಿಯಾಗಿದ್ದಳು. ಮತ್ತು ಅವಳು ವೇದನೆಯಿಂದ ಮತ್ತು ಪ್ರಸವಿಸುವ ಸಂಕಟದಿಂದ ಗಟ್ಟಿಯಾಗಿ ಕೂಗುತ್ತಾಳೆ.”—ಪ್ರಕಟನೆ 12:1, 2, NW.
3. ಪರಲೋಕದಲ್ಲಿ ಕಾಣಲಾದ ಸ್ತ್ರೀಯ ಗುರುತು ಏನು?
3 ಮೊದಲನೆಯ ಬಾರಿ, ಯೋಹಾನನು ಪರಲೋಕದಲ್ಲಿ ಒಬ್ಬ ಸ್ತ್ರೀಯನ್ನು ಕಾಣುತ್ತಾನೆ. ಖಂಡಿತವಾಗಿಯೂ ಅವಳು ಒಬ್ಬ ಅಕ್ಷರಾರ್ಥ ಸ್ತ್ರೀಯಲ್ಲ. ಬದಲಾಗಿ, ಅವಳು ಒಂದು ಸೂಚನೆ, ಒಂದು ಸಂಕೇತವಾಗಿದ್ದಳು. (ಪ್ರಕಟನೆ 1:1) ಅವಳು ಏನನ್ನು ಸೂಚಿಸುತ್ತಾಳೆ? ದೇವಪ್ರೇರಿತ ಪ್ರವಾದನೆಗಳಲ್ಲಿ, ಸ್ತ್ರೀಯರು ಕೆಲವೊಮ್ಮೆ ಪ್ರಮುಖ ವ್ಯಕ್ತಿಗಳನ್ನು “ವಿವಾಹವಾದ” ಸಂಸ್ಥೆಗಳನ್ನು ಪ್ರತಿನಿಧಿಸುತ್ತಾರೆ. ಹೀಬ್ರು ಶಾಸ್ತ್ರಗ್ರಂಥಗಳಲ್ಲಿ, ಇಸ್ರಾಯೇಲನ್ನು ಯೆಹೋವ ದೇವರ ಪತ್ನಿಯೋಪಾದಿ ಮಾತಾಡಲಾಗಿತ್ತು. (ಯೆರೆಮೀಯ 3:14) ಗ್ರೀಕ್ ಶಾಸ್ತ್ರಗ್ರಂಥಗಳಲ್ಲಿ ಅಭಿಷಿಕ್ತ ಕ್ರೈಸ್ತರ ಸಭೆಯನ್ನು ಕ್ರಿಸ್ತನ ಮದಲಗಿತ್ತಿಯಾಗಿ ಮಾತಾಡಲಾಗುತ್ತದೆ. (ಪ್ರಕಟನೆ 21:9-14) ಇಲ್ಲಿ ಸಹ ಯೋಹಾನನು ಕಾಣುವ ಸ್ತ್ರೀಯು ಯಾರೋ ಒಬ್ಬನನ್ನು ಮದುವೆಯಾಗಿದ್ದಾಳೆ, ಮತ್ತು ಅವಳು ಮಗುವನ್ನು ಹೆರುವುದರಲ್ಲಿದ್ದಾಳೆ. ಅವಳ ಗಂಡನು ಯಾರು? ಒಳ್ಳೆಯದು, ಅನಂತರ ಅವಳ ಮಗುವು “ದೇವರ ಬಳಿಗೂ ಆತನ ಸಿಂಹಾಸನದ ಬಳಿಗೂ ಎತ್ತಲ್ಪಟ್ಟಿತು.” (ಪ್ರಕಟನೆ 12:5) ಹೀಗೆ ಯೆಹೋವನು ಆ ಮಗುವನ್ನು ತನ್ನದೇ ಎಂದು ಹೇಳುತ್ತಾನೆ. ಆದಕಾರಣ, ಯೋಹಾನನು ಕಾಣುವ ಸ್ತ್ರೀಯು ಯೆಹೋವನ ಸಾಂಕೇತಿಕ ಪತ್ನಿಯಾಗಿರಬೇಕು.
4. ದೇವರ ಸಾಂಕೇತಿಕ ಪತ್ನಿಯ ಮಕ್ಕಳು ಯಾರು, ಮತ್ತು ಯೋಹಾನನು ನೋಡಿದ ಸ್ತ್ರೀಯನ್ನು ಅಪೊಸ್ತಲ ಪೌಲನು ಏನೆಂದು ಕರೆಯುತ್ತಾನೆ?
4 ಸುಮಾರು ಎಂಟು ಶತಮಾನಗಳ ಮೊದಲು, ಯೆಹೋವನು ಈ ಸಾಂಕೇತಿಕ ಸ್ತ್ರೀಯನ್ನು ಸಂಬೋಧಿಸುತ್ತಾ, ಹೇಳಿದ್ದು: “ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು.” (ಯೆಶಾಯ 54:5, 13) ಯೇಸು ಈ ಪ್ರವಾದನೆಯನ್ನು ಉಲ್ಲೇಖಿಸಿದನು ಮತ್ತು ಅನಂತರ ಅಭಿಷಿಕ್ತ ಕ್ರೈಸ್ತರ ಸಭೆಯಾಗಿ ರೂಪುಗೊಂಡ ಅವನ ನಂಬಿಗಸ್ತ ಅನುಯಾಯಿಗಳು ಆ ಮಕ್ಕಳಾಗಿರುತ್ತಾರೆ ಎಂದು ತೋರಿಸಿದನು. (ಯೋಹಾನ 6:44, 45) ಆದುದರಿಂದ, ದೇವರ ಮಕ್ಕಳೋಪಾದಿ ಹೆಸರಿಸಲ್ಪಟ್ಟ ಈ ಸಭೆಯ ಸದಸ್ಯರು ಸಹ, ದೇವರ ಸಾಂಕೇತಿಕ ಹೆಂಡತಿಯ ಮಕ್ಕಳು ಆಗಿರುತ್ತಾರೆ. (ರೋಮಾಪುರ 8:14) ಅಪೊಸ್ತಲ ಪೌಲನು ಈ ಮಾತುಗಳನ್ನು ಹೇಳುವಾಗ, ಮಾಹಿತಿಯ ಕೊನೆಯ ಅಂಶವನ್ನು ಕೂಡಿಸುತ್ತಾನೆ: “ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ.” (ಗಲಾತ್ಯ 4:26) ಹಾಗಾದರೆ, ಯೋಹಾನನಿಂದ ಕಾಣಲ್ಪಟ್ಟ “ಸ್ತ್ರೀ”ಯು “ಮೇಲಣ ಯೆರೂಸಲೇಮ್” ಆಗಿದ್ದಾಳೆ.
5. ಯೆಹೋವನ ಸಾಂಕೇತಿಕ ಪತ್ನಿಯು 12 ನಕ್ಷತ್ರಗಳ ಕಿರೀಟವನ್ನು ಧರಿಸಿರುವುದರಿಂದ, ವಾಸ್ತವದಲ್ಲಿ ಮೇಲಣ ಯೆರೂಸಲೇಮ್ ಅಂದರೆ ಏನು?
5 ಹಾಗಾದರೆ, ಮೇಲಣ ಯೆರೂಸಲೇಮ್ ನಿಖರವಾಗಿ ಏನಾಗಿದೆ? ಪೌಲನು ಅವಳ ಕುರಿತಾಗಿ “ಮೇಲಣ” ಎಂದು ಹೇಳಿದ್ದರಿಂದ, ಮತ್ತು ಯೋಹಾನನು ಅವಳನ್ನು ಪರಲೋಕದಲ್ಲಿ ಕಾಣುವುದರಿಂದ, ಅವಳು ಒಂದು ಐಹಿಕ ಪಟ್ಟಣವಲ್ಲ ಎಂಬುದು ಸ್ಪಷ್ಟ; ಇಲ್ಲವೆ “ಹೊಸ ಯೆರೂಸಲೇಮ್” ನಂತೆಯೂ ಅಲ್ಲ ಯಾಕಂದರೆ ಆ ಸಂಸ್ಥೆಯು ಕ್ರಿಸ್ತನ ಮದಲಗಿತ್ತಿಯಾಗಿದ್ದಾಳೆಯೇ ಹೊರತು ಯೆಹೋವನ ಪತ್ನಿಯಾಗಿರುವುದಿಲ್ಲ. (ಪ್ರಕಟನೆ 21:2) ಅವಳು 12 ನಕ್ಷತ್ರಗಳನ್ನು ಧರಿಸಿರುವುದನ್ನು ಗಮನಿಸಿರಿ. ಒಂದು ಸಂಸ್ಥೆಯ ಉಪಕ್ರಮದಲ್ಲಿ ಅಂಕೆ 12 ಸಂಪೂರ್ಣತೆಯೊಂದಿಗೆ ಜತೆಗೂಡಿರುತ್ತದೆ.a ಆದಕಾರಣ, ಭೂಮಿಯ ಮೇಲೆ ಪುರಾತನ ಯೆರೂಸಲೇಮ್ ಇದ್ದಂತೆ, ಅವಳು ಪರಲೋಕದಲ್ಲಿ ಒಂದು ಸಂಸ್ಥೆಯ ಏರ್ಪಾಡು ಆಗಿರುವಳು ಎಂದು ಈ 12 ನಕ್ಷತ್ರಗಳು ಸೂಚಿಸುತ್ತವೆಂದು ತೋರಿಬರುತ್ತದೆ. ಮೇಲಣ ಯೆರೂಸಲೇಮ್ ಯೆಹೋವನನ್ನು ಸೇವಿಸುವುದರಲ್ಲಿ ಮತ್ತು ಸಂತಾನವನ್ನು ಉತ್ಪಾದಿಸುವುದರಲ್ಲಿ ಅವನ ಪತ್ನಿಯೋಪಾದಿ ಕಾರ್ಯವೆಸಗುವ ಆತ್ಮ ಜೀವಿಗಳ ಯೆಹೋವನ ವಿಶ್ವ ಸಂಸ್ಥೆಯಾಗಿದೆ.
6. (ಎ) ಯೋಹಾನನು ನೋಡಿರುವ ಸೂರ್ಯನನ್ನು ಧರಿಸಿಕೊಂಡಿದ್ದ, ಚಂದ್ರನು ಆಕೆಯ ಕಾಲುಗಳ ಕೆಳಗೆ ಇದ್ದ ಮತ್ತು ನಕ್ಷತ್ರಗಳ ಕಿರೀಟವಿದ್ದ ಸ್ತ್ರೀಯ ವಾಸ್ತವಾಂಶದಿಂದ ಏನು ಸೂಚಿಸಲ್ಪಡುತ್ತದೆ? (ಬಿ) ಗರ್ಭಿಣಿ ಸ್ತ್ರೀಯ ಪ್ರಸವವೇದನೆಯಿಂದ ಏನು ಸಂಕೇತಿಸಲ್ಪಡುತ್ತದೆ?
6 ಈ ಸ್ತ್ರೀಯು ಸೂರ್ಯನನ್ನು ಧರಿಸಿಕೊಂಡಿದ್ದು, ಆಕೆಯ ಕಾಲುಗಳ ಕೆಳಗೆ ಚಂದ್ರನಿರುವುದನ್ನು ಯೋಹಾನನು ಕಾಣುತ್ತಾನೆ. ಅವಳ ನಕ್ಷತ್ರಗಳ ಕಿರೀಟವನ್ನು ನಾವು ಕೂಡಿಸುವಾಗ, ಅವಳು ಪೂರ್ಣವಾಗಿ ಸ್ವರ್ಗೀಯ ಬೆಳಕುಗಳಿಂದ ಸುತ್ತುವರಿಯಲ್ಪಟ್ಟಿದ್ದಾಳೆ. ದೇವರ ಮೆಚ್ಚಿಕೆಯು ಅವಳ ಮೇಲೆ ಹಗಲು, ರಾತ್ರಿ ಪ್ರಕಾಶಿಸುತ್ತದೆ. ಯೆಹೋವನ ಭವ್ಯವಾದ ಸ್ವರ್ಗೀಯ ಸಂಸ್ಥೆಯ ಎಂಥ ಒಂದು ತಕ್ಕ ಸಂಕೇತ! ಅವಳು ಗರ್ಭಿಣಿಯೂ ಆಗಿದ್ದಾಳೆ, ಪ್ರಸವ ವೇದನೆಯನ್ನು ಸಹಿಸಿಕೊಳ್ಳುತ್ತಾಳೆ. ದೈವಿಕ ಸಹಾಯಕ್ಕಾಗಿ ಅವಳ ಮೊರೆಯು, ಹೆರಲು ಅವಳ ಸಮಯವು ಬಂದದೆ ಎಂದು ತೋರಿಸುತ್ತದೆ. ಬೈಬಲಿನಲ್ಲಿ ಪ್ರಸವವೇದನೆಯು ಆಗಾಗ್ಗೆ ಒಂದು ಪ್ರಾಮುಖ್ಯವಾದ ಫಲಿತಾಂಶವನ್ನು ಉತ್ಪಾದಿಸಲು ಜರೂರಿಯಾಗಿರುವ ಕಠಿಣ ಶ್ರಮವನ್ನು ಸಂಕೇತಿಸುತ್ತದೆ. (ಹೋಲಿಸಿರಿ ಕೀರ್ತನೆ 90:2; ಜ್ಞಾನೋಕ್ತಿ 25:23; ಯೆಶಾಯ 66:7, 8.) ಈ ಐತಿಹಾಸಿಕ ಜನನಕ್ಕಾಗಿ ಯೆಹೋವನ ಸ್ವರ್ಗೀಯ ಸಂಸ್ಥೆಯು ಸಿದ್ಧಗೊಂಡಂತೆ, ಈ ವಿಧದ ಪ್ರಸವ ವೇದನೆಗಳು ಅನುಭವಿಸಲ್ಪಟ್ಟವು ಎಂಬುದಕ್ಕೆ ಸಂದೇಹವಿಲ್ಲ.
ಒಂದು ಅಗ್ನಿ ವರ್ಣದ ಮಹಾ ಘಟಸರ್ಪ
7. ಪರಲೋಕದಲ್ಲಿ ಯೋಹಾನನು ಕಾಣುವ ಇನ್ನೊಂದು ಸೂಚನೆ ಏನು?
7 ಯೋಹಾನನು ಅನಂತರ ಏನನ್ನು ಅವಲೋಕಿಸುತ್ತಾನೆ? “ಮತ್ತು ಪರಲೋಕದಲ್ಲಿ ಮತ್ತೊಂದು ಸೂಚನೆ ಕಾಣಿಸಿತು, ಮತ್ತು ಇಗೋ! ಏಳು ತಲೆಗಳು ಮತ್ತು ಹತ್ತು ಕೊಂಬುಗಳು ಇರುವ ಒಂದು ಅಗ್ನಿವರ್ಣದ ಮಹಾ ಘಟಸರ್ಪ ಮತ್ತು ಅದರ ತಲೆಗಳ ಮೇಲೆ ಏಳು ಮುಕುಟಗಳು; ಮತ್ತು ಅದರ ಬಾಲವು ಆಕಾಶದ ನಕ್ಷತ್ರಗಳೊಳಗೆ ಮೂರರಲ್ಲೊಂದು ಭಾಗವನ್ನು ಎಳೆಯುತ್ತದೆ, ಮತ್ತು ಅದು ಅವುಗಳನ್ನು ಕೆಳಗೆ ಭೂಮಿಗೆ ಎಸೆಯಿತು. ಮತ್ತು ಹೆರಲಿದ್ದ ಆ ಸ್ತ್ರೀಯು ಮುಂದೆ, ಆಕೆ ಹೆತ್ತಾಗ ಆಕೆಯ ಮಗುವನ್ನು ನುಂಗಿಬಿಡಬಹುದೆಂಬ ಕಾರಣದಿಂದ ಆ ಘಟಸರ್ಪವು ನಿಂತುಕೊಂಡಿತ್ತು.”—ಪ್ರಕಟನೆ 12:3, 4, NW.
8. (ಎ) ಅಗ್ನಿವರ್ಣದ ಮಹಾ ಘಟಸರ್ಪನ ಗುರುತು ಏನು? (ಬಿ) ಘಟಸರ್ಪನಿಗೆ ಏಳು ತಲೆಗಳು, ಹತ್ತು ಕೊಂಬುಗಳು ಮತ್ತು ಪ್ರತಿಯೊಂದು ತಲೆಯ ಮೇಲೆ ಒಂದು ಮುಕುಟವಿರುವುದರಿಂದ ಏನು ಸೂಚಿಸಲ್ಪಡುತ್ತದೆ?
8 ಈ ಘಟಸರ್ಪವು “ಪುರಾತನ ಸರ್ಪ” ವಾದ ಸೈತಾನನೇ. (ಪ್ರಕಟನೆ 12:9; ಆದಿಕಾಂಡ 3:15) ಅವನೊಬ್ಬ ಭಯಂಕರ ನಾಶಕನು—ಏಳು ತಲೆಗಳ ಘಟಸರ್ಪನು ಯಾ ನುಂಗುವವನು, ತನ್ನ ಬೇಟೆಯನ್ನು ಪೂರ್ಣವಾಗಿ ಕಬಳಿಸಲು ಶಕ್ತನಾಗಿದ್ದಾನೆ. ಅವನು ಎಷ್ಟೊಂದು ವಿಚಿತ್ರವಾಗಿ ತೋರುತ್ತಾನೆ! ಪ್ರಕಟನೆ 13 ನೆಯ ಅಧ್ಯಾಯದಲ್ಲಿ ಶೀಘ್ರದಲ್ಲಿಯೇ ವರ್ಣಿಸಲ್ಪಡುವ ರಾಜಕೀಯ ಕಾಡು ಮೃಗದ ವಾಸ್ತುಶಿಲ್ಪಿ ಆತನಾಗಿದ್ದಾನೆ ಎಂದು ಆ ಏಳು ತಲೆಗಳು ಮತ್ತು ಹತ್ತು ಕೊಂಬುಗಳು ತೋರಿಸುತ್ತವೆ. ಈ ಮೃಗಕ್ಕೂ ಏಳು ತಲೆಗಳು ಮತ್ತು ಹತ್ತು ಕೊಂಬುಗಳು ಇವೆ. ಪ್ರತಿಯೊಂದು ತಲೆಯ—ಒಟ್ಟಿಗೆ ಏಳು—ಮೇಲೆ ಸೈತಾನನಿಗೆ ಮುಕುಟವಿದ್ದುದರಿಂದ, ಆ ಕಾಡು ಮೃಗದಲ್ಲಿ ಪ್ರತಿನಿಧಿಸಲ್ಪಟ್ಟ ಲೋಕ ಶಕ್ತಿಗಳು ಅವನ ಆಧಿಪತ್ಯದ ಕೆಳಗಿವೆ ಎಂಬ ವಿಷಯದಲ್ಲಿ ನಾವು ಖಾತ್ರಿಯಿಂದಿರಬಹುದು. (ಯೋಹಾನ 16:11) ಈ ಲೋಕದ ಮೇಲೆ ಅವನು ನಡಿಸಿರುವ ಅಧಿಕಾರದ ಪೂರ್ಣತೆಗೆ ಹತ್ತು ಕೊಂಬುಗಳು ಒಂದು ಉಚಿತವಾದ ಸಂಕೇತವಾಗಿವೆ.
9. ಘಟಸರ್ಪನ ಬಾಲವು “ಆಕಾಶದಲ್ಲಿರುವ ನಕ್ಷತ್ರಗಳೊಳಗೆ ಮೂರರಲ್ಲೊಂದು ಭಾಗವನ್ನು” ಎಳೆದು ಭೂಮಿಗೆ ಹಾಕುವುದರಿಂದ ಏನು ಸೂಚಿತವಾಗಿದೆ?
9 ಘಟಸರ್ಪನಿಗೆ ಆತ್ಮ ಕ್ಷೇತ್ರದಲ್ಲೂ ಅಧಿಕಾರವಿದೆ. ತನ್ನ ಬಾಲದಿಂದ, ಅವನು “ಆಕಾಶದಲ್ಲಿರುವ ನಕ್ಷತ್ರಗಳೊಳಗೆ ಮೂರರಲ್ಲೊಂದು ಭಾಗವನ್ನು ಎಳೆಯುತ್ತಾನೆ.” ನಕ್ಷತ್ರಗಳು ದೇವದೂತರನ್ನು ಪ್ರತಿನಿಧಿಸಬಲ್ಲವು. (ಯೋಬ 38:7) “ಮೂರರಲ್ಲೊಂದು ಭಾಗ”ದ ಉಲ್ಲೇಖವು ಗಮನಾರ್ಹ ಸಂಖ್ಯೆಯಲ್ಲಿ ದೇವದೂತರು ಸೈತಾನನಿಂದ ತಪ್ಪು ದಾರಿಗೆ ಎಳೆಯಲ್ಪಟ್ಟರು ಎಂಬುದನ್ನು ಒತ್ತಾಗಿ ಹೇಳುತ್ತದೆ. ಒಮ್ಮೆ ಅವರು ಅವನ ಹತೋಟಿಯೊಳಗೆ ಬಂದನಂತರ, ಅಲ್ಲಿಂದ ಪಾರಾಗುವುದಿಲ್ಲ. ಅವರು ದೇವರ ಪವಿತ್ರ ಸಂಸ್ಥೆಯೊಳಗೆ ಪುನಃ ಹಿಂದಿರುಗಲು ಸಾಧ್ಯವಿಲ್ಲ. ತಮ್ಮ ಅರಸನಾದ ಯಾ ಅಧಿಪತಿಯಾದ ಸೈತಾನನಿಂದ ಎಳೆಯಲ್ಪಟ್ಟವರೋ ಎಂಬಂತೆ ಅವರು ದೆವ್ವಗಳಾದರು. (ಮತ್ತಾಯ 12:24) ಸೈತಾನನು ಅವರನ್ನು ಕೂಡ ಭೂಮಿಗೆ ದೊಬ್ಬಿಬಿಡುತ್ತಾನೆ. ಇದು ಜಲಪ್ರಲಯಕ್ಕೆ ಮುಂಚಿನ ನೋಹನ ದಿನಗಳಿಗೆ ಸೂಚಿತವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ, ಆಗ ಅವಿಧೇಯ ದೇವ ಪುತ್ರರು ಭೂಮಿಗೆ ಬರುವಂತೆ ಮತ್ತು ಮಾನವರ ಪುತ್ರಿಯರೊಂದಿಗೆ ಕೂಡುಬಾಳುವೆ ನಡಿಸುವಂತೆ ಸೈತಾನನು ಪ್ರೇರಿಸಿದನು. ದಂಡನೆಯೋಪಾದಿ, ‘ಪಾಪಮಾಡಿದ ದೇವದೂತರು’ ಟಾರ್ಟರಸ್ ಎಂದು ಕರೆಯಲ್ಪಡುವ ಸೆರೆಮನೆಯಂಥ ಸ್ಥಿತಿಯೊಳಗೆ ದೇವರಿಂದ ದೊಬ್ಬಲ್ಪಟ್ಟಿದ್ದಾರೆ.—ಆದಿಕಾಂಡ 6:4; 2 ಪೇತ್ರ 2:4; ಯೂದ 6.
10. ವಿರೋಧತ್ವದ ಯಾವ ಸಂಸ್ಥೆಗಳು ಗೋಚರಕ್ಕೆ ಬರುತ್ತವೆ, ಮತ್ತು ಸ್ತ್ರೀಯು ಮಗುವನ್ನು ಹೆರುವಾಗ, ಘಟಸರ್ಪನು ಯಾಕೆ ಅದನ್ನು ನುಂಗಲು ಹವಣಿಸುತ್ತಾನೆ?
10 ಹೀಗೆ, ವಿರೋಧಿಸುತ್ತಿರುವ ಎರಡು ಸಂಸ್ಥೆಗಳು ನೋಟಕ್ಕೆ ಸ್ಪಷ್ಟವಾಗಿಗಿ ತೋರಿಬಂದವು—ಸ್ತ್ರೀಯಿಂದ ಚಿತ್ರಿತವಾದ ಯೆಹೋವನ ಸ್ವರ್ಗೀಯ ಸಂಸ್ಥೆ ಮತ್ತು ದೇವರ ಸಾರ್ವಭೌಮತೆಯನ್ನು ಪಣಕ್ಕೊಡ್ಡುವ ಸೈತಾನನ ಪೈಶಾಚಿಕ ಸಂಸ್ಥೆ. ಸಾರ್ವಭೌಮತೆಯ ಮಹಾ ವಿವಾದಾಂಶವು ತೀರ್ಮಾನಿಸಲ್ಪಡತಕ್ಕದ್ದು. ಆದರೆ ಹೇಗೆ? ದೆವ್ವಗಳನ್ನು ಇನ್ನೂ ತನ್ನ ಬಳಿಗೆ ಎಳೆಯುತ್ತಿರುವ ಸೈತಾನನು, ತನ್ನ ಸಂಭಾವ್ಯ ಆಹುತಿಯ ಮೇಲೆ ಕಣ್ಣಿಟ್ಟಿರುವ ಕ್ರೂರವಾದ ಮೃಗದಂತಿದ್ದಾನೆ. ಸ್ತ್ರೀಯು ಪ್ರಸವಿಸುವುದನ್ನು ಅವನು ಕಾದಿರುತ್ತಾನೆ. ಆ ನಿರೀಕ್ಷಿತ ಕೂಸನ್ನು ನುಂಗಲು ಅವನು ಬಯಸುತ್ತಾನೆ, ಯಾಕಂದರೆ ತನ್ನ ಮುಂದರಿದ ಅಸ್ತಿತ್ವಕ್ಕೆ ಮತ್ತು ತನ್ನ ಆಧಿಪತ್ಯ ನಡಿಸುವ ಲೋಕದ ಮೇಲೆ ಕೇಡು ಸೂಚಕ ಬೆದರಿಕೆಯನ್ನು ಅದು ಒಡ್ಡುತ್ತದೆ ಎಂದು ಅವನಿಗೆ ತಿಳಿದದೆ.—ಯೋಹಾನ 14:30.
ಒಬ್ಬ ಪುತ್ರನು, ಒಂದು ಗಂಡು ಮಗು
11. ಸ್ತ್ರೀಯ ಕೂಸಿನ ಜನನವನ್ನು ಯೋಹಾನನು ಹೇಗೆ ವಿವರಿಸುತ್ತಾನೆ, ಮತ್ತು ಮಗುವನ್ನು “ಒಬ್ಬ ಪುತ್ರನು, ಒಂದು ಗಂಡು, (NW)” ಎಂದು ಯಾಕೆ ಕರೆಯಲಾಗಿದೆ?
11 ಜನಾಂಗಗಳು ದೇವರ ನಡುಪ್ರವೇಶವಿಲ್ಲದೆ ಆಳಿಕ್ವೆ ನಡಿಸುವ ನೇಮಿತ ಸಮಯವು 1914 ರಲ್ಲಿ ಸಮಾಪ್ತಿಗೆ ಬಂತು. (ಲೂಕ 21:24) ಅನಂತರ ತಕ್ಕ ಸಮಯದಲ್ಲಿ, ಸ್ತ್ರೀಯು ತನ್ನ ಕೂಸನ್ನು ಹೆತ್ತಳು: “ಮತ್ತು ಆಕೆ ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಪಾಲನೆಮಾಡಲಿದ್ದ ಒಬ್ಬ ಪುತ್ರನನ್ನು, ಒಂದು ಗಂಡನ್ನು ಹೆತ್ತಳು. ಮತ್ತು ಅವಳ ಕೂಸು ಫಕ್ಕನೆ ದೇವರ ಬಳಿಗೆ ಮತ್ತು ಆತನ ಸಿಂಹಾಸನದ ಬಳಿಗೆ ಎತ್ತಲ್ಪಟ್ಟಿತು. ಮತ್ತು ಆ ಸ್ತ್ರೀಯು ಅರಣ್ಯಕ್ಕೆ ಓಡಿಹೋದಳು, ಅಲ್ಲಿ ಆಕೆಯನ್ನು ಸಾವಿರದ ಇನ್ನೂರ ಆರುವತ್ತು ದಿನಗಳ ವರೆಗೆ ಅವರು ಪೋಷಿಸಬೇಕೆಂದು ದೇವರು ಸಿದ್ಧಮಾಡಿದ್ದ ಸ್ಥಳವೊಂದು ಅವಳಿಗಿದೆ.” (ಪ್ರಕಟನೆ 12:5, 6, NW) ಆ ಕೂಸು “ಒಂದು ಪುತ್ರನು, ಒಂದು ಗಂಡು.” ಯೋಹಾನನು ಇಲ್ಲಿ ಈ ಇಮ್ಮಡಿ ಪದವಿನ್ಯಾಸಗಳನ್ನು ಯಾಕೆ ಉಪಯೋಗಿಸುತ್ತಾನೆ? ಜನಾಂಗಗಳನ್ನು ಯಥೋಚಿತ ಶಕ್ತಿಯಿಂದ ಆಳಲು ಕೂಸಿಗೆ ಇರುವ ಯೋಗ್ಯತೆಯನ್ನು, ಅವನ ಸಾಮರ್ಥ್ಯವನ್ನು ತೋರಿಸಲು ಅವನು ಇದನ್ನು ಮಾಡುತ್ತಾನೆ. ಈ ಜನನದ ಸಂದರ್ಭವು ಎಷ್ಟು ಪರಿಣಾಮಕಾರಿಯಾಗಿದೆ, ಎಷ್ಟು ಸಂತೋಷಕರವಾಗಿದೆ ಎಂದು ಕೂಡ ಅದು ಒತ್ತಿ ಹೇಳುತ್ತದೆ! ದೇವರ ಪವಿತ್ರ ರಹಸ್ಯವನ್ನು ಒಂದು ಮುಕ್ತಾಯಕ್ಕೆ ತರುವುದರಲ್ಲಿ ಅದು ಒಂದು ಮುಖ್ಯ ಪಾತ್ರವನ್ನು ವಹಿಸುತ್ತದೆ. ಯಾಕೆ, ಈ ಗಂಡುಮಗುವು “ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ” ಆಳುತ್ತದೆ ಕೂಡ!
12. (ಎ) ಕೀರ್ತನೆಗಳಲ್ಲಿ, ಯೇಸುವಿನ ಕುರಿತು ಯೆಹೋವನು ಪ್ರವಾದನಾರೂಪವಾಗಿ ಏನನ್ನು ವಾಗ್ದಾನಿಸಿದ್ದನು? (ಬಿ) “ಕಬ್ಬಿಣದ ಕೋಲಿನಿಂದ ಜನಾಂಗಗಳನ್ನು ಆಳುವ” ಮಗನಿಗೆ ಸ್ತ್ರೀಯು ಜನನವಿತ್ತದ್ದು ಏನನ್ನು ಸಂಕೇತಿಸುತ್ತದೆ?
12 ಈಗ, ಆ ಪದವಿನ್ಯಾಸವು ಪರಿಚಿತವಾಗಿ ಧ್ವನಿಸುತ್ತದೋ? ಹೌದು, ಯೆಹೋವನು ಪ್ರವಾದನಾರೂಪದಲ್ಲಿ ಯೇಸುವಿನ ಕುರಿತು ವಾಗ್ದಾನಿಸಿದ್ದು: “ಕಬ್ಬಿಣದ ಗದೆಯಿಂದ ಅವರನ್ನು ನಾಶಮಾಡುವಿ; ಮಣ್ಣಿನ ಮಡಿಕೆಗಳನ್ನೋ ಎಂಬಂತೆ ಅವರನ್ನು ಒಡೆದುಹಾಕುವಿ.” (ಕೀರ್ತನೆ 2:9) ಅವನ ಕುರಿತಾಗಿ ಇದನ್ನು ಸಹ ಪ್ರವಾದಿಸಲಾಗಿತ್ತು: “ಯೆಹೋವನು ನಿನ್ನ ರಾಜ್ಯದಂಡದ ಆಳಿಕೆಯನ್ನು ಚೀಯೋನಿನ ಹೊರಗೂ ಹಬ್ಬಿಸುವನು; ನಿನ್ನ ವೈರಿಗಳ ಮಧ್ಯದಲ್ಲಿ ದೊರೆತನ ಮಾಡು.” (ಕೀರ್ತನೆ 110:2) ಆದಕಾರಣ, ಯೋಹಾನನಿಂದ ಕಾಣಲ್ಪಟ್ಟ ಜನನವು ಯೇಸು ಕ್ರಿಸ್ತನನ್ನು ನಿಕಟತೆಯಿಂದ ಒಳಗೂಡಿಸುತ್ತದೆ. ಅಲ್ಲ, ನಮ್ಮ ಸಾಮಾನ್ಯ ಶಕದ ಮೊದಲನೆಯ ಶತಕದಷ್ಟು ಹಿಂದಕ್ಕೆ ಕನ್ಯೆಯಲ್ಲಿ ಹುಟ್ಟಿದ ಯೇಸುವಿನ ಜನನ ಅದಾಗಿರುವುದಿಲ್ಲ; ಇಲ್ಲವೇ ಸಾ. ಶ. 33 ರಲ್ಲಿ ಆತ್ಮ ಜೀವಕ್ಕೆ ಯೇಸುವನ್ನು ಪುನಃ ಎಬ್ಬಿಸಲ್ಪಟ್ಟದ್ದನ್ನು ಕೂಡ ಅದು ಸೂಚಿಸುವುದಿಲ್ಲ. ಇನ್ನೂ ಹೆಚ್ಚಾಗಿ, ಅದು ಜನ್ಮಾಂತರವು ಕೂಡ ಅಲ್ಲ. ಬದಲಾಗಿ, ಇದು ಈಗ ರಾಜನಾಗಿ ಸಿಂಹಾಸನವೇರಿರುವ ಯೇಸು—ಆಗಲೇ ಸುಮಾರು 19 ಶತಮಾನಗಳಲ್ಲಿ ಸ್ವರ್ಗದಲ್ಲಿದ್ದನು—ಕೂಡಿರುವ, 1914 ರಲ್ಲಿ ವಾಸ್ತವವಾದ ದೇವರ ರಾಜ್ಯದ ಜನನವೇ ಆಗಿದೆ.—ಪ್ರಕಟನೆ 12:10.
13. ಗಂಡುಮಗುವು “ದೇವರ ಬಳಿಗೂ ಆತನ ಸಿಂಹಾಸನದ ಬಳಿಗೂ ಎತ್ತಲ್ಪಡುವುದು” ಏನನ್ನು ಸೂಚಿಸುತ್ತದೆ?
13 ತನ್ನ ಪತ್ನಿಯನ್ನು ಯಾ ಹೊಸತಾಗಿ ಜನಿಸಿದ ತನ್ನ ಪುತ್ರನನ್ನು ಸೈತಾನನು ನುಂಗುವಂತೆ ಯೆಹೋವನು ಎಂದಿಗೂ ಬಿಡಲಾರನು! ಜನನದಲ್ಲಿಯೇ, ಗಂಡುಮಗುವು “ದೇವರ ಬಳಿಗೆ ಮತ್ತು ಆತನ ಸಿಂಹಾಸನದ ಬಳಿಗೆ ಎತ್ತಲ್ಪಟ್ಟಿತು.” ಹೀಗೆ ಅವನು ಪೂರ್ಣವಾಗಿ, ಯಾರು ಹೊಸದಾಗಿ ಜನಿಸಿದ ರಾಜ್ಯದ, ತನ್ನ ಪವಿತ್ರ ನಾಮವನ್ನು ಪವಿತ್ರೀಕರಿಸುವ ಉಪಕರಣದ ಅತಿ ಪೂರ್ಣ ಜಾಗ್ರತೆ ವಹಿಸುತ್ತಾನೋ ಅಂತಹ ಯೆಹೋವನ ಸಂರಕ್ಷಣೆಯ ಕೆಳಗೆ ಪೂರ್ತಿಯಾಗಿ ಬರುತ್ತಾನೆ. ಅದೇ ಸಮಯದಲ್ಲಿ ಸ್ತ್ರೀಯು ಅರಣ್ಯದಲ್ಲಿ ಅವಳ ಸುರಕ್ಷೆಗಾಗಿ ದೇವರು ಸಿದ್ಧಮಾಡಿಟ್ಟಿರುವ ಒಂದು ಸ್ಥಳಕ್ಕೆ ಓಡಿಹೋಗುತ್ತಾಳೆ. ಅದರ ಕುರಿತು ಹೆಚ್ಚಿನ ವಿವರಣೆಯು ಅನಂತರ! ಸೈತಾನನ ವಿಷಯದಲ್ಲಾದರೋ, ಪರಲೋಕದಲ್ಲಿರುವ ರಾಜ್ಯಕ್ಕೆ ಮುಂದೆ ಎಂದಿಗೂ ಅವನಿಂದ ಯಾವುದೇ ಬೆದರಿಕೆಯೂ ಆಗದಂತೆ ಒಂದು ಬಹುಮುಖ್ಯವಾದ ಘಟನೆಗಾಗಿ ವೇದಿಕೆಯೊಂದು ಅಣಿಗೊಳಿಸಲ್ಪಟ್ಟಿರುತ್ತದೆ. ಆ ಘಟನೆಯು ಯಾವುದು?
ಪರಲೋಕದಲ್ಲಿ ಯುದ್ಧ!
14. (ಎ) ಯೋಹಾನನು ಹೇಳುವಂತೆ, ಯಾವ ಘಟನೆಯು ರಾಜ್ಯವನ್ನು ಇನ್ನೆಂದಿಗೂ ಬೆದರಿಸಲು ಅಸಾಧ್ಯವನ್ನಾಗಿ ಸೈತಾನನಿಗೆ ಮಾಡುವುದು? (ಬಿ) ಸೈತಾನನೂ, ಅವನ ದೆವ್ವಗಳೂ ಯಾವ ಸ್ಥಳಕ್ಕೆ ನಿರ್ಬಂಧಿಸಲ್ಪಟ್ಟಿದ್ದಾರೆ?
14 ಯೋಹಾನನು ನಮಗನ್ನುವುದು: “ಮತ್ತು ಪರಲೋಕದಲ್ಲಿ ಯುದ್ಧ ಆರಂಭವಾಯಿತು; ಮೀಕಾಯೇಲನು ಮತ್ತು ಅವನ ದೂತರು ಘಟಸರ್ಪದೊಂದಿಗೆ ಯುದ್ಧಮಾಡಿದರು, ಮತ್ತು ಘಟಸರ್ಪವು ಮತ್ತು ಅದರ ದೂತರೂ ಯುದ್ಧಮಾಡಿದರು ಆದರೆ ಅದು ಜಯಶಾಲಿಯಾಗಲಿಲ್ಲ, ಪರಲೋಕದಲ್ಲಿ ಅವರಿಗೆ ಸ್ಥಾನವೂ ಇನ್ನು ಮುಂದೆ ಇಲ್ಲದೆ ಹೋಯಿತು. ಹೀಗೆ ಇಡೀ ನಿವಾಸಿತ ಭೂಮಿಯನ್ನು ತಪ್ಪು ದಾರಿಗೆ ನಡಿಸುವ ಪಿಶಾಚನು ಮತ್ತು ಸೈತಾನನು ಎಂದು ಕರೆಯಲ್ಪಡುವ ಪುರಾತನ ಸರ್ಪವಾದ ಆ ಮಹಾ ಘಟಸರ್ಪನು ದೊಬ್ಬಲ್ಪಟ್ಟನು; ಅವನು ಕೆಳಗೆ ಭೂಮಿಗೆ ದೊಬ್ಬಲ್ಪಟ್ಟನು, ಮತ್ತು ಅವನ ದೂತರು ಅವನೊಂದಿಗೆ ದೊಬ್ಬಲ್ಪಟ್ಟರು.” (ಪ್ರಕಟನೆ 12:7-9, NW) ಆದುದರಿಂದ ದೇವರ ಪವಿತ್ರ ರಹಸ್ಯವನ್ನು ಮುಕ್ತಾಯಘಟ್ಟಕ್ಕೆ ತರುವುದರಲ್ಲಿ ಒಂದು ನಾಟಕೀಯ ಬೆಳವಣಿಗೆಯೋಪಾದಿ, ಸೈತಾನನು ಉಚ್ಚಾಟಿಸಲ್ಪಡುತ್ತಾನೆ, ಪರಲೋಕದಿಂದ ಹೊರದೊಬ್ಬಲ್ಪಡುತ್ತಾನೆ, ಮತ್ತು ಅವನೊಂದಿಗೆ ಅವನ ದೆವ್ವಗಳು ಭೂಮಿಗೆ ದೊಬ್ಬಲ್ಪಡುತ್ತವೆ. ಅದರ ದೇವರಾಗುವಷ್ಟರ ಮಟ್ಟಿಗೆ ಇಡೀ ನಿವಾಸಿತ ಭೂಮಿಯನ್ನು ತಪ್ಪುದಾರಿಗೆ ನಡಿಸಿದವನು ಎಲ್ಲಿ ಅವನ ದಂಗೆಕೋರತನವು ಮೊದಲಾಗಿ ಆರಂಭಿಸಲ್ಪಟ್ಟಿತೋ, ಆ ಭೂಗ್ರಹದ ಪರಿಸರಕ್ಕೆ ಕೊನೆಗೂ ನಿರ್ಬಂಧಿಸಲ್ಪಡುತ್ತಾನೆ.—2 ಕೊರಿಂಥ 4:3, 4.
15, 16. (ಎ) ಮೀಕಾಯೇಲನು ಯಾರು, ಮತ್ತು ನಮಗೆ ಅದು ತಿಳಿದಿರುವುದು ಹೇಗೆ? (ಬಿ) ಸೈತಾನನನ್ನು ಪರಲೋಕದಿಂದ ಕೆಳಕ್ಕೆ ದೊಬ್ಬಿಬಿಡುವವನು ಮೀಕಾಯೇಲನು ಆಗಿರುವುದು ಯುಕ್ತವಾಗಿದೆ ಏಕೆ?
15 ಯೆಹೋವನ ನಾಮದಲ್ಲಿ ಈ ಮಹಾ ವಿಜಯವನ್ನು ಯಾರು ಪೂರೈಸುತ್ತಾರೆ? ಮೀಕಾಯೇಲನೂ ಅವನ ದೂತರೂ ಎಂದು ಬೈಬಲು ಹೇಳುತ್ತದೆ. ಆದರೆ ಮೀಕಾಯೇಲನು ಯಾರು? “ಮೀಕಾಯೇಲ” ಎಂಬ ಹೆಸರಿನ ಅರ್ಥವು “ದೇವರಂತೆ ಯಾರಿದ್ದಾನೆ?” ಆದುದರಿಂದ ಯೆಹೋವನಿಗೆ ಸರಿದೂಗುವವನು ಯಾರೂ ಇಲ್ಲ ಎಂದು ರುಜುಪಡಿಸುವುದರ ಮೂಲಕ ಯೆಹೋವನ ಸಾರ್ವಭೌಮತ್ವವನ್ನು ನಿರ್ದೋಷೀಕರಿಸುವುದರಲ್ಲಿ ಮೀಕಾಯೇಲನು ಆಸಕ್ತನಾಗಿದ್ದಿರಬೇಕು. ಯೂದ 9 ನೆಯ ವಚನದಲ್ಲಿ, ಅವನನ್ನು “ಪ್ರಧಾನ ದೂತನಾದ ಮೀಕಾಯೇಲನು” ಎಂದು ಕರೆಯಲಾಗಿದೆ. ಆಸಕ್ತಿಕರವಾಗಿ, “ಪ್ರಧಾನ ದೂತನು” ಎಂಬ ಬಿರುದು ಇನ್ನೊಂದು ಕಡೆಯಲ್ಲಿ ಕೇವಲ ಏಕಮಾತ್ರ ವ್ಯಕ್ತಿ, ಯೇಸು ಕ್ರಿಸ್ತನಿಗೆ ಸೂಚಿಸಿ ಬಳಸಲ್ಪಟ್ಟಿದೆ.b ಅವನ ಕುರಿತಾಗಿ ಪೌಲನು ಬರೆಯುವುದು: “ಕರ್ತನು ತಾನೇ ಆಜ್ಞಾಘೋಷದೊಡನೆಯೂ ಪ್ರಧಾನ ದೂತನ ಶಬ್ದ ದೊಡನೆಯೂ ದೇವರ ತುತೂರಿಧ್ವನಿಯೊಡನೆಯೂ ಆಕಾಶದಲ್ಲಿ ಇಳಿದು ಬರುವನು.” (1 ಥೆಸಲೊನೀಕ 4:16) “ಪ್ರಧಾನ ದೂತನು” ಎಂಬ ಬಿರುದಿಗೆ “ದೇವದೂತರ ಮುಖ್ಯಸ್ಥನು” ಎಂಬರ್ಥವಿದೆ. ಆದುದರಿಂದ ಪ್ರಕಟನೆಯು “ಮೀಕಾಯೇಲನೂ ಅವನ ದೂತರ” ಕುರಿತು ಹೇಳುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಬೈಬಲಿನಲ್ಲಿ ಇತರ ಸ್ಥಳಗಳಲ್ಲಿ ದೇವರ ಒಬ್ಬ ನೀತಿಯ ಸೇವಕನಿಗೆ ದೇವದೂತರು ಅಧೀನರಾಗುತ್ತಾರೆಂದು ಉಲ್ಲೇಖಿಸುವಲ್ಲಿ ಅವು ಯೇಸುವಿಗೆ ಸೂಚಿಸುತ್ತವೆ. ಆದಕಾರಣ, ಪೌಲನು “ಯೇಸು ಕರ್ತನು ಆಕಾಶದಿಂದ ತನ್ನ ಶಕ್ತಿಯನ್ನು ತೋರ್ಪಡಿಸುವ ದೇವದೂತರಿಂದ ಕೂಡಿದವನಾಗಿ . . . ಪ್ರತ್ಯಕ್ಷನಾಗುವ” ಕುರಿತು ಮಾತಾಡುತ್ತಾನೆ.—2 ಥೆಸಲೊನೀಕ 1:7; ಮತ್ತಾಯ 24:30, 31; 25:31 ಸಹ ನೋಡಿರಿ.
16 ಇವುಗಳು ಮತ್ತು ಇತರ ಶಾಸ್ತ್ರವಚನಗಳು, ಮೀಕಾಯೇಲನು ತನ್ನ ಸ್ವರ್ಗೀಯ ಪದವಿಯಲ್ಲಿರುವ ಕರ್ತನಾದ ಯೇಸು ಕ್ರಿಸ್ತನು ತಾನೇ ಅಲ್ಲದೆ ಬೇರೆ ಯಾರೂ ಅಲ್ಲ ಎಂಬ ತಪ್ಪಿಸಲಾಗದ ಸಮಾಪ್ತಿಗೆ ನಮ್ಮನ್ನು ನಡಿಸುತ್ತವೆ. ಈಗ, ಕರ್ತನ ದಿನದಲ್ಲಿ, ಅವನು ಸೈತಾನನಿಗೆ ಕೇವಲ “ಕರ್ತನು (ಯೆಹೋವನು, NW) ನಿನ್ನನ್ನು ಖಂಡಿಸಲಿ” ಎಂದು ಮಾತ್ರ ಹೇಳುವುದಿಲ್ಲ. ಇದು ನ್ಯಾಯತೀರ್ಪಿನ ಸಮಯವಾಗಿರುವುದರಿಂದ, ಮೀಕಾಯೇಲನೋಪಾದಿ ಯೇಸುವು ದುಷ್ಟ ಸೈತಾನನನ್ನು ಮತ್ತು ಅವನ ಪೈಶಾಚಿಕ ದೂತರನ್ನು ಪರಲೋಕದಿಂದ ದೊಬ್ಬಿಬಿಡುತ್ತಾನೆ. (ಯೂದ 9; ಪ್ರಕಟನೆ 1:10) ಅವನು ಹೊಸತಾಗಿ ಪ್ರತಿಷ್ಠಾಪಿಸಲ್ಪಟ್ಟ ಅರಸನಾಗಿರುವುದರಿಂದ ಇದನ್ನು ಅವನು ಮಾಡುವುದು ಅತ್ಯಂತ ಯುಕ್ತವಾಗಿದೆ. ಹಿಂದೆ ಏದೆನಿನಲ್ಲಿ ವಾಗ್ದಾನಿಸಲ್ಪಟ್ಟ ಸಂತಾನದೋಪಾದಿ ಯೇಸುವು ಕಟ್ಟಕಡೆಯಲ್ಲಿ ಪುರಾತನ ಸರ್ಪನ ತಲೆಯನ್ನು ಜಜ್ಜುವನು. ಹೀಗೆ ಸರ್ವಕಾಲಕ್ಕೂ ಅವನನ್ನು ಅಸ್ತಿತ್ವದಿಂದ ಇಲ್ಲದಂತೆ ತೆಗೆದುಹಾಕಲಿರುವನು. (ಆದಿಕಾಂಡ 3:15) ಪರಲೋಕದಿಂದ ಸೈತಾನನನ್ನು ಉಚ್ಚಾಟಿಸುವ ಮೂಲಕ, ಆ ಕೊನೆಯ ಜಜ್ಜುವಿಕೆಯ ದಿಸೆಯಲ್ಲಿ ಯೇಸುವು ಕಾರ್ಯಪ್ರವೃತ್ತನಾಗಿದ್ದಾನೆ.
“ಪರಲೋಕವೇ, ಹರ್ಷಗೊಳ್ಳಿರಿ”
17, 18. (ಎ) ಪರಲೋಕದಿಂದ ಸೈತಾನನ ಬೀಳುವಿಕೆಗೆ ಪರಲೋಕದ ಪ್ರತಿಕ್ರಿಯೆಯ ಕುರಿತು ಯೋಹಾನನು ಏನನ್ನು ವರದಿಸುತ್ತಾನೆ? (ಬಿ) ಯೋಹಾನನು ಕೇಳುವ ಗಟ್ಟಿಯಾದ ಧ್ವನಿಯ ಉಗಮ ಏನಾಗಿದ್ದಿರಬಹುದು?
17 ಸೈತಾನನ ಈ ಬೃಹದ್ಗಾತ್ರದ ಬೀಳುವಿಕೆಗೆ ಆದ ಪರಲೋಕದ ಸಂತಸಕರ ಪ್ರತಿಕ್ರಿಯೆಯನ್ನು ಯೋಹಾನನು ವರದಿಸುತ್ತಾನೆ: “ಮತ್ತು ಪರಲೋಕದಲ್ಲಿ ಮಹಾ ಶಬ್ದವೊಂದು ಹೇಳುವುದನ್ನು ನಾನು ಕೇಳಿದೆನು: ‘ಈಗ ರಕ್ಷಣೆ ಮತ್ತು ಶಕ್ತಿ ಮತ್ತು ನಮ್ಮ ದೇವರ ರಾಜ್ಯವು ಮತ್ತು ಅವನ ಕ್ರಿಸ್ತನ ಅಧಿಕಾರವು ಉಂಟಾದವು, ಯಾಕಂದರೆ ಹಗಲಿರುಳು ನಮ್ಮ ದೇವರ ಮುಂದೆ ನಮ್ಮ ಸಹೋದರರನ್ನು ಆಪಾದಿಸುವ ಅವರ ಆಪಾದಕನು ಕೆಳಗೆ ದೊಬ್ಬಲ್ಪಟ್ಟಿದ್ದಾನೆ! ಮತ್ತು ಕುರಿಮರಿಯ ರಕ್ತದಿಂದ ಮತ್ತು ಬಲದಿಂದ ಮತ್ತು ತಮ್ಮ ಸಾಕ್ಷಿ ನೀಡುವ ವಾಕ್ಯದಿಂದ ಅವರು ಅವನನ್ನು ಜಯಿಸಿದರು, ಮತ್ತು ಮರಣದ ಎದುರಲ್ಲೂ ಅವರು ತಮ್ಮ ಆತ್ಮಗಳನ್ನು ಪ್ರೀತಿಸಲಿಲ್ಲ. ಈ ಕಾರಣದಿಂದ ಪರಲೋಕವೇ, ಮತ್ತು ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ.”—ಪ್ರಕಟನೆ 12:10-12ಎ, NW.
18 ಯೋಹಾನನು ಕೇಳುವ ಗಟ್ಟಿಯಾದ ಧ್ವನಿ ಯಾರದ್ದು? ಬೈಬಲು ಅದನ್ನು ಹೇಳುವುದಿಲ್ಲ. ಆದರೆ ಪ್ರಕಟನೆ 11:17 ರಲ್ಲಿ ವರದಿಸಲಾದ ತದ್ರೀತಿಯ ಕೂಗು ಈಗ 1,44,000 ಪವಿತ್ರ ದೇವಜನರನ್ನು ಪ್ರತಿನಿಧಿಸಲು ಶಕ್ತರಾದ ತಮ್ಮ ಸ್ವರ್ಗೀಯ ಸ್ಥಾನದಲ್ಲಿರುವ ಪುನರುತಿತ್ಥ 24 ಹಿರಿಯರಿಂದ ಬಂದಿತ್ತು. (ಪ್ರಕಟನೆ 11:18) ಮತ್ತು ಇನ್ನೂ ಈ ಭೂಮಿಯ ಮೇಲೆ ಇರುವ ದೇವರ ಹಿಂಸಿಸಲ್ಪಟ್ಟ ಅಭಿಷಿಕ್ತ ಸೇವಕರುಗಳನ್ನು ಇಲ್ಲಿ “ನಮ್ಮ ಸಹೋದರರು” ಎಂದು ಹೇಳಿರುವುದರಿಂದ, ಈ ಹೇಳಿಕೆಯು ಅದೇ ಮೂಲದಿಂದ ಬಂದಿರಸಾಧ್ಯವಿದೆ. ಈ ನಂಬಿಗಸ್ತರು ಅವರ ಸರ್ವಗಳನ್ನು ಇದಕ್ಕೆ ಕೂಡಿಸಬಹುದು ಎಂಬುದರಲ್ಲಿ ಸಂದೇಹವಿಲ್ಲ, ಯಾಕಂದರೆ ಅವರ ಪುನರುತ್ಥಾನವು ಪರಲೋಕದಿಂದ ಸೈತಾನನ ಮತ್ತು ಅವನ ದೆವ್ವಪಡೆಗಳ ಹೊರದಬ್ಬುವಿಕೆಯನ್ನು ಹಿಂಬಾಲಿಸುವುದು.
19. (ಎ) ದೇವರ ಪವಿತ್ರ ರಹಸ್ಯದ ಮುಕ್ತಾಯವು ಏನನ್ನು ಮಾಡಲು ಯೇಸುವಿಗೆ ದಾರಿಯನ್ನು ತೆರೆಯುತ್ತದೆ? (ಬಿ) “ನಮ್ಮ ಸಹೋದರರ ಆಪಾದಕನು” ಎಂದು ಸೈತಾನನನ್ನು ಕರೆಯುವುದರಿಂದ ಏನು ಸೂಚಿಸಲ್ಪಟ್ಟಿದೆ?
19 ದೇವರ ಪವಿತ್ರ ರಹಸ್ಯದ ಮುಕ್ತಾಯಗೊಳಿಸುವಿಕೆಯು ಯೆಹೋವನ ರಾಜ್ಯದಲ್ಲಿ ಯೇಸುವು ಅಧಿಕಾರವನ್ನು ಪಡೆದುಕೊಳ್ಳುವುದಕ್ಕೆ ಕರೆನೀಡುತ್ತದೆ. ಈ ರೀತಿಯಲ್ಲಿ ನಂಬಿಗಸ್ತ ಮಾನವಕುಲವನ್ನು ವಿಮೋಚಿಸುವ ತನ್ನ ಮಹಾ ಉದ್ದೇಶವನ್ನು ಪೂರೈಸಲು ದೇವರಿಗೆ ದಾರಿಯು ತೆರೆಯುತ್ತದೆ. ಯೇಸುವು ಈಗ ಭೂಮಿಯ ಮೇಲಿರುವ ಅವನ ದೇವಭೀರು ಶಿಷ್ಯರಿಗೆ ಮಾತ್ರವಲ್ಲ, ಬದಲಾಗಿ ದೇವರ ಜ್ಞಾಪಕದಲ್ಲಿರುವ ಸತ್ತಂತಹ ಅಗಣಿತ ಲಕ್ಷಾಂತರ ಮಂದಿಗೂ ರಕ್ಷಣೆಯನ್ನು ತರುತ್ತಾನೆ. (ಲೂಕ 21:27, 28) ಸೈತಾನನು ‘ನಮ್ಮ ಸಹೋದರರ ಆಪಾದಕನು’ ಎಂದು ಕರೆಯಲ್ಪಡುವುದು, ಯೋಬನ ವಿರುದ್ಧ ಅವನ ದೂರುಗಳು ತಪ್ಪೆಂದು ರುಜುವಾದರೂ, ದೇವರ ಐಹಿಕ ಸೇವಕರ ಸಮಗ್ರತೆಯನ್ನು ಪಂಥಾಹ್ವಾನಕ್ಕೊಡ್ಡುವುದನ್ನು ಅವನು ಜಾರಿಯಲ್ಲಿಡುತ್ತಾ ಹೋದನೆಂದು ತೋರಿಸುತ್ತದೆ. ಸಾಕ್ಷಾತ್, ಮನುಷ್ಯನು ತನ್ನ ಜೀವಕ್ಕಾಗಿ ತನಗಿರುವುದನ್ನೆಲ್ಲಾ ಕೊಡುವನು ಎಂಬ ಅವನ ಆಪಾದನೆಯನ್ನು ಅವನು ಹಲವಾರು ಸಂದರ್ಭಗಳಲ್ಲಿ ಪುನರಾವರ್ತಿಸಿದ್ದಾನೆ. ಸೈತಾನನು ಎಷ್ಟು ವಿಷಾದಕರವಾಗಿ ಸೋತಿರುತ್ತಾನೆ!—ಯೋಬ 1:9-11; 2:4, 5.
20. ನಂಬಿಗಸ್ತ ಕ್ರೈಸ್ತರು ಸೈತಾನನ ಮೇಲೆ ವಿಜಯವನ್ನು ಹೇಗೆ ಪಡೆದಿರುತ್ತಾರೆ?
20 “ಕುರಿಮರಿಯ ರಕ್ತದ” ಮೂಲಕ ನೀತಿವಂತರೆಂದು ಪರಿಗಣಿಸಲ್ಪಟ್ಟ ಅಭಿಷಿಕ್ತ ಕ್ರೈಸ್ತರು, ಹಿಂಸೆಯ ನಡುವೆಯೂ ದೇವರ ಮತ್ತು ಯೇಸು ಕ್ರಿಸ್ತನ ಪರವಾಗಿ ಸಾಕ್ಷಿ ನೀಡುವುದನ್ನು ಮುಂದರಿಸಿದ್ದಾರೆ. ಒಂದು ನೂರು ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ, ಈ ಯೋಹಾನ ವರ್ಗವು 1914 ರಲ್ಲಿ ಅನ್ಯಜನಾಂಗಗಳ ಕಾಲವು ಅಂತ್ಯಗೊಳ್ಳುವುದರೊಂದಿಗೆ ಒಳಗೂಡಿರುವ ಮಹಾ ವಿವಾದಗಳ ಕಡೆಗೆ ನಿರ್ದೇಶಿಸುತ್ತಾ ಇದೆ. (ಲೂಕ 21:24, ಕಿಂಗ್ ಜೇಮ್ಸ್ ವರ್ಷನ್) ಮತ್ತು ಈಗ ಮಹಾ ಸಮೂಹವು ಅವರ ಪಕ್ಕದಲ್ಲಿ ನಿಷ್ಠೆಯಿಂದ ಸೇವಿಸುತ್ತಾ ಇದೆ. ಅವರಲ್ಲಿ ಯಾರೂ “ದೇಹವನ್ನು ಕೊಂದು ಆತ್ಮವನ್ನು ಕೊಲಲ್ಲಾರದವರಿಗೆ ಹೆದರದೆ” ಇದ್ದಾರೆ. ಇದನ್ನು ಈ ಇಪ್ಪತ್ತನೆಯ ಶತಕದಲ್ಲಿ ಯೆಹೋವನ ಸಾಕ್ಷಿಗಳ ನಿಜ ಜೀವನ ಅನುಭವಗಳು ಪುನಃ ಪುನಃ ರುಜುಪಡಿಸಿವೆ. ಬಾಯಿಯ ಮೂಲಕ ಮತ್ತು ಕ್ರೈಸ್ತ ಸ್ವದರ್ತನೆಯ ಮೂಲಕ, ಅವರು ಸೈತಾನನ ಮೇಲೆ ಜಯಗಳಿಸಿ, ಅವನು ಒಬ್ಬ ಸುಳ್ಳುಗಾರನೆಂದು ಸುಸಂಗತವಾಗಿ ಸಾಬೀತುಪಡಿಸಿದ್ದಾರೆ. (ಮತ್ತಾಯ 10:28; ಜ್ಞಾನೋಕ್ತಿ 27:11; ಪ್ರಕಟನೆ 7:9) ಪರಲೋಕಕ್ಕೆ ಪುನರುತ್ಥಾನಗೊಳಿಸಲ್ಪಟ್ಟ ಮೇಲೆ ಈ ಅಭಿಷಿಕ್ತ ಕ್ರೈಸ್ತರು ಎಷ್ಟೊಂದು ಆನಂದಿತರಾಗಿರಬೇಕು, ಯಾಕಂದರೆ ಅವರ ಸಹೋದರರನ್ನು ಆಪಾದಿಸಲು ಸೈತಾನನು ಇನ್ನು ಮುಂದೆ ಅಲ್ಲಿ ಮೇಲೆ ಇರುವುದಿಲ್ಲ! ಆದುದರಿಂದ ಎಲ್ಲಾ ದೇವದೂತಗಣವು ಈ ಕರೆಗೆ ಆನಂದದಿಂದ ಪ್ರತಿವರ್ತನೆ ತೋರಿಸಲು ಇದು ಸಮಯವಾಗಿದೆ: “ಪರಲೋಕವೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ!”
ಒಂದು ಪ್ರತಿದ್ವಂದ್ವಿ ವಿಪತ್ತು!
21. ಭೂಮಿ ಮತ್ತು ಸಮುದ್ರಕ್ಕೆ ಸೈತಾನನು ವಿಪತ್ತನ್ನು ಹೇಗೆ ತಂದಿದ್ದಾನೆ?
21 ಮೂರನೆಯ ವಿಪತ್ತಿನ ಮೂಲಕ ರೇಗಿಸಲ್ಪಟ್ಟ ಕಾರಣ, ಸೈತಾನನು ಈಗ ತನ್ನದ್ದೇ ಗುರುತಿನ ವಿಶಿಷ್ಟ ವಿಪತ್ತಿನ ಮೂಲಕ ಮಾನವಕುಲವನ್ನು ಬಾಧಿಸಲು ಉದ್ದೇಶಿಸಿದ್ದಾನೆ. ಅದು: “ಭೂಮಿಗೆ ಮತ್ತು ಸಮುದ್ರಕ್ಕೆ ಅಯ್ಯೋ, ಯಾಕಂದರೆ ಪಿಶಾಚನು ತನಗಿರುವ ಸಮಯಾವಧಿಯು ಸ್ವಲ್ಪವೆಂದು ತಿಳಿದು, ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.” (ಪ್ರಕಟನೆ 12:12ಬಿ, NW) ಪರಲೋಕದಿಂದ ಸೈತಾನನ ಹೊರದಬ್ಬುವಿಕೆಯು ಯಾವುದು ಈಗ ಅವನ ಹತೋಟಿಯಲ್ಲಿರುವ ಸ್ವಾರ್ಥಭರಿತ ಮಾನವರಿಂದ ಧ್ವಂಸಗೊಳಿಸಲ್ಪಡುತ್ತಿದೆಯೋ ಆ ಅಕ್ಷರಾರ್ಥದ ಭೂಮಿಗೆ ಖಂಡಿತವಾಗಿಯೂ ವಿಪತ್ತಿನ ಅರ್ಥದಲ್ಲಿರುತ್ತದೆ. (ಧರ್ಮೋಪದೇಶಕಾಂಡ 32:5) ಇನ್ನೂ ಹೆಚ್ಚಾಗಿ, ಸೈತಾನನ ‘ಆಳು ಇಲ್ಲವೇ ಅಳಿವು’ ಧೋರಣೆಯು ಮಾನವ ಸಮಾಜದ ವಿನ್ಯಾಸವಾಗಿರುವ ಈ ಸಾಂಕೇತಿಕ ಭೂಮಿಗೂ, ಅಲ್ಲೋಲಕಲ್ಲೋಲವಾಗಿರುವ ಮಾನವ ಸಮೂಹದ ಸಾಂಕೇತಿಕ ಸಮುದ್ರಕ್ಕೂ ವಿಪತ್ತನ್ನು ತರುತ್ತದೆ. ಎರಡು ಲೋಕ ಯುದ್ಧಗಳಲ್ಲಿ, ಅವನ ಅಧೀನದಲ್ಲಿರುವ ಜನಾಂಗಗಳ ಕೋಪೋದ್ರಿಕತ್ತೆಯಲ್ಲಿ ಸೈತಾನನ ಕೋಪವು ತಾನೇ ವ್ಯಕ್ತವಾಗಿರುತ್ತದೆ, ಮತ್ತು ಇಂದಿನ ತನಕವೂ ಅಂಥ ಪೈಶಾಚಿಕ ರೌದ್ರದ ಸ್ಫೋಟನಗಳು ಮುಂದರಿಯುತ್ತವೆ—ಆದರೆ ಇನ್ನು ಹೆಚ್ಚು ದೀರ್ಘಕಾಲಕ್ಕಲ್ಲ! (ಮಾರ್ಕ 13:7, 8) ಆದರೆ ಪಿಶಾಚನ ಕುತಂತ್ರಗಳು ಎಷ್ಟೇ ಭಯಂಕರವಾಗಿರಲಿ ಅವು, ಸೈತಾನನ ದೃಶ್ಯ ಸಂಸ್ಥೆಯ ಮೇಲೆ ಉತ್ಪಾದಿಸುವ ಮೂರನೆಯ ವಿಪತ್ತಿನ—ದೇವರ ರಾಜ್ಯದಿಂದ ಕಾರ್ಯಾಚರಣೆ—ಪರಿಣಾಮವನ್ನು ಎಂದಿಗೂ ಸಮೀಪಿಸಲಾರವು!
22, 23. (ಎ) ಘಟಸರ್ಪನನ್ನು ಭೂಮಿಗೆ ದೊಬ್ಬಿದ ಅನಂತರ ಏನು ಸಂಭವಿಸುತ್ತದೆ ಎಂದು ಯೋಹಾನನು ಹೇಳುತ್ತಾನೆ? (ಬಿ) “ಗಂಡುಮಗುವನ್ನು ಹೆತ್ತ ಸ್ತ್ರೀಯನ್ನು” ಹಿಂಸಿಸಲು ಘಟಸರ್ಪನಿಗೆ ಸಾಧ್ಯವಾಗುವುದಾದರೂ ಹೇಗೆ?
22 ಸೈತಾನನ ವಿನಾಶಕಾರೀ ತಳ್ಳುವಿಕೆಯಂದಿನಿಂದ, ಭೂಮಿಯ ಮೇಲಿರುವ ಕ್ರಿಸ್ತನ ಸಹೋದರರು ಅವನ ಕೋಪದ ಬೇಗೆಯನ್ನು ಸಹಿಸಿಕೊಂಡಿದ್ದಾರೆ. ಯೋಹಾನನು ವರದಿಸುವುದು: “ಈಗ ಘಟಸರ್ಪವು ತಾನು ದೊಬ್ಬಲ್ಪಟ್ಟು ಭೂಮಿಗೆ ಬಿದ್ದಿರುವುದನ್ನು ಕಂಡಾಗ ಅದು ಗಂಡು ಮಗುವನ್ನು ಹೆತ್ತ ಸ್ತ್ರೀಯನ್ನು ಹಿಂಸಿಸಿತು. ಆದರೆ ಆ ಸ್ತ್ರೀಯು ಅರಣ್ಯದೊಳಗೆ ತನ್ನ ಸ್ಥಳಕ್ಕೆ ಹಾರಿಹೋಗುವುದಕ್ಕಾಗಿ ಆಕೆಗೆ ದೊಡ್ಡ ಗರುಡಪಕ್ಷಿಯ ಎರಡು ರೆಕ್ಕೆಗಳು ಕೊಡಲ್ಪಟ್ಟವು; ಅಲ್ಲಿ ಒಂದು ಕಾಲ ಮತ್ತು ಕಾಲಗಳು ಮತ್ತು ಅರ್ಧಕಾಲ ಸರ್ಪನ ಮುಖಕ್ಕೆ ಮರೆಯಾಗಿ ಆಕೆ ಪೋಷಣೆಹೊಂದುತ್ತಾಳೆ.”—ಪ್ರಕಟನೆ 12:13, 14, NW.
23 ಇಲ್ಲಿ ದರ್ಶನವು ಆರನೆಯ ವಚನದಲ್ಲಿ ಪ್ರಸ್ತಾಪಿಸಲ್ಪಟ್ಟ ವಿಚಾರವನ್ನು ಪುನಃ ಎತ್ತಿಕೊಂಡು, ಅವಳ ಮಗುವಿನ ಜನನದ ಅನಂತರ, ಸ್ತ್ರೀಯು ಘಟಸರ್ಪನಿಂದ ದೂರ, ಅರಣ್ಯಕ್ಕೆ ಓಡಿಹೋಗುವುದನ್ನು ನಮಗೆ ತಿಳಿಸುತ್ತದೆ. ಘಟಸರ್ಪವು ಸ್ತ್ರೀಯನ್ನು ಹಿಂಸಿಸುವುದಾದರೂ ಹೇಗೆ ಎಂದು ನಾವು ಅಚ್ಚರಿಗೊಳ್ಳಬಹುದು, ಯಾಕಂದರೆ ಅವಳು ಪರಲೋಕದಲ್ಲಿದ್ದಾಳೆ ಮತ್ತು ಘಟಸರ್ಪನು ಈಗ ಭೂಮಿಗೆ ದೊಬ್ಬಲ್ಪಟ್ಟಿರುತ್ತಾನೆ. ಒಳ್ಳೇದು, ಸ್ತ್ರೀಗೆ ಇಲ್ಲಿ ಭೂಮಿಯ ಮೇಲೆ ಮಕ್ಕಳು ಇದ್ದಾರೆ ಎಂಬುದನ್ನು ನೆನಪಿಸಿರಿ. ಈ ದರ್ಶನದಲ್ಲಿ ಸ್ವಲ್ಪ ಅನಂತರ, ಅವಳ ಸಂತಾನವನ್ನು ಹಿಂಸಿಸುವುದರ ಮೂಲಕ ಸೈತಾನನು ತನ್ನ ಕೋಪವನ್ನು ವ್ಯಕ್ತಪಡಿಸುತ್ತಾನೆ ಎಂದು ನಮಗೆ ತಿಳಿಸಲಾಗುತ್ತದೆ. (ಪ್ರಕಟನೆ 12:17) ಇಲ್ಲಿ ಭೂಮಿಯ ಮೇಲೆ ಈ ಸ್ತ್ರೀಯ ಸಂತಾನಕ್ಕೆ ಏನು ಸಂಭವಿಸುತ್ತದೋ ಅದು ಸ್ವತಃ ಸ್ತ್ರೀಗೆ ಆದಂತೆ ಎಂದು ಪರಿಗಣಿಸಬಹುದು. (ಹೋಲಿಸಿರಿ ಮತ್ತಾಯ 25:40.) ಮತ್ತು ಇಲ್ಲಿ ಭೂಮಿಯ ಮೇಲೆ ಸಂತಾನದ ಬೆಳೆಯುತ್ತಿರುವ ಸಂಖ್ಯೆಯ ಸಂಗಾತಿಗಳು ಕೂಡ ಈ ಹಿಂಸೆಗಳನ್ನು ಅನುಭವಿಸಲಿರುವರು.
ಒಂದು ಹೊಸ ಜನಾಂಗ
24. ಐಗುಪ್ತದಿಂದ ಇಸ್ರಾಯೇಲ್ಯರ ವಿಮೋಚನೆಗೆ ಸಮಾನವಾದ ಯಾವ ಅನುಭವವು ಬೈಬಲ್ ವಿದ್ಯಾರ್ಥಿಗಳಿಗೆ ಆಯಿತು?
24 ಮೊದಲನೆಯ ಲೋಕ ಯುದ್ಧವು ಹೋರಾಡಲ್ಪಡುತ್ತಿದ್ದಾಗ, ಯೇಸುವಿನ ಸಹೋದರರು ಸಾಧ್ಯವಿರುವಷ್ಟರ ಮಟ್ಟಿಗೆ ತಮ್ಮ ಸಾಕ್ಷಿಕಾರ್ಯವನ್ನು ನಂಬಿಗಸ್ತಿಕೆಯಿಂದ ಜಾರಿಯಲ್ಲಿಟ್ಟರು. ಸೈತಾನನ ಮತ್ತು ಅವನ ಕ್ರೂರ ಅನುಚರರಿಂದ ತೀವ್ರವಾದ ವಿರೋಧದ ನಡುವೆಯೂ ಇದನ್ನು ಮಾಡಲಾಯಿತು. ಕೊನೆಗೆ, ಬೈಬಲ್ ವಿದ್ಯಾರ್ಥಿಗಳ ಸಾರ್ವಜನಿಕ ಸಾಕ್ಷಿನೀಡುವಿಕೆಯು ಕಾರ್ಯತಃ ನಿಲ್ಲಿಸಲ್ಪಟ್ಟಿತು. (ಪ್ರಕಟನೆ 11:7-10) ಐಗುಪ್ತದಲ್ಲಿ ಮಹಾ ದಬ್ಬಾಳಿಕೆಯ ಕೆಳಗೆ ಸಹಿಸಿಕೊಂಡ ಇಸ್ರಾಯೇಲ್ಯರಿಗೆ ಆದಂತಹ ರೀತಿಯ ಅನುಭವ ಅವರಿಗೂ ಆದಾಗ ಅದು ನಡೆಯಿತು. ಆಗಲೇ, ಯೆಹೋವನು ತ್ವರಿತವಾಗಿ, ಗರುಡಪಕ್ಷಿಯ ರೆಕ್ಕೆಗಳ ಮೇಲೋ ಎಂಬಂತೆ ಅವರನ್ನು ಸೀನಾಯಿ ಮರುಭೂಮಿಯಲ್ಲಿ ಸುರಕ್ಷತೆಗೆ ತಂದದ್ದು ಆಗಲೇ. (ವಿಮೋಚನಕಾಂಡ 19:1-4) ಹಾಗೆಯೇ 1918-19ರ ಈ ಕಡು ಹಿಂಸೆಯ ಅನಂತರ, ಯೆಹೋವನು ತನ್ನ ಸ್ತ್ರೀಯನ್ನು ಪ್ರತಿನಿಧಿಸುವ ಆತನ ಸಾಕ್ಷಿಗಳನ್ನು ಬಿಡುಗಡೆಗೊಳಿಸಿ, ಒಂದು ಆತ್ಮಿಕ ಪರಿಸ್ಥಿತಿಯೊಳಗೆ ತಂದನು. ಅದು ಇಸ್ರಾಯೇಲ್ಯರಿಗೆ ಮರುಭೂಮಿಯು ಎಷ್ಟು ಸುರಕ್ಷಿತವಾಗಿತ್ತೋ ಅಷ್ಟೇ ಸುರಕ್ಷಿತವಾಗಿತ್ತು. ಇದು ಅವರ ಪ್ರಾರ್ಥನೆಗಳಿಗೆ ಉತ್ತರದೋಪಾದಿ ಕಾರ್ಯನಡಿಸಿತು.—ಕೀರ್ತನೆ 55:6-9 ಹೋಲಿಸಿರಿ.
25. (ಎ) ಅರಣ್ಯದಲ್ಲಿ ಇಸ್ರಾಯೇಲ್ಯರನ್ನು ಒಂದು ಜನಾಂಗದೋಪಾದಿ ಅವನು ಮುಂದೆ ತಂದ ಹಾಗೆಯೇ, 1919 ರಲ್ಲಿ ಯೆಹೋವನು ಏನನ್ನು ಮುಂದಕ್ಕೆ ತಂದನು? (ಬಿ) ಈ ಜನಾಂಗದಲ್ಲಿ ಯಾರು ಸೇರಿರುತ್ತಾರೆ, ಮತ್ತು ಅವರು ಯಾವುದರೊಳಗೆ ತರಲ್ಪಟ್ಟಿರುತ್ತಾರೆ?
25 ಅರಣ್ಯದಲ್ಲಿ, ಯೆಹೋವನು ಇಸ್ರಾಯೇಲ್ಯರನ್ನು ಒಂದು ಜನಾಂಗದೋಪಾದಿ ಹೊರಗೆ ತಂದು, ಅವರಿಗೆ ಆತ್ಮಿಕವಾಗಿ ಮತ್ತು ಶಾರೀರಿಕವಾಗಿ ಒದಗಿಸಿದನು. ತದ್ರೀತಿಯಲ್ಲಿ, 1919ರ ಆರಂಭದಿಂದ ಯೆಹೋವನು ಸ್ತ್ರೀಯ ಸಂತಾನವನ್ನು ಒಂದು ಆತ್ಮಿಕ ಜನಾಂಗದೋಪಾದಿ ಮುಂದಕ್ಕೆ ತಂದನು. ಇದನ್ನು 1914 ರಿಂದ ಪರಲೋಕದಿಂದ ಆಳುತ್ತಿರುವ ಮೆಸ್ಸೀಯ ಸಂಬಂಧಿತ ರಾಜ್ಯದೊಂದಿಗೆ ಗಲಿಬಿಲಿಗೊಳಿಸಬಾರದು. ಬದಲಿಗೆ, ಈ ಹೊಸ ಜನಾಂಗವು ಭೂಮಿಯ ಮೇಲಿರುವ ಅಭಿಷಿಕ್ತ ಸಾಕ್ಷಿಗಳ ಉಳಿಕೆಯವರಿಂದ ರಚಿಸಲ್ಪಟ್ಟಿದೆ, ಇವರನ್ನು 1919 ರಲ್ಲಿ ಒಂದು ಮಹಿಮಾಭರಿತ ಆತ್ಮಿಕ ದೆಸೆಯೊಳಗೆ ತರಲಾಯಿತು. “ಹೊತ್ತುಹೊತ್ತಿಗೆ ಅಶನಕ್ಕೆ ಬೇಕಾದದ್ದನ್ನು ಅಳೆದು” ಕೊಟ್ಟದರ್ದಿಂದಾಗಿ ಈಗ ಮುಂದೆ ಇಡಲ್ಪಟ್ಟಿರುವ ಕೆಲಸಕ್ಕೆ ಅವರು ಬಲಗೊಳಿಸಲ್ಪಟ್ಟರು.—ಲೂಕ 12:42; ಯೆಶಾಯ 66:8.
26. (ಎ) ಪ್ರಕಟನೆ 12:6, 14 ರಲ್ಲಿ ಸೂಚಿಸಲ್ಪಟ್ಟ ಸಮಯಾವಧಿ ಎಷ್ಟು ದೀರ್ಘವಾದದ್ದು? (ಬಿ) ಮೂರುವರೆ ಕಾಲಗಳ ಸಮಯಾವಧಿಯ ಉದ್ದೇಶವೇನು, ಅದು ಯಾವಾಗ ಆರಂಭಗೊಂಡಿತು, ಮತ್ತು ಅದು ಯಾವಾಗ ಕೊನೆಗೊಂಡಿತು?
26 ದೇವರ ಸ್ತ್ರೀಯ ಸಂತಾನದ ವಿಶ್ರಾಂತಿಯ ಕಾಲವು ಎಷ್ಟರ ತನಕ ಇತ್ತು? ಪ್ರಕಟನೆ 12:6 ಅದು 1,260 ದಿನಗಳೆಂದು ಹೇಳುತ್ತದೆ. ಪ್ರಕಟನೆ 12:14 ಆ ಸಮಯಾವಧಿಯನ್ನು ಒಂದು ಕಾಲ, ಕಾಲಗಳು, ಮತ್ತು ಅರ್ಧಕಾಲ ಯಾ ಇನ್ನೊಂದು ಮಾತಿನಲ್ಲಿ ಮೂರುವರೆ ಕಾಲಗಳು ಎಂದು ಕರೆಯುತ್ತದೆ. ವಾಸ್ತವದಲ್ಲಿ ಎರಡು ಪದಪ್ರಯೋಗಗಳು ಮೂರುವರೆ ವರ್ಷಗಳಿಗೆ ಸೂಚಿಸುತ್ತಾ, ಉತ್ತರಾರ್ಧ ಗೋಳದಲ್ಲಿ 1919ರ ವಸಂತಕಾಲದಿಂದ ಹಿಡಿದು 1922ರ ಶರತ್ಕಾಲದ ತನಕ ಚಾಚಿತ್ತು. ಇದು ಪುನಃ ಸ್ಥಾಪಿಸಲ್ಪಟ್ಟ ಯೋಹಾನ ವರ್ಗದವರಿಗೆ ಚೇತೋಹಾರಿ ವಿರಾಮ ಮತ್ತು ಪುನಃ ಸಂಘಟನೆಗೆ ಒಂದು ಸಮಯಾವಧಿಯಾಗಿತ್ತು.
27. (ಎ) ಯೋಹಾನನ ವರದಿಗನುಸಾರ, 1922ರ ಅನಂತರ ಘಟಸರ್ಪನು ಏನನ್ನು ಮಾಡಿದನು? (ಬಿ) ಸಾಕ್ಷಿಗಳ ವಿರುದ್ಧ ಹಿಂಸೆಯ ಪ್ರವಾಹವನ್ನೇ ಕಾರುವುದರಲ್ಲಿ ಸೈತಾನನ ಉದ್ದೇಶವೇನಾಗಿತ್ತು?
27 ಘಟಸರ್ಪವು ಬಿಟ್ಟುಕೊಡಲಿಲ್ಲ! “ಮತ್ತು ಸ್ತ್ರೀಯು ನದಿಯಿಂದ ಮುಳುಗಿಸಲ್ಪಡುವಂತೆ ಆ ಸರ್ಪ ಆಕೆಯ ಹಿಂದೆ ತನ್ನ ಬಾಯೊಳಗಿಂದ ನೀರನ್ನು ನದಿಯಂತೆ ಬಿಟ್ಟಿತು.” (ಪ್ರಕಟನೆ 12:15, NW) “ನದಿಯಂತೆ ನೀರು” ಯಾ “ನೀರಿನ ಪ್ರವಾಹ” (ದ ನ್ಯೂ ಇಂಗ್ಲಿಷ್ ಬೈಬಲ್) ಎಂಬುದರ ಅರ್ಥವೇನು? ಪ್ರಾಚೀನ ಅರಸನಾದ ದಾವೀದನು ತನ್ನನ್ನು ವಿರೋಧಿಸಿದ ದುಷ್ಟಜನರನ್ನು “ನಾಶಪ್ರವಾಹವು (ನಿಷ್ಪ್ರಯೋಜಕ ಮನುಷ್ಯರ ಮಿಂಚಿನಂಥ ನೆರೆಗಳು, NW)” [“ಅಯೋಗ್ಯರ ಪ್ರವಾಹಗಳು,” ಯಂಗ್] ಎಂದು ಮಾತಾಡಿರುತ್ತಾನೆ. (ಕೀರ್ತನೆ 18:4, 5, 16, 17) ಸೈತಾನನು ಈಗ ಬಿಡುಗಡೆಗೊಳಿಸುವುದು ತದ್ರೀತಿಯಲ್ಲಿ ಅಯೋಗ್ಯರ ಯಾ “ನಿಷ್ಪ್ರಯೋಜಕ ಮನುಷ್ಯರ” ಹಿಂಸೆಯಾಗಿರುತ್ತದೆ. ಇಸವಿ 1922ರ ಅನಂತರ ಸಾಕ್ಷಿಗಳ ವಿರುದ್ಧ ಹಿಂಸೆಯ ಪ್ರವಾಹವನ್ನೇ ಸೈತಾನನು ಕಾರಿದನು. (ಮತ್ತಾಯ 24:9-13) ಇದರಲ್ಲಿ ದೈಹಿಕ ಹಿಂಸಾಚಾರ, “ಕಾನೂನಿನ ಮೂಲಕ ಕೇಡುಕಲ್ಪಿಸುವುದು,” ಸೆರೆಮನೆಗೆ ಹಾಕುವುದು, ಮತ್ತು ನೇತುಹಾಕುವುದರ ಮೂಲಕ, ಗುಂಡೇಟಿನ ಮೂಲಕ, ಮತ್ತು ಶಿರಚ್ಛೇದನ ಮಾಡುವುದರ ಮೂಲಕ ಹತಿಸುವುದೂ ಸೇರಿತ್ತು. (ಕೀರ್ತನೆ 94:20, NW) ಕೀಳ್ಮಟ್ಟಕ್ಕೆ ಇಳಿಸಲ್ಪಟ್ಟ ಸೈತಾನನು, ದೇವರ ಸ್ವರ್ಗೀಯ ಸ್ತ್ರೀಯ ಬಳಿಗೆ ನೇರವಾಗಿ ಹೋಗಲು ಈಗ ನಿರ್ಬಂಧಿಸಲ್ಪಟ್ಟಿರುವುದರಿಂದ, ನೇರವಾಗಿ ಯಾ ಅವರ ಸಮಗ್ರತೆಯನ್ನು ಮುರಿಯುವ ಮೂಲಕ ದೇವರ ಪ್ರಸನ್ನತೆಯನ್ನು ಅವರು ಕಳಕೊಳ್ಳುವಂತೆ ಮಾಡುವುದರ ಮೂಲಕ ಭೂಮಿಯ ಮೇಲೆ ಅವಳ ಸಂತಾನದ ಉಳಿಕೆಯವರನ್ನು ಆಕ್ರಮಿಸಲು ಮತ್ತು ಅವರನ್ನು ನಾಶಗೊಳಿಸಲು ರೌದ್ರಾವೇಶದಿಂದ ಸಜ್ಜಿತನಾದನು. ಆದರೆ ಅವರ ನಿರ್ಧಾರವು ಯೋಬನದ್ದಕ್ಕೆ ಸಮಾನವಾಗಿತ್ತು: “ಸಾಯುವ ತನಕ ನನ್ನ ಯಥಾರ್ಥತ್ವದ ಹೆಸರನ್ನು ಕಳಕೊಳ್ಳೆನು.”—ಯೋಬ 27:5.
28. ಹಿಂಸೆಯ ಪ್ರವಾಹವು ಎರಡನೆಯ ಲೋಕ ಯುದ್ಧದ ಸಮಯದಲ್ಲಿ ಉನ್ನತ ಬಿಂದುವಿಗೆ ತಲುಪಿದ್ದು ಹೇಗೆ?
28 ಈ ಕ್ರೂರವಾದ ಹಿಂಸೆಯ ಪ್ರವಾಹವು ಎರಡನೆಯ ಲೋಕ ಯುದ್ಧದ ಸಮಯದಲ್ಲಿ ಉನ್ನತ ಬಿಂದುವನ್ನು ಮುಟ್ಟಿತು. ಯೂರೋಪಿನಲ್ಲಿ ಸುಮಾರು ಹತ್ತು ಸಾವಿರದಷ್ಟು ಸಾಕ್ಷಿಗಳು ನಾಜಿ ಶಿಬಿರಕೂಟಗಳಲ್ಲಿ ಸೆರೆಯಲ್ಲಿಡಲ್ಪಟ್ಟರು, ಮತ್ತು ಸಾವಿರಾರು ಮಂದಿ ಸತ್ತರು. ಇಟೆಲಿ, ಜಪಾನ್, ಕೊರಿಯ, ಮತ್ತು ಟೈವಾನ್ಗಳನ್ನು ಆಳಿದ ಯುದ್ಧ ಸೇನಾಪತಿಗಳ ಕೆಳಗೆ ನಂಬಿಗಸ್ತ ಸಾಕ್ಷಿಗಳು ತದ್ರೀತಿಯ ಕ್ರೂರ ಉಪಚಾರವನ್ನು ಅನುಭವಿಸಿದರು. ಪ್ರಜಾಪ್ರಭುತ್ವಗಳೆಂದು ಕರೆಯಲ್ಪಡುವ ದೇಶಗಳಲ್ಲಿ ಸಹ, ಸಾಕ್ಷಿಗಳಿಗೆ ಕ್ಯಾತೊಲಿಕ್ ಆ್ಯಕ್ಷನ್ ತಂಡಗಳಿಂದ ಟಾರು ಬಳಿದು ಹಕ್ಕಿಗರಿಗಳನ್ನು ಅಂಟಿಸಲಾಯಿತು, ಮತ್ತು ನಗರದಿಂದ ಹೊರಗೆ ಒದ್ದೋಡಿಸಲಾಯಿತು. ಕ್ರೈಸ್ತ ಸಮ್ಮೇಳನಗಳನ್ನು ಮುರಿದು ಭಂಗಗೊಳಿಸಲಾಯಿತು ಮತ್ತು ಸಾಕ್ಷಿಗಳ ಮಕ್ಕಳನ್ನು ಶಾಲೆಯಿಂದ ಹೊರಗೆ ಹಾಕಲಾಯಿತು.
29. (ಎ) ಅನಿರೀಕ್ಷಿತ ಉಗಮದಿಂದ ಪರಿಹಾರ ಆಗಮಿಸಿದ್ದನ್ನು ಯೋಹಾನನು ಹೇಗೆ ವರ್ಣಿಸುತ್ತಾನೆ? (ಬಿ) “ಭೂಮಿಯು ಸ್ತ್ರೀಯ ಸಹಾಯಕ್ಕೆ ಬಂದದ್ದು” ಹೇಗೆ? (ಸಿ) ಘಟಸರ್ಪನು ಏನನ್ನು ಮಾಡುವುದನ್ನು ಮುಂದರಿಸಿದ್ದಾನೆ?
29 ಪರಿಹಾರವು ಅನಿರೀಕ್ಷಿತ ಉಗಮದಿಂದ ಆಗಮಿಸಿತು: “ಆದರೆ ಭೂಮಿಯು ಆ ಸ್ತ್ರೀಯ ಸಹಾಯಕ್ಕೆ ಬಂತು, ಮತ್ತು ಭೂಮಿಯು ತನ್ನ ಬಾಯಿ ತೆರೆಯಿತು ಮತ್ತು ಘಟಸರ್ಪವು ಅದರ ಬಾಯೊಳಗಿಂದ ಬಿಟ್ಟ ನದಿಯನ್ನು ಕುಡಿದುಬಿಟ್ಟಿತು. ಮತ್ತು ಘಟಸರ್ಪವು ಸ್ತ್ರೀಯ ಮೇಲೆ ಕೋಪಿಸಿಕೊಂಡು, ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ ದೇವರ ಆಜ್ಞೆಗಳನ್ನು ಕೈಕೊಂಡು ನಡೆಯುವವರ ಮತ್ತು ಯೇಸುವಿನ ವಿಷಯವಾದ ಸಾಕ್ಷಿಯ ಕಾರ್ಯವನ್ನು ಮಾಡುವವರ ಮೇಲೆ ಯುದ್ಧಮಾಡುವುದಕ್ಕೆ ಹೊರಟಿತು.” (ಪ್ರಕಟನೆ 12:16, 17, NW) “ಭೂಮಿ”—ಸೈತಾನನ ಸ್ವಂತ ವಿಷಯಗಳ ವ್ಯವಸ್ಥೆಯ ಮೂಲಾಂಶಗಳು—“ನದಿ” ಯನ್ನು ಯಾ “ಪ್ರವಾಹ” ವನ್ನು ಕುಡಿದು ಬಿಡಲು ಆರಂಭಿಸಿತು. ಇಸವಿ 1940 ಗಳಲ್ಲಿ ಸಾಕ್ಷಿಗಳು ಅಮೆರಿಕದ ಸುಪ್ರೀಂ ಕೋರ್ಟಿನಲ್ಲಿ ಮತ್ತು ಇನ್ನಿತರ ಕೆಲವು ದೇಶಗಳಲ್ಲಿ ಆಳುವ ಅಧಿಕಾರಗಳಿಂದ ಆರಾಧನೆಯ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಕೆಲವು ಅನುಕೂಲಕರ ತೀರ್ಪುಗಳನ್ನು ಪಡೆದರು. ಕಟ್ಟಕಡೆಗೆ, ಮಿತ್ರ ರಾಷ್ಟ್ರಗಳು ನಾಜಿ-ಫ್ಯಾಷಿಸ್ಟ್ ರಥವನ್ನು ನುಂಗಿಹಾಕಿದವು. ಆ ಮೂಲಕ ಕ್ರೂರ ನಿರಂಕುಶಾಧಿಕಾರಿಗಳ ಕೆಳಗೆ ಬಾಧಿಸಲ್ಪಡುತ್ತಿದ್ದ ಸಾಕ್ಷಿಗಳ ಬಿಡುಗಡೆ ಸಾಧ್ಯವಾಯಿತು. ಹಿಂಸೆಗಳು ಒಮ್ಮೆಲೇ ನಿಲ್ಲಲಿಲ್ಲ, ಯಾಕಂದರೆ ಘಟಸರ್ಪದ ಕ್ರೋಧವು ಇಂದಿನ ತನಕವೂ ಮುಂದರಿದದೆ, ಮತ್ತು ಅವನು “ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳಿರುವವರ” ವಿರುದ್ಧವಾಗಿ ಯುದ್ಧವನ್ನು ಜಾರಿಯಲ್ಲಿಟ್ಟರುತ್ತಾನೆ. ಅನೇಕ ದೇಶಗಳಲ್ಲಿ, ನಿಷ್ಠಾವಂತ ಸಾಕ್ಷಿಗಳು ಇನ್ನೂ ಸೆರೆಮನೆಗಳಲ್ಲಿ ಇದ್ದಾರೆ, ಮತ್ತು ಅವರ ಸಮಗ್ರತೆಯ ಕಾರಣ ಕೆಲವರು ಇನ್ನೂ ಸಾಯುತ್ತಾ ಇದ್ದಾರೆ. ಆದರೆ ಇವುಗಳಲ್ಲಿನ ಕೆಲವು ದೇಶಗಳಲ್ಲಿ, ಸಮಯ ಸಮಯಕ್ಕೆ ಅಧಿಕಾರಿಗಳು ತಮ್ಮ ಒತ್ತಡವನ್ನು ಸಡಿಲಗೊಳಿಸಿರುತ್ತಾರೆ, ಮತ್ತು ಸಾಕ್ಷಿಗಳು ಸ್ವಾತಂತ್ರ್ಯವನ್ನು ಅಧಿಕ ಮಟ್ಟದಲ್ಲಿ ಅನುಭವಿಸುತ್ತಿದ್ದಾರೆ.c ಈ ರೀತಿ, ಪ್ರವಾದನೆಯ ನೆರವೇರಿಕೆಯಲ್ಲಿ, ಭೂಮಿಯು ಹಿಂಸೆಯ ನದಿಯನ್ನು ಕುಡಿದುಬಿಡುವುದನ್ನು ಮುಂದರಿಸಿದೆ.
30. (ಎ) ಏನು ಸಂಭವಿಸುವಂತೆ ಭೂಮಿಯು ಸಾಕಾಗುವಷ್ಟು ಪರಿಹಾರ ಒದಗಿಸಿದೆ? (ಬಿ) ದೇವರ ಜನರ ಸಮಗ್ರತೆಯು ಯಾವದರಲ್ಲಿ ಪರಿಣಮಿಸುತ್ತದೆ?
30 ಈ ರೀತಿಯಲ್ಲಿ, 200 ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ದೇವರ ಕಾರ್ಯವನ್ನು ವಿಸ್ತರಿಸಲು ಮತ್ತು ಸುವಾರ್ತೆಯ ನಾಲ್ವತ್ತು ಲಕ್ಷಕ್ಕಿಂತಲೂ ಹೆಚ್ಚು ನಂಬಿಗಸ್ತ ಸುವಾರ್ತಿಕರನ್ನು ಉತ್ಪಾದಿಸಲು ಸಾಕಾಗುವಷ್ಟು ಪರಿಹಾರವನ್ನು ಭೂಮಿಯು ಅನುಮತಿಸಿದೆ. ಸ್ತ್ರೀಯ ಸಂತಾನದ ಉಳಿದವರೊಂದಿಗೆ, ಹೊಸ ವಿಶ್ವಾಸಿಗಳ ಒಂದು ಮಹಾ ಅಂತಾರಾಷ್ಟ್ರೀಯ ಸಮೂಹವು ಲೋಕದಿಂದ ಪ್ರತ್ಯೇಕವಾಗಿರುವ, ಶುದ್ಧ ನೈತಿಕತೆಗಳ, ಮತ್ತು ಸಹೋದರರ ಪ್ರೀತಿಯ ದೇವರ ಆಜ್ಞೆಗಳನ್ನು ಆಚರಿಸುತ್ತದೆ ಮತ್ತು ಮೆಸ್ಸೀಯ ಸಂಬಂಧಿತ ರಾಜ್ಯಕ್ಕೆ ಅವರು ಸಾಕ್ಷಿಗಳಾಗಿದ್ದಾರೆ. ಅವರ ಸಮಗ್ರತೆಯು ಸೈತಾನನ ಅವಮಾನಕಾರಿ ಪಂಥಾಹ್ವಾನಕ್ಕೆ ಉತ್ತರವನ್ನು ನೀಡುತ್ತದೆ, ಆ ಮೂಲಕ ಸೈತಾನನಿಗೆ ಮತ್ತು ಅವನ ವಿಷಯಗಳ ವ್ಯವಸ್ಥೆಗೆ ಮರಣಗಂಟೆಯು ಬಾಜಿಸಲ್ಪಡುತ್ತದೆ.—ಜ್ಞಾನೋಕ್ತಿ 27:11.
[ಅಧ್ಯಯನ ಪ್ರಶ್ನೆಗಳು]
a ಮಾಂಸಿಕ ಇಸ್ರಾಯೇಲ್ಯರ 12 ಕುಲಗಳನ್ನು, 12 ಅಪೊಸ್ತಲರನ್ನು, ಆತ್ಮಿಕ ಇಸ್ರಾಯೇಲ್ಯರ 12 ಕುಲಗಳನ್ನು, ಮತ್ತು 12 ಬಾಗಿಲುಗಳನ್ನು, 12 ದೇವದೂತರನ್ನು, ಮತ್ತು ಹೊಸ ಯೆರೂಸಲೇಮಿನ 12 ಕಲ್ಲಿನ ಅಸ್ತಿವಾರಗಳನ್ನು ಹೋಲಿಸಿರಿ.—ಪ್ರಕಟನೆ 21:12-14.
b ಆದಾಗ್ಯೂ ಗಮನಿಸಿರಿ, ಪ್ರಕಟನೆ 12:9 ರಲ್ಲಿ “ಮಹಾ ಘಟಸರ್ಪ . . . ಮತ್ತು ಅದರ ದೂತರ” ಕುರಿತು ಮಾತಾಡುತ್ತದೆ. ಆದುದರಿಂದ ಪಿಶಾಚನು ಸ್ವತಃ ತನ್ನನ್ನು ಒಬ್ಬ ಕೃತ್ರಿಮ ದೇವರನ್ನಾಗಿ ಮಾಡಿಕೊಳ್ಳುವುದು ಮಾತ್ರವಲ್ಲದೆ ಒಬ್ಬ ಪ್ರಧಾನ ದೇವದೂತನಾಗಲು ಸಹ ಪ್ರಯತ್ನಿಸುತ್ತಾನೆ, ಆದರೂ ಬೈಬಲು ಅವನಿಗೆ ಆ ಬಿರುದನ್ನು ಎಂದಿಗೂ ಕೊಟ್ಟಿಲ್ಲ.
c ಅನೇಕ ದೇಶಗಳ ವರಿಷ್ಠ ನ್ಯಾಯಾಲಯಗಳು ಯೆಹೋವನ ಸಾಕ್ಷಿಗಳಿಗೆ ಪರಿಹಾರವನ್ನು ಒದಗಿಸಿವೆ; ಈ ತೀರ್ಪುಗಳಲ್ಲಿ ಕೆಲವನ್ನು ಪುಟ 92ರ ಬಾಕ್ಸ್ನಲ್ಲಿ ನಮೂದಿಸಲಾಗಿದೆ.
[ಪುಟ 296 ರಲ್ಲಿರುವ ಚೌಕ]
“ಭೂಮಿಯು ಬಾಯಿತೆರೆಯಿತು”
ಸೈತಾನನ ಹಿಂಸೆಯ ಮಿಂಚಿನ ಪ್ರವಾಹವು ಅಭಿಷಿಕ್ತ ಕ್ರೈಸ್ತರ ಮತ್ತು ಅವರ ಅನುಯಾಯಿಗಳ ಮೇಲೆ ಅನೇಕ ದೇಶಗಳಲ್ಲಿ ಹರಿಸಲ್ಪಟ್ಟಿತು. ಆದರೂ ಆಗಾಗ್ಗೆ, ಸ್ವತಃ ಸೈತಾನನ ವಿಷಯಗಳ ವ್ಯವಸ್ಥೆಯೊಳಗಿನ ಬೆಳವಣಿಗೆ ಆ ಪ್ರವಾಹವನ್ನು ಕುಡಿದುಬಿಡುವಂತಹ ಪರಿಣಾಮಗಳನ್ನುಂಟುಮಾಡಿದೆ.
ಅಮೆರಿಕದಲ್ಲಿ ದೊಂಬಿಗಲಭೆಗಳ ಮತ್ತು ಸೆರೆಮನೆಗೆ ಹಾಕುವ ಪ್ರವಾಹವು ಅಧಿಕಾಂಶವಾಗಿ 1940 ಗಳ ಸುಪ್ರೀಂ ಕೋರ್ಟಿನ ಅನುಕೂಲಕರ ತೀರ್ಪುಗಳ ಮೂಲಕ ಕುಡಿದುಬಿಡಲ್ಪಟ್ಟವು.
1945: ಜರ್ಮನಿ ಮತ್ತು ಜಪಾನ್ನಿಂದ ನಿಯಂತ್ರಿಸಲ್ಪಡುತ್ತಿದ್ದ ಅನೇಕ ದೇಶಗಳಲ್ಲಿನ ಕ್ರೂರವಾದ ಹಿಂಸೆಯು ಎರಡನೆಯ ಲೋಕ ಯುದ್ಧದಲ್ಲಿ ಮಿತ್ರ ರಾಷ್ಟ್ರಗಳ ವಿಜಯಗಳಿಂದ ನಿಲ್ಲಿಸಲ್ಪಟ್ಟವು.
ಡೊಮಿನಿಕನ್ ರಿಪಬ್ಲಿಕ್ನಲ್ಲಿ ಯೆಹೋವನ ಸಾಕ್ಷಿಗಳ ಮೇಲೆ ನಿಷೇಧವು ಹಾಕಲ್ಪಟ್ಟಾಗ, ಸಾಕ್ಷಿಗಳನ್ನು ಸೆರೆಮನೆಗೆ ಹಾಕಲಾಯಿತು, ಛಡಿಗಳನ್ನು ಕೊಡಲಾಯಿತು, ಮತ್ತು ಕೋವಿಗಳ ಬುಡದಿಂದ ಹೊಡೆಯಲಾಯಿತು. ಇಸವಿ 1960 ರಲ್ಲಿ ನಿರಂಕುಶಾಧಿಕಾರಿ ರಫಾಯೇಲ್ ಟ್ರುಹೀಓ ಮತ್ತು ರೋಮನ್ ಕ್ಯಾತೊಲಿಕ್ ಚರ್ಚಿನ ನಡುವಿನ ಬಿರುಕು, ಯೆಹೋವನ ಸಾಕ್ಷಿಗಳ ಮೇಲಿನ ನಿಷೇಧವನ್ನು ಎತ್ತುವಂತೆ ನಡಿಸಿತು.
ನೈಜಿರೀಯದಲ್ಲಿ ಒಂದು ಆಂತರಿಕ ಯುದ್ಧದ ಸಮಯದಲ್ಲಿ ಸಾಕ್ಷಿಗಳ ಮೇಲಿನ ಗುಂಡುಹೊಡೆಯುವಿಕೆ, ಕೊಳ್ಳಿಯಿಡುವಿಕೆ, ಬಲಾತ್ಕಾರ ಸಂಭೋಗಿಸುವಿಕೆ, ಹಿಂಸಿಸುವಿಕೆ ಮತ್ತು ಕೊಲ್ಲುವಿಕೆಯು 1970 ರಲ್ಲಿ ನಿಲ್ಲಿಸಲ್ಪಟ್ಟಿತು, ಆಗ ಸರಕಾರದ ಸೇನೆಗಳು ಎಲ್ಲಿ ಈ ಸಂಗತಿಗಳು ನಡೆಯುತ್ತಿದ್ದವೋ ಆ ಪ್ರತ್ಯೇಕಿಸಿಕೊಂಡ ಪ್ರಾಂತ್ಯವನ್ನು ಪುನಃ ವಶಪಡಿಸಿಕೊಂಡದ್ದರಿಂದ ಇದಾಯಿತು.
ಸ್ಪೆಯಿನ್ನಲ್ಲಿ ಮನೆಗಳಿಗೆ ಮುತ್ತಿ, ಕ್ರೈಸ್ತರಿಗೆ ದಂಡನೆಯನ್ನೂ, ಸೆರಮನೆವಾಸವನ್ನೂ ದೇವರ ಕುರಿತು ಮಾತಾಡಿದ ಮತ್ತು ಕ್ರೈಸ್ತ ಕೂಟಗಳನ್ನು ನಡಿಸಿದ “ಪಾತಕ” ಗಳಿಗಾಗಿ ವಿಧಿಸಲಾಯಿತು. ಈ ಹಿಂಸೆಯು ಕೊನೆಗೆ 1970 ರಲ್ಲಿ ಕ್ಯಾತೊಲಿಕರಲ್ಲದ ಧರ್ಮಗಳ ಕಡೆಗೆ ಸರಕಾರದ ಪರಿವರ್ತಿತ ಧೋರಣೆಯ ಫಲವಾಗಿ ಯೆಹೋವನ ಸಾಕ್ಷಿಗಳು ಕಾನೂನುಬದ್ಧವಾಗಿ ನೋಂದಣಿಮಾಡಿಕೊಳ್ಳುವಂತೆ ಅನುಮತಿಸಲ್ಪಟ್ಟರು.
ಪೋರ್ಚುಗಲಿನಲ್ಲಿ ನೂರಾರು ಮನೆಗಳನ್ನು ವಾರಂಟ್ ಇಲ್ಲದೆ ಜಪ್ತಿಮಾಡಲಾಯಿತು. ಸಾಕ್ಷಿಗಳನ್ನು ದೈಹಿಕವಾಗಿ ಗಾಯಗೊಳಿಸಲಾಯಿತು ಮತ್ತು ಸೆರೆಮನೆಗೆ ಹಾಕಲಾಯಿತು, ಮತ್ತು ಅವರ ಬೈಬಲುಗಳನ್ನು ವಶಪಡಿಸಿಕೊಳ್ಳಲಾಯಿತು. ಈ ಭಯವಾದವನ್ನು 1974 ರಲ್ಲಿ ‘ಕುಡಿದುಬಿಡಲಾಯಿತು’ ಆಗ ಮಿಲಿಟರಿ ಕ್ರಾಂತಿಯು ಸರಕಾರದ ಬದಲಾವಣೆಗೆ ನಡಿಸಿತು ಮತ್ತು ಸಮ್ಮೇಳನವಾಗಿ ಕೂಡುವುದರ ಸ್ವಾತಂತ್ರ್ಯವನ್ನು ನೀಡುವ ಕಾನೂನು ಮಂಜೂರಾಯಿತು.
ಆರ್ಜೆಂಟೀನದಲ್ಲಿ, ಮಿಲಿಟರಿ ಸರಕಾರದ ಕೆಳಗೆ, ಯೆಹೋವನ ಸಾಕ್ಷಿಗಳ ಮಕ್ಕಳು ಶಾಲೆಗಳಿಂದ ಹೊರಗೆ ಹಾಕಲ್ಪಟ್ಟರು, ಮತ್ತು ದೇಶದ ಸುತ್ತಲೂ ಇರುವ ಸಾಕ್ಷಿಗಳನ್ನು ಸುವಾರ್ತೆಯನ್ನು ಸಾರಿದ್ದಕ್ಕಾಗಿ ದಸ್ತಗಿರಿಮಾಡಲಾಯಿತು. ಕೊನೆಗೆ ಈ ಹಿಂಸೆಯು 1984 ರಲ್ಲಿ ಕೊನೆಗೊಂಡಿತು, ಆಗ ಆಳುವ ಸರಕಾರವು ಕಾನೂನುಬದ್ಧವಾಗಿ ಯೆಹೋವನ ಸಾಕ್ಷಿಗಳ ಸಂಘಟನೆಯನ್ನು ಮಾನ್ಯಮಾಡಿತು.
[Diagram on page 183]
1914 ರಾಜ್ಯದ ಜನನ
1919 ಹೊಸ ಜನಾಂಗದ ಜನನ
1919-1922 ಪುನಶ್ಚೈತನ್ಯದ ಸಮಯಾವಧಿ
1922- ಹಿಂಸೆಯ ಪ್ರವಾಹ
[ಪುಟ 293 ರಲ್ಲಿರುವ ಚಿತ್ರಗಳು]
ಭೂಮಿಗೆ ವಿಪತ್ತು