ಅಧ್ಯಾಯ 12
“ನಿನಗಿರುವುದನ್ನು ಬಿಗಿಯಾಗಿ ಹಿಡಿದುಕೊಂಡಿರು”
ಫಿಲದೆಲ್ಫಿಯ
1. ಯೇಸುವಿನ ಆರನೆಯ ಸಂದೇಶವು ಯಾವ ನಗರದಲ್ಲಿರುವ ಸಭೆಗೆ ನಿರ್ದೇಶಿಸಲ್ಪಟ್ಟಿತ್ತು, ಮತ್ತು ಆ ನಗರದ ಹೆಸರಿನ ಅರ್ಥವೇನು?
ಸಹೋದರ ವಾತ್ಸಲ್ಯ—ಎಂತಹ ಒಂದು ಅಪೇಕ್ಷಣೀಯ ಗುಣ! ತನ್ನ ಆರನೆಯ ಸಂದೇಶವನ್ನು ಫಿಲದೆಲ್ಫಿಯದ ಸಭೆಗೆ ಸಾದರಪಡಿಸುವಾಗ ಯೇಸುವಿನ ಮನಸ್ಸಿನಲ್ಲಿ ಅದು ಇತ್ತು ಎನ್ನುವುದರಲ್ಲಿ ಸಂದೇಹವಿಲ್ಲ, ಯಾಕಂದರೆ ಆ ಹೆಸರಿನ ಅರ್ಥವು “ಸಹೋದರ ವಾತ್ಸಲ್ಯ” ಎಂದಾಗಿದೆ. ವೃದ್ಧ ಯೋಹಾನನು ಸುಮಾರು 60 ವರ್ಷಗಳ ಹಿಂದೆ, ಪೇತ್ರನು ಮೂರು ಬಾರಿ ಯೇಸುವಿಗೆ, ಅವನಿಗೆ ಅಂದರೆ ಪೇತ್ರನಿಗೆ ಅವನ ಕರ್ತನ ಕಡೆಗೆ ಉತ್ಸಾಹದ ವಾತ್ಸಲ್ಯವಿದೆ ಎಂದು ಪಟ್ಟು ಹಿಡಿದು ಹೇಳಿದ ಸಂದರ್ಭವನ್ನು ಇನ್ನೂ ನೆನಪಿಸುತ್ತಾನೆ. (ಯೋಹಾನ 21:15-17) ಫಿಲದೆಲ್ಫಿಯದಲ್ಲಿರುವ ಕ್ರೈಸ್ತರು ಅವರ ವತಿಯಿಂದ, ಸಹೋದರ ವಾತ್ಸಲ್ಯವನ್ನು ತೋರಿಸುತ್ತಿದ್ದಾರೋ? ತೋರಿಸುತ್ತಿದ್ದಾರೆ ಎಂದು ತೋರುತ್ತದೆ!
2. ಫಿಲದೆಲ್ಫಿಯವು ಯಾವ ವಿಧದ ನಗರವಾಗಿತ್ತು, ಯಾವ ವಿಧದ ಸಭೆಯು ಅಲ್ಲಿ ನೆಲಸಿತ್ತು, ಮತ್ತು ಈ ಸಭೆಯ ದೂತನಿಗೆ ಯೇಸುವು ಏನು ಹೇಳುತ್ತಾನೆ?
2 ಸಾರ್ದಿಸಿನಿಂದ ಸುಮಾರು 30 ಮೈಲು ಆಗ್ನೇಯದಲ್ಲಿದ್ದ (ಆಧುನಿಕ ಟರ್ಕಿಶ್ ನಗರವಾದ ಆಲಶಹರ್ನ ನಿವೇಶನ) ಯೋಹಾನನ ದಿನದ ಫಿಲದೆಲ್ಫಿಯವು ಸರ್ವಸಾಮಾನ್ಯವಾಗಿ ಒಂದು ಏಳಿಗೆ ಹೊಂದಿರುವ ನಗರವಾಗಿದೆ. ಆದಾಗ್ಯೂ, ಇನ್ನೂ ಗಮನಾರ್ಹವಾದದ್ದು ಅಲ್ಲಿನ ಕ್ರೈಸ್ತ ಸಭೆಯ ಅಭಿವೃದ್ಧಿಯೇ. ಸಾರ್ದಿಸಿನ ದಾರಿಯಿಂದ ಪ್ರಯಾಣ ಮಾಡುತ್ತಾ ಬಂದ ಶುಶ್ರೂಷಕನನ್ನು ಅವರು ಎಂತಹ ಆನಂದದಿಂದ ಸ್ವಾಗತಿಸಿರಬೇಕು! ಅವನು ತಂದಿರುವ ಸಂದೇಶದಲ್ಲಿ ಅವರನ್ನು ಪ್ರಚೋದಿಸುವ ಬುದ್ಧಿವಾದವು ಇತ್ತು. ಆದರೆ ಮೊದಲು ಅದು ಅದರ ಆದರ್ಶಪ್ರಾಯ ಕಳುಹಿಸಿದಾತನ ಅಧಿಕಾರವನ್ನು ಸೂಚಿಸುತ್ತದೆ. ಅವನು ಹೇಳುವುದು: “ಮತ್ತು ಫಿಲದೆಲ್ಫಿಯದ ಸಭೆಯ ದೂತನಿಗೆ ಬರೆ: ಪವಿತ್ರನೂ, ಸತ್ಯವಂತನೂ, ದಾವೀದನ ಬೀಗದ ಕೈಯುಳ್ಳವನೂ, ಯಾರೂ ಮುಚ್ಚಲಾಗದಂತೆ ತೆರೆಯುವವನೂ, ಮತ್ತು ಯಾರೂ ತೆರೆಯಲಾಗದಂತೆ ಮುಚ್ಚುವವನೂ ಆಗಿರುವಾತನು ಈ ವಿಷಯಗಳನ್ನು ಹೇಳುತ್ತಾನೆ.”—ಪ್ರಕಟನೆ 3:7, NW.
3. ಯೇಸುವನ್ನು “ಪವಿತ್ರನು” ಎಂದು ಕರೆಯಬೇಕಾಗಿರುವುದು ಯಾಕೆ ತಕ್ಕದ್ದಾಗಿದೆ, ಮತ್ತು ಅವನು “ಸತ್ಯವಂತನು” ಎಂದು ಹೇಗೆ ಹೇಳಸಾಧ್ಯವಿದೆ?
3 ಮನುಷ್ಯನಾದ ಯೇಸು ಕ್ರಿಸ್ತನಿಗೆ ಪೇತ್ರನು ಹೀಗೆ ಹೇಳಿದ್ದನ್ನು ಯೋಹಾನನು ಕೇಳಿದ್ದನು: “ನಿನ್ನಲ್ಲಿ ನಿತ್ಯ ಜೀವದ ವಾಕ್ಯಗಳಿವೆ; ಮತ್ತು ನೀನು ದೇವರ ಪವಿತ್ರನು ಎಂದು ನಾವು ನಂಬಿದ್ದೇವೆ ಮತ್ತು ತಿಳಿದಿದ್ದೇವೆ.” (ಯೋಹಾನ 6:68, 69, NW) ಪವಿತ್ರತೆಯ ಮೂಲ ಸ್ವತವೇ ಯೆಹೋವ ದೇವರಾಗಿರುವುದರಿಂದ, ಅವನ ಏಕ-ಜಾತ ಪುತ್ರನೂ “ಪವಿತ್ರ”ನಾಗಿರಲೇ ಬೇಕು. (ಪ್ರಕಟನೆ 4:8) ಯೇಸುವು “ಸತ್ಯವಂತನೂ” ಕೂಡ ಆಗಿದ್ದಾನೆ. ಇಲ್ಲಿ ಉಪಯೋಗಿಸಲ್ಪಟ್ಟ ಗ್ರೀಕ್ (ಅ-ಲಿ-ಥಿ-ನೊಸ್) ಶಬ್ದದಲ್ಲಿ ಸಾಚತನವು ಸೇರಿರುತ್ತದೆ. ಈ ಅರ್ಥದಲ್ಲಿ, ಯೇಸುವು ನಿಜವಾದ ಬೆಳಕು ಮತ್ತು ಪರಲೋಕದಿಂದ ಇಳಿದುಬಂದ ನಿಜವಾದ ರೊಟ್ಟಿಯು ಆಗಿರುತ್ತಾನೆ. (ಯೋಹಾನ 1:9; 6:32) ಅವನು ನಿಜವಾದ ದ್ರಾಕ್ಷೇಬಳ್ಳಿಯಾಗಿರುತ್ತಾನೆ. (ಯೋಹಾನ 15:1) ನಂಬಲರ್ಹನು ಎಂಬ ಅರ್ಥದಲ್ಲಿಯೂ ಯೇಸು ಸತ್ಯವಂತನಾಗಿದ್ದಾನೆ. ತಾನು ಯಾವಾಗಲೂ ಸತ್ಯವನ್ನೇ ಆಡುತ್ತಾನೆ. (ಯೋಹಾನ 8:14, 17, 26 ನೋಡಿರಿ.) ರಾಜ ಮತ್ತು ನ್ಯಾಯಾಧಿಪತಿಯಾಗಿ ಸೇವೆ ಸಲ್ಲಿಸಲು ಈ ದೇವರ ಮಗನು ಖಂಡಿತವಾಗಿಯೂ ಯೋಗ್ಯನಾಗಿರುತ್ತಾನೆ.—ಪ್ರಕಟನೆ 19:11, 16.
“ದಾವೀದನ ಬೀಗದ ಕೈ”
4, 5. “ದಾವೀದನ ಬೀಗದ ಕೈ” ಯಾವ ಒಡಂಬಡಿಕೆಯೊಂದಿಗೆ ಜೋಡಿಸಲ್ಪಟ್ಟಿತ್ತು?
4 ಯೇಸುವಿನ ಹತ್ತಿರ “ದಾವೀದನ ಬೀಗದ ಕೈ” ಇದೆ. ಅದನ್ನು ಉಪಯೋಗಿಸಿ, “ಯಾರೂ ಮುಚ್ಚಲಾಗದಂತೆ ತೆರೆಯುತ್ತಾನೆ, ಮತ್ತು ಯಾರೂ ತೆರೆಯಲಾಗದಂತೆ ಮುಚ್ಚುತ್ತಾನೆ.” ಈ “ದಾವೀದನ ಬೀಗದ ಕೈ” ಅಂದರೆ ಏನು?
5 ಯೆಹೋವನು ಒಂದು ಶಾಶ್ವತ ರಾಜ್ಯಕ್ಕಾಗಿ ಇಸ್ರಾಯೇಲ್ಯರ ಅರಸನಾದ ದಾವೀದನೊಂದಿಗೆ ಒಡಂಬಡಿಕೆಯೊಂದನ್ನು ಮಾಡಿದ್ದನು. (ಕೀರ್ತನೆ 89:1-4, 34-37) ಯೆಹೋವನ ಸಿಂಹಾಸನದಲ್ಲಿ ದಾವೀದನ ಮನೆತನವು ಯೆರೂಸಲೇಮಿನಲ್ಲಿ ಸಾ. ಶ. ಪೂ. 1070 ರಿಂದ 607ರ ತನಕ ಆಡಳಿತೆ ನಡಿಸಿತು, ಆದರೆ ಅದು ದುಷ್ಟತನಕ್ಕೆ ತಿರುಗಿದರ್ದಿಂದ, ಅದರ ಮೇಲೆ ದೇವರ ನ್ಯಾಯ ತೀರ್ಪು ಆಗ ನಿರ್ವಹಿಸಲ್ಪಟ್ಟಿತು. ಹೀಗೆ ಯೆಹೋವನು ಯೆಹೆಜ್ಕೇಲ 21:27(NW)ರ ತನ್ನ ಪ್ರವಾದನೆಯನ್ನು ನೆರವೇರಿಸಲು ಆರಂಭಿಸಿದನು: “ಒಂದು ನಾಶನ, ನಾಶನ, ನಾಶನವಾಗಿ ನಾನು ಅದನ್ನು [ಐಹಿಕ ಯೆರೂಸಲೇಮ್] ಮಾಡುವೆನು. ಇದರ ಕುರಿತಾಗಿಯೂ ಕೂಡ, ಇದು [ದಾವೀದನ ವಂಶಾವಳಿಯಲ್ಲಿ ರಾಜತ್ವದ ದಂಡ] ಶಾಸನಸಮ್ಮತ ಹಕ್ಕು ಯಾರಿಗೆ ಇದೆಯೋ ಅವನು ಬರುವ ತನಕ, ಅದು ಯಾರದ್ದೂ ಆಗಿರುವುದಿಲ್ಲ, ಮತ್ತು ನಾನು ಅದನ್ನು ಅವನಿಗೆ ಕೊಡಬೇಕು.”
6, 7. “ಶಾಸನಸಮ್ಮತ ಹಕ್ಕು” ಉಳ್ಳವನು ಯಾವಾಗ ಮತ್ತು ಹೇಗೆ ಕಾಣಿಸಿಕೊಳ್ಳಲಿದ್ದನು?
6 “ಶಾಸನಸಮ್ಮತ ಹಕ್ಕು” ಉಳ್ಳವನು ಯಾವಾಗ ಮತ್ತು ಹೇಗೆ ತೋರಿಬರುವನು? ಅವನಿಗೆ ದಾವೀದನ ರಾಜತ್ವದ ರಾಜದಂಡವು ಹೇಗೆ ಕೊಡಲ್ಪಡುವುದು?
7 ಸುಮಾರು 600 ವರ್ಷಗಳ ಅನಂತರ, ರಾಜ ದಾವೀದನ ವಂಶಸ್ಥಳೊಬ್ಬಳಾದ, ಯೆಹೂದಿ ಕನ್ಯೆ ಮರಿಯಳು, ಪವಿತ್ರಾತ್ಮನ ಮೂಲಕವಾಗಿ ಗರ್ಭಿಣಿಯಾದಳು. ಯೇಸುವೆಂದು ಹೆಸರಿಸಬೇಕಾದ ಒಬ್ಬ ಮಗನನ್ನು ಅವಳು ಪಡೆಯಲಿರುವಳು ಎಂದು ಮರಿಯಳಿಗೆ ತಿಳಿಸುವಂತೆ ದೇವರು ಗಬ್ರಿಯೇಲ ದೂತನನ್ನು ಕಳುಹಿಸಿದನು. ಗಬ್ರಿಯೇಲನು ಕೂಡಿಸಿದ್ದು: “ಇವನು ಮಹಾ ಪುರುಷನಾಗುವನು ಮತ್ತು ಸರ್ವೂನ್ನತನ ಕುಮಾರನೆನಿಸಿಕೊಳ್ಳುವನು; ಮತ್ತು ಅವನ ತಂದೆಯಾದ ದಾವೀದನ ಸಿಂಹಾಸನವನ್ನು ಯೆಹೋವ ದೇವರು ಅವನಿಗೆ ಕೊಡುವನು, ಮತ್ತು ಯಾಕೋಬನ ಮನೆತನದ ಮೇಲೆ ರಾಜನಾಗಿ ಅವನು ಸದಾಕಾಲ ಆಳುವನು, ಮತ್ತು ಅವನ ರಾಜ್ಯಕ್ಕೆ ಅಂತ್ಯವೇ ಇಲ್ಲ.”—ಲೂಕ 1:31-33, NW.
8. ದಾವೀದನ ರಾಜತ್ವಕ್ಕೆ ಬಾಧ್ಯಸ್ಥನಾಗಲು ಯೇಸುವು ತನ್ನನ್ನು ಅರ್ಹನೆಂದು ರುಜುಪಡಿಸಿದ್ದು ಹೇಗೆ?
8 ಸಾ. ಶ. 29 ರಲ್ಲಿ ಯೇಸುವು ಯೊರ್ದನ್ ಹೊಳೆಯಲ್ಲಿ ದೀಕ್ಷಾಸ್ನಾನ ಹೊಂದಿದಾಗ, ಮತ್ತು ಪವಿತ್ರಾತ್ಮನಿಂದ ಅಭಿಷಿಕ್ತನಾದಾಗ, ಅವನು ದಾವೀದನ ವಂಶಾವಳಿಯಲ್ಲಿ ನಿಯುಕ್ತ ರಾಜನಾದನು. ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಅವನು ಆದರ್ಶಪ್ರಾಯ ಹುರುಪನ್ನು ತೋರಿಸಿದನು ಮತ್ತು ತದ್ರೀತಿಯಲ್ಲಿ ಸಾರಲು ಆತನ ಶಿಷ್ಯರನ್ನು ನಿಯೋಜಿಸಿದನು. (ಮತ್ತಾಯ 4:23; 10:7, 11) ಹಿಂಸಾಕಂಭದ ಮೇಲೆ ಸಾಯುವ ತನಕ ಯೇಸುವು ತನ್ನನ್ನು ತಗ್ಗಿಸಿಕೊಂಡನು, ಹೀಗೆ ದಾವೀದನ ರಾಜತ್ವವನ್ನು ಬಾಧ್ಯವಾಗಿ ಪಡೆಯಲು ಸಂಪೂರ್ಣವಾಗಿ ಅರ್ಹನಾಗಿದ್ದಾನೆ ಎಂದವನು ಸ್ವತಃ ರುಜುಪಡಿಸಿದನು. ಯೇಸುವನ್ನು ಅಮರ ಆತ್ಮನಾಗಿ ಯೆಹೋವನು ಪುನರುತ್ಥಾನಗೊಳಿಸಿದನು ಮತ್ತು ಪರಲೋಕದಲ್ಲಿ ಆತನ ಸ್ವಂತ ಬಲಗಡೆಯಲ್ಲಿ ಅವನನ್ನು ಘನತೆಗೇರಿಸಿದನು. ಅಲ್ಲಿ ಅವನು ದಾವೀದನ ರಾಜತ್ವದ ಎಲ್ಲಾ ಹಕ್ಕುಗಳಿಗೆ ಬಾಧ್ಯಸ್ಥನಾದನು. ಯುಕ್ತ ಸಮಯದಲ್ಲಿ “[ಅವನ] ವೈರಿಗಳ ಮಧ್ಯದಲ್ಲಿ ದೊರೆತನ ಮಾಡುವ” ತನ್ನ ಹಕ್ಕನ್ನು ಯೇಸುವು ಪ್ರಯೋಗಿಸುವನು.—ಕೀರ್ತನೆ 110:1, 2; ಫಿಲಿಪ್ಪಿ 2:8, 9; ಇಬ್ರಿಯ 10:13, 14.
9. ತೆರೆಯಲು ಮತ್ತು ಮುಚ್ಚಲು ಯೇಸುವು ದಾವೀದನ ಬೀಗದ ಕೈಯನ್ನು ಉಪಯೋಗಿಸುವುದು ಹೇಗೆ?
9 ತನ್ಮಧ್ಯೆ ಯೇಸುವಿಗೆ ದಾವೀದನ ಬೀಗದ ಕೈಯ ಉಪಯೋಗವಿದ್ದು, ಅವನು ದೇವರ ರಾಜ್ಯಕ್ಕೆ ಸಂಬಂಧಿಸಿದ ಅವಕಾಶಗಳನ್ನು ಮತ್ತು ಸುಯೋಗಗಳನ್ನು ತೆರೆಯಲಿರುವನು. ಯೇಸುವಿನ ಮೂಲಕ, ಯೆಹೋವನು ಭೂಮಿಯ ಮೇಲಿರುವ ಅಭಿಷಿಕ್ತ ಕ್ರೈಸ್ತರನ್ನು ಈಗ “ಅಂಧಕಾರದ ಅಧಿಕಾರದಿಂದ” ಬಿಡಿಸಿ “ತನ್ನ ಪ್ರಿಯ ಕುಮಾರನ ರಾಜ್ಯದೊಳಗೆ” ಸ್ಥಾನಾಂತರಗೊಳಿಸುವನು. (ಕೊಲೊಸ್ಸೆ 1:13, 14) ಅಪನಂಬಿಗಸ್ತನಾಗಿ ಪರಿಣಮಿಸಿದವರಿಂದ ಅಂತಹ ಸುಯೋಗಗಳನ್ನು ತಡೆಗಟ್ಟಲು ಕೂಡ ಆ ಬೀಗದ ಕೈಯನ್ನು ಉಪಯೋಗಿಸಲಾಗುವುದು. (2 ತಿಮೊಥೆಯ 2:12, 13) ದಾವೀದನ ರಾಜ್ಯದ ಈ ಶಾಶ್ವತ ಬಾಧ್ಯಸ್ಥನಿಗೆ ಯೆಹೋವನ ಬೆಂಬಲವಿರುವುದರಿಂದ, ಅಂತಹ ಕರ್ತವ್ಯಗಳನ್ನು ಪೂರೈಸುವುದರಲ್ಲಿ ಅವನನ್ನು ಯಾವ ಸೃಷ್ಟಿಜೀವಿಯೂ ತಡೆಯಲಾರದು.—ಮತ್ತಾಯ 28:18-20 ಹೋಲಿಸಿರಿ.
10. ಫಿಲದೆಲ್ಫಿಯದಲ್ಲಿನ ಸಭೆಗೆ ಯೇಸುವು ಯಾವ ಉತ್ತೇಜನವನ್ನು ಕೊಡುತ್ತಾನೆ?
10 ಅಂತಹ ಅಧಿಕಾರಯುಕ್ತ ಉಗಮದಿಂದ ಬರುವುದರಿಂದ, ಫಿಲದೆಲ್ಫಿಯದ ಕ್ರೈಸ್ತರಿಗಾಗಿರುವ ಯೇಸುವಿನ ಮಾತುಗಳು ವಿಶೇಷವಾಗಿ ಸಾಂತ್ವನಕಾರಿಯಾಗಿದ್ದಿರಬೇಕು! ಅವರನ್ನು ಹೀಗನ್ನುತ್ತಾ ಅವನು ಶ್ಲಾಘಿಸುತ್ತಾನೆ: “ನಾನು ನಿನ್ನ ಕೃತ್ಯಗಳನ್ನು ಬಲ್ಲೆನು—ಇಗೋ! ಯಾರೂ ಮುಚ್ಚಲಾಗದಂತಹ ತೆರೆದಿರುವ ಒಂದು ಬಾಗಿಲನ್ನು ನಾನು ನಿನ್ನ ಮುಂದೆ ಇಟ್ಟಿದ್ದೇನೆ—ನಿನಗೆ ಕೊಂಚ ಶಕ್ತಿಯಿದೆ, ಮತ್ತು ನೀನು ನನ್ನ ಮಾತನ್ನು ಕಾಪಾಡಿದಿ ಮತ್ತು ನನ್ನ ಹೆಸರಿಗೆ ಸುಳ್ಳಾಗಿ ನೀನು ವರ್ತಿಸಲಿಲ್ಲ.” (ಪ್ರಕಟನೆ 3:8, NW) ಸಭೆಯು ಕ್ರಿಯಾಶೀಲವಾಗಿತ್ತು ಮತ್ತು ಅದರ ಮುಂದೆ ಒಂದು ಬಾಗಿಲು—ನಿಸ್ಸಂದೇಹವಾಗಿ ಶುಶ್ರೂಷೆಯ ಸೇವೆಯ ಅವಕಾಶದ ಒಂದು ಬಾಗಿಲು—ತೆರೆದಿತ್ತು. (1 ಕೊರಿಂಥ 16:9; ಹೋಲಿಸಿರಿ 2 ಕೊರಿಂಥ 2:12.) ಆದಕಾರಣ, ಸಾರಲು ಇರುವ ಸಂದರ್ಭದ ಸದುಪಯೋಗವನ್ನು ಮಾಡುವಂತೆ ಯೇಸುವು ಸಭೆಯನ್ನು ಉತ್ತೇಜಿಸುತ್ತಾನೆ. ಅವರು ತಾಳಿಕೊಂಡಿದ್ದಾರೆ ಮತ್ತು ಯೆಹೋವನ ಸೇವೆಯಲ್ಲಿ ಇನ್ನಷ್ಟು “ಕೃತ್ಯಗಳನ್ನು” ಮಾಡುವುದನ್ನು ಮುಂದರಿಸಲು, ದೇವರ ಆತ್ಮದ ಸಹಾಯದಿಂದ ಅವರಿಗೆ ಸಾಕಷ್ಟು ಶಕ್ತಿಯಿದೆ ಎಂದು ತೋರಿಸಿದ್ದಾರೆ. (2 ಕೊರಿಂಥ 12:10; ಜೆಕರ್ಯ 4:6) ಅವರು ಯೇಸುವಿನ ಆಜ್ಞೆಗಳಿಗೆ ವಿಧೇಯರಾಗಿದ್ದರು ಮತ್ತು ಮಾತಿನಿಂದಾಗಲಿ ಕೃತ್ಯದಿಂದಾಗಲಿ ಅವರು ಕ್ರಿಸ್ತನನ್ನು ನಿರಾಕರಿಸಿರಲಿಲ್ಲ.
“ನಿನಗೆ ಸಾಷ್ಟಾಂಗವಾಗಿ ಅಡ್ಡ” ಬೀಳುವರು
11. ಕ್ರೈಸ್ತರಿಗೆ ಯೇಸುವು ಯಾವ ಆಶೀರ್ವಾದವನ್ನು ವಾಗ್ದಾನಿಸುತ್ತಾನೆ, ಮತ್ತು ಇದು ಹೇಗೆ ಕೈಗೂಡಲ್ಪಟ್ಟಿತ್ತು?
11 ಆದಕಾರಣ, ಯೇಸುವು ಅವರಿಗೆ ಫಲದ ಆಶ್ವಾಸನೆಯನ್ನೀಯುತ್ತಾನೆ: “ಇಗೋ! ತಾವು ಯೆಹೂದ್ಯರೆಂದು ಹೇಳುವ—ಆದರೂ ಅವರು ಹಾಗಲ್ಲ, ಸುಳ್ಳಾಡುತ್ತಿದ್ದಾರೆ—ಸೈತಾನನ ಸಭಾಮಂದಿರದವರನ್ನು ನಾನು ಕೊಡುವೆನು. ಇಗೋ! ಅವರು ಬರುವಂತೆ ಮತ್ತು ನಿನ್ನ ಮತ್ತು ನಿನ್ನ ಪಾದಗಳ ಮುಂದೆ ಪ್ರಣಾಮ ಮಾಡುವಂತೆ ನಾನು ಮಾಡುವೆನು ಮತ್ತು ನಾನು ನಿನ್ನನ್ನು ಪ್ರೀತಿಸಿದ್ದೇನೆ ಎಂದು ಅವರು ತಿಳಿಯುವಂತೆ ಮಾಡುವೆನು.” (ಪ್ರಕಟನೆ 3:9, NW) ಪ್ರಾಯಶಃ, ಸ್ಮುರ್ನದಂತೆ, ಸ್ಥಳೀಯ ಯೆಹೂದ್ಯರಿಂದ ಸಭೆಗೆ ಸಮಸ್ಯೆಗಳು ಬಂದಿದ್ದವು. ಇವರನ್ನು ಯೇಸುವು “ಸೈತಾನನ ಸಭಾಮಂದಿರ” ದವರು ಎಂದು ನಿರ್ದೇಶಿಸುತ್ತಾನೆ. ಆದಾಗ್ಯೂ, ಯೇಸುವಿನ ಕುರಿತು ಕ್ರೈಸ್ತರು ಸಾರುತ್ತಿದ್ದದ್ದು ಸತ್ಯವೆಂದು ಈ ಯೆಹೂದ್ಯರಲ್ಲಿ ಕೆಲವರಾದರೂ ತಿಳಿದುಕೊಳ್ಳುವಂತಹ ಸ್ಥಿತಿಗೆ ಬಂದಿದ್ದರು. ಅವರ ‘ಪ್ರಣಾಮ ಮಾಡುವಿಕೆಯು’, 1 ಕೊರಿಂಥ 14:24, 25 ರಲ್ಲಿ ಪೌಲನಿಂದ ವರ್ಣಿಸಲ್ಪಟ್ಟ ವಿಧಾನದ್ದಾಗಿರುವುದು ಸಂಭವನೀಯ, ಆ ಮೂಲಕ ತನ್ನ ಶಿಷ್ಯರ ಪರವಾಗಿ ಅವನ ಆತ್ಮವನ್ನು ಕೂಡ ಒಪ್ಪಿಸಿಕೊಟ್ಟದ್ದರಲ್ಲಿ ಯೇಸುವಿನ ಮಹಾ ಪ್ರೀತಿಯನ್ನು ಪೂರ್ಣವಾಗಿ ಗಣ್ಯ ಮಾಡುತ್ತಾ, ಅವರು ನಿಜವಾಗಿಯೂ ಪಶ್ಚಾತ್ತಾಪ ಪಟ್ಟು ಕ್ರೈಸ್ತರಾಗುವರು.—ಯೋಹಾನ 15:12, 13.
12. ಸ್ಥಳೀಯ ಕ್ರೈಸ್ತ ಸಮಾಜಕ್ಕೆ ಅವರಲ್ಲಿನ ಕೆಲವರು “ಪ್ರಣಾಮ ಮಾಡಲಿದ್ದಾರೆ” ಎಂಬುದನ್ನು ತಿಳಿಯುವುದರಲ್ಲಿ ಫಿಲದೆಲ್ಫಿಯದಲ್ಲಿನ ಯೆಹೂದಿ ಸಭಾಮಂದಿರದ ಕೆಲವು ಸದಸ್ಯರನ್ನು ಯಾಕೆ ಪ್ರಾಯಶಃ ಬೆಚ್ಚಿಬೀಳಿಸಿರಬೇಕು?
12 ತಮ್ಮಲ್ಲಿನ ಕೆಲವರು ಸ್ಥಳೀಯ ಕ್ರೈಸ್ತ ಸಮಾಜಕ್ಕೆ “ಪ್ರಣಾಮ” ಮಾಡಲಿದ್ದಾರೆ ಎಂದು ತಿಳಿಯುವುದು ಫಿಲದೆಲ್ಫಿಯದ ಯೆಹೂದಿ ಸಭಾಮಂದಿರದ ಸದಸ್ಯರನ್ನು ಪ್ರಾಯಶಃ ಬೆಚ್ಚು ಬೀಳಿಸುವುದು. ಆ ಸಭೆಯಲ್ಲಿ ಅಧಿಕಾಂಶ ಯೆಹೂದ್ಯೇತರರು ಇರುವ ವಾಸ್ತವಾಂಶದ ದೃಷ್ಟಿಕೋನದಲ್ಲಿ, ಅದಕ್ಕೆ ವಿರುದ್ಧವಾದ್ದದು ಆಗುತ್ತದೆಂದು ಅವರು ನಿರೀಕ್ಷಿಸಬಹುದಿತ್ತು. ಯಾಕೆ? ಯಾಕಂದರೆ ಯೆಶಾಯನು ಮುಂತಿಳಿಸಿದ್ದು: “[ಯೆಹೂದ್ಯೇತರ] ರಾಜರು ನಿನಗೆ [ಇಸ್ರಾಯೇಲ್ ಜನಾಂಗದ] ಸಾಕುತಂದೆಗಳು, ಅವರ ರಾಣಿಯರು ನಿನಗೆ ಸಾಕುತಾಯಿಯರು ಆಗುವರು. ನಿನಗೆ ಸಾಷ್ಟಾಂಗವಾಗಿ ಅಡ್ಡ” ಬೀಳುವರು. (ಯೆಶಾಯ 49:23; 45:14; 60:14) ಅದೇ ಧಾಟಿಯಲ್ಲಿ ಇದನ್ನು ಬರೆಯಲು ಜೆಕರ್ಯನು ಪ್ರೇರಿಸಲ್ಪಟ್ಟನು: “ಆ ಕಾಲದಲ್ಲಿ ಜನಾಂಗಗಳ ವಿವಿಧ ಭಾಷೆಗಳವರಾದ ಹತ್ತು ಜನರು [ಯೆಹೂದ್ಯೇತರರು] ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು—ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದಿದ್ದೆ ಎಂದು ಹೇಳುವರು.” (ಜೆಕರ್ಯ 8:23) ಹೌದು, ಯೆಹೂದ್ಯೇತರರು ಯೆಹೂದ್ಯರಿಗೆ ಪ್ರಣಾಮ ಮಾಡಲಿದ್ದರೇ ಹೊರತು, ತದ್ವಿರುದ್ಧವಾಗಿ ಅಲ್ಲ!
13. ಪ್ರಾಚೀನ ಇಸ್ರಾಯೇಲಿಗೆ ಸಂಬೋಧಿಸಿದ ಪ್ರವಾದನೆಗಳ ನೆರವೇರಿಕೆಯನ್ನು ಅನುಭವಿಸಲಿರುವ ಯೆಹೂದ್ಯರು ಯಾರು?
13 ಆ ಪ್ರವಾದನೆಗಳು ದೇವರ ಆರಿಸಲ್ಪಟ್ಟ ಜನಾಂಗಕ್ಕೆ ಸಂಬೋಧಿಸಲ್ಪಟ್ಟಿದ್ದವು. ಅವುಗಳನ್ನು ಉಚ್ಚರಿಸಿದಾಗ, ಮಾಂಸಿಕ ಇಸ್ರಾಯೇಲ್ ಒಂದು ಗೌರವಾನಿತ್ವ ಸ್ಥಾನದಲ್ಲಿ ಇತ್ತು. ಆದರೆ ಯೆಹೂದಿ ಜನಾಂಗವು ಮೆಸ್ಸೀಯನನ್ನು ತ್ಯಜಿಸಿದಾಗ, ಯೆಹೋವನು ಅವರನ್ನು ತೊರೆದುಬಿಟ್ಟನು. (ಮತ್ತಾಯ 15:3-9; 21:42, 43; ಲೂಕ 12:32; ಯೋಹಾನ 1:10, 11) ಸಾ.ಶ. 33ರ ಪಂಚಾಶತ್ತಮದಲ್ಲಿ, ಅವರ ಸ್ಥಾನದಲ್ಲಿ ದೇವರ ನಿಜ ಇಸ್ರಾಯೇಲ್ ಆದ ಕ್ರೈಸ್ತ ಸಭೆಯನ್ನು ಅವನು ಆರಿಸಿದನು. ಅದರ ಸದಸ್ಯರು ಹೃದಯದ ನಿಜವಾದ ಸುನ್ನತಿಯನ್ನು ಹೊಂದಿದ ಆತ್ಮಿಕ ಯೆಹೂದ್ಯರಾಗಿದ್ದಾರೆ. (ಅ. ಕೃತ್ಯಗಳು 2:1-4, 41, 42; ರೋಮಾಪುರ 2:28, 29; ಗಲಾತ್ಯ 6:16) ತದನಂತರ, ವ್ಯಕ್ತಿಗತವಾಗಿ ಮಾಂಸಿಕ ಯೆಹೂದ್ಯರು ಯೆಹೋವನೊಂದಿಗೆ ಒಂದು ಮೆಚ್ಚಿಗೆಯ ಸಂಬಂಧಕ್ಕೆ ಪುನಃ ಬರುವ ಏಕ ಮಾತ್ರ ದಾರಿಯೆಂದರೆ ಮೆಸ್ಸೀಯನೋಪಾದಿ ಯೇಸುವಿನ ಮೇಲೆ ಅವರು ವಿಶ್ವಾಸವನ್ನು ಇಡುವುದರ ಮೂಲಕವೇ. (ಮತ್ತಾಯ 23:37-39) ಫಿಲದೆಲ್ಫಿಯದ ಕೆಲವು ವ್ಯಕ್ತಿಗಳಿಗೆ ಇದು ಸಂಭವಿಸಲಿಕ್ಕಿತ್ತೆಂದು ವ್ಯಕ್ತವಾಗುತ್ತದೆ.a
14. ಆಧುನಿಕ ದಿನಗಳಲ್ಲಿ ಯೆಶಾಯ 49:23 ಮತ್ತು ಜೆಕರ್ಯ 8:23 ಒಂದು ವೈಶಿಷ್ಟ್ಯಮಯ ನೆರವೇರಿಕೆಯನ್ನು ಹೊಂದಿವೆ ಹೇಗೆ?
14 ಆಧುನಿಕ ದಿನಗಳಲ್ಲಿ, ಯೆಶಾಯ 49:23 ಮತ್ತು ಜೆಕರ್ಯ 8:23 ರಂಥ ಪ್ರವಾದನೆಗಳು, ಒಂದು ಅತಿ ವೈಶಿಷ್ಟ್ಯಮಯ ನೆರವೇರಿಕೆಯನ್ನು ಹೊಂದಿವೆ. ಯೋಹಾನ ವರ್ಗದವರ ಸಾರುವಿಕೆಯ ಫಲಿತಾಂಶವಾಗಿ, ರಾಜ್ಯದ ಸೇವೆಯೊಳಗೆ ಅಧಿಕ ಸಂಖ್ಯೆಯಲ್ಲಿ ಜನರು ತೆರೆದ ಬಾಗಿಲಿನ ಮೂಲಕ ಒಳಪ್ರವೇಶಿಸಿರುತ್ತಾರೆ.b ಯಾವುದರ ಧರ್ಮಗಳು ಆತ್ಮಿಕ ಇಸ್ರಾಯೇಲ್ ಎಂದು ಸುಳ್ಳಾಗಿ ವಾದಿಸುತ್ತವೋ ಆ ಕ್ರೈಸ್ತ ಪ್ರಪಂಚದಿಂದ ಇವರಲ್ಲಿ ಹೆಚ್ಚಿನವರು ಹೊರಬಂದವರಾಗಿದ್ದಾರೆ. (ರೋಮಾಪುರ 9:6 ಹೋಲಿಸಿರಿ.) ಮಹಾ ಸಮೂಹದೋಪಾದಿ ಇವರು, ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡು, ಯೇಸುವಿನ ಯಜ್ಞಾರ್ಪಿಸಲ್ಪಟ್ಟ ರಕ್ತದ ಮೇಲೆ ವಿಶ್ವಾಸವನ್ನು ಪ್ರದರ್ಶಿಸುತ್ತಾ ಅದನ್ನು ಬಿಳಿಯಾಗಿರಿಸಿದ್ದಾರೆ. (ಪ್ರಕಟನೆ 7:9, 10, 14) ಕ್ರಿಸ್ತನ ರಾಜ್ಯಾಳಿಕೆಗೆ ವಿಧೇಯರಾಗುತ್ತಾ, ಭೂಮಿಯ ಮೇಲಿನ ಅದರ ಆಶೀರ್ವಾದಗಳ ಬಾಧ್ಯತೆ ಹೊಂದಲು ಅವರು ನಿರೀಕ್ಷಿಸುತ್ತಾರೆ. ಅವರು ಯೇಸುವಿನ ಅಭಿಷಿಕ್ತ ಸಹೋದರರ ಬಳಿಗೆ ಬರುತ್ತಾರೆ ಮತ್ತು ಅವರಿಗೆ ಆತ್ಮಿಕವಾಗಿ ಹೇಳುವುದಾದರೆ, “ಪ್ರಣಾಮ ಮಾಡುತ್ತಾರೆ,” ಯಾಕಂದರೆ ‘ಅವರ ಸಂಗಡ ದೇವರು ಇದ್ದಾನೆ ಎಂದು ಅವರು ಕೇಳಿದ್ದಾರೆ.’ ಅವರು ಲೋಕವ್ಯಾಪಕ ಸಹೋದರರ ಬಳಗದಲ್ಲಿ ಐಕ್ಯರಾಗಿ ಅವರೊಂದಿಗೆ ಸೇರಿಕೊಂಡು, ಈ ಅಭಿಷಿಕ್ತರ ಶುಶ್ರೂಷೆ ಮಾಡುತ್ತಾರೆ.—ಮತ್ತಾಯ 25:34-40; 1 ಪೇತ್ರ 5:9.
“ಶೋಧನೆಯ ತಾಸು”
15. (ಎ) ಫಿಲದೆಲ್ಫಿಯದಲ್ಲಿನ ಕ್ರೈಸ್ತರಿಗೆ ಯೇಸುವು ಏನನ್ನು ವಾಗ್ದಾನಿಸಿದನು, ಮತ್ತು ಏನನ್ನು ಮಾಡಲು ಅವರಿಗೆ ಪ್ರೋತ್ಸಾಹವನ್ನೀಯಲಾಯಿತು? (ಬಿ) ಯಾವ “ಕಿರೀಟ” ವನ್ನು ಪಡೆಯಲು ಕ್ರೈಸ್ತರು ಮುನ್ನೋಡುತ್ತಾ ಇದ್ದರು?
15 ಯೇಸುವು ಹೇಳುತ್ತಾ ಮುಂದರಿಯುವುದು: “ನೀನು ನನ್ನ ತಾಳ್ಮೆಯ ಕುರಿತ ಮಾತನ್ನು ಪಾಲಿಸಿದ್ದರಿಂದ, ಇಡೀ ನಿವಾಸಿತ ಭೂಮಿಯ ಮೇಲೆ, ಆ ಭೂಮಿಯಲ್ಲಿ ಜೀವಿಸುವವರಿಗೆ ಒಂದು ಪರೀಕ್ಷೆಯನ್ನು ಕೊಡಲು ಬರಲಿರುವ ಶೋಧನೆಯ ತಾಸಿನಿಂದ ನಾನು ನಿನ್ನನ್ನೂ ಕಾಪಾಡುವೆನು. ನಾನು ಬೇಗನೇ ಬರುತ್ತಿದ್ದೇನೆ. ನಿನ್ನ ಕಿರೀಟವನ್ನು ಯಾವನೂ ತೆಗೆಯದಂತೆ ನಿನಗಿರುವುದನ್ನು ಬಿಗಿಯಾಗಿ ಹಿಡಿದುಕೊಂಡಿರು.” (ಪ್ರಕಟನೆ 3:10, 11, NW) (1914 ರಲ್ಲಿ ಆರಂಭಿಸಿದ) ಕರ್ತನ ದಿನದ ವರೆಗೆ ಯೋಹಾನನ ದಿನದ ಕ್ರೈಸ್ತರು ಜೀವಂತವಾಗಿ ಉಳಿಯದೆ ಇರುವುದಾದರೂ, ಯೇಸುವು ಬರುತ್ತಾನೆ ಎಂಬ ಅವರ ಭರವಸವು, ಸಾರುವುದನ್ನು ಮುಂದರಿಸಲು ಅವರಿಗೆ ಬಲವನ್ನು ಕೊಡಲಿಕ್ಕಿತ್ತು. (ಪ್ರಕಟನೆ 1:10; 2 ತಿಮೊಥೆಯ 4:2) “ಕಿರೀಟ” ಯಾ ನಿತ್ಯ ಜೀವದ ಬಹುಮಾನವು ಅವರಿಗೆ ಪರಲೋಕದಲ್ಲಿ ಕಾದಿತ್ತು. (ಯಾಕೋಬ 1:12; ಪ್ರಕಟನೆ 11:18) ಮರಣದ ತನಕ ಅವರು ನಂಬಿಗಸ್ತರಾಗಿರುವುದಾದರೆ, ಅವರ ಬಹುಮಾನವನ್ನು ಯಾರೂ ಅಪಹರಿಸಲಾರರು.—ಪ್ರಕಟನೆ 2:10.
16, 17. (ಎ) “ಎಲ್ಲಾ ಭೂನಿವಾಸಿಗಳ ಮೇಲೆ ಬರಲಿರುವ ಶೋಧನೆಯ ತಾಸು” ಯಾವುದು? (ಬಿ) “ಶೋಧನೆಯ ತಾಸಿನ” ಆರಂಭದಲ್ಲಿ ಅಭಿಷಿಕ್ತರ ಸ್ಥಿತಿಯೇನಾಗಿತ್ತು?
16 ಆದರೂ, “ಶೋಧನೆಯ ತಾಸು” ಯಾವುದು? ರೋಮ್ ಚಕ್ರಾದಿಪತ್ಯದಿಂದ ಭಯಂಕರ ಹಿಂಸೆಯ ಹೆಚ್ಚಿನ ಅಲೆಯೊಂದನ್ನು ಏಷಿಯದಲ್ಲಿರುವ ಕ್ರೈಸ್ತರು ಸಹಿಸಬೇಕಾಯಿತು ಎನ್ನುವುದರಲ್ಲಿ ಸಂದೇಹವಿಲ್ಲ.* ಆದಾಗ್ಯೂ, ಪ್ರಧಾನ ನೆರವೇರಿಕೆಯು ಕರ್ತನ ದಿನದಲ್ಲಿ ಕೊನೆಗೆ ಬಂದ, ವಿಶೇಷವಾಗಿ 1918 ರಿಂದ ಪರಮಾವಧಿಗೇರಿದ ಬೇರ್ಪಡಿಸುವ ಮತ್ತು ನ್ಯಾಯತೀರ್ಪು ಕೊಡುವ ಸಮಯವಾಗಿದೆ. ಒಬ್ಬನು ದೇವರ ಸ್ಥಾಪಿತ ರಾಜ್ಯದ ಪರವಾಗಿ ಇದ್ದಾನೋ ಯಾ ಸೈತಾನನ ಲೋಕಕ್ಕಾಗಿ ಇದ್ದಾನೋ ಎಂದು ನಿರ್ಧರಿಸುವುದೇ ಆ ಪರೀಕ್ಷೆಯಾಗಿತ್ತು. ತುಲನಾತ್ಮಕವಾಗಿ ಅದು ಕೇವಲ ಕೊಂಚ ಕಾಲಕ್ಕೆ, ಒಂದು “ತಾಸು” ಆಗಿತ್ತು, ಆದರೂ ಅದು ಇನ್ನೂ ಮುಗಿದಿರುವುದಿಲ್ಲ. ಅದು ಇರುವ ತನಕ, ಆ “ಶೋಧನೆಯ ತಾಸಿನಲ್ಲಿ” ನಾವು ಜೀವಿಸುತ್ತಾ ಇದ್ದೇವೆ ಎಂಬುದನ್ನು ನಾವು ಎಂದಿಗೂ ಮರೆಯಕೂಡದು.—ಲೂಕ 21:34-36.
17 ಅಭಿಷಿಕ್ತ ಕ್ರೈಸ್ತರ ಯೋಹಾನ ವರ್ಗದವರು—ಫಿಲದೆಲ್ಫಿಯದ ಆ ಬಲಶಾಲೀ ಸಭೆಯೋಪಾದಿ—1918 ರಲ್ಲಿ ಆಧುನಿಕ ದಿನದ “ಸೈತಾನನ ಸಭಾಮಂದಿರ” ದಿಂದ ವಿರೋಧವನ್ನು ಎದುರಿಸಬೇಕಾಗಿತ್ತು. ಆತ್ಮಿಕ ಯೆಹೂದ್ಯರೆಂದು ವಾದಿಸುವ ಕ್ರೈಸ್ತಪ್ರಪಂಚದ ಧಾರ್ಮಿಕ ಮುಂದಾಳುಗಳು ನಿಜ ಕ್ರೈಸ್ತರನ್ನು ದಮನಿಸಲು ಗುಪ್ತವಾಗಿ ಅಧಿಕಾರಿಗಳೊಂದಿಗೆ ಕುತಂತ್ರ ನಡಿಸಿದರು. ಆದಾಗ್ಯೂ, ‘ಯೇಸುವಿನ ತಾಳ್ಮೆಯ ಮಾತನ್ನು ಪಾಲಿಸಲು’ ಇವರು ಕಠಿಣವಾಗಿ ಪ್ರಯತ್ನಿಸಿದರು; ಆದಕಾರಣ, ಆತ್ಮಿಕ ನೆರವಿನಿಂದ, ಒಂದು ಗಮನಾರ್ಹವಾದ “ಕೊಂಚ ಶಕ್ತಿ” ಯಿಂದ ಅವರು ಪಾರಾಗಿ ಉಳಿದರು ಮತ್ತು ಈಗ ಅವರ ಮುಂದೆ ತೆರೆಯಲ್ಪಟ್ಟ ಬಾಗಿಲಿನೊಳಗೆ ಪ್ರವೇಶಿಸುವಂತೆ ಅವರು ಎಬ್ಬಿಸಲ್ಪಟ್ಟರು. ಯಾವ ವಿಧದಲ್ಲಿ?
“ತೆರೆದಿರುವ ಒಂದು ಬಾಗಿಲು”
18. ಯೇಸುವು 1919 ರಲ್ಲಿ ಯಾವ ನೇಮಕವನ್ನು ಮಾಡಿದನು, ಮತ್ತು ನೇಮಿತನಾದವನು ಹಿಜ್ಕೀಯನ ನಂಬಿಗಸ್ತ ಮನೆವಾರ್ತೆಯವನಂತೆ ಆದದ್ದು ಹೇಗೆ?
18 ಯೇಸುವು ತನ್ನ ವಾಗ್ದಾನವನ್ನು 1919 ರಲ್ಲಿ ನೆರವೇರಿಸಿದನು ಮತ್ತು ಸಾಚ ಅಭಿಷಿಕ್ತ ಕ್ರೈಸ್ತರ ಒಂದು ಚಿಕ್ಕ ಗುಂಪನ್ನು, ಅವನು ತನ್ನ “ನಂಬಿಗಸ್ತನೂ ವಿವೇಕಿಯೂ ಆದ ಆಳು” ಎಂದು ಅಂಗೀಕರಿಸಿದನು. (ಮತ್ತಾಯ 24:45-47) ರಾಜ ಹಿಜ್ಕೀಯನ ಸಮಯದಲ್ಲಿ ನಂಬಿಗಸ್ತ ಮನೆವಾರ್ತೆಯವನಾದ ಎಲ್ಯಾಕೀಮ್ನಿಂದ ಅನುಭವಿಸಲ್ಪಟ್ಟ, ತದ್ರೀತಿಯ ಸುಯೋಗದಲ್ಲಿ ಇವರು ಪ್ರವೇಶಿಸಿದರು.c ಯೆಹೋವನು ಎಲ್ಯಾಕೀಮನ ಕುರಿತಾಗಿ ಅಂದದ್ದು: “ದಾವೀದನ ಮನೆಯ ಬೀಗದ ಕೈಯನ್ನು ಅವನ ಹೆಗಲ ಮೇಲೆ ನಾನು ಇಡುವೆನು, ಮತ್ತು ಅವನು ತೆರೆದರೆ ಯಾರೂ ಮುಚ್ಚಲಾರರು, ಮತ್ತು ಅವನು ಮುಚ್ಚಿದರೆ ಯಾರೂ ತೆರೆಯಲಾರರು.” ದಾವೀದನ ರಾಜ ಕುವರನಾದ ಹಿಜ್ಕೀಯನಿಗಾಗಿ ಎಲ್ಯಾಕೀಮನು ಭಾರೀ ಜವಾಬ್ದಾರಿಕೆಗಳನ್ನು ನಿರ್ವಹಿಸಿದನು. ತದ್ರೀತಿಯಲ್ಲಿ ಇಂದು, ಅಭಿಷಿಕ್ತ ಯೋಹಾನ ವರ್ಗದ ಹೆಗಲ ಮೇಲೆ “ದಾವೀದನ ಮನೆಯ ಬೀಗದ ಕೈ” ಇಡಲಾಗಿದೆ, ಅಂದರೆ ಮೆಸ್ಸೀಯ ರಾಜ್ಯದ ಐಹಿಕ ಅಭಿರುಚಿಗಳನ್ನು ಅವರಿಗೆ ನಿರ್ವಹಿಸಿಕೊಡಲಾಗಿದೆ. ಈ ಸುಯೋಗಕ್ಕಾಗಿ ಯೆಹೋವನು ತನ್ನ ಸೇವಕರನ್ನು ಬಲಗೊಳಿಸಿದ್ದಾನೆ, ಅವರ ಕೊಂಚವೇ ಬಲವನ್ನು, ಬೃಹದಾಕಾರವಾದ ಭೌಗೋಳಿಕ ಸಾಕ್ಷಿ ನೀಡಲು ಸಾಕಾಗುವಷ್ಟು ಚಲನಾತ್ಮಕ ಶಕ್ತಿಯನ್ನಾಗಿ ಪರಿವರ್ತಿಸಿರುತ್ತಾನೆ.—ಯೆಶಾಯ 22:20, 22; 40:29.
19. ಯೇಸುವು 1919 ರಲ್ಲಿ ತಮಗೆ ಕೊಟ್ಟ ಜವಾಬ್ದಾರಿಗಳನ್ನು ಯೋಹಾನ ವರ್ಗದವರು ಹೇಗೆ ನಿರ್ವಹಿಸಿದರು, ಮತ್ತು ಯಾವ ಫಲಿತಾಂಶದೊಂದಿಗೆ?
19 ಯೇಸುವಿನ ಮಾದರಿಯನ್ನು ಅನುಸರಿಸಿ, ಅಭಿಷಿಕ್ತ ಉಳಿಕೆಯವರು 1919 ರಿಂದ ರಾಜ್ಯದ ಸುವಾರ್ತೆಯನ್ನು ವಿಸ್ತಾರವಾಗಿ ಘೋಷಿಸುವ ಒಂದು ಹುರುಪಿನ ಕಾರ್ಯಚಟುವಟಿಕೆಯನ್ನು ಪ್ರಾರಂಭಿಸಿದರು. (ಮತ್ತಾಯ 4:17; ರೋಮಾಪುರ 10:18) ಇದರ ಪರಿಣಾಮವಾಗಿ, ಸೈತಾನನ ಆಧುನಿಕ ಸಭಾಮಂದಿರದ ಅಂದರೆ ಕ್ರೈಸ್ತಪ್ರಪಂಚದ ಕೆಲವರು, ಈ ಅಭಿಷಿಕ್ತ ಉಳಿಕೆಯವರ ಬಳಿಗೆ ಬಂದರು ಮತ್ತು ಆಳಿನ ಅಧಿಕಾರವನ್ನು ಅಂಗೀಕರಿಸಿ, ‘ಪ್ರಣಾಮ ಮಾಡಿದರು.’ ಯೋಹಾನ ವರ್ಗದಲ್ಲಿ ಹೆಚ್ಚು ವಯಸ್ಸಾದವರೊಂದಿಗೆ ಐಕ್ಯದಲ್ಲಿ ಯೆಹೋವನನ್ನು ಸೇವಿಸಲು ಅವರು ಕೂಡ ಬಂದರು. ಯೇಸುವಿನ ಅಭಿಷಿಕ್ತ ಸಹೋದರರ ಪೂರ್ಣ ಸಂಖ್ಯೆಯು ಒಟ್ಟುಗೂಡಿಸಲ್ಪಡುವ ತನಕ ಇದು ಮುಂದುವರಿಯಿತು. ಇದನ್ನು ಹಿಂಬಾಲಿಸಿ, “ಎಲ್ಲಾ ಜನಾಂಗಗಳಿಂದ . . . ಒಂದು ಮಹಾ ಸಮೂಹವು” ಅಭಿಷಿಕ್ತ ಆಳಿಗೆ “ಪ್ರಣಾಮ ಮಾಡಲು” ಬಂದಿರುತ್ತದೆ. (ಪ್ರಕಟನೆ 7:3, 4, 9) ಆಳು ಮತ್ತು ಈ ಮಹಾ ಸಮೂಹದವರು ಒಟ್ಟಿಗೆ, ಯೆಹೋವನ ಸಾಕ್ಷಿಗಳ ಒಂದು ಮಂದೆಯೋಪಾದಿ ಸೇವೆ ಸಲ್ಲಿಸುತ್ತಾರೆ.
20. ಯೆಹೋವನು ಸಾಕ್ಷಿಗಳ ಇಂದು ವಿಶೇಷವಾಗಿ ನಂಬಿಕೆಯಲ್ಲಿ ದೃಢರೂ, ದೇವರ ಸೇವೆಯಲ್ಲಿ ಸಕ್ರಿಯರೂ ಆಗಿರತಕ್ಕದ್ದು ಯಾಕೆ?
20 ಅಪ್ಪಟವಾದ ಸಹೋದರ ವಾತ್ಸಲ್ಯದ ಬಂಧದಲ್ಲಿ ಫಿಲದೆಲ್ಫಿಯದ ಕ್ರೈಸ್ತರೋಪಾದಿ ಐಕ್ಯದಿಂದ, ಯೆಹೋವನ ಸಾಕ್ಷಿಗಳು ಇಂದು ಅವರ ಸಾರುವ ಕೆಲಸವನ್ನು ತುರ್ತಾಗಿ ಮಾಡಲಿಕ್ಕಿದೆ ಎಂದು ಗಣ್ಯಮಾಡುತ್ತಾರೆ. ಬೇಗನೇ ಮಹಾ ಸಂಕಟವು ಸೈತಾನನ ದುಷ್ಟ ಲೋಕಕ್ಕೆ ಪರದೆಯನ್ನು ಕೆಳಗಿಳಿಸುವುದು. ಆ ಸಮಯದಲ್ಲಿ, ಯೆಹೋವನ ಜೀವದ ಪುಸ್ತಕದಿಂದ ನಮ್ಮ ಹೆಸರುಗಳು ಅಳಿಸಲ್ಪಡದಂತೆ, ನಮ್ಮಲ್ಲಿ ಪ್ರತಿಯೊಬ್ಬನು ನಂಬಿಕೆಯಲ್ಲಿ ದೃಢವಾಗಿದ್ದವನಾಗಿ ಮತ್ತು ದೇವರ ಸೇವೆಯಲ್ಲಿ ಸಕ್ರಿಯನಾಗಿ ತೋರಿಬರಲಿ. (ಪ್ರಕಟನೆ 7:14) ಆ ಮೂಲಕ ನಾವು ನಮ್ಮ ಸೇವಾ ಸುಯೋಗಗಳನ್ನು ಬಿಗಿಯಾಗಿ ಹಿಡಿದುಕೊಂಡಿರುವಂತೆ ಮತ್ತು ನಿತ್ಯ ಜೀವದ ಬಹುಮಾನವನ್ನು ಹೊಂದುವಂತೆ, ಫಿಲದೆಲ್ಫಿಯದಲ್ಲಿನ ಸಭೆಗೆ ಕೊಟ್ಟ ಯೇಸುವಿನ ಎಚ್ಚರಿಕೆಯನ್ನು ನಾವು ಅತಿ ಗಂಭೀರವಾಗಿ ಪರಿಗಣಿಸೋಣ.
ಜಯಶಾಲಿಗಳ ಆಶೀರ್ವಾದಗಳು
21. ಅಭಿಷಿಕ್ತ ಕ್ರೈಸ್ತರು ಇಂದು ‘ಯೇಸುವಿನ ತಾಳ್ಮೆಯ ಕುರಿತ ಮಾತನ್ನು ಪಾಲಿಸಿರುವುದು’ ಹೇಗೆ, ಮತ್ತು ಅವರಿಗಾಗಿ ಯಾವ ಪ್ರತೀಕ್ಷೆಯು ಕಾದಿರುತ್ತದೆ?
21 ಯೋಹಾನ ವರ್ಗದವರು ಇಂದು ‘ಯೇಸುವಿನ ತಾಳ್ಮೆಯ ಕುರಿತ ಮಾತನ್ನು ಪಾಲಿಸಿದ್ದಾರೆ,’ ಅಂದರೆ ಅವನ ಮಾದರಿಯನ್ನು ಅವರು ಅನುಕರಿಸಿದ್ದಾರೆ ಮತ್ತು ತಾಳಿಕೊಂಡಿದ್ದಾರೆ. (ಇಬ್ರಿಯ 12:2, 3; 1 ಪೇತ್ರ 2:21) ಫಿಲದೆಲ್ಫಿಯದಲ್ಲಿನ ಸಭೆಗೆ ಯೇಸುವಿನಿಂದ ಕೊಡಲ್ಪಟ್ಟ ಇನ್ನೂ ಹೆಚ್ಚಿನ ಮಾತುಗಳಿಂದ ಅವರು ಇನ್ನಷ್ಟು ಹುರಿದುಂಬಿಸಲ್ಪಟ್ಟಿದ್ದಾರೆ: “ಜಯಶಾಲಿಯಾಗುವವನನ್ನು—ನಾನು ನನ್ನ ದೇವರ ಆಲಯದಲ್ಲಿ ಒಂದು ಸ್ತಂಭವಾಗಿ ಮಾಡುವೆನು, ಮತ್ತು ಅವನು ಇನ್ನು ಮುಂದೆ ಅದರೊಳಗಿಂದ ಹೊರಗೆ ಹೋಗುವುದೇ ಇಲ್ಲ.”—ಪ್ರಕಟನೆ 3:12ಎ, NW.
22. (ಎ) ಯೇಸುವಿನ ದೇವರ ಆಲಯ ಏನು? (ಬಿ) ಜಯಶಾಲಿಗಳಾಗುವ ಅಭಿಷಿಕ್ತ ಕ್ರೈಸ್ತರು ಹೇಗೆ ಈ ದೇವಾಲಯದಲ್ಲಿ ಸ್ತಂಭಗಳಾಗುತ್ತಾರೆ?
22 ಯೆಹೋವನ ಆಲಯದ ಒಂದು ಸ್ತಂಭವಾಗಿರುವುದು ಎಂತಹ ಒಂದು ಸುಯೋಗವಾಗಿರುತ್ತದೆ! ಪ್ರಾಚೀನ ಯೆರೂಸಲೇಮಿನಲ್ಲಿ, ಅಕ್ಷರಾರ್ಥವಾದ ದೇವಾಲಯವು ಯೆಹೋವನ ಆರಾಧನೆಯ ಕೇಂದ್ರವಾಗಿತ್ತು, ದೇವಾಲಯದೊಳಗೆ “ಅತಿ ಪವಿತ್ರ ಸ್ಥಾನ” ದಲ್ಲಿ ಯೆಹೋವನ ಸಾನ್ನಿಧ್ಯವು ಪ್ರತಿನಿಧಿಸಲ್ಪಡುವ ಅದ್ಭುತಕರವಾದ ಬೆಳಕಿನ ಮುಂದೆ, ವರ್ಷಕ್ಕೊಮ್ಮೆ ಒಂದು ದಿನ, ಯಜ್ಞಾರ್ಪಿತ ಪ್ರಾಣಿಗಳ ರಕ್ತವನ್ನು ಮಹಾ ಯಾಜಕನು ಅರ್ಪಿಸುತ್ತಿದ್ದನು. (ಇಬ್ರಿಯ 9:1-7) ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ, ಇನ್ನೊಂದು ದೇವಾಲಯವು ಅಸ್ತಿತ್ವಕ್ಕೆ ಬಂತು, ಯೆಹೋವನನ್ನು ಆರಾಧಿಸಲಿಕ್ಕಾಗಿ ಒಂದು ಮಹಾ ಆತ್ಮಿಕ, ದೇವಾಲಯ ಸದೃಶ ಏರ್ಪಾಡು ಅದಾಗಿತ್ತು. ಈ ದೇವಾಲಯದ ಪರಮ ಪವಿತ್ರ ಸ್ಥಾನವು ಯೇಸು ಎಲ್ಲಿ “ದೇವರ ಸಮ್ಮುಖದಲ್ಲಿಯೇ” ಕಾಣಿಸಿಕೊಂಡನೋ ಆ ಪರಲೋಕದಲ್ಲಿದೆ. (ಇಬ್ರಿಯ 9:24) ಯೇಸುವು ಮಹಾ ಯಾಜಕನಾಗಿರುತ್ತಾನೆ, ಮತ್ತು ಪಾಪಗಳೆಲ್ಲದರ ಪೂರ್ಣ ಶುದ್ಧಿಗಾಗಿ ಕೇವಲ ಒಂದೇ ಒಂದು ಯಜ್ಞವನ್ನು ನೀಡಲಾಗುತ್ತದೆ: ಪರಿಪೂರ್ಣ ಮಾನವನಾದ ಯೇಸುವಿನ ಸುರಿಸಲ್ಪಟ್ಟ ರಕ್ತ. (ಇಬ್ರಿಯ 7:26, 27; 9:25-28; 10:1-5, 12-14) ನಂಬಿಗಸ್ತರಾಗಿ ನಿಲ್ಲುವ ತನಕ, ಅಭಿಷಿಕ್ತ ಕ್ರೈಸ್ತರು ಭೂಮಿಯ ಮೇಲೆ ಈ ದೇವಾಲಯದ ಐಹಿಕ ಪ್ರಾಂಗಣದಲ್ಲಿ ಉಪಯಾಜಕರಾಗಿ ಸೇವೆ ಸಲ್ಲಿಸುವರು. (1 ಪೇತ್ರ 2:9) ಆದರೆ ಒಮ್ಮೆ ಅವರು ಜಯಶಾಲಿಗಳಾದ ಮೇಲೆ, ಅವರು ಕೂಡ ಪರಲೋಕದ ಪರಮ ಪವಿತ್ರ ಸ್ಥಾನಕ್ಕೆ ಪ್ರವೇಶಿಸುವರು ಮತ್ತು ಆರಾಧನೆಯ ದೇವಾಲಯದಂತಹ ಏರ್ಪಾಡಿನಲ್ಲಿ ಸ್ತಂಭಗಳೋಪಾದಿ, ಅಚಲ ಆಧಾರಗಳಾಗಿರುವರು. (ಇಬ್ರಿಯ 10:19; ಪ್ರಕಟನೆ 20:6) ಅವರು “ಇನ್ನು ಮುಂದೆ ಅದರೊಳಗಿಂದ ಹೊರಗೆ ಹೋಗುವ” ಅಪಾಯವಿರುವುದಿಲ್ಲ.
23. (ಎ) ಜಯಶಾಲಿಗಳಾಗುವ ಅಭಿಷಿಕ್ತ ಕ್ರೈಸ್ತರಿಗೆ ಯೇಸುವು ಅನಂತರ ಯಾವ ವಾಗ್ದಾನವನ್ನು ಮಾಡುತ್ತಾನೆ? (ಬಿ) ಕ್ರೈಸ್ತ ಜಯಶಾಲಿಗಳ ಮೇಲೆ ಯೆಹೋವನ ಹೆಸರು ಮತ್ತು ಹೊಸ ಯೆರೂಸಲೇಮಿನ ಹೆಸರು ಬರೆಯಲ್ಪಡುವುದರಿಂದ ಏನು ಪರಿಣಮಿಸುತ್ತದೆ?
23 ಯೇಸುವು ಮುಂದುವರಿಸಿ, ಹೇಳುವುದು: “ಮತ್ತು ನನ್ನ ದೇವರ ಹೆಸರನ್ನೂ, ನನ್ನ ದೇವರ ಬಳಿಯಿಂದ ಪರಲೋಕದಿಂದ ಇಳಿದು ಬರುವ ಹೊಸ ಯೆರೂಸಲೇಮ್ ಎಂಬ ನನ್ನ ದೇವರ ನಗರದ ಹೆಸರನ್ನೂ, ನನ್ನ ಆ ಹೊಸ ಹೆಸರನ್ನೂ ಅವನ ಮೇಲೆ ನಾನು ಬರೆಯುವೆನು.” (ಪ್ರಕಟನೆ 3:12ಬಿ, NW) ಹೌದು, ಈ ಜಯಶಾಲಿಗಳ ಮೇಲೆ ಯೆಹೋವನ—ಅವರ ದೇವರ ಮತ್ತು ಯೇಸುವಿನ ದೇವರ—ಹೆಸರು ಬರೆಯಲ್ಪಟ್ಟಿರುವುದು. ಇದು ಸ್ಪಷ್ಟವಾಗಿ ತೋರಿಸುವದೇನಂದರೆ ಯೆಹೋವನು ಮತ್ತು ಯೇಸುವು ಇಬ್ಬರು ಪ್ರತ್ಯೇಕ ವ್ಯಕ್ತಿಗಳಾಗಿರುತ್ತಾರೆ ಮತ್ತು ತ್ರಿಯೇಕ ದೇವರ ಯಾ ತ್ರಯೈಕ್ಯದ ಎರಡು ಭಾಗಗಳಲ್ಲ. (ಯೋಹಾನ 14:28; 20:17) ಈ ಅಭಿಷಿಕ್ತರು ಯೆಹೋವನಿಗೆ ಸೇರಿದವರು ಎಂದು ಸಮಸ್ತ ಸೃಷ್ಟಿಯು ತಿಳಿದು ಕೊಳ್ಳಲೇಬೇಕು. ಅವರು ಆತನ ಸಾಕ್ಷಿಗಳಾಗಿರುತ್ತಾರೆ. ಅವರ ಮೇಲೆ ಹೊಸ ಯೆರೂಸಲೇಮಿನ ಹೆಸರೂ ಬರೆಯಲ್ಪಟ್ಟಿದೆ, ಈ ಸ್ವರ್ಗೀಯ ಪಟ್ಟಣವು ಪರಲೋಕದಿಂದ ಇಳಿದು ಬರುತ್ತದೆ ಅಂದರೆ ಎಲ್ಲಾ ನಂಬಿಗಸ್ತ ಮಾನವ ಕುಲದ ಮೇಲೆ ಅದರ ದಯಾಪರತೆಯ ಆಳಿಕೆಯನ್ನು ಅದು ಹಬ್ಬಿಸುತ್ತದೆ ಎಂದರ್ಥವಾಗಿದೆ. (ಪ್ರಕಟನೆ 21:9-14) ಸ್ವರ್ಗೀಯ ಯೆರೂಸಲೇಮಿನ, ಆ ರಾಜ್ಯದ ನಾಗರಿಕರಾಗಿ ಈ ಅಭಿಷಿಕ್ತ ಜಯಶಾಲಿಗಳು ಇದ್ದಾರೆ ಎಂದು ಈ ರೀತಿಯಲ್ಲಿ ಎಲ್ಲಾ ಐಹಿಕ ಕ್ರೈಸ್ತ ಕುರಿಗಳು ಕೂಡ ತಿಳಿಯಲಿರುವರು.—ಕೀರ್ತನೆ 87:5, 6; ಮತ್ತಾಯ 25:33, 34; ಫಿಲಿಪ್ಪಿ 3:20; ಇಬ್ರಿಯ 12:22.
24. ಯೇಸುವಿನ ಹೊಸ ಹೆಸರಿನ ಮೂಲಕ ಏನು ಪ್ರತಿನಿಧಿಸಲ್ಪಟ್ಟಿದೆ, ಮತ್ತು ನಂಬಿಗಸ್ತ ಅಭಿಷಿಕ್ತ ಕ್ರೈಸ್ತರ ಮೇಲೆ ಅದು ಬರೆಯಲ್ಪಟ್ಟಿರುವುದು ಹೇಗೆ?
24 ಕೊನೆಗೆ, ಯೇಸುವಿನ ಹೊಸ ಹೆಸರು ಅಭಿಷಿಕ್ತ ವಿಜೇತರ ಮೇಲೆ ಬರೆಯಲ್ಪಟ್ಟಿರುವುದು. ಇದು ಯೇಸುವಿನ ಹೊಸ ಹುದ್ದೆಯನ್ನು ಮತ್ತು ಯೆಹೋವನಿಂದ ಅವನಿಗೆ ನೀಡಲ್ಪಟ್ಟ ಎಣೆಯಿಲ್ಲದ ಸುಯೋಗಗಳನ್ನು ಸೂಚಿಸುತ್ತದೆ. (ಫಿಲಿಪ್ಪಿ 2:9-11; ಪ್ರಕಟನೆ 19:12) ಆ ಹೆಸರನ್ನು ಬೇರೆ ಯಾರೂ ಪಡೆಯಶಕ್ತರಲ್ಲ, ಅದರರ್ಥ ಬೇರೆ ಯಾರಿಗೂ ಅಂತಹ ಅನುಭವಗಳು ಇರುವುದಿಲ್ಲ ಯಾ ಆ ಸುಯೋಗಗಳು ಬೇರೆ ಯಾರಿಗೂ ಕೊಡಲ್ಪಟ್ಟಿರುವುದಿಲ್ಲ. ಆದಾಗ್ಯೂ, ಯೇಸುವು ತನ್ನ ಹೆಸರನ್ನು ಅವನ ನಂಬಿಗಸ್ತ ಸಹೋದರರ ಮೇಲೆ ಬರೆಯುವಾಗ, ಅವರು ಪರಲೋಕದ ಸಾಮ್ರಾಜ್ಯದಲ್ಲಿ ಅವನೊಂದಿಗೆ ಒಂದು ಆಪ್ತ ಸಂಬಂಧದೊಳಗೆ ಬರುತ್ತಾರೆ ಮತ್ತು ಅವನ ಸುಯೋಗಗಳಲ್ಲಿ ಕೂಡ ಪಾಲಿಗರಾಗುತ್ತಾರೆ. (ಲೂಕ 22:29, 30) ಅಂತಹ ಅಭಿಷಿಕ್ತರಿಗೆ ತನ್ನ ಎಚ್ಚರಿಕೆಯನ್ನು ಪುನರಾವರ್ತಿಸುತ್ತಾ ಯೇಸುವು ತನ್ನ ಸಂದೇಶವನ್ನು ಕೊನೆಗೊಳಿಸುವುದರಲ್ಲೇನೂ ಆಶ್ಚರ್ಯವಿಲ್ಲ: “ದೇವರಾತ್ಮವು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.”—ಪ್ರಕಟನೆ 3:13, NW.
25. ಫಿಲದೆಲ್ಫಿಯದಲ್ಲಿನ ಸಭೆಗೆ ಯೇಸುವು ಕೊಟ್ಟ ಬುದ್ಧಿವಾದದ ಹಿಂದಿರುವ ಸೂತ್ರವನ್ನು ಪ್ರತಿಯೊಬ್ಬ ವೈಯಕ್ತಿಕ ಕ್ರೈಸ್ತನು ಇಂದು ಹೇಗೆ ಅನ್ವಯಿಸಸಾಧ್ಯವಿದೆ?
25 ಫಿಲದೆಲ್ಫಿಯದ ನಂಬಿಗಸ್ತ ಕ್ರೈಸ್ತರಿಗೆ ಆ ಸಂದೇಶವು ಎಷ್ಟೊಂದು ಭವ್ಯವಾದ ಉತ್ತೇಜನವಾಗಿದ್ದಿರಬೇಕು! ಮತ್ತು ಅದರಲ್ಲಿ ಯೋಹಾನ ವರ್ಗದವರಿಗೆ ಈಗ, ಕರ್ತನ ದಿನದಲ್ಲಿ, ಖಂಡಿತವಾಗಿ ಒಂದು ಬಲವತ್ತಾದ ಪಾಠವು ಇದೆ. ಆದರೆ ಅದರ ಸೂತ್ರಗಳು, ಅಭಿಷಿಕ್ತನಾಗಿರಲಿ ಯಾ ಬೇರೆ ಕುರಿಗಳಿಗೆ ಸೇರಿದವನಾಗಿರಲಿ, ಪ್ರತಿಯೊಬ್ಬ ವೈಯಕ್ತಿಕ ಕ್ರೈಸ್ತನಿಗೆ ಬಹಳ ಪ್ರಾಮುಖ್ಯವಾಗಿವೆ. (ಯೋಹಾನ 10:16) ನಮ್ಮಲ್ಲಿ ಪ್ರತಿಯೊಬ್ಬನು, ಫಿಲದೆಲ್ಫಿಯದಲ್ಲಿನ ಕ್ರೈಸ್ತರು ಮಾಡಿದಂತೆಯೇ ರಾಜ್ಯದ ಫಲಗಳನ್ನು ಫಲಿಸುವುದನ್ನು ಮುಂದರಿಸುವಲ್ಲಿ ಒಳಿತನ್ನು ಮಾಡುವೆವು. ನಮ್ಮಲ್ಲಿ ಪ್ರತಿಯೊಬ್ಬನಿಗೆ ಕಡಿಮೆ ಪಕ್ಷ, ಕೊಂಚವಾದರೂ ಶಕ್ತಿಯಿದೆ. ಯೆಹೋವನ ಸೇವೆಯಲ್ಲಿ ನಾವೆಲ್ಲರೂ ಸ್ವಲ್ಪವನ್ನಾದರೂ ಮಾಡಬಲ್ಲೆವು. ಈ ಶಕ್ತಿಯನ್ನು ನಾವು ಉಪಯೋಗಿಸೋಣ! ವರ್ಧಿಸುತ್ತಿರುವ ರಾಜ್ಯ ಸುಯೋಗಗಳ ಸಂಬಂಧದಲ್ಲಿ, ನಮಗಾಗಿ ತೆರೆಯಲ್ಪಡುವ ಯಾವುದೇ ಬಾಗಿಲಿನಲ್ಲಿ ಪ್ರವೇಶಿಸಲು ನಾವು ಎಚ್ಚರವುಳ್ಳವರಾಗಿರೋಣ. ಅಂತಹ ದ್ವಾರವೊಂದು ತೆರೆಯಲ್ಪಡುವಂತೆ ಯೆಹೋವನಿಗೆ ನಾವು ಪ್ರಾರ್ಥಿಸಲು ಸಹ ಸಾಧ್ಯವಿದೆ. (ಕೊಲೊಸ್ಸೆ 4:2, 3) ಯೇಸುವಿನ ಸಹಿಷ್ಣುತೆಯ ನಮೂನೆಯನ್ನು ನಾವು ಹಿಂಬಾಲಿಸುತ್ತಾ ಮತ್ತು ಅವನ ಹೆಸರಿಗೆ ಸತ್ಯವಂತರಾಗಿ ಪರಿಣಮಿಸುತ್ತಾ, ನಾವು ಕೂಡ, ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕೇಳುವ ಕಿವಿ ನಮಗೂ ಇದೆ ಎಂದು ತೋರಿಸುವೆವು.
[ಅಧ್ಯಯನ ಪ್ರಶ್ನೆಗಳು]
a ಪೌಲನ ದಿನಗಳಲ್ಲಿ, ಕೊರಿಂಥದ ಸಭಾಮಂದಿರದ ಅಧ್ಯಕ್ಷನಾದ ಸೋಸ್ಥೆನನು ಒಬ್ಬ ಕ್ರೈಸ್ತ ಸಹೋದರನಾದನು.—ಅ. ಕೃತ್ಯಗಳು 18:17; 1 ಕೊರಿಂಥ 1:1.
b ಯೋಹಾನ ವರ್ಗದವರಿಂದ ಪ್ರಕಾಶಿಸಲ್ಪಟ್ಟ ಕಾವಲಿನಬುರುಜು ಪತ್ರಿಕೆಯು ಈ ಸಂದರ್ಭವನ್ನು ಸ್ವಾಧೀನ ಮಾಡಿಕೊಳ್ಳುವ ಮತ್ತು ಸಾರುವ ಕೆಲಸದಲ್ಲಿ ಎಷ್ಟು ಸಾಧ್ಯವೂ ಅಷ್ಟು ಪೂರ್ಣವಾಗಿ ಪಾಲಿಗರಾಗುವ ತುರ್ತಿನ ಬಗ್ಗೆ ಎತ್ತಿಹೇಳುವುದನ್ನು ಮುಂದರಿಸಿದೆ; ಉದಾಹರಣೆಗಾಗಿ, ಮೇ 1, 1986ರ ಸಂಚಿಕೆಯಲ್ಲಿನ “ದೇವರ ರಾಜ್ಯವನ್ನು ಪ್ರಸಿದ್ಧಪಡಿಸಿರಿ” ಮತ್ತು “ಬೆಳೆಗೆ ಹೆಚ್ಚು ಕೆಲಸಗಾರರು ಜರೂರಾಗಿ ಬೇಕಾಗಿದ್ದಾರೆ!” ಲೇಖನಗಳನ್ನು ನೋಡಿರಿ. ಫೆಬ್ರವರಿ 1, 1987ರ (ಇಂಗ್ಲಿಷ್) ಸಂಚಿಕೆಯ “ಸುವಾರ್ತೆಯನ್ನು ಘೋಷಿಸುವುದರಲ್ಲಿ ನಮ್ಮ ಅತಿ ಹೆಚ್ಚನ್ನು ಮಾಡುವುದು” ಎಂಬ ಲೇಖನದಲ್ಲಿ ಪೂರ್ಣ ಸಮಯದ ಸೇವೆಗೆ ಸೇರುವುದರಲ್ಲಿ “ತೆರೆದಿಡಲ್ಪಟ್ಟ ಬಾಗಿಲು” ಪ್ರವೇಶಿಸುವುದರ ಮೇಲೆ ಒತ್ತನ್ನು ಹಾಕಲಾಗಿತ್ತು. 1993ರ ಒಂದು ತಿಂಗಳಲ್ಲಿ ಅಂತಹ ಸೇವೆಯಲ್ಲಿ ವರದಿಮಾಡಿದವರ ಉಚ್ಛಾಂಕ 8,90,231 ಆಗಿತ್ತು.
c ಹಿಜ್ಕೀಯ ಎಂಬ ಹೆಸರಿನ ಅರ್ಥ “ಯೆಹೋವನು ಬಲಪಡಿಸುತ್ತಾನೆ.” ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ರೆಫರೆನ್ಸ್ ಬೈಬಲ್ನಲ್ಲಿ 2 ಅರಸುಗಳು 16:20, ಪಾದಟಿಪ್ಪಣಿ ನೋಡಿರಿ.
ಮೆಕ್ಲಿಂಟಕ್ ಆ್ಯಂಡ್ ಸ್ಟ್ರಾಂಗ್ಸ್ ಸೈಕ್ಲೊಪೀಡಿಯ (ಸಂಪುಟ X ಪುಟ 519) ವರದಿಸುವುದು: “ಕ್ರೈಸ್ತ ನಂಬಿಕೆಯ ಗಮನಾರ್ಹ ಪ್ರಗತಿಯನ್ನು ಅಪಾಯಸೂಚಕವಾಗಿ ಅವಲೋಕಿಸಿದ ಅನ್ಯಧರ್ಮೀಯ ಪುರೋಹಿತರು ಜನರ ಮಧ್ಯೆ ಉದ್ರೇಕಿಸಿದ ಗಲಭೆಗಳಿಂದಾಗಿ ಕ್ರೈಸ್ತತ್ವವು ಸಮ್ರಾಟನ ಗಮನಕ್ಕೆ ಬರುವ ನಿರ್ಬಂಧಕ್ಕೊಳಗಾಯಿತು, ಮತ್ತು ದೇವರುಗಳನ್ನು ದ್ವೇಷಿಸುವ ಜನರನ್ನಾಗಿ ಮಾಡುವ ಹೊಸ ಕಲಿಸುವಿಕೆಯನ್ನು ಕ್ರಮೇಣ ದಮನಿಸುವಂತೆ, ಟ್ರೇಜನ್ನು (98-117 ಸಾ.ಶ.) ಅದಕ್ಕನುಗುಣವಾಗಿ ರಾಜಶಾಸನಗಳನ್ನು ಹೊರಡಿಸಿದನು. ಬಿಥೂನ್ಯದ [ಉತ್ತರದಲ್ಲಿ ಏಷಿಯದ ರೋಮನ್ ಪ್ರಾಂತ್ಯದ ಗಡಿಯಾಗಿತ್ತು] ದೇಶಾಧಿಪತಿಯಾದ ಯಂಗರ್ ಪಿನ್ಲೀಯ ಆಡಳಿತದಲ್ಲಿ, ಕ್ರೈಸ್ತತ್ವದ ತೀವ್ರವಾದ ವಿಸ್ತಾರದ ಬೆಳವಣಿಗೆಯೊಂದಿಗೆ ಮತ್ತು ತತ್ಪರಿಣಾಮವಾಗಿ ಉಂಟಾದ ಅವನ ಪ್ರಾಂತ್ಯದಲ್ಲಿ ಅನ್ಯಧರ್ಮೀಯ ಜನತೆಯ ಕೋಪಾವೇಶದ ಕಾರಣ, ಅದು ಇನ್ನಷ್ಟು ಸಂಕ್ಲಿಷ್ಟಗೊಂಡಿತು.”
[ಪುಟ 74 ರಲ್ಲಿರುವ ಚೌಕ]
ಸಾಷ್ಟಾಂಗ ಅಡ್ಡ ಬೀಳುವಂತೆ ಅನೇಕರಿಗೆ ಸಹಾಯ ಮಾಡುವುದು
ಪರಲೋಕ ರಾಜ್ಯವನ್ನು ಬಾಧ್ಯತೆಯಾಗಿ ಪಡೆಯಲಿರುವ 1,44,000 ಮಂದಿ ಅಭಿಷಿಕ್ತರಲ್ಲಿ, ಯೋಹಾನ ವರ್ಗದ 9,000 ಕ್ಕಿಂತಲೂ ಕಡಿಮೆಯಿರುವ ಉಳಿಕೆಯವರು ಭೂಮಿಯ ಮೇಲಿನ ಅವರ ಜೀವಿತಗಳನ್ನು ಇನ್ನೂ ಪೂರ್ಣಗೊಳಿಸಲಿಕ್ಕದೆ ಎಂದು ತೋರುತ್ತದೆ. ಅದೇ ಸಮಯದಲ್ಲಿ, ಮಹಾ ಸಮೂಹದವರ ಸಂಖ್ಯೆಯು 40,00,000 ಮತ್ತು ಅದಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ವಿಸ್ತರಿಸಿದೆ. (ಪ್ರಕಟನೆ 7:4, 9) ಇಂತಹ ವಿಸ್ತಾರವಾದ ಅಭಿವೃದ್ಧಿಯನ್ನು ತರಲು ಯಾವುದು ಸಹಾಯ ನೀಡಿದೆ? ಯೆಹೋವನ ಸಾಕ್ಷಿಗಳಿಂದ ನಡಿಸಲ್ಪಡುವ ವಿವಿಧ ಶಾಲೆಗಳು ಇದಕ್ಕೆ ಮಹತ್ತಾದ ನೆರವನ್ನು ನೀಡಿವೆ. ಲೌಕಿಕ ತತ್ವಶಾಸ್ತ್ರಗಳನ್ನು ಕಲಿಸುವ ಮತ್ತು ಬೈಬಲನ್ನು ಕೀಳ್ಮಟ್ಟಕ್ಕೆ ಇಳಿಸುವ ಕ್ರೈಸ್ತ ಪ್ರಪಂಚದ ಸೆಮಿನೆರಿಗಳಿಗಿಂತ ಎಷ್ಟೋ ಭಿನ್ನವಾಗಿ, ಸಾಕ್ಷಿಗಳ ಈ ಶಾಲೆಗಳು ದೇವರ ವಾಕ್ಯದಲ್ಲಿ ಆಳವಾದ ನಂಬಿಕೆಯನ್ನು ಮೂಡಿಸುತ್ತವೆ. ಶುದ್ಧವಾದ, ನೈತಿಕತೆಯ ಜೀವಿತ ಮತ್ತು ದೇವರಿಗೆ ಸಮರ್ಪಿತ ಸೇವೆಯ ಕುರಿತು ಅದರ ವ್ಯಾವಹಾರಿಕ ಅನ್ವಯ ಮಾಡುವುದನ್ನು ಅವು ತೋರಿಸುತ್ತವೆ. 1943 ರಿಂದ ಲೋಕವ್ಯಾಪಕವಾಗಿ, ಯೆಹೋವನ ಸಾಕ್ಷಿಗಳ ಪ್ರತಿಯೊಂದು ಸಭೆಯು ಅದರ ರಾಜ್ಯ ಸಭಾಗೃಹದಲ್ಲಿ ಸ್ಥಳಿಕವಾಗಿ ದೇವಪ್ರಭುತ್ವ ಶಾಲೆಯೊಂದನ್ನು ನಡಿಸುತ್ತದೆ. ಪ್ರತಿವಾರ ಈ ಶಾಲೆಗೆ ಲಕ್ಷಾಂತರ ಮಂದಿ ಹಾಜರಾಗಿ, ಬೈಬಲ್ ಶಿಕ್ಷಣದ ಏಕರೂಪದ ಕಾರ್ಯಕ್ರಮವನ್ನು ಅನುಸರಿಸುತ್ತಾರೆ.
ಯೆಹೋವನ ಸಾಕ್ಷಿಗಳು 1959 ರಿಂದ ರಾಜ್ಯ ಶುಶ್ರೂಷಾ ಶಾಲೆಗಳನ್ನು ಕೂಡ, ಸಭೆಯ ಹಿರಿಯರ ಮತ್ತು ಶುಶ್ರೂಷಕಾ ಸೇವಕರ ತರಬೇತಿಗಾಗಿ ನಡಿಸಿರುತ್ತಾರೆ. ಮತ್ತು 1977 ರಿಂದ, ಪಯನೀಯರ್ ಸರ್ವೀಸ್ ಸ್ಕೂಲ್ (ಪಯನೀಯರ್ ಸೇವಾ ಶಾಲೆ) ಗಳು ನಿಜ ಫಿಲದೆಲ್ಫಿಯ ಆತ್ಮದೊಂದಿಗೆ, ಸಾರುವ ಕಾರ್ಯದಲ್ಲಿ ಯೆಹೋವನನ್ನು ಪೂರ್ಣ ಸಮಯ ಸೇವಿಸುತ್ತಿರುವ 2,00,000 ಕ್ಕಿಂತಲೂ ಹೆಚ್ಚು ಸಹೋದರ, ಸಹೋದರಿಯರನ್ನು ತರಬೇತಿಗೊಳಿಸಿವೆ. 1987 ರಲ್ಲಿ ಮಿನಿಸ್ಟೀರಿಯಲ್ ಟ್ರೈನಿಂಗ್ ಸ್ಕೂಲ್ (ಶುಶ್ರೂಷಕಾ ತರಬೇತಿ ಶಾಲೆ)ಯು ಲೋಕಕ್ಷೇತ್ರದಲ್ಲಿ ವಿಶೇಷ ನೇಮಕಗಳಿಗಾಗಿ ಪುರುಷ ಸಾಕ್ಷಿಗಳನ್ನು ತರಬೇತಿಗೊಳಿಸಲು ಆರಂಭಿಸಲ್ಪಟ್ಟಿತು.
ಯೆಹೋವನ ಸಾಕ್ಷಿಗಳಿಂದ ನಡಿಸಲ್ಪಡುವ ಶಾಲೆಗಳಲ್ಲಿ ಗಮನ ಸೆಳೆಯುವಂತಹದ್ದು ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್. 1943 ರಿಂದ ನ್ಯೂ ಯಾರ್ಕ್ ರಾಜ್ಯದಲ್ಲಿರುವ ಈ ಮಿಶನೆರಿ ಶಾಲೆಯು ಪ್ರತಿ ವರ್ಷ ಮಿಶನೆರಿಗಳ ಎರಡು ಗುಂಪುಗಳನ್ನು ಪದವೀಧರರನ್ನಾಗಿ ಮಾಡಿದೆ. ಒಟ್ಟಿಗೆ, ಅದು 6,000 ಕ್ಕಿಂತಲೂ ಹೆಚ್ಚಿನ ಯೆಹೋವನ ಶುಶ್ರೂಷಕರನ್ನು ವಿದೇಶೀ ಮಿಶನೆರಿ ಸೇವೆಗಾಗಿ ತರಬೇತಿಗೊಳಿಸಿದೆ. ಈ ಶಾಲೆಯ ಪದವೀಧರರು ಒಂದು ನೂರಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಸೇವೆಯನ್ನು ಸಲ್ಲಿಸಿರುತ್ತಾರೆ, ಅವುಗಳಲ್ಲಿ ಹೆಚ್ಚಿನ ಕಡೆ ರಾಜ್ಯದ ಕಾರ್ಯವನ್ನು ತೆರೆಯುವಂತೆ ಅವರು ಸಾಧನಗಳಾದರು. ಸುಮಾರು 40 ವರ್ಷಗಳ ನಂತರ, ಆರಂಭದ ಅನೇಕ ಮಿಶನೆರಿಗಳು ಇನ್ನೂ ತಮ್ಮ ಕೆಲಸದಲ್ಲಿದ್ದುಕೊಂಡು, ಯೆಹೋವನ ಸಂಸ್ಥೆಯ ಭೌಗೋಳಿಕ ವಿಸ್ತರಣೆಯನ್ನು ಏಳಿಗೆಗೆ ತರುವುದರಲ್ಲಿ ಹೊಸ ಮಿಶನೆರಿಗಳೊಂದಿಗೆ ಪಾಲಿಗರಾಗುತ್ತಾರೆ. ಇದು ಎಂತಹ ಒಂದು ಆಶ್ಚರ್ಯಕರವಾದ ವಿಸ್ತರಣೆಯಾಗಿರುತ್ತದೆ!
[ಪುಟ 75 ರಲ್ಲಿರುವ ಚಿತ್ರ]
ಆಳುವ ರಾಜನಾದ ಯೇಸು 1919 ರಲ್ಲಿ ಕ್ರೈಸ್ತ ಸೇವೆಯ ಅವಕಾಶದ ದ್ವಾರವೊಂದನ್ನು ತೆರೆದನು. ಏರುತ್ತಿರುವ ಸಂಖ್ಯೆಯ ಅರ್ಪಿತ ಮನೋಭಾವದ ಕ್ರೈಸ್ತರು ಆ ಸಂದರ್ಭದ ಸದುಪಯೋಗವನ್ನು ಮಾಡಿದರು.
ವರ್ಷ ಸಾರುವಿಕೆಯಿಂದ ಸಾರುವಿಕೆಯಲ್ಲಿ ಪೂರ್ಣ
ತಲುಪಿದ ಭಾಗವಹಿಸಿದ ಸಮಯ
ದೇಶಗಳು ಕ್ರೈಸ್ತರು* ಸಾರುವವರು*
1918 14 3,868 591
1928 32 23,988 1,883
1938 52 47,143 4,112
1948 96 2,30,532 8,994
1958 175 7,17,088 23,772
1968 200 11,55,826 63,871
1978 205 20,86,698 1,15,389
1993 231 44,83,900 6,23,006
[ಅಧ್ಯಯನ ಪ್ರಶ್ನೆಗಳು]
ಮೇಲಿನ ಅಂಕಿಗಳು ಮಾಸಿಕ ಸರಾಸರಿಯಾಗಿವೆ.
Footnote is not vernacular
[ಪುಟ 76 ರಲ್ಲಿರುವ ಚಿತ್ರ]
ಯೆಹೋವನ ಸಾಕ್ಷಿಗಳ ಚಟುವಟಿಕೆಯು ಪೂರ್ಣಹೃದಯದ್ದು. ಉದಾಹರಣೆಗೆ, ಸಾರುವುದರಲ್ಲಿ ಮತ್ತು ಕಲಿಸುವುದರಲ್ಲಿ ಅವರು ವ್ಯಯಿಸಿದ ತಾಸುಗಳನ್ನು ಮತ್ತು ಜನರ ಮನೆಗಳಲ್ಲಿ ಅವರು ನಡಿಸಿದ ಭಾರೀ ಪ್ರಮಾಣದ ಉಚಿತ ಬೈಬಲ್ ಅಧ್ಯಯನಗಳನ್ನು ಪರಿಗಣಿಸಿರಿ.
ವರ್ಷ ಸಾರಲು ವ್ಯಯಿಸಿದ ನಡಿಸಿದ ಬೈಬಲ್
ತಾಸುಗಳು ಅಧ್ಯಯನಗಳು
(ವಾರ್ಷಿಕ ಮೊತ್ತ) (ಮಾಸಿಕ ಸರಾಸರಿ)
1918 19,116 ದಾಖಲಾತಿ ಮಾಡಲಿಲ್ಲ
1928 28,66,164 ದಾಖಲಾತಿ ಮಾಡಲಿಲ್ಲ
1938 1,05,72,086 ದಾಖಲಾತಿ ಮಾಡಲಿಲ್ಲ
1948 4,98,32,205 1,30,281
1958 11,03,90,944 5,08,320
1968 20,86,66,762 9,77,503
1978 30,72,72,262 12,57,084
1993 1,05,73,41,972 45,15,587
[ಪುಟ 60 ರಲ್ಲಿರುವ ಚಿತ್ರ]
ಮೊದಲನೆಯ ಶತಕದ ಒಂದು ರೋಮನ್ ಬೀಗದ ಕೈ